ಟೀಂ ಇಂಡಿಯಾ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್ ರಸ್ತೆ ಅಪಘಾತಕ್ಕೆ ಒಳಗಾಗಿ ಮತ್ತೆ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದ್ದ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಇನ್ನೂ ಇಂದು ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ಅವರನ್ನು ಬರೋಬ್ಬರಿ 27 ಕೋಟಿ ರೂಪಾಯಿ ಬೃಹತ್ ಮೊತ್ತವನ್ನು ಪಾವತಿಸಿ ತಂಡಕ್ಕೆ ಸೇರಿಸಿಕೊಮಡಿದೆ. ಈ ಮೂಲಕ ರಿಷಬ್ ಪಂತ್, ಕೆಲವೇ ಕ್ಷಣಗಳಲ್ಲಿ ಐಪಿಎಲ್ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ ಅವರ ದಾಖಲೆಯನ್ನು ಮುರಿದಿದ್ದಾರೆ. ರಿಷಬ್‌ಗಾಗಿ ಲಕ್ನೋ ಫ್ರಾಂಚೈಸಿ ಮೊದಲು ಬಿಡ್ ಮಾಡಿತು. ಬಳಿಕ ಆರ್‌ಸಿಬಿ, ಎಸ್‌ಆರ್‌ಹೆಚ್ ಬಿಡ್ ಮಾಡಿದವು. 20.75 ಕೋಟಿಗೆ ಲಕ್ನೋ ಬಿಡ್ ಮಾಡಿತು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಆರ್‌ಟಿಎಂ ಬಳಸುವುದಾಗಿ ಹೇಳಿತು. ಎಲ್‌ಎಸ್‌ಜಿ ಬಿಡ್ ಮೊತ್ತವನ್ನು 27 ಕೋಟಿಗೆ ಏರಿಸಿದ್ದರಿಂದ ಡೆಲ್ಲಿ ಹಿಂದೆ ಸರಿಯಿತು. ಅಂತಿಮವಾಗಿ ಪಂತ್ ದಾಖಲೆ ಮೊತ್ತಕ್ಕೆ ಲಕ್ನೋ ಪಾಲಾದರು. https://ainlivenews.com/government-will-provide-rs-3-lakh-subsidy-for-free-borewell-drilling-under-the-ganga-kalyan-yojana/ ಐಪಿಎಲ್ ವೃತ್ತಿ ಜೀವನದಲ್ಲಿ ಈವರೆಗೆ 107 ಪಂದ್ಯಗಳನ್ನಾಡಿರುವ ರಿಷಬ್ ಪಂತ್ 3,284 ರನ್…
Author: AIN Admin
ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕು ಪರಸನಟ್ಟಿ ಗ್ರಾಮದ ಕೆರೆಗೆ ಹಾರಿ ಭಾರತೀಯ ಸೇನೆ ಯೋಧ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಕಿತ್ತೂರು ತಾಲ್ಲೂಕಿನ ದೇಗಾಂವ ಗ್ರಾಮದ ಯೋಧ ನರೇಶ ಯಲ್ಲಪ್ಪ ಆಗಸರ (28) ಮೃತ ಯೋಧನಾಗಿದ್ದು, ಪರಸನಟ್ಟಿ ಗ್ರಾಮದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. https://ainlivenews.com/government-will-provide-rs-3-lakh-subsidy-for-free-borewell-drilling-under-the-ganga-kalyan-yojana/ ಕಳೆದ 20 ದಿನಗಳ ಹಿಂದೆ ರಜೆ ಮೇಲೆ ದೇಗಾಂವ ಗ್ರಾಮಕ್ಕೆ ಬಂದಿದ್ದರು. ರಜೆ ಮುಗಿಸಿ ನವೆಂಬರ್ 24ರಂದು ಸೇನಾ ಕರ್ತವ್ಯಕ್ಕೆ ಹಾಜರಾಗಬೇಕಾಗಿತ್ತು. ಆದರೆ ಇದೀಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವಾರು ಸಂದೇಹಗಳಿಗೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಕಿತ್ತೂರು ಪಿಎಸ್‌ಐ ಪ್ರವೀಣ ಗಂಗೋಳ, ಪ್ರವೀಣ ಕೋಟಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸೌದಿ ಅರೇಬಿಯಾದ ಜೆಡ್ಡಾ ಮತ್ತು ಅಬಾಡಿ ಅಲ್-ಜೋಹರ್ ಅರೆನಾದಲ್ಲಿ ಇಂದು ಮತ್ತು ನಾಳೆ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ. ಇನ್ನೂ ಇದರ ಭಾಗವಾಗಿ ಟೀಂ ಇಂಡಿಯಾದ ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್ ಬರೋಬ್ಬರಿ 26.75 ಕೋಟಿ ರೂ.ಗಳಿಗೆ ಪಂಜಾಬ್ ಪಾಲಾದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಬಿಡ್ ಆದ ಮೊದಲ ಭಾರತೀಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಬಿಡ್ಡಿಂಗ್‌ನಲ್ಲಿ ಅಯ್ಯರ್ ಅವರನ್ನ ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಜಿದ್ದಾ ಜಿದ್ದಿ ನಡೆದಿತ್ತು. ಅಲ್ಲದೇ ಪ್ರೇಕ್ಷರಕ ಎದೆ ಬಡಿತವೂ ಹೆಚ್ಚಾಗಿತ್ತು, ಹರಾಜು ನಡೆಸಿಕೊಡುತ್ತಿದ್ದ ಮಹಿಳೆ ಮಲ್ಲಿಕಾ ಸಾಗರ್ ಬಿಡ್ ಕೂಗಿ ಕೂಗಿ ಸುಸ್ತಾಗಿದ್ದರು. ಆದ್ರೆ ಪಟ್ಟು ಬಿಡದ ಪಂಜಾಬ್ 26.75 ಕೋಟಿ ರೂ.ಗೆ ಅಯ್ಯರ್ ಅವರನ್ನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು. https://ainlivenews.com/government-will-provide-rs-3-lakh-subsidy-for-free-borewell-drilling-under-the-ganga-kalyan-yojana/ 2024ರ ಐಪಿಎಲ್‌ಗೆ ನಡೆದ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ವೇಗಿ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂ.ಗಳಿಗೆ ಬಿಕರಿಯಾಗಿದ್ದರು.…
ಹುಬ್ಬಳ್ಳಿ: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಕರ್ನಾಟಕದ ರೋಮಾಂಚಕ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪರಂಪರೆಯನ್ನು ಸಾರುವ “ವೈವಿಧ್ಯತೆ” ಎಂಬ ವಿಷಯದ ಮೇಲೆ ‘ನಮ್ಮ ಕನ್ನಡಹಬ್ಬ 2024’ ಎಂಬ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದೆ.ಗ್ಲೋಬಲ್ ಟೊಯೊಟಾ ಎಕಿಡೆನ್ ಮ್ಯಾರಥಾನ್ 2024 ರಲ್ಲಿ ಭಾಗವಹಿಸಲು ಟಿಕೆಎಂ ನ ವಿಶೇಷ ಮಹಿಳಾ ತಂಡವನ್ನು ಘೋಷಿಸಿದೆ. ಇದು ಸಮಾನ ಅವಕಾಶಗಳನ್ನು ಬೆಳೆಸುವ ಮತ್ತು ಕೆಲಸದ ಸ್ಥಳದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಕಂಪನಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಟಿಕೆಎಂನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮತ್ತು ಜಪಾನ್ನ ಟೊಯೊಟಾ ಮೋಟಾರ್ ಕಾರ್ಪೋರೇಷನ್ನ ಭಾರತ, ಮಧ್ಯಪ್ರಾಚ್ಯ, ಪೂರ್ವಏಷ್ಯಾ ಮತ್ತು ಓಷಿಯಾನಿಯಾದ ಪ್ರಾದೇಶಿಕ ಸಿಇಒ ಶ್ರೀಮಸಕಾಜುಯೋಶಿಮುರಾ ಅವರು ವಿಶೇಷ ಚೇತನ ವ್ಯಕ್ತಿಗಳನ್ನು ಕ್ರಮೇಣ ಕಾರ್ಯಪಡೆಗೆ ಸಂಯೋಜಿಸುವ ಯೋಜನೆಗಳನ್ನು ಘೋಷಿಸಿದರು.ಇನ್ನು ಕನ್ನಡ ಚಲನ ಚಿತ್ರೋದ್ಯಮಕ್ಕೆ ನೀಡಿದ ಪ್ರಭಾವಶಾಲಿ ಕೊಡುಗೆಗಳಿಗಾಗಿ ಪ್ರಸಿದ್ಧರಾದ ಕನ್ನಡದ ಹೆಸರಾಂತ ನಟ ಶ್ರೀಮುರಳಿ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. https://ainlivenews.com/government-will-provide-rs-3-lakh-subsidy-for-free-borewell-drilling-under-the-ganga-kalyan-yojana/ ಸಮಾಜಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ ಸ್ಥಳೀಯ ಸಮುದಾಯದ ಸದಸ್ಯರನ್ನು ಗುರುತಿಸಲು ಮತ್ತು ಪ್ರೇರೇಪಿಸಲು “ಟೊಯೋಟಾ…
ಹುಬ್ಬಳ್ಳಿ: ಮೊಬೈಲ್ ಫೋನ್ ಬಳಕೆ ಮಾಡಿ ವಾಹನ ಚಲಾಯಿಸುವುದು, ಅಜಾಗರೂಕತೆ, ತ್ರಿಬಲ್ ರೈಡಿಂಗ್ ಸೇರಿ ವಿವಿಧ ಸಂಚಾರ ನಿಯಮ ಉಲ್ಲಂಘಿಸುವುದನ್ನು ತಡೆಯಲು ಹು-ಧಾ ಪೊಲೀಸ್ ಆಯುಕ್ತಾಲಯದಿಂದ ಅಭಿಯಾನ ಶುರುವಾಗಿದೆ. ದ್ವಿಚಕ್ರ ವಾಹನ, ಆಟೋರಿಕ್ಷಾ ಸೇರಿ ಇತರ ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದಾರೆ. ಇಂಥ ಪ್ರಕರಣ ಕಂಡುಬಂದಲ್ಲಿ ದ್ವಿಚಕ್ರವಾಗಿದ್ದರೆ ಒಂದೂವರೆ ಸಾವಿರ ರೂ., ನಾಲ್ಕು ಚಕ್ರದ ವಾಹನ ಆಗಿದ್ದರೆ ಮೂರು ಸಾವಿರ ರೂ. ದಂಡ ಹಾಕಿ ಪ್ರಕರಣ ದಾಖಲಿಸಲಾಗುತ್ತಿದೆ. https://ainlivenews.com/government-will-provide-rs-3-lakh-subsidy-for-free-borewell-drilling-under-the-ganga-kalyan-yojana/ ಅಪಾಯಕಾರಿ ವಾಹನ ಚಲಾಯಿಸಿದ್ದರೆ ಬಿಎನ್‌ಎಸ್ ಕಾಯ್ದೆಯಡಿ ವಾಹನ ಸೀಜ್, ಮೊಬೈಲ್ ಫೋನ್ ಸೀಜ್ ಮಾಡಿ ಪ್ರಕರಣ ದಾಖಲಿಸಲಾಗಿದೆ. ಮೊಬೈಲ್ ಫೋನ್ ಬಳಕೆ ಮಾಡಿ ವಾಹನ ಚಲಾಯಿಸುತ್ತಿದ್ದ 100ಕ್ಕೂ ಹೆಚ್ಚು ಚಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ. ಅಪಾಯಕಾರಿ ವಾಹನ ಚಲಾಯಿಸಿದ ನಾಲ್ಕು ಚಕ್ರದ ವಾಹನಗಳ ಮೇಲೆ 30ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ನಗರದಲ್ಲಿ ಸುದ್ದಿಗಾರರಿಗೆ ವಿವರಿಸಿದರು. ಒಂದೊಂದು ಕಡೆ ಜಂಕ್ಷನ್ ಮಾಡಿದ್ದೇವೆ.…
ಹುಬ್ಬಳ್ಳಿ: ಕಾಂಗ್ರೆಸ್‌ನಿ೦ದ ಬೃಹತ್ ಪ್ರಮಾಣದಲ್ಲಿ ದುಡ್ಡಿನ ಹಾವಳಿ ನಡೆದಿದೆ. ಹೀಗಾಗಿ ಉಪ ಚುನಾವಣೆಯಲ್ಲಿ ನಮಗೆ ಸೋಲಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ. ಯೋಗೀಶ್ವರ 2 ಬಾರಿ ಸೋತಿದ್ದರು. ಅಲ್ಲಿ ಅನುಕಂಪ ಕೆಲಸ ಮಾಡಿದೆ. ಚನ್ನಪಟ್ಟಣದ ಜಯ ಕಾಂಗ್ರೆಸ್ ಜಯವಲ್ಲ. ಯೋಗೀಶ್ವರ ನಮ್ಮ ಪಕ್ಷದವರಾಗಿದ್ದರು ಎಂದರು. ಸ೦ಡೂರಿನಲ್ಲಿ ಬಿಜೆಪಿ ಗೆಲ್ಲಬೇಕಿತ್ತು. ಆದರೆ, ಅಲ್ಲಿ ಕಾಂಗ್ರೆಸ್ ಒಂದು ಮತಕ್ಕೆ 2,500 ರೂಪಾಯಿ ಹಂಚಿದ್ದಾರೆ. ಆದರೂ ಅಲ್ಲಿ ಕಾಂಗ್ರೆಸ್ ಲೀಡ್ ಕಡಿಮೆಯಾಗಿದೆ. ವಾಲ್ಮೀಕಿ ನಿಗಮದ ಹಣ ಹೊಡೆದದ್ದು ಪ್ರಭಾವ ಬೀರಿದೆ ಎಂದರು. https://ainlivenews.com/government-will-provide-rs-3-lakh-subsidy-for-free-borewell-drilling-under-the-ganga-kalyan-yojana/ ಶಿಗ್ಗಾ೦ವಿಯಲ್ಲಿ ಭರತ್ ಬೊಮ್ಮಾಯಿ ಗೆಲ್ಲುತ್ತಾರೆ ಎಂಬ ವಿಶ್ವಾಸ ಇತ್ತು. ಅಲ್ಲಿ 60 ಜನ ಟಿಕೆಟ್ ಆಕಾಂಕ್ಷಿಗಳಿದ್ದರು. ಪಕ್ಷದ ತೀರ್ಮಾನದಂತೆ ಭರತ್ ಬಿಜೆಪಿ ಅಭ್ಯರ್ಥಿಯಾಗಿದ್ದರು. ಅಲ್ಲ ಆಕಾಂಕ್ಷಿಗಳ ಅಸಮಾಧಾನ ಪ್ರಭಾವ ಬೀರಿರಬಹುದು. ನಾವು ಸೋತಿರುವ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುತ್ತೇವೆ. ಪಕ್ಷದಲ್ಲಿರುವ ಅಸಮಾಧಾನದ ಕುರಿತು ಪಕ್ಷದ ಚೌಕಟ್ಟಿನಲ್ಲೇ ಚರ್ಚೆ ಮಾಡುತ್ತೇವೆ ಎಂದರು. ಆದರೆ ಮೂರು…
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ-ಚಾಕಲಬ್ಬಿ ರಸ್ತೆ ಮಾರ್ಗ ಮಧ್ಯದಲ್ಲಿ ಬೈಕ್ ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್ ಅಲ್ಲಿಯೇ ಬಿದ್ದ ಘಟನೆ ನಡೆದಿದೆ. ಉಮಚಗಿ ಕಡೆಯಿಂದ ಸಂಶಿಗೆ ತೆರಳುತ್ತಿದ್ದ ಈ ಬೈಕ್‌ನಲ್ಲಿ ರಾತ್ರಿ ಹೊತ್ತು ಇಬ್ಬರು ಸವಾರರು ಪ್ರಯಾಣ ಮಾಡುತ್ತಿದ್ದು, ಇವರು ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದವರು ಎಂದು ತಿಳಿದು ಬಂದಿದೆ. https://ainlivenews.com/government-will-provide-rs-3-lakh-subsidy-for-free-borewell-drilling-under-the-ganga-kalyan-yojana/ ರಾತ್ರಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಚಾಕಲಬ್ಬಿ- ಸಂಶಿ ರಸ್ತೆಯಲ್ಲಿ ಆಯಾ ತಪ್ಪಿ ಗಟಾರಕ್ಕೆ ಬಿದ್ದ ಪರಿಣಾಮ ಒರ್ವ ಸಾವನಪ್ಪಿರುವ ಸಂಶಯ ವ್ಯಕ್ತವಾಗಿದ್ದು, ಇನ್ನೊಬ್ಬನಗೆ ಗಾಯಗಳಾಗಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ. ರಾತ್ರಿ ಅಪಘಾತವಾಗಿ ಬೈಕ್ ಮಾತ್ರ ಅಲ್ಲಿಯೇ ಬಿದ್ದಿರುವುದು ವಿಪರ್ಯಾಸದ ಸಂಗತಿ.
ಭಾಷಾಧರಿತ ರಾಜ್ಯಗಳ ಉದಯದ ಬಳಿಕ ಕನ್ನಡಿಗರ ರಾಜ್ಯ ಕರ್ನಾಟಕವಾಯಿತು.ನಮ್ಮ ಉಸಿರು ಮತ್ತು ಬದುಕು ಕನ್ನಡವಾದಾಗ ಮಾತ್ರ ಭಾಷೆಯ ಉಳಿಕೆ ಸಾಧ್ಯವಾಗುತ್ತದೆ.ಜಾಗತಿಕ ಮಟ್ಟದಲ್ಲಿನ ಜ್ಞಾನಕ್ಕಾಗಿ ಯಾವುದೇ ಭಾಷೆ ಅಭ್ಯಸಿಸಿದರೂ ನಮ್ಮ ಮನೆಯ ಭಾಷೆ, ವ್ಯವಹಾರಿಕ ಭಾಷೆ ಕನ್ನಡವಾಗಬೇಕು. ರಾಜ್ಯ ಸರ್ಕಾರ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ನೌಕರಿಯಲ್ಲಿ ಮೀಸಲಾತಿ ಕಲ್ಪಿಸಿದಲ್ಲಿ ಮಾತ್ರ ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ಸಿಗುತ್ತದೆಂದು ಪತ್ರಕರ್ತರಾದ ಶಿವಾನಂದ ಮಹಾಬಲಶೆಟ್ಟಿ ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹೊಸೂರ ಸಿರಾಜಸಾಬ, ಮುರಾದಸಾಬ್ ದರ್ಗಾ ಬಳಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಹಜರತ್ ಟಿಪ್ಪು ಸುಲ್ತಾನ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು.ಸರ್ಕಾರದ ಆದೇಶಗಳಿಂದ ಭಾಷೆ, ಸಂಸ್ಕೃತಿ ಬದುಕದು ಬದಲಾಗಿ ಕನ್ನಡಿಗರೆಲ್ಲರಲ್ಲಿ ಭಾಷಾಭಿಮಾನ ಜಾಗೃತಗೊಂಡು ಬಳಕೆಯ ಅಭಿಮಾನ ಮತ್ತು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಬಲವಾದ ಆಶಯವಿದ್ದರೆ ಮಾತ್ರ ಯಾವುದೇ ಭಾಷೆ, ಸಂಸ್ಕೃತಿ ಉಳಿಯಲು ಸಾಧ್ಯವಿದೆ. https://ainlivenews.com/government-will-provide-rs-3-lakh-subsidy-for-free-borewell-drilling-under-the-ganga-kalyan-yojana/ ಟಿಪ್ಪು ಸುಲ್ತಾನ ಬಗ್ಗೆ ನಮ್ಮ ಕಾಲಘಟ್ಟದಲ್ಲಿ ಓದಿದ್ದ ಇತಿಹಾಸಕ್ಕೆ ಇದೀಗ ಅಪಸ್ವರವೆದ್ದಿದೆ. ಗತಿಸಿದ ವ್ಯಕ್ತಿಯ ಶೌರ್ಯ, ಪರಾಕ್ರಮ, ದೇಶಾಭಿಮಾನ…
ಬೆಂಗಳೂರು: ಕಲಿಯುಗ ಕರ್ಣ, ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನು ಅಗಲಿ 6 ವರ್ಷ, ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಸಮಾಧಿಗೆ ಭೇಟಿ ನೀಡಿದ್ದ ಸುಮಲತಾ ಅಂಬರೀಶ್ ಅವರು ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಂಬರೀಶ್ ಗೆಳೆಯರಾದ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಇನ್ನೂ ಕೆಲವರು ಹಾಜರಿದ್ದರು. ಪೂಜೆ ಬಳಿಕ ಮಾತನಾಡಿದ ಸುಮಲತಾ ಅಂಬರೀಶ್ ಅವರು, ಅಂಬಿ ನೆನಪು ಎಲ್ಲಾ ಕಡೆ ಇರುತ್ತೆ. ಎಷ್ಟೋ ವರ್ಷದಿಂದ ಕಾಯ್ತಿದ್ದ, ಮರಿ ರೆಬೆಲ್ ಸ್ಟಾರ್ ಆಗಮನದಿಂದ ಸಂತೋಷ ಗೊಂಡಿದ್ದೇವೆ. ತಾಯಿ ಮಗು ಆರೋಗ್ಯವಾಗಿದ್ದಾರೆ. ಅಭಿಯಂತೂ ಒಂದು ಕ್ಷಣವೂ ಮಗುನಾ ಬಿಟ್ಟು ಇರಲ್ಲ ಎಂದಿದ್ದಾರೆ. https://ainlivenews.com/government-will-provide-rs-3-lakh-subsidy-for-free-borewell-drilling-under-the-ganga-kalyan-yojana/ ಉಪ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, ಉಪ ಚುನಾವಣೆಯಲ್ಲಿ ರೂಲಿಂಗ್ ಪಾರ್ಟಿ ಗೆಲ್ಲುವುದನ್ನು ನೋಡುತ್ತ ಬಂದಿದ್ದೇವೆ. ಯಾವುದೇ ಪಾರ್ಟಿ ಇರಲಿ ಗೆಲ್ಲಬೇಕು ಎಂಬ ಉದ್ದೇಶ ಇಟ್ಟುಕೊಂಡು ಹೋರಾಡ್ತಾರೆ. ನಿಖಿಲ್ ಸೋಲಿನ ಬಗ್ಗೆ ನಾನೇನು ಹೇಳಲ್ಲ. ಅವರು ಇನ್ನೂ ಯುವಕರಿದ್ದಾರೆ, ಒಳ್ಳೆಯ ಭವಿಷ್ಯ ಇದೆ ಎಂದಿದ್ದಾರೆ.
ಕನಕಪುರ, ನ. 24:”ಚನ್ನಪಟ್ಟಣದ ಜನತೆಯ ಆಶೋತ್ತರಗಳನ್ನು ಈಡೇರಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಲಿದೆ. ಮನೆ, ನಿವೇಶನ ಹಂಚಿಕೆ, ಬಗರ್ ಹುಕುಂ ಜಮೀನು ಹಕ್ಕು ಪತ್ರ ವಿತರಣೆ ಸೇರಿದಂತೆ ಚುನಾವಣೆಗೆ ಮುಂಚಿತವಾಗಿ ಕೊಟ್ಟಿರುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು. ಕನಕಪುರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯಿಸಿದರು. ಗೆಲುವಿನ ನಂತರ ಚನ್ನಪಟ್ಟಣದ ಅಭಿವೃದ್ಧಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳೇನು ಎನ್ನುವ ಪ್ರಶ್ನೆಗೆ, “ಕ್ಷೇತ್ರದಲ್ಲಿ ಶಾಸಕ ಸ್ಥಾನ ಖಾಲಿಯಾದ ನಂತರ ಕೆಂಗಲ್ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ, ಜನರ ಸಮಸ್ಯೆಗಳನ್ನು ಆಲಿಸಲಾಯಿತು. ಈಗ ನಮಗೆ ಜನತೆ ಆಶೀರ್ವಾದ ಮಾಡಿದ್ದಾರೆ. ಅವರ ಋಣದ ಸಾಲದ ಹೊರೆ ಹೊರಿಸಿದ್ದಾರೆ. ಅಭಿವೃದ್ಧಿ ಕೆಲಸಗಳ ಮೂಲಕ ಆ ಋಣ ತೀರಿಸಲಾಗುವುದು” ಎಂದರು. https://ainlivenews.com/government-will-provide-rs-3-lakh-subsidy-for-free-borewell-drilling-under-the-ganga-kalyan-yojana/ “ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರಿಗೆ ಕಾಲಿನ ಶಸ್ತ್ರ ಚಿಕಿತ್ಸೆಯಾಗಿದೆ. ಅವರು ಗುಣಮುಖರಾದ ನಂತರ ಬೆಳಗಾವಿ ಅಧಿವೇಶನಕ್ಕೆ ತೆರಳುವ ಮೊದಲು ಯೋಗೇಶ್ವರ್ ಅವರ ಜತೆಗೆ ಅಧಿಕಾರಿಗಳ ಸಭೆ…