ಮೈಸೂರು: ನನಗೆ ಕುಮಾರಸ್ವಾಮಿ ಕೊನೆ ಕ್ಷಣದಲ್ಲಿ ಸಭಾ ನಾಯಕನ ಸ್ಥಾನ ತಪ್ಪಿಸಿದ್ರು ಎಂದು ಶಾಸಕ ಜಿ.ಟಿ.ದೇವೇಗೌಡ ಆರೋಪಿಸದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನನಗೆ ಕುಮಾರಸ್ವಾಮಿ ಕೊನೆ ಕ್ಷಣದಲ್ಲಿ ಸಭಾ ನಾಯಕನ ಸ್ಥಾನ ತಪ್ಪಿಸಿದ್ರು. ನನಗೆ ಯಾರೊಬ್ಬರು ಪ್ರಚಾರಕ್ಕೆ ಬನ್ನಿ ಎಂದು ಪೋನ್ ಮಾಡಿ ಕರೆಯಲೇ ಇಲ್ಲ. ನಾನು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ. ನನಗೆ ಪ್ರಚಾರಕ್ಕೆ ಕರೆಯದಿದ್ದರೆ ಹೇಗೆ ಹೇಳಿ? ನನಗೆ ಹೇಳದೆ ಯಾವತ್ತೂ ಹೆಚ್.ಡಿ.ದೇವೇಗೌಡರು ಮೈಸೂರಿಗೆ ಬಂದವರೇ ಅಲ್ಲ. ಆದರೆ ಈಗ ಮೈಸೂರಿಗೆ ಬಂದರೂ, ನನಗೆ ಒಂದು ಮಾತು ಹೇಳುತ್ತಿಲ್ಲ. ಇಷ್ಟು ಬೇಡವಾಗಿದ್ದೇನೆ. ನಾನು ಯಾವ ತಪ್ಪು ಮಾಡಿದ್ದೇನೆ ಹೇಳಿ ಎಂದು ಪ್ರಶ್ನಿಸಿದರು. https://ainlivenews.com/new-rules-in-pm-kisan-scheme-if-you-dont-do-this-you-wont-get-the-19th-installment/ ಮೈಸೂರಿನಲ್ಲಿ ಕುಮಾರಣ್ಣ ಕುಮಾರಣ್ಣ ಅಂತಾ ಮೊದಲು ಅಚ್ಚೆ ಒತ್ತಿದ್ದು ನಾನೇ. ಇದು ಕುಮಾರಸ್ವಾಮಿಗೆ ಮರೆತು ಹೋಗಿದೆ. ಯಾವುದೋ ಒಂದು ವಿಚಾರಕ್ಕೆ ಕುಮಾರಸ್ವಾಮಿ ನನ್ನ ಏಕವಚನದಲ್ಲಿ ಮನ ಬಂದಂತೆ ಬೈಯ್ದಿದ್ದರು. ಅವತ್ತೆ ಹೇಳಿದ್ದೆ ನಾನು ಹಿರಿಯ ಇದ್ದೀನಿ ಬೈಯ್ಯ ಬೇಡಿ ಅಂತಾ. ಹೆಚ್.ಡಿ.ದೇವೇಗೌಡರ ಬಳಿ ಈಗ…
Author: AIN Admin
ಬೆಂಗಳೂರು: ಕಿಲ್ಲಂಗ್ ಸ್ಟಾರ್ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕೊಲೆಯಾದ ಟೈಂ ನಲ್ಲಿ ದಾಸ ಪಟ್ಟಣಗೆರೆ ಶೆಡ್ ನಲ್ಲಿ ಇದ್ದ ಅನ್ನೋದಕ್ಕೆ ಪೂರಕವೆಂಬಂತೆ ಸಾಕ್ಷಿಗಳು ಸಿಕ್ಕಿವೆ. ಎಫ್ ಎಸ್ ಎಲ್ ರಿಪೋರ್ಟ್ ನಲ್ಲಿ ರಿಟ್ರೀವ್ ಆಗಿರುವ ಪೋಟೊ ಗಳೇ ಸಾರಿ ಸಾರಿ ಹೇಳ್ತಿವೆ.ಇತ್ತ ಖಾಕಿ ಟೀಮ್ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿರುವ ಪೋಲೀಸರು ಇದಕ್ಕೆ ಪೂರಕವೆಂಬ ಗೃಹ ಸಚಿವರು ಕೂಡ ಸಾಥ್ ನೀಡಿದ್ದಾರೆ. ಇನ್ನೇರೆಡು ದಿನ , ಕೇವಲ ಎರಡು ದಿನ ಅಷ್ಟೇ ದರ್ಶನ್ ಗೆ ಅಪರೇಷನ್ ಮಾಡಿಲ್ಲ ಅಂದ್ರೆ ಲಕ್ವ ಹೊಡೆಯುತ್ತೆ ಹಾಗಾಗಿ ಜಾಮೀನು ನೀಡಬೇಕೆಂದು ಮಧ್ಯಂತರ ಜಾಮೀನು ಪಡೆದಿದ್ದರು, ಆದ್ರೆ ಇದುವರೆಗೂ ಕೂಡ ಯಾವುದೇ ಅಪರೇಷನ್ ಮಾಡಿಸಿಕೊಂಡಿಲ್ಲ ಬದಲಾಗಿ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ, ಇಷ್ಟು ದಿನ ಆದ್ರೂ ಕೂಡ ವೈದ್ಯರು ಯಾಕೆ ಅಪರೇಷನ್ ಗೆ ಕೈ ಹಾಕಿಲ್ಲ, ಡೇಟ್ ಫಿಕ್ಸ್ ಆಗಿಲ್ಲ ಇದನ್ನ ನೋಡಿದ್ರೆ ಅನುಮಾನ ಶುರುವಾಗುತ್ತೆ ಮಧ್ಯಂತರ ಜಾಮೀನು ರದ್ದು ಮಾಡಬೇಕೆಂದು ಮನವಿ ಸಲ್ಲಿಸುತ್ತೇವೆ…
ತುಳಸಿ ಗಿಡಕ್ಕೆ ಹಿಂದೂ ಧರ್ಮದಲ್ಲಿ ಬಹುಮುಖ್ಯ ಪ್ರಾಮುಖ್ಯತೆ ನೀಡಲಾಗಿದೆ. ಧಾರ್ಮಿಕ ಕಾರ್ಯಗಳಲ್ಲಿ ತುಳಸಿಯನ್ನು ಬಳಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಪವಿತ್ರ ಎಂದು ಭಾರತದಲ್ಲಿ ಪರಿಗಣಿಸಲ್ಪಟ್ಟಿರುವ ತುಳಸಿ ಗಿಡದ ಎಲೆ, ಹೂವು, ಬೇರು ಎಲ್ಲವೂ ಒಂದಲ್ಲಾ ಒಂದು ಔಷಧೀಯ ಗುಣಗಳನ್ನು ಹೊಂದಿವೆ. ಶೀತ ನೆಗಡಿ ಮೊದಲಾದವುಗಳಿಗೆ ಚಿಕಿತ್ಸೆಯಾಗಿ ತುಳಸಿಯ ಎಲೆಗಳನ್ನು ನೀವು ಜಗಿದು ನುಂಗಿರುವ ಅನುಭವ ಇರಬಹುದು. ಆದರೆ ತುಳಸಿ ಎಲೆಗಳನ್ನು ಕುದಿಸಿ ತಯಾರಿಸಿದ ಟೀ ಸೇವನೆಯಿಂದಲೂ ಆರೋಗ್ಯ ವೃದ್ದಿಸಬಹುದು ಎಂಬುದನ್ಜು ಇದುವರೆಗೆ ನಿಮಗೆ ಯಾರೂ ಹೇಳಿರಲಿಕ್ಕಿಲ್ಲ. ನಿತ್ಯದ ಟೀ ಬದಲಿಗೆ ಈ ಟೀಯನ್ನು ಹೀರುವ ಮೂಲಕ ಕೆಲವಾರು ಅದ್ಭುತ ಎನಿಸುವ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಜ್ವರ, ಕೆಮ್ಮಿಗೆ ಅತ್ಯುತ್ತಮ ಔಷಧ ಜ್ವರ, ಕೆಮ್ಮು, ನೆಗಡಿ, ಶೀತ ಮೊದಲಾದ ಸಮಸ್ಯೆಗಳಿಗೆ ತುಳಸಿ ಚಹಾ ಸೇವನೆ ಅತ್ಯುತ್ತಮ ಪರಿಹಾರವಾಗಿದೆ. ಬಿಸಿ ಬಿಸಿ ತುಳಸಿ ಚಹಾ ಕುಡಿಯುವುದರಿಂದ ಈ ಸಮಸ್ಯೆಗಳು ಫಟಾಫಟ್ ಕಡಿಮೆಯಾಗುತ್ತವೆ. ನಿಯಮಿತವಾಗಿ ತುಳಸಿ ಚಹಾ ಕುಡಿಯುತ್ತಿರುವುದರಿಂದ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ…
ಬೆಂಗಳೂರು: ಮೋದಿ ಸರ್ಕಾರವು ಅನ್ನದಾತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಯೋಜನೆಯನ್ನು ಬಹಳ ಮಹತ್ವಾಕಾಂಕ್ಷೆಯಿಂದ ಜಾರಿಗೊಳಿಸಿದೆ. ಈ ಯೋಜನೆಯಿಂದ ಕೋಟ್ಯಂತರ ರೈತರು ನೇರ ಲಾಭ ಪಡೆಯುತ್ತಿದ್ದಾರೆ. ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಪಿಎಂ ಕಿಸಾನ್ ಯೋಜನೆಯಡಿ, ಕೇಂದ್ರವು ದಾನಿಗಳ ಬ್ಯಾಂಕ್ ಖಾತೆಗಳಿಗೆ ಇದುವರೆಗೆ 18 ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ. ಪಿಎಂ ಕಿಸಾನ್ ಸನ್ಮಾನ್ಯ ಯೋಜನೆಯ 18ನೇ ಕಂತಿನ ಹಣವನ್ನು ಇದೇ ಅಕ್ಟೋಬರ್ 5 ನೇ ತಾರೀಖಿನಂದು ಪ್ರತಿಯೊಬ್ಬರ ರೈತರ ಖಾತೆಗೆ ಜಮಾ ಮಾಡಲಾಗಿತ್ತು ಮತ್ತು ಸಾಕಷ್ಟು ರೈತರು ಈಗ ಪಿಎಂ ಕಿಸಾನ್ ಯೋಜನೆಗೆ 19ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾತುರದಿಂದ ಎದುರು ನೋಡುತ್ತಿದ್ದರು. ಇದೀಗ ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣವನ್ನು ಫೆಬ್ರುವರಿ 2025 ರಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ಹೊರ ಬಂದಿದೆ. ಕೇಂದ್ರ ಸರ್ಕಾರ 19ನೇ ಕಂತಿನ ಹಣ ಬಿಡುಗಡೆಗೆ ಮುನ್ನ ರೈತರು ಮಾಡಬೇಕಾದ ಕೆಲಸಗಳಿವು ನೀವು ಇ–ಕೆವೈಸಿ ಮಾಡಿಸದಿದ್ದರೆ…
ಬೆಂಗಳೂರು: ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, 164 ಹುದ್ದೆಗಳು ಖಾಲಿಯಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಹತಾ ಮಾನದಂಡಗಳನ್ನು ಪರಿಗಣಿಸಿ ಅರ್ಜಿಯನ್ನು ಸಲ್ಲಿಸಬಹುದು. ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಶೈಕ್ಷಣಿಕ ಅರ್ಹತೆ * ಎನ್‌ಐಎ ಮಾನದಂಡಗಳ ಪ್ರಕಾರ ಇನ್ಸ್ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ಅಭ್ಯರ್ಥಿಗಳು ಪದವಿ ಪಡೆದಿರಬೇಕು. * ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೂ ನಿಗದಿತ ವಿಭಾಗದಲ್ಲಿ ಪದವಿ ಹಾಗೂ ಹೆಡ್ ಕಾನ್ಸ್ಟೇಬಲ್ ಹುದ್ದೆಗೆ ಪಿಯುಸಿ ಪೂರ್ಣಗೊಳಿಸಿರಬೇಕು. ಹುದ್ದೆಗಳ ವಿವರ * ಸಂಸ್ಥೆಯ ಹೆಸರು : ರಾಷ್ಟ್ರೀಯ ತನಿಖಾ ಸಂಸ್ಥೆ * ಹುದ್ದೆಗಳು : ಇನ್ಸ್‌ಪೆಕ್ಟರ್, ಹೆಡ್ ಕಾನ್‌ಸ್ಟೆಬಲ್, ಸಹಾಯಕ ಸಬ್ ಇನ್ಸ್‌ಪೆಕ್ಟರ್ , ಹೆಡ್ ಕಾನ್ಸ್ಟೇಬಲ್ * ಖಾಲಿ ಹುದ್ದೆಗಳ ಸಂಖ್ಯೆ: 164 * ಉದ್ಯೋಗ ಸ್ಥಳ : ಭಾರತದಾದಂತ್ಯ ವಯಸ್ಸಿನ ಮಿತಿ ಹಾಗೂ ಆಯ್ಕೆ ಪ್ರಕ್ರಿಯೆ * ರಾಷ್ಟ್ರೀಯ ತನಿಖಾ ಸಂಸ್ಥೆ ನೇಮಕಾತಿ…
ಸೋಮವಾರವು ಪ್ರಶಸ್ಥವಾದ ದಿನವಾಗಿದ್ದು, ಈ ದಿನ ಶಿವ ಪೂಜೆ ಮಾಡುವುದರಿಂದ ಅಥವಾ ಶಿವ ಮಂತ್ರಗಳನ್ನು ಪಠಿಸುವುದರಿಂದ ಜೀವನದ ಅನೇಕ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಭಗವಾನ್ ಶಿವನಿಂದ ಆಶೀರ್ವಾದ ಪಡೆದ ವ್ಯಕ್ತಿಯು ತನ್ನ ಜೀವನದಲ್ಲಿ ಯಾವುದೇ ನೋವು ಅಥವಾ ತೊಂದರೆಯನ್ನು ಎದುರಿಸುವುದಿಲ್ಲ. ಧಾರ್ಮಿಕ ಗ್ರಂಥಗಳಲ್ಲಿ ಸೋಮವಾರದ ದಿನದಂದು ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಏಕೆಂದರೆ, ಸೋಮವಾರ ಮಾಡಿದ ಕೆಲವು ತಪ್ಪುಗಳು ಭಗವಾನ್ ಶಿವನಿಗೆ ಕೋಪ ತರಬಹುದು ಎನ್ನಲಾಗುತ್ತದೆ. ಅಲ್ಲದೇ ಇದು ನಿಮ್ಮ ಜೀವನವನ್ನು ಅಪಾಯಕ್ಕೆ ದೂಡಬಹುದು. ಹಾಗಾದರೆ ಸೋಮವಾರ ಯಾವ ಕೆಲಸಗಳನ್ನು ಮಾಡಬಾರದು ನೋಡೋಣ. ಜೂಜಾಡಬೇಡಿ ಅಥವಾ ಕದಿಯಬೇಡಿ: ವಾರದ ಯಾವುದೇ ದಿನ ತಪ್ಪು ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು. ವಿಶೇಷವಾಗಿ ಸೋಮವಾರದಂದು. ಒಬ್ಬ ವ್ಯಕ್ತಿಯು ಸೋಮವಾರದಂದು ಜೂಜಾಟ (gambling), ಕಳ್ಳತನ ಅಥವಾ ಮಹಿಳೆಯ ಮೇಲೆ ಕೆಟ್ಟ ಕಣ್ಣಿಡುವಂತಹ ಕೆಲಸಗಳನ್ನು ಮಾಡಿದರೆ, ಅವನು ಪಾಪದ ಪಾಲುದಾರನಾಗುತ್ತಾನೆ ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಆದ್ದರಿಂದ, ಈ ದುಷ್ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಕಪ್ಪು ಬಟ್ಟೆಗಳನ್ನು ಧರಿಸಬೇಡಿ: ಜ್ಯೋತಿಷ್ಯದ…
ಸೂರ್ಯೋದಯ: 06:30, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ,ಶರದ ಋತು, ಕಾರ್ತಿಕ್ ಮಾಸ, ತಿಥಿ: ದಸಮಿ ನಕ್ಷತ್ರ: ಉತ್ತರ ಪಾಲ್ಗುಣಿ ರಾಹು ಕಾಲ: 07:30 ನಿಂದ 09:00 ತನಕ ಯಮಗಂಡ: 10:30 ನಿಂದ 12:00 ತನಕ ಗುಳಿಕ ಕಾಲ: 01:30 ನಿಂದ 03:00 ತನಕ ಅಮೃತಕಾಲ: ಸಂ.5:15 ನಿಂದ ರಾ .7:04 ತನಕ ಅಭಿಜಿತ್ ಮುಹುರ್ತ: ಬೆ.11:41 ನಿಂದ ಮ.12:25 ತನಕ ಮೇಷ ರಾಶಿ: ಕುಟುಂಬದ ಮತ್ತು ಹಣಕಾಸಿನ ಸಮಸ್ಯೆಯಿಂದಾಗಿ ನೆಮ್ಮದಿಗೆ ಭಂಗ, ಕೃಷಿ ಪ್ರಯತ್ನದಲ್ಲಿ ಧನ ನಷ್ಟ, ಪ್ರಯತ್ನಿಸಿದ ಕಾರ್ಯಗಳಲ್ಲಿ ಅಡಚಣೆ, ಕುಟುಂಬದ ಸದಸ್ಯರಿಗೆ ಪದೇಪದೇ ಅನಾರೋಗ್ಯ, ಪಾತ್ರೆ ಮತ್ತು ಬಟ್ಟೆ ವ್ಯಾಪಾರಸ್ಥರಿಗೆ ಆರ್ಥಿಕ ಪರಿಸ್ಥಿತಿ ಸುಧಾರಣೆ, ವಿದೇಶ ಪ್ರಯಾಣ ಯೋಗ, ಹೃದಯ ತಜ್ಞರಿಗೆ ಉನ್ನತ ಸ್ಥಾನಮಾನ, ಕೃಷಿ ಆಧಾರಿತ ವ್ಯಾಪಾರದಲ್ಲಿ ಲಾಭ, ವಕೀಲರು ಮತ್ತು ಸಂಧಾನ ಸಭೆ ನಡೆಸುವವರಿಗೆ ಶುಭದಾಯಕ, ವ್ಯಾಪಾರದಲ್ಲಿ ಏರಿಳಿತ ಸಾಮಾನ್ಯ, ಹಣಕಾಸಿನ ವ್ಯವಹಾರ…
ಕೇರಳ: ಅಣ್ಣನ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಯಶಸ್ವಿಯಾಗಿದ್ದಾರೆ. ಚೊಚ್ಚಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನಾಯಕ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ತೆರವಾದ ಕೇರಳದ ವಯನಾಡ್ ಲೋಕಸಭಾ ಸ್ಥಾನಕ್ಕೆ ನವೆಂಬರ್ 13 ರಂದು ಉಪಚುನಾವಣೆಗೆ ಮತದಾನ ನಡೆದಿತ್ತು ಫಲಿತಾಂಶ ಹೊರಬಿದ್ದಿದೆ. ಹೌದು ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ತೆರವಾದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದು 4,10,931 ಅಧಿಕ ಮತಗಳ ಅಂತರದಿಂದ ಚೊಚ್ಚಲ ಗೆಲುವು ಸಾಧಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಒಟ್ಟು 6,22,338 ಮತಗಳನ್ನು ಪಡೆದುಕೊಂಡಿದ್ದು, ಸಿಪಿಐನ ಹಿರಿಯ ನಾಯಕ ಸತ್ಯನ್ ಮೊಕೇರಿ 2,11,407 ಲಕ್ಷ ಮತಗಳನ್ನು ಪಡೆದುಕೊಂಡಿದ್ದಾರೆ. ಬಿಜೆಪಿಯ ನವ್ಯಾ ಹರಿದಾಸ್ ಸುಮಾರು 1,09,939 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. https://ainlivenews.com/government-will-provide-rs-3-lakh-subsidy-for-free-borewell-drilling-under-the-ganga-kalyan-yojana/ 2024ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ವಯನಾಡ್ ಮತ್ತು ರಾಯ್ ಬರೇಲಿ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿ ಭಾರಿ ಮತಗಳ ಅಂತರದಿಂದ ಗೆದ್ದಿದ್ದರು. ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ…
ಟೀಂ ಇಂಡಿಯಾ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್ ರಸ್ತೆ ಅಪಘಾತಕ್ಕೆ ಒಳಗಾಗಿ ಮತ್ತೆ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದ್ದ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಇನ್ನೂ ಇಂದು ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ಅವರನ್ನು ಬರೋಬ್ಬರಿ 27 ಕೋಟಿ ರೂಪಾಯಿ ಬೃಹತ್ ಮೊತ್ತವನ್ನು ಪಾವತಿಸಿ ತಂಡಕ್ಕೆ ಸೇರಿಸಿಕೊಮಡಿದೆ. ಈ ಮೂಲಕ ರಿಷಬ್ ಪಂತ್, ಕೆಲವೇ ಕ್ಷಣಗಳಲ್ಲಿ ಐಪಿಎಲ್ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ ಅವರ ದಾಖಲೆಯನ್ನು ಮುರಿದಿದ್ದಾರೆ. ರಿಷಬ್‌ಗಾಗಿ ಲಕ್ನೋ ಫ್ರಾಂಚೈಸಿ ಮೊದಲು ಬಿಡ್ ಮಾಡಿತು. ಬಳಿಕ ಆರ್‌ಸಿಬಿ, ಎಸ್‌ಆರ್‌ಹೆಚ್ ಬಿಡ್ ಮಾಡಿದವು. 20.75 ಕೋಟಿಗೆ ಲಕ್ನೋ ಬಿಡ್ ಮಾಡಿತು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಆರ್‌ಟಿಎಂ ಬಳಸುವುದಾಗಿ ಹೇಳಿತು. ಎಲ್‌ಎಸ್‌ಜಿ ಬಿಡ್ ಮೊತ್ತವನ್ನು 27 ಕೋಟಿಗೆ ಏರಿಸಿದ್ದರಿಂದ ಡೆಲ್ಲಿ ಹಿಂದೆ ಸರಿಯಿತು. ಅಂತಿಮವಾಗಿ ಪಂತ್ ದಾಖಲೆ ಮೊತ್ತಕ್ಕೆ ಲಕ್ನೋ ಪಾಲಾದರು. https://ainlivenews.com/government-will-provide-rs-3-lakh-subsidy-for-free-borewell-drilling-under-the-ganga-kalyan-yojana/ ಐಪಿಎಲ್ ವೃತ್ತಿ ಜೀವನದಲ್ಲಿ ಈವರೆಗೆ 107 ಪಂದ್ಯಗಳನ್ನಾಡಿರುವ ರಿಷಬ್ ಪಂತ್ 3,284 ರನ್…
ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕು ಪರಸನಟ್ಟಿ ಗ್ರಾಮದ ಕೆರೆಗೆ ಹಾರಿ ಭಾರತೀಯ ಸೇನೆ ಯೋಧ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಕಿತ್ತೂರು ತಾಲ್ಲೂಕಿನ ದೇಗಾಂವ ಗ್ರಾಮದ ಯೋಧ ನರೇಶ ಯಲ್ಲಪ್ಪ ಆಗಸರ (28) ಮೃತ ಯೋಧನಾಗಿದ್ದು, ಪರಸನಟ್ಟಿ ಗ್ರಾಮದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. https://ainlivenews.com/government-will-provide-rs-3-lakh-subsidy-for-free-borewell-drilling-under-the-ganga-kalyan-yojana/ ಕಳೆದ 20 ದಿನಗಳ ಹಿಂದೆ ರಜೆ ಮೇಲೆ ದೇಗಾಂವ ಗ್ರಾಮಕ್ಕೆ ಬಂದಿದ್ದರು. ರಜೆ ಮುಗಿಸಿ ನವೆಂಬರ್ 24ರಂದು ಸೇನಾ ಕರ್ತವ್ಯಕ್ಕೆ ಹಾಜರಾಗಬೇಕಾಗಿತ್ತು. ಆದರೆ ಇದೀಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವಾರು ಸಂದೇಹಗಳಿಗೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಕಿತ್ತೂರು ಪಿಎಸ್‌ಐ ಪ್ರವೀಣ ಗಂಗೋಳ, ಪ್ರವೀಣ ಕೋಟಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.