Author: AIN Admin

ಸೌತ್‌ ನ ಖ್ಯಾತ ನಟಿ, ಐಟಂ ಡಾನ್ಸರ್‌ ಸಿಲ್ಕ್‌ ಸ್ಮಿತಾ ಬರ್ತ್‌ಡೇ ಹಿನ್ನೆಲೆಯಲ್ಲಿ STRI Cinemas ಸಂಸ್ಥೆ ಕಡೆಯಿಂದ ಹೊಸ ಚಿತ್ರದ ಘೋಷಣೆ ಆಗಿದೆ. “ಸಿಲ್ಕ್‌ ಸ್ಮಿತಾ- ಕ್ವೀನ್‌ ಆಫ್‌ ದಿ ಸೌತ್‌” ಎಂಬ ಶೀರ್ಷಿಕೆಯ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಈ ಬಯೋಪಿಕ್‌ಗೆ ನಾಯಕಿ ಯಾರು, ಸಿಲ್ಕ್‌ ಸ್ಮಿತಾ ಅವರ ಪಾತ್ರವನ್ನು ತೆರೆಮೇಲೆ ತರುವವರು ಯಾರು ಎಂಬ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ. ಚಂದ್ರಿಕಾ ರವಿ, ತೆರೆಮೇಲೆ ಸ್ಮಿತಾ ಆಗಿ ಕಾಣಿಸಿಕೊಳ್ಳಲಿದ್ದಾರೆ. https://ainlivenews.com/is-cold-water-bathing-good-if-you-have-heart-disease-heres-the-information/ ಈ ಸಿನಿಮಾವನ್ನು ಜಯರಾಮ್‌ ಸಂಕರನ್‌ ನಿರ್ದೇಶನ ಮಾಡಲಿದ್ದು, ಎಸ್‌.ಬಿ ವಿಜಯ್‌ ಅಮೃತ್‌ರಾಜ್‌ ನಿರ್ಮಾಣ ಮಾಡಲಿದ್ದಾರೆ. 2025ರ ಆರಂಭದಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಸಿಲ್ಕ್‌ ಸ್ಮಿತಾ ಅವರ ಜನ್ಮದಿನದಂದು ಈ ವಿಶೇಷ ಘೋಷಣೆ ಮಾಡುವ ಮೂಲಕ, ವಿಶೇಷ ವೀಡಿಯೊವನ್ನು ಅನಾವರಣಗೊಳಿಸಿದ್ದಾರೆ.

Read More

ಹಾಸನ: ಯಾರಿಗೂ ನಾನು ಕೇರ್ ಮಾಡಿ ರಾಜಕಾರಣ ಮಾಡಲ್ಲ ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ಚನ್ನರಾಯಪಟ್ಟಣದಲ್ಲಿ ನಡೆದ ಹಾಸನ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ನಾನು ಯಾವುದೋ ಊರಿನಲ್ಲಿ ದನ ಕಾದುಕೊಂಡಿದ್ದೆ. ಈಗ ಈ ಹಂತಕ್ಕೆ ಬೆಳೆದಿದ್ದೇನೆ. ಅದು ನಮ್ಮ ಸ್ವಂತ ಶಕ್ತಿ, ಇದರ ಮೇಲೆ ನಾನು ಬೆಳೆದಿದ್ದೇನೆ. https://ainlivenews.com/is-cold-water-bathing-good-if-you-have-heart-disease-heres-the-information/ ಯಾರ ಆಶೀರ್ವಾದದಿಂದಲೂ ಬೆಳೆದಿಲ್ಲ. ಯಾರಿಗೂ ನಾನು ಕೇರ್ ಮಾಡಿ ರಾಜಕಾರಣ ಮಾಡಲ್ಲ. ತಮಟೆ ಹೊಡೆಯೋದು ನನಗೆ ಗೊತ್ತಿದೆ. ಈ ಜಿಲ್ಲೆಯಲ್ಲಿ ತಮಟೆ ಹೊಡೆಸೋದು ನನಗೆ ಗೊತ್ತಿದೆ. ಅವನು ಚೆನ್ನಾಗಿ ತಮಟೆ ಹೊಡೆಯುತ್ತೇನೆ ಅವನಿಗೆ ಮಂತ್ರಿ ಸ್ಥಾನ ಕೊಡಿ ಎಂದು ಗೋಪಾಲಸ್ವಾಮಿ ಹಾಗೂ ಪುಟ್ಟೇಗೌಡರು ಹೇಳಬೇಕು ಎಂದಿದ್ದಾರೆ.

Read More

ತುಮಕೂರು: ಶಕ್ತಿ ಯೋಜನೆ ಜಾರಿ ಮಾಡುವಾಗ ಯಾವ ಭೇದ-ಭಾವ ಇಲ್ಲದೇ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ತುಮಕೂರಿನಲ್ಲಿ 9,000 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ಕೊಟ್ಟ ಬಳಿಕ ವೇದಿಕೆಯಲ್ಲಿ ಮಾತನಾಡಿದ ಅವರು, ಶಕ್ತಿ ಯೋಜನೆ ಜಾರಿ ಮಾಡುವಾಗ ಯಾವ ಭೇದ-ಭಾವ ಇಲ್ಲದೇ ಮಾಡಿದ್ದೇವೆ. ಬಡವರಿಗೆ ಸಾಮಾಜಿಕವಾಗಿ ಶಕ್ತಿ ತುಂಬಿದ್ದೇವೆ. ಸಮ ಸಮಾಜ ನಿರ್ಮಾಣಕ್ಕೆ ಇದು ಸಹಕಾರಿ. ಬಹಳ ಜನ ಗ್ಯಾರಂಟಿ ಯೋಜನೆ ಮೇಲೆ ಟೀಕೆ ಮಾಡುತ್ತಾರೆ. ಅಭಿವೃದ್ಧಿ ಕೆಲಸ ನಿಂತಿದೆ ಎನ್ನುತ್ತಾರೆ. ಇವತ್ತು ಇಷ್ಟೊಂದು ಸವಲತ್ತು ಕಾಮಗಾರಿಗಳ ಶಂಕುಸ್ಥಾಪನೆ ಅಭಿವೃದ್ಧಿ ಅಲ್ವಾ? ಕಳೆದ ವರ್ಷ ಕೊಟ್ಟಿದ್ದೇವೆ. ಈ ವರ್ಷವೂ ಕೊಟ್ಟಿದ್ದೇವೆ. ರಚನಾತ್ಮಕ ವಾದ ಟೀಕೆಗಳನ್ನು ಮಾತ್ರ ಸ್ವಾಗತಿಸುತ್ತೇನೆ. ಗ್ಯಾರಂಟಿ ಯೋಜನೆಗೆ 50,000 ಕೋಟಿ ಹಣ ಮೀಸಲಿಡಲಾಗಿದ ಎಂದು ವೇದಿಕೆ ಮೇಲೆ ಇದ್ದ ಮೈತ್ರಿ ನಾಯಕರಿಗೆ ತಿವಿದರು. https://ainlivenews.com/no-visa-required-just-an-indian-passport-to-go-to-these-countries/ ಸಂಪತ್ತು ಹೆಚ್ಚು ಕ್ರೂಢಿಕರಣ ಮಾಡಿ ಗ್ಯಾರಂಟಿ ಕೊಡುತ್ತೇವೆ. ಜಿಡಿಪಿಯಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಮುಂದಿದೆ. ಕರ್ನಾಟಕದ ಜಿಡಿಪಿ 10.2 ಇದೆ. ನಮ್ಮ…

Read More

ತುಮಕೂರು: ರಾಜ್ಯದ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನ ತುಮಕೂರಿಗೆ ಕೊಡಬೇಕು ಎಂದು ಸಿಎಂ, ಡಿಸಿಎಂಗೆ ವೇದಿಕೆಯಲ್ಲೇ ಗೃಹ ಸಚಿವ ಜಿ. ಪರಮೇಶ್ವರ್‌ ಮನವಿ ಮಾಡಿದ್ದಾರೆ. ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆ ಬಹಳ ವೇಗವಾಗಿ ಬೆಳೆಯಲಿ. ತುಮಕೂರು ಜಿಲ್ಲೆಗೆ ಮೆಟ್ರೋ ರೈಲು ಬರುವ ಕಾಮಗಾರಿಯ ಡಿಪಿಆರ್ ನಡೀತಿದೆ ಎಂದರು. ಅಲ್ಲದೇ ತುಮಕೂರು, ಬೆಂಗಳೂರಿನಿಂದ ಕೇವಲ 65 ಕಿಮಿ ದೂರದಲ್ಲಿದೆ. ಹಾಗಾಗಿ ತುಮಕೂರಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕು. ರಾಜ್ಯದ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನ ಇಲ್ಲಿಗೆ ಕೊಡಬೇಕು ಎಂದು ಸಿಎಂ, ಡಿಸಿಎಂಗೆ ವೇದಿಕೆಯಲ್ಲೇ ಮನವಿ ಮಾಡಿದರು. https://ainlivenews.com/no-visa-required-just-an-indian-passport-to-go-to-these-countries/ ತುಮಕೂರು ಜಿಲ್ಲೆಯಲ್ಲಿ ಇವತ್ತಿನ ಕಾರ್ಯಕ್ರಮ ಇತಿಹಾಸ ಸೃಷ್ಟಿ ಮಾಡಿದೆ. ಇವತ್ತು 1,250 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. 1.5 ಲಕ್ಷ ಫಲಾನುಭವಿಗಳಿಗೆ ಸವಲತ್ತು ಹಂಚಿಕೆಯಾಗಿದೆ. ಕಂದಾಯ ಇಲಾಖೆಯಿಂದ 2 ಸಾವಿರ ಹಕ್ಕು ಪತ್ರ ಕೊಟ್ಟಿದ್ದೇವೆ. 891 ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ತುಮಕೂರು ಬೆಂಗಳೂರಿನ ಭಾಗವಾಗಿ ಅಭಿವೃದ್ಧಿಯಾಗುತ್ತಿದೆ ಎಂದು…

Read More

ಶೋಭಿತಾ ಶಿವಣ್ಣ.. ಕನ್ನಡದ ಹಿರಿತೆರೆ ಮತ್ತು ಕಿರಿತೆರೆಯಲ್ಲಿ ಹೆಸರು ಮಾಡಿದ ನಟಿ.. ಕನ್ನಡದಲ್ಲಿ ಸಿನಿಮಾಗಿಂತಲೂ ಸೀರಿಯಲ್ ನಿಂದಲೇ ಮನೆಮಾತಾಗಿದ್ದ ನಟಿ ಶೋಭಿತಾ ಶಿವಣ್ಣ ದುಡುಕಿನ ನಿರ್ಧಾರ ಮಾಡಿದ್ದಾರೆ. ಇನ್ನೂ ಬಾಳಿ ಬದಕುಬೇಕಿದ್ದ ವಯಸ್ಸಿನಲ್ಲೇ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.. ಶೋಭೀತಾ ಇಷ್ಟವಿಲ್ಲದೇ ಮದುವೆ ಆಗಿದ್ರಾ.. ಮದುವೆ ಆದ ಎರಡೇ ವರ್ಷಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ.. ಶೋಭಿತಾ ಸೂಸೈಡ್ ನೋಟ್ ನಲ್ಲಿ ಸಿಕ್ಕಿದ್ದೇನು.. ಅದರ ಬಗ್ಗೆ ಹೇಳ್ತೇನಿ.ನೀವಿನ್ನು ನಮ್ಮ ಎಐಎನ್ ಕನ್ನಡ ನ್ಯೂಸ್ ಯೂಟ್ಯೂಬ್ ಚಾನೆಲ್ ಸಬ್ ಸ್ಕೈಬ್ ಮಾಡಿಲ್ಲ ಅಂದರೆ ಈ ಕೂಡಲೇ ಸಬ್ ಸ್ಕ್ರೈಬ್ ಮಾಡಿ.. ತಾಜಾ ಸುದ್ದಿಗಳ ಅಪ್ಡೇಟ್ ಪಡೆಯಿರಿ.. ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ, ಅಂತಾರಾಷ್ಟ್ರೀಯ ಸುದ್ದಿಗಳು ನಿಮಗಾಗಿ.. ಕನ್ನಡ ಕಿರುತೆರೆಯಲ್ಲಿ ಬ್ರಹ್ಮಗಂಟು ಧಾರವಾಹಿ ಜನಮೆಚ್ಚುಗೆ ಪಡೆದಿತ್ತು. ಇದೇ ಧಾರವಾಹಿಯಲ್ಲಿ ನಟಿಸಿದ್ದ ಶೋಭಿತಾ ಶಿವಣ್ಣ ಸಹ ಮನೆ ಮಾತಾಗಿದ್ದರು. ಕನ್ನಡದ ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಹಲವು ಅವಕಾಶಗಳು ಸಹ ಬಂದವು.. ಎರಡ್ಲೊಂದಾ ಮೂರು, ಎಟಿಎಂ ಸೇರಿದಂತೆ ಹಲವು ಚಿತ್ರಗಳ…

Read More

ಹುಬ್ಬಳ್ಳಿ: ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲಾಗುವುದು. ರೈತರಿಗೆ ಗುಣಮಟ್ಟ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಅಧ್ಯಕ್ಷರಾದ ಸೈಯದ್ ಅಜೀಮಪೀರ್ ಎಸ್ ಖಾದ್ರಿ ಹೇಳಿದರು. ಇಂದು ನವನಗರದ ಹೆಸ್ಕಾಂ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯು ಉತ್ತರ ಕರ್ನಾಟಕದ ಭಾಗದ ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟ ಹಾಗೂ ವಿಜಯಪುರ ಸೇರಿ ಒಟ್ಟು 7 ಜಿಲ್ಲೆಗಳನ್ನು ಒಳಗೊಂಡಿದೆ. ಹೆಸ್ಕಾಂದಲ್ಲಿ ಒಟ್ಟು 62 ಲಕ್ಷ ಗ್ರಾಹಕರಿದ್ದು ಅದರಲ್ಲಿ 10.49 ಲಕ್ಷ ನೀರಾವರಿ ಪಂಪ್ ಸೆಟ್ಟುಗಳಿವೆ. 33.54 ಲಕ್ಷ ಗ್ರಾಹಕರು ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಹೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 467 ವಿವಿಧ ವಿದ್ಯುತ್ ಉಪ-ಕೆಂದ್ರಗಳಿದ್ದು 4,329 11 ಕೆವಿ ಫೀಡರ್‌ಗಳು ಹಾಗೂ 3.18 ಲಕ್ಷ ವಿತರಣಾ ಪರಿವರ್ತಕಗಳಿವೆ. ಒಟ್ಟು 3,937 ಗ್ರಾಹಕರು ಸೌರ ಮೇಲ್ಛಾವಣಿ ಯೋಜನೆಯಡಿ ಸೌರ ವಿದ್ಯುತ್ ಅಳವಡಿಸಿಕೊಂಡು, 89.93 ಮೆಗಾ ವ್ಯಾಟ್ ವಿದ್ಯುತ್‌ನ್ನು…

Read More

ಬ್ರಹ್ಮಗಂಟು ಸೀರಿಯಲ್ ನಟಿ ಶೋಭಿತಾ ಶಿವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹನಟ ಹರ್ಷ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಬ್ರಹ್ಮಗಂಟು ಸೀರಿಯಲ್‌ನಲ್ಲಿ ಶೋಭಿತಾ ಪತಿಯ ಪಾತ್ರದಲ್ಲಿ ನಟಿಸಿದ್ದ ಹರ್ಷ ಗೌಡ ಮಾತನಾಡಿ, ಶೋಭಿತಾ ಬಹಳ ಪಾಸಿಟಿವ್ ಆಗಿದ್ದವರು. ನಿನ್ನೆ (ಡಿ.1) ಮಧ್ಯಾಹ್ನ ನನಗೆ ಸ್ನೇಹಿತನಿಂದ ಶೋಭಿತಾ ಸೂಸೈಡ್ ವಿಚಾರ ಗೊತ್ತಾಯ್ತು. ಅವರು ಯಾಕೆ ಹೀಗೆ ಮಾಡಿಕೊಂಡಿದ್ದಾರೆ ಅನ್ನೋದು ಯಾರಿಗೂ ಗೊತ್ತಿಲ್ಲ. ನಾಲ್ಕೈದು ವರ್ಷ ನಾವು ಎರಡು ಸೀರಿಯಲ್‌ನಲ್ಲಿ ಒಟ್ಟಾಗಿ ನಟಿಸಿದ್ದೇವೆ. ಈ ಜರ್ನಿಯಲ್ಲಿ ಅವರು ಬಹಳ ಕಷ್ಟಪಟ್ಟು ಬಂದಿದ್ದರು. ಕೆಲವೊಮ್ಮೆ ಸಾಕಾಗಿದೆ, ಕೆಲಸ ಬಿಟ್ಟು ಬಿಡ್ತೀನಿ ಅಂತಾನೂ ಹೇಳುತ್ತಿದ್ದರು. ಮದುವೆಯ ಬಳಿಕ ನಟನೆ ಬಿಟ್ಟರು. ಆಗ ಕರೆ ಮಾಡಿ ಮದುವೆ ಫಿಕ್ಸ್ ಆಗಿದೆ ಅಂತ ಹೇಳಿದರು. https://ainlivenews.com/is-it-okay-to-make-yogurt-in-winter-stop-worrying-follow-these-tips/ ನಂತರ ಯಾವಾಗಲಾದರೂ ಅಪರೂಪಕ್ಕೆ ವಿಶೇಷ ದಿನಕ್ಕೆ ಮೆಸೇಜ್ ಮಾಡಿ ಶುಭ ಕೋರುತ್ತಿದ್ದರು ಎಂದರು. ನಿನ್ನೆ ಈ ವಿಚಾರ ಕೇಳಿ ಶಾಕ್ ಆಯ್ತು. ಕಾರಣ ಏನು ಅನ್ನೋದು ಪೋಸ್ಟ್ ಮಾರ್ಟಂ ಬಳಿಕ ಗೊತ್ತಾಗಬೇಕಿದೆ. ಈ ರೀತಿ…

Read More

ಉತ್ತರ ಕಾಶ್ಮೀರದಂತೆ ಆಯ್ತು ಬೀದರ್ ಜಿಲ್ಲೆ ಪೆಂಗಲ ಚಂಡಮಾರುತದ ಎಫೆಕ್ಟ್ ಗಡಿ ಜಿಲ್ಲೆಯ ಬೀದರಗೂ ತಟ್ಟಿದ್ದೆ ಮುಂಗಾರು ಬೆಳೆ ಅತಿವೃಷ್ಟಿ ಮಳೆಯಿಂದ ಬೆಳೆ ಸಂಪಯರ್ಣ ನಾಶೆ ಇಗ ಹಿಂಗಾರು ಬೆಳೆ ತೊಗರಿ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತಿದ್ದೆಪ್ರತಿ ವರ್ಷ ಸಾಮಾನ್ಯವಾಗಿ ಡಿಸೆಂಬರ್ ಮತ್ತು ಜನವರಿಯಲ್ಲಿ ಚಳಿ ಹೆಚ್ಚಾಗಿರಲಿದೆ. ಆದರೆ ಈಗಲೇ ಚಳಿ ಶುರುವಾಗಿದ್ದು, ರೈತರಲ್ಲಿ ಆತಂಕ‌ ಶುರುವಾಗಿದೆ ಬೀದರ ‌ಜಿಲ್ಲೆಯಲ್ಲಿ ಒಟ್ಟು 41.5.569 ಹೆಕ್ಟೇರ್ ಪ್ರದೇಶದ ಬಿತ್ತನೆಯಾಗಿದು ಇದರಲ್ಲಿ ತೊಗರಿ ಬೆಳೆ 1.22.860 ಹೆಕ್ಟೇರ್ ಪ್ರದೇಶ ದಲ್ಲಿ ಬಿತ್ತನೆ ಮಾಡಲಾಗಿದೆ ಸದ್ಯ ತೋಗರಿ ಬೆಳೆ ಮೋಗು ಹಾಗೂ ಹೂ ಬಿಡುವ ಹಂತದಲ್ಲಿದು ಈ ಚಂಡಮಾರುತ ದಿಂದ ತೊಗರಿ ಹೂ ಸಂಪೂರ್ಣ ನಾಶ ವಾಗಲಿದೆ ಅಂತ ರೈತರಲಿ ಆತಂಕ ಶುರುವಾಗಿದೆ. https://ainlivenews.com/is-it-okay-to-make-yogurt-in-winter-stop-worrying-follow-these-tips/ ಬೀದರ ಜಿಲ್ಲೆಯ ರೈತರು ಫೆಂಗಲ ಚಂಡಮಾರುತದಿಂದ ಹೆಚ್ಚು ನಷ್ಟು ಅನುಭವಿಸಲಿದ್ದಾರೆ ಹೀಗಾಗಿ ಹಮಾನ ಇಲಾಖೆಯ ರೈತರಿಗೆ ಮುನೆಚ್ವರಿಕೆ ಯಾಗಿ ಹಲವಾರು ನಿಯಮ ಹೋರಡಿಸಿದೆ..ಚಳಿಯ ಆರ್ಭಟ ಶುರುವಾಗಿದು. ಕಳೆದ…

Read More

ಪುಷ್ಪಾ 2 ಸಿನಿಮಾ ಇದೇ ಡಿಸೆಂಬರ್ 5ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಖತ್ ಹೈಪ್ ಕ್ರಿಯೇಟ್ ಮಾಡಿರೋ ಪುಷ್ಪಾ 2 ಸಿನಿಮಾದ ಪ್ರಮೋಷನ್ ಭರ್ಜರಿಯಾಗಿದೆ. ಇದೀಗ ರಿಲೀಸ್‌ಗೂ ಮುನ್ನವೇ ಪುಷ್ಪ 2 ಚಿತ್ರ ದಾಖಲೆ ಬರೆದಿದೆ. ಈ ಚಿತ್ರದ ಟಿಕೆಟ್ ಖರೀದಿಗೆ ಮುಂಗಡ ಬುಕ್ಕಿಂಗ್ ಓಪನ್ ಆಗಿದೆ. ಕೇವಲ 10 ಗಂಟೆಗಳಲ್ಲಿ ಚಿತ್ರದ 55 ಸಾವಿರ ಟಿಕೆಟ್ ಸೇಲ್ ಆಗಿದೆ. ಸ್ಟಾರ್ ಜೋಡಿ ರಶ್ಮಿಕಾ ಮತ್ತು ಅಲ್ಲು ಅರ್ಜುನ್ ನಟಿಸಿರುವ ‘ಪುಷ್ಪ 2’ (Pushpa 2) ಸಿನಿಮಾ ನೋಡಲು ಎಲ್ಲರೂ ಕೌತುಕದಿಂದ ಎದುರು ನೋಡುತ್ತಿದ್ದಾರೆ. ಹೀಗಿರುವಾಗ ಸಿನಿಮಾ ರಿಲೀಸ್‌ಗೂ ಮುನ್ನವೇ 10 ಗಂಟೆಗಳಲ್ಲಿ 55 ಸಾವಿರ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಇನ್ನೂ ದೆಹಲಿ, ಮುಂಬೈ ಸೇರಿದಂತೆ ಹಲವೆಡೆ ‘ಪುಷ್ಪ 2’ ಹಿಂದಿ ವರ್ಷನ್ ನೋಡಲು 2000 ಸಾವಿರ ರೂ. ಟಿಕೆಟ್ ದರ ಹೆಚ್ಚಿಸಲಾಗಿದೆ.ವಿಶ್ವದಾದ್ಯಂತ 12 ಸಾವಿರ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣಿಸುತ್ತಿದೆ. ಆದರೆ, ‌’ಪುಷ್ಪ-2′ ಚಿತ್ರದ ಟಿಕೆಟ್ ಬುಕ್ಕಿಂಗ್ ಎಲ್ಲೆಡೆ ಪೂರ್ಣ…

Read More

ರಾಯಚೂರು: ಸರ್ಕಾರಿ ಬಸ್- ಬೈಕ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಕವಿತಾಳ ಗ್ರಾಮದ ಬಳಿ ನಡೆದಿದೆ. ದೇವತಗಲ್ ಗ್ರಾಮದ ನಿವಾಸಿ ರಂಗನಾಥ ನಾಯಕ (35) ಮೃತ ಬೈಕ್ ಸವಾರನಾಗಿದ್ದು, ಲಿಂಗಸುಗೂರು-ಕವಿತಾಳ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ. https://ainlivenews.com/is-it-okay-to-make-yogurt-in-winter-stop-worrying-follow-these-tips/ ಲಿಂಗಸುಗೂರು ಮೂಲಕ ರಾಯಚೂರಿಗೆ ಬರುತ್ತಿದ್ದ ಬಾದಾಮಿ ಘಟಕಕ್ಕೆ ಸೇರಿದ ವಾಯುವ್ಯ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಈ ಘಟನೆ ಸಂಬಂಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More