ಕಲಘಟಗಿ: ‘ಸಹಕಾರ ಸಂಘಗಳು ರೈತರಿಗೆ ಹಾಗೂ ಮಹಿಳಾ ಸಂಘಗಳಿಗೆ ಸಾಲ ನೀಡುವ ಮೂಲಕ ಅವರ ಏಳಿಗೆಗೆ ಶ್ರಮಿಸುತ್ತಿವೆ’ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥಗೌಡ ಮುರಳ್ಳಿ ಹೇಳಿದರು. ಪಟ್ಟಣದ ಹನ್ನೆರಡು ಮಠದ ಸಭಾ- ಭವನದಲ್ಲಿ ಧಾರವಾಡ ಜಿಲ್ಲಾ ಸಹಕಾರ ಯೂನಿಯನ್, ಕೆಸಿಸಿ ಬ್ಯಾಂಕ್, ತಾಲ್ಲೂಕಿನ ಸಹಕಾರ ಸಂಸ್ಥೆಗಳ ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ಬುಧವಾರ ನಡೆದ 71ನೇ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪಕ್ಷ ಭೇದ ಮರೆತು ಎಲ್ಲರೂ ಸಹಕಾರ ನೀಡಿದಾಗ ಮಾತ್ರ ಸಹಕಾರ ಸಂಘಗಳ ಬೆಳವಣಿಗೆ ಸಾಧ್ಯ’ ಎಂದರು. ಕೆಎಂಎಫ್ ಅಧ್ಯಕ್ಷ ಶಂಕರ ಮುಗದ ಮಾತನಾಡಿ, ‘ಹಾಲು ಉತ್ಪಾದಕರ ಸಹಕಾರ ಹಾಗೂ ಕೆಸಿಸಿ ಬ್ಯಾಂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಸಹಕಾರದಿಂದ ಗ್ರಾಮೀಣ ಜನರ ಬದುಕು ಹಸನಾಗಿಸುತ್ತಿವೆ. ಮೂರು ಜಿಲ್ಲೆ ಒಳಗೊಂಡ ಹಾಲು ಉತ್ಪಾದಕರ ಸಹಕಾರ ಸಂಘವು 1.80 ಲಕ್ಷ ಕಲಘಟಗಿ ಪಟ್ಟಣದಲ್ಲಿ ನಡೆದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಕೆಎಂಎಫ್ ಅಧ್ಯಕ್ಷ ಶಂಕರ ಮುಗದ ಹಾಗೂ ಕೆಸಿಸಿ ಬ್ಯಾಂಕ್…
Author: AIN Admin
ಬೆಳಗಾವಿ: ಕಸ್ತೂರಿ ಸಿರಿಗನ್ನಡ ವೇದಿಕೆ (ರಿ) ಬೆಳಗಾವಿ ಮಂಡಳಿಯು ಮಾರುತಿ ನಿಂಗಪ್ಪ ಲಮಾಣಿ ಅವರು ತಮ್ಮನ್ನು ಸಾಹಿತ್ಯ, ಭಾಷೆ ನೆಲ, ಜಲ ಸಂಸ್ಕೃತಿ, ಮೊದಲಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ, ಸಾಧನೆಗೈದದ್ದಕ್ಕೆ, ಮಂಡಳಿಯು ಅವರನ್ನು ಗುರುತಿಸಿ ಸುವರ್ಣಮಹೋತ್ಸವ ಪುರಸ್ಕಾರ ಕ್ಕೆ ಆಯ್ಕೆ ಮಾಡಿದ್ದು, ಇದೇ ನವೆಂಬರ್ 17. 2024 ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿ 50 ವರ್ಷಗಳು ಸಂಪನ್ನಗೊಂಡ ಸುವರ್ಣವರ್ಷಾಚರಣೆಯ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಿ ಗೌರವಿಸಲು ಮಂಡಳಿ ನಿರ್ಧರಿಸಿದೆ ಎಂದು ವೇದಿಕೆಯ ಅಧ್ಯಕ್ಷರಾದ ಶ್ರೀ ಪ್ರೊ.ಎಲ್ಎಚ್ ಪೆಂಡಾರಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ವೇದಿಕೆಯ ಉಪಾಧ್ಯಕ್ಷ ಪ್ರೊ.ಚಂದ್ರ ಶೇಖರ ಹಿರೇಮಠ, ಗೌರವ ಮಾರ್ಗ ದರ್ಶಕರು ಡಾ. ರಾಧಾ ಕುಲಕರ್ಣಿ ಮತ್ತು ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಜಮಖಂಡಿಯ ಅಧ್ಯಕ್ಷರಾದ ಶ್ರೀ ಜಯವಂತ ಕಾಳೆ, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮಂಡಳಿ, ಮತ್ತು ಪ್ರಾಂಶುಪಾಲರು, ಪ್ರಾಧ್ಯಾಪಕ ವರ್ಗ, ಇತರೆ ಸಿಬ್ಬಂದಿ ವರ್ಗದವರು ಸೇರಿ ಮಾರುತಿ ಲಮಾಣಿ ಅವರಿಗೆ ಪುರಸ್ಕಾರ ದೊರೆತಿದ್ದಕ್ಕೆ ಅಭಿನಂದನೆಗಳನ್ನು…
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಹೆಗ್ಗನಹಳ್ಳಿ ಗ್ರಾಮದ ಬಳಿ ಸೆಕ್ಯೂರಿಟಿ ಗಾರ್ಡ್ ನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಗ್ರಾಮದ ಹೊರವಲಯದಲ್ಲಿನ ಎಂಬಸ್ಸಿ ಸ್ಪ್ರಿಂಗ್ ಗೆ ಸೇರಿದ ಸೆಕ್ಯೂರಿಟಿ ಶೆಡ್ ನಲ್ಲಿ ಕೊಲೆ ನಡೆದಿದ್ದು, ದೇವನಹಳ್ಳಿ ತಾಲ್ಲೂಕು ಬೋವಿಪಾಳ್ಯದ ನಿವಾಸಿ ಶ್ರೀನಿವಾಸ್ ಕೊಲೆಯಾಗಿರುವ ವ್ಯಕ್ತಿಯಾಗಿದ್ದಾನೆ. https://ainlivenews.com/do-you-know-blood-sugar-will-become-normal-if-you-drink-the-water-soaked-in-this-seed/ ಹಳೇ ದ್ವೇಷದ ಹಿನ್ನೆಲೆ ಮಚ್ಚು, ಚಾಕು ಮತ್ತು ಕಬ್ಬಿಣದ ರಾಡ್ ನಿಂದ ಹೊಡೆದು ಈ ಹತ್ಯೆ ಮಾಡಲಾಗಿದೆ. ಬೋವಿಪಾಳ್ಯದ ಗೋವಿಂದರಾಜು, ಮನೋಜ್, ತಿಮ್ಮರಾಜು ಮತ್ತು ಮಂಜುನಾಥ್ ಕೊಲೆ ಮಾಡಿರುವ ಆರೋಪಿಗಳಾಗಿದ್ದಾರೆ. ಈ ಹಿಂದೆ ಗಣೇಶ ವಿಸರ್ಜನೆ ಸಮಯದಲ್ಲಿ ಇವರ ನಡುವೆ ಜಗಳವಾಗಿತ್ತು ಎನ್ನಲಾಗಿದ್ದು, ಈ ಸಂಬಂಧ ವಿಶ್ವನಾಥಪುರ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರೆಸಿದ್ದಾರೆ
ಭಾರೀ ಕುತೂಹಲ ಮೂಡಿಸಿರೋ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ಗೆ ಬಿಸಿಸಿಐ ಎಲ್ಲಾ ರೀತಿಯ ತಯಾರಿ ನಡೆಸಿಕೊಂಡಿದೆ. 2025ರ ಐಪಿಎಲ್ ಟೂರ್ನಿಯು ಮಾರ್ಚ್ 14ರಂದು ಪ್ರಾರಂಭವಾಗಿ ಮೇ 25ರವರೆಗೆ ನಡೆಯಲಿದೆ. ಹೌದು 2026 ರಲ್ಲಿ ನಡೆಯಲ್ಲಿರುವ ಐಪಿಎಲ್ ಮಾರ್ಚ್ 15 ರಿಂದ ಮೇ 31 ರವರೆಗೆ ನಡೆದರೆ, 2027 ರ ಐಪಿಎಲ್ ಮಾರ್ಚ್ 14 ರಿಂದ ಮೇ 30 ರವರೆಗೆ ನಡೆಯಲ್ಲಿದೆ. ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿರುವಂತೆ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳಿಗೂ ಬಿಸಿಸಿಐ, ಇ-ಮೇಲ್ ಮುಖಾಂತರ ಈ ಮಾಹಿತಿ ರವಾನೆ ಮಾಡಿದೆ. ಆ ಪ್ರಕಾರ, ಇದೀಗ ಮುಂದಿನ ಮೂರು ಆವೃತ್ತಿಗಳ ಆರಂಭ ಮತ್ತು ಅಂತ್ಯದ ಬಗ್ಗೆ ಮಾಹಿತಿ ಹೊರಬಿದ್ದಿದ್ದು, ಸಂಪೂರ್ಣ ವೇಳಾಪಟ್ಟಿ ಇನ್ನಷ್ಟೇ ಹೊರಬೀಳಬೇಕಿದೆ. ಈ ಮೂರರ ಪೈಕಿ, ಮುಂದಿನ ವರ್ಷ ನಡೆಯಲ್ಲಿರುವ ಐಪಿಎಲ್ನ ಸಂಪೂರ್ಣ ವೇಳಾಪಟ್ಟಿ ಸದ್ಯದಲ್ಲೇ ಹೊರಬೀಳುವ ಸಾಧ್ಯತೆ ಇದೆ. https://ainlivenews.com/do-you-know-blood-sugar-will-become-normal-if-you-drink-the-water-soaked-in-this-seed/ ಬಿಸಿಸಿಐ ಪ್ರಕಟಿಸಿದ ವೇಳಾಪಟ್ಟಿಯಂತೆ 2026ರ ಟೂರ್ನಿಯು ಮಾರ್ಚ್ 15 ರಂದು ಪ್ರಾರಂಭವಾಗಿ…
ನವದೆಹಲಿ: ಶ್ರೀಮಂತ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ವಂಚನೆಯ ಆರೋಪ ಕೇಳಿಬಂದಿದೆ. ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಸೇರಿದಂತೆ ಇತರ ಏಳು ಅಧಿಕಾರಿಗಳು ಸೌರ ಶಕ್ತಿಯ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್‌ಗೂ ಹೆಚ್ಚು ಲಂಚದ ಭರವಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬೆನ್ನಲ್ಲೇ ಅದಾನಿ ಗ್ರೂಪ್ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ತೀವ್ರ ಕುಸಿತ ಕಂಡಿದೆ. ಷೇರು ಬೆಲೆಗಳು 20% ರಷ್ಟು ತೀವ್ರವಾಗಿ ಕುಸಿದಿವೆ. ಸೌರ ವಿದ್ಯುತ್ ಗುತ್ತಿಗೆ ಪಡೆದುಕೊಳ್ಳಲು ಭಾರತೀಯ ಅಧಿಕಾರಿಗಳಿಗೆ ಅದಾನಿ ಗ್ರೂಪ್ ಲಂಚ ನೀಡಿದೆ ಎಂದು ಯುಎಸ್ ಅಧಿಕಾರಿಗಳು ಬುಧವಾರ ಗಂಭೀರ ಆರೋಪ ಮಾಡಿದ್ದಾರೆ. 2023 ರ ಆರಂಭದಲ್ಲಿ ಹಿಂಡೆನ್‌ಬರ್ಗ್ ಆರೋಪದ ನಂತರ ಅದಾನಿ ಷೇರುಗಳು ಅತಿ ದೊಡ್ಡ ನಷ್ಟ ಅನುಭವಿಸಿವೆ. https://ainlivenews.com/do-you-know-blood-sugar-will-become-normal-if-you-drink-the-water-soaked-in-this-seed/ ಪ್ರಮುಖ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್ ತನ್ನ ಷೇರು ಮೌಲ್ಯದಲ್ಲಿ 20% ರಷ್ಟು ತೀವ್ರ ಕುಸಿತವನ್ನು ಕಂಡಿತು. ಆದರೆ ಅದಾನಿ ಎನರ್ಜಿ ಸೊಲ್ಯೂಷನ್ಸ್ ಒಂದೇ ರೀತಿಯ ಕುಸಿತವನ್ನು…
ಬೆಂಗಳೂರು: ಬಿಪಿಎಲ್ ಕಾರ್ಡ್ ರದ್ದಾದರೆ ಕೇವಲ ಅಕ್ಕಿ ಮಾತ್ರ ರದ್ದಾಗುವುದಿಲ್ಲ. ಔಷಧಿ, ಆಸ್ಪತ್ರೆ ಸೌಲಭ್ಯ ಎಲ್ಲವೂ ಸ್ಥಗಿತಗೊಳ್ಳುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ರದ್ದಾದರೆ ಕೇವಲ ಅಕ್ಕಿ ಮಾತ್ರ ರದ್ದಾಗುವುದಿಲ್ಲ. ಔಷಧಿ, ಆಸ್ಪತ್ರೆ ಸೌಲಭ್ಯ ಎಲ್ಲವೂ ಸ್ಥಗಿತಗೊಳ್ಳುತ್ತವೆ. ಜನರ ಕಷ್ಟ ಅವರಿಗೆ ಅರ್ಥ ಆಗುತ್ತಿಲ್ಲ. ಮುಡಾ ಎಂದು ಹೇಳಿ ಸೈಟ್ ವಾಪಸ್ ನೀಡಿದ್ದರು. ಈಗ ಬಿಪಿಎಲ್ ಕಾರ್ಡ್ ಪಡೆಯಲು ಮತ್ತೆ ಅರ್ಜಿ ಹಾಕಬೇಕಂತೆ ಇದೇನು ಮುಖ್ಯಮಂತ್ರಿಗಳೆ? ಇದು ಅತ್ಯಂತ ಜನ ವಿರೋಧಿ ಸರ್ಕಾರ. ಇದು ಯೂಟರ್ನ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು. https://ainlivenews.com/do-you-know-blood-sugar-will-become-normal-if-you-drink-the-water-soaked-in-this-seed/ ಕಾರ್ಡ್ ರದ್ದು ಮಾಡಿರುವುದನ್ನು ವಿರೋಧಿಸಿದ ಮೇಲೆ ಈಗ ವಾಪಸ್ ತೆಗೆದುಕೊಳ್ಳುವ ಕೆಲಸ ಮಾಡುತ್ತಾರೆ. ರೇಷನ್ ಕಾರ್ಡ್ ರದ್ದಾದವರು ಅರ್ಜಿ ಹಾಕಿದರೆ ತಕ್ಷಣ ವಾಪಸ್ ಕೊಡಲಾಗುವುದು ಎಂದು ಹೇಳುತ್ತಾರೆ. ಅರ್ಜಿ ಹಾಕಿದ ಮೇಲೆ ಕಾರ್ಡ್ ಬರುವುದು ಯಾವಾಗ? ಅಲ್ಲಿಯ ತನಕ ಕಾರ್ಡ್ ರದ್ದಾಗಿರುವ ಬಡವರು ಏನು…
ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಬಡವರ ಬಿಪಿಎಲ್ ಕಾರ್ಡ್ ದರೋಡೆ ಮಾಡುವ ಸರ್ಕಾರ ಎಂದು ಬಿಜೆಪಿ ವಿಧಾನ ಪರಿಷತ್ ಎನ್. ರವಿಕುಮಾರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಬರೀ ಸೈಟ್ ದರೋಡೆ ಮಾಡುವಂತಹ ಸರ್ಕಾರ ಅಲ್ಲ, https://ainlivenews.com/do-you-know-blood-sugar-will-become-normal-if-you-drink-the-water-soaked-in-this-seed/ ಬಡವರ ಬಿಪಿಎಲ್ ಕಾರ್ಡ್ ದರೋಡೆ ಮಾಡುವ ಸರ್ಕಾರ ಕೂಡ ಹೌದು. ಲಕ್ಷಾಂತರ ಬಡವರ ಬಿಪಿಎಲ್ ಕಾರ್ಡ್‌ಗಳನ್ನ ರದ್ದು ಮಾಡಿದ್ದಾರೆ, ಅವರ ಊಟದ ಕಥೆ ಏನು? ಅರ್ಹ ಬಿಪಿಎಲ್ ರದ್ದು ಮಾಡಲ್ಲ ಅಂದಿದ್ರು, ಈಗ ರದ್ದು ಮಾಡಿದ್ಯಾಕೆ? ಕೊಡ್ತೀವಿ ಅಂತಿರೋದ್ಯಾಕೆ? ಇದೇನು ವಾಪಸ್ ಸರ್ಕಾರನಾ? ಅಂತ ಪ್ರಶ್ನೆ ಮಾಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 89 ಕೋಟಿ ರೂ. ಹಗರಣ ಆಗಿರೋದನ್ನ ಸದನದಲ್ಲೇ ಒಪ್ಪಿಕೊಂಡಿದ್ದರು. ಯಾರಾದರೂ ಕಪಾಳಮೋಕ್ಷ ಮಾಡಿ ಹೇಳಿದರೆ ತಪ್ಪು ತಿದ್ದಿಕೊಂಡು ಹೋಗೋದು, ಇಲ್ಲವೇ ತಪ್ಪನ್ನೇ ಮುಂದೂಡಿಸಿಕೊಂಡು ಹೋಗೋದು ಈ ಸರ್ಕಾರದ ವರ್ತನೆ. ವಕ್ಫ್ ಬೋರ್ಡ್‌ನಿಂದ ನೋಟಿಸ್ ಕೊಟ್ರು ಈಗ ವಾಪಸ್ ತಗೋತಿದ್ದಾರೆ. ಇದೊಂದು ಬುದ್ಧಿಗೇಡಿ ಸರ್ಕಾರ…
ಬೆಂಗಳೂರು: ನಿನ್ನೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಶಾಕ್ ಕೊಟ್ಟಿದ್ದರು. ನಾಲ್ವರು ಭ್ರಷ್ಟಾಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ಬೆಳ್ಳಗ್ಗೆ ಏಳು ಗಂಟೆಗಳಿಂದ್ಲೂ ಪರಿಶೀಲನೆ ನಡೆಸಿದ್ದರು. ಬೆಂಗಳೂರು, ಮಂಡ್ಯ, ಚಿಕ್ಕಬಳ್ಳಾಪುರ, ಮಂಗಳೂರಿನ 25ಕಡೆ ದಾಳಿ ನಡೆಸಿರೋ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಭೇಟಿಯಾಡಿದ್ದಾರೆ.. ಇನ್ನು ಯಲಹಂಕದಲ್ಲಿರೋ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆಯಲ್ಲೂ ಕೂಡ ಕ್ಯಾಶ್, ಚಿನ್ನಾಭರಣ, ಆಸ್ತಿ ಪತ್ರಗಳು ಸಿಕ್ಕಿವೆ.. ಹಲವು ಗಂಟೆಗಳ ಕಾಲ ಪರಿಶೀಲನೆ ನಡೆಸಿರೋ ಲೋಕಾಯುಕ್ತ ತಂಡ ಪರಿಶೀಲನೆ ನಡೆಸಿದೆ. https://ainlivenews.com/do-you-know-blood-sugar-will-become-normal-if-you-drink-the-water-soaked-in-this-seed/ ಮಂಗಳೂರಿನ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಅವರ ಬಳಿ 11.93 ಕೋಟಿ ಮೌಲ್ಯದ ಆಸ್ತಿ ಇರುವುದು ಪತ್ತೆಯಾಗಿದೆ. ಅವರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧ ನಡೆಸಲಾಯಿತು. 3 ನಿವೇಶನಗಳು, ಬೆಂಗಳೂರಿನ ಯಲಹಂಕದಲ್ಲಿ 1 ಫ್ಲಾಟ್ಸ್, ನಿರ್ಮಾಣ ಹಂತದಲ್ಲಿರುವ ವಾಣಿಜ್ಯ ಸಂಕೀರ್ಣ, 26 ಎಕರೆ ಕೃಷಿ ಜಮೀನು (ಕಾಫಿ ಪ್ಲಾಂಟೇಷನ್) ಆಸ್ತಿಯನ್ನು ಕೃಷ್ಣವೇಣಿ…
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ಗೆ ದೊಡ್ಡ ಸಂಕಷ್ಟವೇ ಎದುರಾಗಿದೆ. ಮಧ್ಯಂತರ ಜಾಮೀನಲ್ಲಿರುವ ದರ್ಶನ್ ಖಾಯಂ ಬೇಲ್ ನಿರೀಕ್ಷೆಯಲ್ಲಿದ್ದಾರೆ.. ಆದ್ರೆ ಪೊಲೀಸರು ಕೊಲೆ ಕೇಸ್ಗೆ ಸಂಬಂಧಿಸಿದಂತೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲಿಸೋಕ್ಕೆ ರೆಡಿಯಾಗಿದ್ದಾರೆ. ಈ ಚಾರ್ಜ್ಶೀಟ್ನಲ್ಲಿ ಮತ್ತೆರಡು ಫೋಟೋ ಸಾಕ್ಷಿಗಳನ್ನು ಸೇರಿಸಿದಂತೆ ಹಲವು ಪ್ರಮುಖ ಸಾಕ್ಷಿಗಳನ್ನು ಕೋರ್ಟ್ಗೆ ಸಲ್ಲಿಸಲಿದ್ದಾರೆ ಎನ್ನಲಾಗ್ತಿದೆ. ಈ ಕುರಿತ ಡಿಟೇಲ್ ರಿಪೋರ್ಟ್ ಇಲ್ಲಿದೆ ನೋಡಿ . ಈಗಾಗಲೇ ಮಧ್ಯಂತರ ಜಾಮೀನಿನ ಮೇಲೆ ಹೊರಗೆ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿರುವ ನಟ ದರ್ಶನ್ ನ ಅರ್ಧದಷ್ಟು ಜಾಮೀನಿನ ಅವಧಿ ಕೂಡ ಮುಗಿಯುತ್ತಾ ಬಂದಿದೆ. ಈ ಮಧ್ಯೆ ರೆಗ್ಯುಲರ್ ಬೇಲ್ ಗೂ ಕೂಡ ಅರ್ಜಿ ಹಾಕಿಕೊಂಡಿದ್ದಾರೆ. ಆದ್ರೆ ದರ್ಶನ್ ಗೆ ಮತ್ತೊಂದು ಟೆನ್ಷನ್ ಶುರುವಾಗಿದೆ… ಅದಕ್ಕೆ ಕಾರಣ ಪೊಲೀಸರು ಸಾವಿರಕ್ಕೂ ಅಧಿಕ ಪುಟಗಳ ಚಾರ್ಜ್ ಶೀಟ್ ಸಲ್ಲಿಸೋಕೆ ರೆಡಿಯಾಗಿರೋದು… ಹೆಚ್ಚುವರಿ ಚಾರ್ಜ್ ಶೀಟ್ ಅನ್ನು ಪೊಲೀಸರು ನಾಳೆ ನ್ಯಾಯಾಲಯಕ್ಕೆ ಸಲ್ಲಿಕೆ ಸಾಧ್ಯತೆ ಇದೆ. 20ಕ್ಕೂ ಹೆಚ್ಚು ಸಾಕ್ಷಿಗಳು, ಹಲವು ಎಫ್…
ತುಮಕೂರು : ನೂತನವಾಗಿ ಬೆಳಗುಂಬ ಗ್ರಾಮ ಪಂಚಾಯ್ತಿ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಮಂಗಳಮ್ಮ ಚೌಡಪ್ಪ (ಕುಂದೂರು) ರವರು ಸನ್ಮಾನ್ಯ ಜನಪ್ರಿಯ ನಿಕಟಪೂರ್ವ ಶಾಸಕರಾದ ಶ್ರೀ ಡಿ ಸಿ ಗೌರಿಶಂಕರ್ ಅಣ್ಣ ನವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸನ್ಮಾನ್ಯ ಗೌರಿಶಂಕರಣ್ಣನವರು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಮಂಗಳಮ್ಮ ಚೌಡಪ್ಪ ನವರಿಗೆ ಸನ್ಮಾನ ಮಾಡಿ ಸಾರ್ವಜನಿಕರ ಪರವಾಗಿ ಕೆಲಸ ಮಾಡಬೇಕು ಎಂದು ಹಾರೈಸಿದರು ಇದೇ ಸಂದರ್ಭದಲ್ಲಿ ಹಲವಾರು ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರುಗಳು ಭಾಗವಹಿಸಿದ್ದರು.