Author: AIN Admin

ಬೆಳಗ್ಗೆಯ ರುಚಿಯಾದ ತಿಂಡಿ ಇಡೀ ದಿನವನ್ನು ಖುಷಿಯಾಗಿಡುತ್ತದೆ. ಬಿಸಿ ಬಿಸಿಯಾದ ಪೂರಿ ಇದ್ರೆ ಅಂತೂ ಅದರ ರುಚಿಯೇ ಬೇರೆ. ಆದ್ರೆ ಎಷ್ಟೋ ಜನರು ಮಾಡೋ ಪೂರಿ ಮೃದುವಾಗಿರಲ್ಲ. ನಮ್ಮಲ್ಲಿ ಅನೇಕರು ಹೋಟೆಲ್​ಗಳ ರೀತಿಯಲ್ಲಿ ದೊಡ್ಡ ದೊಡ್ಡ ಪೂರಿ ಮಾಡಲು ವಿಫಲರಾಗುತ್ತಾರೆ. ಮನೆಗಳಲ್ಲಿ ಪೂರಿ ಉಬ್ಬಲ್ಲ ಎಂಬ ಮಾತೂ ಸಹ ಕೇಳಿರುತ್ತವೆ. ಇಂದು ನಾವು ರುಚಿಯಾದ ಮಲ್ಲಿಗೆಯಂತೆ ಅರಳುವ ಮತ್ತು ಹತ್ತಿಯಂತೆ ಸಾಫ್ಟ್ ಆಗಿರೋ ಪೂರಿ ಹೇಗೆ ಮಾಡಬೇಕು ಎಂದು ಹೇಳುತ್ತಿದ್ದೇವೆ. ಆದ್ರೆ ಇಲ್ಲೊಂದು ಟ್ವಿಸ್ಟ್‌ ಇದೆ. ಎಣ್ಣೆ ಬಳಸದೆಯೇ ಪೂರಿಗಳನ್ನು ಕರಿಯಬಹುದು ಗೊತ್ತಾ..? ಇಲ್ಲಿದೆ ಮಾಹಿತಿ ಎಣ್ಣೆ ಬಳಸದೆ ಪೂರಿ ಮಾಡುವುದು ಹೇಗೆ: ಪೂರಿಗಳನ್ನು ಎಣ್ಣೆಯಲ್ಲಿ ಮಾತ್ರವಲ್ಲದೆ ಹಬೆಯಲ್ಲೂ ಬೇಯಿಸಿಬಹುದು. ಆದರೆ ಅವು ಗರಿಗರಿಯಾಗುವ ಬದಲು ಮೃದುವಾಗಿ ಇರುತ್ತವೆ. ಹಾಗಂತ ಅದರ ಸ್ವಾದಕ್ಕೆ ಧಕ್ಕೆಯೇನೂ ಬರುವಿದಿಲ್ಲ. ಥೇಟ್​ ಎಣ್ಣೆಯಲ್ಲಿ ಕರಿದ ಪೂರಿಯಂತೆ ಇರುತ್ತದೆ ಅದರ ರುಚಿ. ಇದಕ್ಕಾಗಿ, ಸ್ಟೀಮರ್ ಅನ್ನು ಮುಂಚಿತವಾಗಿ ರೆಡಿ ಮಾಡಿಟ್ಟುಕೊಳ್ಳಿ. ಈಗ ಅದರಲ್ಲಿ ಲಟ್ಟಿಸಿದ ಪೂರಿಯನ್ನು ಇಡಿ.…

Read More

ಬೆಂಗಳೂರು: ಸಿರಿಧಾನ್ಯ ಬೆಳೆಯುವ ಹಾಗೂ ಸಣ್ಣ ಪ್ರಮಾಣದ ಜಮೀನು ಹೊಂದಿರುವ ರೈತರಿಗೆ ಸಿಹಿ ಸುದ್ದಿಯನ್ನು ಸರ್ಕಾರ ನೀಡಿದೆ. ಸಿರಿಧಾನ್ಯ ಬೆಳೆಯನ್ನು ಪ್ರೋತ್ಸಾಹಿಸುವ ಸಲುವಾಗಿ ರೈತ ಸಿರಿ ಯೋಜನೆ ಜಾರಿಗೆ ತಂದಿದ್ದು, ಇದರಡಿಯಲ್ಲಿ ಧಾನ್ಯ ಬೆಳೆಯುವುದಕ್ಕೆ ಬೇಕಾಗಿರುವ ಬೀಜಗಳು ಮತ್ತು ರಸಗೊಬ್ಬರ ಪೂರೈಕೆಗಾಗಿ ಸರ್ಕಾರ 10,000 ರೂ. ನೀಡಲಿದೆ. ಈ ಯೋಜನೆಯಡಿ ಸಿರಿಧಾನ್ಯ ಬೆಳೆಗಳ ವಿಸ್ತೀರ್ಣ ಹೆಚ್ಚಿಸಲು ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಅನುದಾನವನ್ನು ರೈತರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗುತ್ತದೆ. ರೈತ ಸಿರಿ ಯೋಜನೆಯ ಉದ್ದೇಶಗಳು ರಾಜ್ಯದಲ್ಲಿ ಸಿರಿಧಾನ್ಯ ಪ್ರದೇಶ ವಿಸ್ತರಣೆ ಹಾಗೂ ಉತ್ಪಾದನೆ ಹೆಚ್ಚಳ ಸಿರಿಧಾನ್ಯಗಳು ಪೌಷ್ಟಿಕ ಆಹಾರ, ರೈತರ ಭದ್ರತೆ, ಸುಸ್ಥಿರಕೃಷಿ ಮತ್ತು ಪರಿಸರದ ಸಂರಕ್ಷಣೆಗೆ ಪೂರಕವಾಗಿರುವ ಹಿನ್ನೆಲೆಯಲ್ಲಿ ಆಸಿರಿಧಾನ್ಯಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹಿಸುವುದು ಅತಿ ಕಡಿಮೆ ಮಳೆ ಹಾಗೂ ಕಡಿಮೆ ಫಲವತ್ತತೆಯುಳ್ಳ ಜಮೀನಿನ ಸದ್ಬಳಕೆ ಮಾಡುವುದು. ಸಿರಿಧಾನ್ಯಗಳ ಉತ್ಪಾದನೆಗೆ ಪೂರಕವಾದ ಸುಧಾರಿತ ತಾಂತ್ರಿಕತೆಗಳನ್ನು ಸೂಕ್ತ ಸಮಯದಲ್ಲಿ ಅಳವಡಿಸಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಸಿರಿಧಾನ್ಯ ಬೆಳೆಯುವ ರೈತರಿಗೆ…

Read More

ತಾಯಿಯಾಗುವುದು ಮಹಿಳೆಯ ಬಹಳ ದೊಡ್ಡ ಕನಸಾಗಿರುತ್ತದೆ. ಪ್ರತಿಯೊಂದು ಹೆಣ್ಣು ಮಗು ಹುಟ್ಟಿದಾಗಿನಿಂದ ಜೀವನದ ಕ್ಷಣಗಳನ್ನೂ ಕನಸು ಕಾಣುವುದರಲ್ಲಿ ಕಳೆಯುತ್ತಾಳೆ. ಒಂದು ಹೆಣ್ಣು ಮಗುವು ಮದುವೆಯ ಸಮಯಕ್ಕೆ ಬಂದಾಗ ಆಕೆಯ ಮುಂದಿನ ಕನಸು ಮಗುವಿನದ್ದೇ ಆಗಿರುತ್ತದೆ. ಎಲ್ಲಾ ಮಹಿಳೆಯರಿಗೂ ತಾಯಿಯಾಗುವ ಭಾಗ್ಯ ದೊರೆಯುವುದಿಲ್ಲ, ಕೆಲವೊಂದು ಅನಾರೋಗ್ಯ ಸ್ಥಿತಿಗಳಿಂದ, ಕೆಲವೊಂದು ತಪ್ಪುಗಳಿಂದ ಮಹಿಳೆಯು ತಾಯಿಯಾಗುವ ಅವಕಾಶದಿಂದ ವಂಚಿತರಾಗುತ್ತಾರೆ. ಆದರೆ, ಇದೊಂದು ದೊಡ್ಡ ಆಘಾತವೇ ಸರಿ. ಇದರಿಂದ ಮಹಿಳೆಯರು ಹೊರಬರುವುದು ಬಹಳ ಕಷ್ಟಕರವಾದ ವಿಷಯ. ದೇವರ ಅನುಭೂತಿಯಿಂದ ತಾಯಿಯಾಗುವ ಭಾಗ್ಯ ದೊರೆಯುತ್ತದೆ. 21 ರಿಂದ 35 ವರ್ಷ ಸೂಕ್ತ ಗರ್ಭಿಣಿಯಾಗಲು ಸೂಕ್ತವಾದ ವಯಸ್ಸು 21-35 ವರ್ಷ. ದಂಪತಿಗಳು ವಯಸ್ಸಾದಂತೆ, ಗರ್ಭಧಾರಣೆಯೊಂದಿಗೆ ಸಂಬಂಧಿಸಿದ ಒತ್ತಡ ಮತ್ತು ಆತಂಕವು ಹೆಚ್ಚಾಗುತ್ತದೆ. ಒಂದೆರಡು ತಿಂಗಳೊಳಗೆ ಗರ್ಭ ಧರಿಸದೇ ಹೋದ್ರೆ, ದಂಪತಿಗಳು ಬೇಗ ಚಿಂತಿತರಾಗುತ್ತಾರೆ. ಮತ್ತು ಫೋಲಿಕ್ಯುಲರ್ ಪ್ರಚೋದನೆಗಳು, ಗರ್ಭಾಶಯದ ಗರ್ಭಧಾರಣೆ, ಇನ್ ವಿಟ್ರೊ ಫಲೀಕರಣ ಮುಂತಾದ ಚಿಕಿತ್ಸೆಗಳ ಕೃತಕ ವಿಧಾನಗಳನ್ನು ಥಟ್ಟನೆ ಆರಿಸಿಕೊಳ್ಳುತ್ತಾರೆ. 35 ವರ್ಷದ ನಂತರ ಏನ್ ಸಮಸ್ಯೆ?…

Read More

ಬೆಂಗಳೂರು: ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಅಭಿಯಾನ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮವಾಗಿದ್ದು, 300-ಕ್ಕೂ ಹೆಚ್ಚು ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಅದರ ಸಂಯೋಜಿತ ಕಾಲೇಜುಗಳೊಂದಿಗೆ ಕೆಲಸ ಮಾಡುವ ಗುರಿಯನ್ನು ಹೊಂದಿದೆ. 2013 ರಲ್ಲಿ ಪ್ರಾರಂಭವಾದ PM-USHA ಅರ್ಹ ರಾಜ್ಯ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕಾರ್ಯತಂತ್ರದ ಹಣವನ್ನು ಒದಗಿಸುವ ಗುರಿಯನ್ನು ಹೊಂದಿದೆ. 12ನೇ ತರಗತಿ / ದ್ವಿತೀಯ ಪಿಯುಸಿ ಶಿಕ್ಷಣವನ್ನು ಶೇಕಡ.80 ಕ್ಕಿಂತ ಹೆಚ್ಚಿನ ಅಂಕ ಪಡೆದಿರುವ & 3 ವರ್ಷಗಳ ಸ್ನಾತಕ ಪದವಿ ಅಧ್ಯಯನ ಮಾಡಲಿಚ್ಚಿಸುವ ವಿದ್ಯಾರ್ಥಿಗಳಿಗೆ ನೀಡಲಾಗುವ ಪಿಎಂ ಉಷಾ ಸ್ಕಾಲರ್‌ಶಿಪ್‌ ಗೆ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರದ ಉನ್ನತ ಶಿಕ್ಷಣ ಇಲಾಖೆಯು ಈ ಸ್ಕಾಲರ್‌ಶಿಪ್‌ಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಕರೆದಿದೆ. ಸ್ಕಾಲರ್‌ಶಿಪ್‌ ಹೆಸರು ಪಿಎಂ ಉಷಾ ವಿದ್ಯಾರ್ಥಿವೇತನ ವಿದ್ಯಾರ್ಥಿವೇತನ ಸೌಲಭ್ಯ Rs.12000-20000. ವೆಬ್‌ ವಿಳಾಸ www.scholarship.gov.in ಅರ್ಹತೆ ದ್ವಿತೀಯ ಪಿಯುಸಿ ಶಿಕ್ಷಣವನ್ನು ಶೇಕಡ.80 ಕ್ಕಿಂತ ಹೆಚ್ಚಿನ ಅಂಕ ಪಡೆದಿರುವವರು. ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದವರು. ವಿದ್ಯಾರ್ಥಿವೇತನ ನೀಡುವ ಸಂಸ್ಥೆ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ…

Read More

ಸೂರ್ಯೋದಯ: 06:31, ಸೂರ್ಯಾಸ್: 05:35 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಶರದ ಋತು, ಕಾರ್ತಿಕ್ ಮಾಸ, ತಿಥಿ: ದ್ವಾದಶಿ ನಕ್ಷತ್ರ: ಚಿತ್ತ ರಾಹು ಕಾಲ: 12:00 ನಿಂದ 01:30 ತನಕ ಯಮಗಂಡ: 07:30 ನಿಂದ 09:00 ತನಕ ಗುಳಿಕ ಕಾಲ: 10:30 ನಿಂದ 12:00 ತನಕ ಅಮೃತಕಾಲ: ರಾ .12:23 ನಿಂದ ರಾ .2:11 ತನಕ ಅಭಿಜಿತ್ ಮುಹುರ್ತ:ಇಲ್ಲ ಜಾತಕ ಬರೆದು ತಿಳಿಸಲಾಗುವುದು, ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ: ಪ್ರೇಮಿಗಳು ಸ್ಥಿರವಾದ ನಿರ್ಧಾರ ತೆಗೆದುಕೊಂಡಲ್ಲಿ ಸುಖ ಸಂತೋಷ ನಿರೀಕ್ಷಿಸಬಹುದು, ಅವಿವಾಹಿತರಿಗೆ ಸಂಬಂಧದಲ್ಲಿ ವಿವಾ ಕಾರ್ಯ ನೆರವಿರಲಿದೆ,ಕಾಂಟ್ರಾಕ್ಟರ್ ವ್ಯವಹಾರಸ್ತರಿಗೆ ಮತ್ತು ಮಧ್ಯವರ್ತಿಗಳಿಗೆ ಧನ ಆಗಮನ, ನಿಮ್ಮ ಪತ್ನಿಗೆ ಉದ್ಯೋಗ ಭಾಗ್ಯ, ವಿವಾಹ ಆಕಾಂಕ್ಷಿಗಳಿಗೆ ಶುಭ ಸಂದೇಶ, ಹಣಕಾಸು…

Read More

ಬೆಂಗಳೂರು: ಸದಾ ಸಮಾಜಮುಖಿ ಸೇವೆಯಲ್ಲಿ ತೊಡಗಿಕೊಂಡ ಪ್ರತಿಷ್ಠಿತ ಬೆಂಗಳೂರಿನ ರಾಘವಿ ಚಾರಿಟೇಬಲ್‌ ಟ್ರಸ್ಟ್‌ ಮತ್ತು ಸೇವಾ ಫೌಂಡೇಶನ್‌ ನ ಶ್ರೀ ರಾಘವೇಂದ್ರ ಸುಂಟ್ರಹಳ್ಳಿ ಹಾಗೂ ಶ್ರೀ ಲಕ್ಷ್ಮೀ ಗ್ರೂಪ್‌ ಆಫ್  ಆಸ್ಪತ್ರೆಗಳು ಹಾಗೂ ಇನ್ನಿತರ ವೈದ್ಯಕೀಯ ಹಲವು ಸಂಸ್ಥೆಗಳ ಸಹಭಾಗಿತ್ವದಲ್ಲಿ ಆರೋಗ್ಯ ಕ್ಷೇತ್ರಗಳಲ್ಲಿನ ವಿವಿಧ ವಿಭಾಗಗಳ ಸಾಧಕರನ್ನು ಗುರುತಿಸಿ ನ. 24 ರಂದು ನಗರದ ಗಾಂಧಿ ಭವನದಲ್ಲಿ ಬೆಳಗ್ಗೆ10 ಗಂಟೆಗೆ ಆರೋಗ್ಯ ಜ್ಯೋತಿ ಅವಾರ್ಡ್ಸ್‌ ಕರ್ನಾಟಕ -2024 ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. https://youtu.be/wkEbEAqJAwU ಪ್ರಶಸ್ತಿ ಪ್ರಧಾನವೂ ರಾಜ್ಯದಲ್ಲಿರುವ ಆಸ್ಪತ್ರೆಗಳಲ್ಲಿ 30ಕ್ಕೂ ಹೆಚ್ಚು  ವಿಭಾಗದ ಸಿಬ್ಬಂದಿ ವರ್ಗಗಳ ವಿನೂತನ ಕಾರ್ಯಕ್ರಮ ಜರುಗಿದ್ದು, ಇದರಲ್ಲಿ ವಿಶೇಷವಾಗಿ ಆಯಮ್ಮಂದಿರು, ವಾರ್ಡ್‌ ಬಾಯ್‌, ಸೇರಿದಂತೆ  ನರ್ಸಿಂಗ್‌, ಪ್ಯಾರಮೆಡಿಕಲ್‌ ಸಪೋರ್ಟಿಂಗ್‌ ಸ್ಟಾಪ್‌ , ಟೆಕ್ನಿಕಲ್‌ ಸ್ಟಾಫ್ ಹಾಗೂ ವೈದ್ಯರು ಸೇರಿದಂತೆ ಎಲ್ಲಾ ವಿಭಾಗಗಳನ್ನು ಗುರುತಿಸುವ ಬಹುದೊಡ್ಡ ಕಾರ್ಯಕ್ರಮ ನಡೆಸಲಾಯಿತು. https://youtu.be/_XsBUvAR8S0 ರಾಘವೇಂದ್ರ ಸುಂಟ್ರಹಳ್ಳಿ, ಚಂದ್ರಗುತಿ ಹೋಬಳಿ,ಸೊರಬ ತಾಲೂಕು, ಶಿವಮೊಗ್ಗ ಜಿಲ್ಲಾ, ಒಬ್ಬ ಹಳ್ಳಿ ಹುಡುಗ ಬೆಂಗಳೂರು ಆಸ್ಪತ್ರೆಯಲ್ಲಿ…

Read More

ಬೆಂಗಳೂರು: ಯಾವುದೇ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡಿದ್ರೆ ಶಿಸ್ತು ಕ್ರಮ ಎಂದು ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಗವಿಯಪ್ಪ ಹಾಗೆ ಹೇಳಿದ್ದಾರೆ ಅಂತ ನಾನು ಅಂದುಕೊಳ್ಳಲ್ಲ. ನಮ್ಮ ಪಕ್ಷ ಈಗಾಗಲೇ ಬಜೆಟ್ ಘೋಷಣೆ ಮಾಡಿದೆ. ಅದರ ಅಡಿಯಲ್ಲಿ ಅನುದಾನ ಹಂಚಿಕೆ ಆಗುತ್ತದೆ. ಗ್ಯಾರಂಟಿ ನಿಲ್ಲಿಸುವಂತೆ ಹೇಳಿದ್ದಾರೆ ಎಂದು ನಾನು ಒಪ್ಪಲ್ಲ. https://ainlivenews.com/great-good-news-for-farmers-the-government-will-provide-a-subsidy-of-up-to-rs-50-lakh-to-those-who-raise-sheep/ ಎಲ್ಲಾ ಶಾಸಕರಿಗೂ ಅನುದಾನವನ್ನ ನೀಡಿದ್ದೇವೆ. ಗವಿಯಪ್ಪಗೆ ಸರಿಯಾದ ಮಾಹಿತಿ ಇಲ್ಲ ಅನ್ಸುತ್ತೆ. ಅಭಿವೃದ್ಧಿಗೆ ಅನುದಾನ ನೀಡುತ್ತಿದ್ದೇವೆ. ಗವಿಯಪ್ಪ ಜೊತೆಗೆ ನಾನು ಮಾತನ್ನಾಡುತ್ತೇನೆ. ಅವರಿಂದ ಸ್ಪಷ್ಟನೆ ಕೇಳುತ್ತೇನೆ. ಬೇರೆ ಯಾವುದೇ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡಿದ್ರೆ ಶಿಸ್ತು ಕ್ರಮ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.

Read More

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸಮರ ಸಾರಿದ್ದ ಸಾಮಾಜಿಕ ಕಾರ್ಯಕರ್ತ ಹಾಗೂ ದೂರುದಾರ ಸ್ನೇಹಮಯಿ ಕೃಷ್ಣ ಇದೀಗ ರೇಣುಕಾಸ್ವಾಮಿ ಕೇಸ್ ಬಗ್ಗೆ ದೂರು ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಸರಿಯಾದ ತನಿಖೆ ನಡೆಸಿಲ್ಲ ಎಂದು ಆರೋಪ ಮಾಡ್ತಿದ್ದಾರೆ. ಬೆಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ ಸ್ನೇಹಮಯಿ ಕೃಷ್ಣ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸರಿಯಾಗಿ ತನಿಖೆ ನಡೆದಿಲ್ಲ ಎಂದು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೇ ತನಿಖಾಧಿಕಾರಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪೊಲೀಸ್ ಕಮಿಷನರ್​ನನ್ನು ಭೇಟಿ ಮಾಡಿ ಮನವಿ ಮಾಡಿರೋ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಎಸಿಪಿ ಚಂದನ್ ಕುಮಾರ್ ವಿರುದ್ದ ಕಳೆದ ತಿಂಗಳು ದೂರು ಸಹ ನೀಡಿದ್ದರು. https://ainlivenews.com/you-can-get-health-coverage-of-rs-5-lakh-with-just-this-one-card-apply-like-this/ ದೂರಿನಲ್ಲಿ ತನಿಖಾಧಿಕಾರಿಗಳು ಸ್ಪಷ್ಟವಾದ ತನಿಖೆ ನಡೆಸಿಲ್ಲ ಎಂದು ಆರೋಪಿಸಿದ್ದಾರೆ. ಸದ್ಯ ಕಮಿಷನರ್​ಗೆ ಸ್ನೇಹಮಯಿ ಕೃಷ್ಣ ಮೌಖಿಕವಾಗಿ ಮನವಿ ಮಾಡಿದ್ದಾರೆ. ಸಾಮಾಜಿಕ ಕಾರ್ಯಕರ್ತರು ನೀಡಿದ ದೂರಿನ ಕುರಿತು ತನಿಖೆ ನಡೆಸಲು ಕಮಿಷನರ್ ಸೂಚನೆ ನೀಡಿದ್ದಾರೆ.…

Read More

ಬೆಳಗಾವಿ-: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ(ವೀರಭೂಮಿ) ಕಾಮಗಾರಿಗಳು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಕಳೆದ 3-4 ವರ್ಷಗಳಿಂದ ಮ್ಯೂಸಿಯಂ ಕಾಮಗಾರಿ ಚಾಲನೆಯಲಿದ್ದು, ಚಳಿಗಾಲ ಅಧಿವೇಶನ ಪ್ರಾರಂಭಕ್ಕೂ ಮುನ್ನ ಸಂಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮ್ಯೂಸಿಯಂ ಲೋಕಾರ್ಪಣೆಗೆ ಸಿದ್ಧಗೊಳಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ತಿಳಿಸಿದರು. ನಂದಗಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸ್ತು ಸಂಗ್ರಹಾಲಯದಲ್ಲಿ ಮಂಗಳವಾರ (ನ.26) ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ(ವೀರಭೂಮಿ) ಕಾಮಗಾರಿ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಹಾಗೂ ನಂದಗಡ ಮ್ಯೂಸಿಯಂ ಸೇರಿ ಒಟ್ಟು 261 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 59 ಕೋಟಿ ವೆಚ್ಚದಲ್ಲಿ ಒಟ್ಟು 13 ಎಕರೆ ಜಾಗೆಯಲ್ಲಿ ನಂದಗಡ ಮ್ಯೂಸಿಯಂ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು. ನಂದಗಡ ಮ್ಯೂಸಿಯಂ ವಿವಿಧ ಕಾಮಗಾರಿಗಳ ಪ್ರಗತಿಯಲ್ಲಿದ್ದು, ಯಾವುದೇ ರೀತಿಯ ಕಾಮಗಾರಿಗಳು ಬಾಕಿ ಉಳಿಯಬಾರದು. ಮುಂದಿನ ಒಂದು ವಾರದೊಳಗೆ…

Read More

ಗದಗ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರೋ ಗದಗ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ರಾಷ್ಟ್ರಗೀತೆ ಹಾಡಿ ಸಂವಿಧಾನ ಪೀಠಿಕೆ ಓದುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಖನಿಜ ಅಭಿವೃಧ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜಿ ಎಸ್ ಪಾಟೀಲ್ ವಹಿಸಿಕೊಂಡಿದ್ರು. ಕಾರ್ಯಕ್ರಮ ಉದ್ದೇಶಿಸಿ ಮಾಜಿ ಶಾಸಕರಾದ ಡಿ ಆರ್ ಪಾಟೀಲ್ ಮಾತನಾಡಿದ್ರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಜಿ. ಪಂ. ಮಾಜಿ ಅಧ್ಯಕ್ಷರಾದ ವಾಸಪ್ಪ ಕುರಡಗಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ‌ ಉಮರ್ ಫಾರೂಖ ಹುಬ್ಬಳ್ಳಿ ಮುಖಂಡರಾದ ಸುಜಾತಾ ದೊಡ್ಡಮನಿ, ಗುರಣ್ಣ ಬಳಗಾನೂರ, ಬಿ ಬಿ ಅಸೂಟಿ, ಎಸ್ ಎನ್ ಬಳ್ಳಾರಿ ಸೇರಿದಂತೆ ಅನೇಕರು ಇದ್ದರು.

Read More