Author: AIN Admin

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ 56,000 ಕೋಟಿ ರೂ. ಹೆಚ್ಚುವರಿ ಖರ್ಚಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಿಂತಿಲ್ಲ. ಹಿಂದಿನ ಸರ್ಕಾರ ಲಕ್ಷಾಂತರ ಕೋಟಿ ರೂ. ಬಿಲ್ ಬಾಕಿ ಉಳಿಸಿ ಹೋಗಿತ್ತು. ಅದನ್ನೆಲ್ಲ ನಾವು ಭರಿಸಿದ್ದೇವೆ. ಗ್ಯಾರಂಟಿ ಯೋಜನೆಗಳಿಗೆ 56,000 ಕೋಟಿ ರೂ. ಹೆಚ್ಚುವರಿ ಖರ್ಚಾಗಿದೆ. ಬಜೆಟ್ ಅಮೌಂಟ್ 3.27 ಲಕ್ಷ ಕೋಟಿಯಿಂದ, 3.75 ಲಕ್ಷ ಕೋಟಿಗೆ ಹೆಚ್ಚಾಗಿದೆ. ಮುಂದಿನ ವರ್ಷಕ್ಕೆ ಗ್ಯಾರಂಟಿ ಯೋಜನೆಗಳಿಗೆ ಕೊಟ್ಟರು, ಹೆಚ್ಚಿನ ಹಣ ದೊರಕುತ್ತದೆ ಎಂದರು. https://ainlivenews.com/government-provides-financial-assistance-of-%e2%82%b920000-to-puc-passed-students-apply-today/ ಅದಾನಿ ವಿಷಯ ರಾಷ್ಟ್ರೀಯ ವಿಚಾರಕ್ಕೆ ಸಂಬಂಧಿಸಿದ್ದು. ಅಮೆರಿಕನ್ ಎಸ್ಟಬ್ಲಿಷ್‌ಮೆಂಟ್ಸ್ ಯಾವ ರೀತಿ ಅವರ ಕಂಪನಿ ನಡೆದುಕೊಳ್ಳುತ್ತಿದೆ ಎಂಬುದನ್ನು ತೋರಿಸಿದೆ. ಈ ಬಗ್ಗೆ ಅದಾನಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಒತ್ತಾಯ ಮಾಡುವುದರಲ್ಲಿ ತಪ್ಪೇನಿದೆ? ರಾಹುಲ್ ಗಾಂಧಿಯವರು ಪ್ರತಿಯೊಂದು ಭಾಷಣದಲ್ಲಿ ಹೇಳಿಕೊಂಡು ಬಂದಿದ್ದಾರೆ. ಅದಾನಿ ಅವರು ಅನೇಕ ಅವ್ಯವಹಾರಗಳನ್ನು ಮಾಡುತ್ತಿದ್ದಾರೆ. ಅವರಿಗೆ ಬೆಂಬಲಿಸುತ್ತಿದ್ದೀರಿ ಎಂದು ಪ್ರಧಾನಿಯವರಿಗೆ ನೇರವಾಗಿ…

Read More

ಬೆಳಗಾವಿ: ಸಿದ್ದರಾಮಯ್ಯ ಹೊಡೆತಕ್ಕೆ ಇವರು ಶೇಕ್ ಶೇಕ್ ಆಗುತ್ತಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮುಡಾ ಕೇಸ್ ಸಿಬಿಐಗೆ ನೀಡಿದರೂ ಕಷ್ಟ ಆಗಲ್ಲ, ಜಾರಿ ನಿರ್ದೇಶನಾಲಯಕ್ಕೆ ನೀಡಿದರೂ ಕಷ್ಟ ಆಗಲ್ಲ‌.ಇದೆಲ್ಲ ರಾಜಕೀಯ ಪ್ರೇರಿತವಾಗಿದೆ.ಸಿದ್ದರಾಮಯ್ಯ ಹೊಡೆತಕ್ಕೆ ಇವರು ಶೇಕ್ ಶೇಕ್ ಆಗುತ್ತಿದ್ದಾರೆ. ಸಿದ್ದರಾಮಯ್ಯರನ್ನ ಕುಗ್ಗಿಸಲು ಕೇಸ್ ಹಾಕುತ್ತಿದ್ದಾರೆ. ಈ ಕೇಸ್‌ಗಳಿಗೆ ನಾವು ಹೆದರಲ್ಲ ಎಂದರು. https://ainlivenews.com/government-provides-financial-assistance-of-%e2%82%b920000-to-puc-passed-students-apply-today/ ವಕ್ಫ್ ಬಗ್ಗೆ ಮಾತನಾಡುವ ಇವರು 2019-20ನೇ ಸಾಲಿನಲ್ಲಿ ಇವರು ಎಷ್ಟು ಜನರಿಗೆ ನೋಟಿಸ್ ನೀಡಿದ್ದಾರೆ ನನ್ನ ಹತ್ತಿರ ದಾಖಲೆ ಇದೆ. ವಕ್ಫ್ ನೋಟಿಸ್ ಕೊಟ್ಟಿದ್ದು ಯಾರು? ರೈತರ ಒಕ್ಕಲೆಬ್ಬಿಸಿದ್ಯಾರು? ಬಿಜೆಪಿಯವರೇಈಗ ರೈತರ ವಿಚಾರದಲ್ಲಿ ಕೇಸರಿ ಟವಲ್ ಹಾಕಿ ಊರುರು ಅಡ್ಡಾಡಿದ್ರೆ ಜನಕ್ಕೆ ಗೊತ್ತಾಗಲ್ವಾ?ಇವರದ್ದು ನಾಟಕ ಕಂಪನಿ ಎಂದು ವಾಗ್ದಾಳಿ ನಡೆಸಿದರು.

Read More

ಬೆಂಗಳೂರು: ಇತ್ತೀಚೆಗೆ ಶಾಲಾ-ಕಾಲೇಜು, ಹೋಟೆಲ್​, ಏರ್​ಪೋರ್ಟ್​​ಗಳಿಗೆ ಬಾಂಬ್ ಬೆದರಿಕೆ ಕರೆಗಳು ಹೆಚ್ಚಾಗುತ್ತಿದೆ. ಇನ್ನು ಇತ್ತೀಚೆಗಷ್ಟೇ ಬೆಂಗಳೂರಿನ ಜನಪ್ರಿಯ ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿತ್ತು. ಇದೀಗ ಮತ್ತೊಮ್ಮೆ ಬೆಂಗಳೂರಿನಲ್ಲಿ ಬಾಂಬ್‌ ಬೆದರಿಕೆಯ ನಡುಕ ಉಂಟಾಗಿದೆ. ಬೆಂಗಳೂರಿನ ಚ್​ಎಸ್​ಬಿಸಿ ಬ್ಯಾಂಕ್​ನ ಎಂಜಿ ರಸ್ತೆ ಶಾಖೆಯಲ್ಲಿ ಬಾಂಬ್ ಬೆದರಿಕೆ ಬಂದಿದೆ.  ಬ್ಯಾಂಕ್​ನಲ್ಲಿ ಬಾಂಬ್ ಇಡಲಾಗಿದೆ ಎಂದು ಬದರಿಸುವ ಇಮೇಲ್​ವೊಂದನ್ನು ಬ್ಯಾಂಕ್​ಗೆ ಕಳುಹಿಸಲಾಗಿದೆ. ಇದರ ಬೆನ್ನಲ್ಲೇ ಕಚೇರಿಯ ಎಲ್ಲಾ ಸಿಬ್ಬಂದಿ ಹಾಗು ಗ್ರಾಹಕರನ್ನು ಹೊರ ಕಳುಹಿಸಲಾಯಿತು. ಹಲಸೂರು ಠಾಣೆಯ ಪೊಲೀಸರು ಶೀಘ್ರದಲ್ಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. https://ainlivenews.com/government-provides-financial-assistance-of-%e2%82%b920000-to-puc-passed-students-apply-today/ ಇತ್ತೀಚೆಗೆ ಬೆಂಗಳೂರಿನ ಅಶೋಕ್ ನಗರದಲ್ಲಿರುವ ಸೈನಿಕ ಶಾಲೆಗೂ ಇಂತಹುದೇ ಹುಸಿ ಬಾಂಬ್ ಬೆದರಿಕೆ ಕರೆ ಬಂದಿತ್ತು. ಶಾಲೆಗೆ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಇ-ಮೇಲ್ ಮೂಲಕ ಸಂದೇಶ ರವಾನಿಸಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವುದೇ ಬಾಂಬ್ ಪತ್ತೆಯಾಗಿರಲಿಲ್ಲ. ಇಂತಹ ಘಟನೆಗಳು ಇದೇ ಮೊದಲಲ್ಲ, ಹಲವಾರು ಬಾರಿ ನಡೆದಿವೆ.…

Read More

ಕಲಬುರಗಿ: ನನ್ನ ವಿರುದ್ಧ ಹೈಕಮಾಂಡ್‌ʼಗೆ ಪತ್ರ ಬರೆಯುತ್ತಿರುವುದು ಹೊಸದೇನಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಕಲಬುರಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಹೈಕಮಾಂಡ್‌ಗೆ ಪತ್ರ ಬರೆಯುತ್ತಿರುವುದು ಹೊಸದೇನಲ್ಲ. ಬಹಳ ಸಲ ಬರೆಯಲಾಗಿದೆ. ನನ್ನ ವಿರುದ್ಧ ನೀಡಿರುವ ದೂರುಗಳು ಒಂದು ರೂಂ ತುಂಬಿ ಹೋಗಿವೆ. ಆದರೆ ಏನೂ ಮಾಡಲು ಆಗಲ್ಲ. ಮುಂದೊಂದು ದಿನ ಟಿಕೆಟ್ ಕೊಡುವ ಅಧಿಕಾರ ನಮಗೆ ಬರುತ್ತದೆ ಎಂದು ಹೇಳಿದರು. ನಾವು ಯಾರೂ ಪಕ್ಷ ಬಿಟ್ಟು ಹೋಗಿಲ್ಲ. ನಾವು ಪಕ್ಷದಲ್ಲೇ ಇದ್ದೇವೆ. ಭಾರತ ಮಾತಾ ಕೀ ಜೈ, ಅಟಲ್ ಬಿಹಾರಿ ವಾಜಪೇಯಿ ಕೀ ಜೈ, ಪ್ರಧಾನಿ ನರೇಂದ್ರ ಮೋದಿ ಕೀ ಜೈ ಅಂತಾನೇ ಹೇಳುತ್ತಿದ್ದೇವೆ. https://ainlivenews.com/government-provides-financial-assistance-of-%e2%82%b920000-to-puc-passed-students-apply-today/ ನಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಶ್ನಿಸಿದರು. ಉಪಚುನಾವಣೆಯಲ್ಲಿ ಆಗಿರುವ ಸೋಲಿನ ಹೊಣೆಯನ್ನು ಎಲ್ಲಾ ನಾಯಕರು ಹೊರಬೇಕು ಎಂಬ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಗೆದ್ದರೆ ಅವರು ಹೊರಬೇಕು. ಸೋತರೆ ನಾವು…

Read More

ತುಮಕೂರು: ತುಮಕೂರು ಜಿಲ್ಲೆಯ ಆರ್ ಟಿ ಓ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸುತ್ತಿದ್ದಾರೆ. ಮಧುಗಿರಿ,ತುಮಕೂರು ಹಾಗೂ ತಿಪಟೂರು ತಾಲೂಕು ಕೇಂದ್ರಗಳಲ್ಲಿ ಹತ್ತಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ಮಾಡಲಾಗಿದ್ದು, https://ainlivenews.com/government-provides-financial-assistance-of-%e2%82%b920000-to-puc-passed-students-apply-today/ ಲೋಕಾಯುಕ್ತ ಅಧಿಕಾರಿಗಳು ಕಚೇರಿಗೆ ಬೀಗ ಹಾಕಿ ಕಡತಗಳು,ಆರ್ಟಿಓ ಅಧಿಕಾರಿಗಳ ವಿಚಾರಣೆ ನಡೆಸುತ್ತಿದ್ದಾರೆ. ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ದಾಳಿ ಎನ್ನಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

Read More

ವಿಜಯಪುರ: ಸ್ವಾಮೀಜಿಗಳು ಸರ್ಕಾರಕ್ಕೆ ಮುಜುಗರವಾಗುವಂತೆ ಹೋರಾಟ ಮಾಡಬಾರದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಚಿವೆಯಾಗಿ ಸಮಾಜದ ಋಣ ತೀರಿಸದಿದ್ದರೆ ಮನುಷ್ಯತ್ವ ಅಲ್ಲ. ನಾನು ನಿರಂತರವಾಗಿ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ಕೆಲ ಹೋರಾಟಗಳ ದಿನಾಂಕ ಹೊಂದಾಣಿಕೆಯಾಗದ ಕಾರಣ ಹೋಗಿಲ್ಲ. ಸಮಾಜ ಬಿಟ್ಟು ನಾನಿಲ್ಲ. ನನ್ನ ಬಿಟ್ಟು ಸಮಾಜವಿಲ್ಲ ಎಂದರು. ಪಂಚಮಸಾಲಿ ಹೋರಾಟ ಪಕ್ಷತೀತವಾದ ಹೋರಾಟ. ಇದರಲ್ಲಿ ರಾಜಕಾರಣ ಇಲ್ಲ. ನಾನೂ ಹೋರಾಟದ ಮುಂಚೂಣಿಯಲ್ಲಿದ್ದು ಹೋರಾಟ ಮಾಡಿದ್ದೆ. ಈಗಲೂ ಹೋರಾಟ ಮಾಡುತ್ತಿದ್ದೇನೆ. ಪಕ್ಷಾತೀತವಾಗಿ ಯಾವುದೇ ಸರ್ಕಾರದ ವಿರುದ್ದ ಅಲ್ಲ. ಸಮಾಜಕ್ಕೆ ನ್ಯಾಯ ಕೊಡಬೇಕೇಂದು ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ‌ ಒಡಕು ಇಲ್ಲ ಎಂದು ಹೇಳಿದರು. https://ainlivenews.com/government-provides-financial-assistance-of-%e2%82%b920000-to-puc-passed-students-apply-today/ ಬಿಜೆಪಿ ಸರಕಾರದ ಅವಧಿಯಲ್ಲಿ‌ ಉಗ್ರ ಹೋರಾಟ ಮಾಡಿ ಈಗ ಹೋರಾಟ ಮಾಡುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮೊದಲಿನಂತೆ ಹೋರಾಟವಿದೆ. ಸಚಿವೆಯಾದ ಕಾರಣ ಕೆಲಸಗಳ ಒತ್ತಡವಿರುವುದರಿಂದ ಕೆಲ ಹೋರಾಟದಲ್ಲಿ ಭಾಗಿಯಾಗಿಲ್ಲ. ಕೆಲ ಹೋರಾಟಗಳಿಗೆ ನನ್ನ ಸಹೋದರ ಹಾಗೂ ಪುತ್ರನನ್ನು ಕಳುಹಿಸಿದ್ದೇನೆ ಎಂದರು.

Read More

ಬೆಳಗಾವಿ: ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆ ಮಾಡಬೇಕಿರುವುದು ಸರ್ಕಾರದ ಜವಾಬ್ದಾರಿ‌ ಎಂದು ಶ್ರೀ ರಾಮಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ ಹೇಳಿದ್ದಾರೆ. ಹುಕ್ಕೇರಿ ಪಟ್ಟಣದಲ್ಲಿ ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ ಅವರ ಬಂಧನ ಖಂಡಿಸಿ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾದ ದೌರ್ಜನ್ಯ, ಅತ್ಯಾಚಾರದ ವಿರುದ್ಧ ಸ್ವಾಮೀಜಿ ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ. https://ainlivenews.com/farmers-take-note-this-scheme-will-provide-rs-10000-per-hectare-apply-today/ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸುವುದರಲ್ಲಿ ತಪ್ಪೇನಿದೆ? ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆ ಮಾಡಬೇಕಿರುವುದು ಸರ್ಕಾರದ ಜವಾಬ್ದಾರಿ‌ ಎಂದು ಕಿಡಿಕಾರಿದರು. ಹಿಂದೂ ಸಮಾಜದ ಮೇಲಿನ‌ ಆಕ್ರಮಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಬಾಯಿಬಿಡಬೇಕು. ಖಂಡನೆ, ಮಂಡನೆ, ಎಚ್ಚರಿಕೆ ಸಾಕು ಮುಂದೆ ಕ್ರಮ ಕೈಗೊಳ್ಳಬೇಕು. ಹುಟ್ಟಿಸಿದಂತೆ ಬಾಂಗ್ಲಾದೇಶಕ್ಕೆ ಸರಿಯಾದ ಬುದ್ದಿ ಕಲಿಸುವ ಪ್ರಕ್ರಿಯೆ ಆಗಬೇಕು‌ ಎಂದು ಆಗ್ರಹಿಸಿದರು.

Read More

ನವದೆಹಲಿ: ಕೇಂದ್ರ ಸರ್ಕಾರವೇ ಉದ್ಯಮಿ ಗೌತಮ್‌ ಅದಾನಿ ಅವರನ್ನು ರಕ್ಷಿಸುತ್ತಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ‌ಗಾಂಧಿ ಆರೋಪ ಮಾಡಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಅದಾನಿ ಆರೋಪಗಳನ್ನು ಒಪ್ಪಿ ಕೊಳ್ಳುತ್ತಾರೆ ಎಂದು ನೀವು ಭಾವಿಸುತ್ತೀರಾ? ನಿಸ್ಸಂಶಯವಾಗಿ ಅವರು ಆರೋಪಗಳನ್ನು ನಿರಾಕರಿಸುತ್ತಾರೆ. https://ainlivenews.com/farmers-take-note-this-scheme-will-provide-rs-10000-per-hectare-apply-today/ ಹಾಗಾಗಿ ನಾವು ಹೇಳಿದಂತೆ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಸಣ್ಣ ಸಣ್ಣ ಆರೋಪದಲ್ಲಿ ನೂರಾರು ಜನರನ್ನು ಬಂಧಿಸಲಾಗುತ್ತಿದೆ. ಆದ್ರೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಾವಿರಾರು ಕೋಟಿ ರೂ.ಗಳ ಆರೋಪ ಹೊರಿಸಲ್ಪಟ್ಟಿದೆ. ನ್ಯಾಯಯುತವಾಗಿ ಅವರು ಜೈಲಿನಲ್ಲಿರಬೇಕು, ಆದ್ರೆ ಕೇಂದ್ರ ಸರ್ಕಾರವೇ ಅವರನ್ನು ರಕ್ಷಿಸುತ್ತಿದೆ ಎಂದು ದೂರಿದ್ದಾರೆ.

Read More

ಬೆಂಗಳೂರು: ಮುಡಾ ಹಗರಣ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಮಹಾಯುದ್ಧಕ್ಕೆ ಸಾಕ್ಷಿಯಾಗುವಂತಿದೆ. ಇದೀಗ ಮುಡಾ ಸೈಟ್ ಹಂಚಿಕೆ ಹಗರಣ ಸಿಎಂ ಸಿದ್ದರಾಮಯ್ಯಗೆ ಮತ್ತಷ್ಟು ಆತಂಕ ತಂದೊಡ್ಡಿದೆ. ಹೌದು ಮುಡಾ ಹಗರಣ ಪ್ರಕರಣಕ್ಕೆ ದೇವರಾಜು ಅಣ್ಣನ ಮಗಳು ಜಮುನಾ ಅವರು ಕಾಣೂ ಹೋರಾಟಕ್ಕೆ ಮೂಮದಾಗಿದ್ದಾರೆ. ಮುಡಾ ಪ್ರಕರಣದ ನಾಲ್ಕನೇ ಆರೋಪಿ ದೇವರಾಜು ಅವರ ಅಣ್ಣನ ಮಗಳು ಜಮುನಾ ಅವರು ಈ ಸಂಬಂಧ ಕೋರ್ಟ್​ನಲ್ಲಿ ದಾವೆ ಹೂಡಿದ್ದಾರೆ. ಕೆಸರೆ ಗ್ರಾಮದ ಸರ್ವೆ ನಂ.464ರ 3.16 ಎಕರೆ ಜಾಗ ಸಂಬಂಧ ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಮುನಾ ಅವರು, ತನಗೆ ಪಾಲು ಬರಬೇಕೆಂದು ಸಿಎಂ ಸಿದ್ದರಾಮಯ್ಯ ಪತ್ನಿ ಸೇರಿ 12 ಜನರ ವಿರುದ್ಧ ಕೇಸ್​ ದಾಖಲಿಸಿದ್ದಾರೆ. ಸಿಎಂ ಕುಟುಂಬಕ್ಕೆ ಮಾರಾಟವಾಗಿರುವ ಜಮೀನು ಸಂಬಂಧ ದಾಖಲಾದ ಕೇಸ್ ಇದಾಗಿದ್ದು, ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ವಿರುದ್ಧವೂ ಪ್ರಕರಣ ದಾಖಲಾಗಿದೆ. ಜೊತೆಗೆ ಸ್ವಂತ ದೊಡ್ಡಪ್ಪ ದೇವರಾಜು ಮತ್ತು ಕುಟುಂಬದವರ ಮೇಲೂ ದಾವೆ ಹೂಡಿದ್ದು, https://ainlivenews.com/farmers-take-note-this-scheme-will-provide-rs-10000-per-hectare-apply-today/ ಸಿ.ಎನ್.ಆರ್.…

Read More

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ಮನೆ ಎದುರು ತಿರುಗಾಡುತ್ತಿರುವಾಗ ಚಿನ್ನದ ಸರ ಕಿತ್ತುಕೊಂಡು ಹೋಗುವುದು, ಅವರ ಮೇಲೆ ಹಲ್ಲೆ ನಡೆಸುವುದು, ಮೊಬೈಲ್‌, ಪರ್ಸ್‌ ಎಗರಿಸುವುದು ಸೇರಿ ಹಲವು ರೀತಿಯ ಪ್ರಕರಣಗಳು ಸುದ್ದಿಯಾಗುತ್ತಲೇ ಇರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ,  ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಕತ್ತಲಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬೈಕ್​ನಲ್ಲಿ ಬಂದ ಕಾಮುಕನೊಬ್ಬ ಬ್ಯಾಡ್ ಟಚ್ ಮಾಡಿದ ಘಟನೆ ನಡೆದಿದ್ದು, ಕೃತ್ಯದ ಸಿಸಿಟಿವಿ ವಿಡಿಯೋ ಈಗ ವೈರಲ್ ಆಗುತ್ತಿದೆ. ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನವೆಂಬರ್ 11 ರ ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. https://ainlivenews.com/farmers-take-note-this-scheme-will-provide-rs-10000-per-hectare-apply-today/ ಬೈಕ್ ಸವಾರ ಅರುಣ್ ಎಂಬಾತ ಅಸಭ್ಯ ವರ್ತನೆ ತೋರಿದ್ದು, ಈ ಬಗ್ಗೆ ರಾಮಮೂರ್ತಿ ನಗರ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಆರೋಪಿ ಅರುಣ್​ನನ್ನು ಪೊಲೀಸರು ಬಂಧಿಸಿದ್ದಾರೆ. ದೂರು ನೀಡಿದ ಎರಡೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More