ರಕ್ತದಲ್ಲಿ ಅಧಿಕ ಸಕ್ಕರೆ ಇರುವುದು ಅಥವಾ ಮಧುಮೇಹವು ಗಂಭೀರವಾದ ಆರೋಗ್ಯದ ಕಾಯಿಲೆಯಾಗಿ ಪರಿಣಮಿಸಿದೆ. ಹಲವಾರು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದ್ರೆ ಇತ್ತೀಚೆಗೆ ಸಣ್ಣ ಮಕ್ಕಳಲ್ಲಿ ಕೂಡ ಮಧುಮೇಹ, ಅಧಿಕ ರಕ್ತದೊತ್ತಡದ ಸಮಸ್ಯೆಗಳು ಉಂಟಾಗುತ್ತಿರುವುದು ಕಳವಳ ಮೂಡಿಸಿದೆ. https://ainlivenews.com/do-you-know-how-many-health-benefits-there-are-from-drinking-bitter-gourd-juice/ ಟೈಪ್ 1 ಮಧುಮೇಹವು ಮಕ್ಕಳು ಮತ್ತು ಯುವ ವಯಸ್ಕರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇದು ದೇಹವು ಇನ್ಸುಲಿನ್ ಅನ್ನು ಉತ್ಪಾದಿಸದ ಸ್ಥಿತಿಯಾಗಿದೆ. ಇನ್ಸುಲಿನ್ ಎಂಬುದು ನಮ್ಮ ದೇಹದ ಪ್ರಮುಖ ಹಾರ್ಮೋನ್ ಆಗಿದೆ. ನಿಮ್ಮ ಮಗುವನ್ನು ಮಧುಮೇಹದಿಂದ ರಕ್ಷಿಸುವಲ್ಲಿ ಕುಟುಂಬದ ರಕ್ತ ಸರಪಳಿಯು ಜಾಗರೂಕರಾಗಿರಲು ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳಲ್ಲಿ ಮಧುಮೇಹದ ಲಕ್ಷಣವೇನು? ನಗರ ಪ್ರದೇಶದ ಮಕ್ಕಳ ಹೊಟ್ಟೆ ಹಾಗೂ ಸೊಂಟದ ಭಾಗ ದಪ್ಪಗಾಗುತ್ತಿದೆ. ಇದರಿಂದಾಗಿ ಇನ್ಸುಲಿನ್ ಪ್ರತಿರೋಧಕ ಹೆಚ್ಚಿ, ಟೈಪ್ 2 ಮಧುಮೇಹದ ಆತಂಕವೂ ಹೆಚ್ಚಿದೆ. ಗ್ರಾಮೀಣ ಭಾಗದಲ್ಲೂ ಈ ಸಮಸ್ಯೆ ಇದ್ದರೂ ಕಡಿಮೆ. ಮಕ್ಕಳಲ್ಲಿ ಮಧುಮೇಹ ಆರಂಭವಾಗಿದೆ ಎನ್ನುವುದನ್ನು ಕೆಲವು ಲಕ್ಷಣಗಳ ಮೂಲಕ ಅರಿಯಬಹುದು. ಅವರಿಗೆ ಬಾಯಾರಿಕೆ ಹೆಚ್ಚು.…
Author: AIN Admin
ಬೆಂಗಳೂರು: ಚಿತ್ರದುರ್ಗದ ವ್ಯಕ್ತಿ ರೇಣುಕಾಸ್ವಾಮಿ ಕೇಸ್ಗೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಸದ್ಯ ಇದೇ ಕೇಸ್ನಲ್ಲಿ ಜಾಮೀನು ಪಡೆದು ಆಚೆ ಬಂದಿರುವ ನಟ ದರ್ಶನ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿದ್ದ ದಿನ ಆರೋಪಿಗಳು ನಟ ದರ್ಶನ್ ಜೊತೆಗೆ ಕ್ಲಿಕ್ಕಿಸಿಕೊಂಡಿರೋ ಫೋಟೋಗಳನ್ನು ಪೊಲೀಸ್ ಅಧಿಕಾರಿಗಳು ರಿಟ್ರೀವ್ ಮಾಡಿದ್ದಾರೆ. ಅಂದು ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳದಲ್ಲಿ ಆರೋಪಿಗಳ ಜೊತೆ ದರ್ಶನ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಪೊಲೀಸರು ಹೆಚ್ಚಿನ ತನಿಖೆಯಲ್ಲಿ ಸಾಕ್ಷಿದಾರನ ಮೊಬೈಲ್ನಿಂದ ಫೋಟೋಗಳನ್ನು ರಿಟ್ರೀವ್ ಮಾಡಿದ್ದಾರೆ. ಇನ್ನೂ ಕೊಲೆ ನಡೆದ ಸ್ಥಳದಲ್ಲಿ ದರ್ಶನ್ ಹಾಗೂ ಆರೋಪಿಗಳು ಪೋಸ್ ನೀಡಿದ ಪೋಟೋಗಳು ವೈರಲ್ ಆಗಿವೆ. https://ainlivenews.com/do-you-know-how-many-health-benefits-there-are-from-drinking-bitter-gourd-juice/ ರಿಲೀಸ್ ಆದ ಫೋಟೋದಲ್ಲಿ ದರ್ಶನ್ ರೇಣುಕಾಸ್ವಾಮಿ ಕೇಸ್ನಲ್ಲಿ A6 ಆರೋಪಿಯಾಗಿ ಕಿಡ್ನಾಪರ್ ಜಗದೀಶ್, A7 ಅನುಕುಮಾರ್ ಹಾಗೂ A8- ಕಾರು ಚಾಲಕ ರವಿ ಇದ್ದಾರೆ. ಈ ಮೂಲಕ ಮಧ್ಯಂತರ ಜಾಮೀನಿಗೂ ಕಂಟಕ ತರೋ ಸಾಧ್ಯತೆಯಿದೆ.ಆಸ್ಪತ್ರೆಯಲ್ಲಿರೋ ಆರೋಪಿ ದರ್ಶನ್ ಮತ್ತೆ ಢವ ಢವ ಶುರುವಾಗಿದೆ..
ಬೆಂಗಳೂರು: ಎಲ್ಲಿಯವರೆಗೆ EVM ಇರುತ್ತೆ ಅಲ್ಲಿಯವರೆಗೆ ಕಾಂಗ್ರೆಸ್ ಬರೋದು ಕಷ್ಟ ಆಗುತ್ತೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಹಳಷ್ಟು ಕಡೆ ಇವಿಎಂ ಮ್ಯಾನಿಪ್ಯುಲೆಟ್ ಮಾಡಿದ್ರು ಅಂತ ಚರ್ಚೆ ಅಯ್ತು, ಜಾರ್ಖಂಡ್‌ನಲ್ಲಿ ಯಾಕೆ ಮಾಡಿಲ್ಲ ಅಂದ್ರೆ ಕೆಲವು ಕಡೆ ಬಿಟ್ಟು ಬಿಡ್ತಾರೆ. ರಾಜ್ಯದಲ್ಲಿ ಕೆಲವು ಗೆದ್ದೆ ಗೆಲ್ತಿವಿ ಅನ್ನೋ ಕಡೆ ಬಿಡ್ತಾರೆ. ಇದರೊಂದಿಗೆ ಲಾಡ್ಲಿ ಬೆಹಿನ್ ಯೋಜನೆ ಸಾಕಷ್ಟು ಇಂಪ್ಯಾಕ್ಟ್ ಅಗಿದೆ. ಅವರು 6 ತಿಂಗಳು ಮೊದಲು ಕೊಟ್ಟರು, ಇದೆಲ್ಲವೂ ಅವರ ಕೈ ಹಿಡಿದಿದೆ. ನಾವು ಕೊನೆಗೆ ಟಿಕೆಟ್ ಘೋಷಣೆ ಮಾಡಿದ್ವು, ಪಕ್ಷದಲ್ಲೂ ಗೊಂದಲ ಆಯ್ತು. ಶರದ್ ಪವಾರ್ ಗುಂಪು, ಉದ್ದವ್ ಠಾಕ್ರೆ ಗುಂಪಿನ ನಡುವೆ ಸರಿಯಾಗಿ ಹೊಂದಾಣಿಕೆ ಆಗಿಲ್ಲ. ವಿದರ್ಭದಲ್ಲಿ ಹೆಚ್ಚು ಸೀಟ್ ಬರಲಿಲ್ಲ. ಎಲ್ಲಿಯವರೆಗೆ ಇವಿಎಂ ಇರುತ್ತೆ ಅಲ್ಲಿಯವರೆಗೆ ಕಾಂಗ್ರೆಸ್ ಬರೋದು ಕಷ್ಟ ಆಗುತ್ತೆ ಎಂದರು. https://ainlivenews.com/do-you-know-how-many-health-benefits-there-are-from-drinking-bitter-gourd-juice/ ಇವಿಎಂ ಇರೋವರೆಗೆ ಬಿಜೆಪಿನೇ ಗೆಲ್ಲುತ್ತಿರುತ್ತೆ. ಒಂದೊಂದು ರಾಜ್ಯ ಬಿಟ್ಟು ಬಿಡ್ತಾರೆ. ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ…
ಕಲಘಟಗಿ: ಉಪಚುನಾವಣೆಯಲ್ಲಿ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಮೂರು ಕ್ಷೇತ್ರಗಳಲ್ಲೂ ಜನರು ‘ಕೈ’ ಹಿಡಿದಿದ್ದಾರೆ. ಪಟ್ಟಣದ ಆಂಜನೇಯ ವೃತ್ತದಲ್ಲಿ ರಾಜ್ಯದಲ್ಲಿ ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತಿದ್ದಂತೆಯೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, https://ainlivenews.com/do-you-know-how-many-health-benefits-there-are-from-drinking-bitter-gourd-juice/ ಎಸ್‌ಆರ್ ಪಾಟೀಲ, ನರೇಶ ಮಲೆನಾಡು, ಹರಿಶಂಕರ ಮಠದ, ಅಜಮತ, ಗೀರದಾರ, ವೃಷಭೇಂದ್ರೆ ಪಟ್ಟಣಶೆಟ್ಟಿ, ಬಾಬು ಅಂಚಟಗೇರಿ, ಲಿಂಗರೆಡ್ಡಿ ನಡುವಿನಮನಿ, ಸೋಮಶೇಖರ್ ಕಾನಾಪುರ, ಕುಮಾರ್ ಖಂಡೇಕರ, ಕುಬೇರ ಲಮಾಣಿ, ಹನುಮಂತ ಚವರಗುಡ್ಡ ಹಾಜರಿದ್ದರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬೆಂಗಳೂರು: ಮಳೆ ಹೆಚ್ಚಾಗಿ ಆಗದ ರೈತರ ಪಾಲಿಗೆ ಕೊಳವೆ ಬಾವಿಯೇ ಮೂಲಾಧಾರ. ಗಂಗಾ ಕಲ್ಯಾಣ ಯೋಜನೆಯನ್ನು ಬಡ ಹಾಗೂ ಮಧ್ಯಮ ವರ್ಗದ ರೈತರ ಜಮೀನಿಗೆ ಉಚಿತವಾಗಿ ಕೊಳವೆಬಾವಿ ಕೊರೆಸಿಕೊಡುವ ಉದ್ದೇಶದಿಂದ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತರಲಾಗಿದೆ. ಹಲವಾರು ರೈತರು ಇಂದಿಗೂ ಮಳೆಯನ್ನೇ ಆಶ್ರಯಿಸಿಕೊಂಡು ಜಮೀನು ಕಾರ್ಯದಲ್ಲಿ ತೊಡಗಿದ್ದಾರೆ. ಕಾರಣ ಅವರಲ್ಲಿ ಕೊಳವೆ ಬಾವಿ ತೋಡಿಸುವಷ್ಟು ಆರ್ಥಿಕ ಶಕ್ತಿ ಇಲ್ಲದಿರುವುದು. ಈ ಕಾರಣಕ್ಕೆ ಸರ್ಕಾರವೇ ಉಚಿತವಾಗಿ ಈ ಸೌಲಭ್ಯಗಳನ್ನು ರೈತರಿಗೆ ನೀಡುತ್ತಿದೆ. ನೀವು ಸದುಪಯೋಗಪಡಿಸಿಕೊಳ್ಳಿ. ಯೋಜನೆ ಏನು? : ಕೊಳವೆ ಬಾವಿ (ಬೋರ್ ವೆಲ್) ಕೊರೆಯುವ ಮತ್ತು ತೆರೆದ ಬಾವಿ ತೋಡುವ ಮೂಲಕ ಕೃಷಿ ಭೂಮಿಗೆ ನೀರನ್ನು ಪೂರೈಸುವುದೇ ಗಂಗಾ ಕಲ್ಯಾಣ ಯೋಜನೆ. ವಿದ್ಯುತ್ ಸಂಪರ್ಕ ಕಲ್ಪಿಸಿ ಪಂಪ್ ಮತ್ತು ಮೋಟಾರ್ ಮೂಲಕ ನೀರೆತ್ತುವುದು ಈ ಯೋಜನೆಯ ಉದ್ದೇಶ. https://ainlivenews.com/do-you-know-how-many-health-benefits-there-are-from-drinking-bitter-gourd-juice/ ಪ್ರಮುಖವಾಗಿ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರ, ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ಯೋಜನೆ ತಂದಿದೆ. ಉಚಿತವಾಗಿ ಕೊಳವೆ…
ಬೆಳಗಾವಿ: ಶಿಗ್ಗಾವಿ ಗೆಲುವು ನಮಗೆ ಡಬಲ್ ಪ್ರಮೋಷನ್ ಆಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಪ್ರಬಲ ರಾಜಕಾರಣಿ ವಿರುದ್ಧ ಚುನಾವಣೆ ಹೇಗೆ ಮಾಡ್ತಾರೆ ಅಂತಿತ್ತು. ಕೆಲವು ತಂತ್ರಗಾರಿಕೆ, ನಾವು ಹೇಗೆ ಚುನಾವಣೆ ಮಾಡುತ್ತೇವೆ ಅದೇ ಮಾದರಿಯಲ್ಲಿ ಚುನಾವಣೆ ಮಾಡಿದ್ವಿ. https://ainlivenews.com/do-you-know-how-many-health-benefits-there-are-from-drinking-bitter-gourd-juice/ ಈ ರೀತಿ ಚುನಾವಣೆಯನ್ನ ಮಾಡಿದರೆ ರಾಜ್ಯದಲ್ಲಿ ಗೆಲ್ಲುತ್ತೇವೆ. ಮುಸ್ಲಿಮರಿಗೆ ಚುನಾವಣೆಯಲ್ಲಿ ನಿಲ್ಲಿಸುತ್ತಾರೆ ಹೋಗ್ತಾರೆ ಅಂತ ಇತ್ತು. ಈ ಸಾರಿ ಚುನಾವಣೆಯಲ್ಲಿ ಒಂದು ಸಂದೇಶ ಹೋಗಿದೆ. ಮುಸ್ಲಿಮರಿಗೆ ಟಿಕೆಟ್ ಕೊಟ್ಟರೆ ಗೆಲ್ಲುತ್ತಾರೆ ಅಂತ ಹೋಗಿದೆ. ಶಿಗ್ಗಾವಿ ಗೆಲುವು ನಮಗೆ ಡಬಲ್ ಪ್ರಮೋಷನ್ ಆಗಿದೆ. ಡಿಸಿಎಂ ಸ್ಥಾನ ಇಲ್ಲದೇ ನಾವು ಇಲ್ಲಿ ಗೆಲ್ಲಿಸಿದ್ದೇವೆ ಎಂದರು.
ಮೈಸೂರು: ಸಿದ್ದರಾಮಯ್ಯ ಯಾವತ್ತಿಗೂ ಪಕ್ಷಕ್ಕೆ ಬಾ ಎಂದು ವೈಯಕ್ತಿಕವಾಗಿ ಹೇಳಿಲ್ಲ ಎಂದು ಜಿ ಟಿ ದೇವೇಗೌಡ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನನಗೆ ಯಾವತ್ತಿಗೂ ಸಿದ್ದರಾಮಯ್ಯ ಖುದ್ದಾಗಿ ಕಾಂಗ್ರೆಸ್ ಗೆ ಬಾ ಎಂದು ಕರೆದಿಲ್ಲ. ನಾನು ದಸರಾದಲ್ಲಿ ಅವರ ಜೊತೆ ವೇದಿಕೆ ಹಂಚಿಕೆ ಕೊಂಡಿದ್ದು ಬಿಟ್ಟರೆ ಮತ್ತೆ ನಾನು ಅವರನ್ನ ಭೇಟಿ ಮಾಡಿಲ್ಲ. ಅವರು ಇವತ್ತಲ್ಲ ಯಾವತ್ತಿಗೂ ಪಕ್ಷಕ್ಕೆ ಬಾ ಎಂದು ವೈಯಕ್ತಿಕವಾಗಿ ಹೇಳಿಲ್ಲ. ಯಾವುದೊ ಸಭೆಯಲ್ಲಿ ಹೇಳಿರಬಹುದು. ಅದು ನನಗೆ ಗೊತ್ತಿಲ್ಲ ಎಂದು ಶಾಸಕ ಜಿ.ಟಿ ದೇವೇಗೌಡ ಹೇಳಿದರು.ಜಿ.ಟಿ ದೇವೇಗೌಡನಿಗೆ ವಯಸ್ಸಾಗಿದೆ. ರಾಜಕೀಯದಿಂದ ನಿವೃತ್ತಿಯಾಗಲಿ. ನಮಗೆ ಅವರ ಮಗ ಜಿ.ಟಿ ಮಗ ಸಾಕು ಎಂಬ ಆದೇಶ ಅವರಿಂದ ಆಗಿದೆ. https://ainlivenews.com/do-you-know-how-many-health-benefits-there-are-from-drinking-bitter-gourd-juice/ ನನಗೆ ರಾಜಕೀಯದಿಂದ ನಿವೃತ್ತಿಕೊಡಿಸಲು ಅವರು ತಯಾರಿದ್ದಾರೆ. ಅವರಿಗೂ ಗೊತ್ತು ಕಾಂಗ್ರೆಸ್ ಹೌಸ್ ಫುಲ್ ಆಗಿದೆ. ಜೆಡಿಎಸ್ ಬಿಜೆಪಿ ಜೊತೆಯಲ್ಲಿ ಒಂದಾಗುವೆ. ಅಲ್ಲಿಗೆ ಜಿ.ಟಿ.ಡಿಗೆ ಸ್ಥಾನ ಇಲ್ಲ. ಹೀಗಾಗಿ ನಿವೃತ್ತಿ ತೆಗೆದುಕೊಳ್ಳಲಿ ಎಂಬ ಭಾವನೆಯಲ್ಲಿದ್ದಾರೆ ಎಂದರು.
ಕಲಘಟಗಿ: ‘ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗಾಗಿ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತ ಸಂಘಟನೆಗಳಿಂದ ನ.26ರಂದು ಮೌನ ಪ್ರತಿಭಟನೆ ನಡೆಸಿ ಧಾರವಾಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು’ ಎಂದು ರೈತ ಮುಖಂಡ ಪರಶುರಾಮ ಎತ್ತಿನಗುಡ್ಡ ತಿಳಿಸಿದ್ದಾರೆ. ‘ದೇಶದ ರೈತರ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಗೊಂಡ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಧಲೆವಾಲಾ ನ.26ರಿಂದ ಆಮರಣಾಂತ ಸತ್ಯಾಗ್ರಹ ಉಪವಾಸ ಹಮ್ಮಿಕೊಂಡಿದ್ದಾರೆ. ಇದು ರೈತರ ಮಾಡು ಇಲ್ಲವೇ ಮಡಿ ಹೋರಾಟವಾಗಿದೆ. ದೇಶಾದ್ಯಂತ ಎಲ್ಲ ರೈತ ಸಂಘಟನೆಗಳು ಬೆಂಬಲಸೂಚಿಸುತ್ತಿವೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://ainlivenews.com/do-you-know-how-many-health-benefits-there-are-from-drinking-bitter-gourd-juice/ ‘ಕೇಂದ್ರ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯದಲ್ಲಿಯೂ ದೆಹಲಿ ಹೋರಾಟ ಬೆಂಬಲಿಸಿ ಸಹಸ್ರಾರು ಸಂಖ್ಯೆಯ ರೈತರು ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ. ದೆಹಲಿ ರೈತ ಮುಖಂಡರ ಪ್ರಾಣಕ್ಕೆ ಅಪಾಯ ಆದರೆ ಕೇಂದ್ರ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಮತ್ತು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ,…
ಶ್ರೀನಿವಾಸಪುರ: ಕ್ಷುಲ್ಲಕ ಕಾರಣಕ್ಕೆ ಜ್ಯೂಸ್ ಫ್ಯಾಕ್ಟರಿಯ ಕಾರ್ಮಿಕರ ನಡುವೆ ಗಲಾಟೆಯಾಗಿದ್ದು, ಓರ್ವ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಚ್ಚನಹಳ್ಳಿ ಗ್ರಾಮದ ಬಳಿ ನಡೆದಿದೆ. ಉತ್ತರ ಪ್ರದೇಶ ಮೂಲದ ಉಯ್ಯಾದ್ ತಲಾ (24) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಕಾರ್ಮಿಕರ ನಡುವೆ ಯಾವುದೋ ಕಾರಣಕ್ಕೆ ಚಿಕ್ಕ ಕಿರಿಕ್ ಆಗಿದೆ, ಬಳಿಕ ಮಾತಿಗೆ ಮಾತು ಬೆಳೆದು ಹೊಡೆದಾಟವಾಗಿದ್ದು, https://ainlivenews.com/do-you-know-how-many-health-benefits-there-are-from-drinking-bitter-gourd-juice/ ಈ ಗಲಾಟೆಯಲ್ಲಿ ಉಯ್ಯಾದ್ ಗಂಭೀರ ಗಾಯಗೊಂಡಿದ್ದ. ಗಾಯಾಳುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಿಲಾಗಿಯಿತು, ಆದರೆ ದಾರಿ ಮಧ್ಯೆ ಕಾರ್ಮಿಕ ಮೃತಪಟ್ಟಿದ್ದಾನೆ. ಈ ಘಟನೆಯ ಸಂಬಂಧ ಶ್ರೀನಿವಾಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ರಾಕೇಶ್ (20) ಹಾಗೂ ರವಿಯನ್ನು (25) ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬೆಂಗಳೂರು: ಉಪ ಚುನಾವಣೆ ಸಮರದಲ್ಲಿ ತೀವ್ರ ಪೈಪೋಟಿಗೆ, ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಮತ್ತು ಕಾಂಗ್ರೆಸ್ ಹಾಗೂ ಎನ್ಡಿಎ ಮಿತ್ರಪಕ್ಷಗಳ ಪ್ರತಿಷ್ಠೆಯ ಕಣವಾಗಿದ್ದ ಚನ್ನಪಟ್ಟಣದಲ್ಲಿ ಕೊನೆಗೂ ಡಿಸಿಎಂ ಡಿಕೆ ಶಿವಕುಮಾರ್, ಯೋಗೇಶ್ವರ್ ಪ್ರತಿಷ್ಠೆಗೆ ಗೆಲುವಾಗಿದೆ. ಯೋಗೇಶ್ವರ್ 25,515 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಯೋಗೇಶ್ವರ್ಗೆ 1,12,642 ಮತ ದೊರೆತರೆ, ಎನ್ಡಿಎ ಅಭ್ಯರ್ಥಿ ನಿಖಿಲ್‌ಗೆ 87,229 ಮತಗಳು ದೊರೆತಿವೆ. ಪಕ್ಷೇತರ ಅಭ್ಯರ್ಥಿಗಳಾದ ನಿಂಗರಾಜುಗೆ 2352, ಜೆ.ಟಿ.ಪ್ರಕಾಶ್‌ಗೆ 1649 ಮತಗಳು ದೊರೆತಿವೆ. https://ainlivenews.com/are-you-eating-while-sitting-on-the-bed-be-careful-dont-do-this-poverty-is-bothering-you/ ಚನ್ನಪಟ್ಟಣದಲ್ಲಿ ಎರಡು ಬಾರಿ ಸೋತಿರುವ ಅನುಕಂಪ ಯೋಗೇಶ್ವರ್ ಕೈ ಹಿಡಿದಿರಬಹುದು. ಇಷ್ಟೇ ಅಲ್ಲದೆ ಕ್ಷೇತ್ರದಲ್ಲಿ ಯೋಗೇಶ್ವರ್ ಅವರಿಗೆ ಅವರದ್ದೇ ಆದ ವೈಯಕ್ತಿಕ ವರ್ಚಸ್ಸು ಇದೆ. ಯೋಗೇಶ್ವರ್ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿರುವುದರಿಂದ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಪ್ಲಸ್ ಆಗುರಬಹುದು. ಜೊತೆ ಡಿಕೆ ಸಹೋದರರು ಯೋಗೇಶ್ವರ್ ಬೆನ್ನಿಗೆ ನಿಂತಿರುವುದು ಕೂಡ ನೆರವಾಗಿದೆ. ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಒಗ್ಗಟ್ಟು ಪ್ರದರ್ಶನ ಸೇರಿ ಹಲವು ವಿಚಾರಗಳು ಸಿಪಿವೈಗೆ ವರವಾಗಿ ಪರಿಣಮಿಸಿದವು. ಯೋಗೇಶ್ವರ್ ಗೆಲುವಿಗೆ ಕಾರಣವಾದ ಪ್ರಮುಖ 10 ಕಾರಣಗಳು…