ಯಾದಗಿರಿ: ಕಟಾವಿಗೆ ಬಂದಿದ್ದ 4 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಗೆದ್ದಲಮರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವಪುತ್ರ ಎಂಬ ರೈತನಿಗೆ ಸೇರಿದ ಕಬ್ಬಿನ ಬೆಳೆಯಾಗಿದೆ. ಜಮೀನಿನಲ್ಲಿರುವ ಪಂಪ್ ಸೆಟ್ ನ ವಿದ್ಯುತ್ ವೈಯರ್ ನಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಈ ದುರ್ಘಟನೆ ನಡೆದಿದೆ. https://ainlivenews.com/50-subsidy-for-construction-of-shed-for-mushroom-farmers-apply-today/ ಬೆಂಕಿ ನಂದಿಸಲು ಗ್ರಾಮಸ್ಥರಿಂದ ಹರಸಾಹಸ ಪಟ್ಟಿದ್ದಾರೆ. ಆದ್ರೆ ಬೆಂಕಿ ನಂದಿಸುವಷ್ಟರಲ್ಲಿ ಕಬ್ಬಿನ ಬೆಳೆ ಸುಟ್ಟು ಕರಕಲಾಗಿದೆ. ಇನ್ನೂ ಬೆಳೆ ಕಳೆದುಕೊಂಡು ಅನ್ನದಾತ ಶಿವಪುತ್ರಪ್ಪ ಕಂಗಲಾಗಿದ್ದು, ಕೊಡೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Author: AIN Admin
ಬೆಳಗಾವಿ: ಬುಲೇರೋ ವಾಹನ ಓವರ್ ಟೇಕ್ ಮಾಡಲು ಹೋಗಿ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಬಳಿ ನಡೆದಿದೆ. ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಮಹೇಶ ಕರಿಕಟ್ಟಿ (32) ಮೃತ ದುರ್ಧೈವಿಯಾಗಿದ್ದು, https://ainlivenews.com/50-subsidy-for-construction-of-shed-for-mushroom-farmers-apply-today/ ನಿನ್ನೆ ತಡರಾತ್ರಿ ಬೈಕ್ ಮೇಲೆ ಸಂಚರಿಸುವಾಗ ಬುಲೇರೋ ವಾಹನ ಓವರ್ ಟೇಕ್ ಮಾಡುವ ವೇಳೆ ಈ ದುರ್ಘಟನೆ ನಡೆದಿದೆ. ವಾಹನ ಚಕ್ರಕ್ಕೆ ಸಿಲುಕಿದ ಬೈಕ್ ಸವಾರನ ಮೃತದೇಹ ಚಿದ್ರ ಚಿದ್ರವಾಗಿದ್ದು, ಬೈಲಹೊಂಗಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೋಲಿಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಚೆನ್ನೈ: ಕಳ್ಳಭಟ್ಟಿ ಸಾರಾಯಿ ಸೇವಿಸಿ 68 ಜನ ಮಂದಿ ಮೃತಪಟ್ಟ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಿಂದ ವರದಿಯಾಗಿತ್ತು. ಇದು ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಪರಿಣಾಮದಿಂದ ಆಗಿರುವ ದುರಂತವಾಗಿದೆ ಎಂದು ಬಿಜೆಪಿ ಮುಖಂಡ ಕೆ ಅಣ್ಣಾಮಲೈ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಅಕ್ರಮ ಮದ್ಯ ದುರಂತ ಪ್ರಕರಣವನ್ನು ಕೇಂದ್ರ ತನಿಖಾ ದಳದ ನಿಖೆಗೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. ಡಿಎಂಕೆ ಸರ್ಕಾರ ಈ ಪ್ರಕರಣವನ್ನು ಈಗಾಗಲೇ ಸಿಐಡಿಯ ಕ್ರೈಂ ಬ್ರಾಂಚ್ ವಿಭಾಗಕ್ಕೆ ವರ್ಗಾಯಿಸಿತ್ತು. ಇನ್ನೂ ಸಿಬಿಐ ತನಿಖೆಗೆ ಈ ಪ್ರಕರಣದ ವರ್ಗಾವಣೆಯನ್ನು ವಿರೋಧಿಸಿತ್ತು. ಈ ಸಂಬಂಧ ಐಎಡಿಎಂಕೆ, ಪಿಎಂಕೆ ಮತ್ತು ಬಿಜೆಪಿ ನ್ಯಾಯಾಲಯದ ಮೊರೆ ಹೋಗಿದ್ದವು. ಇದೀಗ ಆಡಳಿತಾರೂಢ ಡಿಎಂಕೆಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. https://ainlivenews.com/50-subsidy-for-construction-of-shed-for-mushroom-farmers-apply-today/ ಪ್ರಕರಣ ಸಂಬಂಧ 24 ಜನರನ್ನು ಬಂಧಿಸಲಾಗಿದೆ. ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದ್ದು, ಎಸ್ಪಿಯನ್ನು ಅಮಾನತು ಮಾಡಲಾಗಿದೆ. ಪ್ರಮುಖ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯ ಇಲ್ಲ ಎಂದು ನ್ಯಾಯಾಲಯದಲ್ಲಿ ಸರ್ಕಾರದ ಪರ ವಕೀಲರು ವಾದ…
ಬೆಂಗಳೂರು: ರಾಜ್ಯ ಸರ್ಕಾರದ ಅಸಮರ್ಥ, ಆ್ಯಕ್ಟೀವ್ ಇಲ್ಲದ ಸಚಿವರನ್ನ ಸಂಪುಟದಿಂದ ಕೈಬಿಡುವ ಚಿಂತನೆ ನಡೆದಿದೆ.ಆರೇಳು ಮಂದಿ ಸಚಿವರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಚರ್ಚೆ ಜೋರಾಗ್ತಿದೆ.ಜನವರಿಯಲ್ಲಿ ಬಹುತೇಕ ಸಂಪುಟ ಪುನಾರಚನೆ ಮಾಡುವ ಚಿಂತನೆ ಸಿಎಂ ಮುಂದಿದೆ ಎನ್ನಲಾಗ್ತಿದೆ.ಜೊತೆಗೆ ಹೈಕಮಾಂಡ್ ಮಟ್ಟದಲ್ಲೂ ಇದು ಮುನ್ನೆಲೆಗೆ ಬಂದಿದೆ. ಯಸ್..ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರ್ಣಗೊಳಿಸ್ತಿದೆ.ಇದೇ ವೇಳೆ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡುವ ಲಕ್ಷಣಗಳು ಶುರುವಾಗಿವೆ.ಡಿಸೆಂಬರ್ ನಂತರ ಸಂಪುಟ ಪುನಾರಚನೆ ಬಹುತೇಕ ಫಿಕ್ಸ್ ಅಂತ ಹೇಳಲಾಗ್ತಿದೆ.ಮೊನ್ನೆ ನಡೆದ ಹಿರಿಯ ಸಚಿವರ ಸಭೆಯಲ್ಲೂ ಈ ವಿಚಾರ ಪ್ರಸ್ತಾಪ ಆಗಿದ್ದು, ಹಿರಿಯ ಸಚಿವರಿಗೆ ಈ ಬಗ್ಗೆ ಸುಳುವು ನೀಡಿದ್ದಾರೆಂಬ ಮಾತಿದೆ.. ಆರೇಳು ಸಚಿವರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಬಗ್ಗೆ ಸಿಎಂ ಕೂಡ ಮುಕ್ತಮನಸ್ಸಿನಲ್ಲಿದ್ದಾರೆ.ಹೈಕಮಾಂಡ್ ಕೂಡ ಈ ಬಗ್ಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ ಎನ್ನಲಾಗ್ತಿದೆ. https://ainlivenews.com/50-subsidy-for-construction-of-shed-for-mushroom-farmers-apply-today/ ಇನ್ನು ಸಂಪುಟ ಪುನಾರಚನೆ ಮಾಡಿ ಸುಮಾರು ಆರೇಳು ಸಚಿವರನ್ನ ಕೈಬಿಡೋಕೆ ಸಿಎಂ ಚಿಂತಿಸಿದ್ದಾರೆ.ಮೂಡಾ ಹಗರಣ,ವಕ್ಫ್ ವಿವಾದ,ವಾಲ್ಮೀಕಿ ಹಗರಣಗಳವೇಳೆ…
ಕೋಲಾರ : ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಸಾವಯವ ಉತ್ಪನ್ನಗಳ ಹಾಗೂ ಸಿರಿಧಾನ್ಯಗಳ ಕುರಿತು ರೈತರಿಗೆ ಮತ್ತು ಗ್ರಾಹಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ಅಂಗವಾಗಿ ‘ಸಿರಿಧಾನ್ಯಗಳ ನಡಿಗೆ ಆರೋಗ್ಯದ ಕಡೆಗೆ’ ಜಾಗೃತಿ ಜಾಥಾ ನಗರದಲ್ಲಿ ಇಂದು ನಡೆಯಿತು. ನಗರದ ಜ್ಯುನಿಯರ್ ಕಾಲೇಜು ಆವರಣದಿಂದ ಆರಂಭವಾದ ನಡಿಗೆ ಬಂಗಾರಪೇಟೆ ವೃತ್ತ ಮಾರ್ಗವಾಗಿ ಪರಿವಿಕ್ಷಣ ಮಂದಿರ ತಲುಪಿತು. ಜಾಗೃತಿ ಜಾಥಾಗೆ ಜಿಲ್ಲಾಧಿಕಾರಿ ಆಕ್ರಂಪಾಷ ಹಸಿರು ನಿಶಾನೆ ಮೂಲಕ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಸಿರಿಧಾನ್ಯದ ಮಹತ್ವ ಅರಿವು ಹೆಚ್ಚಾಗುತ್ತಿದೆ. ಭಾರತ ಸಿರಿಧಾನ್ಯಗಳ ತವರೂರಾಗಿದೆ. ಜಗತ್ತಿನಲ್ಲಿ ಬೆಳೆಯುವ ಸಿರಿಧಾನ್ಯಗಳ ಪೈಕಿ ಶೇ. 42 ರಷ್ಟು ಸಿರಿಧಾನ್ಯವನ್ನು ನಮ್ಮ ದೇಶದಲ್ಲೇ ಬೆಳೆಯ ಲಾಗುತ್ತಿದ್ದು, ಸಿರಿಧಾನ್ಯ ಬೆಳೆಯುವಲ್ಲಿ ನಮ್ಮ ರಾಜ್ಯ ಮುಂದಿದೆ ಎಂದರು. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಿರಿಧಾನ್ಯ ಅತ್ಯುತ್ತಮ ಔಷಧಿ. ಬಹಳ ಕಡಿಮೆ ನೀರಿನಲ್ಲೂ ಸಿರಿಧಾನ್ಯ ಬೆಳೆಯ ಬಹುದಾಗಿದೆ. ರೋಗಮುಕ್ತ ಜೀವನಕ್ಕಾಗಿ ಎಲ್ಲರೂ ಸಿರಿ ಧಾನ್ಯಗಳ ಬಳಕೆಗೆ ಮುಂದಾಗಬೇಕು. ಸಿರಿಧಾನ್ಯಗಳು ಭೂಮಿಗೂ…
ಚಿತ್ರದುರ್ಗ: ಎತ್ತುಗಳ ಮೆರವಣಿಗೆ ಮಾಡುವಾಗ ಎತ್ತಿನ ಮೇಲಿದ್ದ ಅಂಬೇಡ್ಕರ್ ಫೋಟೋಗೆ ಕಲ್ಲೆಸೆದು ಯವಕನೋರ್ವ ಕಿಡುಗೇಡಿತನ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸೊಂಡೆಕೆರೆ ಗ್ರಾಮದಲ್ಲಿ ದೀಪಾವಳಿ ಹಬ್ಬದ ಆಚರಣೆ ಮಾಡುತ್ತಿದ್ದರು. ಈ ವೇಳೆ ಎತ್ತುಗಳಿಗೆ ಅಲಂಕಾರ ಮಾಡಿ ಮೆರವಣಿಗೆ ಮಾಡುವುದು ವಾಡಿಕೆ. ಇದೇ ವೇಳೆ ಎತ್ತಿನ ಮೈ ಮೇಲಿಟ್ಟಿದ್ದ ಅಂಬೇಡ್ಕರ್ ಫೋಟೋಗೆ ಗ್ರಾಮದ ಕಿಡುಗೇಡಿ ಯುವಕ ಕಲ್ಲೆಸೆದು ವಿರೂಪ ಮಾಡಿದ್ದಾನೆ. https://ainlivenews.com/family-dispute-sister-in-law-fights-over-her-own-marriage/ ಇದನ್ನು ಕಂಡ ಇನ್ನುಳಿದ ಗ್ರಾಮದ ಜನರು ಹಿಡಿದು ಗಲಾಟೆ ಮಾಡಿದ್ದಾರೆ. ಇದರಿಂದ ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿ ಆಗಿತ್ತು. ಯುವಕನ ನಡೆಗೆ ಸಿಟ್ಟಿಗೆದ್ದ ಅಂಬೇಡ್ಕರ್ ಯುವಕ ಸಂಘದ ಯುವಕರು ಅವನಿಗೆ ಕ್ಲಾಸ್ ತೆಗೆದುಕೊಂಡು ಪ್ರಶ್ನೆ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಕ ಜಯಂತಿ ಪ್ರಯುಕ್ತ ಶಾಸಕರ ಭವನದ ಆವರಣದಲ್ಲಿರುವ ದಾಸಶ್ರೇಷ್ಠ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ರಾಜ್ಯದ ಜನತೆಗೆ ಕನಕ ಜಯಂತಿಯ ಶುಭಾಶಯಗಳನ್ನು ಕೋರಿದರು. ಸಚಿವರಾದ ಹೆಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿ ಹಲವು ಶಾಸಕರು ಮತ್ತು ಮುಖಂಡರು ಉಪಸ್ಥಿತರಿದ್ದರು.
Bangladesh : ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಲು ಕಾರಣವೇನು? https://www.youtube.com/watch?v=-K2boRnMeWI&t=58s
Bangalore : ಕಳ್ಳನನ್ನ ಹಿಡಿಯುವ ಪೊಲೀಸ್ರ ಸಾಹಸವಂತೂ ಮೈ ಜುಮ್ ಎನಿಸುತ್ತೆ. https://www.youtube.com/watch?v=ER9jhmClyiQ
ಬೆಂಗಳೂರು: ನೀವು ನೌಕರಿ ( Job ) ಹುಡುಕತಾ ಇದ್ದಿರಾ. SSLC / PUC ಯಾವುದೇ ಪದವಿ ಆಗಿದ್ರೆ ಕೂಡಲೆ ಇಲ್ಲಿ ಭೇಟಿ ಕೊಡಿ. ಇಲ್ಲಿ ವಾಕ್ ಇನ್ ಸಂದರ್ಶನವಿದ್ದು, ಪುರುಷರು ಮತ್ತು ಮಹಿಳೆಯರಿಗೆ ನೇಮಕಾತಿ ಆರಂಭವಾಗಿದೆ. ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್, ಬಿಲ್ಲಿಂಗ್ ಎಕ್ಸಿಕ್ಯೂಟಿವ್, ಕ್ಯಾಶಿಯರ್ , ಸುಪರವೈಸರ್ ಸೇರಿದಂತೆ ಅನೇಕ ಹುದ್ದೆಗಳಿಗೆ ಇಲ್ಲಿ ಅವಕಾಶವಿದೆ. SSLC /PUC ಯಾವುದೇ ಪದವಿ ಮಾಡಿದ್ರು ಇಲ್ಲಿ ಕೆಲಸವಿದ್ದು. ಜೊತೆಗೆ ವಸತಿ + ಸ್ಥಿರ ಮತ್ತು ಆಕರ್ಷಕ ಸಂಬಳ + PF + ಪ್ರೋತ್ಸಾಹ ಧನ ಕೊಡಲಾಗುತ್ತದೆ. (Job alert – contact – 97406 26853 ) ದಿನಾಂಕ- 30-05-2024 ರಂದು ಮಧ್ಯಾಹ್ನ 12 ಗಂಟೆಯಿಂದ 2 ಗಂಟೆವರೆಗೆ ಸಂದರ್ಶನವಿದ್ದು, ನೌಕರಿ ಹುಡುಕುತ್ತಿರುವವರು ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನ ನಡೆಯುವ ಸ್ಥಳ: #41 ಡಿ.ವಿ.ಜಿ ರಸ್ತೆ ಬಸವನಗುಡಿ, ಬೆಂಗಳೂರು- 04 ಹೆಚ್ಚಿನ ಮಾಹಿತಿಗಾಗಿ ಇಲ್ಲಿರುವ ನಂಬರಿಗೆ ಕರೆ ಮಾಡಬಹುದಾಗಿದೆ.…