ಬಳ್ಳಾರಿ: ಕೇಂದ್ರ ಸಚಿವ ಎಚ್ಡಿ ಕುಮಾರ ಸ್ವಾಮಿ ಅವರ ಮೇಲೆ ಎಫ್ಐಆರ್ ಆಗಿರುವ ವಿಷಯ ನನಗೆ ಗೊತ್ತೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಸಂಡೂರಿನಲ್ಲಿ ಪ್ರಚಾರದ ವೇಳೆ ಏಳುಬೆಂಚಿ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. https://ainlivenews.com/be-careful-before-swallowing-dolo-650-pill-for-all-minor-diseases-see-this-story/ ಎಚ್ ಡಿ ಕುಮಾರಸ್ವಾಮಿ ಮೇಲೆ ಕೇಸ್ ದಾಖಲಾದ ಬಗ್ಗೆ ಏನು ಹೇಳುತ್ತಿರಿ ಎನ್ನುವ ಪ್ರಶ್ನೆಗೆ ಕೇಸ್ ಆಗಿದಿಯಾ? ಯಾವ ವಿಚಾರಕ್ಕೆ? ಎಂದು ಮರು ಪ್ರಶ್ನಿಸಿದರು. ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ ಅವರಿಗೆ ಬೆದರಿಕೆ, ಸುಳ್ಳು ಆರೋಪ ಕಾರಣಕ್ಕೆ ಎಂದು ಮಾಧ್ಯಮದವರಿಂದಲೇ ಕೇಳಿದ ಅವರು ಈ ಬಗ್ಗೆ ನನಗೆ ಗೊತ್ತೇ ಇಲ್ಲ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಹೊರ ನಡೆದರು.
Author: AIN Author
ಜೈಪುರ: ರಾಜಸ್ಥಾನದ ಜೋಧ್‌ಪುರದ ಪಾವೋಟಾದಲ್ಲಿನ ಸ್ಯಾಟಲೈಟ್ ಆಸ್ಪತ್ರೆಯಲ್ಲಿ ಲ್ಯಾಬ್ ಅಟೆಂಡರ್ ತನ್ನ ಫೋನ್‌ನಲ್ಲಿ ಯೂಟ್ಯೂಬ್ ಟ್ಯುಟೋರಿಯಲ್ ವಿಡಿಯೋ ನೋಡಿದ ಬಳಿಕ ರೋಗಿಗೆ ಇಸಿಜಿ ಮಾಡಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಯೂಟ್ಯೂಬ್ ಟ್ಯುಟೋರಿಯಲ್ ನೋಡುತ್ತಾ ಸಿಬ್ಬಂದಿಯು ಇಸಿಜಿ ಮಾಡುವುದನ್ನು ಗಮನಿಸಿದ ರೋಗಿಯ ಕುಟುಂಬಸ್ಥರು, ಇಸಿಜಿ ಮಾಡಲು ಸರಿಯಾಗಿ ಗೊತ್ತಿರುವವರನ್ನು ಕರೆಸಿ ಮಾಡಿಸಿ ಎಂದು ಎಷ್ಟೇ ಒತ್ತಾಯಿಸಿದರೂ ಪರಿಗಣಿಸದೇ ಇಸಿಜಿ ಮಾಡುವುದನ್ನು ಮುಂದುವರೆಸಿದ್ದಾರೆ. https://ainlivenews.com/be-careful-before-swallowing-dolo-650-pill-for-all-minor-diseases-see-this-story/ ಸ್ವತಃ ರೋಗಿ ಹಾಗೂ ರೋಗಿಯ ಜೊತೆಗಿರುವವರು ವಿಡಿಯೋ ರೆಕಾರ್ಡ್ ಮಾಡಿದ್ದು, ಲ್ಯಾಬ್ ಅಟೆಂಡರ್‌ಗೆ ನರ್ಸ್ ಇಸಿಜಿ ಮಾಡುವಂತೆ ಒತ್ತಾಯಿಸಿರುವುದು ತಿಳಿದುಬಂದಿದೆ. ಬಳಿಕ ಅಟೆಂಡರ್‌ಗೆ ಪ್ರಶ್ನಿಸಿದಾಗ ಇಸಿಜಿ ಮಾಡಲು ಬರುವುದಿಲ್ಲ ಎಂದು ಒಪ್ಪಿಕೊಂಡಿದ್ದಾನೆ. ಆದರೆ ದೀಪಾವಳಿಯ ಕಾರಣ ಆಸ್ಪತ್ರೆಯಲ್ಲಿ ಯಾವುದೇ ನೌಕರರು ಇರದ ಕಾರಣ ತಾನಾಗಿಯೇ ಇಸಿಜಿ ಮಾಡಲು ಪ್ರಯತ್ನಿಸುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿಸಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಬಿಎಸ್ ಜೋಧಾ ಮಾತನಾಡಿ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆದ ನಂತರ, ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರ…
ಬೆಂಗಳೂರು:- ಜೈಲಲ್ಲಿ ಪರಿಚಯ, ಹೊರಗಡೆ ಬಂದು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಆರೋಪಿಗಳನ್ನು ಪೀಣ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. https://ainlivenews.com/donors-to-maths-are-hindus-not-muslims-yatnal/ ಡ್ರಗ್ ತಗೋತಿದ್ರು ಮೂರ್ನಾಲ್ಕು ಫ್ಲೋರ್ ಮನೆ ಹತ್ತಿ ಕನ್ನ ಹಾಕ್ತಿದ್ರು. ಪೀಣ್ಯಾ ಪೊಲೀಸರಿಂದ ಮನೆ ಕಳ್ಳತನ ಮಾಡ್ತಿದ್ದ ಖತರ್ನಾಕ್ ಆರೋಪಿಗಳನ್ನು ಬಂಧಿಸಲಾಗಿದೆ. ಗೌತಮ್ ಶೆಟ್ಟಿ, ಶೀಬಾ, ಮಾಣಿಕ್ಯ, ದಯಾನಂದ, ನರಸಿಂಹ ನಾಯಕ ಬಂಧಿತ ಆರೋಪಿಗಳು. ಮರ್ಡರ್ ಕೇಸ್ ವೊಂದರಲ್ಲಿ ಗೌತಮ್ ಶೆಟ್ಟಿ ಜೈಲು ಸೇರಿದ್ದರು. ಈ ವೇಳೆ ರಾಬರಿ ಕೇಸ್ ನಲ್ಲಿ ಒಳಗಿದ್ದ ಮಾಣಿಕ್ಯನ ಪರಿಚಯ ಆಗಿತ್ತು. ಬೇಲ್ ಕೊಡಿಸೋಕೆ ಯಾರೂ ಇಲ್ಲ ಅಂತಾ ಮಾಣಿಕ್ಯ ಕಷ್ಟ ಹೇಳ್ಕೊಂಡಿದ್ದ. ಹೊರಗಡೆ ಬಂದಮೇಲೆ ಗೆಳೆಯನಿಗಾಗಿ ಗೌತಮ್ ಶೆಟ್ಟಿ ಬೇಲ್ ಕೊಡಿಸಿದ್ದ. ಹೊರಗಡೆ ಬಂದವರೇ ಮನೆ ಕಳ್ಳತನ ಶುರು ಮಾಡಿದ್ದರು. ಗೌತಮ್ ಶೆಟ್ಟಿ ಪತ್ನಿ ಸೀಬಾ ಜೊತೆ ಸೇರಿ ರೌಂಡ್ಸ್ ಹಾಕ್ತಿದ್ದರು. ಹೈಫೈ ಏರಿಯಾ.. ಮೂರ್ನಾಲ್ಕು ಫ್ಲೋರ್ ಇರೋ ಅಪಾರ್ಟ್ಮೆಂಟ್ ಗಳೇ ಟಾರ್ಗೆಟ್ ಆಗಿವೆ. ನಂತರ ಎಲ್ಲರೂ ಸೇರಿ ಅಪಾರ್ಟ್ಮೆಂಟ್ ಗಳು, ಮನೆಗಳಿಗೆ ನುಗ್ಗಿ…
ಬೆಂಗಳೂರು : ತಡರಾತ್ರಿ ಅಂಗಡಿಯಲ್ಲಿ ಕಳ್ಳರು ಕೈಚಳಕ ತೋರಿರುವ ಘಟನೆ ನೆಲಮಂಗಲ ಸಮೀಪದ ರಾವುತನಹಳ್ಳಿ ರಸ್ತೆಯಲ್ಲಿರುವ ಅಂಗಡಿಯಲ್ಲಿ ಜರುಗಿದೆ. https://ainlivenews.com/lokayukta-notice-issue-to-cm-what-did-by-vijayendra-say/ ಕಳ್ಳತನ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನೆಲಮಂಗಲ ಸಮೀಪದ ರಾವುತನಹಳ್ಳಿ ರಸ್ತೆಯಲ್ಲಿರುವ ಅಂಗಡಿಯಲ್ಲಿ ಕಳ್ಳತನ ನಡೆದಿದೆ 85,000 ಹಣ ಹಾಗೂ ರೂ. 30000 ಬೆಲೆ ಬಾಳುವ ಸಿಗರೇಟ್ ಪ್ಯಾಕ್ ಗಳನ್ನು ದೋಚಿ ಪರಾರಿ ಆಗಿದ್ದಾರೆ. ಯೋಗೇಶ್ ಎಂಬವರ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಖದೀಮರ ಕೃತ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ವಿಜಯಪುರ: ವಕ್ಫ್ ವಿರುದ್ಧದ ಹೋರಾಟದಲ್ಲಿ ಎಲ್ಲಾ ಸ್ವಾಮೀಜಿಗಳು ಕೈಜೋಡಿಸಬೇಕು. ಆದರೆ ನಮ್ಮ ಸ್ವಾಮೀಜಿಗಳು ಹೋರಾಟ ಮಾಡುತ್ತಿಲ್ಲ. ವಕ್ಫ್ ವಿರುದ್ಧ ದೊಡ್ಡ ಹೋರಾಟ ನಡೆಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈ ಹೋರಾಟದಲ್ಲಿ ಕನ್ಹೇರಿ ಸ್ವಾಮಿಜಿ ಮುಂಚೂಣಿ ವಹಿಸಿಕೊಂಡಿದ್ದರೆ, https://ainlivenews.com/be-careful-before-swallowing-dolo-650-pill-for-all-minor-diseases-see-this-story/ ಇತರೆ ಸ್ವಾಮೀಜಿಗಳು ಕೊಂಕು ಹೇಳುತ್ತಿದ್ದಾರೆ. ಮಠಗಳಿಗೆ ದಾನ ನೀಡುವವರು ಹಿಂದೂಗಳು, ಮುಸ್ಲಿಂರಲ್ಲ. ಮುಸ್ಲಿಂರೆಲ್ಲ ಸ್ವಾಮೀಜಿಗಳಿಗೆ ನಮಸ್ಕಾರ ಮಾಡಲ್ಲ ಎಂದರು. ಕೇಂದ್ರ ಸಚಿವೆ ಕರಂದ್ಲಾಜೆ, ನಾನು ಇತರರು ಸೇರಿ ಅಹೋರಾತ್ರಿ ಹೋರಾಟ ಮಾಡುತ್ತೇವೆ. ವಕ್ಫ್ ಹೋಗುವವರೆಗೂ ಹೋರಾಟ ನಿಲ್ಲಲ್ಲ, ಇದು ಕೂಡ ಚರ್ಚೆಗೆ ಗ್ರಾಸವಾಗಲಿದೆ. ಮುಂದೆ ರಾಜ್ಯದಲ್ಲಿ ನಮ್ಮದೇ ಕಾಂಬಿನೇಷನ್ ನಾಯಕತ್ವ ಎಂದರು.
ಬೆಂಗಳೂರು:- ಸಿಎಂಗೆ ಲೋಕಾಯುಕ್ತ ನೋಟೀಸ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ. https://ainlivenews.com/cm-hearing-tomorrow-in-front-of-lokayukta-special-pooja-from-fans/ ಈ ಸಂಬಂಧ ಮಾತನಾಡಿದ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂಗೆ ಲೋಕಾಯುಕ್ತ ನೋಟೀಸ್ ಕೊಟ್ಟು ವಿಚಾರಣೆಗೆ ಬರಲು ತಿಳಿಸಿದ್ದಾರೆ. ಸಿಎಂ ಆಗಿ ವಿಚಾರಣೆಗೆ ಹೋಗುತ್ತೀರೋ, ಆರೋಪಿಯಾಗಿ ಹೋಗುತ್ತೀರೋ ಎಂದು ಸಿಎಂ ತಿಳಿಸಬೇಕು. ಒಬ್ಬ ಬೇಜವಾಬ್ದಾರಿ ಮಂತ್ರಿ ಜಮೀರ್ ಅಹಮದ್ ಇಟ್ಟುಕೊಂಡು ಮಠ ಮಾನ್ಯ, ರೈತರ ಜಮೀನು ಹೊಡೆಯುವ ಯತ್ನ ಜಮೀರ್ ನೇತೃತ್ವದಲ್ಲಿ ನಡೆಯುತ್ತಿದೆ. ಇದಕ್ಕೆ ಸಿಎಂ ಕುಮ್ಮಕ್ಕು ಕೂಡಾ ಇದೆ. ಸಿಎಂ ಕುಟುಂಬವೇ ಇಂದು ಆರೋಪಿ ಸ್ಥಾನದಲ್ಲಿ ನಿಂತಿದೆ. ಯಾವಾಗಲೋ ರಾಜೀನಾಮೆ ಕೊಡಬೇಕಿತ್ತು. ಅವರು ರಾಜೀನಾಮೆ ಕೊಡುವುದು ಸಿದ್ಧ. ಐದು ವರ್ಷ ಸಿಎಂ ಆಗಿರುತ್ತೇನೆ ಅಂತಾ ಸಿದ್ದರಾಮಯ್ಯ ರಾಜ್ಯದ ಜನತೆಗೆ ಹೇಳಲಿ ನೋಡೋಣ ಎಂದರು. ಹೇಳಲು ಅವರಿಗೆ ಸಾಧ್ಯವೇ ಇಲ್ಲ. ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಎಲ್ಲರೂ ಮಾತುಕತೆ ಮಾಡಿ ರಾಜೀನಾಮೆಗೆ ಮುಹೂರ್ತ ಸಿದ್ದ ಮಾಡಿದ್ದಾರೆ. ಯಾವಾಗ ರಾಜೀನಾಮೆ ಅಂತಾ ಸಿದ್ದರಾಮಯ್ಯನವರೇ ಹೇಳಬೇಕು.…
ಮೈಸೂರು :ಸಿಎಂಗೆ ಮುಡಾ ಕೇಸ್ ಮುಕ್ತಿ ಸಿಗಲಿ ಎಂದು ಆಶಿಸಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಾಳೆ ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ವಿಚಾರಣೆ ಹಿನ್ನಲೆಯಲ್ಲಿ ಅವರಿಗೆ ಒಳ್ಳೆಯದಾಗಲಿ ಎಂದು ನಗರದ ನೂರೊಂದು ಗಣಪತಿ ದೇವಸ್ಥಾನದಲ್ಲಿ ಅಭಿಮಾನಿಗಳು ಪೂಜೆ ನೆರವೇರಿಸಿದರು. https://ainlivenews.com/be-careful-before-swallowing-dolo-650-pill-for-all-minor-diseases-see-this-story/ ಸಿಎಂ ಸಿದ್ದರಾಮಯ್ಯಗೆ ಜೈಕಾರ ಹಾಕಿದ ಅಭಿಮಾನಿಗಳು, ಇದುಬಿಜೆಪಿಯವರ ಕುತಂತ್ರ ಅಷ್ಟೇ. ಸಿದ್ದರಾಮಯ್ಯ ಯಾವುದೇ ಭ್ರಷ್ಟಾಚಾರ ಮಾಡಿಲ್ಲ.ಹಿಂದೆಯೂ ಮಾಡಿಲ್ಲ, ಮುಂದೆಯೂ ಭ್ರಷ್ಟಾಚಾರ ಮಾಡಲ್ಲ ಎಂದು ಸಿದ್ದು ಅಭಿಮಾನಿಗಳು ಹೇಳಿದರು.
ಬೆಂಗಳೂರು:- ಚನ್ನಪಟ್ಟಣ ಜೆಡಿಎಸ್‌ನ ಭದ್ರಕೋಟೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಚಿವ HC ಮಹದೇವಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ. https://ainlivenews.com/a-fashion-designer-died-in-a-road-accident-what-commissioner-dayanand-said/ ಈ ಸಂಬಂಧ ಮಾತನಾಡಿದ ಅವರು,ಯಾವ ಕ್ಷೇತ್ರವೂ ಯಾರ ಭದ್ರಕೋಟೆಯಲ್ಲ. ನನ್ನ ಕ್ಷೇತ್ರವೂ ಸೇರಿ ಯಾವುದೂ ಯಾರಿಗೂ ಭದ್ರಕೋಟೆ ಅಲ್ಲ. ಜನ ಆಯಾ ಸಂದರ್ಭದಲ್ಲಿ ಆಯಾ ಸಮಯದಲ್ಲಿ ಆಯಾ ವಿಷಯದ ಮೇಲೆ ತೀರ್ಮಾನ ಮಾಡುತ್ತಾರೆ. ಅದು ಜನರ ಭದ್ರಕೋಟೆ ಎಂದು ತಿರುಗೇಟು ಕೊಟ್ಟರು ಮೊಮ್ಮಗ ಪರ ದೇವೇಗೌಡ ಪ್ರಚಾರದ ಬಗ್ಗೆ ಮಾತನಾಡಿ, ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ನನಗೆ ದೇವೇಗೌಡರ ಆರೋಗ್ಯ ಮುಖ್ಯ. ಅವರ ಆರೋಗ್ಯ ಚೆನ್ನಾಗಿ ಇರಲಿ. ಅವರು ಪ್ರಚಾರ ಮಾಡೋ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು ಚನ್ನಪಟ್ಟಣ ಕ್ಷೇತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಚನ್ನಪಟ್ಟಣದಲ್ಲಿ ವಾತಾವರಣ ಚೆನ್ನಾಗಿದೆ. ಯೋಗೇಶ್ವರ್ 3 ಬಾರಿ ಎಂಎಲ್‌ಎ ಆಗಿದ್ದರು. ಒಳ್ಳೆಯ ಕೆಲಸ ಮಾಡಿದ್ದಾರೆ. ನಾನು ಆರೋಗ್ಯ ಸಚಿವ ಆಗಿದ್ದಾಗ ಕಣ್ವಾ ಜಲಾಶಯದಿಂದ ನೂರು ಕೆರೆ ತುಂಬಿಸಿ ಜಾತ್ರೆ ರೀತಿ ಕಾರ್ಯಕ್ರಮ ಮಾಡಿದ್ದರು.…
ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಕೆಲವು ಪ್ರಯತ್ನಗಳು ಯಶಸ್ವಿಯಾದರೆ, ಮತ್ತೆ ಕೆಲವು ಬಿಗ್ ಬಜೆಟ್ ಸಿನಿಮಾಗಳ ನಡುವೆ ಕಳೆದು ಹೋಗುತ್ತವೆ. ಹೊಸತನಕ್ಕೆ ಬೆಂಬಲ ಸಿಗಲಿ, ಸಿಗದೇ ಇರಲಿ ಆದರೆ ಪ್ರಯತ್ನಗಳಂತೂ ನಿಂತಿಲ್ಲ ಎಂಬುದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಖುಷಿಯ ಸಂಗತಿ. ಸಿನಿಮಾ ಬಗ್ಗೆ ಅತೀವ ಪ್ರೀತಿ ಹೊಂದಿರುವ ಐವರು ಯುವ ಸಿನಿಮೋತ್ಸಾಹಿಗಳ ಹೊಸ ಪ್ರಯತ್ನ ‘ಬಿಟಿಎಸ್’ ಬಿಡುಗಡೆಗೆ ಸಜ್ಜಾಗಿದೆ. ‘ಬಿಟಿಎಸ್’ ಎಂದರೆ ‘ಬಿಹೈಂಡ್ ದಿ ಸೀನ್ಸ್’ ಎಂದರ್ಥ..ಇಡೀ ಸಿನಿಮಾದ ಥೀಮ್ – ತೆರೆಯ ಹಿಂದಿನ ಕಥೆಗಳು, ಹೀಗಾಗಿ ಈ ಚಿತ್ರಕ್ಕೆ ಈ ಟೈಟಲ್ ಇಡಲಾಗಿದೆ. ‘ಬಿಟಿಎಸ್’ ಟ್ರೇಲರ್ ರಿಲೀಸ್ ಆಗಿದ್ದು, ಹೊಸಬರ ಪ್ರಯತ್ನ ಗಮನಸೆಳೆಯುತ್ತಿದೆ. ಈ ಕಾಲದ ನಿರ್ದೇಶಕರ ಐದು ಕಥೆಗಳು ಈ ಸಿನಿಮಾದಲ್ಲಿವೆ. ‘ಬಾನಿಗೊಂದು ಎಲ್ಲೆ ಎಲ್ಲಿದೆ’, ‘ಕಾಫಿ, ಸಿಗರೆಟ್ಸ್ ಅಂಡ್ ಲೈನ್ಸ್’, ‘ಹೀರೋ’, ‘ಬ್ಲ್ಯಾಕ್ ಬಸ್ಟರ್’ ಹಾಗೂ ಸುಮೋಹ’ ಎಂಬ ಕಥೆಗಳು ಬಿಟಿಎಸ್ ಚಿತ್ರದ ಹೈಲೆಟ್ಸ್.. ಭರದಿಂದ ಸಾಗ್ತಿದೆ ಪ್ರಚಾರ ಬಿಟಿಎಸ್ ಸಿನಿಮಾ ಬಿಡುಗಡೆ…
ಬೆಂಗಳೂರು:- ಬೆನ್ಜ್ ಕಾರು ಡಿಕ್ಕಿಯಾಗಿ ಫ್ಯಾಷನ್ ಡಿಸೈನರ್ ಸಂಧ್ಯಾ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ನಗರ ಕಮಿಷನರ್ ದಯಾನಂದ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. https://ainlivenews.com/forgiveness-otherwise-5-crore-rupees-give-threat-to-salman-khan-again/ ಈ ಸಂಬಂಧ ಮಾತನಾಡಿದ ಅವರು,ಕೆಂಗೇರಿ ಬಸ್ ನಿಲ್ದಾಣದ ಮುಂದೆ ಬೆಂಜ್ ಕಾರು ಡಿಕ್ಕಿಯಾಗಿ 30 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಘಟನೆ ಬಳಿಕ ಕೇಸ್ ದಾಖಲು ಮಾಡಿ ಆರೋಪಿಯನ್ನು ಬಂಧಿಸಿದ್ದೇವೆ. ಡ್ರಂಕ್ & ಡ್ರೈವ್ ಮತ್ತು ರಕ್ತ ಪರೀಕ್ಷೆ ಮಾಡಿಸಲಾಗಿದೆ. ‘ಉದ್ದೇಶಪೂರ್ವಕವಲ್ಲದ ಕೊಲೆ’ ಎಂದು ಕೇಸ್ ದಾಖಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಕಾನೂನಾತ್ಮಕವಾಗಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಹೇಳಿದರು. ಘಟನೆ ಹಿನ್ನೆಲೆ:- ಇನ್ನೂ ನಗರದ ಕೆಂಗೇರಿ ಬಸ್ ನಿಲ್ದಾಣದ ಬಳಿ ದುರ್ಘಟನೆ ಸಂಭವಿಸಿದೆ. ಶನಿವಾರ ಕೆಲಸ ಮುಗಿಸಿ ರಾತ್ರಿ 7 ಗಂಟೆ ಸುಮಾರಿಗೆ ಕೆಂಗೇರಿ ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದರು. ಈ ವೇಳೆ ಮದ್ಯದ ಮತ್ತಿನಲ್ಲಿ ಬೆಂಜ್ ಕಾರು ಚಲಾಯಿಸಿಕೊಂಡು ಬಂದ ಯುವಕ, ಸಂಧ್ಯಾರಿಗೆ ಡಿಕ್ಕಿ ಹೊಡೆದಿದ್ದಾನೆ. ಕಾರು ಸಂಧ್ಯಾ ಅವರನ್ನು 5 ಮೀಟರ್ ಉಜ್ಜಿಕೊಂಡು…