ರಾಯಚೂರು: ನನ್ನ ಇಡೀ ಜೀವನದಲ್ಲಿ ಇಂತಹ ಪ್ರಧಾನಿಯನ್ನು ನೋಡಿರಲಿಲ್ಲ. ಸುಳ್ಳು ಹೇಳುವ ಪ್ರಧಾನಿ ಇದ್ದರೆ ಅದು ಮೋದಿನೇ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ ಕಿಡಿಕಾರಿದರು. ರಾಯಚೂರಿನಲ್ಲಿ ಮಾತನಾಡಿ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಪ್ರಧಾನಿ ಮೋದಿ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಗ್ಯಾರಂಟಿಗಳು ನಡೆಯುವುದೇ ಇಲ್ಲ ಎಂದಿದ್ದರು. https://ainlivenews.com/be-careful-before-swallowing-dolo-650-pill-for-all-minor-diseases-see-this-story/ ಆದರೆ ಈಗ ಅವರೇ ಮೋದಿ ಗ್ಯಾರಂಟಿ ಎಂದು ಪ್ರಚಾರ ಮಾಡಿದರು. ಅವರ ಆಡಳಿತ ಇರುವ ಮಧ್ಯಪ್ರದೇಶದಲ್ಲಿ 1,200 ರೂ. ಕೊಡುತ್ತಿದ್ದಾರೆ. ಚುನಾವಣೆ ವೇಳೆ ಏನಾದರೂ ಒಂದು ಭಾಷಣ ಮಾಡಿಬಿಡುವುದು ಮೋದಿಯವರ ಒಂದು ಕಲೆಯಾಗಿದೆ. ಅದಕ್ಕೆ ತಿರುಳು ಇರಲ್ಲ. ಇಂತಹ ಪ್ರಧಾನ ಮಂತ್ರಿಯನ್ನು ನಾನಂತು ನನ್ನ ಜೀವನದಲ್ಲಿ ನೋಡಿರಲಿಲ್ಲ. ಸುಳ್ಳು ಹೇಳುವ ಪ್ರಧಾನಿ ಇದ್ದರೆ ಅದು ಮೋದಿನೇ ಎಂದು ಹೇಳಿದರು.
Author: AIN Author
ಡಿವೋರ್ಸ್ ಬಳಿಕ 2ನೇ ಮದುವೆ ತಯಾರಿಯಲ್ಲಿ ಶಿಖರ್ ಧವನ್ ಇದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. https://ainlivenews.com/do-you-know-the-price-of-rice-eaten-by-king-kohli-this-is-his-fitness-secret/ ಶಿಖರ್ ಧವನ್ ತಮ್ಮ ವೈಯಕ್ತಿಕ ಬದುಕಿನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸುವ ಸುಳಿವು ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಅದರಲ್ಲಿ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಚೆಂದುಳ್ಳಿ ಚೆಲುವೆಯೊಂದಿಗೆ ಓಡಾಟ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಪಾಪರಾಜಿಗಳ ಕ್ಯಾಮರಾ ಕಣ್ಣಿನಲ್ಲಿ ಸೆರೆ ಸಿಕ್ಕಿರುವ ವಿಡಿಯೋದಲ್ಲಿ ಶಿಖರ್ ಧವನ್ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಧವನ್ ನೀಲಿ ಟಿ-ಶರ್ಟ್ ಮತ್ತು ಕಪ್ಪು ಕಾರ್ಗೋವನ್ನು ಧರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಧವನ್ ಜೊತೆಗೆ ಹುಡುಗಿ ಕೂಡ ಕಾರಿನಿಂದ ಇಳಿದಿದ್ದು, ಪಾಪರಾಜಿಗಳ ಕ್ಯಾಮೆರಾ ಅವರತ್ತ ವಾಲಿದೆ. ಕೂಡಲೇ ಆಕೆ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಕ್ಯಾಮೆರಾ ನೋಡಿದ ಕೂಡಲೇ ಅವರು ತಮ್ಮ ಮುಖವನ್ನು ಬೇರೆ ಕಡೆ ತಿರುಗಿಸಿದ್ದಾಳೆ. ಆದಾಗ್ಯೂ, ಅವರು ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಮಿಸ್ಟರಿ…
ಹುಬ್ಬಳ್ಳಿ:ಸಿದ್ದರಾಮಯ್ಯ ಅವರು ಅಹಿಂದ ಮಾಡಿದಾಗ ಅವರ ಜೊತೆಗೆ ಬಹಿರಂಗವಾಗಿ ಗಟ್ಟಿಯಾಗಿ ನಿಂತ ವೀರಶೈವ ಸಮುದಾಯದ ನಾಯಕ ನಾನೊಬ್ಬನೇ. ಅವರು 2006 ರಲ್ಲಿ ಜೆಡಿಎಸ್ ಗೆ ರಾಜೀನಾಮೆ ಕೊಟ್ಟು ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ನಾನು ಯಾವ ರೀತಿ ಸಹಾಯ ಮಾಡಿದ್ದೇನೆ ಎಂದು ನೆನಪಿಸಿಕೊಳ್ಳಲಿ. https://ainlivenews.com/be-careful-before-swallowing-dolo-650-pill-for-all-minor-diseases-see-this-story/ ರಾಜ್ಯದ ಉಪಮುಖ್ಯಮಂತ್ರಿಯನ್ನಾಗಿ ಮಾಡಿ ರಾಜಕೀಯವಾಗಿ ಬೆಳೆಸಿದ ದೇವೆಗೌಡರಿಗೆ ಕೈಕೊಟ್ಟು ನಿರಂತರ ವಿರೋಧಿಸಿರುವ ಕಾಂಗ್ರೆಸ್ ಜೋಡಿ ಕೈ ಜೋಡಿಸಿರುವ ನಿಜವಾದ ಶಕುನಿ @siddaramaiah ಎಂದು ರಾಜ್ಯದ ಜನತೆ ಮಾತನಾಡುತ್ತಿದ್ದಾರೆ. ಜೆಡಿಎಸ್ ನಿಂದ ಹೊರ ಬಂದಾಗ ಪ್ರಗತಿಪರ ಜನತಾದಳ ಪಕ್ಷದ ಅಡಿಯಲ್ಲಿ ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆ ಮಾಡಿ ಅವರ ಅಸ್ತಿತ್ವ ಉಳಿಸಿದ್ದು ಇದೆ ಬಸವರಾಜ ಬೊಮ್ಮಾಯಿ ಎನ್ನುವುದನ್ನು ಮರೆತಿದ್ದಾರೆ
ಹುಬ್ಬಳ್ಳಿ; ಹಳೆ ಹುಬ್ಬಳ್ಳಿಯ ಆನಂದನಗರ ಸರ್ಕಲ್ ನಲ್ಲಿ ನಾಡ ಹಬ್ಬ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ಬಸವರಾಜ ಷ. ಸಾಲಿ” ಇವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯಿತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಸುರೇಶ್ ಗೋಕಾಕ್, ಮಹೇಶ್ ಚಂದರಗಿ, ಸುಭಾಷ್ ಕೋಟಿ, ಸತೀಶ್ ಜಾಧವ್, ರಮೇಶ್, https://ainlivenews.com/be-careful-before-swallowing-dolo-650-pill-for-all-minor-diseases-see-this-story/ ಪರಶುರಾಮ್, ಶಾಂತು, ಅಭಿ, ಸುರೇಶ್, ಆನಂದ್, ಅಕ್ಷಯ್, ಮೌನೇಶ್, ವಿಶ್ವನಾಥ್, ಚಿದಾನಂದ, ರವಿ, ಹಾಗೂ ಇನ್ನೂ ಅನೇಕ ಕನ್ನಡಪರ ಹೋರಾಟಗಾರರು ಕನ್ನಡ ಪ್ರೇಮಿಗಳು ಆನಂದ್ ನಗರದ ನಿವಾಸಿಗಳು ಎಲ್ಲರೂ ಸೇರಿ ಈ ಒಂದು ಧ್ವಜಾರೋಹಣ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಾಡ ಹಬ್ಬವನ್ನು ಮನೆಯ ಹಬ್ಬವನ್ನಾಗಿ ಆಚರಣೆ ಮಾಡಿದರು.
ಗದಗ: ರೈತರ ಜಮೀನು, ದೇವಾಲಯ ಹಾಗೂ ಮಠ-ಮಾನ್ಯಗಳ ಆಸ್ತಿಗಳ ಮೇಲೆ ವಕ್ಷ ಬೋರ್ಡ್ ಹೆಸರು ದಾಖಲಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಗಜೇಂದ್ರಗಡ ಪಟ್ಟಣದಲ್ಲಿ ಬಿಜೆಪಿ ಕರೆ ನೀಡಿದ್ದ ಪ್ರತಿಭಟನೆ ವೇಳೆ ಮಾಜಿ ಸಚಿವ ಕಳಕಪ್ಪ ಬಂಡಿ ಮನವಿ ಸ್ವೀಕರಿಸಲು ತಹಶೀಲ್ದಾರ್ ತಡವಾಗಿ ಬಂದರು ಅಂತಾ ಗಜೇಂದ್ರಗಡ ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿಗೆ ಸಾರ್ವಜನಿಕರ ಎದುರಿಗೆ ನೀನು, ಈ ಸರ್ಕಾರ ಸೂರ್ಯ ಚಂದ್ರ ಇರೋವರೆಗೂ ಇರ್ತಿಯಾ ತಾಲೂಕಾ ಮೆಜಿಸ್ಟ್ರೇಟ್ ಇದ್ದೀಯಾ, ಕಾಮನ್ಸೆನ್ಸ್ ಇಲ್ವಾ, ದುಡ್ಡು ಕೊಟ್ಟು ಪೋಸ್ಟಿಂಗ್ ಮಾಡಿಸಿಕೊಳ್ಳಿರಿ, https://ainlivenews.com/be-careful-before-swallowing-dolo-650-pill-for-all-minor-diseases-see-this-story/ ಜನರಿಂದ ದುಡ್ಡು ತೆಗೆದುಕೊಳ್ಳೋದೇ ನಿಮ್ಮ ಕೆಲಸ, ರೈತರ ಪ್ರತಿಭಟನೆ ಅಂದ್ರೆ ಬೆಲೆ ಇಲ್ವಾ ಅಂತಾ ಏಕವಚನದಲ್ಲೇ ಮಾತನಾಡಿ ನಿಂದಿಸಿದ್ರು. ಆ ಹಿನ್ನೆಲೆ ಇಂದು ಕರ್ನಾಟಕ ಸರಕಾರಿ ಕಂದಾಯ ನೌಕರರ ಸಂಘದ ಗದಗ ಜಿಲ್ಲಾ ಘಟಕದಿಂದ ಗದಗ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ಮಾಡಿ ಅಧಿಕಾರಿಗಳು ಹಾಗೂ ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಿ ತಪ್ಪಿತಸ್ಥರ ವಿರುಧ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ರು.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕಿಂಗ್ ಕೊಹ್ಲಿ ಫೀಲ್ಡಿಗೆ ಎಂಟ್ರಿ ಕೊಟ್ರೆ ಎಂಥವರು ಫಿದಾ ಆಗ್ತಾರೆ. ಅಂತಹ ಫಿಟ್ನೆಸ್ ಅವರು ಕಾಪಾಡಿಕೊಂಡಿದ್ದಾರೆ. ಅವರ ಫಿಟ್ನೆಸ್ ಬಗ್ಗೆ ಅವರು ದಾಖಲೆಯೇ ಬರೆದಿದ್ದಾರೆ https://ainlivenews.com/no-need-for-exercise-or-diet-just-do-this-to-lose-belly-fat/ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುವ ವಿರಾಟ್ ಕೊಹ್ಲಿ ಮೊಸರು, ಡೈರಿ ಉತ್ಪನ್ನಗಳು, ಗೋಧಿ ಹಿಟ್ಟಿನ ಚಪಾತಿಗಳನ್ನು ತಿನ್ನುವುದಿಲ್ಲ. ಕಾರ್ಬೋಹೈಡ್ರೇಟ್ ಹೆಚ್ಚಿರುವ ಯಾವ ಊಟವನ್ನೂ ವಿರಾಟ್ ಸೇವಿಸುವುದಿಲ್ಲ. ವಿರಾಟ್‌ಕೊಹ್ಲಿ ಡಯಟ್‌ನಲ್ಲಿ ಒಂದು ವಿಶೇಷ ಅಕ್ಕಿಯಿಂದ ತಯಾರಾಗು ಅನ್ನವೂ ಸೇರಿದೆ. ಈ ಅನ್ನ ದೇಹಕ್ಕೆ ಹೆಚ್ಚು ಶಕ್ತಿ ನೀಡುತ್ತದೆ. ಕೊಹ್ಲಿ ಸಾಮಾನ್ಯವಾಗಿ ಬಳಕೆ ಮಾಡುವ ಅಕ್ಕಿಯ ಅನ್ನವನ್ನು ತಿನ್ನುವುದಿಲ್ಲವಂತೆ ಕೊಹ್ಲಿ ತಿನ್ನುವ ಈ ಅಕ್ಕಿ ಆಹಾರ ಸಂಸ್ಕರಣಾ ಘಟಕದಲ್ಲಿ ವಿಶೇಷ ರೀತಿಯಲ್ಲಿ ತಯಾರಾಗುತ್ತದೆ. ಗ್ಲುಟನ್ ಮುಕ್ತವಾಗಿರುವ ಅಕ್ಕಿಯ ಅನ್ನವನ್ನೇ ಕೊಹ್ಲಿ ತಿನ್ನುತ್ತಾರಂತೆ. ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿರುವ ಈ ವಿಶೇಷ ಅಕ್ಕಿಯ ಬೆಲೆ ಕೆಜಿಗೆ ಸುಮಾರು 400 ರಿಂದ 500 ರೂ ಅಂತೆ. ಸಿಹಿ ತಿಂಡಿಗಳನ್ನಂತೂ ಕೊಹ್ಲಿ ಮುಟ್ಟುದೇ ಇಲ್ಲವಂತೆ. ಚೋಲೆ…
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಈಶ್ವರಲಿಂಗ ಮೈದಾನದಿಂದ ಎಂ ಎಂ ಬಂಗ್ಲೆಯವರೆಗೂ ಪಾದಯಾತ್ರೆ ಮಾಡುವುದರ ಮುಖಾಂತರ ವಕ್ಫ್ ಬೋರ್ಡ್ ರದ್ದುಪಡಿಸಿ ಮತ್ತು ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತು. ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿಯು ಮಂಗಳವಾರ ರಂದು ತಾಲೂಕಿನ ದಾದ್ಯಂತ ಪ್ರತಿಭಟನೆ ಬಿಜೆಪಿ ಪ್ರೊಟೆಸ್ಟ್ ನಡೆಸಿದ್ದು.ವಕ್ಫ್ ಆಸ್ತಿ ಕುರಿತ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು, ಅಧಿಕಾರ ದುರ್ಬಳಕೆ ಕುರಿತು ಸಿಬಿಐ ತನಿಖೆ ನಡೆಸಬೇಕು ಮತ್ತು ವಿವಾದಕ್ಕೆ ಕಾರಣವಾದ ಸಚಿವ ಜಮೀರ್ ಅಹ್ಮದ್ ಖಾನ್ ಸಚಿವ ಸಂಪುಟದಿಂದ ಕೈ ಬಿಡಬೇಕೆಂದು ಬಿಜೆಪಿಯ ಆಗ್ರಹಿಸಿದರು. ಇದೇ ವೇಳೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ನಗರಸಭಾ ಸದಸ್ಯರ ಸಂಜಯ ತೆಗ್ಗಿ ಲವ್ ಜಿಹಾದ್ ಮಾಡಿ ಹಿಂದೂ ಹೆಣ್ಮಕ್ಕಳನ್ನ ಮತಾಂತರ ಮಾಡಿಯಾಯ್ತು.ಈಗ ಲ್ಯಾಂಡ್ ಜಿಹಾದ್ ಮೂಲಕ ರೈತರ ಜಮೀನನ್ನು ಕನ್ವರ್ಷನ್ ಮಾಡ್ತಿದ್ದಾರೆ ಎಂದು ಕಿಡಿ ಕಾರಿದರು. ರಾಜ್ಯ ಸರ್ಕಾರ ಅನ್ನದಾತರ ತಲೆ ಮೇಲೆ ಚಪ್ಪಡಿಕಲ್ಲು ಎಳೆದಿದೆ. ಜಮೀರ್ ರೈತರ ಜಮೀನು ಕಬಳಿಕೆಗೆ ಮುಂದಾಗಿದ್ದಾರೆ.…
ಹೊಟ್ಟೆಯ ಬೊಜ್ಜು ದೇಹದ ಆಕಾರವನ್ನು ಹಾಳುಗೆಡುವುದಲ್ಲದೇ, ಅನೇಕಾನೇಕ ಆರೋಗ್ಯ ಸಮಸ್ಯೆಗಳನ್ನು ಸ್ವಾಗತಿಸುತ್ತದೆ. ಅದಕ್ಕಾಗಿ ಹೊಟ್ಟೆ ಭಾಗದಲ್ಲಿರುವ ಬೊಜ್ಜನ್ನು ಕರಗಿಸಲು ಹೆಚ್ಚಿನ ಆದ್ಯತೆ ನೀಡಬೇಕು. ವ್ಯಾಯಾಮ, ಆಹಾರ, ಕೆಲ ಪಾನೀಯಗಳು ಬೆಲ್ಲಿ ಫ್ಯಾಟ್ ಕರಗಿಸಲು ಸಹಕಾರಿಯಾಗಿದೆ. ಅದ್ರೂಲ್ಲೂ ಕೆಲ ಪಾನೀಯಗಳು ಮ್ಯಾಜಿಕ್ ರೀತಿ ನಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸಿ ಬಿಡುತ್ತದೆ. https://ainlivenews.com/fir-against-kumaraswamy-dk-shivakumar-says-he-does-not-know/ ಹೀಗಾಗಿ ರಾತ್ರಿಯ ಮಲಗುವ ಮೊದಲು ಈ ಪಾನೀಯಗಳನ್ನು ಕುಡಿಯುವುದರಿಂದ ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುತ್ತದೆ. ರಾತ್ರಿ ಮಲಗುವ ಎರಡು ಗಂಟೆಗಳ ಮೊದಲು ಊಟ ಮಾಡಬೇಕು. ನಂತರ ಮಲಗುವ ಅರ್ಧ ಗಂಟೆ ಮುನ್ನ ಈ ಪಾನೀಯ ಸೇವಿಸಬೇಕು. ಇದರಿಂದ ಹೃದ್ರೋಗ ಮತ್ತು ಮಧುಮೇಹದ ಅಪಾಯ ಕಡಿಮೆಯಾಗುತ್ತದೆ ಜೊತೆಗೆ ನಿಮ್ಮ ತೂಕ ಕೂಡ ವೇಗವಾಗಿ ಇಳಿಯುತ್ತದೆ. ಮೆಂತ್ಯ ನೀರು ಮೆಂತ್ಯ ಕಾಳುಗಳನ್ನು ನೀರಿನಲ್ಲಿ ನೆನೆಸಿ. ಈ ನೀರಿಗೆ ಜೇನುತುಪ್ಪ ಬೆರೆಸಿ ಮಲಗುವ ಮುನ್ನ ಕುಡಿಯಿರಿ. ಇದು ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ಮೆಂತ್ಯ ಕಾಳಿನಲ್ಲಿ ನಾರಿನಂಶ ಹೆಚ್ಚಿದ್ದು, ಹಸಿವನ್ನು ತಡೆಯಲು ಸಹಾಯ ಮಾಡುತ್ತದೆ. ಹೊಟ್ಟೆಯ ಬೊಜ್ಜನ್ನು…
ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಎರಡು ಕುಟುಂಬಗಳು ಮದ್ಯ ತೀವ್ರ ಹೊಡೆದಾಟದ ಪರಿಣಾಮ ಸಂತ್ರಸ್ತ ಕುಟುಂಬದ 5 ಜನರು ಆಸ್ಪತ್ರೆಯಲ್ಲಿ ಚಿಕಿಕ್ಷೆ ಪಡೆಯುತ್ತಿದ್ದರೆ ಆರೋಪಿ ಸ್ಥಾನದಲ್ಲಿದಲ್ಲಿರುವ ಕುಟುಂಬದ ಸದಸ್ಯರು ಸೇರೇಮನೆವಾಸ ಅನುಭವಿಸುತ್ತಿದ್ದಾರೆ ಇದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಕನೂರ ಗ್ರಾಮದ ಹೊರವಲಯದಲ್ಲಿ ನಡೆದ ಘಟನೆ ಕುರಿತಂತೆ ರಕ್ಷಣೆ ಒದಗಿಸಲು ಬಂದ ಪೊಲೀಸ್ ಅಧಿಕಾರಿಯೊಬ್ಬರು ಮಾನವೀಯತೆ ಮೆರೆದ ಅಪರೂಪದ ಪ್ರಸಂಗ ನಡೆದಿದೆ ಹಾರೂಗೇರಿ ಪೊಲೀಸ್ ಠಾಣೆಯ ಮುಖ್ಯ ಪೊಲೀಸ್ ಪೇದೆ ಅರ್ಜುನ್ ಬಾಡಗಿಯವರ ಮಾನವೀಯತೆ ಮೆರೆದ ಪ್ರಸಂಗ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ ಆರೋಪಿ ಕರೆಪ್ಪ ಮಾಂಗ ರವರ ತೋಟದ ಮನೆಯಲ್ಲಿ ಜಾನುವಾರುಗಳು ಮೆವಿಲ್ಲದೆ ಹಸಿವಿನಿಂದ ಒದ್ದಾಡುತ್ತಿರುವಾಗ ಪೊಲೀಸ್ ಅಧಿಕಾರಿಯೇ ಗದ್ದೆಗೆ ಹೋಗಿ ಮೇವು ಮಾಡಿಕೊಂಡು ಬಂದು ಕತ್ತರಿಸಿ ಮೂಖ ಪ್ರಾಣಿಗಳಾದ ಎಮ್ಮೆಗಳು, ಆಕಳುಗಳು ಮೇಕೆಗಳ ಹಸಿವು ಮತ್ತು ದಾಹ ತನಿಸುವ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಪೊಲೀಸ್ ಎಂದರೆ ಹೆದರಿಸುವದು, ಬೇದರಿಸುವದು, ವಕ್ರಭಾಷೆ ಇತರೆ ಮನಸುಗಳು ಬೇಡವಲ್ಲದ ಕೆಲಸ…
ಬೆಂಗಳೂರು:- ವಿಪರೀತ ಲಂಚ, ಅಕ್ರಮ ಲೈಸೆನ್ಸ್ ನೀಡುವಿಕೆ ಸೇರಿದಂತೆ ಅಬಕಾರಿ ಇಲಾಖೆಯ ಭಾರಿ ಭ್ರಷ್ಟಾಚಾರವನ್ನು ವಿರೋಧಿಸಿ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕ ನೇತೃತ್ವದಲ್ಲಿ ಮದ್ಯ ಸನ್ನದುದಾರರು ರಾಜ್ಯಾದ್ಯಂತ ನವೆಂಬರ್ 20ರಂದು ಮದ್ಯದಂಗಡಿ ಬಂದ್ ಮಾಡಲು ನಿರ್ಧರಿಸಿದೆ. https://ainlivenews.com/lab-attendant-who-did-ecg-test-for-patient-after-watching-youtube-video-viral/ ಕುಡುಕರಿಗೆ ಇದು ಬಿಗ್ ಶಾಕ್ ಆಗಿದೆ., ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಬಕಾರಿ ಇಲಾಖೆಯು ಮದ್ಯದಂಗಡಿಗಳಿಂದ ‘ಮಂಥ್ಲಿ ಮನಿ’ ಹೆಸರಿನಲ್ಲಿ ಲಂಚ ಪಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯ ಮಾರಾಟ ವ್ಯಾಪಾರಿಗಳಿಂದ ಮಾಸಿಕ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಕರ್ನಾಟಕ ವೈನ್ ಮರ್ಚೆಂಟ್ ಅಸೋಸಿಯೇಷನ್ ಆರೋಪಿಸಿದ್ದು, ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ನ.20ರಂದು ರಾಜ್ಯಾದ್ಯಂತ ಮದ್ಯದಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ಮುಂದಾಗಿದೆ. ಲಂಚ, ಅಕ್ರಮ ಲೈಸೆನ್ಸ್ ನವೀಕರಣ ಸೇರಿದಂತೆ ಅಬಕಾರಿ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ಇದನ್ನು ವಿರೋಧಿಸಿ ಫೆಡರೇಷನ್…