Author: AIN Author

ಮೆಗಾ ಹರಾಜಿಗೂ ಮುನ್ನವೇ ಐಪಿಎಲ್​ನಿಂದ ಬೆನ್ ಸ್ಟೋಕ್ಸ್ ಔಟ್ ಆಗಿದ್ದಾರೆ. ಈ ಬಾರಿಯ ಮೆಗಾ ಹರಾಜಿಗಾಗಿ ಇಂಗ್ಲೆಂಡ್​ನ 52 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದಾಗ್ಯೂ ಸ್ಟೋಕ್ಸ್ ಅವರು ಹೆಸರು ರಿಜಿಸ್ಟರ್ ಮಾಡಿಕೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಮುಂಬರುವ ಆ್ಯಶಸ್ ಸರಣಿ ಎನ್ನಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಟೆಸ್ಟ್ ಸರಣಿಯ ಸಿದ್ಧತೆಗಾಗಿ ಸ್ಟೋಕ್ಸ್ ಐಪಿಎಲ್​ ಸೀಸನ್​-18 ರಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ https://ainlivenews.com/cm-siddaramaiah-attended-corruption-case-investigation-for-the-first-time/ ಇದಕ್ಕೂ ಮುನ್ನ ಐಪಿಎಲ್ 2023 ರ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಬರೋಬ್ಬರಿ 16.25 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಗಾಯದ ಕಾರಣ ಸ್ಟೋಕ್ಸ್ ಆಡಿದ್ದು ಕೇವಲ 2 ಪಂದ್ಯಗಳನ್ನು ಮಾತ್ರ. ಅಲ್ಲದೆ ಐಪಿಎಲ್ 2024 ರಿಂದ ಹೊರಗುಳಿದಿದ್ದರು. ಇದೀಗ ಐಪಿಎಲ್ 2025 ರಿಂದಲೂ ಸ್ಟೋಕ್ಸ್ ಹಿಂದೆ ಸರಿದಿದ್ದಾರೆ. ಐಪಿಎಲ್​ನ ಹೊಸ ನಿಯಮಗಳ ಪ್ರಕಾರ, ತಂಡಗಳಿಗೆ ಆಯ್ಕೆಯಾದ ಬಳಿಕ ಟೂರ್ನಿಯಿಂದ ಹಿಂದೆ ಸರಿದರೆ ಆ ಆಟಗಾರನ ಮೇಲೆ 2 ವರ್ಷಗಳ ನಿಷೇಧ ಹೇರಲಾಗುತ್ತದೆ. ಈ…

Read More

ಮೈಸೂರು: ಲೋಕಾಯುಕ್ತ ಮುಡಾ ಹಗರಣಕ್ಕೆ ಸಂಬಂಧಿಸಿ ಎಲ್ಲಾ ಆರೋಪಿಗಳ ವಿಚಾರಣೆ ನಡೆಸಿತ್ತು. ಇದೀಗ ಸಿಎಂ ಸಿದ್ದರಾಮಯ್ಯನವರ ಸರದಿ ಬಂದಿದೆ. ಇನ್ನು ಸಿದ್ದರಾಮಯ್ಯ ಅವರ ಜೀವನದ ಮೊದಲ ವಿಚಾರಣೆ ಇದಾಗಿದೆ. ಅವರು ಸುಮಾರ 40 ವರ್ಷಗಳಿಂದ ರಾಜಕಾರಣದಲ್ಲಿದ್ದು, ಯಾವುದೇ ರೀತಿ ಪ್ರಕರಣದಲ್ಲಿ ಆರೋಪಿಯಾಗಿ ವಿಚಾರಣೆ ಎದುರಿಸಿರಲಿಲ್ಲ. ಆದರೆ ಇದೀಗ ಸಿದ್ದರಾಮಯ್ಯನವರಿಗೆ ಮುಡಾ ಕಂಟಕ ಎದುರಾಗಿದ್ದು, ತಮ್ಮ 40 ವರ್ಷ ಸುದೀರ್ಘ ರಾಜಕಾರಣದಲ್ಲಿ ಇದೇ ಮೊದಲ ಬಾರಿಗೆ ಲೋಕಾಯುಕ್ತದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. https://ainlivenews.com/there-is-a-great-job-opportunity-in-union-bank-salary-%e2%82%b9-85000-for-degree-pass/ ಮೈಸೂರು ನಗರದ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ಲೋಕಾಯುಕ್ತ ಕಚೇರಿಗೆ ಸಿಎಂ ಸಿದ್ದರಾಮಯ್ಯ ಅವರು ಕಾರು ಮೂಲಕ ಆಗಮಿಸಿದ್ದಾರೆ. ಬಳಿಕ ಮುಡಾ ಕೇಸ್​​ಗೆ ಸಂಬಂಧ ಪಟ್ಟಂತೆ ಲೋಕಾಯುಕ್ತ ಎಸ್​​ಪಿ ಉದೇಶ್ ಮುಂದೆ ಸಿಎಂ ವಿಚಾರಣೆಗೆ ಹಾಜರಾಗಿದ್ದಾರೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಎ1 ಆರೋಪಿಯಾಗಿದ್ದು ಈ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಲೋಕಾಯುಕ್ತ ಅಧಿಕಾರಿಗಳು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್‌ ನೋಟಿಸ್‌ ಬೆಂಗಳೂರು ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಅಧಿಕಾರ…

Read More

ಹಾವೇರಿ: ಸಿಎಂ ಸಿದ್ದರಾಮಯ್ಯ ಉಪಚುನಾವಣೆ ಅಖಾಡದಲ್ಲಿ ಅಬ್ಬರಿಸುತ್ತಿರುವಾಗಲೇ, ಅವರಿಗೆ ಮುಡಾ ಹಗರಣ ಮಗ್ಗಲ ಮುಳ್ಳಾಗಿ ಕಾಡುತ್ತಿದೆ. 40 ವರ್ಷಗಳಿಂದ ನಾನು ಮಂತ್ರಿಯಾಗಿದ್ದೀನಿ. ದುಡ್ಡು ಮಾಡಬೇಕು ಎಂದಿದ್ದರೆ ಬೇಕಾದಷ್ಟು ಮಾಡಬಹುದಿತ್ತು. ಕೇವಲ 14 ಸೈಟುಗಳಿಗಾಗಿ ನಾನು ತಪ್ಪು ಮಾಡ್ತೀನಾ? ಎಂದು ಸಿಎಂ ಸಿದ್ದರಾಮಯ್ಯ ತನ್ನ ಮೇಲಿರುವ ಮುಡಾ ಕೇಸ್‌ ಬಗ್ಗೆ ಮಾತನಾಡಿದ್ದಾರೆ. 40 ವರ್ಷಗಳಿಂದ ನಾನು ಮಂತ್ರಿಯಾಗಿದ್ದೀನಿ. ಮುಖ್ಯಮಂತ್ರಿಯಾಗಿದ್ದೀನಿ. ಸಣ್ಣ ಕಪ್ಪು ಚುಕ್ಕೆ ಕೂಡ ನನ್ನ ಮೇಲಿಲ್ಲ. ಆದರೂ ನನ್ನ ಪತ್ನಿ ಮೇಲೆ ಸುಳ್ಳು ಆರೋಪ ಮಾಡಿ ನನ್ನನ್ನು ತೇಜೋವಧೆ ಮಾಡುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದರು. https://ainlivenews.com/there-is-a-great-job-opportunity-in-union-bank-salary-%e2%82%b9-85000-for-degree-pass/ ಕೇವಲ 14 ಸೈಟುಗಳಿಗಾಗಿ ನಾನು ತಪ್ಪು ಮಾಡ್ತೀನಾ? ದುಡ್ಡು ಮಾಡಬೇಕು ಎಂದಿದ್ದರೆ ಬೇಕಾದಷ್ಟು ಮಾಡಬಹುದಿತ್ತು. ಆದರೆ ನನ್ನ ತಪ್ಪುಗಳು ಏನೇನೂ ಇಲ್ಲದ ಕಾರಣದಿಂದ ಸುಳ್ಳು ಆರೋಪ ಹೊರಿಸಿ ಷಡ್ಯಂತ್ರ ಹೆಣೆದು ನನ್ನನ್ನು ಕೆಳಗಿಳಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ನಾಡಿನ ಜನತೆ ಅವಕಾಶ ಕೊಡುವುದಿಲ್ಲ ಎನ್ನುವ ಗ್ಯಾರಂಟಿ ನನಗಿದೆ ಎಂದು ಹೇಳಿದರು.

Read More

ಬೆಂಗಳೂರು:- ವಾಹನ ಸವಾರರು ಈ ಸುದ್ದಿ ಮಿಸ್ ಮಾಡ್ದೆ ನೋಡಿ. ನಗರದ ಹಲವು ರಸ್ತೆಗಳ ಸಂಚಾರ ಬಂದ್ ಇರಲಿದೆ. ವೈಟ್​ ಟಾಪಿಂಗ್​ ಕಾಮಗಾರಿ ಹಿನ್ನೆಲೆ ಸಂಚಾರ ನಿರ್ಬಂಧಿಸಲಾಗಿದೆ. ಈ ಸಂಬಂಧ ಸಂಚಾರಿ ಪೊಲೀಸರು ಮಾಹಿತಿ ಕೊಟ್ಟಿದ್ದಾರೆ. https://ainlivenews.com/yash-radhika-pandit-suddenly-stepped-on-the-court-what-happened-to-the-star-couple-baal/ ನಗರದ ಹಲವು ರಸ್ತೆಗಳಿಗೆ ವೈಟ್​ ಟಾಪಿಂಗ್​ ಕಾಮಗಾರಿ ನಡೆಯುತ್ತಿದ್ದು, ಸಂಚಾರ ನಿರ್ಬಂಧಿಸಲಾಗಿದೆ. ವಿದ್ಯಾನಗರ ಕ್ರಾಸ್​ನಿಂದ ಬೆಲಕಾಂ ಲೇಔಟ್ ರಸ್ತೆ, ದೇವರಬೀಸನಹಳ್ಳಿ ಸಕ್ರಾ ಆಸ್ಪತ್ರೆ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ವಿದ್ಯಾನಗರ ಕ್ರಾಸ್‌ನ ವಿಎನ್​ಎಸ್​ಐಟಿ ಕಾಲೇಜು ಕಡೆಗೆ ಹೋಗುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿರುವ ಕಾರಣ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನವೆಂಬರ್​ 14ರವರೆಗೆ ವಿದ್ಯಾನಗರ ಕ್ರಾಸ್ ನಿಂದ ಬೆಲಕಾಂ ಲೇಔಟ್ ವರೆಗೆ ಸಂಚಾರವನ್ನು ನಿರ್ಭಂದಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಪರ್ಯಾಯ ಮಾರ್ಗಗಳು ವಿದ್ಯಾನಗರ ಕಡೆಯಿಂದ ಉತ್ತನಹಳ್ಳಿಗೆ ಹೋಗುವ ವಾಹನಗಳು ಬಿ.ಎಂ.ಡಬ್ಲ್ಯೂ ಕಾರ್ ಶೋರೂಂ -ಶಕ್ತಿ ನಗರ- ಆಕ್ಸ್‌ಫರ್ಡ್ ಸ್ಕೂಲ್ – ಅಲ್ಲಮಾರನಹಳ್ಳಿ- ಬೆಲಿಕಾಂ ಲೇಔಟ್ ಮೂಲಕ ಉತ್ತನಹಳ್ಳಿ ಮುಖ್ಯ…

Read More

ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಚಿನ್ನ, ಬೆಳ್ಳಿ ಬೆಲೆಯಲ್ಲಿ ಅಲ್ಪ ಇಳಿಕೆ ಆಗಿದೆ. https://ainlivenews.com/govt-cant-acquire-all-private-properties-supreme-judgment/ ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 73,540 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 80,230 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,590 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 73,540 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,590 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ನವೆಂಬರ್ 6ಕ್ಕೆ) 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,540 ರೂ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 80,230 ರೂ 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,170 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 95.90 ರೂ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ:…

Read More

ನವದೆಹಲಿ: ಖಾಸಗಿ ಆಸ್ತಿಗಳ ಮೇಲೆ ಸರ್ಕಾರಿ ಹಕ್ಕಿನ ವ್ಯಾಪ್ತಿ ಎಲ್ಲಿಯವರೆಗೆ ಇದೆ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಎಲ್ಲಾ ಖಾಸಗಿ ಹಕ್ಕುಗಳ ಮೇಲೆ ರಾಜ್ಯ ಸರ್ಕಾರಗಳ ಮೇಲೆ ಹಕ್ಕುಗಳು ಇರುವುದಿಲ್ಲ ಎಂದು ಕೋರ್ಟ್‌ ಸ್ಪಷ್ಟವಾಗಿ ತಿಳಿಸಿದೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ, ಖಾಸಗಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂದು ನ್ಯಾ. ಕೃಷ್ಣಯ್ಯರ್ ನೀಡಿದ್ದ ತೀರ್ಪನ್ನು 8:1 ಬಹುಮತದೊಂದಿಗೆ ವಜಾ ಮಾಡಿದೆ. ಸಂವಿಧಾನದ ಆರ್ಟಿಕಲ್ 39(ಬಿ)ಪ್ರಕಾರ ಖಾಸಗಿಯವರ ಮಾಲೀಕತ್ವದ ಎಲ್ಲಾ ಸಂಪನ್ಮೂಲಗಳನ್ನು ವಶಕ್ಕೆ ಪಡೆಯುವ ಹಕ್ಕು ರಾಜ್ಯ ಸರ್ಕಾರಗಳಿಗೆ ಇರಲ್ಲ ಎಂದು ಸಿಜೆಐ ಚಂದ್ರಚೂಡ್‌ ನೇತೃತ್ವದ 9 ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನಿಕ ಪೀಠ ಸ್ಪಷ್ಟವಾಗಿ ತಿಳಿಸಿದೆ. https://ainlivenews.com/there-is-a-great-job-opportunity-in-union-bank-salary-%e2%82%b9-85000-for-degree-pass/ ಕೆಲವೇ ಪ್ರಕರಣಗಳಲ್ಲಿ ಇದಕ್ಕೆ ವಿನಾಯ್ತಿ ಇರಲಿದೆ ಎಂದು ಸಾಂವಿಧಾನಿಕ ಪೀಠ ತಿಳಿಸಿದೆ. ಈ ವಿಚಾರವನ್ನು 1950ರ ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಲಾಗದು. ಅಂದು ರಾಷ್ಟ್ರೀಕರಣ ನಡೆದಿತ್ತು. ಆದರೆ ಇಂದು ಹೂಡಿಕೆ ವಾಪಸಾತಿ ನಡೆಯುತ್ತಿದೆ. ಖಾಸಗಿ ಹೂಡಿಕೆ ಇದೆ. ಇದು ಪರಿವರ್ತನೆ. ಹೀಗಾಗಿ ಇಂದಿನ ಸ್ಥಿತಿಗೆ…

Read More

ಬೆಂಗಳೂರು: ಮುಡಾ ಹಗರಣ ರಾಜ್ಯದಲ್ಲಷ್ಟೇ ಅಲ್ಲದೇ ಇಡೀ ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದೀಗ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯಗೆ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. https://ainlivenews.com/indiscriminate-attack-on-mother-who-did-not-pay-for-drinking-mother-died-without-treatment/ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿರುವ ಹಿನ್ನೆಲೆ, ಲೋಕಾ ಕಚೇರಿಯಲ್ಲಿ ಇಂದು ಸಿದ್ದರಾಮಯ್ಯ ವಿಚಾರಣೆ ನಡೆಯಲಿದೆ. ರಾಜಧಾನಿ ಬೆಂಗಳೂರಿನ ಕಾವೇರಿ ನಿವಾಸದಿಂದ ಬೆಳಗ್ಗೆ ಮೈಸೂರಿನ ಲೋಕಾಯುಕ್ತ ಕಚೇರಿಗೆ ಪ್ರಯಾಣ ಬೆಳಸಿದ್ದಾರೆ. 10 ಗಂಟೆ ಬಳಿಕ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ವಿಚಾರಣೆಗೆ ಒಳಗಾಗಲಿದ್ದಾರೆ. ಇನ್ನೂ ಕೃಷ್ಣವಿಲಾಸ ರಸ್ತೆ ಮತ್ತು ದಿವಾನ್ಸ್‌ ರಸ್ತೆ ಜಂಕ್ಷನ್‌ನಲ್ಲಿ ಇರುವ ಲೋಕಾಯುಕ್ತ ಕಚೇರಿಯನ್ನು ಸಂಪರ್ಕಿಸುವ ರಸ್ತೆಗಳನ್ನು ಬಂದ್‌ ಮಾಡುವ ಮೂಲಕ ವಿಚಾರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಿದ್ದಾರೆ. ಬುಧವಾರ ಬೆಳಗ್ಗೆ ಸಿಎಂ ಆಗಮನದ ಹಿನ್ನೆಲೆಯಲ್ಲಿ ದೇವರಾಜ ಠಾಣೆಯಲ್ಲಿ ಪೊಲೀಸ್‌ ಅಕಾರಿಗಳ ಸಭೆ ನಡೆಸಿದ ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ಅವರು, ಅಗತ್ಯ ಸೂಚನೆಗಳನ್ನು ಪೊಲೀಸ್‌ ಅಕಾರಿಗಳು ಮತ್ತು ಸಿಬ್ಬಂದಿಗೆ ನೀಡಿದ್ದಾರೆ. ಲೋಕಾಯುಕ್ತ ಕಚೇರಿಯನ್ನು ಸಂಪರ್ಕಿಸುವ…

Read More

ಹಾಸನ:-ಮಗನೋರ್ವ ಕುಡಿಯಲು ಹಣ ಕೊಡದ ತಾಯಿಗೆ ಮನಬಂದಂತೆ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಿಸದೇ ತಾಯಿ ದುರ್ಮರಣ ಹೊಂದಿದ ಘಟನೆ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮಧುರನಹಳ್ಳಿ ಗ್ರಾಮದಲ್ಲಿ ಜರುಗಿದೆ. https://ainlivenews.com/a-couple-died-on-the-spot-after-a-collision-between-a-lorry-and-a-car/ ಕುಡಿಯಲು ಹಣ ನೀಡದ ಕಾರಣಕ್ಕೆ ಮನಬಂದಂತೆ ಥಳಿಸಿ ತಾಯಿಯನ್ನೇ ಮಗ ಕೊಂದಿದ್ದಾನೆ. 61 ವರ್ಷದ ಚಿಕ್ಕಮ್ಮ ಕೊಲೆಯಾದ ದುರ್ದೈವಿ. 26 ವರ್ಷದ ಭರತ್ ಕೊಲೆ ಮಾಡಿದ ಪಾಪಿ ತಂದೆ. ಭರತ್ ಎಂಬಾತ ಕುಡಿತದ ದಾಸನಾಗಿದ್ದು, ಪೈಂಟ್ ಕೆಲಸ ಮಾಡುತ್ತಿದ್ದ. ಈತ ಅ.29ರಂದು ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದು, ತಾಯಿ ಚಿಕ್ಕಮ್ಮ ಬಳಿ ಕುಡಿಯಲು ಹಣ ನೀಡುವಂತೆ ಒತ್ತಾಯಿಸಿದ್ದನು. ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ಭರತ್ ಕೋಪಗೊಂಡು ಚಿಕ್ಕಮ್ಮನಿಗೆ ದೊಣ್ಣೆಯಿಂದ ಹೊಡೆದು, ತಲೆಯನ್ನು ಗೋಡೆಗೆ ಬಡಿದು ಪರಾರಿಯಾಗಿದ್ದಾನೆ. ಹಲ್ಲೆಗೊಳಗಾಗಿ ಚಿಕ್ಕಮ್ಮ ಕುಸಿದು ಬಿದ್ದಿರುವುದನ್ನು ಗ್ರಾಮಸ್ಥರು ಕಂಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಚಿಕ್ಕಮ್ಮ ಸಾವನ್ನಪ್ಪಿದ್ದಾರೆ.

Read More

ಗದಗ:- ಭೀಕರ ಅಪಘಾತ ಸಂಭವಿಸಿ ಲಾರಿ, ಕಾರು ನಡುವೆ ಡಿಕ್ಕಿ ಹೊಡೆದು ಸ್ಥಳದಲ್ಲೇ ದಂಪತಿ ದುರ್ಮರಣ ಹೊಂದಿದ ಘಟನೆ ಜರುಗಿದೆ. https://ainlivenews.com/be-careful-before-swallowing-dolo-650-pill-for-all-minor-diseases-see-this-story/ ಗದಗ ಜಿಲ್ಲೆ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಬಳಿ ಘಟನೆ ಜರುಗಿದೆ. ಸಿದ್ದರಾಮ ಹಾಗೂ ಹೇಮಾ ಮೃತ ದಂಪತಿ. ಮಕ್ಕಳಾದ ಮಲ್ಲಿಕಾರ್ಜುನ ಹಾಗೂ ಸಹನಾ ಗಾಯಾಳುಗಳು ನರಗುಂದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಕುಟುಂಬಸ್ಥರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಪೂಜೆ ಮುಗಿಸಿಕೊಂಡು ಮರಳಿ ಊರಿಗೆ ಬರುತ್ತಿದ್ದಾಗ ದಾರಿ ಮಧ್ಯೆ ಈ ದುರ್ಘಟನೆ ನಡೆದಿದೆ. ಲಾರಿ ಹುಬ್ಬಳ್ಳಿ ಕಡೆಗೆ ಹೊರಟಿತ್ತು, ಕಾರು ಬಾಗಲಕೋಟೆಗೆ ಹೊರಟಿತ್ತು. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಜಿಲ್ಲೆಯ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಸ್ಥಾನಕ್ಕೆಂದು ಹೋದವರು ಶಾಶ್ವತವಾಗಿ ದೇವರ ಪಾದ ಸೇರಿದ್ದಾರೆ. ಮಕ್ಕಳು ಅನಾಥರಾಗಿದ್ದು ನಿಜಕ್ಕೂ ದುರಂತವೆ ಸರಿ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Read More

ವಾಸ್ತು ಶಾಸ್ತ್ರವನ್ನು ಚಾಚೂ ತಪ್ಪದೆ ಅನುಸರಿಸಿದರೆ ಮನೆಯಲ್ಲಿ ಸುಖ ಸಮೃದ್ಧಿ, ಯಶಸ್ಸು, ಶಾಂತಿ ನೆಲೆಸುವುದು ಖಚಿತ. ವಾಸ್ತು ಶಾಸ್ತ್ರದ ಅನುಸಾರ ರೂಢಿಗತವಾಗಿ ಕೆಲವೊಂದು ನಿರ್ದಿಷ್ಟ ನೀತಿ ನಿಯಮಗಳನ್ನು ಪಾಲಿಸುವುದು ಉಚಿತ. ಅದು ಶುಭ ಮತ್ತು ಶ್ರೇಯಸ್ಕರವೂ ಹೌದು. ಅದರಿಂದ ಮನೆಯಲ್ಲಿ ಧನಾತ್ಮಕತೆ ಹೆಚ್ಚಾಗಿ ಖುಣಾತ್ಮಕ ಪ್ರಭಾವನ್ನು ತಗ್ಗಿಸುತ್ತದೆ. ಆದರೆ ಕೆಲವು ಇರುತ್ತದೆ. ಅದನ್ನು ಮಾಡುವುದರಿಂದ ಮನೆಯಲ್ಲಿ ಖುಣಾತ್ಮಕತೆ ಹೆಚ್ಚಾಗಿಬಿಡುತ್ತದೆ. ಕೆಲವು ಗಿಡಗಳನ್ನು ಮನೆಯಲ್ಲಿ ಬೆಳೆಸುವುದು ಅಶುಭವೆನಿಸುತ್ತದೆ. ಹಾಲು ಬರುವ ಮರ ನೀವು ಹಾಲು ಬರುವ ಮರಗಳನ್ನು ಅನೇಕ ಸ್ಥಳಗಳಲ್ಲಿ ನೋಡಿರಬಹುದು, ಅದರ ಕೊಂಬೆ ಅಥವಾ ಎಲೆಗಳು ಮುರಿದಾಗ, ಬಿಳಿ ಬಣ್ಣದ ಅಂಟು ಪದಾರ್ಥವು ಅವುಗಳಿಂದ ಹೊರಬರುತ್ತೆ. ವಾಸ್ತು ಶಾಸ್ತ್ರದ ಪ್ರಕಾರ, ಅಂತಹ ಮರ ಅಥವಾ ಅದರಿಂದ ತಯಾರಿಸಿದ ವಸ್ತುಗಳನ್ನು ಎಂದಿಗೂ ಮನೆಯಲ್ಲಿ ಇಡಬಾರದು. ಹುಣಸೆ ಮರ ಹುಳಿ ಮತ್ತು ತಿನ್ನಲು ಮೋಜಿನ ಹುಣಸೆ ಮರವು ನಕಾರಾತ್ಮಕ ಶಕ್ತಿಯ ಮೂಲವಾಗಿದೆ. ಅದಕ್ಕಾಗಿಯೇ ಹುಣಸೆ ಮರವನ್ನು ಎಂದಿಗೂ ಮನೆಯೊಳಗೆ ನೆಡಬಾರದು ಅಥವಾ ಮನೆಯ ಮುಂದೆ…

Read More