ಚನ್ನಪಟ್ಟಣ: ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಎನ್ಡಿಎ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿರವರ ಪರವಾಗಿ ಕ್ಷೇತ್ರದ ಮಾರೇಗೌಡನದೊಡ್ಡಿ (ಎಮ್.ಜಿ ದೊಡ್ಡಿ), ನೆಲಮಾಕನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಮತಯಾಚಿಸಿದರು.ಚನ್ನಪಟ್ಟಣ ಕ್ಷೇತ್ರದ ಮಾರೇಗೌಡನದೊಡ್ಡಿ (ಎಮ್.ಜಿ ದೊಡ್ಡಿ), ನೆಲಮಾಕನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರನ್ನು ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡು, ಸನ್ಮಾನಿಸಿ ಗೌರವಿಸಿದರು. ಈ ವೇಳೆ ಮಾತನಾಡಿದ ಬಂಡೆಪ್ಪ ಖಾಶೆಂಪುರ್ ರವರು, ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಸಿ.ಪಿ ಯೋಗೇಶ್ವರ್ ರವರು ಚನ್ನಪಟ್ಟಣ ಜನರಿಗೆ ಮೋಸ ಮಾಡಿದ್ದಾರೆ. ಎಲ್ಲಾ ಪಕ್ಷಗಳಿಗೆ ಅವರು ಜಂಪ್ ಮಾಡ್ಕೊಂಡು ಸಾಗುತ್ತಿದ್ದಾರೆ. ಅವರಿಗೆ ಚನ್ನಪಟ್ಟಣ ಕ್ಷೇತ್ರದ ಜನರು ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು. ಸಿ.ಪಿ ಯೋಗೇಶ್ವರ್ ರವರಿಗೆ ನಾವು ಜೆಡಿಎಸ್, ಬಿಜೆಪಿ ಎರಡು ಪಕ್ಷಗಳಿಂದ ಟಿಕೆಟ್ ಕೊಡಲು ಸಿದ್ದರಿದ್ದೇವು. ಆದರೇ ಅವರು ಕಾಂಗ್ರೆಸ್ ಗೆ ಹೋಗುವ ನಿರ್ಧಾರವನ್ನ…
Author: AIN Author
ಬೆಂಗಳೂರು:- ಪತಿಯಿಂದ ಪತ್ನಿ ಕತ್ತು ಕೊಯ್ದು ಬರ್ಬರ ಹತ್ಯೆ ನಡೆದಿರುವ ಘಟನೆ ಜೀವನ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. https://ainlivenews.com/dont-make-this-mistake-while-walking-and-jogging-in-winter-follow-the-timing/ ಸಂಗೀತ ಮೃತ ದುರ್ದೈವಿ ಎನ್ನಲಾಗಿದೆ. ಪತಿ ನಾಗರಾಜ್ ನಿಂದ ಕೃತ್ಯ ಜರುಗಿದೆ. ಪತ್ನಿ ಕತ್ತು ಕೊಯ್ದು ಬಳಿಕ ತಾನು ಕತ್ತು ಕೊಯ್ದುಕೊಂಡಿದ್ದಾರೆ. ಘಟನೆಯಿಂದ ಪತ್ನಿ ಸಾವನ್ನಪ್ಪಿದರೆ, ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. 9.30 ಸುಮಾರಿಗೆ ಈ ಘಟನೆ ಜರುಗಿದೆ. ಸ್ಥಳಕ್ಕೆ ಜೀವನ ಭೀಮಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆ ಕಾರಣ ಇನ್ನು ತಿಳಿದು ಬಂದಿಲ್ಲ. ದಂಪತಿಗೆ 4 ವರ್ಷದ ಒಂದು ಮಗು ಕೂಡ ಇದೆ. ತಮಿಳುನಾಡು ಮೂಲದ ನಾಗರಾಜ್ ಇದಾಗಿದ್ದು, ಮೃತ ಸಂಗೀತ ಚೆಲ್ಲಘಟ್ಟ ನಿವಾಸಿ ಎನ್ನಲಾಗಿದೆ.
ಮೈಸೂರು: ಸಿಎಂ ಸಿದ್ದರಾಮಯ್ಯ ಉಪಚುನಾವಣೆ ಅಖಾಡದಲ್ಲಿ ಅಬ್ಬರಿಸುತ್ತಿರುವಾಗಲೇ, ಅವರಿಗೆ ಮುಡಾ ಹಗರಣ ಮಗ್ಗಲ ಮುಳ್ಳಾಗಿ ಕಾಡುತ್ತಿದೆ. ಈಗಾಗಲೇ ಮುಡಾ ಕೇಸ್ ಸಂಬಂಧ ಮೈಸೂರಿನ ಲೋಕಾಯುಕ್ತ ಪೊಲೀಸರು ಸಿಎಂ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಭೂ ಮಾಲೀಕ ದೇವರಾಜು ಸೇರಿದಂತೆ ಹಲವರ ವಿಚಾರಣೆ ನಡೆಸಿದ್ದಾರೆ. ಪ್ರಕರಣದಲ್ಲಿ ಎ1 ಆಗಿರುವ ಸಿಎಂ ಸಿದ್ದರಾಮಯ್ಯಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದರು. ಇದೀಗ ಮೈಸೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರಿ ವಾಹನದ ಬದಲು ಖಾಸಗಿ ಕಾರ್ ಬಳಸಿದರು. https://ainlivenews.com/have-you-lost-your-driving-license-if-so-just-do-this-to-get-back/ ಬೆಂಗಳೂರಿನಿಂದ ಮೈಸೂರಿಗೆ ತೆರಳಿದ ಸಿಎಂ ಸಿದ್ದರಾಮಯ್ಯ ಅವರು ಅಲ್ಲಿ ಪೊಲೀಸ್ ಗೌರವ ವಂದನೆ ಸ್ವೀಕರಿಸಿದರು. ಸಚಿವರಾದ ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ, ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಈ ವೇಳೆ ಜತೆಗಿದ್ದರು. ಆ ಬಳಿಕ 10 ಗಂಟೆಗೆ ಲೋಕಾಯುಕ್ತ ಕಚೇರಿಗೆ ಒಬ್ಬರೇ ಆಗಮಿಸಿದ ಸಿಎಂ ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರು KA 04 MV 7666 ನಲ್ಲಿ…
ಮುಂಜಾನೆಯ ನಡಿಗೆ ಹಾಗೂ ವ್ಯಾಯಾಮವು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತವೆ. ಅವು ದೇಹದಲ್ಲಿ ಇರುವ ಅನಗತ್ಯ ಕೊಬ್ಬುಗಳನ್ನು ಕರಗಿಸುವುದರ ಮೂಲಕ ದೇಹವನ್ನು ಆರೋಗ್ಯ ವಾಗಿಡಲು ಸಹಾಯ ಮಾಡುವುದು. ಅಲ್ಲದೆ ನಮ್ಮ ಪಚನ ಕ್ರಿಯೆ, ಮಿದುಳಿನ ಆರೋಗ್ಯ, ರಕ್ತ ಪರಿಚಲನೆ, ಹೃದಯದ ಆರೋಗ್ಯ, ಚರ್ಮದ ಶಕ್ತಿಯನ್ನು ಕಾಪಾಡುವಲ್ಲಿ ಅತ್ಯಂತ ಸಹಕಾರಿಯಾಗಿದೆ. ನಾವು ನಮ್ಮ ಆರೋಗ್ಯವನ್ನು ಸೂಕ್ತ ರೀತಿಯಲ್ಲಿ ಕಾಯ್ದುಕೊಳ್ಳಬೇಕು ಎಂದರೆ ದಿನದಲ್ಲಿ ಒಂದಿಷ್ಟು ಸಮಯವನ್ನು ದೈಹಿಕ ಶ್ರಮ ಹಾಗೂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಇಲ್ಲವಾದರೆ ನಮ್ಮ ದೇಹದ ಆರೋಗ್ಯವು ಬಹುಬೇಗ ಹದಗೆಡುವುದು. https://ainlivenews.com/big-shocking-news-for-bangalore-motorists-8-months-of-traffic-jam-jam/ ಚಳಿಗಾಲ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ನಿಮ್ಮ ವಾಕಿಂಗ್ ಟೈಮಿಂಗ್ಸ್ನಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಇನ್ನೂ ಉತ್ತಮ. ಚಳಿಗಾಲದಲ್ಲೂ ಹೆಚ್ಚು ಕಾಲ ನಡೆಯಬೇಕು. ಅದಕ್ಕೆ ಒಳ್ಳೆಯ ಸಮಯವೆಂದರೆ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ. ಈ ವೇಳೆ ತಾಪಮಾನವು ಬೆಚ್ಚಗಿರುತ್ತದೆ ಮತ್ತು ಸಾಕಷ್ಟು ಹಗಲು ಬೆಳಕು ಇರುತ್ತದೆ. ಹಗಲಿನಲ್ಲಿ ನಡೆಯುವುದರಿಂದ ಅಗತ್ಯವಾದ ವಿಟಮಿನ್ ಡಿ ಸಿಗುತ್ತದೆ. ಚಳಿಗಾಲದ ಅವಧಿಯಲ್ಲಿ ಅನೇಕರು ವಿಟಮಿನ್…
ಮೈಸೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿಚಾರಣೆಯನ್ನು ಲೋಕಾಯುಕ್ತ ಪೊಲೀಸರು ಇಂದು ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆ ಎದುರಿಸುತ್ತಿರುವ ಕುರಿತು ಸ್ನೇಹಮಯಿ ಕೃಷ್ಣ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿಎಂಗೆ ನಿರ್ದಿಷ್ಟವಾಗಿ ಕೆಲವು ಪ್ರಶ್ನೆ ಕೇಳಲು ದೂರುದಾರನಾಗಿ ನಾನು ಒಂದು ಮನವಿಯನ್ನು ಲೋಕಾಯುಕ್ತರಿಗೆ ಕೊಟ್ಟಿದ್ದೇನೆ. https://ainlivenews.com/have-you-lost-your-driving-license-if-so-just-do-this-to-get-back/ ತನಿಖಾಧಿಕಾರಿ ಆ ಪ್ರಶ್ನೆಗಳನ್ನು ಆರೋಪಿ ಸ್ಥಾನದಲ್ಲಿ ಇರುವವರಿಗೆ ಕೇಳಬೇಕು. ಕೇಳದೆ ಇದ್ದರೆ ವಿಚಾರಣೆ ಪರಿಪೂರ್ಣ ಆಗಲ್ಲ. ಒಂದು ವೇಳೆ ಅವರು ಪ್ರಶ್ನೆ ಕೇಳದೆ ಇದ್ದರೆ ಲೋಕಾಯುಕ್ತ ತನಿಖಾಧಿಕಾರಿ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದರು. ಇವತ್ತಿನ ವಿಚಾರಣೆ ವೇಳೆ ಸಿದ್ದರಾಮಯ್ಯ ಅವರು ಸಿಎಂ ಅಲ್ಲ. ಒಬ್ಬ ಆರೋಪಿ ಅಷ್ಟೇ. ಇದನ್ನು ತನಿಖಾಧಿಕಾರಿ ಮರೆಯಬಾರದು ಎಂದು ಹೇಳಿದರು.
ಬೆಂಗಳೂರು:- ಬೆಂಗಳೂರು ವಾಹನ ಸವಾರರಿಗೆ ಬಿಗ್ ಶಾಕಿಂಗ್ ನ್ಯೂಸ್ ಹೊರ ಬಿದ್ದಿದ್ದು, 8 ತಿಂಗಳು ಟ್ರಾಫಿಕ್ ಜಾಮ್ ಉಂಟಾಗಿದೆ. ಜುಲೈ 29 ರಿಂದ ಪೀಣ್ಯ ಪ್ಲೈಓವರ್ ಮೇಲೆ ಎಲ್ಲಾ ಮಾದರಿಯ ವಾಹನಗಳು ಓಡಾಡಬಹುದು ಎಂದು ಐಐಎಸ್‌ಇಯಿಂದ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಆದರೆ, ಪ್ರತಿ ಶುಕ್ರವಾರ ಇಲ್ಲಿ ಫ್ಲೈಓವರ್ ಸಂಪೂರ್ಣ ಬಂದ್ ಮಾಡಬೇಕು. ವಾಹನ ಸವಾರರು ಸರ್ವೀಸ್ ರಸ್ತೆಯನ್ನೇ ಬಳಸಬೇಕು ಎಂದು ಐಐಎಸ್‌ಸಿ ತಜ್ಞರು ಸೂಚನೆ ನೀಡಿದ್ದರು. https://ainlivenews.com/bullet-train-bridge-that-was-under-construction-collapsed-and-three-workers-died/ ಈ ಹಿನ್ನೆಲೆ ದಿನನಿತ್ಯದ ಕಾರ್ಯಗಳಿಗೆ ಓಡಾಡುವ ವಾಹನ ಸವಾರರನ್ನು ಹೊರತುಪಡಿಸಿ, ವೀಕೆಂಡ್‌ಗಳಿಗೆ ತುಮಕೂರು ಮಾರ್ಗವಾಗಿ, ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ಅನೇಕ ಕಡೆಗಳಿಗೆ ಹೋಗುವವರಿಗೆ ಈ ಫ್ಲೈಓವರ್ ವರದಾನವಾಗಿತ್ತು. ಯಾವುದೇ ಟ್ರಾಫಿಕ್ ಸಮಸ್ಯೆ ಇಲ್ಲದೆ ಬೆಂಗಳೂರು ಬಿಟ್ಟು ಹೊರಹೋಗಲು ಅನುಕೂಲವಾಗುತ್ತಿತ್ತು. ಆದರೆ, ಪ್ರತಿ ಶುಕ್ರವಾರ ಈ ಫ್ಲೈಓವರ್ ಬಳಸಲು ಆಗದೆ ಜನರು ಟ್ರಾಫಿಕ್‌ನಲ್ಲೇ ಇರಬೇಕಾದ ಪರಿಸ್ಥಿತಿ ಸದ್ಯಕ್ಕಿದೆ. ಎಲ್ಲವೂ ಅಂದುಕೊಂಡಂತೆ ಸಾಗಿದ್ದರೆ, ಪಿಲ್ಲರ್‌ಗಳಲ್ಲಿ ಕೇಬಲ್ ಬದಲಿಸುವ ಕಾರ್ಯ ಕೇವಲ ಒಂದು ತಿಂಗಳಲ್ಲಿ…
ಬೆಂಗಳೂರು:- ಅಬಕಾರಿ ಸಚಿವ ತಿಮ್ಮಾಪುರರಿಂದ ವಾರಕ್ಕೆ 18 ಕೋಟಿ ರೂ. ಹಫ್ತಾ ವಸೂಲಿ ಮಾಡಲಾಗುತ್ತಿದೆ ಎಂದು ಆರ್ ಅಶೋಕ ವಾಗ್ದಾಳಿ ಮಾಡಿದ್ದಾರೆ. https://ainlivenews.com/good-news-for-employed-women-govt-announces-35-reservation/ ಕರ್ನಾಟಕ ಬಕಾರಿ ಇಲಾಖೆಯು ಮದ್ಯದಂಗಡಿಗಳಿಂದ ‘ಮಂಥ್ಲಿ ಮನಿ’ ಹೆಸರಿನಲ್ಲಿ ಲಂಚ ಪಡೆಯುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಈ ವಿಚಾರವಾಗಿ ಮಾತನಾಡಿದ ಅವರು, ಅಬಕಾರಿ ಇಲಾಖೆಯಲ್ಲಿ ಸಚಿವ ತಿಮ್ಮಾಪುರ ವಾರಕ್ಕೆ 18 ಕೋಟಿ ರೂ. ಮದ್ಯದಂಗಡಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ಮದ್ಯದಂಗಡಿ ಮಾಲೀಕರೇ ದೂರು ಕೊಟ್ಟಿದ್ದಾರೆ. ರಾಜ್ಯದಲ್ಲಿ 11 ಸಾವಿರಕ್ಕೂ ಹೆಚ್ಚು ವೈನ್ ಸ್ಟೋರ್ಗಳಿವೆ. ಪ್ರತಿಯೊಂದರಿಂದ 20 ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ ಎಂದು ಅಶೋಕ್ ಗಂಭೀರ ಆರೋಪ ಮಾಡಿದರು. ನಮ್ಮ ವಿರುದ್ಧ ಹಿಂದೆ ಪೇಸಿಎಂ ಪೋಸ್ಟರ್ ಅಂಟಿಸಿದ್ದಿರಿ. ಆಗ ನಾವು ನಿಮ್ಮನ್ನು ಸನ್ಮಾನ ಮಾಡಲು ಆಗಲಿಲ್ಲ. ಈಗ ಪೇಸಿಎಂ ಪೋಸ್ಟರ್ ಅಂಟಿಸಿದಾಗ ಹೇಳಿ ಬಂದು ಸನ್ಮಾನ ಮಾಡುತ್ತೇವೆ ಎಂದು ಅಶೋಕ್ ವ್ಯಂಗ್ಯವಾಡಿದರು. ಲೋಕಾಯುಕ್ತ ಅಧಿಕಾರಿಗಳಿಂದ ಸಿದ್ದರಾಮಯ್ಯ ವಿಚಾರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅಶೋಕ್,…
ಗಾಂಧಿನಗರ: ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್‌ನ ನಿರ್ಮಾಣ ಸ್ಥಳದಲ್ಲಿ ತಾತ್ಕಾಲಿಕ ಸೇತುವೆ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ನಿರ್ಮಾಣ ಸ್ಥಳದಲ್ಲಿ ಬುಲೆಟ್ ರೈಲು ಯೋಜನೆಗಾಗಿ ಕೆಲಸ ನಡೆಯುತ್ತಿತ್ತು. ಈ ವೇಳೆ ಸ್ಥಳದಲ್ಲಿದ್ದ ಕಾಂಕ್ರೀಟ್ ಬ್ಲಾಕ್‌ಗಳು ಕುಸಿದು ನಾಲ್ವರು ಕಾರ್ಮಿಕರು ಸಿಲುಕಿದ್ದಾರೆ. ಈ ಪೈಕಿ ಮೂವರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಆನಂದ್ ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಧಾವಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ. https://ainlivenews.com/have-you-lost-your-driving-license-if-so-just-do-this-to-get-back/ ನಿರ್ಮಾಣ ಹಂತದಲ್ಲಿರುವ ಬುಲೆಟ್ ರೈಲು ಮಾರ್ಗದಲ್ಲಿರುವ ವಸಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಜಸಾನಿ ತಿಳಿಸಿದ್ದಾರೆ. ಆರಂಭದಲ್ಲಿ ಪೊಲೀಸರು ನಿರ್ಮಾಣ ಹಂತದಲ್ಲಿರುವ ಸೇತುವೆ ಕುಸಿದಿದೆ ಎಂದು ವರದಿ ಮಾಡಿದ್ದರು. ಆದರೆ, ಅನಂತರ ಬುಲೆಟ್ ರೈಲು ಯೋಜನೆಯ ಮೇಲ್ವಿಚಾರಣೆ ನಡೆಸುತ್ತಿರುವ ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೋರೇಶನ್ ಲಿಮಿಟೆಡ್ ವಡೋದರಾದ ಮಾಹಿ ನದಿ ಸಮೀಪ ನಿರ್ಮಿಸಲಾಗಿದ್ದ ತಾತ್ಕಾಲಿಕ ಸ್ಟೀಲ್ ಹಾಗೂ ಕಾಂಕ್ರೀಟ್ ಸೇತುವೆ ಕುಸಿಯಿತು…
ಭೋಪಾಲ್: ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯಿಂದ ಮಹಿಳೆಯರಿಗೆ ಆದ್ಯತೆ ನೀಡುತ್ತಿದೆ ಎಂಬುದನ್ನು ಸಾಬೀತುಪಡಿಸಿದೆ. ಚುನಾವಣೆಯ ಜೊತೆಗೆ, ಉದ್ಯೋಗಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಗುರಿಯನ್ನು ಕೇಂದ್ರ ಹೊಂದಿದೆ. ಅದರಂತೆ ಮಧ್ಯಪ್ರದೇಶ ಕ್ಯಾಬಿನೆಟ್ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಪ್ರಮಾಣವನ್ನು 35% ಏರಿಸುವ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದೆ. ಇಲ್ಲಿಯವರೆಗೂ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಕಲ್ಪಿಸಲಾಗುತ್ತಿತ್ತು. ಸರ್ಕಾರ ಈಗ ಕೋಟಾದಲ್ಲಿ ಹೆಚ್ಚುವರಿಯಾಗಿ 2% ನೀಡಿದೆ. ಕಾಯ್ದೆಯಾಗಿ ಜಾರಿ ಬಂದರೆ ಮಹಿಳಾ ಮೀಸಲಾತಿ ಪ್ರಮಾಣ 35% ಏರಿಕೆಯಾಗಲಿದೆ. https://ainlivenews.com/there-is-a-great-job-opportunity-in-union-bank-salary-%e2%82%b9-85000-for-degree-pass/ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಕ್ಯಾಬಿನೆಟ್ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಅನುಮೋದಿಸಲಾಗಿದೆ. ಮಧ್ಯಪ್ರದೇಶದಲ್ಲಿ ಸರ್ಕಾರಿ ಸೇವೆಗಳ ಎಲ್ಲಾ ನೇಮಕಾತಿಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು 33% ರಿಂದ 35% ಗೆ ಹೆಚ್ಚಿಸಲಾಗಿದೆ. ಇದು ಮಹಿಳಾ ಸಬಲೀಕರಣದತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಮಧ್ಯಪ್ರದೇಶದ ಡಿಸಿಎಂ ರಾಜೇಂದ್ರ ಶುಕ್ಲಾ ತಿಳಿಸಿದ್ದಾರೆ. ಮುಂದುವರೆದು ಮಾತನಾಡಿದ ಅವರು, ರಾಜ್ಯದಲ್ಲಿ 254 ಹೊಸ ರಸಗೊಬ್ಬರ ಮಾರಾಟ ಕೇಂದ್ರಗಳನ್ನು ತೆರೆಯಲು ಸಂಪುಟ…
ಇಂಡೋ-ಕಿವೀಸ್ ಟೆಸ್ಟ್ ಸರಣಿ ವೈಟ್ವಾಶ್ನ ಬಳಿಕ ಮುಂಬರುವ ಆಸ್ಟ್ರೇಲಿಯಾ ಪ್ರವಾಸ ಹಾಟ್ ಟಾಪಿಕ್ ಆಗಿ ಮಾರ್ಪಟ್ಟಿದೆ. ಕಳೆದ 2 ಬಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸರಣಿ ಗೆದ್ದು ಬೀಗಿರುವ ಟೀಮ್ ಇಂಡಿಯಾ ಇದೀಗ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದೆ. ನ್ಯೂಜಿಲೆಂಡ್ ವಿರುದ್ಧ ವೈಟ್ವಾಷ್ ಮುಖಭಂಗ ಅನುಭವಿಸಿರೋದ್ರಿಂದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಎಂಟ್ರಿ ಕೊಡಬೇಕಂದ್ರೆ ಸರಣಿ ಗೆಲುವು ಅನಿವಾರ್ಯ ಆಗಿದೆ. ಈ ಪ್ರತಿಷ್ಠೆಯ ಸರಣಿಗೆ ಸಿದ್ಧತೆಗಳು ಆರಂಭವಾಗಿದೆ. https://ainlivenews.com/there-is-a-great-job-opportunity-in-union-bank-salary-%e2%82%b9-85000-for-degree-pass/ ಮುಂಬರೋ ಪ್ರತಿಷ್ಟಿತ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಿಸಿಸಿಐ ವಲಯದಲ್ಲಿ ಸಿದ್ಧತೆಗಳು ಜೋರಾಗಿವೆ. ಈಗಾಗಲೇ ಬಾರ್ಡರ್ -ಗವಾಸ್ಕರ್ ಟೂರ್ನಿಗೆ ತಂಡವನ್ನೂ ಪ್ರಕಟಿಸಲಾಗಿದೆ. ನವೆಂಬರ್ 22ರಿಂದ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದ್ದು, ಅದಕ್ಕೂ ಮುನ್ನ ಇಂಡಿಯಾ ಎ ಜೊತೆಗೆ ಒಂದು ಅಭ್ಯಾಸ ಪಂದ್ಯ ಆಡೋದು ಇಷ್ಟು ದಿನ ಇದ್ದ ಪ್ಲಾನ್ ಆಗಿತ್ತು. ಆದ್ರೆ, ಇದಕ್ಕಿದ್ದಂತೆ ಕೋಚ್ ಗೌತಮ್ ಗಂಭೀರ್, ಕ್ಯಾಪ್ಟನ್ ರೋಹಿತ್ ಶರ್ಮಾ ಆ ಪ್ಲಾನ್ ರಿಜೆಕ್ಟ್ ಮಾಡಿದ್ದಾರೆ ಮೊದಲಿದ್ದ ಪ್ಲಾನ್ನಂತೆ ನವೆಂಬರ್ 15ರಿಂದ ಟೀಮ್…