ಬೆಂಗಳೂರು:- ರಾಜಧಾನಿ ಬೆಂಗಳೂರಿನ ಯಶವಂತಪುರ ಬಳಿ ಹೃದಯಾಘಾತದಿಂದ BMTC ಚಾಲಕ ಸಾವನ್ನಪ್ಪಿರುವ ಘಟನೆ ಜರುಗಿದೆ. https://ainlivenews.com/josh-inglis-chosen-as-the-new-captain-of-the-australian-team/ ಮೃತಪಟ್ಟ ಡ್ರೈವರ್ ನನ್ನು 39 ವರ್ಷದ ಕಿರಣ್ ಎನ್ನಲಾಗಿದೆ. ಬಸ್ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರು ಇರುವಾಗಲೇ ಈ ದುರ್ಘಟನೆ ಸಂಭವಿಸಿದೆ. ನೆಲಮಂಗಲ ಕಡೆಯಿಂದ ಯಶವಂತಪುರ ಕಡೆಗೆ ಬಿಎಂಟಿಸಿ ಬಸ್ ಅನ್ನು ಚಾಲನೆ ಮಾಡಿಕೊಂಡು ಬರುವಾಗ ಡ್ರೈವರ್ಗೆ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ತಕ್ಷಣವೇ ಬಸ್ ನಿಲ್ಲಿಸಿದ್ದನು. ಎದೆನೋವು ತೀವ್ರವಾಗಿ ಕಾಣಿಸಿಕೊಂಡು ಹೃದಯಾಘಾತದಿಂದ ಡ್ರೈವರ್ ಸಾವನ್ನಪ್ಪಿದ್ದಾನೆ.
Author: AIN Author
ಆಸ್ಟ್ರೇಲಿಯಾ ತಂಡದ ಹೊಸ ನಾಯಕನಾಗಿ ಜೋಶ್ ಇಂಗ್ಲಿಸ್ ಆಯ್ಕೆ ಆಗಿದ್ದಾರೆ. ಪಾಕಿಸ್ತಾನ್ ವಿರುದ್ಧದ ಸರಣಿಯ ಉಳಿದ ಪಂದ್ಯಗಳಿಗೆ ಆಸ್ಟ್ರೇಲಿಯಾ ತಂಡದ ನಾಯಕರಾಗಿ ಜೋಶ್ ಇಂಗ್ಲಿಸ್ ಆಯ್ಕೆಯಾಗಿದ್ದಾರೆ. https://ainlivenews.com/are-you-interested-in-working-in-a-bank-apply-here-now-a-lot-of-salary/ ಹಾಗೆಯೇ ಪಾಕಿಸ್ತಾನ್ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಪ್ಯಾಟ್ ಕಮಿನ್ಸ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಮುಂಬರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಸಿದ್ಧತೆಗಾಗಿ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಸ್ಟೀವ್ ಸ್ಮಿತ್ ಅವರಂತಹ ಪ್ರಮುಖ ಆಟಗಾರರು ಮೂರನೇ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಪಾಕ್ ವಿರುದ್ಧದ ಕೊನೆಯ ಏಕದಿನ ಪಂದ್ಯಕ್ಕೆ ಹಂಗಾಮಿ ನಾಯಕರಾಗಿ ಜೋಶ್ ಇಂಗ್ಲಿಸ್ ಆಯ್ಕೆಯಾಗಿದ್ದಾರೆ. ಅದರಂತೆ ಆಸ್ಟ್ರೇಲಿಯಾ ತಂಡವು ಮುಂದಿನ ನಾಲ್ಕು ಪಂದ್ಯಗಳಲ್ಲಿ ಜೋಶ್ ಇಂಗ್ಲಿಸ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ.
ಬ್ಯಾಂಕ್ನಲ್ಲಿ ಉದ್ಯೋಗ ಹುಡುಕುವವರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಕರ್ನಾಟಕದಲ್ಲೂ ಪೋಸ್ಟ್ಗಳು ಖಾಲಿ ಖಾಲಿ ಇವೆ. ಹೀಗಾಗಿ ಆಸಕ್ತರು ಕೂಡಲೇ ಅಪ್ಲೈ ಮಾಡಿ. ಅರ್ಜಿಯನ್ನು ಇನ್ನೂ 1 ವಾರದೊಳಗೆ ಸಲ್ಲಿಸಬೇಕಾಗಿದೆ. https://ainlivenews.com/lokayukta-officials-have-not-told-to-come-back-for-hearing-cm-siddaramaiahs-first-reaction/ ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ದೇಶದ ವಿವಿಧ ಭಾಗಗಳಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅಪ್ಲಿಕೇಶನ್ ಅನ್ನು ಆಹ್ವಾನ ಮಾಡಲಾಗಿದೆ. ಕರ್ನಾಟಕದಲ್ಲೂ ಈ ಬ್ಯಾಂಕ್ನ ಬ್ರ್ಯಾಂಚ್ಗಳಿದ್ದು ಇಲ್ಲಿಯು ಉದ್ಯೋಗಗಳು ಖಾಲಿ ಇವೆ. ಹೀಗಾಗಿ ಕರ್ನಾಟಕದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ವಿವಿಧ ಪ್ರದೇಶ ಬಿಟ್ಟು ಕರ್ನಾಕದಲ್ಲಿ ಮಾತ್ರ 300 ಉದ್ಯೋಗಗಳು ಖಾಲಿ ಇವೆ. ಎಸ್ಸಿ 45, ಎಸ್ಟಿ 22, ಒಬಿಸಿ 81, ಎಡಬ್ಲುಎಸ್ 30, ಯುಆರ್ 122 ಉದ್ಯೋಗಗಳು ಮೀಸಲು ಇವೆ. ಅ.23 ರಂದು ಬ್ಯಾಂಕ್ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿತ್ತು. ಈಗಾಗಲೇ ಅಭ್ಯರ್ಥಿಗಳು ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ…
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನವನ್ನು ಅಕ್ರಮವಾಗಿ ಪಡೆದಿದ್ದಾರೆಂಬ ಆರೋಪ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಇಂದು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು. ತಮ್ಮ ನಾಲ್ಕೂವರೆ ದಶಕಗಳ ಸುದೀರ್ಘ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರು ವಿಚಾರಣೆ ಎದುರಿಸಿದ್ದು ಇದೇ ಮೊದಲು. ಇನ್ನೂ ವಿಚಾರಣೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮತ್ತೆ ವಿಚಾರಣೆಗೆ ಬರಲು ಲೋಕಾಯುಕ್ತ ಅಧಿಕಾರಿಗಳು ಹೇಳಿಲ್ಲ ಎಂದು ತಿಳಿಸಿದರು. https://ainlivenews.com/have-you-lost-your-driving-license-if-so-just-do-this-to-get-back/ ಕಾನೂನು ಪ್ರಕಾರವೇ ನಿವೇಶನ ಪಡೆದಿದ್ದೇನೆ. ಬಿಜೆಪಿ, ಜೆಡಿಎಸ್ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿವೆ. ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗೆ ಉತ್ತರಿಸಿದ್ದೇನೆ. ಇನ್ನು, ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಬಿಜೆಪಿಯವರು ಆಗ್ರಹಿಸುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ಯಾವುದಾದರೂ ಕೇಸ್ ಸಿಬಿಐಗೆ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು. ಲೋಕಾಯುಕ್ತ ಸ್ವತಂತ್ರವಾಗಿ ತನಿಖೆ ಮಾಡುತ್ತಿರುವ ಸಂಸ್ಥೆ. ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗೆ ಉತ್ತರಿಸಿದ್ದೇನೆ. ಎಲ್ಲವೂ ಕೂಡ ಕಾನೂನು ಪ್ರಕಾರವೇ ನಡೆದಿದೆ. ಬಿಜೆಪಿ, ಜೆಡಿಎಸ್ನವರು ಮಾಡಿದ್ದ ಸುಳ್ಳು ಆರೋಪಗಳಿಗೆ ಕೋರ್ಟ್ನಲ್ಲಿ…
ಮೈಸೂರು: ಮುಡಾ ಸೈಟ್ ಹಂಚಿಕೆ ಹಗರಣ ಪ್ರಕರಣದಲ್ಲಿ ಎ1 ಆಗಿರುವ ಸಿಎಂ ಸಿದ್ದರಾಮಯ್ಯ ಇಂದು ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಿದರು. ಇದರೊಂದಿಗೆ ಮೈಸೂರಿನ ರಾಮಸ್ವಾಮಿ ಸರ್ಕಲ್ ಬಳಿ ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಬಿಜೆಪಿ ನಾಯಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. https://ainlivenews.com/have-you-lost-your-driving-license-if-so-just-do-this-to-get-back/ ಪ್ರತಿಭಟನಾಕಾರರ ವಾಹನವನ್ನು ಕೂಡ ಸೀಜ್ ಮಾಡಿದರು. ಪ್ರತಿಭಟನೆ ವೇಳೆ ಪೊಲೀಸರು ಹಾಗೂ ಶಾಸಕ ಶ್ರೀವತ್ಸ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಲೋಕಾಯುಕ್ತ ತನಿಖೆಯಿಂದ ಏನೂ ಆಗಲ್ಲ. ಸಿದ್ದರಾಮಯ್ಯ ಪ್ರಮಾಣಿಕರಾಗಿದ್ದರೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಕೇಸರಿಪಡೆ ಆಗ್ರಹಿಸಿದೆ. ಸಿಎಂ ನನ್ನದು ತೆರೆದ ಪುಸ್ತಕ ಅಂತಾರೆ. ಹಾಗಾಗಿ ಸಿಬಿಐ ತನಿಖೆಗೆ ಕೊಡಲಿ. ಸತ್ಯಾಸತ್ಯತೆ ಹೊರಗೆ ಬರಲಿ ಅಂತಾ ಪಟ್ಟು ಹಿಡಿದಿದ್ದಾರೆ.
ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ವಿರಾಟ್, ಬಾಬರ್ ಅಜಂ ಒಟ್ಟಿಗೆ ಕ್ರಿಕೆಟ್ ಆಡಲಿದ್ದಾರೆ ಎನ್ನಲಾಗಿದೆ. ಆಫ್ರೋ-ಏಷ್ಯಾ ಕಪ್ ಮತ್ತೆ ಪ್ರಾರಂಭವಾಗಲಿದೆ. ಆಫ್ರಿಕನ್ ಕ್ರಿಕೆಟ್ ಅಸೋಸಿಯೇಷನ್ ಶನಿವಾರ ವಾರ್ಷಿಕ ಸಭೆ ನಡೆಸಿದೆ. ಈ ವೇಳೆ ಆರು ಜನರ ನೇತೃತ್ವದ ಮಧ್ಯಂತರ ಸಮಿತಿ ರಚಿಸಲಾಗಿದೆ. ಇದು ಏಷ್ಯನ್ ಮತ್ತು ಆಫ್ರಿಕನ್ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಿಕೊಡಲಿದೆ. https://ainlivenews.com/muda-scandal-cm-siddaramaiah-leaves-after-2-hour-lokayukta-inquiry/ ಈ ಬಾರಿಯ ಟೂರ್ನಿಯಲ್ಲಿ ಭಾರತದ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಬಾಬರ್ ಅಜಂ ಒಟ್ಟಿಗೆ ಆಡಲಿದ್ದಾರೆ. ಏಷ್ಯಾ XI ಮತ್ತು ಆಫ್ರಿಕಾ XI ತಂಡಗಳು ಆಫ್ರೋ-ಏಷ್ಯಾ ಕಪ್‌ನಲ್ಲಿ ಮುಖಾಮುಖಿ ಆಗುತ್ತವೆ. 2005ರಲ್ಲಿ ಮೊದಲು ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಆಡಿಸಲಾಯಿತು. 2007ರಲ್ಲಿ ಭಾರತ ಕೂಡ ಆಯೋಜಿಸಿತ್ತು. ಮೂರನೇ ಆವೃತ್ತಿಯನ್ನು 2009ರಲ್ಲಿ ಕೀನ್ಯಾದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆ ವರ್ಷ ಆಫ್ರೋ-ಏಷ್ಯಾ ಕಪ್ ನಡೆಸಲು ಸಾಧ್ಯವಾಗಲಿಲ್ಲ. ಈ ಪಂದ್ಯಾವಳಿ ತುಂಬಾ ವಿಶೇಷವಾಗಿದ್ದು, ಭಾರತ ಮತ್ತು ಪಾಕಿಸ್ತಾನಿ ಆಟಗಾರರು ಒಟ್ಟಿಗೆ ಆಡುವುದನ್ನು ಕಾಣಬಹುದಾಗಿದೆ. ಎಸಿಎ ಹಂಗಾಮಿ ಅಧ್ಯಕ್ಷ ತವೆಂಗಾ…
ಮೈಸೂರು: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿನಲ್ಲಿರುವ ಲೋಕಾಯುಕ್ತ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗಿದ್ದಾರೆ. 40 ವರ್ಷಗಳ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆ ಎದುರಿಸಿದ್ದಾರೆ. ಸತತ 2 ಗಂಟೆಗಳ ಕಾಲ ಸಿಎಂ ವಿಚಾರಣೆ ನಡೆಸಲಾಗಿದ್ದು, 40 ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಯಿತು.ವಿಚಾರಣೆ ಬಳಿಕ, ಮತ್ತೆ ವಿಚಾರಣೆಗೆ ಕರೆದರೆ ಬರಬೇಕು ಎಂದು ಅಧಿಕಾರಿಗಳು ಸಹಿ ಪಡೆದುಕೊಂಡರು. ವಿಚಾರಣೆ ಬಳಿಕ ಸಿಎಂ ಸಿದ್ದರಾಮಯ್ಯ ಆರಾಮಾಗಿ ಹೊರಬಂದರು. ನಂತರ ತಮ್ಮ ಕಾರು ಹತ್ತಿ ವಾಪಸ್ ಆದರು. ಲೋಕಾಯುಕ್ತ ಪೊಲೀಸರ ವಿಚಾರಣೆಗೆ ಹಾಜರಾಗುವ ಮುನ್ನ ಸಿಎಂ ಸಿದ್ದರಾಮಯ್ಯ ಕಾನೂನು ಸಲಹೆಗಾರ ಜೊತೆ ಸಭೆ ನಡಸಿದ್ದರು. ಸರ್ಕಾರಿ ಕಾರಿನಲ್ಲಿ, ಬೆಂಗಾವಲು ವಾಹನದಲ್ಲಿ ವಿಚಾರಣೆಗೆ ಬರಲು ಸಿಎಂ ಸಜ್ಜಾಗಿದ್ದರು. ಆದರೆ, ಕಾನೂನು ಸಲಹೆಗಾರು ನೀಡಿದ ಸಲಹೆಯಂತೆ ಸರ್ಕಾರಿ ಸವಲತ್ತು ಬಳಸದೇ, ಸರ್ಕಾರಿ ಕಾರನ್ನೂ ಬಳಸದೇ ತಮ್ಮ ಸಿಬ್ಬಂದಿಯನ್ನೂ ಜೊತೆಗೆ ಕರೆ ತರದೇ ಸಿಎಂ ಸಿದ್ದರಾಮಯ್ಯ ಸಾಮಾನ್ಯರಂತೆ ಬಂದರು. https://ainlivenews.com/have-you-lost-your-driving-license-if-so-just-do-this-to-get-back/ ವಿಚಾರಣೆ ಎದುರಿಸಲು ಕಚೇರಿಯೊಳಗೆ…
ಸತತ ಸೋಲುಗಳಿಂದ ಕಂಗೆಟ್ಟ ಶಿಖರ್ ಧವನ್ ಜೀವನಕ್ಕೆ ಇದೀಗ ಹೊಸ ಚೇತನದ ಎಂಟ್ರಿಯಾದಂತಿದೆ. https://ainlivenews.com/garbage-shipment-from-kerala-to-gundlupet-pro-kannada-organizations-hand-over-lorries-to-police/ ಕಳೆದೊಂದು ವರ್ಷದಿಂದ ಸಾಲು ಸಾಲು ಆಘಾತಗಳನ್ನ ಶಿಖರ್ ಧವನ್ ಎದುರಿಸಿದ್ದಾರೆ. ಆನ್ಫೀಲ್ಡ್ನ ವೈಫಲ್ಯದ ಪರಿಣಾಮ ಟೀಮ್ ಇಂಡಿಯಾದಿಂದಲೇ ದೂರವಾದ್ರು. ಆಫ್ ದ ಫೀಲ್ಡ್ನಲ್ಲಿ ವೈವಾಹಿಕ ಜೀವನದ ಭಿನ್ನಾಭಿಪ್ರಾಯಗಳಿಂದಾಗಿ ಪತ್ನಿಯಿಂದ ದೂರಾದ್ರು. ಮೇಲಿಂದ ಮೇಲೆ ಪೆಟ್ಟು ತಿಂದು ಮಾನಸಿಕವಾಗಿ ಕುಗ್ಗಿ ಹೋಗಿದ್ದ ಧವನ್, ಇದಕ್ಕಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೂ ಗುಡ್ ಬೈ ಹೇಳಿಬಿಟ್ರು ಮೊನ್ನೆ ಯಾವುದೋ ಊರಿಗೆ ಪ್ರಯಾಣ ಬೆಳೆಸಿದ್ದ ಶಿಖರ್ ಧವನ್, ಮುಂಬೈನ ಏರ್ಪೋರ್ಟ್ಗೆ ಬಂದಿದ್ರು. ಭರ್ಜರಿ ಎಂಟ್ರಿ ಕೊಟ್ಟ ಧವನ್, ಮೀಡಿಯಾಗಳತ್ತ ಕೈ ಬೀಸಿ, ಕ್ಯಾಮರಾಗೆ ಸ್ಟೈಲಿಷ್ ಪೋಸ್ ಕೊಟ್ಟು ಏರ್ಪೋರ್ಟ್ ಒಳಗೆ ತೆರಳಿದ್ದರು ಧವನ್ ಬಂದಿದ್ದು.. ಏರ್ಪೋರ್ಟ್ ಒಳಗೆ ಹೋಗಿದ್ದು ಎಲ್ಲಾ ಸರಿ.. ಇದ್ರ ನಡುವೆ ಅಲ್ಲಂದು ಅಚ್ಚರಿ ಎಲ್ಲರಿಗೂ ಕಾದಿತ್ತು. ಧವನ್ ತಮ್ಮ ಆಡಿ ಕಾರಿನ ಈ ಕಡೆಯಿಂದ ಇಳಿದು ಮೀಡಿಯಾಗಳ ಕಡೆಗೆ ಬಂದ್ರೆ, ಮತ್ತೊಂದು ಡೋರ್ನಿಂದ ಮಿಸ್ಟರಿ ಬೆಡಗಿಯೊಬ್ಬಳು ಕಾರ್ನಿಂದ…
ಚಾಮರಾಜನಗರ: ಕೇರಳಿಗರು ತಮ್ಮ ರಾಜ್ಯದಿಂದ ನಾನಾ ರೀತೀಯ ತ್ಯಾಜ್ಯವನ್ನು ಗುಂಡ್ಲುಪೇಟೆ ತಾಲೂಕಿನ ನಿರ್ಜನ ಪ್ರದೇಶಗಳಲ್ಲಿ ಸುರಿದು ಹೋಗುತ್ತಿದ್ದು, ಜಿಲ್ಲಾಡಳಿತ ಮೌನವಹಿಸಿದೆ. ಹೀಗೆ ನಿತ್ಯ ಇಲ್ಲಿಗೆ ಬಂದು ತ್ಯಾಜ್ಯ ಸುರಿದು ಹೋಗುತ್ತಿರುವುದರಿಂದ ಪರಿಸರ ಮಾಲಿನ್ಯ ಉಂಟಾಗಿ ರೋಗರುಜಿನಗಳು ಹರಡುವ ಆತಂಕ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿ 766ರ ಮೂಲಕ ಕೇರಳದಿಂದ ಮೆಡಿಕಲ್ ವೇಸ್ಟ್, ಚಪ್ಪಲಿ, ಮಾಂಸ, ಕೊಳೆತ ತರಕಾರಿ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ತಂದು ಗಡಿಭಾಗದ ನಿರ್ಜನ ಪ್ರದೇಶಗಳಲ್ಲಿ ಸುರಿದು ಹೋಗುವುದು ಅಥವಾ ಗುಂಡ್ಲುಪೇಟೆ ಮೂಲಕ ಬೇರೆ ಜಿಲ್ಲೆಗಳಿಗೆ ಸಾಗಣೆ ಮಾಡುವುದು ನಿರಂತರವಾಗಿ ನಡೆಯುತ್ತಲೇ ಇದೆ. ಇಷ್ಟೆಲ್ಲಾ ಆಗುತ್ತಿದ್ದರೂ ಕರ್ನಾಟಕ ಗಡಿಭಾಗದ ಚೆಕ್‌ಪೋಸ್ಟ್ನಲ್ಲಿ ಯಾವುದೇ ತಪಾಸಣೆ ನಡೆಯದೆ ಕೇವಲ ಗ್ರೀನ್ ಟ್ಯಾಕ್ಸ್ ವಸೂಲಿಗಷ್ಟೇ ಸೀಮಿತವಾಗಿದೆ. https://ainlivenews.com/have-you-lost-your-driving-license-if-so-just-do-this-to-get-back/ ನೆರೆಯ ಕೇರಳಿಗರು ಎಗ್ಗಿಲ್ಲದೇ ಚೆಕ್‌ಪೋಸ್ಟ್ ದಾಟಿ ಲಾರಿ ಮತ್ತು ಟೆಂಪೋಗಳಲ್ಲಿ ಕರ್ನಾಟಕಕ್ಕೆ ಕಸ ಸಾಗಣೆ ಮಾಡುತ್ತಿದ್ದಾರೆ. ಚೆಕ್‌ಪೋಸ್ಟ್ನಲ್ಲಿರುವ ಪೊಲೀಸ್ ಹಾಗು ಅರಣ್ಯ ಇಲಾಖೆ ಸಿಬ್ಬಂದಿ ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ಗಂಭೀರ ಆರೋಪವು ಇದೆ. ಇನ್ನೂ ಕೇರಳದಿಂದ ಕರ್ನಾಟಕಕ್ಕೆ…
ಬೆಂಗಳೂರು: ನಾಗಸಂದ್ರ ದಿಂದ ಮಾದಾವಾರ ವರೆಗೂ ಮೆಟ್ರೋ ರೈಲು ಸಂಚಾರಕ್ಕೆ ಸ್ಥಳೀಯರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಮಾದಾವಾರ ಮೆಟ್ರೋ ನಿಲ್ದಾಣಕ್ಕೆ ಸ್ಥಳೀಯರು ನುಗ್ಗಿದ್ದು, ಇಂದು ಡಿ.ಸಿಎಂ.ಡಿಕೆ.ಶಿವಕುಮಾರ್ ಸಂಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮ ಮೆಟ್ರೋ ರೈಲು ಭೂ ಸ್ವಾಧೀನ ಪಡೆದು ಅಧಿಕಾರಿಗಳು ಪರಹಾರ ನೀಡಿಲ್ಲ. https://ainlivenews.com/former-minister-bandeppa-khashempur-campaigns-for-nikhil-kumaraswamy/ ಗ್ರಾಮದ ಅಭಿವೃದ್ಧಿಗೆ ಮೆಟ್ರೋ ಅಧಿಕಾರಿಗಳು ಭರವಸೆ ನೀಡಿದ್ದರು. ಅಧಿಕಾರಿಗಳ ಭರವಸೆ ನೀಡದ ಹಿನ್ನೆಲೆ ಸ್ಥಳೀಯರು ಮುತ್ತಿಗೆ ಹಾಕಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.