Author: AIN Author

ಹುಬ್ಬಳ್ಳಿ: ಬಿಜೆಪಿ ಆಡಳಿತ ಸಂದರ್ಭ ದಲ್ಲಿ ಎಷ್ಟು ಬಾರಿ , ಎಷ್ಟು ಪ್ರತಿ ಶತ ಬಸ್ ದರವನ್ನು ಹೆಚ್ಚಿಸಿದ್ದೀರಿ ಎಂಬುದನ್ನು ನೆನಪು ಮಾಡಿಕೊಂಡು ನಂತರ ಬಿಜೆಪಿ ಹೋರಾಟ ಮಾಡಲಿ ಎಂದು ಸ್ಲಂ ಬೋರ್ಡ್ ಅಧ್ಯಕ್ಷರು, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ. https://ainlivenews.com/a-fire-fell-into-a-pile-of-waste-thick-smoke/ ಅವರು ಪತ್ರಿಕಾ ಪ್ರಕಟಣೆ ನೀಡಿ ಬಿಜೆಪಿ ಅವಧಿಯಲ್ಲಿ ಸಾರಿಗೆ ನಿಗಮಗಳಿಗೆ ಬಿಟ್ಟು ಹೋಗಿದ್ದ ₹5,900 ಕೋಟಿ ಸಾಲದ ಹೊರೆ ನಾವು ತೀರಿಸುತಿದ್ದೇವೆ . ಕೇವಲ 15 % ಹೆಚ್ಚು ಮಾಡಿದ್ದಕ್ಕೆ ಬಿಜೆಪಿ ಬೊಬ್ಬೆ ಹೊಡೆಯುತ್ತಿದೆ. ನೀವು ಮಾಡಿದ ಸಾಲದ ಹೊರೆ ತೀರಿಸಲು ಬಸ್ ಪ್ರಯಾಣ ದರ ಹೆಚ್ಚಳದ ನಿರ್ಧಾರ ತೆಗೆದುಕೊಂಡಿದ್ದೇವೆ’ ಹೊರತು, ಗ್ಯಾರಂಟಿ ಹಣ ಹೊಂದಿಸಲು ಅಲ್ಲ ಎಂದು ಬಿಜೆಪಿಗೆ ತಿವಿದಿದ್ದಾರೆ. 2008ರಿಂದ 2013ರ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಅಂದು ಸಾರಿಗೆ ಸಚಿವರಾಗಿದ್ದ ಆ‌ರ್. ಅಶೋಕ ಅವರ ಅವಧಿಯಲ್ಲೇ ಏಳು ಬಾರಿ ಪ್ರಯಾಣದರ ಹೆಚ್ಚಳ ಮಾಡಿದ್ದಾರೆ. ಆಗ ಒಟ್ಟು ಶೇ 47.8ರಷ್ಟು ಏರಿಕೆ ಮಾಡಲಾಗಿತ್ತು ಎಂದು ಹೇಳಿದರು.…

Read More

ಕೆಆರ್ ಪುರ:- ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯದ ರಾಶಿಗೆ ಬೆಂಕಿ ಬಿದ್ದಿರುವ ಘಟನೆ ಮಹದೇವಪುರ ಕ್ಷೇತ್ರದ ದೊಡ್ಡಗುಬ್ಬಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಅಣಗಲಪುರದಲ್ಲಿ ಜರುಗಿದೆ. https://ainlivenews.com/tekki-atul-suicide-case-conditional-bail-for-three-including-wife/ ಸ್ವಚ್ಛ ಸಂಕೀರ್ಣದಲ್ಲೇ ತ್ಯಾಜ್ಯರಾಶಿಗೆ ಸಿಬ್ಬಂದಿಗಳು ಬೆಂಕಿ ಇಡುತ್ತಿದ್ದಾರೆ. ಸ್ವಚ್ಛ ಭಾರತ್ ಅಡಿ‌ಯಲ್ಲಿ ಸ್ವಚ್ಛ ಸಂಕೀರ್ಣ ಘಟಕ ನಿರ್ಮಿಸಲಾಗಿದೆ. ಕಸದ ತ್ಯಾಜ್ಯಕ್ಕೆ ಬೆಂಕಿ ಪರಿಣಾಮ ಗಾಢ ಹೊಗೆ ಹೊಮ್ಮಿ ಅನೈರ್ಮಲ್ಯ ತಾಂಡವ ಆಡುತ್ತಿದೆ. ಅಧಿಕಾರಿಗಳ ಬೀಜವಾಬ್ದಾರಿತನವೇ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ.

Read More

ಬೆಂಗಳೂರು:- ಡೆತ್ ನೋಟ್ ಬರೆದು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆತನ ಪತ್ನಿ ನಿಖಿತಾ ಸಿಂಘಾನಿಯಾ ಸೇರಿದಂತೆ ಮೂವರಿಗೆ ಸಿಟಿ ಸಿವಿಲ್ ಕೋರ್ಟ್​ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. https://ainlivenews.com/ed-officers-attack-businessmans-house-escape-with-30-lakhs/ ಜಾಮೀನು ಕೋರಿ ಮೂವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಟಿ ಸಿವಿಲ್ ಕೋರ್ಟ್, ಅತುಲ್ ಪತ್ನಿ ನಿಖಿತಾ ಸಿಂಘಾನಿಯಾ, ಅತ್ತೆ ನಿಶಾ ಸಿಂಘಾನಿಯಾ ಮತ್ತು ಬಾಮೈದ ಅನುರಾಗ್ ಸಿಂಘಾನಿಯಾಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಟೆಕ್ಕಿ ಅತುಲ್ ಅವರು ಡಿಸೆಂಬರ್ 9 ರಂದು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಸಾವಿಗೆ ವಿಚ್ಛೇದಿತ ಹೆಂಡತಿ ಮತ್ತು ಅವಳ ಕುಟುಂಬ ಸದಸ್ಯರ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದರು. ನಂತರ ಟೆಕ್ಕಿ ಅತುಲ್ ಸುಭಾಷ್ ಅವರ ಸಹೋದರ ವಿಕಾಸ್ ನೀಡಿದ ದೂರಿನ ಆಧಾರದ ಮೇಲೆ ಅತುಲ್‌ ಆತ್ಮಹತ್ಯೆ ಪ್ರಕರಣ ಸಂಬಂಧ ಮಾರತ್‌ಹಳ್ಳಿ ಪೊಲೀಸರು ನಿಖಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಸಿಂಘಾನಿಯಾ ಮತ್ತು ಸಹೋದರ ಅನುರಾಗ್‌ ಸಿಂಘಾನಿಯಾ…

Read More

ಮಂಗಳೂರು:- ಬೀಡಿ ಉದ್ಯಮಿ ಮನೆಗೆ ಇಡಿ ಹೆಸರಿನಲ್ಲಿ ದಾಳಿ ನಡೆದಿದ್ದು, 30 ಲಕ್ಷದೊಂದಿಗೆ ನಕಲಿ ಅಧಿಕಾರಿಗಳು ಪರಾರಿ ಆಗಿದ್ದಾರೆ. https://ainlivenews.com/accused-of-leaking-morphing-video-r-ashok-complains-against-dcm-dkeshi-and-others/ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಬೋಳಂತೂರುನಲ್ಲಿ ಈ ಘಟನೆ ನಡೆದಿದೆ. ಬೀಡಿ ಉದ್ಯಮ ನಡೆಸುತ್ತಿದ್ದ ಬೋಳಂತೂರು ನಾರ್ಶ ಎಂಬಲ್ಲಿನ ನಿವಾಸಿ ಸುಲೈಮಾನ್ ಹಾಜಿ ಎಂಬವರ ಮನೆಗೆ ನಿನ್ನೆ ತಡ ರಾತ್ರಿ ತಮಿಳುನಾಡು ಮೂಲದ ಕಾರಿನಲ್ಲಿ ನಾಲ್ಕು ಜನರ ತಂಡ ಆಗಮಿಸಿದೆ. ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಬೆಳಗ್ಗಿನ ಜಾವದವರೆಗೂ ತನಿಖೆ ನಡೆಸುವ ನಾಟಕವಾಡಿದ್ದರು. ಬಳಿಕ ಮನೆಯಲ್ಲಿ ಸಿಕ್ಕಿದ್ದ 30 ಲಕ್ಷ ನಗದು ಹಿಡಿದುಕೊಂಡು ಪರಾರಿಯಾಗಿದ್ದರು. ಅನುಮಾನಗೊಂಡ ಸುಲೈಮಾನ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು ವಿಟ್ಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ

Read More

ಬೆಂಗಳೂರು:- ಮಾರ್ಫಿಂಗ್ ವಿಡಿಯೋ ಹರಿಬಿಟ್ಟ ಆರೋಪದಡಿ DCM ಡಿಕೆಶಿ ಸೇರಿ ಇತರರ ವಿರುದ್ಧ ಆರ್​ ಅಶೋಕ್ ದೂರು ನೀಡಿದ್ದಾರೆ. https://ainlivenews.com/sagara-ask-vijendra-if-our-government-is-going-to-collapse/ ಬಸ್ ಟಿಕೆಟ್ ದರ ಏರಿಕೆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ವಿಪಕ್ಷ ನಾಯಕ ಆರ್ ಅಶೋಕ್ ಅವರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಶೇರ್ ಮಾಡುವ ಮೂಲಕ ಆರೋಪಿಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಆರ್ ಅಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ ದರ ಏರಿಕೆ ವಿರುದ್ಧ ನಿನ್ನೆ ಮೆಜೆಸ್ಟಿಕ್‌ನಲ್ಲಿ ಪ್ರತಿಭಟನೆ ವೇಳೆ ವಿಪಕ್ಷನಾಯಕ ಆರ್‌.ಅಶೋಕ್ ಮತ್ತು​ ಪೊಲೀಸರ ಮಧ್ಯೆ ವಾಗ್ವಾದ ಉಂಟಾಗಿತ್ತು. ಈ ವೇಳೆ ಪೊಲೀಸರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಕಾಂಗ್ರೆಸ್​ ವಿಡಿಯೋವೊಂದನ್ನು ಹಂಚಿಕೊಂಡಿತ್ತು. ಸದ್ಯ ಈ ವಿಚಾರವಾಗಿ ಮಾರ್ಫಿಂಗ್ ವಿಡಿಯೋಯನ್ನು ಕೆಪಿಸಿಸಿ ಎಕ್ಸ್, ಫೇಸ್‌ಬುಕ್‌ ಖಾತೆಗಳಲ್ಲಿ ಹಂಚಿರುವುದಾಗಿ ಆರೋಪಿಸಿ ದೂರು ಕೊಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂವಹನ ಅಧ್ಯಕ್ಷ ರಮೇಶ್ ಬಾಬು, ಸಹ ಅಧ್ಯಕ್ಷೆ ಐಶ್ವರ್ಯ ಮಹದೇವ್, ಉಪಾಧ್ಯಕ್ಷ ಇ.ಸತ್ಯಪ್ರಕಾಶ್​, ಕೆಪಿಸಿಸಿ ಸಾಮಾಜಿಕ…

Read More

ಸಾಗರ: ವಯಸ್ಸಿಗೆ ತಕ್ಕಂತೆ ಮಾತನಾಡಲ್ಲ ಮನುಷ್ಯ, ಅಪ್ಪನ ದುಡ್ಡು ಇತ್ತು ರಾಜ್ಯ ಅಧ್ಯಕ್ಷರಾಗಿ ಬಂದಿದ್ದಾರೆ, ವಿಜೇಂದ್ರ ನಿಗೆ ತಾಕತ್ತು ದಮ್ಮಿದ್ರೆ ನಮ್ಮ ಸರ್ಕಾರ ಉರಳುಸಕ್ಕೆ ಆಗುತ್ತಾ ಕೇಳಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸವಾಲ್ ಹಾಕಿದ್ದಾರೆ. https://ainlivenews.com/breaking-news-a-15-year-old-boy-died-after-a-tree-fell-on-him/ ಸಂಕ್ರಾಂತಿಯ ನಂತರ ಸರ್ಕಾರ ಪತನ ಗೋಲತೆ ಎಂಬ ಹೇಳಿಕೆ ನೀಡುತ್ತಿರುವ ಬಿಜೆಪಿ ಪಕ್ಷದ ಅರಾಧ್ಯಕ್ಷ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಬೇಳೂರು, ಅಪ್ಪನ ಅಧಿಕಾರ ಹಾಗೂ ಅಪ್ಪನ ಹಣದ ಬಲದಿಂದ ರಾಜ್ಯ ಅಧ್ಯಕ್ಷರಾಗಿ ಬಂದಿದ್ದಾರೆ. ಹಿಂದೆ ನಿನ್ನ ಹತ್ತಿರ ತಾಕತ್ತು ದುಡ್ಡು ಇತ್ತು ಎಂದು ಮಾಡಿರಬಹುದು ಈಗ ಅದೇ ಚಾಲೆಂಜ್ ನಾವ್ ಮಾಡುತ್ತೇವೆ ಬರಕ್ಕೆ ಹೇಳಿ. ಯಾವುದೇ ಸರ್ಕಾರ ಬೀಳಲ್ಲ ಆ ರೀತಿ ಯಾವುದೇ ಕೆಲಸ ಮಾಡಲು ಆಗಲ್ಲ. ಅವರದೇ ಪಕ್ಷದವರು ಅವನದೇ ರಾಜೀನಾಮೆ ಕೇಳುತ್ತಿದ್ದಾರೆ ಅವನ ಬುಡಕ್ಕೆ ಬೆಂಕಿ ಬಿದ್ದಿದೆ ಅದನ್ನು ಉಳಿಸಿಕೊಳ್ಳಲು ಹೇಳಿ ನಮ್ಮ ಪಕ್ಷದ ಮಾತನಾಡಲು ವಿಜೇಂದ್ರ ನಮ್ಮ ಹೈಕಮಾಂಡ ನಮ್ಮ ಹೈಕಮಾಂಡ್ ಏನು ಮಾಡಬೇಕು ಮಾಡುತ್ತಾರೆ…

Read More

ಬೆಂಗಳೂರು:- ಸೆಂಟ್ರಿಂಗ್ ಗೆ ಬಳಿಸುವ ಸಾರವೆ ಮರ ಬಿದ್ದು 15 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ವಿ ವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. https://ainlivenews.com/should-hair-be-left-free-while-sleeping-or-need-to-be-braided-what-you-need-to-know/ 15 ವರ್ಷದ ತೇಜಸ್ವಿನಿ ಸಾವನ್ನಪ್ಪಿದ ಮಗು. ಮಧ್ಯಾಹ್ನ 12 : 40ಕ್ಕೆ ವಿ ವಿ ಪುರಂ ಮೆಟ್ರೋ ನಿಲ್ದಾಣ ಬಳಿ ಈ ದುರ್ಘಟನೆ ಸಂಭವಿಸಿದೆ. ಸ್ಕೂಲ್ ಮುಗಿಸಿಕೊಂಡು ಮನೆಗೆ ಬರುವ ವೇಳೆ ಘಟನೆ ಸಂಭವಿಸಿದೆ. ಶನಿವಾರ ಇದ್ದ ಕಾರಣ ಮಧ್ಯಾಹ್ನ ಸ್ಕೂಲ್ ಮುಗಿಸಿ ಬಳಿಕ ಡ್ಯಾನ್ಸ್‌ ಕ್ಲಾಸ್ ಮುಗಿಸಿ ಮನೆಗೆ ಬರ್ತಿರೊ ವೇಳೆ ಘಟನೆ ‌ಜರುಗಿದೆ. ಬಿಲ್ಡಿಂಗ್ ಕನ್ಸ್ಟ್ರಕ್ಷನ್ ನಡೆಯುತ್ತಿದ್ದ ನಾಲ್ಕನೇ ಪ್ಲೊರ್ ನಿಂದ ಸಾರವೆ ಮರ ಬಿದ್ದಿದೆ. ಮೇಲಿಂದ ರಭಸವಾಗಿ ಬಿದಿದ್ದರಿಂದ ಮಗು ಸ್ಥಳದಲ್ಲಿ ಸಾವನ್ನಪ್ಪಿದೆ. ವಿ ವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಪ್ರತಿಯೊಬ್ಬರೂ ತನ್ನ ಕೂದಲು ಯಾವಾಗಲೂ ಆರೋಗ್ಯಕರವಾಗಿರಬೇಕೆಂದು ಬಯಸುತ್ತಾರೆ. ಅದರಲ್ಲೂ ಮಹಿಳೆಯರಂತೂ ತಮ್ಮ ಕೂದಲಿನ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳುತ್ತಾರೆ. ಕೂದಲನ್ನು ಆರೋಗ್ಯಕರವಾಗಿಡಲು, ಅದನ್ನು ಕಾಳಜಿ ವಹಿಸುವುದು ಬಹಳ ಮುಖ್ಯ. ನಿಮ್ಮ ಕೂದಲಿನ ಬಗ್ಗೆ ನೀವು ಕಾಳಜಿ ವಹಿಸದಿದ್ದಲ್ಲಿ ಕೂದಲು ದುರ್ಬಲಗೊಳ್ಳುತ್ತದೆ ಮತ್ತು ಒಣಗುತ್ತದೆ ಇದರಿಂದಾಗಿ ಕೂದಲು ಒಡೆಯುವ ಸಮಸ್ಯೆಯೂ ಪ್ರಾರಂಭವಾಗುತ್ತದೆ. https://ainlivenews.com/hubballi-divisional-railway-manager-bela-meena-takes-charge/ ಕೆಲವರು ಮಲಗುವ ಮೊದಲು ತಮ್ಮ ಕೂದಲನ್ನು ಜಡೆ ಹೆಣೆದು ಇಟ್ಟುಕೊಳ್ಳಲು ಇಷ್ಟಪಡುತ್ತಾರೆ, ಕೆಲವರು ತಮ್ಮ ಕೂದಲನ್ನು ಯಾವುದೇ ರೀತಿಯ ಕ್ಲಿಪ್ ಗಳನ್ನು ಬಳಸದೆಯೇ ಹಾಗೆಯೇ ಬಿಟ್ಟಿಡುತ್ತಾರೆ. ಆದರೆ ಈ ಎರಡು ವಿಧಾನಗಳಲ್ಲಿ ಯಾವುದು ನಿಮ್ಮ ಕೂದಲಿಗೆ ಉತ್ತಮ ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಇವೆರಡರಲ್ಲಿ ಉತ್ತಮ ವಿಧಾನವನ್ನು ಆಯ್ಕೆ ಮಾಡಿಕೊಂಡು ಅದನ್ನು ಅನುಸರಿಸುವುದರಿಂದ ನಿಮ್ಮ ಕೂದಲು ಒಡೆಯುವುದನ್ನು ತಡೆಯಬಹುದು. ಮಾತ್ರವಲ್ಲ ಇದು ನಿಮ್ಮ ಕೂದಲನ್ನು ಬಲವಾಗಿ ಮತ್ತು ಹೊಳೆಯುವಂತೆ ಇರಲು ನೋಡಿಕೊಳ್ಳುತ್ತದೆ. ಹಾಗಾದರೆ ಮಲಗುವಾಗ ಕೂದಳಿಗೆ ಜಡೆ ಹಾಕಬೇಕೇ ಅಥವಾ ಹಾಗೆಯೇ ಬಿಟ್ಟರೆ ಒಳ್ಳೆಯದೇ? ಕೂದಲನ್ನು ಆರೋಗ್ಯಕರವಾಗಿ ಮತ್ತು…

Read More

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ನೂತನ ವ್ಯವಸ್ಥಾಪಕರಾಗಿ ಬೇಲಾ ಮೀನಾ ಅವರು ಇಂದು ಅಧಿಕಾರ ಸ್ವೀಕರಿಸಿದರು. ‌ https://ainlivenews.com/two-more-victims-of-bbmp-garbage-lorry-fatal-accident/ 1996ನೇ ಬ್ಯಾಚ್‌ನ ಭಾರತೀಯ ರೈಲ್ವೆ ಸಂಚಾರ ಸೇವೆಯ (ಐಆರ್‌ಟಿಎಸ್‌) ಅಧಿಕಾರಿಯಾಗಿರುವ ಅವರು, 1997ರ ಸೆ. 4ರಂದು ಭಾರತೀಯ ರೈಲ್ವೆಯಲ್ಲಿ ತಮ್ಮ ವೃತ್ತಿ ಆರಂಭ ಮಾಡಿದರು. 1999 ರಿಂದ 2017ರ ವರೆಗೆ ಮುಂಬೈ ಕೇಂದ್ರಿತ ಪಶ್ಚಿಮ ರೈಲ್ವೆಯ ವಾಣಿಜ್ಯ ಹಾಗೂ ಪರಿಚಾಲನಾ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. 27 ವರ್ಷ ಸೇವಾ ಅನುಭವ ಹೊಂದಿರುವ ಬೇಲಾ ಮೀನಾ ಅವರು ಈ ಹಿಂದೆ ಹಿರಿಯ ವಾಣಿಜ್ಯ ವ್ಯವಸ್ಥಾಪಕಿ, ಮುಖ್ಯ ಯೋಜನಾ ವ್ಯವಸ್ಥಾಪಕಿ, ಹಿರಿಯ ಟ್ರಾನ್ಸ್‌ಪೋರ್ಟೇಷನ್‌ ವ್ಯವಸ್ಥಾಪಕಿ ಹಾಗೂ ಶುಲ್ಕರಹಿತ ಆದಾಯ ಮತ್ತು ಪ್ರಯಾಣಿಕರ ಮಾರುಕಟ್ಟೆ ವಿಭಾಗದಲ್ಲಿ ಮುಖ್ಯ ವಾಣಿಜ್ಯ ವ್ಯವಸ್ಥಾಪಕಿಯಾಗಿ ಕೆಲಸ ಮಾಡಿದ್ದಾರೆ.

Read More

ಅವ್ರಿಬ್ರು ಸಹೋದರಿಯರು..ಒಟ್ಟಿಗೆ ಬೈಕ್ ತಗೊಂಡು ಮನೆಯಿಂದ ಹೊರಟಿದ್ರು..ಆದ್ರೆ ಹೋಗ್ತಿದ್ದ ಮಾರ್ಗದಲ್ಲಿಯೇ ಜವರಾಯ ಕಾದು ಕುಳಿತಿದ್ದ..ಕಸದ ಲಾರಿ ರೂಪದಲ್ಲಿ ಯಮ ಇಬ್ಬರನ್ನು ಬಲಿ ಪಡೆದಿದ್ದಾನೆ..ಭೀಕರವಾದ ಅಪಘಾತಕ್ಕ ಅಕ್ಕ ತಂಗಿ ಇಬ್ಬರು ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. https://ainlivenews.com/those-who-have-to-live-together-are-far-away-far-away-a-couple-that-has-increased-inequality-has-never-lived-together/ ಹೌದು..ಈ ಫೋಟೊದಲ್ಲಿ ಕಾಣ್ತಿರೊ ಮಹಿಳೆಯರ ಹೆಸರು 38 ವರ್ಷದ ನಿಗಾರ್ ಇರ್ಫಾನ ಮತ್ತು 30 ನಿಗಾರ್ ಸುಲ್ತಾನ..ಗೋವಿಂದಪುರ ನಿವಾಸಿಳಾಗಿದ್ದು ಇವ್ರಿಬ್ರುರು ಸಹೋದರಿಯರು..ಕೆಲಸದ ನಿಮಿತ್ತ ಟಿವಿಎಸ್ ಜುಪಿಟರ್ ಬೈಕ್ ತಗೊಂಡು ಇವತ್ತು ಬೆಳಗ್ಗೆ ಹೆಗಡೆನಗರದತ್ತ ತೆರಳಿದ್ದಾರೆ ಆದ್ರೆ 11 ಗಂಟೆಗೆ ಸಾರಾಯಿಪಾಳ್ಯ ಬಳಿ ಬರ್ತಿದ್ದಂತೆ ಬೈಕ್ ಎಡದಿಂದ ಬಲಕ್ಕೆ ತೆಗೆದುಕೊಂಡಿದ್ದಾರೆ..ಈ ವೇಳೆ ಹಿಂಬದಿಯಿಂದ ವೇಗವಾಗಿ ಬರ್ತಿದ್ದ ಕಸದ ಲಾರಿ ಬೈಕ್ ಗೆ ಡಿಕ್ಕಿಯಾಗಿದ್ದು..ಇಬ್ಬರು ಬಲಕ್ಕೆ ಹಾರಿ ಬಿದ್ದಿದ್ದಾರೆ..ನಿಯಂತ್ರಣ ಕಳೆದುಕೊಂಡ ಚಾಲಕ ಇಬ್ಬರು ಮಹಿಳೆಯರ ಮೇಲೆ ಕಸದ ಲಾರಿ ಹರಿಸಿದ್ದು..ಹಿಂಬದಿ ಚಕ್ರಕ್ಕೆ ಸಿಲುಕಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.. ಘಟನೆಗೆ ಸಂಬಂಧ ಪಟ್ಟಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ..ಇಂತಹ ಘಟನೆ ಇಲ್ಲಿ ಆಗಾಗ ಮರುಕಳಿಸುತ್ತಲೇ ಇರುತ್ತೆ..ಕಸದ ಲಾರಿ ಚಾಲಕರು ಕುಡಿದು ಚಾಲನೆ…

Read More