ಬಾಗಲಕೋಟೆ:- ಕರ್ನಾಟಕ ಇತಿಹಾಸದಲ್ಲೇ ಅತೀ ದೊಡ್ಡ ಮೊತ್ತದ ಬಜೆಟ್ ಅಂದರೆ 4,09,549 ಕೋಟಿ ರೂ ದಾಖಲೆ ಗಾತ್ರದ ಬಜೆಟ್ ಮಂಡನೆಯಾಗಿದೆ. https://ainlivenews.com/budget-for-the-upliftment-of-sabar-deputy-leader-of-the-legislative-assembly-arvind-bellada/ ಎಲ್ಲರ ನಿರೀಕ್ಷೆಯಂತೆ ಈ ಬಾರಿಯೂ 5 ಗ್ಯಾರಂಟಿ ಯೋಜನೆಗಳಿಗಾಗಿ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ 51,300 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ.ಶಾಲೆ-ಕಾಲೇಜುಗಳಲ್ಲಿ ಹೆಚ್ಚುವರಿ ಕೊಠಡಿ, ಶೌಚಾಲಯ ನಿರ್ಮಾಣ ಮತ್ತು ದುರಸ್ತಿ ಕಾರ್ಯಗಳಿಗೆ 725 ಕೋಟಿ ರೂ. ಹಾಗೂ ಪೀಠೋಪಕರಣ ಒದಗಿಸಲು 50 ಕೋಟಿ ರೂ. ಬಿಡುಗಡೆ. ಮಧ್ಯಾಹ್ನ ಉಪಹಾರ ಯೋಜನೆಯಡಿ 16,347 ಶಾಲೆಗಳ ಅಡುಗೆಮನೆ ನವೀಕರಣ ಹಾಗೂ ಪಾತ್ರೆ ಪರಿಕರ ಪೂರೈಕೆಗೆ 46 ಕೋಟಿ ರೂ.ಅಕ್ಷರ ಆವಿಷ್ಕಾರ ಯೋಜನೆ ಅಡಿ 200 ಕೋಟಿ ರೂ. ವೆಚ್ಚದಲ್ಲಿ ಕೆ.ಪಿ.ಎಸ್. ಶಾಲೆಗಳನ್ನಾಗಿ ಕಲ್ಯಾಣ ಕರ್ನಾಟಕ ಭಾಗದ 50 ಶಾಲೆಗಳ ಉನ್ನತೀಕರಣಕ್ಕೆ ಒಟ್ಟಾರೆಯಾಗಿ 54000 ಕೊ. ರೂ ಗಳನ್ನು ಅನುದಾನ ಮೀಸಲಿಡಲಾಗಿದೆ. ಅಲ್ಪ ಸಂಖ್ಯಾತರ ಅಭಿರುದ್ಧಿಗಾಗಿ 4700ಕೊ. ರೂ ಮೀಸಲು. ಬೆಂಗಳೂರಿನ ಅಪರಾಧ ತಡೆಗಾಗಿ 26000 ಸಿಸಿ ಕ್ಯಾಮೆರಾ ಅಳವಡಿಕೆ ಹೀಗೆ 70ಸಾವಿರ…
Author: AIN Author
ಹುಬ್ಬಳ್ಳಿ;ಸತತ 16ನೇ ಬಾರಿ ಬಜೆಟ್ ಮಂಡನೆ ಮಾಡಿದ ಸ್ವಘೋಷಿತ ಆರ್ಥಿಕ ತಜ್ಞರಾದ ಸಿಎಂ ಸಿದ್ದರಾಮಯ್ಯನವರ ಈ ಬಾರಿಯ ಬಜೆಟ್ ಕೂಡ ಯಥಾ ಪ್ರಕಾರ ಅತ್ಯಂತ ನಿರಾಶಾದಾಯಕವಾಗಿದೆ ಎಂದು ವಿಧಾನಸಭೆಯ ಉಪನಾಯಕ ಅರವಿಂದ ಬೆಲ್ಲದ ಬೇಸರ ವ್ಯಕ್ತಪಡಿಸಿದ್ದಾರೆ. https://ainlivenews.com/bird-flu-scare-strict-rules-imposed-in-bengaluru-non-veg-lovers-watch-this-news/ ಅಲ್ಪಸಂಖ್ಯಾತರ ಓಲೈಕೆಗಾಗಿಯೇ ತಮ್ಮ ಅಧಿಕಾರವನ್ನು ಮೀಸಲಿಟ್ಟಿರುವ ಕಾಂಗ್ರೆಸ್ ನ ಇಂದಿನ ಬಜೆಟ್ ಕೂಡ ಯಾವ ಆಯಾಮದಲ್ಲೂ ಕರ್ನಾಟಕದ ಬಜೆಟ್ ಎಂದೆನಿಸುವಂತಿಲ್ಲ. ಇದು ರಾಜ್ಯದ ಬಜೆಟ್ಟೋ ಸಾಬರ ಬಜೆಟ್ಟೋ!? ಎಂಬುದೇ ಪ್ರಶ್ನೆಯಾಗಿದೆ. ಇನ್ನು ಉತ್ತರ ಹಾಗೂ ಕಲ್ಯಾಣ ಕರ್ನಾಟಕಕ್ಕಂತೂ ಎಂದಿನಂತೆ ಮಲತಾಯಿ ಧೋರಣೆ ಮುಂದುವರೆಸಿರುವ ಕಾಂಗ್ರೆಸ್ ಸರ್ಕಾರ ಕೇವಲ ಬೆರಳೆಣಿಕೆಯಷ್ಟು ಅನುದಾನವನ್ನು ನೀಡಿ ಮೂಗಿನ ಮೇಲೆ ತುಪ್ಪ ಸುರಿಯುವ ಪ್ರಯತ್ನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಈ ಬಾರಿಯ ಬಜೆಟ್ ನಲ್ಲಾದರೂ ಪ್ರಾತಿನಿಧ್ಯ ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಬೇಡಿಕೆ ಇಟ್ಟು ಪತ್ರ ಬರೆದಿದ್ದೆ. ಆದರೆ ಅದನ್ನು ಕಡೆಗಣಿಸಿ, ನಮ್ಮ ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ…
ಬೆಂಗಳೂರು:-ರಾಜ್ಯದಲ್ಲಿ ದಿನೇದಿನೇ ಹಕ್ಕಿಜ್ವರದ ಭೀತಿ ಹೆಚ್ಚಾಗುತ್ತಲೇ ಇದೆ. ಇದೀಗ ಹಕ್ಕಿಜ್ವರ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳಲಾಗಿತ್ತಿದೆ. ನಗರದಲ್ಲಿ ಹಕ್ಕಿಜ್ವರ ನಿಯಂತ್ರಣಕ್ಕೆ ಕ್ರಮವ ವಹಿಸಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಹಕ್ಕಿಜ್ವರ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. https://ainlivenews.com/women-this-is-more-dangerous-than-cigarettes-if-you-light-it-daily-in-front-of-god-you-are-guaranteed-to-smoke/ ಅಲ್ಲದೆ ಇದೇ ಸಂದರ್ಭದಲ್ಲಿ ಜನರಿಗೂ ಕೆಲವೊಂದು ಪ್ರಮುಖ ಸೂಚನೆಗಳನ್ನು ನೀಡಲಾಗಿದೆ. ನಗರದಲ್ಲಿ ಹಕ್ಕಿ ಜ್ವರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯಲ್ಲಿ ಸಭೆಯನ್ನು ನಡೆಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಬೇರೆ-ಬೇರೆ ಜಿಲ್ಲೆಗಳಲ್ಲಿ ಹಕ್ಕಿಜ್ವರ ಪ್ರಕರಣಗಳು ವರದಿಯಾಗುತ್ತಿರುವುದರಿಂದ. ಪಾಲಿಕೆ ವ್ಯಾಪ್ತಿಯಲ್ಲಿ ಹಕ್ಕಿ ಜ್ವರ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಎಲ್ಲಾ ವಲಯಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ. ಹಕ್ಕಿಜ್ವರ ಅಥವಾ ಕೋಳಿ ಶೀತ ಜ್ವರ ಹೆಚ್5ಎನ್1 ವೈರಸ್‌ನಿಂದ ಹರಡುವ ರೋಗವಾಗಿದ್ದು, ಇದು ಟರ್ಕಿ ಕೋಳಿ, ಗಿಣಿ ಕೋಳಿ, ಬಾತು ಕೋಳಿ, ಗೀಜಗ ಮುಂತಾದ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವ ಸಾಂಕ್ರಾಮಿಕ ಖಾಯಿಲೆಯಾಗಿದೆ. ಸಾಮಾನ್ಯವಾಗಿ ಹಕ್ಕಿಗಳಿಂದ ಹಕ್ಕಿಗಳಿಗೆ ಹರಡಲಿದೆ. ಕೆಲವೊಮ್ಮೆ ರೋಗ ಪೀಡಿತ…
ರಾಸಾಯನಿಕಗಳಿಂದ ತಯಾರಿಸಿದ ಗಂಧದ ಕಡ್ಡಿ ಹೊಗೆ ದೇಹಕ್ಕೆ ಅನಾರೋಗ್ಯಕರ ಎಂಬುದು ಸತ್ಯ. ಆದರೆ ನೈಸರ್ಗಿಕ ಉತ್ಪನ್ನಗಳಿಂದ ತಯಾರು ಮಾಡಿದ ಗಂಧದ ಕಡ್ಡಿಗಳು ಆರೋಗ್ಯಕ್ಕೆ ಯಾವುದೇ ತೊಂದರೆಯನ್ನು ಉಂಟು ಮಾಡುವುದಿಲ್ಲ. ಇವುಗಳಿಂದ ಬರುವ ಸುವಾಸನೆ ಕೂಡ ನಿಮ್ಮ ಮನಸ್ಸಿನ ತಾಜಾತನವನ್ನು ಹೆಚ್ಚು ಮಾಡುತ್ತದೆ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. https://ainlivenews.com/what-should-be-the-sugar-level-before-and-after-meals/ ಧೂಮಪಾನ ಮಾಡೋದ್ರಿಂದ ಅನೇಕ ಆರೋಗ್ಯ ಸಮಸ್ಯೆಗಳು ಬರುತ್ತದೆ. ಧೂಮಪಾನ ಮಾಡುವುದಷ್ಟೇ ಅಲ್ಲ, ಆ ಹೊಗೆಯನ್ನು ಉಸಿರಾಡುವುದರಿಂದಲೂ ಹಲವು ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. ಇನ್ನು ಧೂಮಪಾನ ಮಾಡುವವರಿಗಿಂತ ಅದರ ಹೊಗೆ ತೆಗೆದುಕೊಳ್ಳುವವರಿಗೆ ಹೆಚ್ಚು ಅಪಾಯಕಾರಿ ಎಂದು ಈಗಾಗಲೇ ಹಲವು ವರದಿಗಳು ಹೇಳಿವೆ. ಆದರೆ ಇಲ್ಲೊಂದು ಶಾಕಿಂಗ್ ವರದಿ ಬಹಿರಂಗವಾಗಿದೆ ನೋಡಿ. ಸಹಜವಾಗಿ ಧೂಪದ ಹೊಗೆ ಪ್ರತಿಯೊಬ್ಬರ ಮನೆಯಲ್ಲೂ ಇರುವುದು ಗ್ಯಾರಂಟಿ. ಮನೆಯಲ್ಲಿ ಅಥವಾ ದೇವಾಲಯಗಳಲ್ಲಿ ಪೂಜೆಯ ಸಮಯದಲ್ಲಿ ಯಾವಾಗಲೂ ಅಗರಬತ್ತಿಗಳನ್ನು ಬೆಳಗಿಸಲಾಗುತ್ತದೆ. ಇವುಗಳಿಂದ ಬರುವ ಹೊಗೆಯು ಪರಿಮಳಯುಕ್ತವಾಗಿದ್ದು ಮನಸ್ಸಿಗೂ ಶಾಂತಿಯನ್ನು ತರುತ್ತದೆ. ಅದಕ್ಕಾಗಿಯೇ ಅನೇಕ ಜನರು ಉತ್ತಮ ಪರಿಮಳವನ್ನು ಹೊಂದಿರುವ…
ಡಯಾಬಿಟಿಸ್ ಸಮಸ್ಯೆಯ ಲಕ್ಷಣಗಳನ್ನು ಗುರುತಿಸಲು ಹಾಗೂ ನಿರ್ವಹಿಸಲು ರಕ್ತದಲ್ಲಿನ ಶುಗರ್ ಲೆವಲ್ ತುಂಬಾ ಮುಖ್ಯವಾಗಿವೆ. ನಿಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸಲು ರಕ್ತದಲ್ಲಿನ ಶುಗರ್ ಅತ್ಯಗತ್ಯವಾಗಿದೆ. ಆದರೆ, ರಕ್ತದಲ್ಲಿನ ಸಕ್ಕರೆ ಮಟ್ಟವು ತುಂಬಾ ಹೆಚ್ಚಿದ್ದರೆ (ಹೈಪರ್ಗ್ಲೈಸೀಮಿಯಾ) ಹಾಗೂ ತುಂಬಾ ಕಡಿಮೆಯಿದ್ದರೆ (ಹೈಪೊಗ್ಲಿಸಿಮಿಯಾ), ಅನಿಯಂತ್ರಿತವಾಗಿದ್ದರೆ ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಹೆಚ್ಚಿರುತ್ತದೆ. https://ainlivenews.com/from-now-on-movie-tickets-in-multiplexes-will-cost-only-%e2%82%b9200/ ಮಧುಮೇಹ ರೋಗಿಗಳಿಗೆ ಊಟ ಮಾಡುವ ಮೊದಲು ಮತ್ತು ನಂತರ ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿಕೊಳ್ಳಬೇಕೆಂದು ವೈದ್ಯರು ಶಿಫಾರಾಸು ಮಾಡುತ್ತಾರೆ. ಮಧುಮೇಹ ರೋಗಿಯ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಯಾವಾಗ ಪರೀಕ್ಷಿಸಬೇಕು ಎಂದು ಅನೇಕ ಜನರಿಗೆ ತಿಳಿದಿಲ್ಲ. ಆದ್ದರಿಂದ ಮಧುಮೇಹ ರೋಗಿಗಳು ಯಾವಾಗ ಶುಗರ್ ಟೆಸ್ಟ್ ಮಾಡಿಕೊಳ್ಳಬೇಕು ಎನ್ನುವುದನ್ನು ನಾವಿಲ್ಲಿ ತಿಳಿಯೋಣ ಮಧುಮೇಹ ಇರುವವರಿಗೆ, ಊಟಕ್ಕೆ ಮೊದಲು ರಕ್ತದಲ್ಲಿನ ಸಕ್ಕರೆಯ ಸಾಮಾನ್ಯ ಗುರಿ ಪ್ರತಿ ಡೆಸಿಲೀಟರ್‌ಗೆ 80–130 ಮಿಲಿಗ್ರಾಂ (mg/dL) ಆಗಿದೆ. ಈ ಗುರಿ ಔಷಧಿಗಳನ್ನು ತೆಗೆದುಕೊಳ್ಳುವ ಮಧುಮೇಹ ಹೊಂದಿರುವ ಹೆಚ್ಚಿನ ಜನರಿಗೆ ಅನ್ವಯಿಸುತ್ತದೆ. ಮಧುಮೇಹ ರೋಗಿಯ ರಕ್ತದಲ್ಲಿನ…
ಬೆಂಗಳೂರು:- ಹೊಸ ರೇಷನ್ ಕಾರ್ಡ್ ಬಗ್ಗೆ ಆಹಾರ ಸಚಿವ ಮುನಿಯಪ್ಪ ಮಹತ್ತರ ಮಾಹಿತಿ ನೀಡಿದ್ದಾರೆ. https://ainlivenews.com/i-have-nothing-to-do-with-the-actress-ranya-case-dgp-ramachandra-rao-clarifies/ ಸರ್ಕಾರದಿಂದ ಸದ್ಯಕ್ಕೆ ಹೊಸ ರೇಷನ್ ಕಾರ್ಡ್ ಅನ್ನು ಹಂಚಿಕೆ ಮಾಡಲ್ಲ ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದ್ದಾರೆ. ವಿಧಾನಸಭೆಯಲ್ಲಿ ಅಶೋಕ್ ಕುಮಾರ್ ರೈ ಮತ್ತು ವೇದವ್ಯಾಸ ಕಾಮತ್ ಪ್ರಶ್ನೆಗೆ ಉತ್ತರ ನೀಡಿದ ಮುನಿಯಪ್ಪ, ರಾಜ್ಯದಲ್ಲಿ ಕೇಂದ್ರ ನಿಗದಿ ಮಾಡಿದ್ದ ಕಾರ್ಡ್ ನಿಗದಿ ಗುರಿ ಮುಕ್ತಾಯವಾಗಿದೆ. ಹೊಸ ಕಾರ್ಡ್ ಕೊಡಲು ಅವಕಾಶ ಇಲ್ಲ. ಅನರ್ಹರ ಕಾರ್ಡ್ ರದ್ದು ಮಾಡೋವರೆಗೂ ಹೊಸ ಕಾರ್ಡ್‌ಗಳು ಕೊಡಲ್ಲ ಎಂದರು. ಹೀಗಾಗಿ ಸದ್ಯಕ್ಕೆ ಹೊಸ ಅರ್ಜಿ ಹಾಕಿರುವ ಜನರು ಬಿಪಿಎಲ್ ಕಾರ್ಡ್‌ಗಾಗಿ ಕಾಯಲೇಬೇಕು. ಸದ್ಯಕ್ಕೆ ಹೊಸ ರೇಷನ್ ಕಾರ್ಡ್ ಕೊಡಲು ಸರ್ಕಾರದಲ್ಲಿ ಅವಕಾಶವಿಲ್ಲ. ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ಅನ್ವಯ 4,01,93,000 ಫಲಾನುಭವಿಗಳಿಗೆ ಮಾತ್ರ ಪಡಿತರ ವಿತರಣೆ ಮಾಡಲು ಗುರಿ ನಿಗದಿ ಮಾಡಲಾಗಿದೆ. ಆದರೆ ರಾಜ್ಯದಲ್ಲಿ ನಿಯಮ ಮೀರಿ 4,50,59,460 ಫಲಾನುಭವಿಗಳಿಗೆ ಪಡಿತರ ಕೊಡಲಾಗುತ್ತಿದೆ. ಕಾಯ್ದೆ ಪ್ರಕಾರ…
ಬೆಂಗಳೂರು: ನಟಿ ರನ್ಯಾ ರಾವ್ ಬಂಧನದ ಬಗ್ಗೆ ಎಡಿಜಿಪಿ ಕೆ.ರಾಮಚಂದ್ರ ರಾವ್ ಪತ್ರಿಕಾ ಪ್ರಕಟಣೆ ಹೊರಡೊಸಿದ್ದಾರೆ ಎನ್ನಲಾಗ್ತಿದೆ. ಆದ್ರೆ ಪ್ರೆಸ್ ನೋಟ್ ನಲ್ಲಿ ರಾಮಚಂದ್ರರಾವ್ ಗೆ ಸಂಬಂಧಿಸಿದ ಯಾವೂದೆ ಸಹಿ ಆಗಲಿ ಹೆಸರಾಗಲಿ ಇಲ್ಲ. ಇನ್ನು ಪ್ರೆಸ್ ನೋಟ್ ನಲ್ಲಿ ಏನಿದೆ ಅಂತ ನೋಡೋದಾದ್ರೆ. https://ainlivenews.com/budget-is-not-a-calculation-on-a-sheet-of-paper-it-is-a-manual-to-shape-the-future-of-the-people-cm-siddaramaiah/ ಈ ಪ್ರಕರಣ ಕೇಳಿ ಪೋಷಕನಾಗಿ ನನ್ನ ಹೃದಯ ಒಡೆದು ಹೋಗಿದೆ, ನನಗೆ ಆಗಿರುವ ಅಘಾತವನ್ನ ಹೇಳಲು ಪದಗಳೇ ಸಿಗ್ತಿಲ್ಲ. ಇತ್ತಿಚಿನ ಬೆಳಗಣಿಗೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಇದು ತುಂಬಾ ಕಷ್ಟದ ಸಮಯ. ಇದನ್ನ ಎದುರಿಸಲು ನಾವು ಕಷ್ಟ ಪಡ್ತಾ ಇದ್ದೇವೆ. ರನ್ಯಾ ಹಾಗೂ ಜತಿನ್ ಹುಕ್ಕೇರಿ 2024 ರಲ್ಲಿ ಮದುವೆ ಆದ್ರು. ಮದುವೆ ಆದ ನಂತರ ಖಾಸಗಿತನ ಮತ್ತು ಸ್ವಾತ್ರಂತ್ರ್ಯವನ್ನ ಕಾಪಾಡಿಕೊಂಡಿದ್ದಾರೆ. ನಮ್ಮ ಮನೆಗೆ ಬರುವುದನ್ನ ಆಕೆ ನಿಲ್ಲಿಸಿದ್ದಾಳೆ,ನಾವು ಭೇಟೆಯಾಗಲು ಅವಕಾಶ ನೀಡಿಲ್ಲ. ಇದರಿಂದ ನಮ್ಮ ಹಾಗೂ ಅವರ ನಡುವೆ ಅಂತರ ಬೆಳೆಯಿತು. ನಾನು ಕೆಲಸದಲ್ಲಿ ಪ್ರಾಮಾಣಿಕನಾಗಿದ್ದೇನೆ,…
ಬೆಂಗಳೂರು:- ಇಂದು ಸಿದ್ದರಾಮಯ್ಯ ಅವರು 16ನೇ ಬಜೆಟ್ ಮಂಡಿಸಲಿದ್ದಾರೆ. ಆದರೆ ಅದಕ್ಕೂ ಮುನ್ನ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಬಜೆಟ್‌ಗೂ ಮುನ್ನ ಬಿಜೆಪಿ, ಜೆಡಿಎಸ್ ಪ್ರತಿಭಟನೆ ನಡೆಸಲಿವೆ. https://ainlivenews.com/not-aspiring-for-any-post-has-some-grievances-about-the-party-ramesh-jigajinagi/ ವಿಧಾನಸೌಧ ಗಾಂಧಿ ಪ್ರತಿಮೆ ಎದುರು ಮೈತ್ರಿ ನಾಯಕರು ಪ್ರತಿಭಟನೆ ನಡೆಸಿದ್ದು, ಎಸ್‌ಸಿಎಸ್ಪಿ-ಟಿಎಸ್ಪಿ ಹಣ ಗ್ಯಾರಂಟಿಗಳಿಗೆ ಬಳಸಬಾರದು, ಶಾಸಕರ ಕ್ಷೇತ್ರಗಳಿಗೆ ತಲಾ 150 ಕೋಟಿ ಅನುದಾನ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರದ ಅಧಿಕ ಸಾಲಗಳ ಮತ್ತೊಂದು ಬಜೆಟ್ ಎಂದು ಆಪಾದಿಸಿ, ಗಾಂಧಿ ಪ್ರತಿಮೆಯಿಂದ ಕೆಂಗಲ್ ಗೇಟ್ ವರೆಗೆ ಪ್ರತಿಭಟನಾ ಮೆರಣಿಗೆ ನಡೆಸಿದ್ದಾರೆ ಇನ್ನೂ ರಾಹುಕಾಲಕ್ಕೂ ಮುನ್ನ ಸಿಎಂ ಬಜೆಟ್ ಮಂಡನೆ ಆರಂಭ ಮಾಡಲಿದ್ದಾರೆ. ಕಳೆದ ವರ್ಷವೂ ರಾಹುಕಾಲಕ್ಕೂ ಮುನ್ನ ಬಜೆಟ್ ಮಂಡನೆ ಆರಂಭಿಸಿದ್ದರು. ಬೆಳಗ್ಗೆ 10:30 ಕ್ಕೆ ಆರಂಭವಾಗುವ ರಾಹುಕಾಲ ಮಧ್ಯಾಹ್ನ 12:30 ರ ವರೆಗೂ ಇರಲಿದೆ.
ಹುಬ್ಬಳ್ಳಿ: ನಕಲಿ ಮದ್ಯ ತಯಾರಿಕೆ ಮಾಡುತ್ತಿದ್ದ ತೋಟದ ಮನೆ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ಹುಬ್ಬಳ್ಳಿಯ ಛಬ್ಬಿ ಗ್ರಾಮದ ಬಳಿ ಜರುಗಿದೆ. https://ainlivenews.com/cm-siddaramaiah-to-present-16th-budget-today-amid-guarantee-challenge/ ಇಬ್ಬರು ಖದೀಮರು, ತೋಟದ ಮನೆಯಲ್ಲಿ ನಕಲಿ ಮದ್ಯ ತಯಾರಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದರು. ಅಬಕಾರಿ ಎಸ್ ಪಿ ವಿಜಯ ಕುಮಾರ್ ಹಿರೇಮಠ್ ರಿಂದ ದಾಳಿ ನಡೆದಿದ್ದು, ಅಪಾರ ಪ್ರಮಾಣದ ನಕಲಿ ಮದ್ಯ ಹಾಗೂ ಇತರ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಅಬಕಾರಿ ಉಪಆಯುಕ್ತ ರಮೇಶ್ ಕುಮಾರ್ ಹೆಚ್ ಮಾಹಿತಿ ನೀಡಿದ್ದಾರೆ. ಬೆಳಗಾವಿ ಅಧಿಕ್ಷಕರು, ಹುಬ್ಬಳ್ಳಿ ಅಬಕಾರಿ ತಂಡದಿಂದ ದಾಳಿ ಮಾಡಲಾಗಿದೆ. ಹುಬ್ಬಳ್ಳಿಯ ಛಬ್ಬಿಗ್ರಾಮದಿಂದ ಬೊಮ್ಮಸಂದ್ರ ಗ್ರಾಮದ ಮಾರ್ಗದ ತೋಟದ ಮನೆಯಲ್ಲಿ ನಕಲಿ ಮದ್ಯ ತಯಾರಿಸಲಾಗುತ್ತಿತ್ತು. ನಕಲಿ ಮದ್ಯ ತಯಾರು ಮಾಡ್ತಿದ್ದ ಇಬ್ಬರನ್ನ ನಾವು ಬಂಧನ ಮಾಡಿದ್ದೇವೆ. ನಕಲಿ ಲೇಬಲ್, ಭದ್ರಾತಾ ಚೀಟಿ ಸೇರಿ ಹಲವು…
ಬೆಂಗಳೂರು:- ಗ್ಯಾರಂಟಿ ಸವಾಲು ನಡುವೆಯೂ ಇಂದು ತಮ್ಮ 16ನೇ ಬಜೆಟ್ ಮಂಡಿಸಿ ಸಿಎಂ ಸಿದ್ದರಾಮಯ್ಯ ದಾಖಲೆ ಬರೆಯಲಿದ್ದಾರೆ. https://ainlivenews.com/even-though-nayanthara-has-a-villain-duniya-vijay-the-era-of-salagan-begins-in-kollywood-right-behind-tollywood/ ಪಂಚ ಗ್ಯಾರಂಟಿಯ ಹೊರೆ, ಬದ್ಧತಾ ವೆಚ್ಚದ ಒತ್ತಡ ಹಾಗೂ ಸೀಮಿತ ಆದಾಯ ಸಂಗ್ರಹದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ರಾಜಸ್ವ ಕೊರತೆಯ ಬಜೆಟ್ ಮಂಡನೆ ನಿರೀಕ್ಷಿಸಲಾಗಿದೆ. ಕಳೆದ ಒಂದು ತಿಂಗಳಿಂದ ಸಿಎಂ 2025-26 ಸಾಲಿನ ಬಜೆಟ್ ಮಂಡನೆಗೆ ಪೂರ್ವಸಿದ್ಧತೆ ನಡೆಸಿದ್ದಾರೆ. ಎಲ್ಲಾ ಇಲಾಖೆಗಳ ಜೊತೆ ಸಭೆ,ವಿವಿಧ ಸಂಘ ಸಂಸ್ಥೆಗಳು, ರೈತ ಸಂಘಟನೆಗಳ ಜೊತೆಯೂ ಸಭೆ ಬಜೆಟ್ ನಲ್ಲಿ ಹೆಚ್ಚಿನ ಅನುದಾನದ ಬೇಡಿಕೆಯೊಂದಿಗೆ ಇಲಾಖೆಗಳು,ಸಂಘ ಸಂಸ್ಥೆಗಳು,ರೈತರು ಸಿಎಂ ಸಿದ್ದರಾಮಯ್ಯ ಮುಂದೆ ಬೇಡಿಕೆ ಪಟ್ಟಿ ಇಟ್ಟಿವೆ. ಕಳೆದ ಬಜೆಟ್ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಾಜಸ್ವ ಕೊರತೆಯ ಪ್ರಮಾಣವನ್ನು ತಗ್ಗಿಸುವ ನಿರೀಕ್ಷೆ ಇದೆ.ಆದರೂ ಅಂದಾಜು ಸುಮಾರು 21,900 ಕೋಟಿ ರೂ. ರಾಜಸ್ವ ಕೊರತೆ ಇರುವ ಸಾಧ್ಯತೆ ಇದೆ.ಆ ಮೂಲಕ ವಾಸ್ತವಿಕ ಆಯವ್ಯಯ ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಹೊಣೆಗಾರಿಕೆ ಕಾಯ್ದುಕೊಳ್ಳುವ ಭರದಲ್ಲಿ ಉಳಿತಾಯದ ಬಜೆಟ್ ಮಂಡನೆ ಮಾಡಿದರೆ,…