ಹುಬ್ಬಳ್ಳಿ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದ್ದ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಹಾಯ, ಸಹಕಾರ, ಬೆಂಬಲ ಯಾವತ್ತೂ ಮರೆಯುವುದಿಲ್ಲ. ಕಾರ್ಯಕರ್ತರು ದಣಿವರಿಯದೇ ಕೆಲಸ ಮಾಡಿ ನನ್ನನ್ನು ಗೆಲ್ಲಿಸುತ್ತ ಬಂದಿದ್ದಾರೆ, ಈಗಲೂ ಭರತ್ ಬೊಮ್ಮಾಯಿ ಅವರನ್ನು ನನಗಿಂತ ಹೆಚ್ಚು ಮತಗಳಿಂದ ಗೆಲ್ಲಿಸಿಕೊಂಡು ಬರುವ ಶಕ್ತಿ ಕಾರ್ಯಕರ್ತರಲ್ಲಿ ಇದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ, ಸಚಿವರು ಸೇರಿ ರಾಜ್ಯ ಸರ್ಕಾರವೇ ಕ್ಷೇತ್ರದಲ್ಲಿ ನಿಂತಿದೆ. ಆದರೆ, ಕಾರ್ಯಕರ್ತರು ಕಾಂಗ್ರೆಸ್ನವರ ಹುನ್ನಾರಕ್ಕೆ ಬಲಿಯಾಗಬಾರದು. ಶಿಗ್ಗಾಂವಿ ಸವಣೂರಿನ ಅಸ್ಮಿತೆಯನ್ನು ಉಳಿಸಿಕೊಳ್ಳಿ, ಮತ್ತೊಮ್ಮೆ ಬಿಜೆಪಿ ಪರವಾಗಿ ಜನರ ಮನೆಗೆ ಹೋಗಿ ಭರತ ಪರವಾಗಿ ಮತ ಕೇಳಿ ಎಂದು ವಿನಂತಿಸಿಕೊಂಡರು. ಪ್ರವಾಹ ಬಂದಾಗ ರೈತರಿಗಾಗಿ ಎರಡು ಪಟ್ಟು ಪರಿಹಾರ ಒದಗಿಸಿದೆ. ಕ್ಷೇತ್ರದ ನೀರಾವರಿಗೆ 25 ಸಾವಿರ ಕೋಟಿ ರೂ. ಕೊಟ್ಟಿದ್ದೇನೆ. ಸಿಎಂ ಸಿದ್ದರಾಮಯ್ಯನವರೇ ರೈತರ ಬಗ್ಗೆ ಕಳಕಳಿ ಇದ್ದರೆ ಇಷ್ಟು ಹಣ…
Author: AIN Author
ಮಹದೇವಪುರ: ಕ್ಷೇತ್ರದ ಬಿದರಹಳ್ಳಿಯ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದ ಶಿಖರದ ಕಲಶ ಪ್ರತಿಷ್ಠಾಪನಾ ಹಾಗೂ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಹಾಗೂ ಶಾಸಕಿ ಮಂಜುಳ ಅರವಿಂದ ಲಿಂಬಾವಳಿಯವರು ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಪೂಜಾ ಕೈಂಕರ್ಯಗಳು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ನಡೆದಿದ್ದು,ಬಿದರಹಳ್ಳಿಯ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ಬಂದಿದ್ದ ಭಕ್ತರಿಗೆ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿಯವರು, ಸನಾತನ ಧರ್ಮವೆಂಬುದು ಭಾರತದ ಸಂಸ್ಕೃತಿಯ ಹೆಮ್ಮೆಯ ಪ್ರತೀಕವಾಗಿದೆ ಅದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು. ಕ್ಷೇತ್ರದ ಬಿದರಹಳ್ಳಿಯಲ್ಲಿ 700 ವರ್ಷಗಳ ಇತಿಹಾಸವಿರುವ ನೂತನವಾಗಿ ಜೀರ್ಣೋದ್ದಾರಗೊಂಡ ಶ್ರೀ ಕಾಶಿ ವಿಶ್ವನಾಥ ದೇವಾಲಯದ ಶಿಖರದ ಕಲಶ ಪ್ರತಿಷ್ಟಾಪನಾ, ಹಾಗೂ ಕುಂಭಾಬಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು, ಕೆಲವು ದುಷ್ಟಶಕ್ತಿಗಳು ಸನಾತನ ಧರ್ಮ ಸಂಸ್ಕೃತಿಯನ್ನು ಹಾಳುಮಾಡುವ ಪ್ರಯತ್ನಕ್ಕೆ ಕೈ ಹಾಕಿವೆ, ಆದರೇ ಅದು ಯಶಸ್ವಿಯಾಗುವುದಿಲ್ಲ,…
ಪ್ರೀತಿ, ಕಾಮ, ಆಸೆ, ಸ್ಪರ್ಶ ಮುಂತಾದ ಹಲವು ಭಾವನೆಗಳನ್ನು ವ್ಯಕ್ತಪಡಿಸುವುದರಿಂದ ಪುರುಷ ಮತ್ತು ಮಹಿಳೆಯ ನಡುವಿನ ಸಂಬಂಧ ಗಟ್ಟಿಯಾಗುತ್ತದೆ. ಸೆಕ್ಸ್ನ ಪ್ರಯೋಜನಗಳು: ಲೈಂಗಿಕ ಕ್ರಿಯೆಯು ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತದೆ. ಇದು ಮಾತ್ರವಲ್ಲದೇ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ. ರಕ್ತದೊತ್ತಡ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಲೈಂಗಿಕತೆಯು ನಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ, ಉತ್ತಮ ನಿದ್ರೆ ಮತ್ತು ರಕ್ತ ಪರಿಚಲನೆಯು ನಮ್ಮ ವೈಯಕ್ತಿಕ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತರುತ್ತದೆ https://ainlivenews.com/allegation-of-ed-cbi-abuse-against-siddaramaiah-protest-in-delhi-tomorrow/ ತಿಂಗಳಿಗೆ ಎಷ್ಟು ಬಾರಿ ಸಂಭೋಗ ನಡೆಸಬೇಕು?: ವರದಿಯ ಪ್ರಕಾರ, ವಿವಾಹಿತರು ಪ್ರಣಯ ಸಂಬಂಧದಲ್ಲಿರುವವರಿಗಿಂತ ಹೆಚ್ಚು ಲೈಂಗಿಕತೆಯನ್ನು ಹೊಂದಿರುತ್ತಾರೆ. ಒಂದು ತಿಂಗಳಲ್ಲಿ ನೀವು ಎಷ್ಟು ಬಾರಿ ಲೈಂಗಿಕತೆಯನ್ನು ಹೊಂದಬಹುದು ಎಂಬುದಕ್ಕೆ ಯಾವುದೇ ಮಿತಿಯಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ನೀವು ಯಾವುದೇ ಸಮಯದಲ್ಲಿ ಬೇಕಾದರೂ ಲೈಂಗಿಕತೆಯನ್ನು ಹೊಂದಬಹುದು ಆದರೆ ಕೆಲವು ವೈದ್ಯರು ವಾರಕ್ಕೊಮ್ಮೆ ಸಂಭೋಗ ನಡೆಸಲು ಶಿಫಾರಸು ಮಾಡುತ್ತಾರೆ. ಇದು ಪಾಲುದಾರರ ನಡುವೆ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ಸಂಬಂಧಕ್ಕೆ ಕಾರಣವಾಗುತ್ತದೆ ಎಂದು…
ಹುಬ್ಬಳ್ಳಿ : ನಿಬವ್ ಲಿಫ್ಟ್÷್ಸ ಭಾರತದಲ್ಲಿ ಅತ್ಯಂತ ದೊಡ್ಡದಾದ ಮನೆಯಲ್ಲಿನ ಎಲಿವೇಟರ್ ಬ್ರಾಂಡ್ ಆಗಿದ್ದು, ಈಗ ತನ್ನ ಕ್ರಾಂತಿಕಾರಿ ನಿಬವ್ ಸೀರೀಸ್ ೪ ಲಿಫ್ಟ್ಗಳನ್ನು ಹುಬ್ಬಳಿೆಯಲ್ಲಿ ಬಿಡುಗಡೆ ಮಾಡಿದ್ದು ಉನ್ನತ ತಂತ್ರಜ್ಞಾನ, ಅಸಾಧಾರಣ ವಿನ್ಯಾಸಗಳ ಸಂಯೋಜನೆಯಾಗಿರುವ ಈ ನೂತನ ಉತ್ಪನ್ನ ಹುಬ್ಬಳ್ಳಿ ಮನೆ ಮಾಲೀಕರಿಗೆ ಐಷಾರಾಮಿ ಎಲಿವೇಟರ್ ಅನುಭವ ಜೊತೆಗೆ ಅತ್ಯಾಧುನಿಕ ವೈಶಿಷ್ಟö್ಯಗಳಿಂದ ಕೂಡಿದ ಅನುಕೂಲವನ್ನು ಸಾದರಪಡಿಸುತ್ತಿದೆ ಎಂದು ಕಂಪನಿಯ ಸಿಒಓ ತಿಳಿಸಿದೆ. ಈ ಕುರಿತು ಮಾಹಿತಿ ನೀಡಿದ ಅವರು ಈ ಲಿಫ್ಟ್ಗಳು ಎಐ ಅಳವಡಿಸಲಾದ ಕ್ಯಾಬಿನ್ ಡಿಸ್‌ಪ್ಲೇ, ಇನ್‌ಟ್ಯೂಸಿವ್ ಎಲ್‌ಒಪಿ ಡಿಸ್‌ಪ್ಲೇ, ಎಲ್‌ಐಡಿಎಆರ್ ೨.೦ ತಂತ್ರಜ್ಞಾನಗಳಿAದ ಕೂಡಿದ್ದು, ಸರಾಗವಾಗಿ ಚಲಿಸುವ ಮತ್ತು ನಿಲ್ಲುವ ವೈಶಿಷ್ಟö್ಯ ಹೊಂದಿವೆ. ನಿಬವ್ ಸೀರೀಸ್ ೪ ಲಿಫ್ಟ್ಗಳು ಪ್ರತ್ಯೇಕವಾದ ಮಿಡ್‌ನೈಟ್ ಬ್ಲಾಕ್ ಆವೃತ್ತಿಯಲ್ಲಿ ಲಭ್ಯವಿದ್ದು, ಗಾಳಿಚಾಲಿತ ಲಿಫ್ಟ್ಗಳಲ್ಲಿ ಅತ್ಯಂತ ಹೆಚ್ಚಿನ ಸ್ಥಳಾವಕಾಶ ಇರುವ ಕ್ಯಾಬಿನ್ ಹೊಂದಿದೆ. https://ainlivenews.com/ladies-do-you-get-pain-in-the-groin-during-sex-here-are-some-tips-to-do-less/ ವಿಶೇಷ ಬೆಳಕಿನ ವ್ಯವಸ್ಥೆ, ನ್ಯೂಜಿಲೆಂಡ್ ವೂಲ್ ಕಾರ್ಪೆಟ್‌ಗಳು, ಸ್ಟಾರ್‌ಲೈಟ್ ಸೀಲಿಂಗ್‌ಗಳು ಮತ್ತು ಲೆದರ್ ಫಿನಿಶ್‌ನ ಒಳಾಂಗಣ ಹೊಂದಿರುತ್ತವೆ.…
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಪೋಲೊ ಮೈಧಾನದಲ್ಲಿ ಹಮ್ಮಿಕೊಂಡಿದ್ದ ತಾಲೂಕಾ ಮಟ್ಟದ ಕ್ರೀಡೆಗಳಲ್ಲಿ ಗುಂಡು ಎಸೆಯುವ ಸ್ಪರ್ಧೆಯಲ್ಲಿ ಭಾಗ ವಹಿಸಿದ ರಾಮಪುರ ನಗರದ ಜ್ಞಾನೋದಯ ಶಿಕ್ಷಣ ಸಂಸ್ಥೆಯ ೭,ನೆ ತರಗತಿ ವಿಧ್ಯಾರ್ಥಿನಿ ಕು,ದೀಪಾಲಿ ರಾಘವೇಂದ್ರ ಇಂಗಳೆ. ಪ್ರಥಮ ಸ್ಥಾನ ಪಡೆದುಕೊಂಡು, ಬಾಗಲಕೋಟೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ, ಜಿಲ್ಲಾಮಟ್ಟದಲ್ಲಿ ನಾಲ್ಕನೆಯ ಸ್ಥಾನ ಪಡೆದಿದ್ದಾಳೆ ಎಂದು ಸಂಸ್ಥೆಯ ಕ್ರೀಡಾ ಶಿಕ್ಷಕ ಮಾರುತಿ ಜಿಡ್ಡಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಕಾಶ ಕುಂಬಾರ ಬಾಗಲಕೋಟೆ
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹೊಸೂರ ಗ್ರಾಮದ ಜಯಶ್ರೀ ಸಿದ್ರಾಮಯ್ಯ ಮಠಪತಿ ಎಂಬ ಯುವತಿಯು ಕೂಲಿ ಮಾಡುವ ಬಡಜಂಗಮ ತಂದೆ ತಾಯಿಗಳ ದುಡುಮೆಯಲ್ಲಿ ವ್ಯಾಸಾಂಗ ಮಾಡುತ್ತಲೆ ಕರ್ನಾಟಕ ಪ್ರಾಧಿಕಾರ ನಡೆಸಿದ, ೫೪೫ ಪಿಎಸ್‌ಐ ಹುದ್ದೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಸಧ್ಯ ಇಲಾಖೆಯಿಂದ ಹೊರಡಿಸಿದ ತಾತ್ಕಾಲಿಕ ಪಟ್ಟಿಯಲ್ಲಿ ಜಯಶ್ರೀ ಹೆಸರು ಇದ್ದು, ಅವಳಿ ನಗರ ಮತ್ತು ಹೊಸೂರ ಗ್ರಾಮದಲ್ಲಿ ಸಂತಸದ ಸಾಧನೆಯಾಗಿದೆ ಎಂದು ರಬಕವಿ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗು ವಕೀಲರಾದ ಗುರುಪಾದಯ್ಯಾ ಅಮ್ಮಣಗಿಮಠ ಹೇಳಿದರು. https://ainlivenews.com/ladies-do-you-get-pain-in-the-groin-during-sex-here-are-some-tips-to-do-less/ ಹೊಸೂರ ಗ್ರಾಮದ ಜಯಶ್ರೀ ಮಠಪತಿ ಅವರ ಮನೆಗೆ ಬೇಟಿ ಕೊಟ್ಟು ಸನ್ಮಾನಿಸಿದರು. ಪ್ರತಿ ಬಡಕುಟುಂಬದಲ್ಲಿ ತಂದೆ ತಾಯಿಗಳ ಆಶೆಗಳನ್ನು ನಿರಾಶೆ ಮಾಡದೆ ಸಾಧಿಸುವ ಶಕ್ತಿಯಾಗಿ ವಿಧ್ಯಾರ್ಥಿಗಳು ಮುನ್ನುಗ್ಗಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶಿವಾನಂದ ಮಠದ. ವಿವೇಕಾನಂದ ಹಿರೇಮಠ. ಗಂಗಯ್ಯ ಹಿರೇಮಠ. ವಿಧ್ಯಾನಂದ ಬಾಗಲಕೊಟಮಠ. ಚಿದಾನಂದ ಅಮ್ಮಣಗಿಮಠ.ಶಿವಾನಂದ ಚಿಕ್ಕಮಠ. ಸೇರಿದಂತೆ ಅನೇಕರು ಇದ್ದರು. ಪ್ರಕಾಶ ಕುಂಬಾರ ಬಾಗಲಕೋಟೆ
ಹುಬ್ಬಳ್ಳಿ: ವಾರ್ಡ್ ನಂ. 48ರ ವ್ಯಾಪ್ತಿಯ ಮಾರುತಿ ನಗರ( ಕೈಗಾರಿಕಾವಸಾಹತು ಸ್ಲಂ)ದ ನಿವಾಸಿಗಳಿಗೆ ಹಕ್ಕಪತ್ರ ವಿತರಣೆ ಹಾಗೂ ವಾರ್ಡ್ ನಂ. 47ರ ವ್ಯಾಪ್ತಿಯ ಜೈ ಹನುಮಾನ ನಗರದ ನಿವಾಸಿಗಳಿಗೆ ಸ್ಲಂ ಬೋರ್ಡ್‌ನಿಂದ ನಿರ್ಮಿಸುತ್ತಿರುವ ಮನೆಗಳ ಕುರಿತಂತೆ ಇಲ್ಲಿಯ ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಅವರು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಶಾಸಕ ಟೆಂಗಿನಕಾಯಿ ಮಾತನಾಡಿ, ಗೋಕುಲ ರಸ್ತೆಯ ಮಾರುತಿ ನಗರದಲ್ಲಿ ಒಟ್ಟು 186 ಮನೆಗಳಿದ್ದು, ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಇರುವ ಅಡೆತಡೆಗಳನ್ನು ಶೀಘ್ರ ನಿವಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸರ್ವೇ ಕಾರ್ಯ ನಡೆಸಲು ಎರಡು ವಾರ ತೆಗೆದುಕೊಳ್ಳಿ. ಶೀಘ್ರವಾಗಿ ಎಡಿಎಲ್‌ಆರ್, ಡಿಡಿಎಲ್‌ಆರ್, ತಹಸೀಲ್ದಾರ್, ಮಹಾನಗರ ಪಾಲಿಕೆ ಹಾಗೂ ಸ್ಲಂ ಬೋರ್ಡ್ ಅಧಿಕಾರಿಗಳ ಸಭೆ ಕರೆಯಬೇಕೆಂದು ತಹಸೀಲ್ದಾರ್ ಕಲಗೌಡ ಪಾಟೀಲ ಅವರಿಗೆ ಸೂಚಿಸಿದರು. https://ainlivenews.com/ladies-do-you-get-pain-in-the-groin-during-sex-here-are-some-tips-to-do-less/ ವಾರ್ಡ್ ನಂ. 47ರ ವ್ಯಾಪ್ತಿಯ ವಿದ್ಯಾನಗರದ ವಿನಾಯಕ ನಗರದಲ್ಲಿ ಜೈ ಹನುಮಾನ ನಗರದ ಸ್ಲಂನಲ್ಲಿ ಸ್ಲಂ ಬೋರ್ಡ್‌ನಿಂದ ನಿರ್ಮಿಸುತ್ತಿರುವ ಮನೆಗಳ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ…
ಮುಳಬಾಗಿಲು: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪಾದಾಚಾರಿ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು_ಶ್ರೀನಿವಾಸಪುರ ರಸ್ತೆಯ ದೊಡ್ಡಗುರ್ಕಿ ಗೇಟ್ ಬಳಿ ನಡೆದಿದೆ. ಮೃತ ದುರ್ದೈವಿ ಕೋಲಾರ ತಾಲೂಕಿನ ಅರಾಭಿಕೊತ್ತನೂರು ಗ್ರಾಮದ ನಾರಾಯಣಪ್ಪ ಎಂದು ಗುರುತಿಸಲಾಗಿದ್ದು, https://ainlivenews.com/ladies-do-you-get-pain-in-the-groin-during-sex-here-are-some-tips-to-do-less/ ರಸ್ತೆ ದಾಟುವ ಸಮಯದಲ್ಲಿ ಅಪರಿಚಿತ ವಾಹನ ದಿಕ್ಕಿಯಿಂದಾಗಿ ಪಾದಚಾರಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆ.ಆರ್.ಪುರ: ರಾಜ್ಯ ಮಟ್ಟದ 4ನೇ ವೈಜ್ಞಾನಿಕ ಸಮ್ಮೇಳನವನ್ನು ಡಿಸೆಂಬರ್ 28 ಮತ್ತು 29 ರಂದು ಬೆಂಗಳೂರಿನ ಬಾಗಲೂರು ವಿಜೆ ಇಂಟರ್ನ್ಯಾಷನಲ್ ಶಾಲಾ ಮೈದಾನದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜ್ ಅವರು ತಿಳಿಸಿದರು. ನಾಗವಾರದ ಎಸ್.ವಿ.ಎನ್, ಶಾಲಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಮ್ಮೇಳನದ ಸರ್ವಾಧ್ಯಕ್ಷರಾಗಿ ರಂಗಭೂಮಿ ಕಲಾವಿದೆ ಚಲನಚಿತ್ರ ನಟಿ ಉಮಾಶ್ರೀ ಅವರನ್ನು ಆಯ್ಕೆ ಮಾಡಲಾಗಿದ್ದು, ವಿಜ್ಞಾನ ವಸ್ತು ಪ್ರದರ್ಶನ, ವೈವಿಧ್ಯಮಯವಾದ ಆಹಾರಮೇಳ, ಕರಕುಶಲ ವಸ್ತು ಪ್ರದರ್ಶನ, ಆಕರ್ಷಕ ಸಾಂಸ್ಕೃತಿಕ ವೈಭವ ರಾಜ್ಯ ಮಟ್ಟದಲ್ಲಿ 10 ಜನರಿಗೆ ಜೀವಮಾನ ಶ್ರೇಷ್ಠ ಸಾಧನ ಪ್ರಶಸ್ತಿ, ರಾಜ್ಯದ 37ಜನರಿಗೆ ಹೆಚ್.ಎನ್.ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದರು. https://ainlivenews.com/ladies-do-you-get-pain-in-the-groin-during-sex-here-are-some-tips-to-do-less/ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡಬಳ್ಳಾಪುರ ಹಾಗೂ ಬೆಂಗಳೂರು ಶೈಕ್ಷಣಿಕ ಜಿಲ್ಲೆ ಮತ್ತು ಕರ್ನಾಟಕ ರಾಜ್ಯ ಖಾಸಗಿ ಶಾಲಾ ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟ,ಕರ್ನಾಟಕ ರಾಜ್ಯ ಮಾನವ ಬಂಧುತ್ವ ವೇದಿಕೆ, ಕರ್ನಾಟಕ ಸರ್ಕಾರದ ಮಾಹಿತಿ…
ಹುಬ್ಬಳ್ಳಿ: ವಿಧಾನಸಭೆ 3 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಯವರು ಹಣದ ಹೊಳೆ ಹರಿಸಿದರೂ ಸಹ ಜನರು ಅವರಿಂದ ಹಣ ಪಡೆದು, ಕಾಂಗ್ರೆಸ್‌ಗೆ ಮತ ಹಾಕಲಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು ಖಚಿತ. ಮೂರು ಕ್ಷೇತ್ರಗಳಲ್ಲಲೂ ಜಯಭೇರಿ ಬಾರಿಸುತ್ತೇವೆ ಎಂದರು. https://ainlivenews.com/ladies-do-you-get-pain-in-the-groin-during-sex-here-are-some-tips-to-do-less/ ವಕ್ಸ್ ಆಸ್ತಿ ವಿಚಾರದಲ್ಲಿ ಕಾಂಗ್ರೆಸ್ ತಪ್ಪು ಮಾಡಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಿದ ನೋಟಿಸ್ ಈಗಲೂ ಮುಂದುವರಿದಿದೆ. ಕಾಂಗ್ರೆಸ್ ರೈತರ ವಿರೋಧಿ ಅಲ್ಲ. ರೈತ ವಿರೋಧಿಯಾಗಿದ್ದರೆ ದೇವರಾಜ ಅರಸು ಸರ್ಕಾರದ ಅವಧಿಯಲ್ಲಿ 22 ಲಕ್ಷ ಹೆಕ್ಟೇರ್ ಜಮೀನು ರೈತರಿಗೆ ನೀಡುತ್ತಿರಲಿಲ್ಲ ಎಂದರು. ವಿರೋಧ ಪಕ್ಷ ಸ್ಥಾನದಲ್ಲಿರುವ ಬಿಜೆಪಿ ಹೋರಾಟ ಮಾಡುವುದು ಸಾಮಾನ್ಯ. ಚುನಾವಣೆ ಇರುವುದರಿಂದ ಮಾಡುತ್ತಿದ್ದಾರೆ. ಮೂರು ಉಪಚುನಾವಣೆ ಮುಗಿದ ಬಳಿಕ ಎಲ್ಲವನ್ನೂ ಬಿಟ್ಟು ಮನೆಗೆ ಹೋಗುತ್ತಾರೆ ಎಂದು ಟೀಕಿಸಿದರು.