Author: AIN Author

ಟೊಮ್ಯಾಟೋಗಳನ್ನು ಪ್ರಪಂಚದಾದ್ಯಂತದ ವಿವಿಧ ಆಹಾರಗಳನ್ನು ತಯಾರಿಸುವುದರಲ್ಲಿ ಬಳಸುತ್ತಾರೆ. ಅವು ರುಚಿಕರ ಮಾತ್ರವಲ್ಲದೆ, ಅಗತ್ಯ ಪೋಷಕಾಂಶಗಳಿಂದ ಕೂಡಿದೆ. ಮಾರುಕಟ್ಟೆಯಿಂದ ದುಬಾರಿ ಬೆಲೆ ಕೊಟ್ಟು ತಂದ ಟೊಮೆಟೋ ಹಾಳಾದರೆ ಬೇಸರವಾಗುವುದು ಖಂಡಿತ. ಅದಕ್ಕಾಗಿ ನಾವಿಂದು ಟೊಮೆಟೊಗಳನ್ನು ಸಂಗ್ರಹಿಸಲು ಕೆಲವು ಆರೋಗ್ಯಕರ ವಿಧಾನಗಳನ್ನು ತಿಳಿಸಿದ್ದೇವೆ. ನೀವು ಟೊಮೆಟೊಗಳನ್ನು ಫ್ರಿಡ್ಜ್‌ನಲ್ಲಿ ಇಡುತ್ತೀರಾ?​ ಟೊಮೆಟೊಗಳನ್ನು ಫ್ರಿಜ್‌ನಲ್ಲಿ ಇಡಬಾರದು ಎಂದು ನಮಗೆ ಯಾವಾಗಲೂ ಹೇಳಲಾಗುತ್ತದೆ. ರೆಫ್ರಿಜರೇಟರ್ ಟೊಮೆಟೊಗಳಿಗೆ ತಂಪಾದ ಶೇಖರಣಾ ಸ್ಥಳವಾಗಿದೆ. ಆದ್ದರಿಂದ, ಯಾವಾಗಲೂ ಕೋಣೆಯ ಉಷ್ಣಾಂಶದಲ್ಲಿ ಟೊಮೆಟೊಗಳನ್ನು ಇರಿಸುವುದು ಮುಖ್ಯ. ಟೊಮೆಟೋವನ್ನು ಅಡುಗೆಗೆ ಬಳಸುವಾಗ ಮೊದಲು ಹೆಚ್ಚು ಹಣ್ಣಾಗಿರುವ ಟೊಮೆಟೋವನ್ನು ಬಳಸಿ. ನೀವು ಸಾಕಷ್ಟು ಮಾಗಿದ ಟೊಮೆಟೊಗಳನ್ನು ಹೊಂದಿದ್ದರೆ ಮಾತ್ರ, ನೀವು ಅವುಗಳನ್ನು ಫ್ರಿಡ್ಜ್‌ನಲ್ಲಿಡಬಹುದು. ಟೊಮೆಟೋದ ಕಾಂಡದ ಬದಿ ಕೆಳಗಿರುವಂತೆ ಇರಿಸಿ​ ಟೊಮೆಟೊಗಳು ಬೇಗನೆ ಕೊಳೆಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಮತ್ತು ಅವುಗಳು ಹೆಚ್ಚು ದಿನಗಳವರೆಗೆ ಇರುವಂತೆ ಮಾಡಲು ಅವುಗಳ ಕಾಂಡದ ಬದಿಯನ್ನು ಕೆಳಗೆ ಇರಿಸಿ. ಇದು ಅವುಗಳನ್ನು ವೇಗವಾಗಿ ಹಣ್ಣಾಗಿಸುತ್ತದೆ. ಟೊಮೆಟ್ಯೋವನ್ನು ಸೂರ್ಯನ ಬೆಳಕಿನಿಂದ ದೂರ ಇಡುವುದು ದೀರ್ಘಕಾಲದವರೆಗೆ…

Read More

ಬೆಂಗಳೂರು: ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಹನಿ ನೀರಾವರಿಗಾಗಿ ಸಹಾಯಧನ ಪಡೆದುಕೊಳ್ಳಲು ಯೋಜನೆ ರೂಪಿಸಲಾಗಿದೆ. ಹನಿ ನೀರಾವರಿಗೆ ಶೇ. 90 ರಷ್ಟು ಸಹಾಯಧನ ತೋಟಗಾರಿಕೆ ಇಲಾಖೆ ಹನಿ ನೀರಾವರಿ ಯೋಜನೆಯಡಿ ಸಹಾಯಧನ ಸೌಲಭ್ಯ ದೊರೆಯಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್  ತಾಲೂಕಿನ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಸ್‌.ಕೇಶವಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಯೋಜನೆಯಡಿ ಫಲಾನುಭವಿಗೆ ಗರಿಷ್ಠ 2 ಎಕರೆ ಪ್ರದೇಶದ ಬೆಳೆಗಳಿಗೆ ಹನಿ ನೀರಾವರಿ ಅಳವಡಿಕೆಗೆ ಅವಕಾಶವಿದೆ. ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ 90ರಷ್ಟು ಸಹಾಯಧನ ದೊರೆಯುತ್ತದೆ. ಆಸಕ್ತರು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಸಂಪರ್ಕಿಸಿ ಅರ್ಜಿ ಸಲ್ಲಿಸಲು ಕೋರಿದೆ ಹನಿ ನಿರಾವರಿ ಸಹಾಯಧನ ಪಡೆಯಲು ಅರ್ಜಿ ಅಲ್ಲಿಸಿ ತೋಟಗಾರಿಕೆ ಬೆಳೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಲುವಾಗಿ ತೋಟಗಾರಿಕೆ ಇಲಾಖೆ ಹನಿ ನೀರಾವರಿ ಯೋಜನೆ ಅನುಷ್ಠಾನಗೊಳಿಸುತ್ತಿದ್ದು ಈ ಯೋಜನೆಯಡಿ ರೈತರಿಗೆ…

Read More

ನೀವು ಸಾಮಾನ್ಯವಾಗಿ ಗಮನಿಸಿರಬಹುದು ಮೀವು ಮನೆಯಲ್ಲಿ ತಯಾರಿಸಿದ ಚಪಾತಿ ಹೊಟೇಲ್‌ನಲ್ಲಿ ತಯಾರಿಸಿದ ಚಪಾತಿಯಷ್ಟು ಮೃದುವಾಗಿರುವುದಿಲ್ಲ, ಉಬ್ಬಿರುವುದಿಲ್ಲ. ನೀವೂ ಕೂಡಾ ಮೃದುವಾಗಿರುವ ಚಪಾತಿಯನ್ನು ತಯಾರಿಸಲು ಬಯಸಿದರೆ ಇಲ್ಲಿದೆ ಕೆಲವು ಟಿಪ್ಸ್. ಉಗುರುಬೆಚ್ಚಗಿನ ಎಣ್ಣೆ ಸೇರಿಸಿ​ ಚಪಾತಿಗೆ ಹಿಟ್ಟನ್ನು ಕಲಸುವಾಗ ಅದಕ್ಕೆ ಸ್ವಲ್ಪ ಉಗುರುಬೆಚ್ಚಗಿನ ಎಣ್ಣೆಯನ್ನು ಸೇರಿಸಿದರೆ ಸಾಕು. ಹಿಟ್ಟನ್ನು ಬೆರೆಸುವ ಮೊದಲು, ಸಂಸ್ಕರಿಸಿದ ಎಣ್ಣೆಯನ್ನು ಬಿಸಿ ಮಾಡಿ. ಹಿಟ್ಟಿಗೆ 1 ಚಮಚ ಬಿಸಿ ಎಣ್ಣೆಯನ್ನು ಸುರಿಯಿರಿ ಮತ್ತು ಚೆನ್ನಾಗಿ ಬೆರೆಸಿಕೊಳ್ಳಿ. ಈಗ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು ಕಲಸಿ. ಕೊನೆಯಲ್ಲಿ, ಮೇಲೆ ಸ್ವಲ್ಪ ಎಣ್ಣೆಯನ್ನು ಸುರಿಯಿರಿ, ಅದನ್ನು ಒಂದು ನಿಮಿಷ ಮತ್ತೆ ಬೆರೆಸಿಕೊಳ್ಳಿ ಮತ್ತು ಸ್ವಲ್ಪ ಸಮಯದವರೆಗೆ ಮುಚ್ಚಿಡಿ. ಹಿಟ್ಟನ್ನು ಮೊಟ್ಟೆಯೊಂದಿಗೆ ಮೃದುವಾಗಿ ಕಲಸಿ​ ನೀವು ಮೊಟ್ಟೆ ಸೇವಿಸುವವರಾದರೆ, ಚಪಾತಿಗೆ ಹಿಟ್ಟನ್ನು ಕಲಸುವಾಗ ಅದಕ್ಕೆ ಮೊಟ್ಟೆಯನ್ನು ಬಳಸಬಹುದು. ಇದಕ್ಕಾಗಿ, ಮೊಟ್ಟೆಯ ಬಿಳಿಭಾಗವನ್ನು ಪ್ರತ್ಯೇಕ ಬಟ್ಟಲಿನಲ್ಲಿ ತೆಗೆದುಕೊಳ್ಳಿ. ಅದರಲ್ಲಿ 2 ಹನಿ ನಿಂಬೆ ರಸವನ್ನು ಸೇರಿಸಿ ಮತ್ತು ಚೆನ್ನಾಗಿ ಬೀಟ್ ಮಾಡಿ. ಇದನ್ನು…

Read More

ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಗ್ರೂಪ್-ಸಿ ವೃಂದದ ಉಳಿಕೆ ಮೂಲ ವ್ಯಂದದಲ್ಲಿ ಖಾಲಿ ಇರುವ ಹಾಗೂ ಕಲ್ಯಾಣ ಕರ್ನಾಟಕ (ಸ್ಥಳೀಯ ವೃಂದ) ವೃಂದದಲ್ಲಿ ಖಾಲಿ ಇರುವ ಕರ್ಕ್‌-ಕಂ-ಟೈಪಿಸ್ಟ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಅರ್ಹ ಮತ್ತು ಆಸಕ್ತರು ಕೊನೆ ಕ್ಷಣದವರೆಗೆ ಕಾಯದೇ ಬೇಗ ಬೇಗ ಅರ್ಜಿ ಸಲ್ಲಿಸಿ. ಹುದ್ದೆ ವಿವರ: ಒಟ್ಟು 30 ಟೈಪಿಸ್ಟ್​​ ಕಂ ಕ್ಲರ್ಕ್​ ಹುದ್ದೆ. ಇದರಲ್ಲಿ ಕಲ್ಯಾಣ ಕರ್ನಾಟಕಕ್ಕೆ 14 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ವಿದ್ಯಾರ್ಹತೆ: ಅಭ್ಯರ್ಥಿಯು ಪಿಯುಸಿ ಉತ್ತೀರ್ಣಗೊಂಡು, ಕರ್ನಾಟಕ ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆ ಉತ್ತೀರ್ಣಗೊಂಡಿರಬೇಕು. ವಯೋಮಿತಿ: ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 38 ವರ್ಷ, ಪ್ರವರ್ಗ 2ಎ , 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪ.ಜಾ, ಪ. ಪಂ ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ…

Read More

ಛಟ ಪೂಜಾ ಸೂರ್ಯೋದಯ: 06:21, ಸೂರ್ಯಾಸ್ತ : 05:38 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ,ಶರದ ಋತು, ಕಾರ್ತಿಕ್ ಮಾಸ, ತಿಥಿ: ಷಷ್ಠಿ ನಕ್ಷತ್ರ: ಪುರ್ವಾಷಾಢ ರಾಹು ಕಾಲ: 01:30 ನಿಂದ 03:00 ತನಕ ಯಮಗಂಡ: 06:00 ನಿಂದ 07:30 ತನಕ ಗುಳಿಕ ಕಾಲ: 09:00 ನಿಂದ 10:30 ತನಕ ಅಮೃತಕಾಲ: ಬೆ.6:49 ನಿಂದ ಬೆ.8:28 ತನಕ ಅಭಿಜಿತ್ ಮುಹುರ್ತ: ಬೆ.11:37 ನಿಂದ ಮ.12:22 ತನಕ ಮೇಷ ರಾಶಿ: ವಿವಾಹ ಕಾರ್ಯ ನಿರೀಕ್ಷೆಯಲ್ಲಿರುವವರಿಗೆ ಶುಭ, ಪ್ರೇಮಿಗಳ ಬಾಂಧವ್ಯ ವೃದ್ಧಿ, ಕುಟುಂಬದಲ್ಲಿ ಜಗಳ ಸಂಭವ, ವ್ಯಾಪಾರದ ಆರ್ಥಿಕ ಮುಗ್ಗಟ್ಟು, ಮಕ್ಕಳಿಂದ ಮನಸ್ತಾಪ, ರಾಜಕೀಯ ರಂಗದ ಜನಪ್ರತಿನಿಧಿಗಳಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ, ಅಣ್ಣ-ತಮ್ಮಂದಿರ ಆಸ್ತಿಗಾಗಿ ಹೋರಾಟ, ಸಹೋದರಿಗಳಿಂದ ಮನಸ್ತಾಪ, ಎಲ್ಲ ಚಲನಚಿತ್ರ ನಟ ನಟಿಯರಿಗೆ ನಷ್ಟ, ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ, ಸಾಲಗಾರರಿಂದ ಅವಮಾನ, ಹೊಸ ವ್ಯಾಪಾರ ಪ್ರಾರಂಭಿಸಲು ಸೂಕ್ತ ಸಮಯವಲ್ಲ, ಜಾತಕ…

Read More

ಬೆಂಗಳೂರು:- ನಗರದ ಯಲಹಂಕ ಪಿರಮಿಡ್ ಬನ್ಸಿಕಾ-ಮಹಿಕಾ ಅಪಾರ್ಟ್ಮೆಂಟ್‌ನಲ್ಲಿ ಆಯತಪ್ಪಿ ಅಪಾರ್ಟ್ಮೆಂಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಜರುಗಿದೆ https://ainlivenews.com/a-woman-escaped-overnight-after-collecting-crores-of-rupees-in-the-name-of-ticket-business/ ಅಬಿದುಲ್ಲಾ ಮೃತ ದುರ್ದೈವಿ. ನಿನ್ನೆ ರಾತ್ರಿ ಕಾರ್ಮಿಕ ಅಪಾರ್ಟ್ಮೆಂಟ್‌ನ ನಾಲ್ಕನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಆಯಾತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಸದ್ಯ ಕಾರ್ಮಿಕನ ಕುಟುಂಬಸ್ಥರಿಗೆ ಯಲಹಂಕ ಪೊಲೀಸರು ಮಾಹಿತಿ ನೀಡಿದ್ದಾರೆ.

Read More

ದೊಡ್ಡಬಳ್ಳಾಪುರ: ಅವರೆಲ್ಲಾ ಆ ಏರಿಯಾದಲ್ಲಿದ್ದ ಮಹಿಳೆಯ ಬಣ್ಣದ ಮಾತುಗಳ ನಂಬಿ ನಾಲ್ಕೈದು ವರ್ಷಗಳಿಂದ ಚೀಟಿ ಕಟ್ಟುತ್ತಿದ್ದರು. ಬಾಡಿಗೆ ಮನೆಯಲ್ಲಿದ್ದ ಮಹಿಳೆಯ ಚೀಟಿ ವ್ಯವಹಾರಕ್ಕೆ ನೂರಾರು ಜನ ನಂಬಿ ಲಕ್ಷ ಲಕ್ಷ ಚೀಟಿ ಕಟ್ಟಿದ್ದರು. ಆದ್ರೆ ಹಣವನ್ನ ಕೊಡಬೇಕಿದ್ದ ಆ ಮಹಿಳೆ ಚೀಟಿ ಹಣದೊಂದಿಗೆ ಪರಾರಿಯಾಗಿದ್ದು ಕೋಟಿ ಕೋಟಿ ವಂಚನೆ ಆರೋಪ ಕೇಳಿ ಬಂದಿದೆ. ಮೋಸ ಹೋದ ಚೀಟಿದಾರರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.. ಈ ಪೋಟೊದಲ್ಲಿ ಕಾಣಿಸ್ತಿರೋ ಈಕೆಯ ಹೆಸರು ಪುಷ್ಪಕಲಾ ಅಂತಾ. ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದ ಮುಕ್ತಾಂಭಿಕ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿದ್ದ ಈಕೆ ಇದೀಗ ನೂರಾರು ಜನರ ಬಳಿ ಚೀಟಿ ಹಣ ಕಟ್ಟಿಸಿಕೊಂಡು ಪಂಗನಾಮ ಹಾಕಿ ಎಸ್ಕೆಪ್ ಹಾಗಿರೋ ಆರೋಪ ಕೇಳಿ ಬಂದಿದೆ. ಅಂದಹಾಗೆ ಇಲ್ಲಿನ ಬಡಾವಣೆ ಸುತ್ತಾಮುತ್ತಲಿನ 250 ಕ್ಕೂ ಜನ ಈಕೆಯ ಬಣ್ಣದ ಮಾತುಗಳು ನಂಬಿ ಕಳೆದ ನಾಲ್ಕು ವರ್ಷಗಳಿಂದ ಲಕ್ಷಾಂತರ ರೂ ಚೀಟಿ ಕಟ್ಟಿದ್ದರಂತೆ. https://youtu.be/yvYNIVdH1oM?si=GY-CL2EEzCBru2vH ಜೊತೆಗೆ ನಾಲ್ಕು ವರ್ಷಗಳ ಕಾಲ ಚೀಟಿ ವ್ಯವಹಾರ ನಡೆಸಿದ…

Read More

ವಿಶೇಷವಾದ ಆಚರಣೆಗಳು ಮತ್ತು ಸಂಪ್ರದಾಯಗಳಿಗೆ ಹೆಸರುವಾಸಿಯಾದ ಅನೇಕ ಹಳ್ಳಿಗಳು ದೇಶದಲ್ಲಿವೆ. ಆದರೆ ಹಲವು ಸಂಪ್ರದಾಯವನ್ನು ಬೆಚ್ಚಿಬೀಳಿಸುವ ಒಂದು ಹಳ್ಳಿಯಿದೆ. ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಪ್ರತಿಯೊಬ್ಬ ಪುರುಷನು ಎರಡು ಮದುವೆಯಾಗುತ್ತಾನೆ. ಈ ಗ್ರಾಮದಲ್ಲಿ ಪ್ರತಿಯೊಬ್ಬ ಪುರುಷನಿಗೂ ಇಬ್ಬರು ಮಹಿಳೆಯರನ್ನು ಮದುವೆಯಾಗುವ ಹಕ್ಕಿದೆ. ಇದಲ್ಲದೇ ಎರಡನೇ ಮದುವೆಗೆ ಮೊದಲ ಹೆಂಡತಿಯಿಂದ ಯಾವುದೇ ವಿರೋಧವಿರುವುದಿಲ್ಲ. ಈ ಸಂಪ್ರದಾಯವು ವಿಚಿತ್ರವೆನಿಸಬಹುದು, ಆದರೆ ಇಲ್ಲಿನ ಸ್ಥಳೀಯ ಜನರು ಇದನ್ನು ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದ್ದಾರೆ. ವಾಸ್ತವವಾಗಿ, ರಾಮದೇವ್ ಕಿ ಬಸ್ತಿ ಎಂಬುದು ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿರುವ ಒಂದು ಹಳ್ಳಿಯ ಹೆಸರು, ಇಲ್ಲಿ ಅನೇಕ ತಲೆಮಾರುಗಳಿಂದ ಎರಡು ಮದುವೆಯ ಸಂಪ್ರದಾಯ ನಡೆಯುತ್ತಿದೆ. ಇಲ್ಲಿನ ಜನರು ತಮ್ಮ ಸಂಪ್ರದಾಯಗಳನ್ನು ಬಹಳ ಹೆಮ್ಮೆಯಿಂದ ಅನುಸರಿಸುತ್ತಾರೆ. ಆದ್ದರಿಂದಲೇ ಗಂಡನ ಎರಡನೇ ಮದುವೆಗೆ ಮೊದಲ ಹೆಂಡತಿಯಿಂದ ಯಾವುದೇ ವಿರೋಧವಿರುವುದಿಲ್ಲ. https://ainlivenews.com/a-student-died-after-going-swimming-in-the-lake-with-his-friends/ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ರಾಮದೇವರ ಬಸ್ತಿ ಗ್ರಾಮದ ಜನರು ಯಾವುದೇ ಪುರುಷನ ಮೊದಲ ಹೆಂಡತಿ ಎಂದಿಗೂ ಗರ್ಭಧರಿಸಲು ಸಾಧ್ಯವಿಲ್ಲ ಎಂದು ನಂಬುತ್ತಾರೆ.…

Read More

ದೊಡ್ಡಬಳ್ಳಾಪುರ: ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ಹೋಗಿ ವಿದ್ಯಾರ್ಥಿ ಸಾವನ್ನಪ್ಪಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕರಾಯಪ್ಪನಹಳ್ಳಿ ಕೆರೆಯಲ್ಲಿ ನಡೆದಿದೆ. ಶ್ರೀನಿವಾಸ್( 20)  ಸಾವನಪ್ಪಿರುವ ದುರ್ದೈವಿಯಾಗದ್ದು, ಕೊಂಗಾಡಿಯಪ್ಪ ಕಾಲೇಜಿನಲ್ಲಿ  ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದನು. https://ainlivenews.com/ladies-do-you-get-pain-in-the-groin-during-sex-here-are-some-tips-to-do-less/ ದೊಡ್ಡಬಳ್ಳಾಪುರದ ಲಗುಮೇನಹಳ್ಳಿ ನಿವಾಸಿಯಾಗಿರುವ ಶ್ರೀನಿವಾಸ್, ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಮೃತದೇಹಕ್ಕೆ ಶೋಧಕಾರ್ಯ ಮುಂದುವರೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಠಾಣೆಯ ವ್ಯಾಪ್ತಿಯಲದಲಿ ನಡೆದಿದೆ,

Read More

ಇತ್ತೀಚಿನ ದಿನಗಳಲ್ಲಿ ಮನುಷ್ಯನ ಮೇಲೆ ದೇವರು ಬರೋದು, ಕಾಮನ್ ಆಗಿ ಬಿಟ್ಟಿದೆ. ಕೂತ ಸ್ಥಳದಲ್ಲಿ, ನಿಂತ ಸ್ಥಳದಲ್ಲಿ ದೇವರು ಬಂತು ಅಂತ ಕಥೆ ಕಡ್ತಾರೆ. ಅಷ್ಟಕ್ಕೂ ಇದು ನಿಜನಾ ದೇವರು ಮನುಷ್ಯನ ಮೈಮೇಲೆ ಬರುತ್ತಾ ಎಂಬ ಪ್ರಶ್ನೆ ನಿಮಗೂ ಇದ್ಯಾ ಹಾಗಿದ್ರೆ ಈ ಸ್ಟೋರಿ ನೋಡಿ! https://ainlivenews.com/good-news-for-bsnl-customers-5g-service-to-start-soon/ ಅನೇಕ ಮಂದಿ ತಮ್ಮ ಮೈಮೇಲೆ ದೇವರು ಬಂತು. ಹಾಗೆ ಹೀಗೆ ಎಂದೆಲ್ಲಾ ಹೇಳುತ್ತಾರೆ. ಆದರೆ ಇದು ನಿಜಕ್ಕೂ ನಿಜನಾ ಎಂಬ ಪ್ರಶ್ನೆ ನಿಮ್ಮನ್ನೆಲ್ಲಾ ಕಾಡದೆ ಇರದು. ಒಂದು ಕಾಲದಲ್ಲಿ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ದೇವತೆಗಳು ಸೇರುವ ದೇವಸ್ಥಾನವಿತ್ತು. ಆದರೆ ಈಗ ಅದು ಕಡಿಮೆಯಾಗುತ್ತಿದೆ. ಹಾಗಾದರೆ, ದೇವರು ಮನುಷ್ಯರ ಮೈಮೇಲೆ ಬರುವುದು ನಿಜವೇ..? ಇದರ ಕುರಿತು ಒಂದಿಷ್ಟು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಜೈನ ಧರ್ಮಗ್ರಂಥಗಳು ಯಾವ ವ್ಯಕ್ತಿ ಪುಣ್ಯಾತ್ಮನಾಗಿರುತ್ತಾನೋ ಅವನು ಭಗವಂತನ ಮಾರ್ಗವನ್ನು ಪಡೆದುಕೊಳ್ಳುತ್ತಾನೆ ಎಂದು ಉಲ್ಲೇಖಿಸಲಾಗಿದೆ. ಮುಖ್ಯವಾಗಿ ನಾವು 4 ವಿಧದ ದೇವರನ್ನು ನೋಡಬಹುದು. ಅವುಗಳೆಂದರೆ: ದೇವಾದಿದೇವ, ಸುದೇವ, ಕುದೇವ…

Read More