Author: AIN Author

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಎ1 ಆಗಿರುವ ಪವಿತ್ರಾ ಗೌಡಗೆ ಮತ್ತೆ ನಿರಾಸೆ ಆಗಿದೆ. ಹೌದು ರೇಣುಕಾಸ್ವಾಮಿ ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ಸೇರಿದಂತೆ ಐವರ ಜಾಮೀನು ಅರ್ಜಿ ವಿಚಾರಣೆಯನ್ನು ನ.21 ಕ್ಕೆ ಹೈಕೋರ್ಟ್ ಮುಂದೂಡಿದೆ. ಪವಿತ್ರಾ ಗೌಡ , ಅನುಕುಮಾರ್. ನಾಗರಾಜ್, ಲಕ್ಷ್ಮಣ್, ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಇಂದು ಜಾಮೀನು ಅರ್ಜಿ ವಿಚಾರಣೆ ನಡೆದಿದೆ. https://ainlivenews.com/no-matter-what-you-do-keep-the-chapati-soft-while-the-dough-is-kneading-follow-these/ ಈ ಪೈಕಿ ಎ-1 ಆರೋಪಿ ಪವಿತ್ರಾಗೌಡಗೆ ಜೈಲೇ ಗತಿ ಆಗಿದ್ದು, ನ.21 ಕ್ಕೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಆಗಿದ್ದು, ಅವರು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್ ಜಾಮೀನು ಅರ್ಜಿ ವಿಚಾರಣೆಗೆ ಎಸ್‌ಪಿಪಿ ಪ್ರಸನ್ನಕುಮಾರ್ ಮನವಿ ಮಾಡಿದರು. ಕೋರ್ಟ್ ನ.21 ರಂದು ಪವಿತ್ರಗೌಡ, ದರ್ಶನ್, ಅನುಕುಮಾರ್, ಲಕ್ಷ್ಮಣ್, ನಾಗರಾಜ್ ಜಾಮೀನು ಅರ್ಜಿ ವಿಚಾರಣೆಗೆ ನಿಗದಿಪಡಿಸಿದೆ.  

Read More

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಉಪಚುನಾವಣೆ ಅಖಾಡದಲ್ಲಿ ಅಬ್ಬರಿಸುತ್ತಿರುವಾಗಲೇ, ಅವರಿಗೆ ಮುಡಾ ಹಗರಣ ಮಗ್ಗಲ ಮುಳ್ಳಾಗಿ ಕಾಡುತ್ತಿದೆ. ಹೌದು ಲೋಕಾಯುಕ್ತ ಬಳಿಕ ಈಗ ಇ.ಡಿ ವಿಚಾರಣೆಯ ಭೀತಿ ಸಿದ್ದರಾಮಯ್ಯಗೆ ಶುರುವಾಗಿದೆ. ಸಿದ್ದರಾಮಯ್ಯ ಇಬ್ಬರು ಅತ್ಯಾಪ್ತರಿಗೆ ಇ.ಡಿಯಿಂದ ಸಮನ್ಸ್ ನೀಡಲಾಗಿದೆ. ಮುಡಾ ಮಾಜಿ ಅಧ್ಯಕ್ಷ ಮರಿಗೌಡ ಸೇರಿ 7 ಮಂದಿಗೆ ಇ.ಡಿ ಸಮನ್ಸ್ ಕೊಟ್ಟಿದೆ. ತುರ್ತು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ. ಮುಡಾ ಮಾಜಿ ಆಯುಕ್ತ ದಿನೇಶ್, ನಟೇಶ್‌ಗೂ ಮತ್ತೆ ಸಮನ್ಸ್ ನೀಡಿದೆ. ಇವರೆಲ್ಲರ ವಿಚಾರಣೆ ಬಳಿಕ ಸಿಎಂಗೆ ಇ.ಡಿ ನೋಟಿಸ್ ನೀಡುವ ಸಾಧ್ಯತೆ ಇದೆ. ಲೋಕಾಯುಕ್ತ ಬಳಿಕ ಸಿಎಂಗೆ ಇ.ಡಿ ವಿಚಾರಣೆ ಭೀತಿ ಶುರುವಾಗಿದೆ. https://ainlivenews.com/no-matter-what-you-do-keep-the-chapati-soft-while-the-dough-is-kneading-follow-these/ ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್‌ಗೂ ಸಂಕಷ್ಟ ಎದುರಾಗಿದೆ. ಲೋಕಾಯುಕ್ತ ಎಸ್ಪಿ ವಿರುದ್ಧ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ವಿಚಾರಣೆಯಲ್ಲಿ ಹಲವು ಲೋಪ ಆಗಿದೆ. ಲೋಕಾಯುಕ್ತ ಎಸ್ಪಿ ಉದೇಶ್ ಕರ್ತವ್ಯಲೋಪ ಎಸಗಿದ್ದಾರೆ. ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ನೀಡಿದ ದೂರಿನಲ್ಲಿ ಉದೇಶ್ ಅವರಿಗೆ…

Read More

ಚಿಕ್ಕಮಗಳೂರು: ಈ ವೀಕೆಂಡ್‍ನಲ್ಲಿ ಕಾಫಿನಾಡಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಶ್ರೀರಾಮಸೇನೆಯ ದತ್ತಮಾಲಾ ಅಭಿಯಾನ ಹಿನ್ನೆಲೆಯಲ್ಲಿ ನ.9 ಹಾಗೂ 10 ರಂದು ಎರಡು ದಿನಗಳ ಕಾಲ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಈ ಪ್ರದೇಶದಲ್ಲಿ ಓಡಾಡಲು ದತ್ತ ಮಾಲಾಧಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. https://ainlivenews.com/no-matter-what-you-do-keep-the-chapati-soft-while-the-dough-is-kneading-follow-these/ ಮುಳ್ಳಯ್ಯನಗಿರಿ, ದತ್ತಪೀಠ, ದತ್ತಪೀಠ, ಗಾಳಿಕೆರೆ, ಸೀತಾಳಯ್ಯನಗಿರಿ, ಮಾಣಿಕ್ಯಾಧಾರ ತಾಣಗಗಳಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ. 21ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಚಾಲನೆ ದೊರೆತಿದೆ. ದತ್ತಮಾಲಾಧಾರಿಗಳು ಏಳು ದಿನಗಳ ವ್ರತಾಚರಣೆಯಲ್ಲಿ ಇರಲಿದ್ದಾರೆ. ಈ ಬಾರಿ ದತ್ತ ಮಾಲಾ ಅಭಿಯಾನದಲ್ಲಿ ಬಿಜೆಪಿ ನಾಯಕರು ಸಹ ಭಾಗವಹಿಸಲಿದ್ದಾರೆ. ಜಿಲ್ಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್​​ ಮಾಡಲಿದ್ದಾರೆ.

Read More

ಬೆಂಗಳೂರು: ಬೈಕ್‌, ಕಾರ್‌, ಟ್ರ್ಯಾಕ್ಟರ್‌ ಯಾವುದೇ ಆಗಿರಲಿ ಆ ನಂಬರ್‌ ಪ್ಲೇಟ್ ಇರ್ಲೇ ಬೇಕು. ಹೆಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್ ಇಲ್ಲಂದರೆ ವಾಹನಗಳಿಗೆ ದಂಡ ಹಾಕುತ್ತೇವೆ ಎಂದು ಸಾರಿಗೆ ಇಲಾಖೆ ಹೇಳಿತ್ತು. ಆದರೆ ಇದೀಗ ಹೆಚ್‌ಎಸ್‌ಆರ್​​ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸರ್ಕಾರ ನವೆಂಬರ್ 30ರ ವರೆಗೆ ಮತ್ತೊಮ್ಮೆ ಗಡುವು ನೀಡಿದೆ. ಈ ದಿನಾಂಕದ ಒಳಗೆ ಮಾಲೀಕರು ತಮ್ಮ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಕು. ಒಂದು ವೇಳೆ ಈ ದಿನಾಂಕದ ಒಳಗೆ ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೇ ಮುಂದಿನ ತಿಂಗಳು ಅಂದರೆ ಡಿಸೆಂಬರ್ 1 ರಿಂದ ದಂಡ ವಿಧಿಸಲಾಗುತ್ತದೆ. https://ainlivenews.com/great-job-opportunity-in-karnataka-lokayukta-apply-today/ 1.90 ಕೋಟಿ ಹಳೆ ವಾಹನಗಳಲ್ಲಿ ಕೇವಲ 55 ಲಕ್ಷ ವಾಹನಗಳಿಗೆ ಮಾತ್ರ ಈ ನಂಬರ್ ಪ್ಲೇಟ್ ಅನ್ನು ಅಳವಡಿಸಲಾಗಿದೆ. ಇನ್ನುಳಿದವರು ಈ ನಂಬರ್ ಪ್ಲೇಟ್​ ಅನ್ನು ಹಾಕಿಸಿಲ್ಲ. ಹೀಗಾಗಿ ಸರ್ಕಾರ ವಾಹನಗಳ ಮಾಲೀಕರಿಗೆ ಮತ್ತೊಂದು ಅವಕಾಶ ಕೊಟ್ಟಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇಲ್ಲದಿದ್ದರೇ ಸರ್ಕಾರಕ್ಕೆ ದಂಡ ಕಟ್ಟಬೇಕಾಗುತ್ತದೆ. ಹೆಚ್‌ಎಸ್‌ಆರ್​​ಪಿ ನಂಬರ್ ಪ್ಲೇಟ್…

Read More

ಹುಬ್ಬಳ್ಳಿ: ಯತ್ನಾಳ್ ನೇತೃತ್ವದಲ್ಲಿ ಕರ್ನಾಟಕದ ಎಲ್ಲ ರೈತರಿಗೆ ನ್ಯಾಯ ಸಿಗುತ್ತದೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಜನಪ್ರಿಯ ನೇತಾರ ಯತ್ನಾಳ್ ಅವರು ವಕ್ಫ್ ವಿರುದ್ಧ ಧ್ವನಿ ಎತ್ತಿ ಧರಣಿ ಆರಂಭ ಮಾಡಿದ್ದಾರೆ. ಅದಕ್ಕೆ ಸ್ಪಂದಿಸಿ ಇವತ್ತು ಕೇಂದ್ರದಿಂದ ಕಮಿಟಿ ಬಂದಿದೆ. ಇವತ್ತು ವಿಜಯಪುರ ಜಿಲ್ಲೆಯ ರೈತರಿಗೆ ಯಾವ ರೀತಿ ಅನ್ಯಾಯ ಆಗುತ್ತಿದೆ, ಸಿದ್ದರಾಮಯ್ಯ ಸರ್ಕಾರ ವಕ್ಫ್‌ಗೆ ಹೇಗೆ ಕುಮ್ಮಕ್ಕು ನೀಡಿದೆ ಅನ್ನುವುದನ್ನು ಹೇಳುವುದಕ್ಕೆ ಇವತ್ತು ಒಂದು ಅವಕಾಶ ಸಿಕ್ಕಿದೆ. ಇದು ನಿಮ್ಮ ಹೋರಾಟದ ಫಲವಾಗಿದೆ. ಯತ್ನಾಳ್ ಅವರಿಗೆ ನಾನು ಅಭಿನಂದನೆ ತಿಳಿಸುತ್ತೇನೆ ಎಂದರು. https://ainlivenews.com/great-job-opportunity-in-karnataka-lokayukta-apply-today/ ಯತ್ನಾಳ್ ನೇತೃತ್ವದಲ್ಲಿ ಕರ್ನಾಟಕದ ಎಲ್ಲ ರೈತರಿಗೆ ನ್ಯಾಯ ಸಿಗುತ್ತದೆ. ವಕ್ಫ್ ತಿದ್ದುಪಡಿ ಮಾಡುವುದಕ್ಕೆ ಕೇಂದ್ರ ತಯಾರಾಗಿದೆ. ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ಆಗಬಹುದು. ಸಿಎಂ ಲೋಕಾಯುಕ್ತ ವಿಚಾರಣೆ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ. ಆರೋಪಕ್ಕೆ ಒಳಗಾದವರು ವಿಚಾರಣೆ ಒಳಗಾಗುವುದು ಸಹಜ. ಸಿದ್ದರಾಮಯ್ಯ ಕೂಡಾ ಕಾನೂನಿಗೆ ತಲೆಬಾಗಿ…

Read More

ಬೆಳಗಾವಿ: ಸಿಎಂ ಸಿದ್ದರಾಮಯ್ಯನವರು ಈಗಾಗಲೇ ಬರಾಕ್ ಒಬಾಮಾ ಅವರನ್ನು ಆಹ್ವಾನಿಸಿ ಪತ್ರವನ್ನು ಬರೆದಿರುತ್ತಾರೆ. ಡಿಸೆಂಬರ್ 26-27 ಅಥವಾ ಜನವರಿ 2025 ರಿಂದ ಅಕ್ಟೋಬರ್-2025ರೊಳಗಾಗಿ ದಿನಾಂಕ‌ ನೀಡಲು ಕೋರಲಾಗಿದೆ. ಜಂಟಿ ಅಧಿವೇಶನವನ್ನು ಬೆಳಗಾವಿಯಲ್ಲಿಯೇ ನಡೆಸಲಾಗುವುದು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು. ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಧಿವೇಶನಕ್ಕೆ ಸಾಕ್ಷಿಯಾದ ಸ್ಥಳಗಳಿಗೆ ಭೇಟಿ ನೀಡಿ, ವಿಸ್ತೃತವಾಗಿ ಚರ್ಚಿಸಿದ ಬಳಿಕ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುವುದು. ಅಕ್ಟೋಬರ್ 2 ರಿಂದ ಒಂದು ವರ್ಷಗಳ ಕಾಲ ಶತಮಾನೋತ್ಸವ ವರ್ಷಾಚರಣೆ. https://ainlivenews.com/great-job-opportunity-in-karnataka-lokayukta-apply-today/ ಅಂತಾರಾಷ್ಟೀಯ ಮಹತ್ವ ಪಡೆಯಲು ವಿಧಾನಮಂಡಳ ಜಂಟಿ ಅಧಿವೇಶನ ನಡೆಸಲು ಹಾಗೂ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಕರೆಸಲು ಉದ್ಧೇಶಿಸಲಾಗಿದೆ. ಗಾಂಧೀಜಿಯ ಕುರಿತು ವಿಶೇಷ ಅಭಿಮಾನ ಹೊಂದಿರುವ ಒಬಾಮಾ ಅವರು ಜಂಟಿ ಅಧಿವೇಶನ ಉದ್ಧೇಶಿಸಿ ಮಾತನಾಡಬೇಕು ಎಂಬುದು ಎಲ್ಲರ ಆಶಯ ಎಂದರು. ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924 ರಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನ ಆಚರಣೆ ಮೂಲಕ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಇನ್ನಷ್ಟು ಪ್ರಚುಪಡಿಸಲು ಹಾಗೂ…

Read More

ಬೆಂಗಳೂರು: ಅಶೋಕ್ ಕೇಳೋದು ದೊಡ್ಡದಾ? ನಾವು ರಾಜೀನಾಮೆ ಕೊಡಿಸೋದು ದೊಡ್ಡದಾ? ಎಂದು ಆರ್.ಅಶೋಕ್ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಸಚಿವರ ರಾಜೀನಾಮೆಗೆ ವಿಪಕ್ಷ ನಾಯಕರ ಆರ್.ಅಶೋಕ್ ಒತ್ತಾಯ ವಿಚಾರವಾಗಿ ಪಾಪ ಅಶೋಕ್‌ಗೆ ರಾಜೀನಾಮೆ ಕೊಡಿಸೋಣ. ಅಶೋಕ್ ಕೇಳೋದು ದೊಡ್ಡದಾ? ನಾವು ರಾಜೀನಾಮೆ ಕೊಡಿಸೋದು ದೊಡ್ಡದಾ? ಕೊಡೋಣ ಎಂದು ತಿರುಗೇಟು ಕೊಟ್ಟಿದ್ದಾರೆ. https://ainlivenews.com/great-job-opportunity-in-karnataka-lokayukta-apply-today/ ಸಚಿವ ತಿಮ್ಮಾಪುರ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಬೇಕಾದರೂ ರಾಜ್ಯಪಾಲರಿಗೆ ಪತ್ರ ಬರೆದು ತನಿಖೆ ಮಾಡಿ ಎಂದು ದೂರು ಕೊಡಬಹುದು. ಹಿಂದೆಯೂ ನೂರಾರು ದೂರುಗಳು ಬಂದಿತ್ತು. ಈಗ ಸ್ವಲ್ಪ ವಿಶೇಷವಾಗಿ ಹೊರಟಿದ್ದಾರೆ. ಇದೆಲ್ಲ ಬರೀ ರಾಜಕೀಯದ ಬಣ್ಣ ಅಷ್ಟೆ ಎಂದು ಕಿಡಿಕಾರಿದರು.

Read More

ಹುಬ್ಬಳ್ಳಿ: ವಕ್ಫ್ ಬೋರ್ಡ್ ಆಸ್ತಿ ಕಬಳಿಸುವ ಆರೋಪ ಕೇಳಿಬಂದಿದೆ. ಕರ್ನಾಟಕ ಜನರ ಸಮಸ್ಯೆಗಳ ಆಲಿಸಲು ಬಂದಿದ್ದೇನೆ. ಇದರ ವಿಸ್ತೃತ ವರದಿ ಸಿದ್ಧಪಡಿಸಿ ಸ್ಪೀಕಾರಕ್ಕೆ ನೀಡಲಾಗುವುದು ಎಂದು ವಕ್ಫ್ ಬೋರ್ಡ್ ಸಂಸದೀಯ ಜಂಟಿ ಸಮಿತಿಯ ಅಧ್ಯಕ್ಷ ಜಗದಂಬಿಕಾ ಪಾಲ್ ಹೇಳಿದರು.ನಗರದ ವಿಮಾನ‌ ನಿಲ್ದಾಣದಲ್ಲಿ ಮಾತನಾಡಿದ ಅವರು, ಕರ್ನಾಟಕದ ರೈತರು, ಜನಸಾಮಾನ್ಯರ ಆಸ್ತಿಗಳನ್ನು ಕಬಳಿಕೆ ಮಾಡಿದ್ದಾರೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಸುಮಾರು 50 ರಿಂದ 60 ವರ್ಷಗಳಿಂದ ಉಳಿಮೆ‌ ಮಾಡಿದ ಜಮೀನು, ದೇವಸ್ಥಾನಗಳ ಕಂಬಳಿಸಲಾಗಿದೆ‌ ಎನ್ನಲಾಗುತ್ತಿದೆ.ಈ ಹಿನ್ನೆಲೆ ಹುಬ್ಬಳ್ಳಿ, ವಿಜಯಪುರ, ಬೀದರ್ ರೈತರ ಹಾಗೂ ಜನರ ಅಹವಾಲು ಸ್ವೀಕರಿಸುತ್ತೇನೆ. ಸದ್ಯ ಹುಬ್ಬಳ್ಳಿಯಲ್ಲಿ ಅದ್ವೈತ್ ಪರಿಷತ ಉತ್ತರ ಕರ್ನಾಟಕ ಹಾಗೂ ರತ್ನ ಭಾರತ ರೈತ ಸಮಾಜದವರು ಮನವಿ ಸಲ್ಲಿಸಿದ್ದಾರೆ‌ ಇದನ್ನು ಸಹ ಪರಿಗಣಿಸಲಾಗುವುದು ಎಂದರು. https://ainlivenews.com/great-job-opportunity-in-karnataka-lokayukta-apply-today/ ಹುಬ್ಬಳ್ಳಿ ‌ಖಾಸಗಿ ಹೊಟೆಲ್ ನಲ್ಲಿ ವಕ್ಫ ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರಿಗೆ ರೈತ ಸಂಘಟನೆ ಹಾಗೂ ಹಿಂದು ಸಂಘಟನೆ ಕಾರ್ಯಕರ್ತರು ಮನವಿ…

Read More

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಗಟ್ಟಗಿ ಬಸವೇಶ್ವರ ರಥೋತ್ಸವ ಅದ್ದೂರಿಯಿಂದ ನಡೆಯಿತು. ದೀಪಾವಳಿ ಹಬ್ಬದ ಕಡಿಪಾಡೆ ದಿನದಂದು ನಡೆಯಿತು. ಎರಡು ನೂರು ವರ್ಷಗಳ ಇತಿಹಾಸವಿರುವ ಶ್ರೀ ಬಸವೇಶ್ವರ ರಥೋತ್ಸವ ನವಂಬರ ಆರು ಮತ್ತು ಏಳು ರಂದು ಅತಿ ವಿಜೃಂಭಣೆಯಿಂದ ಆಚರಿಸಿದರು. ರಥೋತ್ಸವದ ಅಂಗವಾಗಿ ನವಂಬರ್ 3 ರಿಂದ ಮೂರು ದಿನಗಳ ಕಾಲ ಪ್ರತಿದಿನ ಸಾಯಂಕಾಲ 6 ಗಂಟೆಗೆ ರಬಕವಿ ಶ್ರೀ ಗುರುದೇವ ಬ್ರಹ್ಮಾನoದ ಆಶ್ರಮದ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿಗಳಿಂದ ಪ್ರವಚನ ನಡೆಯಿತು. ಇದೇ ಸಂದರ್ಭದಲ್ಲಿ ಸಹಾಯ ಸಹಕಾರ ನೀಡಿದ ದಾನಿಗಳಿಗೆ ಸನ್ಮಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದರು.ಕಡಿಪಾದ್ಯದಿನ ದಿನಾಂಕ ಆರರಂದು ಪ್ರಾತಃಕಾಲ ಬಸವೇಶ್ವರ ಮೂರ್ತಿಗೆ ಅಭಿಷೇಕ ಹಾಗೂ ವಿಶೇಷ ಅಲಂಕೃತ ಪೂಜೆ ಮತ್ತು ಮುತ್ತೈದೆಯರಿಗೆ ಉಡಿತುಂಬು ಕಾರ್ಯಕ್ರಮ ಹಾಗೂ ಅನ್ನಪ್ರಸಾದ ನಡೆಸಿಕೊಟ್ಟರು. ಸಾಯಂಕಾಲ 6:00 ರಿoದ ಕರಡಿ ಮಜಲು ವಿವಿಧ ಜನಪದ ವಾದ್ಯ ಹಾಗೂ ಡೊಳ್ಳು ಕುಣಿತ ಗೊಂಬೆಕುಣಿತ ಗಳೊಂದಿಗೆ ಅದ್ದೂರಿಯಿಂದ ರಥೋತ್ಸವ ಜರಗಿತು.…

Read More

ಹುಬ್ಬಳ್ಳಿ: ‘ಪ್ರಸ್ತುತ ವರ್ಷ ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಅರೆಯುವ ಹಂಗಾಮನ್ನು ಒಂದು ವಾರ ಮೊದಲು ಆರಂಭಿಸುವಂತೆ ಆದೇಶ ಹೊರಡಿಸಲಾಗಿದೆ’ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಮೊದಲು ನವೆಂಬರ್ 15ರಿಂದ ಕಬ್ಬು ಅರೆಯಲು ಆರಂಭಿಸುವಂತೆ ಆದೇಶಿಸಲಾಗಿತ್ತು. ರೈತರ ಒತ್ತಾಯ ಹಾಗೂ ಕಾರ್ಖಾನೆ ಮಾಲೀಕರ ಕೋರಿಕೆ ಮೇರೆಗೆ ನವೆಂಬ‌ರ್ 8ರಿಂದ ಆರಂಭಿಸಲು ತೀರ್ಮಾನಿಸಲಾಗಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಮೂರು ತಿಂಗಳ ಹಿಂದೆಯೇ ಆರಂಭಿಸಲಾಗಿದೆ’ ಎಂದರು. https://ainlivenews.com/great-job-opportunity-in-karnataka-lokayukta-apply-today/ ರಾಜ್ಯದಲ್ಲಿ ಆರು ಲಕ್ಷ ಹೆಕ್ಟೇರ್ ಕಬ್ಬು ಕಟಾವಿಗೆ ಸಿದ್ಧವಿದ್ದು, ಎಂಬತ್ತು ಕಾರ್ಖಾನೆಗಳು ಕಬ್ಬು ಅರೆಯಲಿವೆ. ಪ್ರತಿ ಟನ್ ಕಬ್ಬಿಗೆ ₹3,400 ಘೋಷಣೆ ಮಾಡಲಾಗಿದೆ. ಕಳೆದ ವರ್ಷ ₹3,150 ಇತ್ತು’ ಎಂದು ತಿಳಿಸಿದರು. ‘ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿ ಪ್ರಕ್ರಿಯೆ ಮುಗಿದಿತ್ತು. ಈಗ ಮತ್ತೆ ಅದನ್ನು ವಿಸ್ತರಿಸಿ, 32 ಸಾವಿರ ಮೆಟ್ರಿಕ್‌ ಟನ್ ಖರೀದಿವರೆಗೆ ಹೆಚ್ಚಳ…

Read More