ಬೆಂಗಳೂರು:- ಬಿಜೆಪಿ ಮನೆ ಒಂದು ನೂರು ಬಾಗಿಲು ಆಗಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ. https://ainlivenews.com/what-happens-if-you-take-a-cold-bath-in-winter-are-you-like-this/ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಮನೆ ಒಂದು ನೂರು ಬಾಗಿಲು ಆಗಿರೋದಂತು ನಿಜ. ನನ್ನ ವಿರುದ್ಧ ಪ್ರತಿಭಟನೆ ಮಾಡಿದ ಬಿಜೆಪಿಗೆ ಮುಖಭಂಗವಾಗಿದೆ. ರಾಜ್ಯಾಧ್ಯಕ್ಷ ಅನುಪಸ್ಥಿತಿಯಲ್ಲಿ ಪ್ರತಿಭಟನೆ ಮಾಡುತ್ತಾರೆ ಎಂದರೆ ಪ್ರಕರಣವನ್ನ ಎಷ್ಟು ಗಂಭೀರವಾಗಿ ತಗೆದುಕೊಂಡಿದ್ದಾರೆ ಎಂದು ಗೊತ್ತಾಗುತ್ತದೆ. ಅವರು ಹೋರಾಟ ಮಾಡಿದಷ್ಟು, ಕೆದಕಿದಷ್ಟು ಅವರಿಗೆ ಮುಖಭಂಗ ಆಗುತ್ತದೆ ಎಂದು ನಾನು ಮೊದಲೆ ಹೇಳಿದ್ದೆ. ಹಾಗೆಯೇ ಆಗಿದೆ ಎಂದರು. ಬಿಜೆಪಿ ಮನೆ ಒಂದು ನೂರು ಬಾಗಿಲು ಆಗಿದೆ. ಕೆಲವರು ವಕ್ಫ್ ಅಂತಾರೆ, ಕೆಲವರು ಕೆಎಸ್‌ಆರ್‌ಟಿಸಿಯಲ್ಲಿ ಹೂ ಕೊಡುತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ಕಡೆ ಓಡಾಡ್ತಿದಾರೆ. ನಮ್ಮದು ಬುದ್ಧ ಬಸವ ತತ್ವ, ಅವರದು ಮನುಸ್ಮೃತಿ. ಅದಕ್ಕೆ ಅವರಿಗೆ ನನ್ನ ಕಂಡರೆ ಆಗಲ್ಲ. ಅಮಿತ್ ಶಾ ಅವರು ಅಂಬೇಡ್ಕರ್ ಬಗ್ಗೆ ಮಾತನಾಡಿದ್ದರು, ವಿವಾದ ಡೈವರ್ಟ್ ಮಾಡೋಕೆ ಈಗ ಬೇರೆ ಆರೋಪ ಮಾಡ್ತಿದಾರೆ. ಅವರನ್ನ ಮೆಚ್ಚಿಸೋಕೆ ಇಲ್ಲಿ ಪ್ರತಿಭಟನೆ ಮಾಡ್ತಿದಾರೆ…
Author: AIN Author
ಚಳಿಗಾಲದಲ್ಲಿ ಮೊದಲೇ ಮೈ ನಡುಗುತ್ತದೆ. ಸ್ನಾನ ಮಾಡೋದೆ ಕಷ್ಟ. ಅಂತದ್ದರಲ್ಲಿ ತಣ್ಣೀರು ಸ್ನಾನ ಹೇಗೆ ಮಾಡೋದು ಅಂದುಕೊಳ್ಳೋದು ಸಹಜ. ಆದರೆ ಹೀಗೆ ಮಾಡೋದ್ರಿಂದ ಆರೋಗ್ಯಕ್ಕೆ ಬಹಳ ಉಪಯೋಗ ಇದೆಯಂತೆ. ಸ್ನಾನವು ದೇಹವನ್ನು ಶುದ್ಧೀಕರಿಸುವುದಲ್ಲದೆ, ಸ್ನಾಯುಗಳ ಒತ್ತಡವನ್ನು ಕಡಿಮೆ ಮಾಡುತ್ತದೆ, ರಕ್ತ ಪರಿಚಲನೆ ಸುಧಾರಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. https://ainlivenews.com/power-shock-1-year-old-child-dies-of-power-shock/ ಚಳಿಗಾಲದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದಕ್ಕಿಂತ ತಣ್ಣೀರಿನಿಂದ ಸ್ನಾನ ಮಾಡುವುದು ಹೆಚ್ಚು ಪ್ರಯೋಜನಕಾರಿ. ಇದು ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ತಣ್ಣೀರು ಸ್ನಾನದಿಂದ ದೇಹದ ಒಳಗೆ ಬೆಚ್ಚಗಿರಿಸುತ್ತದೆ. ಇದು ರಕ್ತವನ್ನು ವಿವಿಧ ಅಂಗಗಳಿಗೆ ವರ್ಗಾಯಿಸುತ್ತದೆ. ಆದರೆ ಬಿಸಿನೀರಿನಲ್ಲಿ ಸ್ನಾನ ಮಾಡಿದಾಗ ಪರಿಣಾಮ ವ್ಯತಿರಿಕ್ತವಾಗಿರುತ್ತದೆ. ಮೇಲಿನ ಚರ್ಮವು ಮಾತ್ರ ಬೆಚ್ಚಗಿರುತ್ತದೆಯಾದರೂ, ರಕ್ತವು ಚರ್ಮದ ಮೇಲ್ಮೈಗೆ ಚಲಿಸುತ್ತದೆ. ಇದು ಶೀತಲ ಸ್ನಾನದ ಪರಿಣಾಮವನ್ನು ಹಿಮ್ಮುಖಗೊಳಿಸುತ್ತದೆ. ಆದರೆ, ತಣ್ಣೀರಿನ ಸ್ನಾನವು ಅಪಧಮನಿಗಳನ್ನು ಬಲಪಡಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹಾಗಾಗಿ…
ದಾವಣಗೆರೆ:-ಹೊನ್ನಾಳಿಯ ಸೊರಟೂರು ಗ್ರಾಮದಲ್ಲಿ ವಿದ್ಯುತ್ ಶಾಕ್ ಹೊಡೆದು 1 ವರೆ ವರ್ಷದ ಮಗು ಘಟನೆ ಜರುಗಿದೆ. https://ainlivenews.com/international-film-festival-in-bengaluru-from-march-1-cm-siddaramaiah/ ಮಗುವನ್ನು ಮಂಜು ಎಂದು ಗುರುತಿಸಲಾಗಿದೆ. ಮಗುವಿನ ತಾಯಿ ಮನೆಯಲ್ಲಿ ಮೋಟರ್ ಆನ್ ಮಾಡಿ ನೀರು ತುಂಬಿಸುವಾಗ ಈ ಘಟನೆ ನಡೆದಿದೆ. ಆಟವಾಡುತ್ತಿದ್ದಾಗ ಮಗು ನೀರಿನ ಮೋಟರ್ ಹಿಡಿದುಕೊಂಡಿದೆ. ಇದರಿಂದ ಮಗುವಿಗೆ ವಿದ್ಯತ್ ಶಾಕ್ ಹೊಡೆದಿದ್ದು, ಮಗು ಸ್ಥಳದಲ್ಲೇ ಸಾವಿಗೀಡಾಗಿದೆ. ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಂಗಳೂರು:- ಮಾರ್ಚ್ 1 ರಿಂದ 8 ರವರೆಗೆ ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. https://ainlivenews.com/chinese-virus-boom-in-india-hmpv-virus-detected-in-these-states-of-india/ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆ ಕುರಿತು ಪತ್ರಿಕಾಗೋಷ್ಠಿ ನಡೆಯಿತು. ’16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 1ರಿಂದ 8ರ ವರೆಗೆ ನಡೆಯಲಿದೆ. ಈ ವರ್ಷದ ಚಲನಚಿತ್ರೋತ್ಸವದ ಥೀಮ್ ʻಸರ್ವ ಜನಾಂಗದ ಶಾಂತಿಯ ತೋಟʼ ಆಯ್ಕೆ ಮಾಡಲಾಗಿದೆ. ಕಳೆದ ವರ್ಷ ʻಸಾಮಾಜಿಕ ನ್ಯಾಯʼ ಥೀಮ್‌ನಲ್ಲಿ ಚಲನಚಿತ್ರೋತ್ಸವ ಆಯೋಜಿಸಲಾಗಿತ್ತು ಎಂದರು. ಸರ್ವ ಜನಾಂಗದ ಶಾಂತಿಯ ತೋಟ’ ಥೀಮ್ ಅಡಿ ಈ ವರ್ಷ ಚಲನಚಿತ್ರೋತ್ಸವ ನಡೆಯಲಿದೆ. ಚಲನಚಿತ್ರೋತ್ಸವ ಮಾರ್ಚ್ 1ರಿಂದ ಮಾರ್ಚ್ 8ರವರೆಗೆ ನಡೆಯಲಿದೆ. ಈ ವರ್ಷ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಥೀಮ್‌ನಲ್ಲಿ ಚಲನಚಿತ್ರೋತ್ಸವ ನಡೆಯುತ್ತಿದೆ ಎಂದು ತಿಳಿಸಿದರು. 60 ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳು 13 ಚಿತ್ರಮಂದಿರದಲ್ಲಿ ಪ್ರದರ್ಶನ ಆಗಲಿವೆ. ಒಟ್ಟು 400 ಶೋಗಳು ಇರಲಿವೆ. ಬೆಂಗಳೂರು ನಾಗರಿಕರಿಗೆ…
ಬೆಂಗಳೂರು:- ನಮ್ಮ ಮೆಟ್ರೋದ ಹಳದಿ ಮಾರ್ಗ ಉದ್ಘಾಟನೆಗೆ ಕಾಯುತ್ತಿದ್ದವರಿಗೆ BMRCL ಗುಡ್ ನ್ಯೂಸ್ ನೀಡಿದೆ. https://ainlivenews.com/chinese-virus-boom-in-india-hmpv-virus-detected-in-these-states-of-india/ ಆರ್ವಿ ರೋಡ್ ಟು ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಈ ರೈಲು ಸಂಚಾರ ಮಾಡಲಿದೆ. ಕೊಲ್ಕತ್ತಾದ ಟಿಟಾಘರ್ನಲ್ಲಿ ಆತ್ಮ ನಿರ್ಭರ ಭಾರತದ ಅಡಿಯಲ್ಲಿ ತಯಾರಿಸಲಾಗಿದೆ. ಹಳದಿ ಮಾರ್ಗಕ್ಕೆ ರೈಲು ಸೆಟ್ ಪೂರೈಕೆಗೆ ಬಿಎಂಆರ್‌ಸಿಎಲ್ ಅಧಿಕಾರಿಗಳ ಸಮ್ಮುಖದಲ್ಲಿ ಇಂದು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇಂದು ಕೊಲ್ಕತ್ತಾದ ಘಟಕದಿಂದ ರೈಲು ಸೆಟ್ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಇನ್ನು ಮುಂದಿನ ದಿನಗಳಲ್ಲಿ ಇಲ್ಲಿಂದಲೇ ತಿಂಗಳಿಗೆ 1 ಮೆಟ್ರೋ ರೈಲು ವಿತರಿಸಲು ತಯಾರಿ ನಡೆಸಲಾಗುತ್ತಿದೆ. ನಂತರ ಸೆಪ್ಟೆಂಬರ್ ತಿಂಗಳಿನಿಂದ 2 ರೈಲು ಸೆಟ್‌ಗಳನ್ನು ಪೂರೈಸಲು ಟಿಟಾಘರ್ ಸಿದ್ದತೆ ನಡೆಸಿದೆ ಎಂದು ತಿಳಿಸಿದ್ದರು. ಬಿಎಂಆರ್‌ಸಿಎಲ್ ಮೊದಲ ರೈಲು ಹಸ್ತಾಂತರದ ವೇಳೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸಚಿವರಿಗೆ ಸಾಥ್ ನೀಡಿದ್ದರು. ಸಂಸದ ತೇಜಸ್ವಿ ಸೂರ್ಯ ಈ ಬಗ್ಗೆ ಟ್ವೀಟ್ ಮಾಡಿದ್ದು, ಬೆಂಗಳೂರು…
ನವದೆಹಲಿ:-INDIA:ಚೀನಾದಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ ವೇಗವಾಗಿ ಹರಡುತ್ತಿದೆ. ಈ HMPV ವೈರಸ್ ಈಗ ಹಲವು ದೇಶಗಳಲ್ಲಿ ಹರಡಲು ಪ್ರಾರಂಭಿಸಿದೆ. ಈ ವೈರಸ್ ಎಷ್ಟು ಅಪಾಯಕಾರಿ ಎಂಬುದರ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಇದರಿಂದ ಭಾರತ ಸೇರಿದಂತೆ ಹಲವು ದೇಶಗಳು ಅಲರ್ಟ್ ಮೋಡ್‌ನಲ್ಲಿವೆ. https://ainlivenews.com/60-commission-allegation-what-was-hdks-reply-to-siddaramaiah-when-he-asked-for-the-record/ ಅದರಂತೆ ಭಾರತದಲ್ಲಿ HMPV ವೈರಸ್ ಆರ್ಭಟ ಜೋರಾಗಿದೆ. ಇಂದು ಬೆಳಗ್ಗೆ ಕರ್ನಾಟಕದ ಬೆಂಗಳೂರಿನಲ್ಲಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದ 3 ಮತ್ತು 8 ತಿಂಗಳ ಎರಡು ಮಕ್ಕಳಲ್ಲಿ ಈ ವೈರಸ್ ದೃಢಪಟ್ಟಿತ್ತು. ಬಳಿಕ, ಗುಜರಾತ್ನ ಅಹಮದಾಬಾದ್ನಲ್ಲಿ 2 ವರ್ಷದ ಮಗುವಿಗೆ ಎಚ್ಎಂಪಿವಿ ತಗುಲಿರುವುದು ಪತ್ತೆಯಾಗಿತ್ತು. ಹಾಗೇ, ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ 5 ತಿಂಗಳ ಮಗುವಿನಲ್ಲೂ ಈ ವೈರಸ್ ಪತ್ತೆಯಾಗಿದೆ. ಬಳಿಕ ಇದೀಗ ತಮಿಳುನಾಡಿನ ಚೆನ್ನೈನಲ್ಲಿ ಇಬ್ಬರು ಮಕ್ಕಳಲ್ಲಿ ಎಚ್ಎಂಪಿವಿ ಸೋಂಕು ದೃಢಪಟ್ಟಿದೆ. ಬೆಂಗಳೂರು, ಅಹಮದಾಬಾದ್, ಕೊಲ್ಕತ್ತಾ, ಚೆನ್ನೈನಲ್ಲಿ HMPV ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ನಿಂದ ಎಚ್ಚರಿಕೆ ನೀಡಲಾಗಿದೆ. ಭಾರತ ಸೇರಿದಂತೆ ವಿಶ್ವದ ಹಲವೆಡೆ ಹೆಚ್ಎಂಪಿ ವೈರಸ್ ಹರಡುತ್ತಿದೆ.…
ಬೆಂಗಳೂರು:- 60% ಕಮಿಷನ್ ದಾಖಲೆ ಕೇಳಿದ ಸಿಎಂ ಸಿದ್ದರಾಮಯ್ಯಗೆ ಹೆಚ್‌ಡಿ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರದ ಮೇಲೆ ಹೆಚ್‌ಡಿಕೆ ಮಾಡಿದ್ದ 60% ಕಮೀಷನ್ ಆರೋಪಕ್ಕೆ ದಾಖಲೆ ಕೇಳಿದ್ದ ಸಿಎಂಗೆ ಇದೀಗ ಕೇಂದ್ರ ಸಚಿವ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. https://ainlivenews.com/unscientific-work-bbmp-left-people-tired-tired/ ಈ ಸಂಬಂಧ X ಮಾಡಿರುವ HDK, CM ಸಿದ್ದರಾಮಯ್ಯರನ್ನ ಹಿಟ್ ಅಂಡ್ ರನ್ ಎಂದು ಲೇವಡಿ ಮಾಡಿದ್ದಾರೆ. ಆಧಾರವಿಲ್ಲದೆ ಆರೋಪದ ಮಾತೆಲ್ಲಿ ಬಂತು ಮಾನ್ಯ ಮುಖ್ಯಮಂತ್ರಿಗಳೇ? ನಿಮ್ಮ ಪಕ್ಷದ ಪರವೇ ಇರುವ ಗುತ್ತಿಗೆದಾರರು, ತುಮಕೂರಿನ ನಿಮ್ಮ ಕಾಂಗ್ರೆಸ್ ಪಕ್ಷದ ಮುಖಂಡರೇ ಮಾಡಿದ ಆರೋಪ. ನಮ್ಮ ಪಕ್ಷದ ಸರ್ಕಾರಕ್ಕಿಂತ ಹಿಂದಿನ ಬಿಜೆಪಿ ಸರ್ಕಾರವೇ ವಾಸಿ ಇತ್ತು ಎಂದು ಅಲವತ್ತುಕೊಂಡಿದ್ದರು ನಿಮ್ಮ ಪಕ್ಷದ ಗುತ್ತಿಗೆದಾರರು. ಕಾಂಗ್ರೆಸ್ ಸರ್ಕಾರದಲ್ಲೂ 40% ಕಮೀಷನ್ ಸುಲಿಗೆ ಮಾಡಲಾಗುತ್ತಿದೆ ಎಂಬುದು ಅವರ ನೇರ ಆರೋಪ. ಕಮೀಷನ್ ವ್ಯವಹಾರ ಇಲ್ಲ ಎಂದಾದರೆ, ಯಾಕಪ್ಪಾ ಹಾಗೆ ಹೇಳಿದಿರಿ? ಎಂದು ಅವರನ್ನೇ ಕರೆದು ಕೇಳಬೇಕಿತ್ತು. ಕೇಳಲಿಲ್ಲ ಯಾಕೆ? ಪ್ರತಿ ಆರೋಪಕ್ಕೂ ಈಗ…
ಬೆಂಗಳೂರು:-ಸಿಲಿಕಾನ್ ಸಿಟಿಯಲ್ಲಿ ಕಳಪೆ ಕಾಮಗಾರಿ ಎದ್ದು ಕಾಣುತ್ತಿದೆ. ಇದು ಇಂದು ಇಂದು, ನಿನ್ನೆಯ ಸಮಸ್ಯೆ ಅಲ್ಲ. ಅದರಂತೆ ನಗರದ ಬಿಟಿಎಂ ಲೇ ಔಟ್ 2ನೇ ಹಂತದಲ್ಲಿರುವ ಬಿಳೇಕಹಳ್ಳಿ ಜನರಿಗೆ ಪಾಲಿಕೆಯ ಕಾಮಗಾರಿ ಸಂಕಷ್ಟ ತಂದಿಟ್ಟಿದೆ. ಈ ಏರಿಯಾದಲ್ಲಿ ಇದ್ದ ಸಣ್ಣ ಚರಂಡಿಯಿಂದ ಪದೇ ಪದೇ ನೀರು ಹೊರಬರ್ತಿದ್ದರಿಂದ ಬೇಸತ್ತಿದ್ದ ಜನರು, ಚರಂಡಿಯನ್ನ ಸರಿಪಡಿಸುವಂತೆ ಪಾಲಿಕೆಗೆ ಮನವಿ ಮಾಡಿದ್ದರು. ಅದರಂತೆ ಬಿಬಿಎಂಪಿಯ ಸಿಬ್ಬಂದಿ ಕೆಲಸ ಕೂಡ ಆರಂಭಿಸಿದ್ದಾರೆ, ಆದರೆ ಇದೀಗ ಒಂದೆರಡು ದಿನದಲ್ಲಿ ಕಾಮಗಾರಿ ಮುಗಿಯೋ ಲಕ್ಷಣ ಕಾಣದಂತಾಗಿದೆ. https://ainlivenews.com/can-unmarried-farmers-get-pm-kisan-money-here-is-the-answer-to-your-confusion/ ರಸ್ತೆ ಬಂದ್ ಆಗಿರೋದರಿಂದ ಜನರು ಮುಖ್ಯರಸ್ತೆಗೆ ಹೋಗೋಕೆ ಪರದಾಡೋ ಸ್ಥಿತಿ ನಿರ್ಮಾಣವಾಗಿದೆ. ನಿತ್ಯ ಕೆಲಸ ಕಾರ್ಯಗಳಿಗೆ ತೆರಳುವವರು ಮುಖ್ಯರಸ್ತೆಗೆ ಬರೋಕೆ ಸುತ್ತಾಡಿಕೊಂಡು ಬರೋ ಸ್ಥಿತಿ ಇದ್ರೆ, ಇತ್ತ ಓಡಾಡೋ ಜನರು ಚರಂಡಿ ಮೇಲೆ ಹಾಕಿರುವ ಮರದ ಹಲಗೆ ಮೇಲೆ ಸರ್ಕಸ್ ಮಾಡಿಕೊಂಡು ಓಡಾಡೋ ಸ್ಥಿತಿ ಎದುರಾಗಿದೆ. ಇನ್ನು ಈ ಹಿಂದೆ ಮಳೆ ಬಂದಾಗ ಇಡೀ ಏರಿಯಾದ ಮನೆಗಳಿಗೆ ಕೊಳಚೆನೀರು ನುಗ್ಗಿ ಅವಾಂತರ…
ನವದೆಹಲಿ:- ಭಾರತ ಸರ್ಕಾರವು ವಿವಿಧ ಕಲ್ಯಾಣ ಯೋಜನೆಗಳ ಮೂಲಕ ಕೃಷಿ ಮತ್ತು ರೈತರಿಗೆ ಬೆಂಬಲ ನೀಡುವುದನ್ನು ಮುಂದುವರೆಸಿದೆ. ರೈತರ ಕಲ್ಯಾಣ ಯೋಜನೆಗಳಲ್ಲಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅತ್ಯಂತ ಗಮನಾರ್ಹವಾಗಿದೆ. ದೇಶದಾದ್ಯಂತ ರೈತರಿಗೆ ಆರ್ಥಿಕ ಬೆಂಬಲ ನೀಡುವ ಉದ್ದೇಶದಿಂದ ಈ ಯೋಜನೆ ತರಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 19ನೇ ಕಂತು ಫೆಬ್ರವರಿ 2025ರ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. https://ainlivenews.com/kiwi-benefits-do-you-know-all-the-benefits-of-eating-kiwi-fruit-in-winter/ ಇನ್ನೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಕಿಸಾನ್ ಯೋಜನೆ ರೈತರಿಗೆ ಆರ್ಥಿಕ ಭದ್ರತೆ ಒದಗಿಸುತ್ತಿದೆ. ದೇಶದಾದ್ಯಂತ ಕೋಟ್ಯಂತರ ರೈತರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಸರ್ಕಾರ ಪ್ರತಿ ವರ್ಷ ರೈತರ ಖಾತೆಗೆ ನೇರವಾಗಿ ಮೂರು ಕಂತುಗಳಲ್ಲಿ ರೂ.6,000 ಜಮಾ ಮಾಡಲಿದೆ. ಈ ನಿಧಿಗಳು ರೈತರಿಗೆ ತಮ್ಮ ಬೆಳೆಗಳಿಗೆ ಬೇಕಾದ ಬಂಡವಾಳವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ ಬಹುತೇಕ ಅವಿವಾಹಿತ ರೈತರು ಪಿಎಂ ಕಿಸಾನ್ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದೇ? ಅಥವಾ ಈ ಬಗ್ಗೆ ಯಾವುದೇ…
ಕಿವಿ ಹಣ್ಣು ವರ್ಷವಿಡೀ ದೊರೆಯುವ ಒಂದು ಹಣ್ಣಾಗಿದೆ. ಸೂಪರ್‌ಫುಡ್ ವಿಭಾಗದಲ್ಲಿ ಕಿವಿಹಣ್ಣು ಮೊದಲ ಸ್ಥಾನವನ್ನು ಪಡೆದುಕೊಂಡಿದೆ . ಕಿವಿಯಲ್ಲಿ ಆರೋಗ್ಯಕ್ಕೆ ಅಗತ್ಯವಾದ ಅನೇಕ ಪ್ರಮುಖ ಪೋಷಕಾಂಶಗಳಿವೆ.ಈ ಹಣ್ಣು ಹಲವಾರು ಕಾಯಿಲೆಗಳಿಗೆ ಸೂಪರ್ ಔಷಧಿಯಾಗಿ ಕೆಲಸ ಮಾಡುತ್ತದೆ. ಮಧುಮೇಹ, ಹೃದ್ರೋಗ ಮತ್ತು ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಕಿವಿ ಹಣ್ಣು ಉತ್ತಮ ಪರಿಹಾರವಾಗಿದೆ. ಕಿವಿ ಸಾಮಾನ್ಯವಾಗಿ ಹೃದ್ರೋಗ ಇರುವವರಿಗೆ ಒಳ್ಳೆಯದು. ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ https://ainlivenews.com/couple-who-poisoned-their-children-and-then-hanged-themselves-financial-difficulties-plan-to-settle-in-pune/ ಕಿವಿ ಹಣ್ಣಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪೋಷಕಾಂಶಗಳು ಅಧಿಕವಾಗಿದೆ. ವಿಶೇಷವಾಗಿ ವಿಟಮಿನ್ ಕೊರತೆಯನ್ನು ಗುಣಪಡಿಸುವಲ್ಲಿ ಕಿವೀಸ್ ಸಾಕಷ್ಟು ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಮಾತ್ರವಲ್ಲದೇ, ವಿಟಮಿನ್ ಎ, ಬಿ6, ಬಿ12, ಇ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮೆಗ್ನೀಷಿಯಂನಂತಹ ಪೋಷಕಾಂಶಗಳಿವೆ. ಈ ಹಣ್ಣನ್ನು ತಿನ್ನುವುದರಿಂದ ರಕ್ತನಾಳಗಳು, ಮೂಳೆಗಳು, ಹಲ್ಲುಗಳ ಆರೋಗ್ಯ ಮತ್ತು ದೃಷ್ಟಿ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಕಿವಿ ಹಣ್ಣಿನ ಒಂದು ಸಣ್ಣ ಭಾಗ (75 ಗ್ರಾಂ) 42 ಕ್ಯಾಲೋರಿಗಳು, 0.1…