ಬೆಂಗಳೂರು:- ಕರ್ನಾಟಕದಲ್ಲಷ್ಟೇ ಅಲ್ಲದೇ ಇಡೀ ದೇಶದಾದ್ಯಂತ ಮುಡಾ ಹಗರಣ ಸದ್ದು ಮಾಡುತ್ತಿದೆ. ಅಲ್ಲದೇ ಈ ಪ್ರಕರಣದಿಂದ ಸಿಎಂ ಕುರ್ಚಿಯೇಅಲ್ಲಾಡುವಂತೆ ಮಾಡಿದೆ. ಪ್ರಕರಣ ಸಂಬಂಧ ಲೋಕಾಯುಕ್ತ ವಿಚಾರಣೆಗೆ ಸಿದ್ದರಾಮಯ್ಯ ಒಳಪಟ್ಟಿದ್ದರಿಂದ ಅನುಕಂಪವೂ ಸೃಷ್ಟಿಯಾಗಿದೆಯಂತೆ. ಇದೇ ಅನುಕಂಪವನ್ನೇ ಚುನಾವಣೆಗೆ ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿ ಸಿಎಂ ಇದ್ದಾರೆ ಎನ್ನಲಾಗುತ್ತಿದೆ. ಇದೇ ಲೆಕ್ಕಾಚಾರದಲ್ಲಿ ‘ನಾನೇ ಸಿಎಂ’ ಎಂಬುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ. https://ainlivenews.com/stone-pelting-at-ksrtc-bus-in-telangana-miscreants-escape/ ಸಂಡೂರಿನಲ್ಲಿ ಸಿಎಂ ಸಿದ್ದರಾಮಯ್ಯ ಕೇವಲ ಹೇಳಿಕೆಯನ್ನಷ್ಟೇ ನೀಡಿದ್ದಲ್ಲ. ಹತ್ತಾರು ಸಂದೇಶಗಳನ್ನು ರವಾನೆ ಮಾಡುವ ಕೆಲಸ ಮಾಡ್ತಿದ್ದಾರೆ. ಸಂಡೂರಿನಲ್ಲೇ ನಿಂತು 2 ಕ್ಷೇತ್ರಗಳಿಗೂ ಪ್ರಭಾವ ಬೀರುವ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಇದರ ಜೊತೆಗೆ ತಪ್ಪು ಮಾಡಿಲ್ಲ ಎಂಬ ದಾಳವನ್ನು ಚುನಾವಣಾ ಪ್ರಚಾರದಲ್ಲಿ ಉರುಳಿಸಿದ್ದಾರೆ. ಈ ಮೂಲಕ ತಮ್ಮ ಸಮುದಾಯದ ಮತಗಳನ್ನ ಹಿಡಿದಿಟ್ಟುಕೊಳ್ಳಲು ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಕುರುಬ ಸಂಘದ ಜಿಲ್ಲಾಧ್ಯಕ್ಷ ವಿವೇಕ್, ನಾವು ಹಲವಾರು ವರ್ಷಗಳಿಂದ ಕಾಂಗ್ರೆಸ್ ಜತೆಗೆ ಇದ್ದೇವೆ. ಈಗಲೂ ಕಾಂಗ್ರೆಸ್ ಜೊತೆಯಲ್ಲೇ ಇರುತ್ತೇವೆ. ಸಿದ್ದರಾಮಯ್ಯ, ಡಿಕೆ ನಡುವೆ ನಾವು…
Author: AIN Author
ಬೆಂಗಳೂರು/ತೆಲಂಗಾಣ:- ಕೆಎಸ್ಆರ್ಟಿಸಿ ಬಸ್ ಗೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ತೆಲಂಗಾಣದ ಶಂಶಾಬಾದ್ ಬಳಿ ಜರುಗಿದೆ. https://ainlivenews.com/a-must-see-story-for-male-tailors-maimutti-can-no-longer-measure-women/ KSRTC ಬಸ್ ಗೆ ಕಲ್ಲು ತೂರಿ ಕಿಡಿಗೇಡಿಗಳು ಎಸ್ಕೇಪ್ ಆಗಿದ್ದಾರೆ. ಎರಡು ಕೆಎಸ್‌ಆರ್‌ಟಿಸಿ ಬಸ್, ಒಂದು ಖಾಸಗಿ ಬಸ್ ಮತ್ತು ಟಿಜಿಎಸ್‌ಆರ್‌ಟಿಸಿ ಬಸ್‌ಗೆ ಕಲ್ಲು ತೂರಾಟ ಮಾಡಿದ್ದಾರೆ. ನೆನ್ನೆ ರಾತ್ರಿ 10.45ರ ಸುಮಾರಿಗೆ ನಡೆದಿರುವ ಘಟನೆ ಜರುಗಿದೆ. ಹೈದರಾಬಾದ್ ನಿಂದ ಬೆಂಗಳೂರಿಗೆ ಬರ್ತಿದ್ದ ಕೆಎಸ್ಆರ್ಟಿಸಿ ಐರಾವತ ಬಸ್ ಇದಾಗಿದ್ದು, ಬರುವ ದಾರಿಯಲ್ಲಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.
ಪುರುಷ ಟೈಲರ್ ಗಳು ನೋಡಲೇಬೇಕಾದ ಸ್ಟೋರಿ ಇದು. ಇನ್ಮುಂದೆ ಮೈಮುಟ್ಟಿ ಮಹಿಳೆಯರ ಅಳತೆ ಮಾಡುವಂತಿಲ್ಲ. https://ainlivenews.com/we-will-win-in-sandur-constituency-by-two-hundred-percent-cm-siddaramaiah/ ಉತ್ತರ ಪ್ರದೇಶ ರಾಜ್ಯದಲ್ಲಿ ಇಂತಹುದೊಂದು ಮಹತ್ವದ ಆದೇಶ ತರಲಾಗಿದ್ದು, ಬೊಟಿಕ್ ಸೆಂಟರ್‌ಗಳಲ್ಲಿ ಮಹಿಳೆಯರ ಬಟ್ಟೆಗಳ ಅಳತೆಯನ್ನು ಪುರುಷರ ಬದಲಿಗೆ ಮಹಿಳೆಯರೇ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಈ ಸಂಬಂಧ ಎಲ್ಲ ಜಿಲ್ಲೆಗಳಿಗೂ ಆದೇಶ ಹೊರಡಿಸಲಾಗಿದೆ. ಬೊಟಿಕ್ ಸೆಂಟರ್‌ಗಳಲ್ಲಿ ಮಹಿಳೆಯರ ಬಟ್ಟೆಗಳ ಅಳತೆಯನ್ನು ಪುರುಷರ ಬದಲಿಗೆ ಮಹಿಳೆಯರೇ ತೆಗೆದುಕೊಳ್ಳುತ್ತಾರೆ. ಇದರೊಂದಿಗೆ ಜಿಮ್‌ಗೆ ಸಂಬಂಧಿಸಿದಂತೆ ಇದೇ ರೀತಿಯ ನಿಯಮಗಳನ್ನು ನಿಗದಿಪಡಿಸಲಾಗಿದೆ. ಜಿಮ್ ನಿರ್ವಾಹಕರು ಮಹಿಳೆಯರಿಗೆ ಮಹಿಳಾ ತರಬೇತುದಾರರನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಮಹಿಳಾ ಆಯೋಗದ ಈ ಮಾರ್ಗಸೂಚಿಗಳನ್ನು ಜಾರಿಗೆ ತರುವಂತೆ ಎಲ್ಲ ಜಿಲ್ಲೆಗಳಿಗೆ ತಿಳಿಸಲಾಗಿದೆ. ಇನ್ನುಮುಂದೆ ಟೈಲರ್ ಅಂಗಡಿಯಲ್ಲಿ ಮಹಿಳೆಯರ ಅಳತೆಗಳನ್ನು ತೆಗೆದುಕೊಳ್ಳಲು ಮಹಿಳಾ ಟೈಲರ್‌ಗಳನ್ನು ನೇಮಿಸಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೇ ಅಂಗಡಿಯಲ್ಲಿ ಸಿಸಿಟಿವಿ ಅಳವಡಿಸಬೇಕು. ಮಹಿಳೆಯರಿಗಾಗಿ ವಿಶೇಷ ಬಟ್ಟೆಗಳನ್ನು ಮಾರಾಟ ಮಾಡುವ ಮಳಿಗೆಗಳು ಗ್ರಾಹಕರಿಗೆ ಸಹಾಯ ಮಾಡಲು ಮಹಿಳಾ ಉದ್ಯೋಗಿಗಳನ್ನು ನೇಮಿಸಬೇಕಾಗುತ್ತದೆ. ಕೋಚಿಂಗ್ ಸೆಂಟರ್‌ನಲ್ಲಿಯೂ ಮಹಿಳೆಯರಿಗೆ ಸಿಸಿಟಿವಿ ಮತ್ತು ಶೌಚಾಲಯಗಳನ್ನು ಹೊಂದಿರುವುದು…
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ವಿಲೇಜ್ ಡಿಫೆನ್ಸ್ ಗ್ರೂಪ್ ನ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕುಂಟ್ವಾರದ ಕಿಶ್ತ್ವಾರದ ಅರಣ್ಯ ಪ್ರದೇಶದಲ್ಲಿ ಭೀಕರವಾಗಿ ಹತ್ಯೆ ನಡೆದಿದೆ. ವಿಲೇಜ್ ಡಿಫೆನ್ಸ್ ಗ್ರೂಪ್‌ನ ಸದಸ್ಯರನ್ನು ನಜೀರ್ ಅಹ್ಮದ್ ಮತ್ತು ಕುಲದೀಪ್ ಕುಮಾರ್ ಎಂದು ಗುರುತಿಸಲಾಗಿದೆ. ಇಲ್ಲಿನ ಕುಪ್ವಾರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಹತ್ಯೆಗೈದ ಕೆಲವೇ ಗಂಟೆಗಳಲ್ಲಿ ಶಂಕಿತ ಉಗ್ರರ ದಾಳಿ ನಡೆದಿದೆ. ಅವರ ಮೃತದೇಹಗಳನ್ನು ಇನ್ನಷ್ಟೇ ಹೊರತೆಗೆಯಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. https://ainlivenews.com/what-is-waqf-amendment-act-how-will-the-farmers-suffer-here-is-the-complete-information/ ಜೆ&ಕೆ ಸಿಎಂ ಒಮರ್ ಅಬ್ದುಲ್ಲಾ ಮತ್ತು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಉಪ ಮುಖ್ಯಮಂತ್ರಿ ಸುರೀಂದರ್ ಚೌಧರಿ ಈ ದಾಳಿಯನ್ನು ಖಂಡಿಸಿದ್ದಾರೆ. ಇಂತಹ ಹಿಂಸಾಚಾರ, ಭಯೋತ್ಪಾದಕ ದಾಳಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ದೀರ್ಘಕಾಲ ಶಾಂತಿ ನೆಲೆಸಲು ಅಡ್ಡಿಯಾಗಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಬಳ್ಳಾರಿ: ಸಂಡೂರು ಕ್ಷೇತ್ರದಲ್ಲಿ ನೂರಕ್ಕೆ ಇನ್ನೂರುಷ್ಟು ಗೆಲ್ಲುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ನೋಟಿಸ್ ನೀಡಿದೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಸಂಡೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ನಿಮಗೆ ಹೇಳಿದವರು ಯಾರು ಎಂದು ಪ್ರಶ್ನಿ ಗರಂ ಆದರು. ಸಂಡೂರು ಕ್ಷೇತ್ರದಲ್ಲಿ ನಮ್ಮ ನಿರೀಕ್ಷೆಗೆ ಮೀರಿ ಸ್ಪಂದನೆ ಸಿಕ್ಕಿದೆ. ನೂರಕ್ಕೆ ಇನ್ನೂರುಷ್ಟು ಸಂಡೂರು ಗೆಲ್ಲುತ್ತೇವೆ. ಚನ್ನಪಟ್ಟಣ , ಶಿಗ್ಗಾವಿಯಲ್ಲೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. https://ainlivenews.com/what-is-waqf-amendment-act-how-will-the-farmers-suffer-here-is-the-complete-information/ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜಕೀಯ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ. ದಾಖಲೆ ತಿದ್ದುಪಡಿಯನ್ನು ಸರಿಪಡಿಸಲು ಹೇಳಿರುವೆ. ಬಿಜೆಪಿ ಇದನ್ನೇ ಚುನಾವಣಾ ಅಸ್ತ್ರವನ್ನಾಗಿ ಬಳಕೆ ಮಾಡುತ್ತಿದೆ. ವಕ್ಫ್ ಮಸೂದೆಗೆ ಸಂಬಂಧಿಸಿದಂತೆ ರಚನೆಯಾದ ಜಂಟಿ ಸಂಸದೀಯ ಸಮಿತಿ ಬಂದಿದ್ದು ರಾಜಕೀಯಕ್ಕೆ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು: ನಗರದ ಮಲ್ಲೇಶ್ವರಂ ಪೈಪ್‌ಲೈನ್‌ನ ಮಕ್ಕಳ ಮಾರಮ್ಮ ದೇವಸ್ಥಾನದ ಬಳಿ ಎರಡೂವರೆ ವರ್ಷದ ಹೆಣ್ಣು ಮಗುವನ್ನು ಮಾತನಾಡಿಸಿ ಮಹಿಳೆಯೊಬ್ಬಳು ಅಪಹರಿಸಿರುವ ಘಟನೆ ಜರುಗಿದೆ. ಮಗುವನ್ನು ಅಪಹರಿಸಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ದಿವ್ಯ ಭಾರತಿ ಹಾಗೂ ಲೋಕೇಶ್ ದಂಪತಿಯ ಪುತ್ರಿ ನವ್ಯ ಅಪಹರಣಕ್ಕೊಳಗಾದ ಮಗು ಎನ್ನಲಾಗಿದೆ. ನಿನ್ನೆ ಈ ಘಟನೆ ಜರುಗಿದ್ದು, ತಾಯಿ ಮೊದಲ ಮಗುವನ್ನು ಶಾಲೆಗೆ ಕಳಿಸಲು ರೆಡಿ ಮಾಡುತ್ತಿದ್ದರು. ಈ ವೇಳೆ ನವ್ಯ ಮನೆಯ ಹೊರಗೆ ಆಟವಾಡುತ್ತಿದ್ದಳು. ಮನೆ ಬಳಿ ಅಪರಿಚಿತ ಮಹಿಳೆಯೊಬ್ಬಳು ಬಂದು ಮಗುವನ್ನು ಮಾತನಾಡಿಸಿ ಕರೆದೊಯ್ದಿದ್ದಾಳೆ. ಮಗುವನ್ನು ಅಪಹರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೆ ಪ್ರಕರಣ ಸಂಬಂಧ ಆರೋಪಿತೆ ಮಹಿಳೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಿಳೆಯೊಬ್ಬರು ಮಗುವನ್ನು ಮೊದಲು ಮಾತನಾಡಿಸಿ ಬಳಿಕ ಯಾರಿಗೂ ಗೊತ್ತೇ ಆಗದಂತೆ ಮಗುವನ್ನು ಅಪಹರಣ ಮಾಡಿಕೊಂಡು ಕರೆದೊಯ್ಯುದಿದ್ದಾಳೆ. ಅಂದಾಗೆ ಈ ಘಟನೆ ನಡೆದಿರೋದು ಬೆಂಗಳೂರಿನ ಮಲ್ಲೇಶ್ವರಂ ಮಕ್ಕಳ ಮಾರಮ್ಮ ದೇವಸ್ಥಾನದ ಬಳಿ. ಎರಡೂವರೆ ವರ್ಷದ ಮಗುವನ್ನು ಹಾಡಹಗಲೇ ಅಪಹರಣ ಮಾಡಿಕೊಂಡು ಮಹಿಳೆ…
ಬೆಂಗಳೂರು:- ಜಯನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಥಿಯೇಟರ್ ಮಾಲೀಕನ ಕೈಕಾಲು ಕಟ್ಟಿ ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣ ದೋಚಿದ್ದ ದಂಪತಿಯನ್ನು ಅರೆಸ್ಟ್ ಮಾಡಿದ್ದಾರೆ. https://ainlivenews.com/good-news-for-students-6-days-holiday-for-all-schools-and-colleges-in-karnataka/ ಗಣೇಶ್ ಹಾಗೂ ಗೀತಾ ಬಂಧಿತರು.ಆರೋಪಿಗಳು ಸಂಪಿಗೆ ಥಿಯೇಟರ್ ಮಾಲೀಕ ನಾಗೇಶ್ ಅವರ ಮನೆಯಲ್ಲಿ 2 ವರ್ಷದಿಂದ ಕೆಲಸ ಮಾಡಿಕೊಂಡಿದ್ದರು. ಅ.2 ರಂದು ಜಯನಗರ 3ನೇ ಬ್ಲಾಕ್‍ನಲ್ಲಿರುವ ಮನೆಯಲ್ಲಿ ನಾಗೇಶ್ ಒಬ್ಬರೇ ಇದ್ದ ವೇಳೆ ದಂಪತಿ ಅವರ ಕೈಕಾಲು ಕಟ್ಟಿ 2ಲಕ್ಷ ರೂ. ನಗದು ಹಾಗೂ 1 ಕೆಜಿ ಚಿನ್ನವನ್ನು ದೋಚಿದ್ದರು. ಈ ಸಂಬಂಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ಹಾಗೂ ಮೊಬೈಲ್ ನೆಟ್‍ವರ್ಕ್ ಆಧರಿಸಿ ಪೊಲೀಸರು ಆರೋಪಿಗಳನ್ನು ಮುಂಬೈನಲ್ಲಿ ಬಂಧಿಸಿದ್ದಾರೆ.
ಬೆಂಗಳೂರು: ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ಅಕ್ಟೋಬರ್ 3 ರಿಂದ 20 ತನಕ ದಸರಾ ರಜೆ ಘೋಷಿಸಿತ್ತು. ದಸರಾ ಹಾಗೂ ದೀಪಾವಳಿ ರಜೆ ಮುಗಿಸಿ ಮಕ್ಕಳು ಶಾಲೆಗೆ ಬರಲು ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಮಕ್ಕಳಿಗೆ ಮತ್ತೆ ರಜೆಗಳು ಬರಲಿದೆ. ಹೌದು ನವೆಂಬರ್ 13ರಿಂದ 18ರವರೆಗೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ. ಕರ್ನಾಟಕ ರಾಜ್ಯದಲ್ಲಿ 2024ರ ಶೈಕ್ಷಣಿಕ ವರ್ಷದ ಪ್ರಕಾರ ನವೆಂಬರ್ 13ರಂದು ತುಳಸಿ ಪೂಜೆ ಇದೆ. ಇದಾದ ಬಳಿಕ ನವೆಂಬರ್ 14ರಂದು ಮಕ್ಕಳ ದಿನಾಚರಣೆ ಸರ್ಕಾರಿ ರಜೆ ಇರಲಿದೆ. ನಂತರ ನವೆಂಬರ್ 15ರಂದು ಗುರುನಾನಕ್ ಜಯಂತಿ ಇರಲಿದೆ. ಇದಾದ ನಂತರ ನವೆಂಬರ್ 16ರಂದು ಶನಿವಾರ ಕೇವಲ ಅರ್ಧ ದಿನ ಮಾತ್ರ ಶಾಲೆ ನಂತರ ನವೆಂಬರ್ 17ರಂದು ಭಾನುವಾರ ರಜೆ ಇರಲಿದೆ. https://ainlivenews.com/what-is-waqf-amendment-act-how-will-the-farmers-suffer-here-is-the-complete-information/ ಜೊತೆಗೆ ನವೆಂಬರ್ 18ರಂದು ಕನಕದಾಸ ಜಯಂತಿ ಆಚರಿಸಲಾಗುತ್ತದೆ. ಕರ್ನಾಟಕದ ಎಲ್ಲಾ ಶಾಲಾ-ಕಾಲೇಜುಗಳಿಗೆ 6 ದಿನ ರಜೆ ಸಿಗಲಿದೆ. ಮಕ್ಕಳಿಗೆ ಇನ್ನುಷ್ಟು ಖುಷಿಯಾಗಲಿದೆ. 2024ರ…
ನೀವು ಗಮನಿಸಿರಬಹುದು ಕೆಲವರು ಮಲಗುವಾಗ ಬಾಯಿ ತೆರೆದು ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಈ ಅಭ್ಯಾಸ ಮಕ್ಕಳಲ್ಲಿ ಮಾತ್ರವಲ್ಲ, ವಯಸ್ಕರಲ್ಲೂ ಕಾಣಸಿಗುತ್ತದೆ. https://ainlivenews.com/false-information-about-farmer-suicide-fir-against-mp-tejashwi-surya/ ಎಸ್, ಮನೆಯ ಹೊರಗೆ ನಿದ್ರೆ ಮಾಡುತ್ತಿದ್ದ ಮಹಿಳೆಯ ಬಾಯಿಂದ 4 ಅಡಿ ಉದ್ದದ ಹಾವು ಒಳಗೆ ಹೋಗಿರುವ ಘಟನೆ ರಷ್ಯಾದಲ್ಲಿ ನಡೆದಿದೆ. ರಷ್ಯಾದ ಹಳ್ಳಿಯೊಂದರಲ್ಲಿ ಮನೆಯ ಹೊರಗೆ ಮಲಗಿದ್ದ ಮಹಿಳೆ ಬಾಯಿ ಕಳೆದುಕೊಂಡು ನಿದ್ರೆ ಮಾಡುತ್ತಿದ್ದರು. ಆಗ ಹಾವು ಒಳಗೆ ಹೋಗಿದೆ, ಬಳಿಕ ಆಕೆ ಅಸ್ವಸ್ಥಗೊಂಡಿದ್ದರು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ದೇಹದೊಳಗೆ ಏನೋ ಇದೆ ಎಂದು ಅರಿತ ವೈದ್ಯರು ಅನಸ್ತೇಶಿಯಾ ನೀಡಿ, ಬಾಯೊಳಗಿಂದ ಉಪಕರಣಗಳ ಸಹಾಯದಿಂದ ಹಾವನ್ನು ಹೊರ ತೆಗೆದು ಕಸದ ಬುಟ್ಟಿಗೆ ಎಸೆದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಾವು ಅನ್ನನಾಳದ ಬದಲು ಶ್ವಾಸಕೋಶಕ್ಕೆ ಹೋಗಿದ್ದರೆ, ಉಸಿರುಗಟ್ಟುವಿಕೆ ಮತ್ತು ಸಾವಿಗೆ ಕಾರಣವಾಗುತ್ತಿತ್ತು. ಅದೃಷ್ಟವಶಾತ್ ಆಕೆಗೇನೂ ಆಗಿಲ್ಲ ಎನ್ನಲಾಗಿದೆ.
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿಗೆ ಮುನ್ನ ಬಿಸಿಸಿಐಗೆ ಎಲ್ಲಾ ತಂಡಗಳು ಮಾಲೀಕರು ರೀಟೈನ್ ಲಿಸ್ಟ್ ಸಲ್ಲಿಸಿದ್ದಾರೆ. ಮೆಗಾ ಹರಾಜು ನಡೆಸಲು ಬಿಸಿಸಿಐ ಭರ್ಜರಿ ತಯಾರಿ ನಡೆಸಿಕೊಂಡಿದೆ. ಎಲ್ಲಿ ಮತ್ತು ಯಾವಾಗ ನಡೆಯಲಿದೆ? ಎಂದು ಫೈನಲ್ ಆಗಬೇಕಿದೆ. ಇದರ ಮಧ್ಯೆ ಹರಾಜಿನಲ್ಲಿ ಯಾರನ್ನು ಖರೀದಿ ಮಾಡಬೇಕು? ಎಂದು ಎಲ್ಲಾ ತಂಡಗಳು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿವೆ. https://ainlivenews.com/mescom-staff-committed-suicide-by-hanging-themselves-the-reason-is-a-mystery/ ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಎಲ್ಲಾ ಪ್ರಾಂಚೈಸಿಗಳು, ತಾವು ಉಳಿಸಿಕೊಂಡ ಆಟಗಾರರನ್ನು ಬಿಡುಗಡೆ ಮಾಡಿದೆ. ಈ ಮೊದಲೇ ತಿಳಿಸಿದಂತೆ ಅರ್ಷದೀಪ್ ಸಿಂಗ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳದಿರುವ ಫ್ರಾಂಚೈಸಿಯ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಆದರೆ ಮೆಗಾ ಹರಾಜಿನಲ್ಲಿ ಅರ್ಷದೀಪ್ ಅವರನ್ನು ಪಂಜಾಬ್, ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಮತ್ತೆ ತಂಡಕ್ಕೆ ಆಯ್ಕೆ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಅದರ ಭರವಸೆ ಸಂಪೂರ್ಣವಾಗಿ ಹುಸಿಯಾಗಿದೆ. ಸತ್ಯ ಏನೆಂದರೆ, ಐಪಿಎಲ್ 2025 ರ ಮೆಗಾ ಹರಾಜಿನ ಮೊದಲು, ಅರ್ಷದೀಪ್ ಸಿಂಗ್ ತಮ್ಮ ಅಧಿಕೃತ…