Author: AIN Author

ಚಿಕ್ಕಮಗಳೂರು:- ಪಿಕಪ್ ವಾಹನ ಅಪಘಾತ ಸಂಭವಿಸಿ 18 ಮಂದಿಗೆ ಗಾಯವಾದ ಘಟನೆ ತಾಲೂಕಿನ ಬಾಳೆಖಾನ್ ಎಸ್ಟೇಟ್ ಬಳಿ ಜರುಗಿದೆ. https://ainlivenews.com/a-woman-who-has-converted-from-muslim-to-hinduism/ ಅಪಘಾತದಲ್ಲಿ 6 ಜನರಿಗೆ ಹೆಚ್ಚಿನ ಗಾಯವಾಗಿದೆ. ಉಳಿದಂತೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಕಳಸದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಕಪ್‍ನಲ್ಲಿ 18 ಜನರನ್ನ ಕುರಿಗಳಂತೆ ತುಂಬಿಕೊಂಡು ಹೋದ ಚಾಲಕನ ವಿರುದ್ಧ ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ. ಇದು ಕಾನೂನು ಬಾಹಿರ, ಆತನ ವಿರುದ್ಧ ಕ್ರಮಕೈಗೊಳ್ಳುವಂತೆ ಜನ ಆಗ್ರಹಿಸಿದ್ದಾರೆ.

Read More

ಮಂಡ್ಯ:- ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದ ಮಹಿಳೆ ನಾಪತ್ತೆ ಆಗಿದ್ದು, ಆದರೆ ದೂರು ದಾಖಲಿಸಲು ಪೊಲೀಸರು ಮೀನಾಮೇಷ ಎಣಿಸಿರುವ ಘಟನೆ ಮಂಡ್ಯದಲ್ಲಿ ಜರುಗಿದೆ. https://ainlivenews.com/a-sinner-who-raped-and-murdered-a-woman-at-a-train-station/ ದೂರು ಸ್ವೀಕರಿಸದ ಹಿನ್ನೆಲೆ ಪೊಲೀಸರ ನಡೆ ಖಂಡಿಸಿ ಪತಿ ಸೇರಿದಂತೆ ಹಿಂದೂ ಸಂಘಟನೆ ಕಾರ್ಯಕರ್ತರಿಂದ ಜಿಲ್ಲೆಯ ಮದ್ದೂರು ಪೊಲೀಸ್‌ ಠಾಣೆಯ ಎದುರು ಪ್ರತಿಭಟನೆ ನಡೆದಿದೆ. ಮದ್ದೂರಿನ ಸಿದ್ದಾರ್ಥನಗರದ ವೆಂಕಟೇಶ್‌ನಿಂದ ಪೊಲೀಸರು ದೂರು ಸ್ವೀಕರಿಸಿರಲಿಲ್ಲ. ಹೀಗಾಗಿ ಪ್ರತಿಭಟನೆ ನಡೆಸಿ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. 9 ವರ್ಷಗಳ ಹಿಂದೆ ವೆಂಕಟೇಶ್​​ ಮುಸ್ಲಿಂ ಯುವತಿಯನ್ನ ಪ್ರೀತಿಸಿ ಮದುವೆ ಆಗಿದ್ದರು. ಆನಂತರ ಹಿಂದೂ ಧರ್ಮಕ್ಕೆ ವೆಂಕಟೇಶ್ ಪತ್ನಿ ಮತಾಂತರವಾಗಿದ್ದರು. ಜ.23ರಂದು ಕೊಡಗು ಜಿಲ್ಲೆಯ ಸೋಮವಾರಪೇಟೆಯ ತವರು ಮನೆಗೆ ಹೋಗಿದ್ದರು. ಆನಂತರ ಪತ್ನಿ ಹಾಗೂ ಮಗ ಮನೆಗೆ ವಾಪಸ್ ಆಗಿಲ್ಲ ಎಂದು ವೆಂಕಟೇಶ್ ಆರೋಪಿಸಿದ್ದಾರೆ. ಸದ್ಯ ಪತ್ನಿ ಖುಷಿ ತಾಯಿಯ ವಿರುದ್ಧ ದೂರು ನೀಡಲು‌ ವೆಂಕಟೇಶ್ ಮುಂದಾಗಿದ್ದು, ಆದರೆ ದೂರು ಸ್ವೀಕರಿಸದ ಹಿನ್ನೆಲೆ ಪ್ರತಿಭಟನೆ ಮಾಡಲಾಗಿದೆ

Read More

ಹಾಸನ:- ಅರಸೀಕೆರೆ ರೈಲ್ವೆ ಪೊಲೀಸರು ತನಿಖೆ ಚುರುಕುಗೊಳಿಸಿ ರೈಲು ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. https://ainlivenews.com/anands-wifes-leg-hit-photo-around-bandage-viral/ 25 ವರ್ಷದ ಮೌಸಮ್ ಪಹಡಿ ಬಂಧಿತ ಆರೋಪಿ. ಈತ ಕೂಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಕಳೆದ ಫೆ.13ರ ಬೆಳಗ್ಗೆ ಸಕಲೇಶಪುರದ ಕಡೆಯ ಯಾರ್ಡ್‌ನ ಟವರ್ ವ್ಯಾಗನ್ ಶೆಡ್‌ ಬಳಿ ಸುಮಾರು 40 ವರ್ಷದ ಅಪರಿಚಿತ ಮಹಿಳೆಯ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ರಾತ್ರೋರಾತ್ರಿ ಕೊಲೆ ಮಾಡಲಾಗಿತ್ತು. ನಿರ್ಮಾಣ ಹಂತದಲ್ಲಿರುವ ಶೆಡ್‌ನ ಆಯಿಲ್ & ಪೆಟ್ರೋಲ್ ಗೋದಾಮಿನ ರೂಮಿನಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಸಿವಿಲ್ ಇಂಜಿನಿಯರ್ ಪವನ್ ಸಿ.ಎಂ. ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು ಆರೋಪಿ ಪತ್ತೆಗಾಗಿ ಬೆಂಗಳೂರು ರೈಲ್ವೇ ಎಸ್‌ಪಿ ಡಾ.ಸೌಮ್ಯಲತಾ, ರೈಲ್ವೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಆರ್.ಸತೀಶ್ ಕುಮಾರ್ ಅವರ ಮಾರ್ಗದರ್ಶನದ ಮೇಲೆ ಮೈಸೂರು ರೈಲ್ವೆ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಚೇತನ್.ವಿ ನೇತೃತ್ವದಲ್ಲಿ…

Read More

ನಟ, ನಿರೂಪಕ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಕಾಲಿಗೆ ಪೆಟ್ಟಾಗಿದೆ. ಯಶಸ್ವಿನಿ ಕಾಲಿನ ಬ್ಯಾಂಡೇಜ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ನನ್ನಮ್ಮ ಸೂಪರ್‌ ಸ್ಟಾರ್‌ ವಿನ್ನರ್ ಯಶಸ್ವಿನಿ ಕಾಲಿಗೆ ಬಿಸಿ ನೀರು ಬಿದ್ದು, ಕಾಲಿಗೆ ಗುಳ್ಳೆ ಆಗಿರುವ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. https://ainlivenews.com/metro-passengers-listen-here-there-will-be-disruptions-to-train-services-today/ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಆನಂದ್ ಪತ್ನಿ ಯಶಸ್ವಿನಿ ಮತ್ತು ಪುತ್ರಿ ವಂಶಿಕಾ ಕಿರುತೆರೆ ವೀಕ್ಷಕರಿಗೆ ಪರಿಚಯವಾಗಿ ಹತ್ತಿರವಾಗಿಬಿಟ್ಟರು. ಅಲ್ಲಿಂದ ಆನಂದ್ ಪತ್ನಿ ಯಶಸ್ವಿನಿ ರೀಲ್ಸ್‌ ಶೇರ್‌ ಮಾಡುತ್ತಲೇ ಇರುತ್ತಾರೆ. ಇತ್ತೀಚಗೆ ಡಿವೋರ್ಸ್‌ ವದಂತಿಯ ವಿಚಾರವಾಗಿ ಸುದ್ದಿಯಾಗಿದ್ದರು. ಇದೀಗ ಯಶಸ್ವಿನಿ ಒಂದು ಅನಾಹುತ ಮಾಡಿಕೊಂಡಿದ್ದಾರೆ., ಈ ಬಗ್ಗೆ ರೀಲ್ಸ್‌ ಮೂಲಕ ಹೇಳಿಕೊಂಡಿದ್ದಾರೆ.ಕಳೆದ ಶನಿವಾರ ಎಲ್ಲರಿಗೂ ನಾರ್ಮಲ್‌ ಡೇ ಆದರೆ ನನಗೆ ಮಾತ್ರ ಬ್ಯಾಡ್‌ ಡೇ ಆಗಿತ್ತು ಎಂದು ವಿವರಿಸಿ ಮಾಸ್ಟರ್‌ ಆನಂದ್‌ ಅವರನ್ನು ಹೊಗಳಿದ್ದಾರೆ. ಹಾಗಾದ್ರೆ ಆಗಿದ್ದೇನು? ಮಾಸ್ಟರ್‌ ಆನಂದ್‌ ಪತ್ನಿ ಯಶಸ್ವಿನಿ ಅವರು ಹಾಟ್‌ ವಾಟರ್‌ ಸ್ಟೀಮ್‌ ತಗೊಳ್ತಿದ್ದರು. ಆದರೆ…

Read More

ಕಬ್ಬನ್ನು ಕಂಡರೆ ತಿನ್ನಬೇಕು ಎಂದು ಅನ್ನಿಸದೇ ಇರದು. ಆದರೆ ಹಲ್ಲಿನಿಂದ ಸಿಪ್ಪೆ ಸುಲಿದು, ಅಗಿದು ತಿನ್ನುವುದು ಮಾತ್ರ ಕಷ್ಟ. ಆದರೆ ಈಗ ಎಲ್ಲಿ ನೋಡಿದರು ರಸ್ತೆ ಬದಿಯಲ್ಲಿ ಕಬ್ಬಿನ ಜ್ಯೂಸ್‌ ಮಾರಾಟಕ್ಕೆ ಇಟ್ಟಿರುತ್ತಾರೆ. ಅದನ್ನು ಕುಡಿಯುವುದರಿಂದ ಬಾಯಿರುಚಿ ನೀಗಿಸಿಕೊಳ್ಳಬಹುದು, ಜೊತೆಗೆ ದೇಹಾರೋಗ್ಯವನ್ನು ಕಾಪಾಡಿಕೊಳ್ಳಬಹುದು. https://ainlivenews.com/metro-passengers-listen-here-there-will-be-disruptions-to-train-services-today/ ಎಳನೀರು ಮತ್ತು ಕಬ್ಬಿನ ರಸ ಇವೆರಡು ಪಾನೀಯಗಳನ್ನು ಆಗಾಗ ಕುಡಿಯುತ್ತೇವೆ. ಇವೆರಡರಲ್ಲಿಯೂ ಇರುವ ಆರೋಗ್ಯಕರ ಗುಣಗಳಿಂದಾಗಿ ಬಹಳ ಜನಪ್ರಿಯಗೊಂಡಿದೆ. ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲ ರುಚಿಗೂ ಇವೆರಡು ಒಂದನ್ನೊಂದು ಮೀರಿಸುವಷ್ಟು ಚೆನ್ನಾಗಿರುತ್ತದೆ. ಅದಕ್ಕಾಗಿಯೇ ಇವೆರಡನ್ನೂ ಇಷ್ಟ ಪಟ್ಟು ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಇವುಗಳಲ್ಲಿ ಯಾವುದು ಒಳ್ಳೆಯದು? ಎಳನೀರು ಅಥವಾ ಕಬ್ಬಿನ ರಸ ನಮ್ಮ ದೇಹಕ್ಕೆ ಯಾವುದು ಹೆಚ್ಚು ಪ್ರಯೋಜನಗಳನ್ನು ನೀಡುತ್ತದೆ? ಬಾಯಾರಿಕೆಯಾದಾಗ ಇವೆರಡರಲ್ಲಿ ಯಾವುದರ ಆಯ್ಕೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ ಎಳನೀರಿನಲ್ಲಿರುವ ಆರೋಗ್ಯ ಪ್ರಯೋಜನಗಳು: ಇದು ಹೈಡ್ರೇಟ್ ಮಾಡಲು ಸಹಾಯ ಮಾಡುವುದಲ್ಲದೆ ಇವುಗಳಲ್ಲಿ ಪೊಟ್ಯಾಸಿಯಮ್, ಸೋಡಿಯಂ ಮತ್ತು ಮೆಗ್ನೀಸಿಯಮ್ ಸೇರಿದಂತೆ ಖನಿಜಗಳು ಎಲ್ಲವೂ ಸಿಗುತ್ತದೆ.…

Read More

ಬೆಂಗಳೂರು:- ನೇರಳೆ ಮಾರ್ಗದಲ್ಲಿ ಮೆಟ್ರೋ ಹಳಿಯ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ನಮ್ಮ ಮೆಟ್ರೋದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು BMRCL ತಿಳಿಸಿದೆ. https://ainlivenews.com/cylinder-gas-leakage-fire-accident-at-the-village-kairuchi-hotel/ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಮಾಗಡಿ ರೋಡ್ ಹಾಗೂ ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ. ಈ ಅವಧಿಯಲ್ಲಿ ಕಬ್ಬನ್ ಪಾರ್ಕ್, ಡಾ.ಬಿ.ಆರ್ ಅಂಬೇಡ್ಕರ್ ನಿಲ್ದಾಣ ವಿಧಾನಸೌಧ, ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣ ಸೆಂಟ್ರಲ್ ಕಾಲೇಜು, ಮೆಜೆಸ್ಟಿಕ್ ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ನಿಲ್ದಾಣಗಳಲ್ಲಿ ಮೆಟ್ರೋ ಸಂಚಾರವಿರುವುದಿಲ್ಲ ಎಂದು ಮಾಹಿತಿ ನೀಡಿದೆ. ಇದರ ಹೊರತಾಗಿ ಚಲ್ಲಘಟ್ಟದಿಂದ ಮಾಗಡಿ ರೋಡ್ ಹಾಗೂ ಎಂಜಿ ರಸ್ತೆಯಿಂದ ವೈಟ್ ಫೀಲ್ಡ್‌ವರೆಗೆ ಎಂದಿನಂತೆ ಮೆಟ್ರೋ ಸಂಚಾರ ಇರಲಿದ್ದು, ಬೆಳಿಗ್ಗೆ 7 ಗಂಟೆಗೆ ಮೆಟ್ರೋ ಆರಂಭವಾಗಲಿದೆ. ಜೊತೆಗೆ ಭಾನುವಾರದಂದು ನೇರಳೆ ಮಾರ್ಗದಲ್ಲಿ ಕ್ಯೂಆರ್ ಟಿಕೆಟ್‌ಗಳ ಖರೀದಿಗೆ ಅವಕಾಶವಿರುವುದಿಲ್ಲ ಎಂದಿದೆ.

Read More

ಆನೇಕಲ್:- ಸಿಲಿಂಡರ್ ಗ್ಯಾಸ್ ಲೀಕೇಜ್ ನಿಂದ ಹಳ್ಳಿ ಕೈರುಚಿ ಹೋಟೆಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಆನೇಕಲ್ ಪಟ್ಟಣದಲ್ಲಿ ಜರುಗಿದೆ. https://ainlivenews.com/why-did-you-leave-me-shubha-poonjas-emotional-farewell-to-her-beloved-mother/ ಸಂಜೆ ಗ್ಯಾಸ್ ಲಿಕೇಜ್ ನಿಂದ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಧಗಧಗನೆ ಹೋಟೆಲ್ ಹೊತ್ತಿ ಉರಿದಿದೆ. ಇತ್ತೀಚೆಗಷ್ಟೇ ಹಳ್ಳಿ ಕೈರುಚಿ ಹೋಟೆಲ್ ನಿರ್ಮಾಣ ಮಾಡಲಾಗಿತ್ತು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳ ಭೇಟಿ ನೀಡಿ ಪರಿಶೀಲನೆ ಮಾಡಿದರು. ಅಲ್ಲದೇ ಬೆಂಕಿಯನ್ನ ನಂದಿಸುವಲ್ಲಿ ಅಗ್ನಿಶಾಮಕ ತಂಡ ಯಶಸ್ವಿಯಾಗಿದೆ. ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More

ನಟಿ ಶುಭಾ ಪೂಂಜಾ ಅವರ ತಾಯಿ ವಿಧಿವಶರಾಗಿದ್ದು, ಅಮ್ಮನ ಆಸೆಯಂತೆ ಪ್ರೀತಿಯ ತಾಯಿಗೆ ನಟಿ ಭಾವುಕ ವಿದಾಯ ಹೇಳಿದ್ದಾರೆ. https://ainlivenews.com/the-actor-was-so-overcome-with-emotion-by-the-actress-beauty-that-he-bit-and-kissed-her-until-her-lips-bled/ ಶುಭಾ ಪೂಂಜಾ ಅವರ ತಾಯಿಗೆ 70 ವರ್ಷ ವಯಸ್ಸಾಗಿತ್ತು. ಕಳೆದ 4 ತಿಂಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ನ್ಯುಮೋನಿಯಾ ಅಟ್ಯಾಕ್ ಆಗಿ ಲಂಗ್ಸ್‌ನಲ್ಲಿ ನೀರು ತುಂಬಿದ್ದ ಕಾರಣ ಆರೋಗ್ಯದಲ್ಲಿ ಏರುಪೇರಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶುಭ ಪೂಂಜಾ ತಾಯಿ ನಿನ್ನೆ ವಿಧಿವಶರಾಗಿದ್ದಾರೆ. ತಾಯಿಯ ಆಸೆಯಂತೆ ಕೊನೆ ಕಾರ್ಯಗಳನ್ನು ಶುಭಾ ಪೂಂಜಾ ಕುಟುಂಬ ಮಂಗಳೂರಲ್ಲಿ ನೆರವೇರಿಸಿದೆ. ತಾಯಿಯ ಪಾರ್ಥಿವ ಶರೀರವನ್ನು ಮಂಗಳೂರಿಗೆ ಕೊಂಡೊಯ್ದ ಕುಟುಂಬಸ್ಥರು ಅಂತಿಮ ನಮನ ಸಲ್ಲಿಸಿದ್ದಾರೆ. ತನ್ನ ತಾಯಿಯ ಅಗಲಿಕೆಯ ಬಗ್ಗೆ ನಟಿ ಶುಭಾ ಪೂಂಜಾ ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ. ಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ. ನೀನು ಇಲ್ಲದೆ ನನಗೆ ಜೀವನವಿಲ್ಲ. ನಿನ್ನ ಬಿಟ್ಟು ನನಗೆ ಬದುಕಕ್ಕೆ ಬರೋದು ಇಲ್ಲ. 24 ಗಂಟೆ ನಿನ್ನ ಜೊತೇನೆ ನಾನು ಇರುತ್ತಿದ್ದೆ. ಈಗ ನಾನು ಏನು ಮಾಡಲಿ. ಎಲ್ಲಿ…

Read More

ಬಾಲಿವುಡ್​ನ್ನು ದಶಕಗಳ ಕಾಲ ಆಳಿದ ಅಪರೂಪದ ಸೌಂದರ್ಯದ ಗಣಿ ಮಾಧುರಿ ದೀಕ್ಷಿತ್. ಮಾಧುರಿ ದಿಕ್ಷೀತ್​ ಎಂದರೆನೇ ಒಂದು ಕ್ರೇಜ್ ಇದ್ದ ಕಾಲವದು. ಈ ನಟಿಯ ಖ್ಯಾತಿ ಅದ್ಯಾವ ಮಟ್ಟಕ್ಕೆ ಹೋಗಿತ್ತು ಅಂದ್ರೆ ನೀವು ನಮಗೆ ಮಾಧುರಿ ದೀಕ್ಷಿತ್​ರನ್ನು ಬಿಟ್ಟು ಕೊಡಿ ನಾವು ಆಕ್ರಮಿತ ಕಾಶ್ಮೀರ ಬಿಟ್ಟುಕೊಡುತ್ತೇವೆ ಎಂದು ಪಾಕಿಸ್ತಾನಿಯರು ಹೇಳುವಂತಹ ಕ್ರೇಜ್​ನ್ನು ಜಾಗತಿಕವಾಗಿ ಮಾಧುರಿ ಹೊಂದಿದ್ದರು. ಅತ್ಯಂತ ಕಡಿಮೆ ವಿವಾದ ಹಾಗೂ ಹೆಚ್ಚು ಪ್ರಸಿದ್ಧಿ ಪಡೆದ ಬಾಲಿವುಡ್ ನಟಿಯರಲ್ಲಿ ಮಾಧುರಿ ಮೊದಲಿನ ಸಾಲಿನಲ್ಲಿ ಬಂದು ನಿಲ್ಲುತ್ತಾರೆ. ಇಂದಿಗೂ ಕೂಡ ಅವರ ಸೌಂದರ್ಯಕ್ಕೆ ಮುಕ್ಕು ಬಂದಿಲ್ಲ. https://ainlivenews.com/fatal-road-accident-7-dead-25-injured-in-bus-lorry-collision/ ಇಂತಹ ಸೌಂದರ್ಯದ ಗಣಿ ಜೀವನದಲ್ಲಿ ಒಂದು ದುರ್ಘಟನೆ ನಡೆದು ಹೋಗಿತ್ತು. ಅಂದಿನ ಕಾಲದ ಖ್ಯಾತ ನಟ ಮಾಧುರಿ ಸೌಂದರ್ಯಕ್ಕೆ ಮರುಳಾಗಿ ಸಿನಿಮಾದ ಸೀನ್ ಒಂದರಲ್ಲಿ ತನ್ನನ್ನೇ ತಾನು ಮರೆತು ಮಾಧುರಿಯೆಂಬ ಸೌಂದರ್ಯ ರಾಶಿಯೊಳಗೆ ಉನ್ಮತ್ತನಾಗಿ ಕಳೆದು ಹೋಗಿ ಯಡವಟ್ಟೊಂದನ್ನು ಮಾಡಿಕೊಂಡಿದ್ದರು ಆ ನಟನ ಹೆಸರು ವಿನೋದ್​ ಖನ್ನಾ. 1988ರಲ್ಲಿ ನಿರ್ಮಾಣವಾದ ದಯಾವಾನ್ ಸಿನಿಮಾದಲ್ಲಿ ಮಾಧುರಿ…

Read More

ಆನೇಕಲ್‌ ತಮಿಳುನಾಡು: ಬಸ್ಸು ಮತ್ತು ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಏಳು ಜನ ಮೃತಪಟ್ಟು 25 ಜನಕ್ಕೆ ಗಂಭೀರ ಗಾಯಗಳಾಗಿರುವ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ತಿರುತ್ತಣಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. https://ainlivenews.com/electrical-accident-three-youths-die-in-agricultural-pond/ ಇನ್ನು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತಿರುವಳ್ಳೂರು ಜಿಲ್ಲೆಯ ತಿರುತ್ತಣಿ ಬಳಿಯ ಕೋಳಿಂಗರ್ ರಾಜ್ಯ ಹೆದ್ದಾರಿಯಲ್ಲಿ ಬಸ್ ಮತ್ತು ಟಿಪ್ಪರ್ ಲಾರಿ ಮುಖಾಮುಖಿ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ಈ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 25ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ತಿರುತ್ತಣಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಇನ್ನು ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಸ್ಥಳೀಯ ಪೆಟ್ರೋಲ್ ಬಂಕ್ ಬಳಿ ರೆಕಾರ್ಡ್ ಆಗಿದೆ ಇನ್ನು ಪೆಟ್ರೋಲ್ ಬಂಕ್ ರಸ್ತೆ ಬರುತ್ತಿದ್ದ ಬಸ್‌ಗೆ ಎದುರಿನಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಬಸ್ ಅಪಘಾತಕ್ಕೀಡಾಯಿತು. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳೀಯರೊಂದಿಗೆ ಸೇರಿ ರಕ್ಷಣಾ ಕಾರ್ಯ…

Read More