ಸಂಡೂರು: ಕಾಂಗ್ರೆಸ್ ಸರ್ಕಾರ ಹಿಂದೂಯೇತರ ಆರೋಪಿಗಳನ್ನೇ ರಕ್ಷಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಹಳೇ ಹುಬ್ಬಳ್ಳಿ ಗಳಭೆಕೋರರ ಮೇಲಿನ ಕೇಸ್ ರದ್ದುಪಡಿಸಿತು. ಇದೀಗ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲೂ ಮುಸ್ಲಿಮರ ಮೇಲಿನ ಕೇಸ್ ಹಿಂಪಡೆಯಲು ತಯಾರಿ ನಡೆಸಿದೆ ಎಂದು ಆರೋಪಿಸಿದ್ದಾರೆ. https://ainlivenews.com/donald-trump-was-elected-as-the-47th-president-of-the-united-states-what-is-the-benefit-of-trumps-victory-for-india/ ರಾಜ್ಯ ಸರ್ಕಾರ ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ ಹಿಂಪಡೆಯಲು ಎಲ್ಲಾ ತಯಾರಿ ನಡೆಸಿರುವ ಬಗ್ಗೆ ತಮಗೆ ಪಕ್ಕಾ ಮಾಹಿತಿ ಬಂದಿದೆ. ತನ್ನದೇ ಪಕ್ಷದ ಒಬ್ಬ ದಲಿತ ಶಾಸಕನ ಮನೆ ಸುಟ್ಟು ಹಾಕಿದ್ದಾರೂ ಕಾಂಗ್ರೆಸ್ಗೆ ತುಷ್ಟೀಕರಣ ರಾಜಕಾರಣವೇ ಪ್ರಮುಖವಾಗಿದೆ. ಹಿಂದೂ ಸಂಘಟನೆ, ಹಿಂದೂಗಳು ಮತ್ತು ದೇವಸ್ಥಾನಗಳ ಮೇಲೆ ದಾಳಿ ನಡೆದರೂ ಕಾಂಗ್ರೆಸ್ ಸರ್ಕಾರ ಹಿಂದೂಯೇತರ ಆರೋಪಿಗಳನ್ನೇ ರಕ್ಷಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Author: AIN Author
ಮಂಡ್ಯ: ರೈತನಿಗೆ ನೋವಾದಾಗ ಹೃದಯ ಮರುಗುತ್ತೆ ಅಂತವರಿಗೆ ಕಣ್ಣೀರು ಬರುತ್ತದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದ್ದಾರೆ. ಮಂಡ್ಯದ ಚಿನಕುರುಳಿ ಗ್ರಾಮದಲ್ಲಿ ಮಾತನಾಡಿದ ದೇವೇಗೌಡರು, ನಿಖಿಲ್ ಕುಮಾರಸ್ವಾಮಿ ಅವರ ಕಣ್ಣೀರಿನ ಬಗ್ಗೆ ಕಾಂಗ್ರೆಸ್ ನಾಯಕರು ಮಾತಾಡ್ತಾರೆ. ಜವಹಾರ್‌ಲಾಲ್ ನೆಹರು, ಇಂದಿರಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅಂತಹ ಪಕ್ಷದ ಅಧ್ಯಕ್ಷರಾಗಿರುವ ಡಿಕೆಶಿ ಯಾವತ್ತಾದ್ರೂ ಜನರಿಗಾಗಿ ಕಣ್ಣೀರು ಹಾಕಿದ್ದಾರಾ? ಎಂದು ಪ್ರಶ್ನಿಸಿದರು. ದೇಶಕ್ಕೆ ಅನ್ನಕೊಡುವ ರೈತನಿಗೆ ನೋವಾದಾಗ ಹೃದಯ ಮರುಗುತ್ತೆ ಅಂತವರಿಗೆ ಕಣ್ಣೀರು ಬರುತ್ತದೆ. https://ainlivenews.com/donald-trump-was-elected-as-the-47th-president-of-the-united-states-what-is-the-benefit-of-trumps-victory-for-india/ ನನ್ನ ಮೊಮ್ಮಗ ಕಣ್ಣೀರು ಹಾಕಿದರ ಬಗ್ಗೆ ಮಾತಾಡುತ್ತಾರೆ. ನಮ್ಮ ವಂಶವೆ ಕಣ್ಣೀರು ಹಾಕುತ್ತದೆ ನಮ್ಮ ಅಪ್ಪನಿಂದಲೇ ನಮಗೆ ಕಣ್ಣೀರು ಹಾಕೋದು ಬಂದಿದೆ. ಬಡತನವನ್ನು ನಾವು ಅನುಭವಿಸಿದ್ದೇವೆ. ಬಡವರ ಬಗ್ಗೆ ನಮಗೆ ಬೇಗೆ, ನೋವು ಇದೆ. ಯಾರು ಹೇಮಾವತಿ, ಹಾರಂಗಿ ಕಟ್ಟಿದ್ದು? ಚನ್ನಪಟ್ಟಣದಲ್ಲಿ ಈಗ ಚರ್ಚೆ ಮಾಡ್ತಾರೆ. ಮಾತಡೋಕೆ ತುಂಬಾ ವಿಚಾರಗಳು ಇವೆ ಎಂದು ವಾಗ್ದಾಳಿ ನಡೆಸಿದರು.
ಬಿಗ್ ಬಾಸ್ ಸೀಸನ್ 11 ಬಹಳ ಕೂತುಹಲಕಾರಿ ಜನರಿಗೆ ಮನರಂಜನೆ ಕೊಡುತ್ತಿದೆ. ಅದರಂತೆ ಈ ವಾರ ಸ್ಟ್ರಾಂಗ್ ಕಂಟಸ್ಟಂಟ್ ಗಳೇ ನಾಮಿನೇಟ್ ಆಗಿದ್ದು, ಯಾರು ಹೊರ ಹೋಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. https://ainlivenews.com/current-according-to-the-money-you-pay-bescom-recharge-like-mobile-recharge/ ಬಿಗ್ ಬಾಸ್ ನಲ್ಲಿ ಧರ್ಮ ಕೀರ್ತಿರಾಜ್, ಭವ್ಯಾ ಗೌಡ, ಚೈತ್ರಾ ಕುಂದಾಪುರ, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೋಲ್ಡ್ ಸುರೇಶ್ ಹಾಗೂ ಧನರಾಜ್ ಸೇರಿ ಒಟ್ಟು 7 ಜನ ನಾಮಿನೇಟ್ ಆಗಿದ್ದಾರೆ. ಈ ಏಳರಲ್ಲಿ ಒಬ್ಬರ ಬಿಗ್ ಬಾಸ್ ಪ್ರಯಾಣ ಈ ವಾರಕ್ಕೆ ಮುಗಿಯಲಿದೆ ಮನರಂಜನೆ ವಿಚಾರದಲ್ಲಿಯೂ ಭವ್ಯ ಗೌಡ ಮುಂದಿದ್ದಾರೆ. ಹೀಗಾಗಿ ಭವ್ಯ ಈ ವಾರ ಮನೆಯಿಂದ ಆಚೆ ಬರೋದು ಡೌಟ್. ಚೈತ್ರಾ ಕುಂದಾಪುರ ಮಾತಿನ ಮೂಲಕವೇ ಆಟ ಆಡುತ್ತಿದ್ದ ಹೊರಡೆ ಜನರ ಪರ ವಿರೋಧವನ್ನು ಎದರಿಸುತ್ತಿದ್ದಾರೆ. ಧನರಾಜ್ ಆಟದ ಜೊತೆಗೆ ಕಾಮಿಡಿ ಮಾಡುತ್ತ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಧನರಾಜ್ ಮತ್ತು ಹನುಂತನ ಸ್ನೇಹ ಜನರ ಹೃದಯ ಗೆಲ್ಲುತ್ತಿದೆ. ಆದರೆ ಎಮೋಷನಲಿ ಧನರಾಜ್ ಕುಗ್ಗುತ್ತಿದ್ದು ಎಲ್ಲೋ ಒಂದೆಡೆ…
ತಿಂಗಳಾದ್ರೆ ಕರೆಂಟ್ ಬಿಲ್ ಕಟ್ಟಲು ಒದ್ದಾಡುವ ಗ್ರಾಹಕರಿಗೆ ಬೆಸ್ಕಾಂ ಶಾಕಿಂಗ್ ಸುದ್ದಿ ಒಂದು ಕೊಟ್ಟಿದೆ. ಇನ್ಮುಂದೆ ನೀವು ರೀಚಾರ್ಜ್ ಮಾಡಿಸಿದಷ್ಟು ಮಾತ್ರ ಕರೆಂಟ್ ಕೊಡಲಿದೆ. https://ainlivenews.com/inauguration-of-arjunapuri-sports-and-cultural-association-tomorrow/ ಸಿಲಿಕಾನ್ ಸಿಟಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರುವ ನಗರವಾಗಿರುವುದರಿಂದ ಇಲ್ಲಿ ವಾಸ ಮಾಡುವ ಜನರಿಂದ ದೊಡ್ಡ ಮಟ್ಟದಲ್ಲಿಯೇ ಹಣ ವಸೂಲಿ ಮಾಡಿ ಸುಗಮ ಸೇವೆಯನ್ನು ಕೊಡುವ ನಿಟ್ಟಿನಲ್ಲಿ ಬಿಬಿಎಂಪಿ, ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ, ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಸೇವೆಗಳನ್ನು ಕೊಡಲು ಸರ್ಕಾರದಿಂದ ಯೋಜನೆ ರೂಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕೆಲವು ಮನೆಗಳಿಗಾಗಲೇ ನೀವು ಗೇಲ್ ಗ್ಯಾಸ್‌ನಿಂದ ಎಷ್ಟು ಮೀಟರ್ ಅಳವಡಿಕೆ ಮಾಡಿ ಗ್ಯಾಸ್ ಸಪ್ಲೈ ಮಾಡಲಾಗುತ್ತದೆ. ನೀವು ಬಳಕೆ ಮಾಡುವಷ್ಟು ಹಣವನ್ನು ಪಾವತಿ ಮಾಡಬೇಕಾಗುತ್ತದೆ. ವಿದ್ಯುತ್, ನೀರಿನ ಬಿಲ್ ಸೇರಿದಂತೆ ಎಲ್ಲವೂ ಇದೇ ರೀತಿ ನಾವು ಬಳಕೆ ಮಾಡಿದಷ್ಟು ಹಣ ಪಾವತಿ ಮಾಡಬೇಕಿತ್ತು. ಆದರೆ, ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಬೆಸ್ಕಾಂ ಮೊದಲು ನೀವು ಹಣ ಪಾವತಿ ಮಾಡಿ ರೀಚಾರ್ಜ್ ಮಾಡಿಕೊಂಡ ಹಣದ…
ಚಿರುಪುತ್ರನ ಕನ್ನಡ ಪ್ರೀತಿ https://www.youtube.com/watch?v=2sf-9rvuDB8&ab_channel=AINKannada
ಮಂಡ್ಯ :- ಕ್ರೀಡೆ, ಸಂಸ್ಕೃತಿ ಉಳಿಸುವ ಜತೆಗೆ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ನವಂಬರ್ 9 ರಂದು ಮದ್ದೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಅರ್ಜುನಪುರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎನ್.ಆರ್.ಪ್ರಸನ್ನ ತಿಳಿಸಿದರು. ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕ್ಷಣದ ಜತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ವಿಚಾರಗಳು ಎಲ್ಲರಿಗೂ ಮುಖ್ಯವಾಗಿರುವುದರಿಂದ ಕ್ರೀಡಾಪಟುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಂಘವನ್ನು ಉದ್ಘಾಟನೆ ಮಾಡಲಾಗುತ್ತಿದೆ ಎಂದರು. https://ainlivenews.com/if-you-do-this-work-on-friday-morning-even-if-you-dont-want-it-dhan-lakshmi-oliu-will-be-rich/ ಸಂಘದ ವತಿಯಿಂದ ತಾಲೂಕಿನ ಎಲ್ಲಾ ಕ್ರೀಡಾಪಟುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ ಹಾಗೂ ಮುಂದಿನ ದಿನಗಳಲ್ಲಿ ತಾಲೂಕಿನ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ನೀಟ್, ಕೆಎಎಸ್, ಐಪಿಎಸ್ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಉಚಿತವಾಗಿ ತರಬೇತಿ ಕೊಡಿಸುವುದು ಸಂಘದ ಮುಖ್ಯ ಉದ್ದೇಶವಾಗಿದೆ ಎಂದರು. ಮದ್ದೂರು ತಾಲೂಕಿನಿಂದ ಆಯ್ಕೆಯಾದ ಜಿಲ್ಲಾ, ರಾಜ್ಯ ಮಟ್ಟದ ಕ್ರೀಡಾಪಟುಗಳಿಗೆ ಯಾವುದೇ ಕ್ರೀಡೆ ಆದರೂ ಸಹ…
ಸ್ವೀಡಿಷ್ ಸಾಫ್ಟ್‌ವೇರ್ ಕಂಪನಿ ಟ್ರೂಕಾಲರ್ ತನ್ನ ಹೊಸ ಮುಖ್ಯ ಕಾರ್ಯನಿರ್ವಾಹಕರಾಗಿ ಪ್ರಸ್ತುತ ಉತ್ಪನ್ನಗಳ ಮುಖ್ಯಸ್ಥ ರಿಷಿತ್ ಜುನ್‌ಜುನ್‌ವಾಲಾ ಅವರನ್ನು ನೇಮಕ ಮಾಡಿದೆ ಎಂದು ಬುಧವಾರ ತಿಳಿಸಿದೆ. https://ainlivenews.com/two-children-killed-in-shooting-at-ettinahole-work/ ಟ್ರೂಕಾಲರ್ ಸಂಸ್ಥೆಗೆ ಬೆಂಗಳೂರು ಮೂಲದ ರಿಷಿತ್ ಜುಂಜುನವಾಲ ಸಿಇಒ ಆಗಿ ನೇಮಕವಾಗಿದ್ದಾರೆ. ರಿಷಿತ್ ಜುಂಜುನವಾಲ ಜನವರಿ 9ರಿಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜವಾಬ್ದಾರಿ ನಿಭಾಯಿಸಲಿದ್ದಾರೆ. ಸದ್ಯ ಅವರು ಟ್ರೂಕಾಲರ್ನಲ್ಲಿ ಚೀಫ್ ಪ್ರಾಡಕ್ಟ್ ಆಫೀಸರ್ ಮತ್ತು ಎಂಡಿಯಾಗಿದ್ದಾರೆ ಟ್ರೂಕಾಲರ್ನ ಸಹ-ಸಂಸ್ಥಾಪಕರಾದ ಮತ್ತು ಈಗ ಚೀಫ್ ಸ್ಟ್ರಾಟಿಜಿ ಆಫೀಸರ್ ಆಗಿರುವ ನಾಮಿ ಜಾರಿಂಘಲಂ ಅವರೂ ಕೂಡ ತಮ್ಮ ಸ್ಥಾನದಿಂದ ವಿಮುಕ್ತರಾಗುತ್ತಿದ್ದಾರೆ. ಅಲನ್ ಮಾಮೇದಿ ಮತ್ತು ನಾಮಿ ಝಾರಿಂಗಲಂ ಅವರಿಬ್ಬರೂ ಜನವರಿ 9ರ ಬಳಿಕ 2025ರ ಜೂನ್ 30ರವರೆಗೆ ಕಂಪನಿಯ ಅಡ್ವೈಸರ್ಗಳಾಗಿ ಮುಂದುವರಿಯಲಿದ್ದಾರೆ ಎಂದು ಟ್ರೂಕಾಲರ್ ಸಂಸ್ಥೆ ಹೇಳಿಕೆ ನೀಡಿದೆ. 1977ರಲ್ಲಿ ಜನಿಸಿದ 47 ವರ್ಷದ ರಿಷಿತ್ ಜುಂಜುನವಾಲ ಬೆಂಗಳೂರು ಹುಡುಗ. ಓದಿದ್ದೆಲ್ಲಾ ಸಿಲಿಕಾನ್ ಸಿಟಿಯಲ್ಲೇ. ಮಲ್ಯ ಅದಿತಿ ಶಾಲೆಯಲ್ಲಿ ಓದಿದ್ದಾರೆ. ಬೆಂಗಳೂರು ಯೂನಿವರ್ಸಿಟಿಯಲ್ಲಿ ಬಿಸಿನೆಸ್ ಮ್ಯಾನೇಜ್ಮೆಂಟ್…
ಗಂಡ-ಹೆಂಡತಿ ಸಂಬಂಧ ಗಟ್ಟಿಯಾಗಿರಬೇಕೆಂದರೆ ಹೀಗೆ ಇರಬೇಕು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಬೆಳಗ್ಗೆ ಎದ್ದಾಗ ಪತಿ-ಪತ್ನಿ ಒಟ್ಟಿಗೆ ಕೆಲವು ಕೆಲಸಗಳನ್ನು ಮಾಡಬೇಕು. ಇದು ಅವರ ಇಡೀ ದಿನ ಮತ್ತು ವೈವಾಹಿಕ ಜೀವನವನ್ನು ಸುಧಾರಿಸುತ್ತದೆ ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ದಂಪತಿಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ತಕ್ಷಣವೇ ಪರಿಹರಿಸಿಕೊಳ್ಳುವುದು ಅವಶ್ಯಕ. ಅದಲ್ಲದೇ, ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಈ ಕೆಲವು ವಿಷಯಗಳಿಗೆ ಹೆಚ್ಚು ಗಮನ ಹರಿಸಿದರೆ ಇಬ್ಬರ ನಡುವಿನ ಸಂಬಂಧವು ಇನ್ನಷ್ಟು ಗಟ್ಟಿಯಾಗುತ್ತವೆ. https://ainlivenews.com/there-is-no-infrastructure-in-the-9-blocks-of-bangalores-prestigious-barangay-heloru-keloru-who-is-not-there/ ನಿಮ್ಮ ಸಂಗಾತಿಗೆ ಸಾಕಷ್ಟು ಸಮಯವನ್ನು ನೀಡಿ: ಪ್ರತಿ ಸಂಬಂಧವು ಬಲಪಡಿಸುವ ಅಸ್ತ್ರವೇ ಈ ಸಮಯ. ಒಬ್ಬರಿಗೊಬ್ಬರು ಸಮಯ ನೀಡುವುದು ಸಂಬಂಧವನ್ನು ಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಉದ್ಯೋಗಸ್ಥ ದಂಪತಿಗಳಿಗೆ ಪರಸ್ಪರ ಒಟ್ಟಿಗೆ ಕಳೆಯಲು ಸಮಯವೇ ಇಲ್ಲ. ಇದರಿಂದ ಪತಿ-ಪತ್ನಿಯರ ನಡುವಿನ ಅಂತರವು ಹೆಚ್ಚಾಗುತ್ತದೆ. ಹೀಗಾಗಿಯೇ ಸಂಬಂಧವು ಮತ್ತಷ್ಟು ದುರ್ಬಲಗೊಳ್ಳುತ್ತದೆ. ಈ ಕಾರಣದಿಂದ ನಿಮ್ಮ ಸಂಗಾತಿಗಾಗಿ ಸಮಯ ಮೀಸಲಿಡಲು ಪ್ರಯತ್ನಿಸಿ. ಸಂಭಾಷಣೆ ಅಗತ್ಯ: ದಂಪತಿಗಳಿಬ್ಬರೂ ಜಗಳವಾಡುವ ಸಮಯದಲ್ಲಿ ಒಬ್ಬರು…
ಬಂಗಾರಪೇಟೆ – ಕೋಲಾರದಲ್ಲಿ ಭೀಕರ ಅವಘಡ ಸಂಭವಿಸಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ 3 ಅಂತಸ್ತಿನ ಕಟ್ಟಡ ಕುಸಿತವಾಗಿದೆ. ಅಗ್ನಿಶಾಮಕ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಬಂಗಾರಪೇಟೆ ಕೆಇಬಿ ರಸ್ತೆಯಲ್ಲಿ ಬೂದಿಕೋಟೆ ರಾಜ್ ಕುಮಾರ್ ಎಂಬುವವರಿಗೆ ಸೇರಿದ 3 ಅಂತಸ್ತಿನ ಕಟ್ಟಡ ಇಧೀಗ ಕುಸಿದಿದೆ. https://youtu.be/m1jmtSoS624 ಕಟ್ಟಡದಲ್ಲಿದ್ದ ಮೂರು ಪ್ರತ್ಯೇಕ ಕುಟುಂಬದ ಸದಸ್ಯರು ಬಚಾವ್ ಆಗಿದ್ದಾರೆ. ಗ್ರೌಂಡ್ ಪ್ಲೋರ್ ಗೋಡೆ ರಿಪೇರಿ ವೇಳೆ ಧಿಡೀರ್ ಮೇಲಿನ ಕಟ್ಟಡಗಳು ಕುಸಿತವಾಗಿದ್ದು ದೊಡ್ಡ ಅನಾಹುತ ತಪ್ಪಿದೆ. ಮನೆ ಕಟ್ಟಡ ವಾಲಿದ್ದರೂ ಮಾಲೀಕ ನಿರ್ಲಕ್ಷ ವಹಿಸಿದ್ದೆ ದುರಂತಕ್ಕೆ ಪ್ರಮುಖ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ. https://ainlivenews.com/if-you-do-this-work-on-friday-morning-even-if-you-dont-want-it-dhan-lakshmi-oliu-will-be-rich/ ಅಗ್ನಿಶಾಮಕ ದಳ ಸಿಬ್ಬಂದಿ ಸೂಕ್ತ ಸಮಯಕ್ಕೆ ಸ್ಥಳಕ್ಕಾಗಮಿಸಿ ಅನಾಹುತ ತಪ್ಪಿಸಿದ್ದಾರೆ. ಅಪಾಯದ ಮುನ್ಸೂಚನೆ ಅರಿತು ತ್ವರಿತವಾಗಿ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಮನೆಯಲ್ಲಿದ್ದ ಎಲ್ಲರನ್ನು ಹೊರಕ್ಕೆ ಕಳುಹಿದ್ದಾರೆ. ನಂತರ ಕಟ್ಟಡ ನೆಲಸಮವಾಗಿದೆ. ಕಟ್ಟಡ ಬಿದ್ದು ದಟ್ಟವಾದ ಧೂಳು ಆವರಿಸಿ ಕಾರ್ಯಾಚರಣೆ ನಡೆಸುವ ಕಾರಣ ಕೆಇಬಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ತುಮಕೂರು: ತುಮಕೂರು ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಎತ್ತಿನಹೊಳೆ ಕಾಮಗಾರಿ ಗುಂಡಿಗೆ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಹುಚ್ಚನಹಟ್ಟಿ ಬಳಿ ನಡೆದಿದೆ. ಯದುವೀರ್ ಹಾಗೂ ಮನೋಹರ್ ಮೃತ ಬಾಲಕರಾಗಿದ್ದು, ನಿನ್ನೆ ಸಂಜೆ ಇಬ್ಬರು ಮಕ್ಕಳು ಕಾಣೆಯಾಗಿದ್ದರು. https://ainlivenews.com/if-you-do-this-work-on-friday-morning-even-if-you-dont-want-it-dhan-lakshmi-oliu-will-be-rich/ ಇಂದು ಬೆಳಿಗ್ಗೆ ಎತ್ತಿನಹೊಳೆ ಗುಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹುಚ್ಚನಹಟ್ಟಿ ಗ್ರಾಮದ ಬಳಿ ಎತ್ತಿನಹೊಳೆ ಕಾಮಗಾರಿ ನಡೆಯುತ್ತಿದ್ದು, ಆಟವಾಡುತ್ತಾ ಹೋದ ಮಕ್ಕಳು ಗುಂಡಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ತಿಪಟೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.