ಕೋಲಾರ:- ಕೋಲಾರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. https://ainlivenews.com/gadag-dues-of-chickpea-crop-farmers-strike-continues/ ಸಮೀರ್ ಪಾಷಾ, ತಮೀಮ್ ಖಾನ್, ಷಹೀದ್ ಪಾಷಾ ಬಂಧಿತ ಆರೋಪಿಗಳು. ಬಂಧಿತರಿಂದ 20,000 ಮೌಲ್ಯದ 5.4 ಗ್ರಾಂ ತೂಕದ ಎಂಡಿಎಂ ಮಾದಕ ಪದಾರ್ಥ ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಒಂದು ಮಾರುತಿ ಸ್ವಿಫ್ಟ್ ಕಾರು, 4 ಮೊಬೈಲ್ ಹಾಗೂ 1 ಡ್ರ್ಯಾಗರ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
Author: AIN Author
ಗದಗ:- ರೈತರಿಂದ ಕಡಲೆ ಖರೀದಿಸಿದ ಬಾಕಿ ಹಣ ನೀಡದ ವಿಚಾರಕ್ಕೆ ಅನ್ನದಾತರ ಪ್ರತಿಭಟನೆ ಅಹೋರಾತ್ರಿ ಮುಂದುವರೆದಿದೆ. ಗದಗ ಜಿಲ್ಲೆಯ ಸುಮಾರು 450 ರೈತರಿಗೆ ಕಡಲೆ ಮಾರಿದ ಹಣದ ಬಾಕಿ 6 ಕೋಟಿ 50 ಲಕ್ಷ ರೂಪಾಯಿ ಹಣ ಕಳೆದ ಒಂದು ವರ್ಷದಿಂದ ಬಂದಿಲ್ಲ. ಹಲವಾರು ಬಾರಿ ಹಣ ಕೊಡಿಸಿ ಅಂತಾ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. https://ainlivenews.com/lokayukta-big-shock-for-corrupt-officials-lokayukta-attack-in-eight-parts-of-karnataka/ ಹೀಗಾಗಿ ರೊಚ್ಚಿಗೆದ್ದ ಅನ್ನದಾತರು ಗದಗ ಜಿಲ್ಲಾಡಳಿತ ಭವನದ ಗೇಟ್ ಗೆ ಎತ್ತುಗಳನ್ನ ಕಟ್ಟಿ, ಅಲ್ಲೇ ಅಡುಗೆ ಮಾಡಿ, ಅಲ್ಲೇ ಮಲಗೋ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ ಇಡೀ ಛಳಿಯಲ್ಲಿ ಬೆಂಕಿ ಕಾಯಿಸುತ್ತಾ ಕುಳಿತ ರೈತರ ಗೋಳು ಯಾರೂ ಕೇಳದಂತಾಗಿದೆ. ಉತ್ತಿ ಬಿತ್ತಿ ಅನ್ನ ನೀಡಿದ ಅನ್ನದಾತ ಇಂದು ರಸ್ತೆಯಲ್ಲೇ ಅಡುಗೆ ಮಾಡಿ, ರಸ್ತೆಯಲ್ಲೇ ಮಲಗೋ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದ್ರೂ ಗದಗ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಎಚ್ಚೆತ್ತು ರೈತರಿಗೆ ನ್ಯಾಯ ಕೊಡಿಸಿ ಅನ್ನ ನೀಡಿದ ಅನ್ನದಾತರ ಕೈ ಹಿಡಿಯಬೇಕಿದೆ.
ಬೆಂಗಳೂರು:- ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನಲೆಯಲ್ಲಿ ಬೆಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ ಗದಗ, ಬಳ್ಳಾರಿ ಸೇರಿ ರಾಜ್ಯಾದ್ಯಂತ ಎಂಟು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. https://ainlivenews.com/krs-dam-sets-a-new-record-good-news-for-farmers-bangaloreans/ ರಾಯಚೂರು, ಚಿಕ್ಕಮಗಳೂರು, ಬೀದರ್, ಬೆಳಗಾವಿ, ಗದಗ, ಬಳ್ಳಾರಿ, ಮತ್ತು ಬೆಂಗಳೂರಿನಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಖಾನಾಪುರ ತಹಶೀಲ್ದಾರ್, ಬೆಂಗಳೂರು ಟ್ರಾನ್ಸ್ ಪೋರ್ಟ್ ಡಿಪಾರ್ಟ್ಮೆಂಟ್ ಜಂಟಿ ನಿರ್ದೇಶಕರಾದ ಶೋಭಾ ಸೇರಿದಂತೆ ಎಂಟು ಜಿಲ್ಲೆಯ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಠರಿಗೆ ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರು, ಬೆಳಗಾವಿ, ಗದಗ, ಬಳ್ಳಾರಿ, ಚಿಕ್ಕಮಗಳೂರು, ಬೀದರ್, ರಾಯಚೂರಿನಲ್ಲಿ ದಾಳಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ ಶೋಭಾ ಮನೆ ಮೆಲೆ ದಾಳಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರಿನ ಆಡಳಿತ ವೈದ್ಯಾಧಿಕಾರಿ ಡಾ. ಎಸ್ಎನ್ ಉಮೇಶ್…
ಮಂಡ್ಯ:- ಕನ್ನಂಬಾಡಿ ಅಣೆಕಟ್ಟು ಹೊಸ ಇತಿಹಾಸ ನಿರ್ಮಿಸಿದ್ದು, ಜನವರಿಯಲ್ಲೂ ಗರಿಷ್ಠ 124 ಅಡಿ ನೀರು ಸಂಗ್ರಹಣೆ ಮೂಲಕ ದಾಖಲೆ ಬರೆದಿದೆ. https://ainlivenews.com/countdown-to-the-end-of-the-era-of-naxals-in-the-forests-of-kaffinad-what-are-the-demands-of-the-naxals-before-the-government/ ಕಳೆದ 156 ದಿನಗಳಿಂದ ನಿರಂತರವಾಗಿ 124 ಅಡಿ ಕಾಯ್ದುಕೊಂಡಿದೆ. ಈಗಲೂ ಜಲಾಶಯ ಭರ್ತಿಯಾಗಿರುವ ಕಾರಣ ಈ ಬೇಸಿಗೆಯಲ್ಲಿ ಕಾವೇರಿ ಕೊಳ್ಳದ ಅನ್ನದಾತರು, ವಿಶೇಷವಾಗಿ ಬೆಂಗಳೂರಿಗರಿಗರಿಗೆ ನೀರಿನ ಅಭಾವ ಸೃಷ್ಟಿಯಾಗಲಾರದು. ಈ ಮೂಲಕ ಸರ್ಕಾರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಹೀಗಾಗಿ ಸರ್ಕಾರ ಮಂಗಳವಾರ ನಡೆದ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಬೇಸಿಗೆ ಬೆಳೆ ಬೆಳೆಯಲು ರೈತರಿಗೆ ನೀರೊದಗಿಸುವ ನಿರ್ಧಾರ ಮಾಡಿದೆ. ಸರ್ಕಾರದ ಈ ನಿರ್ಧಾರ ರೈತರ ಸುಗ್ಗಿ ಹಬ್ಬ ಸಂಕ್ರಾಂತಿಯ ಸಂಭ್ರಮ ಇಮ್ಮಡಿಗೊಳಿಸಿದೆ ಎರಡು ವರ್ಷಗಳ ಮಳೆ ಅಭಾವದಿಂದಾಗಿ ತೀವ್ರ ಬರಗಾಲ ಸೃಷ್ಟಿಯಾಗಿತ್ತು. ಬದಲಾದ ಕಾಲಘಟ್ಟದಲ್ಲಿ ವರುಣನ ಕೃಪೆಯಿಂದ ಕಾವೇರಿ ಕಣಿವೆಯಲ್ಲಿ ವ್ಯಾಪಕ ಮಳೆಯಾಗಿದೆ. ಇದರಿಂದ ಕನ್ನಂಬಾಡಿ ಅಣೆಕಟ್ಟು ಕೂಡ ಭರ್ತಿಯಾಗಿದೆ. ಪ್ರಸಕ್ತ ವರ್ಷ ತಮಿಳುನಾಡಿಗೆ ಬಿಡಬೇಕಾದ ನೀರಿಗಿಂತ ಹೆಚ್ಚಿನ ಪ್ರಮಾಣದ ನೀರು ಹರಿದಿದೆ. ಹೀಗಾಗಿ ಈ ಬಾರಿ…
ಬೆಂಗಳೂರು/ಚಿಕ್ಕಮಗಳೂರು:- ಆರು ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬರಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಕ್ಸಲರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಪ್ರಕ್ರಿಯೆ ನಡೆಯಲಿದೆ. https://ainlivenews.com/v-as-the-new-chairman-of-isro-narayanan-appointment/ ಸಮಾಜದ ಮುಖ್ಯವಾಹಿನಿಯಿಂದ ಮರೆಯಾಗಿ ವನವಾಸದಲ್ಲಿರುವ ನಕ್ಸಲರ ಬದುಕಿಗೂ ಅಂತೂ ಇಂತೂ ಶ್ರಾವಣ ಬಂದಿದೆ. ಅಡವಿಯಲ್ಲಿ ಅಡಗಿ ಕುಳಿತು ಸದಾ ಸಂಘರ್ಷ, ರಕ್ತಚರಿತ್ರೆ ಬರೆಯುತ್ತಿದ್ದ ನಕ್ಸಲರು ಶಾಂತಿ ಮಂತ್ರ ಪಠಿಸಿದ್ದಾರೆ. 4 ದಶಕಗಳ ಕಾಲ ಸದ್ದು ಮಾಡಿದ್ದ ನಕ್ಸಲ್ ಸಂಸ್ಕೃತಿಯಿಂದ ಕರ್ನಾಟಕ ಮುಕ್ತ ಆಗುವ ಮುನ್ಸೂಚನೆ ಸಿಕ್ಕಿದೆ. ನಕ್ಸಲ್ ನಾಯಕ ವಿಕ್ರಂ ಗೌಡನ ಎನ್ಕೌಂಟರ್ನಿಂದ ಕಾಡಲ್ಲಿನ ಕೆಂಪು ಉಗ್ರರ ಸದ್ದಡಗಿದೆ. ಬಹುತೇಕ ಕಾಫಿನಾಡಿನ ಕಾಡಲ್ಲಿ ನಕ್ಸಲರ ಯುಗಾಂತ್ಯವಾಗಿದೆ. ಮಾಜಿ ನಕ್ಸಲ್ ನೂರ್ ಜುಲ್ಫಿಕರ್ ಶ್ರೀಧರ್ ನೇತೃತ್ವದಲ್ಲಿ ಶರಣಾಗತಿಯಾಗಲಿದ್ದಾರೆ. ಶಾಂತಿಗಾಗಿ ನಾಗರೀಕ ವೇದಿಕೆಯ ಅಡಿಯಲ್ಲಿ ನಕ್ಸಲರು ಇಂದು ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್ಪಿ ವಿಕ್ರಮ ಅಮಟೆ ಮುಂದೆ ಶರಣಾಗಲಿದ್ದಾರೆ. ಇನ್ನು ಇವರು ಕೆಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ. ಸರ್ಕಾರಕ್ಕೆ ನಕ್ಸಲರ ಬೇಡಿಕೆಗಳು:-…
ನವದೆಹಲಿ:- ಇಸ್ರೊ ನೂತನ ಅಧ್ಯಕ್ಷರಾಗಿ ವಿ. ನಾರಾಯಣನ್ ನೇಮಕವಾಗಿದ್ದಾರೆ. ಇಸ್ರೊ ಹಾಲಿ ಅಧ್ಯಕ್ಷ ವಿ. ಸೋಮನಾಥ್ ಅವರಿಂದ ಅಧಿ ಕಾರವನ್ನು ನಾರಾಯಣನ್ ಅವರು ಜ. 14ರಂದು ವಹಿಸಿಕೊಳ್ಳಲಿದ್ದಾರೆ . https://ainlivenews.com/these-are-the-people-who-will-be-out-of-the-bigg-boss-house-this-week-who-will-get-the-viewers-vote/ ಕೇಂದ್ರ ಸಂಪುಟದ ನೇಮಕಾತಿಗಳ ಸಮಿತಿಯು ನಾರಾಯಣನ್ ಅವರನ್ನು ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇಸ್ರೊ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ . ಜನವರಿ 14 ರಿಂದ ಭಾರತೀಯ ಬಾಹ್ಯಾಕಾಶ ಸಂಸ್ಥೆಯು ನೂತನ ಮುಖ್ಯಸ್ಥರನ್ನು ಪಡೆಯಲಿದೆ. ಎಲ್ಪಿಎಸ್ಸಿ ಮುಖ್ಯಸ್ಥರಾಗಿರುವ ನಾರಾಯಣನ್ ಅಧಿಕಾರವಧಿ ಎರಡು ವರ್ಷಗಳಾಗಿರುತ್ತದೆ. ಸ್ಪೇಸ್ ಕಮಿಷನ್ ಅಧ್ಯಕ್ಷರೂ ಆಗಿರಲಿರುವ ನಾರಾಯಣನ್, ಕ್ರಯೋಜೆನಿಕ್ ಎಂಜಿನ್ಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಪ್ರಸ್ತುತ ನಾರಾಯಣನ್ ಉನ್ನತ ಶ್ರೇಣಿಯ ಹಿರಿಯ ವಿಜ್ಞಾನಿ ಆಗಿರುವ ಅವರು, ಇಸ್ರೋದ ನಿರ್ದೇಶಕರಲ್ಲಿ ಒಬ್ಬರು. ಇಸ್ರೋದಲ್ಲಿ ಅವರು LPSC ನ ಮುಖ್ಯಸ್ಥರಾಗಿ ಮುನ್ನಡೆಸುತ್ತಿದ್ದಾರೆ. ಅಂದ್ಹಾಗೆ ಇವರ ಊರು ತಮಿಳುನಾಡಿನ ಕನ್ಯಾಕುಮಾರಿ. ತಮಿಳು ಮಾಧ್ಯಮದಲ್ಲಿ ಬಾಲ್ಯದ ಶಿಕ್ಷಣವನ್ನು ಪಡೆದುಕೊಂಡರು. ನಂತರ Cryogenic Engineering ವಿಭಾಗದಲ್ಲಿ M Tech ಪದವಿ ಪಡೆದುಕೊಂಡರು. ಐಐಟಿ…
ಬಿಗ್ ಬಾಸ್ ಸೀಸನ್ 11 ನೂರು ದಿನಗಳನ್ನು ಪೂರೈಸಿದ್ದು, ಫಿನಾಲೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇದೆ. ಹೀಗಾಗಿ ಸ್ಪರ್ಧಿಗಳಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಈ ವಾರ ಪ್ರಮುಖರೇ ನಾಮಿನೇಟ್ ಆಗಿದ್ದು, ದೊಡ್ಮನೆಯಿಂದ ಹೊರ ಹೋಗುವವರು ಯಾರು ಎನ್ನುವ ಪ್ರಶ್ನೆ ಮೂಡಿದೆ. https://ainlivenews.com/todays-most-wanted-6-naxal-surrender-do-you-know-how-the-final-preparations-are/ ಈ ವಾರ ತ್ರಿವಿಕ್ರಮ್, ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಹಾಗೂ ಧನರಾಜ್ ನಾಮಿನೇಟ್ ಆಗಿದ್ದಾರೆ. ಇವರಿಗೆ ಫಿನಾಲೆ ಟಿಕೆಟ್ ಕೂಡ ಕೈ ತಪ್ಪಿದೆ. ಈ ವಾರ ಟಾಸ್ಕ್ಗಳನ್ನು ನೀಡಲಾಗಿದ್ದು, ಇದರಲ್ಲಿ ಉತ್ತಮವಾಗಿ ಆಟ ಆಡಿ ಸ್ಪರ್ಧಿಗಳು ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ವಾರ ನಾಮಿನೇಟ್ ಆದ ಸ್ಪರ್ಧಿಗಳಲ್ಲಿ ತ್ರಿವಿಕ್ರಮ್ ಅವರು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಭವ್ಯಾ ಗೌಡ ಅವರು ಕೂಡ ಒಳ್ಳೆಯ ಆಟ ಆಡಿ ಭೇಷ್ ಎನಿಸಿಕೊಂಡಿದ್ದಾರೆ. ಅವರು ಮೂರು ಬಾರಿ ಕ್ಯಾಪ್ಟನ್ ಕೂಡ ಆಗಿದ್ದಾರೆ. ಇನ್ನು, ಧನರಾಜ್ ಅವರು ಇತ್ತೀಚೆಗೆ ಆ್ಯಕ್ಟೀವ್ ಆಗಿದ್ದು, ಅವರು ತಮ್ಮನ್ನು ತಾವು ಬದಲಾಯಿಸಿಕೊಂಡಿದ್ದಾರೆ.…
ಚಿಕ್ಕಮಗಳೂರು:- ಸಿಎಂ ಸಿದ್ದರಾಮಯ್ಯ ಅವರು, ಕಳೆದ ಒಂದು ವಾರದ ಹಿಂದಷ್ಟೇ ಕರ್ನಾಟಕಕ್ಕೆ ಬಂದಿದ್ದ ನಕ್ಸಲರು ಕಾಡಿನಿಂದ ಮತ್ತೆ ತಪ್ಪಿಸಿಕೊಂಡು ಹೋಗು ನಕ್ಸಲ್ ಚಟುವಟಿಕೆಯನ್ನು ಆರಂಭಿಸಿದ್ದನ್ನು ನಾವು ಸಹಿಸುವುದಿಲ್ಲ. ನಿಮಗೆ ಇನ್ನೂ ಒಂದು ಚಾನ್ಸ್ ಕೊಡುತ್ತೇವೆ. ಕೂಡಲೇ ಬಂದು ಸರ್ಕಾರಕ್ಕೆ ಶರಣಾಗಿ, ನಿಮಗೆ ಸರ್ಕಾರದಿಂದ ಮುಖ್ಯವಾಹಿನಿಗೆ ತರಲು ಬೇಕಾದ ಎಲ್ಲ ಸವಲತ್ತುಗಳನ್ನು ಕಲ್ಪಿಸಿಕೊಡುವುದಾಗಿ ತಿಳಿಸಿದ್ದರು. ಸಿದ್ದರಾಮಯ್ಯ ನೀಡಿದ ಒಂದೇ ಒಂದು ಅವಾಜ್‌ಗೆ ನಕ್ಸಲರು ಸರ್ಕಾರಕ್ಕೆ ಶರಣಾಗಲು ಒಪ್ಪಿಕೊಂಡು ಪತ್ರವನ್ನು ಬರೆದಿದ್ದರು. ಅದರಂತೆ ಇಂದು ಜಿಲ್ಲಾಡಳಿತ ಮುಂದೆ 6 ನಕ್ಸಲರು ಶರಣಾಗಲಿದ್ದಾರೆ. https://ainlivenews.com/dinner-politics-why-did-minister-parameshwar-postpone-the-dinner-suddenly/ ಸಮಾಜದ ಮುಖ್ಯವಾಹಿನಿಯಿಂದ ಮರೆಯಾಗಿ ವನವಾಸದಲ್ಲಿರುವ ನಕ್ಸಲರ ಬದುಕಿಗೂ ಶ್ರಾವಣ ಬಂದಿದೆ. ಅಡವಿಯಲ್ಲಿ ಅಡಗಿ ಕುಳಿತು ಸದಾ ಸಂಘರ್ಷ, ರಕ್ತಚರಿತ್ರೆ ಬರೆಯುತ್ತಿದ್ದ ನಕ್ಸಲರು ಶಾಂತಿ ಮಂತ್ರ ಪಠಿಸಿದ್ದಾರೆ. 4 ದಶಕಗಳ ಕಾಲ ಸದ್ದು ಮಾಡಿದ್ದ ನಕ್ಸಲ್ ಸಂಸ್ಕೃತಿಯಿಂದ ಕರ್ನಾಟಕ ಮುಕ್ತ ಆಗುವ ಮುನ್ಸೂಚನೆ ಸಿಕ್ಕಿದೆ. ಇಂದು ಬೆಳಗ್ಗೆ 8ರಿಂದ 9 ಗಂಟೆಯೊಳಗೆ ಶರಣಾಗತಿಗೆ ಸಮಯ ನಿಗದಿಯಾಗಿದೆ. ಬಂದೂಕು ಸಂಸ್ಕೃತಿ ಮೂಲಕ ನ್ಯಾಯ…
ಬೆಂಗಳೂರು:- ಕರ್ನಾಟಕದ 136 ಸ್ಥಾನಗಳನ್ನು ಪಡೆದು ಸರ್ಕಾರ ರಚಿಸಿರುವ ಕಾಂಗ್ರೆಸ್ ನಲ್ಲಿ ಮೊದಲಿನಿಂದಲೂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದೆ. ಅದರಂತೆ ಇತ್ತೀಚೆಗೆ ಡಿನ್ನರ್ ಪಾಲಿಟಿಕ್ಸ್ ಜೋರಾಗಿದೆ. https://ainlivenews.com/put-this-in-your-mouth-before-going-to-bed-at-night-then-watch-the-magic/ ಇತ್ತೀಚೆಗೆ CM ಸಿದ್ದರಾಮಯ್ಯ ಅವರು ಡಿಕೆಶಿ ವಿದೇಶದಲ್ಲಿ ಇದ್ದಾಗ ಡಿನ್ನರ್ ಮೀಟಿಂಗ್ ನಡೆಸಿದರು. ಇದು ಬಂಡೆ ಡಿಕೆಶಿ ಹಾಗೂ ಬೆಂಬಲಿಗರನ್ನು ಕೆರಳಿಸಿತ್ತು. ಇದೀಗ ಗೃಹ ಸಚಿವ ಜಿ ಪರಮೇಶ್ವರ್ ಅವರು ಔತಣಕೂಟ ಏರ್ಪಡಿಸಿದರು. ಇದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆ. ಸಚಿವ ಡಾ. ಜಿ.ಪರಮೇಶ್ವರ್ ಕರೆದಿದ್ದ ಡಿನ್ನರ್ ಮೀಟಿಂಗ್ ಅನ್ನು ಮುಂದೂಡಲಾಗಿದೆ. ಪರಮೇಶ್ವರ್ ಅವರು, ದಲಿತ ನಾಯಕರ ಜೊತೆಗಿನ ಡಿನ್ನರ್ ಮೀಟಿಂಗ್ ಅನ್ನು ಹೈಕಮಾಂಡ್ ಸೂಚನೆ ಮೇರೆಗೆ ಮುಂದೂಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಇದೇ ಜ.8 ರಂದು ರಾಜ್ಯ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಚಿವರು, ಶಾಸಕರು, ಸಂಸದರು ಹಾಗೂ ಮುಖಂಡರ ಸಭೆಯನ್ನು ಬೆಂಗಳೂರಿನ ರ‍್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದು ಸರಿಯಷ್ಟೆ. ಸದರಿ ಸಭೆಯನ್ನು ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ…
ಏಲಕ್ಕಿ ಅನೇಕ ರೋಗಗಳನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ಆಯುರ್ವೇದದಲ್ಲಿ ಅನೇಕ ರೋಗಗಳನ್ನು ಗುಣಪಡಿಸಲು ಇದನ್ನು ಶತಮಾನಗಳಿಂದಲೂ ಬಳಸಲಾಗುತ್ತಿದೆ. ಏಲಕ್ಕಿ ಅನೇಕ ರೀತಿಯ ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು ದೇಹದಿಂದ ಸ್ವತಂತ್ರ ರಾಡಿಕಲ್‌ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. https://ainlivenews.com/hmp-virus-is-more-common-in-this-age-group-what-do-doctors-say/ ಏಲಕ್ಕಿಯು ಒಂದು ಅದ್ಭುತ ಮಸಾಲೆಯಾಗಿದ್ದು, ಆಹಾರಕ್ಕೆ ಉತ್ತಮ ರುಚಿ ಹಾಗೂ ಘಮವನ್ನು ನೀಡುತ್ತದೆ. ಏಲಕ್ಕಿಯನ್ನು ಸಿಹಿ ತಿನಿಸುಗಳಲ್ಲೂ ಬಳಸಲಾಗುತ್ತದೆ. ಈ ಪುಟ್ಟ ಏಲಕ್ಕಿಯಲ್ಲಿ ಸಾಕಷ್ಟು ಆರೋಗ್ಯಕರ ಅಂಶಗಳಿವೆ ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಏಲಕ್ಕಿ ನಮ್ಮ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಈ ಕಾರಣಗಳಿಂದಾಗಿ ಏಲಕ್ಕಿ ಪುಡಿಯನ್ನು ವಿವಿಧ ರೀತಿಯ ಚಹಾಗಳು ಮತ್ತು ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಹಸಿ ಏಲಕ್ಕಿ ಸೇವಿಸುವುದರಿಂದ ದೇಹದಲ್ಲಿ ಊತ, ಗ್ಯಾಸ್ಟ್ರಿಕ್, ಹೊಟ್ಟೆ ನೋವು, ನಿದ್ರಾಹೀನತೆ, ತೂಕ ಇಳಿಕೆಯಂತಹ ವಿವಿಧ ಕಾಯಿಲೆಗಳು ದೂರವಾಗುತ್ತದೆ. ಇದಷ್ಟೇ ಅಲ್ಲದೇ ಇದರ ಬಳಕೆಯೂ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಏಲಕ್ಕಿ ಸೇವನೆಯ ಪ್ರಯೋಜನಗಳೇನು?: ಏಲಕ್ಕಿಯಲ್ಲಿ ಕಂಡು ಬರುವ ಪೋಷಕಾಂಶಗಳ ಕುರಿತಂತೆ ಮಾತನಾಡಿರುವ ವೈದ್ಯ ನಂದು ಪ್ರಸಾದ್, ಇದರಲ್ಲಿ…