Author: AIN Author

ಕಲಬುರಗಿ:- ಇಲ್ಲಿನ ಕಮಲಾಪುರ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ದುರ್ಮರಣ ಹೊಂದಿದ ಘಟನೆ ಜರುಗಿದೆ. https://ainlivenews.com/khatarnak-couple-who-grew-cannabis-between-flower-pots-arrested/ ಹೈದರಾಬಾದ್ ನ ಭಾರ್ಗವ ಕೃಷ್ಣ (55), ಇವರ ಪತ್ನಿ ಸಂಗೀತಾ (45), ಪುತ್ರ ಉತ್ತಮ ರಾಘವನ್ (28) ಮೃತಪಟ್ಟವರು ಎಂದು ತಿಳಿದು ಬಂದಿದೆ. ಮೃತ‌ ಚಾಲಕನ ಗುರುತು ಪತ್ತೆಯಾಗಿಲ್ಲ. ಇವರೆಲ್ಲರೂ ಹೈದರಾಬಾದ್ ನಿವಾಸಿಗಳಾಗಿದ್ದು ಜಿಲ್ಲೆಯ ಧಾರ್ಮಿಕ ಕ್ಷೇತ್ರ ಗಾಣಗಾಪುರದ ದತ್ತನ ದರ್ಶನಕ್ಕೆ ತೆರಳುತ್ತಿದ್ದರು. ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು ಕುಟುಂಬಸ್ಥರು ಬರುವವರೆಗೆ ನಿಖರ ಮಾಹಿತಿ ಗೊತ್ತಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಿಪಿಐ ಶಿವಶಂಕರ ಸಾಹು, ಮಹಾಗಾಂವ ಪಿಎಸ್ಐ ಆಶಾ ರಾಠೋಡ್, ಸಿಬ್ಬಂದಿಯಾದ ಕುಪೇಂದ್ರ, ಕಿಶನ್, ಹುಸೇನ ಪಟೇಲ ಮತ್ತಿತರರು ಮೃತ ದೇಹಗಳನ್ನು ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿದರು, ವಾಹನ ಬದಿಗೆ ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Read More

ಬೆಂಗಳೂರು:-ಸದಾಶಿವನಗರ ಠಾಣೆ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಮನೆಯ ಬಾಲ್ಕನಿಯಲ್ಲಿ ಹೂವಿನ ಪಾಟ್ ಗಳ ನಡುವೆ ಮಾದಕವಸ್ತು ಗಾಂಜಾ ಗಿಡ ಬೆಳೆದಿದ್ದ ದಂಪತಿಯನ್ನು ಬಂಧಿಸಿದ್ದಾರೆ. https://ainlivenews.com/do-this-work-on-saturday-to-remove-shanidosha-all-your-sins-will-be-removed/ ಎಂ.ಎಸ್.ರಾಮಯ್ಯ ನಗರದ 3ನೇ ಮುಖ್ಯರಸ್ತೆ 6ನೇ ಅಡ್ಡರಸ್ತೆ ನಿವಾಸಿಗಳಾದ 37 ವರ್ಷದ ಊರ್ಮಿಳಾ ಕುಮಾರಿ ಮತ್ತು 38 ವರ್ಷದ ಸಾಗರ್ ಗುರುಂಗ್ ಬಂಧಿತ ದಂಪತಿ ಎನ್ನಲಾಗಿದೆ. ಆರೋಪಿಗಳಿಂದ 54 ಗ್ರಾಂ ಗಾಂಜಾ ಸೊಪ್ಪು, ಎರಡು ಪಾಟ್ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಊರ್ಮಿಳಾ ಕುಮಾರಿ ಮನೆಯ ಬಾಲ್ಕನಿಯಲ್ಲಿ ಹೂವಿನ ಗಿಡಗಳ ನಡುವೆ ಗಾಂಜಾ ಬೆಳೆಸಿರುವುದಾಗಿ ವಿಡಿಯೋ ಮಾಡಿ ಆ ವಿಡಿಯೊವನ್ನು ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಳು. ಈ ಸಂಬಂಧ ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಗಾಂಜಾ ಗಿಡ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಮನೆಯ ಬಾಲ್ಕನಿಯಲ್ಲಿ ಸುಮಾರು 15 ಪಾಟ್ ಗಳಲ್ಲಿ ವಿವಿಧ ಹೂವಿನ ಗಿಡಗಳನ್ನು ಬೆಳೆಸಿದ್ದರು. ಈ ನಡುವೆ ಎರಡು ಪಾಟ್ ಗಳಲ್ಲಿ ಗಾಂಜಾ ಗಿಡಗಳನ್ನು…

Read More

ಸೂರ್ಯೋದಯ: 06:22, ಸೂರ್ಯಾಸ್ತ : 05:37 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ,ಶರದ ಋತು, ಕಾರ್ತಿಕ್ ಮಾಸ, ತಿಥಿ: ಅಷ್ಟಮಿ ನಕ್ಷತ್ರ:ಶ್ರವಣ ರಾಹು ಕಾಲ: 09:00 ನಿಂದ 10:30 ತನಕ ಯಮಗಂಡ: 01:30 ನಿಂದ 03:00 ತನಕ ಗುಳಿಕ ಕಾಲ: 06:00 ನಿಂದ 07:30 ತನಕ ಅಮೃತಕಾಲ: ರಾ .12:56 ನಿಂದ ರಾ .2:29 ತನಕ ಅಭಿಜಿತ್ ಮುಹುರ್ತ: ಬೆ.11:37 ನಿಂದ ಮ.12:22 ತನಕ ಮೇಷ: ವಕೀಲರಿಗೆ ಉತ್ತಮ ಸಮಯ, ವಾಣಿಜ್ಯ ಸಂಸ್ಥೆ ನಡೆಸುವವರು ಮತ್ತು ಲೆಕ್ಕ ಪರಿಶೋಧಕರು ಆದಾಯ ಹೆಚ್ಚಿಸಿಕೊಳ್ಳುತ್ತಾರೆ, ಮಕ್ಕಳಿಗೆ ಸರ್ಕಾರಿ ಉದ್ಯೋಗ ದೊರೆಯುವ ಸಾಧ್ಯತೆ, ಪಾಲುದಾರಿಕೆ ವ್ಯವಹಾರಗಳಲ್ಲಿ ವಿಚಾರ ಬೇಡ, ಉಪನ್ಯಾಸಕರಿಗೆ ಸಿಹಿಸುದ್ದಿ, ಆಸ್ತಿ ಮಾರಾಟದ ಅಡಚಣೆ ನಿವಾರಣೆ, ಪಾಲುದಾರಿಕೆ ಸಮಸ್ಯೆಗಳ ಪರಿಹಾರ, ಪತಿ-ಪತ್ನಿ ಭಿನ್ನಾಭಿಪ್ರಾಯದಿಂದ ಮುಕ್ತಿ, ಮುಕ್ತ ಮನಸ್ಸಿನಿಂದ ಸಂಸಾರ ಭೋಗ,ವಿವಾಹ ಸಮಸ್ಯೆಗಳಿಗೆ ಬಂಧುಗಳ ನೆರವಿನಿಂದ ಪರಿಹಾರ. ಹಣಕಾಸು ಪರಿಸ್ಥಿತಿ ಉತ್ತಮ. ಮಾನಸಿಕ ನೆಮ್ಮದಿಗಾಗಿ ದೂರ ಪ್ರಯಾಣ. ಬಹುದಿನಗಳ…

Read More

ಜ್ಯೋತಿಷ್ಯದಲ್ಲಿ, ಶನಿಯನ್ನು ಕ್ರೂರ, ಪಾಪ ಮತ್ತು ಹಾನಿಕಾರಕ ಗ್ರಹವೆಂದು ಪರಿಗಣಿಸಲಾಗುತ್ತದೆ. ಶನಿಯನ್ನು ಕರ್ಮದ ಗ್ರಹ ಎಂದೂ ಕರೆಯುತ್ತಾರೆ. ಶನಿಯು ಅಶುಭ ಗ್ರಹ ಎಂಬ ನಂಬಿಕೆ ಜನರಲ್ಲಿದೆ. ಮತ್ತು ಶನಿಯ ಕೋಪಕ್ಕೊಳಗಾದರೆ ಮಾಡಿದ ಕೆಲಸಗಳು ಸಹ ಹಾಳಾಗುತ್ತವೆ. ಇತರ ಗ್ರಹಗಳು ಶುಭವಾಗಿದ್ದರೂ, ಶನಿ ಮಾತ್ರ ಕೆಟ್ಟ ಸ್ಥಾನದಲ್ಲಿದ್ದರೆ ಸಮಸ್ಯೆ ಹೆಚ್ಚಾಗುತ್ತಾ ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಈ ಲೇಖನದಲ್ಲಿದೆ ನೋಡಿ. https://ainlivenews.com/good-news-for-e-shrum-card-holders-distribution-of-bpl-card/ ಭಕ್ತರು ಶನಿವಾರದಂದು ಶನಿ ದೇವರನ್ನು ಪೂಜಿಸುತ್ತಾರೆ. ಶನಿವಾರವನ್ನು ಅವನ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ನಿರ್ದಿಷ್ಟ ವಿಧಿ ವಿಧಾನಗಳ ಮೂಲಕ, ವ್ಯಕ್ತಿಗಳು ಶನಿ ದೇವರನ್ನು ಸಮಾಧಾನಪಡಿಸಬಹುದು ಮತ್ತು ನಿರಂತರ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು ಶನಿವಾರ ದಿನದಂದು ಕೈಗೊಳ್ಳುವ ಕೆಲವು ಸರಳ ಕ್ರಮಗಳು ನಿಮಗೆ ಅಪೇಕ್ಷಿತ ಸಂಪತ್ತು, ಸಂತೋಷ – ಸಮೃದ್ಧಿ, ಉದ್ಯೋಗವನ್ನು ಕರುಣಿಸಿ, ಶನಿ ದೋಷದಿಂದ ಮುಕ್ತಿ ನೀಡಿ ನಿಮ್ಮ ಅದೃಷ್ಟವನ್ನು ಬೆಳಗಿಸಬಹುದು, ಜೊತೆಗೆ ನೀವು ಜೀವನದಲ್ಲಿ ಉತ್ತಮ ಮತ್ತು ಮಂಗಳಕರ ಫಲಿತಾಂಶಗಳನ್ನು ಪಡೆಯಲು ಸಹಕರಿಸಬಹುದು. ಶನಿವಾರದಂದು ಮಾಡಬಹುದಾದ ಅತ್ಯಂತ…

Read More

ಹುಬ್ಬಳ್ಳಿ: ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ವಿಚಾರಣೆಗೆ ಒಳಪಡಿಸಲು ಮುಖ್ಯಮಂತ್ರಿ ಗೆ ಇಡಿ ನೋಟಿಸ್ ( ಜಾರಿ ನಿರ್ದೇಶನಾಲಯ) ಜಾರಿಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ಉಪ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಡೆ ಹಿಡಿಯುವ ಪ್ರಯತ್ನ ವಾಗಿದೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ ಬಿಜೆಪಿ ಯನ್ನು ದೂಷಿಸಿದರು. ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಚುನಾವಣಾ ಆಯೋಗ ಆಧಿಸೂಚನೆ ಹೊರಡಿಸಿದ ಬಳಿಕ ಇಡಿ ಸಕ್ರಿಯವಾಗಿದೆ. ವಕ್ಫ್ ವಿಚಾರದಲ್ಲಿ ಇದೀಗ ಜೆಪಿಸಿ ( ಜಂಟಿ ಸಂಸದೀಯ ಮಂಡಳಿ) ಯನ್ನು ಕರೆ ತಂದಿದ್ದಾರೆ. ಇದನ್ನೆಲ್ಲ ನೋಡಿದರೆ ಬಿಜೆಪಿಯು ರಾಜಕಾರಣ ಮಾಡುತ್ತಿರುವುದಯ ಸ್ಪಷ್ಟವಾಗುತ್ತಿದೆ ಎಂದರು. https://ainlivenews.com/good-news-for-e-shrum-card-holders-distribution-of-bpl-card/ ಚುನಾವಣೆ ಸಂದರ್ಭದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಲಘುವಾಗಿ ಮಾತನಾಡುವವರ ಬಗ್ಗೆ ಚುನಾವಣೆ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು. ಬಿಜೆಪಿಯ ಸಿ.ಟಿ. ರವಿ, ಸಂಸದರೊಬ್ಬರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಆದರೆ, ಜವಾಬ್ದಾರಿ…

Read More

ಹುಬ್ಬಳ್ಳಿ: ವಕ್ಪ್ ಕಾಯ್ದೆ ತಿದ್ದುಪಡಿಗೆ ಸಂವಿಧಾನ ಬದ್ದವಾಗಿ ಸಂಸತ್ತಿನ ಜಂಟಿ ಸದನ ಸಮಿತಿ ರಚನೆಯಾಗಿದ್ದು, ಸಮಿತಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಕ್ಪ್ ಸಂಸದೀಯ ಮಂಡಳಿ ಕರ್ನಾಟಕಕ್ಕೆ ಬೇಟಿರುವುದಕ್ಕೆ ಅದೊಂದು ಯಾವುದೇ ಆಧಾದರಹಿತವಾದ ಸಮಿತಿ ಎಂದು ಕಾಂಗ್ರೆಸ್ ನವರು ಮಾಡಿರುವ ಆರೋಪಕ್ಕೆ ಉತ್ತರ ಕೊಟ್ಟ ಅವರು, ಇದೊಂದು ಪಾರ್ಲಿಮೆಂಟ್ ಮಾಡಿದ ಸಮಿತಿ https://ainlivenews.com/good-news-for-e-shrum-card-holders-distribution-of-bpl-card/ ಉಭಯ ಸದನಗಳಿಂದ ರಚನೆಯಾದ ಸಮಿತಿ, ಪಾರ್ಲಿಮೆಂಟ್ ಜಂಟಿ ಸದನ ಮಾಡಿದ ಸಮಿತಿಗೆ ತನ್ನದೇ ಆದ ಗೌರವ ಇದೆ. ಕರ್ನಾಟಕದಲ್ಲಿ ಸಮಸ್ಯೆ ಇದೆ ಅಂತ ಅವರು ಇಲ್ಲಿಗೆ ಬಂದಿದ್ದರು. ಯಾವುದೇ ರೀತಿಯ ರಾಜಕೀಯ ಇಲ್ಲ. ಸಮಿತಿಯವರು ರೈತರ ಸಮಸ್ಯೆ ಆಲಿಸಿದ್ದಾರೆ. ಈ ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು, ಓಲೈಕೆ ರಾಜಕಾರಣ ಮಾಡಲು ಆರೋಪ ಮಾಡುತ್ತಿದ್ದಾರೆ. ಅವರಿಗೆ ಸಂವಿಧಾನದ ಬಗ್ಗೆ ಸಂಸತ್ತಿನ ಬಗ್ಗೆಯೂ ಗೌರವ ಇಲ್ಲ ಎಂದು ಕಿಡಿ ಕಾರಿದರು.

Read More

ನಿಮಗೆ ಸರ್ಕಾರಿ ಉದ್ಯೋಗ ಬೇಕು ಎಂದಲ್ಲಿ ಇಲ್ಲಿದೆ ನೋಡಿ ಜಾಬ್‌ ಆಫರ್. ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಗ್ರೂಪ್-ಸಿ ವೃಂದದ ಉಳಿಕೆ ಮೂಲ ವ್ಯಂದದಲ್ಲಿ ಖಾಲಿ ಇರುವ ಹಾಗೂ ಕಲ್ಯಾಣ ಕರ್ನಾಟಕ ವೃಂದದಲ್ಲಿ ಖಾಲಿ ಇರುವ ಕರ್ಕ್‌-ಕಂ-ಟೈಪಿಸ್ಟ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. https://ainlivenews.com/beer-bottle-found-in-vidhan-sabha-garden/ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಾಯುಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಪಿಯುಸಿ ಪಾಸ್ ಆದವರು ಈ ನವೆಂಬರ್ ತಿಂಗಳ 29 ರೊಳಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ * ಹುದ್ದೆಯ ಹೆಸರು – ಕ್ಲರ್ಕ್​ ಕಮ್ ಟೈಪಿಸ್ಟ್​ * ಒಟ್ಟು ಹುದ್ದೆಗಳು- 30 (ಕಲ್ಯಾಣ ಕರ್ನಾಟಕಕ್ಕೆ 14 ಹುದ್ದೆಗಳನ್ನು ಮೀಸಲಿರಿಸಲಾಗಿದೆ). * * ವೇತನ ಶ್ರೇಣಿ – ರೂ 34,100 ರಿಂದ ರೂ 67.600 ಶೈಕ್ಷಣಿಕೆ…

Read More

ಬೆಂಗಳೂರು:- ಇಂದು ವಿಧಾನಸೌಧದ ಪಶ್ಚಿಮ ಭಾಗದ ಉದ್ಯಾನದಲ್ಲಿ ಬಿಯರ್ ಬಾಟಲ್ ಪತ್ತೆಯಾಗಿದೆ. ಪೊಲೀಸರ ಕಣ್ಣು ತಪ್ಪಿಸಿ ಬಿಯರ್ ತಂದು ಸೇವಿಸಿ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. https://ainlivenews.com/do-you-know-the-benefits-of-soaking-curry-leaves-and-drinking-water/ ನಿನ್ನೆಯಷ್ಟೇ ಸರ್ಕಾರಿ ಕಚೇರಿ ಆವರಣದ ಸುತ್ತಮುತ್ತ ಯಾವುದೇ ಮದ್ಯ ಮತ್ತು ಮಾದಕ ವಸ್ತುಗಳನ್ನು ತೆಗೆದುಕೊಂಡು ಹೋಗದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದರ ಬೆನ್ನೆಲ್ಲೇ ಇಂದು ವಿಧಾನಸೌಧದ ಪಶ್ಚಿಮ ಭಾಗದ ಗಾರ್ಡನ್​​ನಲ್ಲಿ ಬಿಯರ್ ಬಾಟಲ್ ಬಿದ್ದಿರುವುದು ಕಂಡುಬಂದಿದೆ. ಪೊಲೀಸರ ಕಣ್ತಪ್ಪಿಸಿ ಬಿಯರ್​ ಬಾಟಲ್ ತಂದಿರುವ ಸಾಧ್ಯತೆ ಇದ್ದು, ಗಾರ್ಡನ್​ನಲ್ಲಿ ಬಿಯರ್ ಸೇವಿಸಿ ಬಾಟಲ್ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.

Read More

ಚಿಕ್ಕಬಳ್ಳಾಪುರ: ತನ್ನ ಗಂಡನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಅಂತ ಯೋಗ ಶಿಕ್ಷಕಿಯ ಕಿಡ್ನಾಪ್ ಮಾಡಿ ಕೊಲೆ ಮಾಡಲು ಸುಪಾರಿ ನೀಡಿದ್ದ ಮಹಿಳೆ ಸೇರಿದಂತೆ 6 ಮಂದಿ ಅಪಹರಣಕಾರರನ್ನ ಚಿಕ್ಕಬಳ್ಳಾಪುರ  ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಅಂದಹಾಗೆ ಬೆಂಗಳೂರು ಮೂಲದ ಸುಲೋಚನಾ ಕಿಡ್ನಾಪ್ ಆಗಿದ್ದ ಮಹಿಳೆ, ಇನ್ನೂ ಕಿಡ್ನಾಪ್‌ಗೆ ಸುಪಾರಿ ನೀಡಿದ್ದು ಬಿಂದು ಎಂಬಾಕೆ. ಅಸಲಿಗೆ ಬಿಂದು ಪತಿ ಸಂತೋಷ್ ಕುಮಾರ್ ಜೊತೆ ಯೋಗ ಶಿಕ್ಷಕಿ ಸುಲೋಚನಾ ಅನೈತಿಕ ಸಂಬಂಧ ಹೊಂದಿದ್ದಾಳೆ ಅಂತ ಬಿಂದು ಸತೀಶ್ ರೆಡ್ಡಿ ಎಂಬಾತನಿಗೆ ಕೊಲೆ ಮಾಡಲು ಸುಪಾರಿ ನೀಡಿದ್ದಳಂತೆ. ಸುಪಾರಿ ಮೇರೆಗೆ ಸತೀಶ್ ರೆಡ್ಡಿ ಸುಲೋಚನಾ ಬಳಿ ಯೋಗ ಕಲಿಯುವ ನೆಪದಲ್ಲಿ ಆಕಯೆನ್ನ ಪರಿಚಯ ಮಾಡಿಕೊಂಡು ಸಲುಗೆ ಬೆಳೆಸಿಕೊಂಡಿದ್ದನಂತೆ. ಇನ್ನೂ ಆಕ್ಟೋಬರ್ 23 ರಂದು ಸುಲೋಚನಾಗೆ ಗನ್ ಶೂಟ್ ಟ್ರೈನಿಂಗ್ ಕೊಡುವುದಾಗಿ ಹೇಳಿ ನಂಬಿಸಿ ಸತೀಶ್ ರೆಡ್ಡಿ ಮನೆಯಿಂದ ಕರೆದುಕೊಂಡು ಹೋಗಿದ್ದಾನೆ. https://ainlivenews.com/donald-trump-was-elected-as-the-47th-president-of-the-united-states-what-is-the-benefit-of-trumps-victory-for-india/ ಸತೀಶ್ ರೆಡ್ಡಿ ತನ್ನ ಸಹಚರರಾದ ನಾಗೇಂದ್ರ ರೆಡ್ಡಿ, ರಮಣಾರೆಡ್ಡಿ, ರವಿಚಂದ್ರನ ಜೊತೆ ಸೇರಿ ಸುಲೋಚನಾ…

Read More

ಕರಿಬೇವಿನ ಎಲೆಗಳನ್ನು ಪಾಕ ಪದ್ಧತಿಯಲ್ಲಿ ಅದರಲ್ಲೂ ಭಾರತದಲ್ಲಿ ಯಥೇಚ್ಛವಾಗಿ ಬಳಸುತ್ತೇವೆ. ಕರಿಬೇವು ಇಲ್ಲದೇ ಒಗ್ಗರಣೆ ಪೂರ್ಣವಾಗುವುದಿಲ್ಲ. ದಾಲ್ ಕರಿ, ಚಟ್ನಿ, ರಸಂ ಮಸಾಲ ಮಜ್ಜಿಗೆಯಂತಹ ಅಡುಗೆಗೆ ಎರಡು ಕರಿಬೇವಿನ ಎಲೆಗಳನ್ನು ಉದರಿಸಲೇ ಬೇಕು. ಎಣ್ಣೆಗೆ ಬಿದ್ದೊಡನೆ ಪಟ ಪಟ ಶಬ್ದ ಮಾಡುವ ಕರಿಬೇವನ್ನು ಹಾಗೇ ಹಸಿ ಹೊಟ್ಟೆಗೆ ಸೇವಿಸಿದರೇ ಸಿಗುವ ಉಪಯೋಗ ನಿಮಗೆ ಗೊತ್ತಾ . ಹೌದು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಸೊಪ್ಪು ಜಗಿದು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. https://ainlivenews.com/kl-rahul-kannadiga-not-coming-out-of-poor-form-what-happened-to-rahul/ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವನ್ನು ಸೇವಿಸಿದರೆ ಉತ್ತಮ ಫಲಿತಾಂಶವನ್ನು ನೀಡುತ್ತದೆ. ನಿಂಬೆ ರಸ ಮತ್ತು ಕರಿಬೇವಿನ ರಸವನ್ನು ಸಕ್ಕರೆಯೊಂದಿಗೆ ಒಟ್ಟಿಗೆ ಸೇವನೆ ಮಾಡಬೇಕು. ಇದು ವಾಂತಿ ಮತ್ತು ವಾಕರಿಕೆ ಮುಂತಾದ ಸಮಸ್ಯೆಗಳನ್ನು ತಡೆಯುತ್ತದೆ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ಯಕೃತ್ತು ಆರೋಗ್ಯಕರವಾಗಿರುತ್ತದೆ. ಯಕೃತ್ತಿನ ಕಾರ್ಯವನ್ನು ಸುಧಾರಿಸಲು ಕರಿಬೇವು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಕರಿಬೇವು ಲಿವರ್ ಸಿರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ ಕರಿಬೇವು…

Read More