ಬೆಂಗಳೂರು:- ರಾಜಧಾನಿ ಬೆಂಗಳೂರಿನ ಆಟೋಗಳಲ್ಲಿ ಪ್ರಯಾಣಿಸುವ ಮುನ್ನ ಎಚ್ಚರ ಎಚ್ಚರ. ಪರ್ಮಿಟ್ ರಿನಿವಲ್ ಆಗದೆ ಸಾವಿರಾರು ಆಟೋಗಳು ಸಂಚರಿಸುತ್ತಿವೆ ಎನ್ನಲಾಗಿದೆ. https://ainlivenews.com/tirupati-stampede-case-bellari-based-woman-dies/ ನಗರದಲ್ಲಿ 2020ರ ಹಿಂದೆ ನೋಂದಣಿ ಆಗಿರುವ ಆಟೋ ಪರ್ಮಿಟ್ಗಳ ದಾಖಲೆಗಳೇ ಆರ್ಟಿಒ ಕಚೇರಿಯಲ್ಲಿ ಇಲ್ಲವಂತೆ! ಬೆಂಗಳೂರಿನ ಶಾಂತಿನಗರ ಮುಖ್ಯ ಕಚೇರಿಯಲ್ಲಿ ವಾಹನ್- 3 ಅಡಿ ರಿಜಿಸ್ಟ್ರೇಷನ್ ಆಗಿರುವ ಸಾವಿರಾರು ಆಟೋಗಳ ದಾಖಲೆ ಇಲ್ಲ ಎಂಬುದು ತಿಳಿದುಬಂದಿದೆ. 2020 ರ ವರೆಗೆ ವಾಹನ್- 3 ಅಡಿಯಲ್ಲಿ ವಾಹನಗಳನ್ನು ರಿಜಿಸ್ಟ್ರೇಷನ್ ಮಾಡಲಾಗುತಿತ್ತು. 2020 ಮಾರ್ಚ್ ನಂತರ ವಾಹನ್ – 4 ಅಡಿಯಲ್ಲಿ ವಾಹನಗಳ ನೋಂದಣಿ ಮಾಡಲಾಗುತ್ತಿದೆ. ಆದರೆ ವಾಹನ್- 3ರ ಅಡಿಯಲ್ಲಿ ರಿಜಿಸ್ಟ್ರೇಷನ್ ಆಗಿರುವ ಸಾವಿರಾರು ಆಟೋ ಪರ್ಮಿಟ್ಗಳ ದಾಖಲೆಗಳೇ ಇಲ್ಲವಾಗಿದೆ ದಾಖಲೆಗಳು ಇಲ್ಲದ ಕಾರಣ ಆಟೋ ಪರ್ಮಿಟ್ಗಳ ರಿನಿವಲ್ ಆಗುತ್ತಿಲ್ಲ. ಪರ್ಮಿಟ್ ರಿನಿವಲ್ ಆಗದಿರುವ ಆಟೋಗಳಿಗೆ ಆರ್ಟಿಓ ಅಧಿಕಾರಿಗಳು ಬರೋಬ್ಬರಿ ಐದು ಸಾವಿರ ರುಪಾಯಿ ದಂಡ ವಿಧಿಸುತ್ತಿದ್ದಾರೆ. ಪರ್ಮಿಟ್ ರಿನಿವಲ್ ಆಗದ ಆಟೋಗಳಲ್ಲಿ ಪ್ರಯಾಣಿಕರು ಪ್ರಯಾಣ ಮಾಡುವ ವೇಳೆ ಆಟೋ…
Author: AIN Author
ಬಳ್ಳಾರಿ:- ತಿರುಪತಿ ಕಾಲ್ತುಳಿತದಲ್ಲಿ ಬಳ್ಳಾರಿ ಮೂಲದ ಮಹಿಳೆ ದುರ್ಮರಣ ಹೊಂದಿದ್ದಾರೆ. https://ainlivenews.com/heavy-cold-in-the-northern-hinterland-of-karnataka-for-the-next-5-days/ ವೈಕುಂಠ ಏಕಾದಶಿಗೂ ಮುನ್ನವೇ ತಿರುಪತಿಯಲ್ಲಿ ಭಾರೀ ದುರಂತ ಸಂಭವಿಸಿದೆ. ಕಾಲ್ತುಳಿತಕ್ಕೆ ಸಿಲುಕಿ 7 ಮಂದಿ ಸಾವನ್ನಪ್ಪಿದ್ದು, 60ಕ್ಕೂ ಅಧಿಕ ಭಕ್ತರು ಅಸ್ವಸ್ಥಗೊಂಡಿದ್ದಾರೆ. ಘಟನೆಯಲ್ಲಿ ಬಳ್ಳಾರಿ ಮೂಲದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಮೂವರು ಮಹಿಳೆಯರು ಸೇರಿ 7 ಮಂದಿ ಭಕ್ತರು ಮೃತಪಟ್ಟಿದ್ದಾರೆ. ದುರಂತದಲ್ಲಿ ಬಳ್ಳಾರಿ ಮೂಲದ ಮಹಿಳೆ ನಿರ್ಮಲ ಕೂಡ ಸಾವನ್ನಪ್ಪಿದ್ದಾರೆ. ಇನ್ನು ಗಾಯಾಳುಗಳಿಗೆ ರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಮೃತರನ್ನು ವೈಜಾಗ್‌ನ ರಜನಿ , ವೈಜಾಗ್‌ನ ಲಾವಣ್, ವೈಜಾಗ್‌ನ ಶಾಂತಿ (30), ಸೇಲಂನ ಮಲ್ಲೀಕಾ (49) ಹಾಗೂ ನರಸಿಪಟ್ಟಣದ ನಾಯ್ಡು ಬಾಬು (59) ಎಂದು ಗುರುತಿಸಲಾಗಿದೆ.
ಬೆಂಗಳೂರು:- ಮುಂದಿನ 5 ದಿನ ಕರ್ನಾಟಕದ ಉತ್ತರ ಒಳನಾಡಿನಲ್ಲಿ ಭಾರೀ ಚಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. https://ainlivenews.com/tirupati-stampede-death-toll-rises-to-7-sick-to-be-airlifted/ ಉತ್ತರ ಕನ್ನಡದಲ್ಲಿ ಕನಿಷ್ಠ ಉಷ್ಣಾಂಶ ಸಾಮಾನ್ಯಕ್ಕಿಂತ 4 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾಗಲಿದೆ, ಬೀದರ್, ಗುಲ್ಬರ್ಗಾ ಮತ್ತು ಗದಗ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ಇರುವ ಸಾಧ್ಯತೆ ಇದೆ. ರಾಯಚೂರು, ಗದಗದಲ್ಲಿ ಸಾಮಾನ್ಯಕ್ಕಿಂತ 3-5 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರಲಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ದಟ್ಟ ಮಂಜು ಕವಿಯುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಮಂಡ್ಯಮ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 2-4 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ಇರುವ ಸಾಧ್ಯತೆ ಇದೆ. ದಾವಣಗೆರೆಯಲ್ಲಿ 11.5 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನ ಎಚ್ಎಎಲ್ನಲ್ಲಿ 27.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 28.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ,…
ಬೀದರ್:- ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ಕೊಟ್ಟ ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಹಾಡಹಗಲೇ ಗೆಳೆಯನಿಗೆ ಚಾಕು ಇರಿದ ಭಯಾನಕ ಘಟನೆ ಜರುಗಿ https://ainlivenews.com/rishabh-shetty-shares-glimpses-of-toxic-and-wishes-yash-on-his-birthday/ ದಯಾನಂದ ಶಿಂಧೆ ಆರೋಪಿ. ಅಶೋಕ್ ಪಾಟೀಲ್ ಗಾಯಾಳು. ನಗರದ ಬಾರ್‌ವೊಂದರಲ್ಲಿ ಸ್ನೇಹಿತರ ಜೊತೆ ಅಶೋಕ್ ಕುಳಿತಿದ್ದ. ಈ ವೇಳೆ ಕೈಯಲ್ಲಿ ಚಾಕು ಹಿಡಿದುಕೊಂಡೆ ಬಾರ್‌ಗೆ ನುಗ್ಗಿದ್ದ ಆರೋಪಿ ದಯಾನಂದ ಚಾಕು ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ. ಅಶೋಕ್ ಆರೋಪಿ ದಯಾನಂದನಿಗೆ 10 ಸಾವಿರ ರೂ. ಸಾಲ ನೀಡಿದ್ದ. ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಈ ಕೃತ್ಯ ಎಸಗಿದ್ದಾನೆ. ಚಾಕು ಇರಿದ ಭಯಾನಕ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಗಾಯಾಳು ಅಶೋಕ್‌ನನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ.
ವಿಜಯಪುರ:-ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಬಳಿ ಚಲಿಸುತ್ತಿದ್ದ ಓಮಿನಿಯಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ಜರುಗಿದೆ. https://ainlivenews.com/everything-is-expensive-the-transport-department-gave-another-shock-to-the-passengers/ ಬಸಯ್ಯ ಹಿರೇಮಠ ಎಂಬವರಿಗೆ ಸೇರಿದ ಓಮಿನಿ ವಾಹನ ಸುಟ್ಟು ಭಸ್ಮವಾಗಿದೆ. ಉಕ್ಕಲಿ ಗ್ರಾಮದಿಂದ ಸಂಬಂಧಿಕರನ್ನು ಕರೆದುಕೊಂಡು ಎಡೆಯೂರುಗೆ ಹೊರಟ್ಟಿದ್ದ ವೇಳೆ ಈ ಘಟನೆ ಸಂಭವಿಸಿದೆ. ಚಲಿಸುತ್ತಿದ್ದ ವಾಹನದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ವಾಹನದಲ್ಲಿದ್ದವರು ಕೆಳಗಿಳಿದಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬರುವ ಮೊದಲೆ ವಾಹನ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.
ಬೆಂಗಳೂರು: ಪ್ರಯಾಣಿಕರಿಗೆ ಸಾರಿಗೆ ಇಲಾಖೆ ಮತ್ತೊಮ್ಮೆ ಶಾಕ್ ಕೊಟ್ಟಿದ್ದು, ಇಂದಿನಿಂದ ಬಿಎಂಟಿಸಿ ಪಾಸ್‌ಗಳ ದರ ಏರಿಕೆ ಆಗಲಿದೆ. https://ainlivenews.com/tirupati-stampede-death-toll-rises-to-7-sick-to-be-airlifted/ ಇತ್ತೀಚೆಗೆ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಬಸ್ ಟಿಕೆಟ್ ದರ ಏರಿಕೆ ಮಾಡಿ ಶಾಕ್ ಕೊಟ್ಟಿತ್ತು. ಸಾರಿಗೆ ಇಲಾಖೆ ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲೂಕೆಆರ್ಟಿಸಿ, ಕೆಕೆಆರ್ಟಿಸಿ ಬಸ್ಗಳ ಟಿಕೆಟ್ ದರ ಪರಿಷ್ಕರಣೆ ಮಾಡಿ ಶೇ 15 ರಷ್ಟು ದರ ಹೆಚ್ಚು ಮಾಡಿತ್ತು. ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಪ್ರಯಾಣ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಇದೀಗ ಬಿಎಂಟಿಸಿ ಪಾಸ್‌ಗಳ ದರದಲ್ಲಿ ಏರಿಕೆಯಾಗಿದೆ. ಇಂದಿನಿಂದಲೇ ಬಿಎಂಟಿಸಿ ಪಾಸ್‌ಗಳ ದರ ಏರಿಕೆ ಆಗಲಿದೆ. ಹಳೆಯ ಪಾಸ್ ದರವನ್ನು ಪರಿಷ್ಕರಿಸಿ ಹೊಸ ದರ ಕುರಿತು ಪ್ರಕಟಣೆ ಹೊರಡಿಸಲಾಗಿದೆ.
ಅಮರಾವತಿ:- ತಿರುಪತಿ ಕಾಲ್ತುಳಿತಕ್ಕೆ ಸಾವಿನ ಸಂಖ್ಯೆ 7ಕ್ಕೆ ಏರಿಕೆ ಆಗುತ್ತಿದ್ದು, ಅಸ್ವಸ್ಥರ ಏರ್‌ಲಿಫ್ಟ್‌ಗೆ ಸಿಎಂ ಸೂಚನೆ ಕೊಟ್ಟಿದ್ದಾರೆ. https://ainlivenews.com/union-home-ministers-anger-erupted-holiday-announced-for-schools-today/ ಆಂಧ್ರಪ್ರದೇಶ ಸಿಎಂ ಅವರು ಡಿಜಿಪಿ, ಟಿಟಿಡಿ ಇಒ, ಜಿಲ್ಲಾಧಿಕಾರಿ, ಎಸ್ಪಿ ಅವರೊಂದಿಗೆ ಕಾಲ್ತುಳಿತದ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಕೆಂಡಾಮಂಡಲರಾಗಿ, ಒಂದೇ ಒಂದು ಜೀವಹಾನಿಯಾಗಬಾರದೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಜೊತೆಗೆ ಸಾವಿನ ಸಂಖ್ಯೆ ಹೆಚ್ಚಾಗುವುದನ್ನು ತಡೆಯಲು ಸಂತ್ರಸ್ತರಿಗೆ ಉತ್ತಮ ಚಿಕಿತ್ಸೆಗೆ ಸೂಚನೆ ನೀಡಿದ್ದಾರೆ. ಜ.10ರಿಂದ ಆರಂಭವಾಗುವ 10 ದಿನಗಳ ವೈಕುಂಠ ದ್ವಾರ ದರ್ಶನಕ್ಕೆ ದೇಶ-ವಿದೇಶಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ದರ್ಶನಕ್ಕೆ ಬಂದ ಭಕ್ತರು ಪ್ರಾಣ ಕಳೆದುಕೊಂಡಿರುವುದು ಅತೀವ ದುಃಖ ತಂದಿದೆ. ಜೊತೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂದು ಗೊತ್ತಿದ್ದರೂ ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಲು ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ. ವೈಕುಂಠ ದ್ವಾರ ದರ್ಶನಕ್ಕಾಗಿ ಟಿಕೆಟ್‌ಗಾಗಿ ತಿರುಪತಿಯಲ್ಲಿ ಮುಗಿಬಿದ್ದಿದ್ದರಿಂದ ಈ ಕಾಲ್ತುಳಿತ ಉಂಟಾಗಿದ್ದು, ಹಲವರು ಸಾವನ್ನಪ್ಪಿದ್ದಾರೆ. ತಿರುಪತಿಯ ವಿಷ್ಣು ನಿವಾಸದ ಬಳಿ ಇರುವ ತಿರುಮಲ ಶ್ರೀವಾರಿ ವೈಕುಂಠ…
ಬೀದರ್:; ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ಬೀದರ್ ಬಂದ್ ಕರೆ ಕೊಡಲಾಗಿದೆ. ಹೀಗಾಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. https://ainlivenews.com/loka-attack-case-on-betageri-municipal-engineers-house/ ವಿವಿಧ ದಲಿತ ಪರ ಸಂಘಟನೆಯಿಂದ ಬೀದರ್ ಬಂದ್‌ಗೆ ಕರೆ ನೀಡಿದ್ದು, ತಾಲೂಕಿನ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ದಲಿತಪರ ಸಂಘಟನೆಗಳಿಂದ ಬೀದರ್ ನಗರ ಬಂದ್‌ಗೆ ಕರೆ ನೀಡಲಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಬೀದರ್ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಿ ಉಪನಿರ್ದೇಶಕರು ಶಿಕ್ಷಣ ಇಲಾಖೆ ಡಿಡಿಪಿಐ ಎಸ್.ಎಲ್.ಪ್ರಸನ್ನ ಕುಮಾರ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು:- ಕರ್ನಾಟಕ ನಕ್ಸಲ್ ಮುಕ್ತ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. https://ainlivenews.com/loka-attack-case-on-betageri-municipal-engineers-house/ ನಗರದ ಗೃಹ ಕಚೇರಿ ಕೃಷ್ಣದಲ್ಲಿ ನಕ್ಸಲರು ತಮ್ಮ ಮುಂದೆ ಶರಣಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, 20 ವರ್ಷಗಳು ಹೆಚ್ಚು ಕಾಲ ನಕ್ಸಲ್ ಚಳುವಳಿ ದಾರಿಯಲ್ಲಿ ನಡೆದರು. ಕಾಡಿನಲ್ಲಿ ಇದ್ದು ಚಳುವಳಿ ಮಾಡಿದ 6 ಜನ ನಕ್ಸಲರು ಇಂದು ಶರಣಾಗತಿ ಆಗಿದ್ದಾರೆ. ಸರ್ಕಾರ ಅವರಿಗೆ ಆಹ್ವಾನ ನೀಡಿದ್ದರಿಂದ 6 ಜನ ಶರಣಾಗತಿ ಆಗಿದ್ದಾರೆ. ಹೋರಾಟ ಹಾದಿ ಬಿಟ್ಟು ಪರಿವರ್ತನೆಗೊಂಡು ಮುಖ್ಯವಾಹಿನಿಗೆ ಬರಲು ತೀರ್ಮಾನ ಮಾಡಿ ನನ್ನ ಮುಂದೆ ಶರಣಾಗತಿ ಆಗಿದ್ದಾರೆ. ಡಿಸಿಎಂ ಸೇರಿ ಸಚಿವರ ಮುಂದೆ ಶರಣಾಗತಿ ಆಗಿದ್ದಾರೆಂದು ಅಧಿಕೃತವಾಗಿ ಸಿಎಂ ತಿಳಿಸಿದರು ನನ್ನ ಪ್ರಕಾರ ಕರ್ನಾಟಕ ನಕ್ಸಲ್ ಮುಕ್ತ ಆಗಿದೆ. ಶರಣಾದ ನಕ್ಸಲರ ಬೇಡಿಕೆ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ತೀರ್ಮಾನ ಮಾತಿಳಿಸಿದರುರು ಕೆಲವು ದಿನಗಳ ಹಿಂದೆ ನಾಗರಿಕ ಸಮಿತಿ, ಪುನರ್ ವಸತಿ ಸಮಿತಿ ಅವರು ಭೇಟಿ ಆಗಿದ್ದರು. ಅವರ ಜೊತೆ ಮಾತುಕತೆ ನಡೆಸಿದರು. ಅವರು, 6…
ಬೆಂಗಳೂರು:- ರಾಜ್ಯದ ಹಲವೆಡೆ ನಿನ್ನೆ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ನಿನ್ನೆ ಲೋಕಾಯುಕ್ತ ಶಾಕ್ ಕೊಟ್ಟಿದ್ದು, ಬೆಂಗಳೂರು, ಗದಗ ಸೇರಿ ರಾಜ್ಯದ 8 ಕಡೆಗಳಲ್ಲಿ ದಾಳಿ ಮಾಡಿ ಪರಿಶೀಲನೆ ಮಾಡಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. https://ainlivenews.com/muslim-youth-wearing-ayyappaswamy-garland-what-is-the-demand-made-to-god/ ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಎಂಟು ಸರ್ಕಾರಿ ಅಧಿಕಾರಿಗಳ ಮನೆ ಸೇರಿದಂತೆ 38 ಕಡೆಗಳಲ್ಲಿ ಲೋಕಾಯುಕ್ತ ದಾಳಿ ಮಾಡಿ, ಭರ್ಜರಿ ಬೇಟೆಯಾಡಿದ್ದಾರೆ. ಸ್ಥಿರ ಆಸ್ತಿ, ಚರಾ ಆಸ್ತಿ, ಸೇರಿದಂತೆ ಒಡವೆ ವಾಹನಗಳ ದಾಖಲೆಗಳನ್ನು ಪರಿಶೀಲನೆ ಮಾಡಿದ್ದು, ಕೊಟ್ಯಂತರ ರೂ ಪತ್ತೆ ಆಗಿದೆ. ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ ಶೋಭಾಗೆ ಸೇರಿದ ಚಂದ್ರಲೇಔಟ್ ದೀಪಾಂಜಲಿನಗರದಲ್ಲಿರುವ ನಿವಾಸ, ಸಕಲೇಶಪುರದಲ್ಲಿರುವ ಮನೆ ಮೇಲೆ ದಾಳಿ ಮಾಡಿ ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ಡಿವೈಎಸ್ ಪಿ ಗಿರೀಶ್, ಇನ್ಸ್ ಪೆಕ್ಟರ್ ಬಸವರಾಜ ಪುಲಾರಿ ನೇತೃತ್ವದ 15 ಜನ ಅಧಿಕಾರಿ ಸಿಬ್ಬಂದಿ ತಂಡ ದಾಳಿ ಮಾಡಿತ್ತು. 15 ಪೊಲೀಸರನ್ನ…