ಬೆಂಗಳೂರು:- ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಶರಣಾಗಿದ್ದ 6 ನಕ್ಸಲರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. https://ainlivenews.com/attention-citizens-power-outage-tomorrow-in-this-area-of-bangalore/ ಮುಂಡಗಾರು ಲತಾ, ಸುಂದರಿ ಕೊತ್ಲೂರು, ವನಜಾಕ್ಷಿ ಬಾಳೆಹೊಳೆ, ಜಿಶಾ, ವಸಂತ್ ಟಿ.ಎನ್, ಮಾರೆಪ್ಪ ಅರೋಲಿ ಅವರನ್ನು ಇಂದು ಚಿಕ್ಕಮಗಳೂರು ಡಿವೈಎಸ್‌ಪಿ ಬಾಲಾಜಿ ಸಿಂಗ್ ಎನ್‌ಐಎ ವಿಶೇಷ ಕೋರ್ಟ್‌ನ ನ್ಯಾಯಾಧೀಶರಾದ ಗಂಗಾಧರ್ ಮುಂದೆ ಹಾಜರುಪಡಿಸಿದ್ದರು. ಆರು ನಕ್ಸಲರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಲಾಗಿದೆ. ಜನವರಿ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದೆ. ಕೆಲವೇ ಕ್ಷಣಗಳಲ್ಲಿ ನಕ್ಸಲರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗುವುದು. ಶರಣಾದ 6 ನಕ್ಸಲರನ್ನು ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದ್ದರು. ಸಿಟಿ ಸಿವಿಲ್ ಕೋರ್ಟ್ ಸಂಕೀರ್ಣದ NIA ಕೋರ್ಟ್ಗೆ ಹಾಜರು ಪಡಿಸಲಾಗಿತ್ತು. ನಕ್ಸಲರನ್ನು ಕೋರ್ಟ್ಗೆ ಹಾಜರು ಪಡಿಸಿರುವ ಹಿನ್ನೆಲೆಯಲ್ಲಿ ಖುದ್ದು ಡಿಸಿಪಿ ಹೆಚ್.ಟಿ. ಶೇಖರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ವಹಿಸಲಾಗಿತ್ತು. ನಕ್ಸಲರನ್ನು ಕೋರ್ಟ್ಗೆ ಹಾಜರುಪಡಿಸುವ ಮುನ್ನ 6 ನಕ್ಸಲರಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆಸಲಾಗಿತ್ತು. ಅವರ ಆರೋಗ್ಯ ಸ್ಥಿರವಾಗಿದೆ ಎಂದು…
Author: AIN Author
ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಏರಿಯಾದಲ್ಲಿ ನಾಳೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. https://ainlivenews.com/a-fraudster-who-was-extorting-innocent-people-in-the-name-of-an-accident-its-exciting-to-see-him-caught-by-the-police/ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯ ಹಿನ್ನೆಲೆಯಲ್ಲಿ 66/11 ಕೆವಿ ವೆಲ್ ಕ್ಯಾಸ್ಟ್ ಉಪಕೇಂದ್ರದಲ್ಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ರವೀಂದ್ರ ನಗರ, ಪ್ರಸಹನಾಥ್ ನಗರ, ಸಂತೋಷ್ ನಗರ, ಏರ್ ಫೋರ್ಸ್ ಜಾಲಹಳ್ಳಿ ವೆಸ್ಟ್, ವೈಷ್ಣವಿ ನಾಕಾಶ್ತ್ರ ಅಪಾರ್ಟ್ ಮೇಂಟ್, ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಗತಿ ರಸ್ತೆ, ತ್ರಿವೇಣಿ, ಎಚ್ ಎಚ್ ವಿ, ಡಿಎಂಜಿ, ಕೃಷ್ಣಾ ಫ್ಯಾಚ್ರಿಕೇಶನ್ಸ್, ಜೆಮಿನಿ ಇಂಡಸ್ಟ್ರೀಸ್ ರವಿ-ಕಿರ್ಲೋಸ್ಕರ್ ಆಸ್ಪತ್ರೆ, ಜಾನ್ ಕ್ರೇನ್, ಪ್ರಿಸ್ ಐಎಲ್, ಎಮ್ ಎಸ್ ಐಎಲ್, ವಿಪ್ರೋವೆಲ್ಕಾಸ್ಟ್ ಫ್ಯಾಕ್ಟರಿ, ಐಟಿಸಿ, ವೋಲ್ ವೋ, ಏವೆರಿ ಡೆನ್ನಿಸನ್, ಹಿಟಾಚ್ ಇಂಡಸ್ಟ್ರೀಸ್, ಗೀತಾ ಟಿಂಬರ್ ಮತ್ತು ಸುತ್ತ ಮುತ್ತಲಿನ ಪ್ರದೇಶದಲ್ಲಿ ಪವರ್ ಕಟ್ ಇರಲಿದೆ. ನಾಳೆ ಬೆಳಗ್ಗೆ 10 ರಿಂದ ಮಧ್ಯಾಹ್ನ 3.30 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಧ್ಯಮ…
ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೂವರ ಭೀಕರ ಕೊಲೆಯಾಗಿದೆ.. ಪತಿಯೇ, ಪತ್ನಿ, ಮಗಳು, ದೊಡ್ಡಮ್ಮನ ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪೊಲೀಸರ ಮುಂದೆ ಶರಣಾಗಿದ್ದಾನೆ.. ಆ ಟ್ರಿಪಲ್ ಮರ್ಡರ್ ನ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ ನೋಡಿ.. https://ainlivenews.com/tuition-teacher-who-escaped-with-a-minor-student-arrested/ ಇದು ನಿಜಕ್ಕೂ ಭೀಕರ.. ಸಿನಿಮಾಗಳಲ್ಲಿ ಮಚ್ಚು ಹಿಡಿದು ಅಟ್ಟಾಡಿಸಿ ಕೊಲೆ ಮಾಡುವ ರೀತಿ ನಡೆದಿರುವ ಕೊಲೆ.. ಹೌದು, ಬೆಂಗಳೂರಿನ ಪೀಣ್ಯ ಬಳಿಯ ಜಾಲಹಳ್ಳಿ ಕ್ರಾಸ್ ನಲ್ಲಿ ಈ ಘಟನೆ ನಡೆದಿದೆ.. ಹೆಬ್ಬಗೊಡಿಯಲ್ಲಿ ಹೊಮ್ ಗಾರ್ಡ್ ಆಗಿ ಕೆಲಸ ಮಾಡುವ 42 ,ವರ್ಷದ ಗಂಗರಾಜು, 38 ವರ್ಷದ ಪತ್ನಿ ಭಾಗ್ಯ, 19 ವರ್ಷದ ಮಗಳು ನವ್ಯ, 23 ವರ್ಷದ ಹೇಮಾಲತಾ ಅನ್ನೋರನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಸಂಜೆ ಸುಮಾರು ಐದು ಗಂಟೆ ವೇಳೆ ಈ ಘಟನೆ ನಡೆದಿದೆ.. ಇಂದು ಏಕಾಏಕಿ ಮನೆಗೆ ಬಂದ ಹೋಮ್ ಗಾರ್ಡ್ ಗಂಗರಾಜು, ಮನೆಯಲ್ಲಿದ್ದ ಮಗಳು, ನವ್ಯ, ದೊಡ್ದಮ್ಮನ ಮಗಳು ಹೇಮಲತಾ ಮೇಲೆ ಜಗಳ ತೆಗೆದಿದ್ದ.. ಜಗಳ ತಾರಕ್ಕೇರಿದಂತೆ…
ಮಂಡ್ಯ:- ಅಪ್ರಾಪ್ತ ವಿದ್ಯಾರ್ಥಿನಿ ಜತೆ ಪರಾರಿಯಾಗಿದ್ದ ಟ್ಯೂಷನ್ ಶಿಕ್ಷಕನನ್ನು ಮಂಡ್ಯದಲ್ಲಿ ಬಂಧಿಸಲಾಗಿದೆ. ಆರೋಪಿಯು ವಿವಾಹಿತನಾಗಿದ್ದು, ಎರಡು ವರ್ಷದ ಮಗುವಿದೆ ಎಂದು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ. https://ainlivenews.com/gangster-rampage-in-bangalore-a-young-man-was-fatally-attacked-after-entering-a-bakery/ ವಿದ್ಯಾರ್ಥಿನಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಮಂಡ್ಯದಲ್ಲಿ ಟ್ಯೂಷನ್ ಶಿಕ್ಷಕ ಅಭಿಷೇಕ್ ಗೌಡ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ನವೆಂಬರ್ 23 ರಂದು ಅಪ್ರಾಪ್ತ ಬಾಲಕಿಯನ್ನು ಅಪಹರಿಸಲಾಗಿತ್ತು. ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಉಪ ಪೊಲೀಸ್ ಆಯುಕ್ತ ಲೋಕೇಶ್ ಬಿಜೆ ತಿಳಿಸಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಿಂದ ಜನವರಿ 5 ರಂದು ಬಾಲಕಿಯನ್ನು ರಕ್ಷಿಸಲಾಗಿತ್ತು. ಆಕೆಯನ್ನು ಆಕೆ ಪ್ರತಿ ದಿನ ಟ್ಯೂಷನ್ಗೆ ತೆರಳುತ್ತಿದ್ದ ಟ್ಯೂಷನ್ ಶಿಕ್ಷಕನೇ ಅಪಹರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು 25 ವರ್ಷ ವಯಸ್ಸಿನವನಾಗಿದ್ದು, ಆತನನ್ನು ಬಂಧಿಸಲಾಗಿದೆ. ಆತನ ವಿರುದ್ಧ ಅಪಹರಣ ಮತ್ತು ಅತ್ಯಾಚಾರದ ಆರೋಪ ಹೊರಿಸಲಾಗಿದೆ
ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಎಲ್ಲೆ ಮೀರುತ್ತಿದೆ. https://ainlivenews.com/a-housewife-who-surrendered-to-hanging-because-she-could-not-bear-the-dowry-a-heartbroken-husband-also-tried-to-commit-suicide/ ಬೇಕರಿಯೊಂದಕ್ಕೆ ನುಗ್ಗಿ ಇಬ್ಬರು ಪುಂಡರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಭೂಪಸಂದ್ರದ ಬೇಕರಿಯಲ್ಲಿ ಈ ಕೃತ್ಯ ನಡೆದಿದೆ. ನಿನ್ನೆ ರಾತ್ರಿ 9ಗಂಟೆ ವೇಳೆ ಇಬ್ಬರು ಪುಡಿ ರೌಡಿಗಳಿಂದ ಹಲ್ಲೆ ನಡೆದಿದೆ. ಸಿಗರೇಟ್ ವಿಚಾರಕ್ಕೆ ವಿಶ್ವ ಅನ್ನೋ ಪುಂಡ ಎಂಟ್ರಿ ಕೊಟ್ಟಿದ್ದು, ಮಾತಿಗೆ ಮಾತು ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ. ಕ್ಷಣಾರ್ಧದಲ್ಲಿ ತಾರಕಕ್ಕೆ ತಿರುಗಿ ಇಬ್ಬರಿಂದ ಹಲ್ಲೆ ನಡೆಸಲಾಗಿದೆ. ಬೇಕರಿ ಒಳಗೆ ಇದ್ದ ಯುವಕನ ಮೇಲೆ ಸ್ಪ್ರೈಟ್ ಬಾಟಲ್ ನಿಂದ ಹೊಡೆದು ಕೊಲೆಗೆ ಯತ್ನ ನಡೆದಿದೆ. ಕೊಂಚ ಯಾಮಾರಿದ್ರೂ ಬೇಕರಿ ಯುವಕನ ತಲೆಗೆ ಗಂಭೀರ ಗಾಯ ಆಗ್ತಿತ್ತು. ಹಲ್ಲೆ ಮಾಡೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಚಿತ್ರದುರ್ಗ:- ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿ ನೇಣಿಗೆ ಶರಣಾದ ಹಿನ್ನೆಲೆ ಮನನೊಂದು ಗಂಡನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೊಳಕಾಲ್ಮೂರು ತಾಲೂಕಿನ ಗಿರಿಜಯ್ಯನಹಟ್ಟಿ ಗ್ರಾಮದಲ್ಲಿ ಜರುಗಿದೆ. https://ainlivenews.com/bengaluru-commuters-beware-watch-this-story-before-traveling-by-auto/ 25 ವರ್ಷದ ಪ್ರವಲ್ಲಿಕ ಮೃತ ಗೃಹಿಣಿ.ಸುದರ್ಶನ್ ರೆಡ್ಡಿ ಆತ್ಮಹತ್ಯೆಗೆ ಯತ್ನಿಸಿದ ಪತಿ. ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಸುದರ್ಶನ್ ಅಸ್ವಸ್ಥಗೊಂಡಿದ್ದು, ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಪ್ರಕರಣ ಸಂಬಂಧ ಪತಿ ಸುದರ್ಶನ್ ರೆಡ್ಡಿ, ಮಾವ ಶಿವಾ ರೆಡ್ಡಿ, ಅತ್ತೆ ರಾಜೇಶ್ವರಿ ಹಾಗೂ ಮತ್ತಿತರೆ ಕುಟುಂಬಸ್ಥರ ವಿರುದ್ಧ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಾಜಣ್ಣ, ಸಿಪಿಐ ವಸಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು:- ರಾಜಧಾನಿ ಬೆಂಗಳೂರಿನ ಆಟೋಗಳಲ್ಲಿ ಪ್ರಯಾಣಿಸುವ ಮುನ್ನ ಎಚ್ಚರ ಎಚ್ಚರ. ಪರ್ಮಿಟ್ ರಿನಿವಲ್ ಆಗದೆ ಸಾವಿರಾರು ಆಟೋಗಳು ಸಂಚರಿಸುತ್ತಿವೆ ಎನ್ನಲಾಗಿದೆ. https://ainlivenews.com/tirupati-stampede-case-bellari-based-woman-dies/ ನಗರದಲ್ಲಿ 2020ರ ಹಿಂದೆ ನೋಂದಣಿ ಆಗಿರುವ ಆಟೋ ಪರ್ಮಿಟ್ಗಳ ದಾಖಲೆಗಳೇ ಆರ್ಟಿಒ ಕಚೇರಿಯಲ್ಲಿ ಇಲ್ಲವಂತೆ! ಬೆಂಗಳೂರಿನ ಶಾಂತಿನಗರ ಮುಖ್ಯ ಕಚೇರಿಯಲ್ಲಿ ವಾಹನ್- 3 ಅಡಿ ರಿಜಿಸ್ಟ್ರೇಷನ್ ಆಗಿರುವ ಸಾವಿರಾರು ಆಟೋಗಳ ದಾಖಲೆ ಇಲ್ಲ ಎಂಬುದು ತಿಳಿದುಬಂದಿದೆ. 2020 ರ ವರೆಗೆ ವಾಹನ್- 3 ಅಡಿಯಲ್ಲಿ ವಾಹನಗಳನ್ನು ರಿಜಿಸ್ಟ್ರೇಷನ್ ಮಾಡಲಾಗುತಿತ್ತು. 2020 ಮಾರ್ಚ್ ನಂತರ ವಾಹನ್ – 4 ಅಡಿಯಲ್ಲಿ ವಾಹನಗಳ ನೋಂದಣಿ ಮಾಡಲಾಗುತ್ತಿದೆ. ಆದರೆ ವಾಹನ್- 3ರ ಅಡಿಯಲ್ಲಿ ರಿಜಿಸ್ಟ್ರೇಷನ್ ಆಗಿರುವ ಸಾವಿರಾರು ಆಟೋ ಪರ್ಮಿಟ್ಗಳ ದಾಖಲೆಗಳೇ ಇಲ್ಲವಾಗಿದೆ ದಾಖಲೆಗಳು ಇಲ್ಲದ ಕಾರಣ ಆಟೋ ಪರ್ಮಿಟ್ಗಳ ರಿನಿವಲ್ ಆಗುತ್ತಿಲ್ಲ. ಪರ್ಮಿಟ್ ರಿನಿವಲ್ ಆಗದಿರುವ ಆಟೋಗಳಿಗೆ ಆರ್ಟಿಓ ಅಧಿಕಾರಿಗಳು ಬರೋಬ್ಬರಿ ಐದು ಸಾವಿರ ರುಪಾಯಿ ದಂಡ ವಿಧಿಸುತ್ತಿದ್ದಾರೆ. ಪರ್ಮಿಟ್ ರಿನಿವಲ್ ಆಗದ ಆಟೋಗಳಲ್ಲಿ ಪ್ರಯಾಣಿಕರು ಪ್ರಯಾಣ ಮಾಡುವ ವೇಳೆ ಆಟೋ…
ಬಳ್ಳಾರಿ:- ತಿರುಪತಿ ಕಾಲ್ತುಳಿತದಲ್ಲಿ ಬಳ್ಳಾರಿ ಮೂಲದ ಮಹಿಳೆ ದುರ್ಮರಣ ಹೊಂದಿದ್ದಾರೆ. https://ainlivenews.com/heavy-cold-in-the-northern-hinterland-of-karnataka-for-the-next-5-days/ ವೈಕುಂಠ ಏಕಾದಶಿಗೂ ಮುನ್ನವೇ ತಿರುಪತಿಯಲ್ಲಿ ಭಾರೀ ದುರಂತ ಸಂಭವಿಸಿದೆ. ಕಾಲ್ತುಳಿತಕ್ಕೆ ಸಿಲುಕಿ 7 ಮಂದಿ ಸಾವನ್ನಪ್ಪಿದ್ದು, 60ಕ್ಕೂ ಅಧಿಕ ಭಕ್ತರು ಅಸ್ವಸ್ಥಗೊಂಡಿದ್ದಾರೆ. ಘಟನೆಯಲ್ಲಿ ಬಳ್ಳಾರಿ ಮೂಲದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಮೂವರು ಮಹಿಳೆಯರು ಸೇರಿ 7 ಮಂದಿ ಭಕ್ತರು ಮೃತಪಟ್ಟಿದ್ದಾರೆ. ದುರಂತದಲ್ಲಿ ಬಳ್ಳಾರಿ ಮೂಲದ ಮಹಿಳೆ ನಿರ್ಮಲ ಕೂಡ ಸಾವನ್ನಪ್ಪಿದ್ದಾರೆ. ಇನ್ನು ಗಾಯಾಳುಗಳಿಗೆ ರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಮೃತರನ್ನು ವೈಜಾಗ್‌ನ ರಜನಿ , ವೈಜಾಗ್‌ನ ಲಾವಣ್, ವೈಜಾಗ್‌ನ ಶಾಂತಿ (30), ಸೇಲಂನ ಮಲ್ಲೀಕಾ (49) ಹಾಗೂ ನರಸಿಪಟ್ಟಣದ ನಾಯ್ಡು ಬಾಬು (59) ಎಂದು ಗುರುತಿಸಲಾಗಿದೆ.
ಬೆಂಗಳೂರು:- ಮುಂದಿನ 5 ದಿನ ಕರ್ನಾಟಕದ ಉತ್ತರ ಒಳನಾಡಿನಲ್ಲಿ ಭಾರೀ ಚಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. https://ainlivenews.com/tirupati-stampede-death-toll-rises-to-7-sick-to-be-airlifted/ ಉತ್ತರ ಕನ್ನಡದಲ್ಲಿ ಕನಿಷ್ಠ ಉಷ್ಣಾಂಶ ಸಾಮಾನ್ಯಕ್ಕಿಂತ 4 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾಗಲಿದೆ, ಬೀದರ್, ಗುಲ್ಬರ್ಗಾ ಮತ್ತು ಗದಗ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ಇರುವ ಸಾಧ್ಯತೆ ಇದೆ. ರಾಯಚೂರು, ಗದಗದಲ್ಲಿ ಸಾಮಾನ್ಯಕ್ಕಿಂತ 3-5 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರಲಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ದಟ್ಟ ಮಂಜು ಕವಿಯುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಮಂಡ್ಯಮ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 2-4 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ಇರುವ ಸಾಧ್ಯತೆ ಇದೆ. ದಾವಣಗೆರೆಯಲ್ಲಿ 11.5 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನ ಎಚ್ಎಎಲ್ನಲ್ಲಿ 27.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 28.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ,…
ಬೀದರ್:- ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ಕೊಟ್ಟ ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಹಾಡಹಗಲೇ ಗೆಳೆಯನಿಗೆ ಚಾಕು ಇರಿದ ಭಯಾನಕ ಘಟನೆ ಜರುಗಿ https://ainlivenews.com/rishabh-shetty-shares-glimpses-of-toxic-and-wishes-yash-on-his-birthday/ ದಯಾನಂದ ಶಿಂಧೆ ಆರೋಪಿ. ಅಶೋಕ್ ಪಾಟೀಲ್ ಗಾಯಾಳು. ನಗರದ ಬಾರ್‌ವೊಂದರಲ್ಲಿ ಸ್ನೇಹಿತರ ಜೊತೆ ಅಶೋಕ್ ಕುಳಿತಿದ್ದ. ಈ ವೇಳೆ ಕೈಯಲ್ಲಿ ಚಾಕು ಹಿಡಿದುಕೊಂಡೆ ಬಾರ್‌ಗೆ ನುಗ್ಗಿದ್ದ ಆರೋಪಿ ದಯಾನಂದ ಚಾಕು ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ. ಅಶೋಕ್ ಆರೋಪಿ ದಯಾನಂದನಿಗೆ 10 ಸಾವಿರ ರೂ. ಸಾಲ ನೀಡಿದ್ದ. ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಈ ಕೃತ್ಯ ಎಸಗಿದ್ದಾನೆ. ಚಾಕು ಇರಿದ ಭಯಾನಕ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಗಾಯಾಳು ಅಶೋಕ್‌ನನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ.