Author: AIN Author

ಹಾವೇರಿ:- ಹುಟ್ಟು ಸಾವು ಅನ್ನೋದು ಬ್ರಹ್ಮ ಲಿಖಿತ. ಇಲ್ಲಿ ದೇವರ ಅಪ್ಪಣೆ ಇಲ್ಲದೇ ನಾವು ಜನಿಸಲು ಸಾಧ್ಯವಿಲ್ಲ ಹಾಗೆಯೇ ಸಾಯಲು ಸಾಧ್ಯವಿಲ್ಲ. ಹಾಗೆಯೇ ಇಲ್ಲಿನ ಶಿಗ್ಗಾಂವಿ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. https://ainlivenews.com/cockroaches-found-in-food-served-to-police-during-aero-show-rehearsal-dcp-inspects/ 45 ವರ್ಷದ ಬಿಷ್ಟಪ್ಪ ಗುಡಿಮನಿ ಎಂಬವರು ಕಳೆದ ಮೂರು-ನಾಲ್ಕು‌ ದಿನಗಳ ಹಿಂದೆ ಬಿಳಿ ಕಾಮಾಲೆ ರೋಗದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಬಿಷ್ಟಪ್ಪ ಗುಡಿಮನಿ ಮೃತಪಟ್ಟಿದ್ದಾರೆ ಶವವನ್ನು ಊರಿಗೆ ತೆಗೆದುಕೊಂಡು ಹೋಗಿ ಎಂದು ಕುಟುಂಬಸ್ಥರಿಗೆ ತಿಳಿಸಿದ್ದರು. ಕುಟುಂಬಸ್ಥರು ಮೃತ ಬಿಷ್ಟಪ್ಪ ಗುಡಿಮನಿ ಶವ ತೆಗೆದುಕೊಂಡು ಊರಿಗೆ ವಾಪಸು ಬರುತ್ತಿದ್ದ ವೇಳೆ, ದಾರಿಯಲ್ಲಿ ಅವರಿಗೆ ಇಷ್ಟವಾದ ಡಾಬಾ ಕಂಡಿದೆ. ಆಗ, ಕುಟುಂಬಸ್ಥರು ಡಾಬಾ ಬಂತು ನೋಡು, ಊಟ ಮಾಡುತ್ತೀಯಾ ಎಂದು ಗೋಳಾಡಿ ಕಣ್ಣೀರಿಟ್ಟಾಗ, ಮೃತ ಬಿಷ್ಟಪ್ಪ ಗುಡಿಮನಿ ಉಸಿರಾಡಿದ್ದಾರೆ. ಬಳಿಕ, ಬಿಷ್ಟಪ್ಪ ಗುಡಿಮನಿಗೆ ಶಿಗ್ಗಾಂವಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ

Read More

ಬೆಂಗಳೂರು:- ಭಾನುವಾರ ಏರೋ ಇಂಡಿಯಾ ಏರ್​ ಶೋಗೆ ಸಿದ್ಧತೆ ನಡೆಯುತ್ತಿದ್ದು, ಭದ್ರತೆಗೆ ನಿಯೋಜಿಸಿದ್ದ ಪೊಲೀಸರಿಗೆ ನೀಡಿದ್ದ ಊಟದಲ್ಲಿ ಜಿರಳೆ ಪತ್ತೆಯಾಗಿತ್ತು. ಈ ಹಿನ್ನೆಲೆ ಇಂದು ಆಹಾರ ಪರಿಶೀಲಿಸಿ ಖುದ್ದು ಡಿಸಿಪಿ ಸಹ ಉಪಹಾರ ಸೇವನೆ ಮಾಡಿದ್ದಾರೆ. https://ainlivenews.com/kumbh-mela-remember-taking-a-holy-bath-in-the-sangam-prem/ ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ.ಸಜಿತ್ ರಿಂದ ಸಿಬ್ಬಂದಿ ಉಪಹಾರ ಸೇವನೆ ಮಾಡಿದ್ದಾರೆ. ನಿನ್ನೆ ಬೆಳಗಿನ ತಿಂಡಿಯಲ್ಲಿ ಜಿರಳೆ ಪತ್ತೆಯಾಗಿತ್ತು. ಭದ್ರತೆಗೆ ನಿಯೋಜಿಸಲಾಗಿದ್ದ ಸಿಬ್ಬಂದಿಗೆ ಯಲಹಂಕ ಪೊಲೀಸ್ ಠಾಣೆವತಿಯಿಂದ ಊಟದ ವ್ಯವಸ್ಥೆ ಮಾಡಿಸಲಾಗಿತ್ತು. ಮಧ್ಯಾಹ್ನ ಪಾರ್ಸೆಲ್​ ಬಾಕ್ಸ್​ ತೆರೆದಾಗ ಓರ್ವ ಪೊಲೀಸ್​ ಅಧಿಕಾರಿಗೆ ಊಟದಲ್ಲಿ ಜಿರಳೆ ಸಿಕ್ಕಿದೆ. ಜಿರಳೆ ಕಂಡು ಪೊಲೀಸರು ಊಟ ಮಾಡದೆ ಬಾಕ್ಸ್​ ಅನ್ನು ಹಾಗೇ ಬಿಟ್ಟು ತೆರಳಿದ್ದಾರೆ. ಗುಣಮಟ್ಟದ ಊಟ ನೀಡದಿದ್ದಕ್ಕೆ ಪೊಲೀಸ್ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು, ಎರಡು ವರ್ಷಗಳ ಹಿಂದೆ 2023ರಲ್ಲೂ ಇಂತಹದ್ದೇ ಘಟನೆ ನಡೆದಿತ್ತು. 2023ರ ಸೆಪ್ಟೆಂಬರ್ 26ರಂದು ವಿವಿಧ ಸಂಘಟನೆಗಳು ಬೆಂಗಳೂರು ಬಂದ್​ಗೆ ಕರೆ ಕೊಟ್ಟಿದ್ದವು. ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ ಯಾರ್ಡ್‌ ಪೊಲೀಸ್…

Read More

ಕನ್ನಡದ ನಟ ‘ನೆನೆಪಿರಲಿ’ ಪ್ರೇಮ್ ಅವರು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಈ ಕುರಿತು ನಟ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಹಂಚಿಕೊಂಡು ಮಾಹಿತಿ ನೀಡಿದ್ದಾರೆ. https://ainlivenews.com/dkshis-holy-bath-at-the-maha-kumbh-mela-this-is-how-yatnal-made-a-satire/ ಕುಂಭ ಮೇಳ ಪುಣ್ಯ ಸ್ನಾನ. ಎಲ್ಲರ ಬಾಳು ಅಮೃತಮಯವಾಗಿರಲಿ’ ಎಂದು ಪ್ರೇಮ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದರೊಂದಿಗೆ ಪುಣ್ಯ ಸ್ನಾನದ ಫೋಟೋ ಕೂಡ ನಟ ಹಂಚಿಕೊಂಡಿದ್ದಾರೆ. ಇನ್ನೂ ಇತ್ತೀಚೆಗೆ ಕನ್ನಡದ ಕಲಾವಿದರಾದ ರಾಜ್ ಬಿ ಶೆಟ್ಟಿ, ನಿರೂಪಕಿ ಅನುಶ್ರೀ, ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ, ಬಿಗ್ ಬಾಸ್ ಸಾನ್ಯ ಅಯ್ಯರ್ ಸೇರಿದಂತೆ ಅನೇಕರು ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದರು.

Read More

ನವದೆಹಲಿ:- ಮಹಾ ಕುಂಭಮೇಳದಲ್ಲಿ ಡಿಕೆಶಿ ಪುಣ್ಯಸ್ನಾನ ಮಾಡಿರುವ ವಿಚಾರವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. https://ainlivenews.com/pm-modi-embarks-on-three-day-tour-first-visit-to-france/ ಈ ಸಂಬಂಧ ಮಾತನಾಡಿದ ಅವರು, ಅವರವರ ವೈಯಕ್ತಿಕ ಭಕ್ತಿಯ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಅವರು ಮಹಾ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಎಷ್ಟು ಪಾಪ ಕಳೆದು ಹೋಯಿತು ಎಂದು ಮಲ್ಲಿಕಾರ್ಜುನ ಖರ್ಗೆ ವರದಿ ಪಡೆಯಬೇಕು. ಹಿಂದೂಗಳೇ ವೋಟ್ ಹಾಕೋದು, ಕಡೆಗೆ ಮುಸ್ಲಿಮರಿಂದ ಗೆದ್ದೆವು ಅಂತ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು. ಯತ್ನಾಳ್ ಟೀಂ ದೆಹಲಿಗೆ ತೆರಳಿರುವ ಬಗ್ಗೆ ಪ್ರತಿಕ್ರಿಯಿಸಿ, ನಾವು ದೆಹಲಿಗೆ ಸೋಮಣ್ಣ ಮನೆ ಪೂಜೆ ಸಲುವಾಗಿ ಬಂದಿದ್ದೇವೆ. ಮುಂದೆ ಏನಾಗುತ್ತದೆ ಎಂದು ನಮಗೆ ಗೊತ್ತಿಲ್ಲ. ಎಲ್ಲರಿಗೂ ಬನ್ನಿ ಎಂದು ಆಹ್ವಾನ ನೀಡಿದ್ದರು ಹಾಗಾಗಿ ಬಂದಿದ್ದೇವೆ. ಸೋಮಣ್ಣನವರು ನಮಗೆ ಆತ್ಮೀಯರಿದ್ದಾರೆ. ರೈಲ್ವೇ ಮಂತ್ರಿಗಳಾದ ಮೇಲೆ ನಮ್ಮ ಕೆಲಸ ಮಾಡಿಕೊಟ್ಟಿದ್ದಾರೆ ಎಂದರು

Read More

ನವದೆಹಲಿ:- ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ. ಮೊದಲು ಫ್ರಾನ್ಸ್‌ ಗೆ ಭೇಟಿ ಕೊಡಲಿದ್ದಾರೆ. ಸಂಜೆ ವೇಳೆಗೆ ಫ್ರಾನ್ಸ್‌ ತಲುಪಲಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ 3ನೇ ಆವೃತ್ತಿಯ ಕೃತಕ ಬುದ್ಧಿಮತ್ತೆ ಆ್ಯಕ್ಷನ್‌ ಶೃಂಗಸಭೆಯ ಸಹ-ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಲಿದ್ದಾರೆ. https://ainlivenews.com/president-draupadi-murmu-takes-holy-dip-at-the-maha-kumbh-mela/ ಇನ್ನು ತಮ್ಮ ಫ್ರಾನ್ಸ್‌ ಭೇಟಿಯನ್ನು ʻಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧ ಬಲಪಡಿಸುವ ಪ್ರಮುಖ ಕ್ಷಣ..ʼ ಎಂದು ಬಣ್ಣಿಸಿರುವ ಪ್ರಧಾನಿ ಮೋದಿ, AI ಮತ್ತು ಪರಮಾಣು ಶಕ್ತಿ ಸೇರಿದಂತೆ ಪ್ರಮುಖ ವಿಷಯಗಳನ್ನು ಚರ್ಚಿಸುವುದಾಗಿ ಹೇಳಿದ್ದಾರೆ. ಫ್ರಾನ್ಸ್ ಪ್ರವಾಸದ ಬಳಿಕ ಫೆಬ್ರವರಿ 12ರಂದು ಎರಡು ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ಮೋದಿ ಅಮೆರಿಕಕ್ಕೆ ತೆರಳಲಿದ್ದಾರೆ. ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲಿರುವ ಪ್ರಧಾನಿ ಮೋದಿ, ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ಚರ್ಚಿಸಲಿದ್ದಾರೆ. ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ 2ನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಬಳಿಕ ಇದು ಪ್ರಧಾನಿ ಮೋದಿ…

Read More

ಪ್ರಯಾಗ್‌ರಾಜ್:- ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪುಣ್ಯಸ್ನಾನ ಮಾಡಿದ್ದು, ದೇಶದ ಒಳಿತಿಗಾಗಿ ಪ್ರಾರ್ಥನೆ ಮಾಡಿದ್ದಾರೆ. https://ainlivenews.com/metro-ticket-prices-are-expensive-transport-minister-says-passenger-numbers-may-decrease/ ಪ್ರಯಾಗ್‌ರಾಜ್‌ಗೆ ಬಂದಿಳಿದ ದ್ರೌಪದಿ ಮುರ್ಮು ಅವರನ್ನು ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಬರಮಾಡಿಕೊಂಡರು ರಾಷ್ಟçಪತಿ ದ್ರೌಪದಿ ಮುರ್ಮು 8 ಗಂಟೆಗಳ ಕಾಲ ಪ್ರಯಾಗ್‌ರಾಜ್‌ನಲ್ಲಿ ಸಮಯ ಕಳೆಯಲಿದ್ದಾರೆ. ಅಕ್ಷಯವತ್ ಹಾಗೂ ಹನುಮಾನ್ ಮಂದಿರಕ್ಕೆ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಡಿಜಿಟಲ್ ಕುಂಭ ಅನುಭವ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.

Read More

ಬೆಂಗಳೂರು:- ಮೆಟ್ರೋ ಟಿಕೆಟ್ ದರ ದುಬಾರಿ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. https://ainlivenews.com/kionics-vendors-explode-again-call-for-protest-against-drinking-poison/ ಈ ಸಂಬಂಧ ಮಾತನಾಡಿದ ಅವರು, ಮೆಟ್ರೋ ಟಿಕೆಟ್ ದರ ಏರಿಕೆಯಿಂದ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗುತ್ತೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಯೋಚನೆ ಮಾಡಬೇಕು. ಮೆಟ್ರೋ ಅಂದರೆ ಜಾಸ್ತಿ ಅನುದಾನ ಕೊಡುತ್ತಾರೆ. ಸಾವಿರಾರು ಕೋಟಿ ಖರ್ಚು ಮಾಡುತ್ತಾರೆ. ಮೆಟ್ರೋದಲ್ಲಿ 8-9 ಲಕ್ಷ ಜನ ಮಾತ್ರ ನಿತ್ಯ ಓಡಾಟ ಮಾಡುತ್ತಾರೆ. ಮೆಟ್ರೋ ಜಾಲ ಜಾಸ್ತಿ ವಿಸ್ತರಣೆ ಆಗಲಿ. ಆದರೆ ಮೆಟ್ರೋ ಕೊಡುವ ಅಷ್ಟು ಅನುದಾನ ಬಿಎಂಟಿಸಿಗೂ ಕೊಡಲಿ. ಬಿಎಂಟಿಸಿಯಲ್ಲಿ ನಿತ್ಯ 40 ಲಕ್ಷ ಜನ ಓಡಾಟ ಮಾಡುತ್ತಾರೆ. ಬಿಎಂಟಿಸಿಗೆ ಹೆಚ್ಚು ಆದ್ಯತೆ ಕೊಟ್ಟರೆ ಜನಕ್ಕೆ ಅನುಕೂಲ ಆಗುತ್ತದೆ ಎಂದರು. ಮೆಟ್ರೋ ಟಿಕೆಟ್ ದರ ಏರಿಕೆಗೆ ಏನು ಕಾರಣ ಅಂದರೆ ಬಿಎಂಟಿಸಿ, ಬಿಡಬ್ಲ್ಯೂಎಸ್‌ಎಸ್‌ಬಿ, ಬಿಡಿಎ, ಕೆಇಬಿ ಎಲ್ಲಾ ಸಂಸ್ಥೆಗಳು ಉಳಿಬೇಕು. ಈ ಸಂಸ್ಥೆಗಳು ಲಾಭ ಮಾಡೋದು ಬೇಡ. ಕೊನೆ ಪಕ್ಷ ಲಾಭ-ನಷ್ಟ ಇಲ್ಲದೇ ಸಮವಾಗಿ…

Read More

ಬೆಂಗಳೂರು:- ಕಿಯೋನಿಕ್ಸ್ ವೆಂಡರ್ಸ್ ಮತ್ತೆ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು, ವಿಷ ಕುಡಿಯುವ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. https://ainlivenews.com/sslc-puc-degree-passed-then-here-is-a-great-job/ ಇಲ್ಲಿನ ಕುಮಾರ ಪಾರ್ಕ್‌ ರಸ್ತೆಯಲ್ಲಿರುವ ಕಿಯೋನಿಕ್ಸ್‌ ಕಚೇರಿ ಎದುರು ಭಾರೀ ಹೈಡ್ರಾಮಾ ನಡೆದಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿಷ ಕುಡಿಯುವ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ಈಗಾಗಲೇ ಬಾಕಿ ಹಣ ಪಾವತಿ ಮಾಡುವಂತೆ ಒತ್ತಾಯಿಸಿ ಈ ಹಿಂದೆ ದಯಾಮರಣ ಕೋರಿದ್ದ ಕಿಯೋನಿಕ್ಸ್‌ ವೆಂಡರ್ಸ್‌ ಇದೀಗ ವಿಷ ಕುಡಿಯುವ ಪ್ರತಿಭಟನೆಗೆ ಕರೆ ಕೊಟ್ಟಿದ್ದರು. ಅಲ್ಲದೇ ಸಚಿವ ಪ್ರಿಯಾಂಕ್‌ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಹೆಸರಿನಲ್ಲಿ ಡೆತ್ ನೋಟ್ ಸಹ ಬರೆದುಕೊಂಡಿದ್ದರು. ಬಾಕಿ ಬಿಲ್ ಪಾವತಿ ಮಾಡುವುದಾಗಿ ಈ ಹಿಂದೆ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಭರವಸೆ ಕೊಟ್ಟಿದ್ದರು. ಇದೀಗ ವಿಳಂಭ ಧೋರಣೆ ಖಂಡಿಸಿ ಇಂದು ಪ್ರತಿಭಟನೆ ಕರೆ ಕೊಟ್ಟಿದ್ದಾರೆ. ಕಚೇರಿಯ ಮುಂಭಾಗ ವೆಂಡರ್ಸ್ ಪ್ರತಿಭಟನೆ ಬೆನ್ನಲ್ಲೇ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಈ ವೇಳೆ ವೆಂಡರ್ಸ್ ಕಚೇರಿಗೆ ಬರುತ್ತಿದ್ದ ವ್ಯಕ್ತಿಯಯನ್ನ ಪೊಲೀಸರು ವಶಕ್ಕೆ…

Read More

ಬೆಂಗಳೂರು: ನೀವು ನೌಕರಿ ( Job ) ಹುಡುಕುತ್ತಾ ಇದ್ದೀರಾ. SSLC / PUC ಯಾವುದೇ ಪದವಿ ಆಗಿದ್ರೆ ಕೂಡಲೆ ಇಲ್ಲಿ ಭೇಟಿ ಕೊಡಿ. ಇಲ್ಲಿ ವಾಕ್ ಇನ್ ಸಂದರ್ಶನವಿದ್ದು, ಪುರುಷರು ಮತ್ತು ಮಹಿಳೆಯರಿಗೆ ನೇಮಕಾತಿ ಆರಂಭವಾಗಿದೆ. ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನಲ್ಲಿ ಬ್ರ್ಯಾಂಚ್ ಮ್ಯಾನೆಜರ್, ಮ್ಯಾನೆಜರ್, ಅಸಿಸ್ಟೆಂಟ್ ಸೇಲ್ಸ್ ಎಕ್ಸಿಕ್ಯೂಟಿವ್, ಬಿಲ್ಲಿಂಗ್ ಎಕ್ಸಿಕ್ಯೂಟಿವ್, ಕ್ಯಾಶಿಯರ್ , ಸುಪರವೈಸರ್ ಸೇರಿದಂತೆ ಅನೇಕ ಹುದ್ದೆಗಳಿಗೆ ಇಲ್ಲಿ ಅವಕಾಶವಿದೆ. SSLC /PUC ಯಾವುದೇ ಪದವಿ ಮಾಡಿದ್ರು ಇಲ್ಲಿ ಕೆಲಸವಿದ್ದು. ಜೊತೆಗೆ ವಸತಿ + ಸ್ಥಿರ ಮತ್ತು ಆಕರ್ಷಕ ಸಂಬಳ + PF + ಪ್ರೋತ್ಸಾಹ ಧನ ಕೊಡಲಾಗುತ್ತದೆ. (Job alert – contact – 97406 26853 ) ದಿನಾಂಕ- 11-02-2025 ರಂದು ಮಧ್ಯಾಹ್ನ 3 ಗಂಟೆಯಿಂದ 5 ಗಂಟೆವರೆಗೆ ಸಂದರ್ಶನವಿದ್ದು, ನೌಕರಿ ಹುಡುಕುತ್ತಿರುವವರು ಸಂದರ್ಶನಕ್ಕೆ ಹಾಜರಾಗಬಹುದು ಸಂದರ್ಶನ ನಡೆಯುವ ಸ್ಥಳ:-#41 ಡಿ.ವಿ.ಜಿ ರಸ್ತೆ ಬಸವನಗುಡಿ, ಬೆಂಗಳೂರು ಹೆಚ್ಚಿನ ಮಾಹಿತಿಗಾಗಿ ಇಲ್ಲಿರುವ ನಂಬರಿಗೆ…

Read More

ಬೆಂಗಳೂರು:- ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ನೆರಳೂರು ಬಳಿ ಮನೆಯೊಂದರ ಬಳಿ ಸಿಲಿಂಡರ್ ಸ್ಫೋಟಗೊಂಡು ಓರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ಜರುಗಿದೆ. https://ainlivenews.com/bangalore-is-the-air-force-capital-of-india-dcm-dk-bannane/ ದಿನೇಶ್ ದಾಸ್‌ಗೆ ಗಂಭೀರ ಗಾಯಗೊಂಡ ವ್ಯಕ್ತಿ. ಮನೆಯಲ್ಲಿ ಗ್ಯಾಸ್ ಸೋರಿಕೆಯಿಂದ ಬೆಳಗ್ಗೆ 7 ಗಂಟೆ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆ ಛಾವಣಿಯೇ ಚಿಂದಿ ಚಿಂದಿಯಾಗಿದೆ. ಈ ವೇಳೆ ಮನೆಯಲ್ಲಿದ್ದ ದಿನೇಶ್ ದಾಸ್‌ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.

Read More