ಹಾಸನ:- ಸಕಲೇಶಪುರ ತಾಲೂಕಿನ ನಿಡನೂರು ಕೂಡಿಗೆ ಬಳಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾಗಿ 14 ಮಂದಿ ಕೂಲಿ ಕಾರ್ಮಿಕರು ಗಾಯಗೊಂಡು, ನಾಲ್ವರು ಸ್ಥಿತಿ ಗಂಭೀರವಾಗಿರುವ ಘಟನೆ ಜರುಗಿದೆ. https://ainlivenews.com/is-the-vision-problem-good-boy-for-glasses-eat-this-fruit-regularly/ ಮಡಿಕೇರಿಯ ಶನಿವಾರಸಂತೆ ಬಳಿ ಇರುವ ಕಾಫಿ ತೋಟಕ್ಕೆ ಕಾರ್ಮಿಕರನ್ನು ಟಾಟಾ ವಿಂಗರ್ ವಾಹನದಲ್ಲಿ ಕೊಂಡೊಯ್ಯುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ರಸ್ತೆ ಬದಿಗೆ ವಾಹನ ಪಲ್ಟಿಯಾಗಿದೆ. ವಾಹನದಲ್ಲಿ ಸಿಲುಕಿದ್ದ ಕೂಲಿ ಕಾರ್ಮಿಕರನ್ನು ಸ್ಥಳೀಯರು ಹಾಗೂ ಪೊಲೀಸರು ಸೇರಿ ಹೊರ ತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳುಗಳಿಗೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅತೀ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Author: AIN Author
ಕಣ್ಣುಗಳು ಮನುಷ್ಯನ ದೇಹದ ಅವಿಭಾಜ್ಯ ಅಂಗಗಳು. ಇಂದು ನಮಗೆ ಕಣ್ಣುಗಳು ಇರುವುದರಿಂದಲೇ ನಮ್ಮ ಪ್ರತಿ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತಿವೆ. ಕೆಲವೊಮ್ಮೆ ನಾವು ಮಾಡುವ ತಪ್ಪಿನಿಂದಾಗಿ ಅಥವಾ ಅನುವಂಶೀಯವಾಗಿ ನಮ್ಮ ಕಣ್ಣುಗಳಿಗೆ ಸಮಸ್ಯೆ ಎದುರಾಗುತ್ತದೆ. https://ainlivenews.com/this-is-the-model-andre-a-new-couple-who-donated-blood-as-saptapadi-fell/ ಕಣ್ಣುಗಳಲ್ಲಿ ಒಂದಕ್ಕೆ ಸಮಸ್ಯೆಯಾದರೂ ನಮಗೆ ಬಹಳ ಕಷ್ಟವಾಗುತ್ತದೆ. ಕಣ್ಣುಗಳ ಆರೋಗ್ಯವನ್ನು ನಾವು ರಕ್ಷಣೆ ಮಾಡಿಕೊಳ್ಳಲು ಕೆಲವೊಂದು ಹಣ್ಣುಗಳು ಸಹಕಾರಿ ಆಗುತ್ತದೆ. ಲೆಟ್ಯೂಸ್‌ನಲ್ಲಿ ಲ್ಯೂಟೀನ್ ಮತ್ತು ಕ್ಸಾಂಥಿನ್ ಸಮೃದ್ಧವಾಗಿದೆ. ಕ್ಯಾರೊಟಿನಾಯ್ಡ್ಸ್ ಎಂಬ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಹಾನಿಕಾರಕ UV ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸುತ್ತವೆ. ಆಕ್ಸಿಡೇಟಿವ್ ಹಾನಿಯನ್ನು ತಡೆಯುತ್ತವೆ. ಲೆಟ್ಯೂಸ್ ಸೊಪ್ಪಿನಲ್ಲಿರುವ ವಿಟಮಿನ್ ಸಿ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಪಾಲಕ್ ಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆಯ ಆರೋಗ್ಯ ಸುಧಾರಿಸುವುದಲ್ಲದೆ, ದೃಷ್ಟಿಯೂ ಸುಧಾರಿಸುತ್ತದೆ. ಲೆಟ್ಯೂಸ್ ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳನ್ನು ಸಹ ನಿಯಂತ್ರಣದಲ್ಲಿಡುತ್ತದೆ. ಕ್ಯಾರೆಟ್ ದೃಷ್ಟಿ ಸುಧಾರಿಸುವ ಗುಣಗಳನ್ನು ಸಹ ಹೊಂದಿದೆ. ಇದರಲ್ಲಿರುವ ಬೀಟಾ-ಕ್ಯಾರೋಟಿನ್ ದೃಷ್ಟಿ ಸುಧಾರಿಸುತ್ತದೆ. ಇದು ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ. ರೆಟಿನಾವನ್ನು ರಕ್ಷಿಸುತ್ತದೆ. ಉತ್ತಮ…
ಶಿವಮೊಗ್ಗ : ಮದುವೆ ಮನೆಯಾಯ್ತು ರಕ್ತದಾನ ಶಿಬಿರ. ಹೌದು, ನಿನ್ನೆ ಸೋಮವಾರ ನಡೆದಿರುವ ಮದುವೆ ಕಾರ್ಯದಲ್ಲಿ, ಮಧುಮಕ್ಕಳಾದ ಯಶವಂತ್ ಹಾಗೂ ತನುಜಾ ರಕ್ತದಾನ ಮಾಡುವ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. https://ainlivenews.com/fire-accident-burned-sack-bag-merchant-house/ ಶಿವಮೊಗ್ಗದ ಗುಡ್ಡೇಕಲ್ ಸಮುದಾಯ ಭವನದಲ್ಲಿ ಈ ಮದುವೆ ನಡೆದಿದ್ದು, ಹುಡುಗ ಮತ್ತು ಹುಡುಗಿ ಮನೆಯವರಿಗೆ ಒಪ್ಪಿಸಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಮದುವೆಯ ದಿನದಂದೇ ರಕ್ತದಾನ ಮಾಡುವ ವಿಶೇಷ ಕಾರ್ಯಕ್ರಮದ ಮೂಲಕ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಸಂತೋಷದಿಂದ ಪುಣ್ಯದ ಕಾರ್ಯ ನಡೆಸಿರುವ ಎರಡು ಮನೆಯವರು, ಬೇರೆ ಸುಶಿಕ್ಷಿತ ಕುಟುಂಬಗಳಿಗೆ ಮಾದರಿಯಾದರು. ಮದುವೆಗೆಂದು ನೆರೆದಿದ್ದ ಅಪಾರ ಜನ ಸಮುದಾಯದ ನಡುವೆ, ತಾಳಿ ಕಟ್ಟುವ ಕಾರ್ಯ ಮುಗಿಯುತ್ತಿದ್ದಂತೆ ನವ ದಂಪತಿಗಳಿಂದ ಮಂಟಪದಲ್ಲಿಯೇ ಬಹಳ ಖುಷಿಯಿಂದ ರಕ್ತದಾನ ಮಾಡಿದ್ರು. ಜೀವನ ಸಾರ್ಥಕವೆನಿಸಿದ ಧನ್ಯತಾ ಭಾವ ವ್ಯಕ್ತಪಡಿಸಿ, ಇತರೆ ಜೋಡಿಗಳಿಗೆ ಈ ಜೋಡಿ ಮಾದರಿಯಾದರು. ಇನ್ನು ಈ ಮದುವೆ ಮನೆಯಲ್ಲಿ ಪಾಲ್ಗೊಂಡಿದ್ದ ಕೆಲವರು ಕೂಡ ರಕ್ತದಾನ ಮಾಡಿ, ನವಜೋಡಿಗಳಿಗೆ ಶುಭ…
ಮಂಗಳೂರು: ಅಕಸ್ಮಿತ ಬೆಂಕಿ ತಗುಲಿ ಗೋಣಿ ಚೀಲ ವ್ಯಾಪಾರಿ ಮನೆಯೊಂದು ಹೊತ್ತಿ ಉರಿದ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಕಬೈಲ್ ನಲ್ಲಿ ನಡೆದಿದೆ. https://ainlivenews.com/illegal-relationship-with-her-husband-with-girlfriend/ ವಿದ್ಯುತ್ ಶಾಟ್೯ ಸಕ್ರ್ಯುಟ್ ನಿಂದಾಗಿ ಈ ಅವಘಡ ಸಂಭವಿಸಿದೆ. ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಯಾವುದೇ ಪ್ರಾಣಪಾಯ ನಡೆದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ
ಮಂಡ್ಯ:- ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಪತಿಗೆ ಅನೈತಿಕ ಸಂಬಂಧವಿರುವುದಾಗಿ ಶಂಕಿಸಿ, ಪತಿಯ ಜಿಮ್‌ನಲ್ಲೇ ಪತ್ನಿ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. https://ainlivenews.com/this-is-the-first-time-in-history-marriage-at-rashtrapati-bhavan-anyone-lucky-couple/ 27 ವರ್ಷದ ದಿವ್ಯ ಮೃತ ದುರ್ದೈವಿ. ದಿವ್ಯ ಹಾಗೂ ಗಿರೀಶ್ 7 ವರ್ಷಗಳ ಹಿಂದೆ ವಿವಾಹವಾಗಿದ್ದರು. ಎರಡು ಮಕ್ಕಳಿದ್ದವು. ಗಿರೀಶ್ ಕೆಸ್ತೂರು ಗ್ರಾಮದಲ್ಲಿ ವೈಭವ್ ಎಂಬ ಜಿಮ್ ಆರಂಭಿಸುವಾಗ ದಿವ್ಯ ಮನೆಯವರು 10 ಲಕ್ಷ ರೂ.ಯನ್ನು ನೀಡಿದ್ದರು. ಆದರೆ ಇತ್ತೀಚಿಗೆ ಗಿರೀಶ್ ಬೇರೊಬ್ಬರ ಜೊತೆ ಅನೈತಿಕ ಸಂಬಂಧವಿರುವುದಾಗಿ ದಿವ್ಯ ಶಂಕಿಸಿದ್ದರು. ಈ ವಿಚಾರವನ್ನ ಕುಟುಂಬಸ್ಥರ ಬಳಿ ದಿವ್ಯ ಹೇಳಿಕೊಂಡಿದ್ದರು. ರಾಜಿಯಾಗಿದ್ದರೂ ಗಿರೀಶ್ ಕಳೆದ ಮೂರು ತಿಂಗಳಿಂದ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದು ಪತಿ ನಡೆಸುತ್ತಿದ್ದ ಜಿಮ್‌ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಳಿಕ ಪತಿ ಗಿರೀಶ್ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕೆಸ್ತೂರು ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.
ಮದುವೆ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ಸಾಕಷ್ಟು ಆಸೆ ಕನಸುಗಳಿರುತ್ವೆ.. ನಾನು ಮದ್ವೆ ಆಗೋರು ಹೀಗೆ ಇರಬೇಕು.. ನನ್ನ ಮದ್ವೆ ಇಂಥದ್ದೇ ಸ್ಥಳದಲ್ಲಿ ಆಗ್ಬೇಕು. ಹೀಗೆ ಆಗ್ಬೇಕು ಅಂತಾ ಅಂದುಕೊಂಡಿರ್ತಾರೆ.. ಇತ್ತೀಚಿಗಂತೂ ಹಿಲ್ ಸ್ಟೇಟನ್ಸ್ , ಡೆಸ್ಟಿನೇಷನ್ ವೆಡ್ಡಿಂಗ್ಸ್‌ಗಳಲ್ಲಿ ಮದ್ವೆ ನಡೆಯೋದು ಜಾಸ್ತಿ ಆಗಿದೆ.. ಆದರೆ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ಜೋಡಿಯೊಂದು ಮದುವೆಯಾಗಲಿದೆ.. https://ainlivenews.com/traffic-restriction-on-this-road-in-bangalore/ ಹೌದು, ದೇಶದ ಅತಿದೊಡ್ಡ ಸರ್ಕಾರಿ ಬಂಗಲೆ ಭಾರತದ ರಾಷ್ಟ್ರಪತಿ ಭವನ.. ಇಲ್ಲಿ ಕೇವಲ ಸರ್ಕಾರಿ ಕಾರ್ಯಕ್ರಮಗಳಿಗಷ್ಟೇ ಸೀಮಿತ.. ಆದರೆ ಇದೀಗ ಇದೇ ಮೊದಲ ಬಾರಿಗೆ ಮದುವೆ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಭವನ ಸಜ್ಜಾಗಲಿದೆ.. ಎಸ್.. ರಾಷ್ಟ್ರಪತಿ ದ್ರೌಪದಿ ಮುರ್ಮುರ ಖಾಸಗಿ ಭದ್ರತಾ ಸಿಬ್ಬಂದಿಯಾಗಿರುವ ಸಿಆರ್‌ಪಿಫ್ ಅಸಿಸ್ಟೆಂಟ್ ಕಮಾಂಡೆಂಟ್ ಪೂನಂ ಗುಪ್ತಾ ಮದುವೆ ರಾಷ್ಟ್ರಪತಿ ಭವನದಲ್ಲೇ ನಡೆಸಲು, ಸರ್ಕಾರ ಗ್ರೀನ್ ಸಿಗ್ನಲ್ ನೀಡಲಾಗಿದೆ. ಸಿಆರ್‌ಪಿಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಅವನೀಶ್ ಕುಮಾರ್ ಮತ್ತು ಪೂನಂ ಗುಪ್ತಾ ಮದುವೆ ಫೆ.12ರಂದು ನಡೆಯಲಿದೆ. ಸರಿಸುಮಾರು 300 ಎಕ್ರೆ ವ್ಯಾಪ್ತಿಯ ರಾಷ್ಟ್ರಪತಿ…
ಬೆಂಗಳೂರು:- ಅರಮನೆ ಮೈದಾನದಲ್ಲಿ ಇಂದು ಗ್ಲೋಬಲ್ ಇನ್‌ವೆಸ್ಟರ್ಸ ಮೀಟ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ಸಚಿವರುಗಳು, ಉದ್ದಿಮೆದಾರರು, ವಿದೇಶಿ ಗಣ್ಯರುಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸ್ಥಳ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಸುಗಮ ಸಂಚಾರದ ಹಿತದೃಷ್ಟಿಯಿಂದ, ಬೆಂಗಳೂರು ಸಂಚಾರಿ ಪೊಲೀಸರು ವಾಹನ ಸಂಚಾರ ಮಾರ್ಪಾಡು ಮಾಡಿದ್ದಾರೆ. https://ainlivenews.com/d-posted-by-d-posting-stone-on-udayagiri-station/ ಸಂಚಾರ ಮಾರ್ಪಾಡು ನಗರದ ಒಳಭಾಗದಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು: ಬಸವೇಶ್ವರ ಸರ್ಕಲ್-ಒಲ್ಡ್ ಹೈಗ್ರೌಂಡ್ ಜಂಕ್ಷನ್ – ಕಲ್ಪನ – ಎಂ.ಸಿ.ಸಿ – ವಸಂತನಗರ ಅಂಡರ್ ಬ್ರಿಡ್ಜ್ ಬಲತಿರುವು ಪಡೆದು ಮುಖ್ಯ ಅರಮನೆ ಮೈದಾನದ ಮಾವಿನಕಾಯಿ ಮಂಡಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು. ನಿರ್ಗಮನ: ಅರಮನೆ ಮೈದಾನದ ಮಾವಿನಕಾಯಿ ಮಂಡಿಯಲ್ಲಿ ನಿಲುಗಡೆ ಮಾಡಿರುವವರು, ಸ್ಕೋವರ್ಡ್ ಗೇಟ್ ಮುಖಾಂತರ ಹೊರಬಂದು ಜಯಮಹಲ್ ರಸ್ತೆ ಮೂಲಕ ಸಂಚರಿಸಬಹುದು. ಬಳ್ಳಾರಿ ರಸ್ತೆ ಹೆಬ್ಬಾಳ ಕಡೆಯಿಂದ ಬರುವ ವಾಹನಗಳು: ಮೇಕ್ರಿ…
ಮೈಸೂರು:- ಸಾಮಾಜಿಕ ಮಾಧ್ಯಮ ಪೋಸ್ಟ್ ಒಂದು ಮೈಸೂರಿನಲ್ಲಿ ಕಿಡಿ ಹೊತ್ತಿಸಿದ್ದು, ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ನಡೆದಿದೆ. https://ainlivenews.com/my-life-is-in-the-bjp-until-iro-munirat/ ಮೈಸೂರಿನಲ್ಲಿ ಕಲ್ಯಾಣಗಿರಿ ಬಡಾವಣೆಯ ಯುವಕನೊಬ್ಬ ಹಾಕಿದ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಸಾಮಾಜಿಕ ಸ್ವಾಸ್ಥ್ಯವನ್ನೇ ಕೆಡಿಸಿದೆ. ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಆತ ಪೋಸ್ಟ್ ಮಾಡಿದ್ದ. ಸಂಸದ ರಾಹುಲ್ ಗಾಂಧಿ, ಮಾಜಿ ಸಿಎಂಗಳಾದ ಅಖಿಲೇಶ್ ಯಾದವ್ ಹಾಗೂ ಅರವಿಂದ ಕೇಜ್ರಿವಾಲ್ ಅವರ ಭಾವಚಿತ್ರವನ್ನು ವ್ಯಂಗ್ಯವಾಗಿ ಹಾಕಲಾಗಿತ್ತು. ವ್ಯಂಗ್ಯವಾಗಿ ಹಾಕಿದ್ದಷ್ಟೇ ಆಗಿದ್ದರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ, ಆ ಪೋಸ್ಟ್‌ನಲ್ಲಿ ಒಂದು ಧರ್ಮಕ್ಕೆ ಅವಮಾನ ಮಾಡುವ ರೀತಿ ವಾಕ್ಯಗಳನ್ನು ಬರೆಯಲಾಗಿತ್ತು. ಇದು ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತೋ ಉದಯಗಿರಿ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆ ಪೋಸ್ಟ್ ಒಂದು ಸಮುದಾಯದ ಯುವಕರನ್ನು ರೊಚ್ಚಿಗೆಬ್ಬಿಸಿತ್ತು. ತಕ್ಷಣ ಅವರು ಉದಯಗಿರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಪೊಲೀಸರು, ಕೆಲ ಧಾರ್ಮಿಕ ಮುಖಂಡರು…
ಬೆಂಗಳೂರು:- ನನ್ನ ಪ್ರಾಣ ಇರೋವರೆಗೂ ಬಿಜೆಪಿಯಲ್ಲೇ ಇರ್ತೇನೆ ಎಂದು ಮುನಿರತ್ನ ಹೇಳಿಕೆ ಕೊಟ್ಟಿದ್ದಾರೆ. https://ainlivenews.com/rape-on-11-year-old-girl/ ಈ ಸಂಬಂಧ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಶಕ್ತಿ ನಾನು ನೋಡಿದ್ದೇನೆ. ಅವರು ಏನು, ಅವರ ಶಕ್ತಿ ಏನು ಅಂತ ನನಗೆ ಗೊತ್ತಿದೆ. ನಾನು ಅವರ ಜೊತೆ ಐದು ವರ್ಷ ಕೆಲಸ ಮಾಡಿದ್ದೇನೆ. ಅವರಿದ್ರೆ ಜನ, ಅವರಿಲ್ಲದಿದ್ರೆ ಹಣ ಕೊಟ್ಟು ಜನರನ್ನ ಕರೆದು ಕೂರಿಸಿಕೊಳ್ಳುವ ಪರಿಸ್ಥಿತಿ ಬರಲಿದೆ ಎಂದು ಸಿಎಂ ಪರ ಬ್ಯಾಟ್ ಬೀಸಿದ್ದಾರೆ. ಕಾಂಗ್ರೆಸ್‍ನಲ್ಲಿ ಕಣ್ಣಿಲ್ಲದ ಮೈತ್ರಿ ಇದೆ. ಅಂದು ಸಿಎಂ, ಡಿಸಿಎಂ ಎರಡು ಪಕ್ಷದ ಮೈತ್ರಿಯಲ್ಲಿದ್ದ ಪರಿಸ್ಥಿತಿ ಇದೆ. ಇಂದು ಕುಮಾರಸ್ವಾಮಿ ಜಾಗದಲ್ಲಿ ಸಿದ್ದರಾಮಯ್ಯ ಇದ್ದಾರೆ. ಪರಮೇಶ್ವರ್ ಜಾಗದಲ್ಲಿ ಡಿಸಿಎಂ ಇದ್ದಾರೆ. ಡಿಸಿಎಂ ಅವರೇ ಸಿದ್ದರಾಮಯ್ಯಗೆ ಮಗ್ಗುಲ ಮುಳ್ಳು ಎಂದಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್‍ನಲ್ಲಿದ್ರೆ 135 ಸೀಟು, ಆಚೆ ಹೋದ್ರೆ ಶೂನ್ಯವಾಗಲಿದೆ. ಸಿದ್ದರಾಮಯ್ಯ ಅವರನ್ನು ಇಳಿಸಿದರೆ ಆರೇ ತಿಂಗಳಿಗೆ ಚುನಾವಣೆ ಬರುತ್ತೆ. ಹಾಗಾಗಿ ನಮ್ಮ ಪಕ್ಷದಲ್ಲಿ ಎಲ್ರೂ ಒಗ್ಗಟ್ಟಾಗಬೇಕು. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಇಳಿಸೋ…
ಬೆಂಗಳೂರು:- ಚಾಕಲೇಟ್ ಕೊಡಿಸುವುದಾಗಿ ಪುಸಲಾಯಿಸಿ 11 ವರ್ಷದ ಬಾಲಕಿ ಮೇಲೆ ರೇಪ್ ಮಾಡಿರುವ ಘಟನೆ ಮಾನ್ವಿ ತಾಲೂಕು ಬಳಿಕ ಲಿಂಗಸುಗೂರು ತಾಲೂಕಿನಲ್ಲಿ ನಡೆದಿದೆ. https://ainlivenews.com/this-seed-is-a-drug-to-prevent-heart-attack/ ಪೇಂಟಿಂಗ್ ಕೆಲಸ ಮಾಡುತ್ತಿದ್ದ 43 ವರ್ಷದ ಚಂದ್ರಶೇಖರ ಬಂಧಿತ ಆರೋಪಿ. ಮಾನಸಿಕ ಖಿನ್ನತೆಗೆ ಒಳಗಾಗಿ, ಓದಲು ಬರೆಯಲು ಸರಿಯಾಗಿ ಬಾರದ ವಿದ್ಯಾರ್ಥಿನಿ ಮೇಲೆ ಕಾಮುಕ ಅಟ್ಟಹಾಸ ಮೆರೆದಿದ್ದಾನೆ. ಶಾಲೆಯಲ್ಲಿ ಮಧ್ಯಾಹ್ನ ಊಟಕ್ಕೆ ಬಿಟ್ಟ ವೇಳೆ ಬಾಲಕಿ ಶಾಲೆ ಪಕ್ಕದ ಅಂಗಡಿಗೆ ತೆರಳಿದ್ದಾಳೆ. ಅಂಗಡಿ ಬಳಿ ಚಾಕೊಲೇಟ್ ಕೊಟ್ಟು ಆಸೆ ತೋರಿಸಿ ಬಾಲಕಿಯನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಾಲಕಿಯನ್ನ ಕರೆದೊಯ್ಯುವುದನ್ನ ಗಮನಿಸಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮನೆ ಬಾಗಿಲು ಮುರಿದು ಒಳನುಗಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.