Author: AIN Author

ಕುಂದಗೋಳ: ಕರ್ನಾಟಕ ರಕ್ಷಣಾ ವೇದಿಕೆಯ ಮೂಲಕ ತಾಲ್ಲೂಕಿನ ತಾಲ್ಲೂಕು ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡುವ ಕುರಿತು ಹಾಗೂ ತಾಲೂಕು ವೈಧ್ಯಾಧಿಕಾರಿ ಡಾ: ಸೊಫಿಯಾ ಧಾಸರಿಯವರ ದುರ್ನಡತೆ ಹಾಗೂ ಇವರನ್ನು ಬೇರೆಡೆ ವರ್ಗಾವಣೆ ಮಾಡುವ ಕುರಿತು ತಾಲ್ಲೂಕು ಆರೋಗ್ಯ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ಮಾಡಲಾಯಿತು. https://ainlivenews.com/president-actress-hebbas-beauty-is-a-hit-with-fans-photos-go-viral/ ಕ ರ ವೇ ತಾಲ್ಲೂಕು ಅಧ್ಯಕ್ಷ ಕಲ್ಲಪ್ಪ ಹರಕುಣಿ ಮಾಡನಾಡಿ, ತಾಲ್ಲೂಕು ವೈಧ್ಯಾಧಿಕಾರಿಗಳು ತಾಲ್ಲೂಕು ಆರೋಗ್ಯ ಆಸ್ಪತ್ರೆಯಲ್ಲಿ ಯಾವ ಯಾವ ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಕೇಳಿದರೆ. ಮಾಹಿತಿ ಹಕ್ಕಿನಲ್ಲಿ ಕೇಳಿ ಎಂಬ ಉಡಾಪೆ ಉತ್ತರ ನೀಡುತ್ತಾರೆ.ಅದಕ್ಕೆ ಶಾಸಕ ಎಂ ಆರ್ ಪಾಟೀಲ ಅವರನ್ನೆ ಕೇಳಿ ಎಂದು ಹಾರಿಕೆ ಉತ್ತರ ನೀಡುತ್ತಾರೆ.ಹಾಗೂ ಅವರು ನಾಲ್ಕು ಕಡೆ ಇನ್ ಚಾರ್ಜ ಇರುವದರಿಂದ ಇವರು ಬರುವ ಹೋಗುವ ಮಾಹಿತಿ ಸಹಿತ ರೋಗಿಗಳಿಗಾಲಿ ಸಾರ್ವಜನಿಕರಿಗಾಗಲಿ ಮಾಹಿತಿ ಇರುವದಿಲ್ಲ ಇವರು ತರ ಮಾಡುತ್ತಿರುವದರಿಂದ ಆಸ್ಪತ್ರೆಗೆ ಬರುವವರಿಗೆ ತೊಂದರೆ ಆಗುತ್ತಿದೆ. ಇವರನ್ನು ಬೇರೆಡೆ ವರ್ಗಾವಣೆ ಮಾಡಿ…

Read More

ಬೆಂಗಳೂರು:- ಮಾ.9 ರಂದು ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, 3 ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತ ಆಗಿದೆ. https://ainlivenews.com/criticism-of-mohammed-shami-for-not-following-fasting-rules-harbhajan-singh-stands-behind-the-bowler/ ನಮ್ಮ ಮೆಟ್ರೋ ನಿಗಮವು ಅಂದು ನೇರಳ ಮಾರ್ಗದಲ್ಲಿ ಮಾಗಡಿ ರಸ್ತೆ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿಯನ್ನು ಬೆಳಿಗೆ 07:00 ರಿಂದ 10:00 ಗಂಟೆಯವರೆಗೆ (ಮೂರು ಗಂಟೆಗಳ ಕಾಲ) ಕೈಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮಾಗಡಿ ರಸ್ತೆ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ಯಾಣಗಳ ನಡುವಿನ ಮೆಟ್ರೋ ಸೇವೆಗಳನ್ನು ರದ್ದುಪಡಿಸಲಾಗುತ್ತದೆ ಎಂದು ತಿಳಿಸಿದೆ. ಅವಧಿಯಲ್ಲಿ ಕಬ್ಬನ್ ಪಾರ್ಕ್, ಡಾ. ಬಿ.ಆರ್. ಅಂಬೇಡ್ಕರ್ ನಿಲ್ದಾಣ, ವಿಧಾನಸೌಧ, ಸ‌ರ್.ಎಂ ವಿಶ್ವೇಶ್ವರಯ್ಯ ನಿಲ್ದಾಣ, ಸೆಂಟ್ರಲ್ ಕಾಲೇಜು, ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ (ನೇರಳೆ ಮಾರ್ಗ) ಮತ್ತು ಕ್ರಾಂತಿವೀರ ಸಂಗೋಳಿ ರಾಯಣ್ಣ ರೈಲು ನಿಲ್ದಾಣಗಳು ಮುಚ್ಚಲಾಗಿರುತ್ತದೆ ಎಂದು ಮಾಹಿತಿ ನೀಡಿದೆ. ಬೆಳಗ್ಗೆ 10.00 ಗಂಟೆಯವರೆಗೆ ಈ ರದ್ದತಿಯ ಕಾರಣದಿಂದಾಗಿ, ಕ್ಯೂಆರ್ ಟಿಕೆಟ್‌ಗಳ ಖರೀದಿಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ನೇರಳೆ ಮಾರ್ಗದಲ್ಲಿನ ನಾಡಪ್ರಭು ಕೆಂಪೇಗೌಡ ನಿಲ್ದಾಣ,…

Read More

ಬೆಂಗಳೂರು:- ಚಿನ್ನ ಅಕ್ರಮ ಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕು ಮಾಡಿದ್ದು, ನಟಿಯ ಟ್ರಾವೆಲ್ ಹಿಸ್ಟರಿ ಬಟಾ ಬಯಲಾಗಿದೆ. https://ainlivenews.com/what-is-the-reason-for-celebrating-international-womens-day-on-march-8-here-is-the-history/ ದುಬೈನಿಂದ  ₹12 ಕೋಟಿ ಮೌಲ್ಯದ 14.8 ಕೇಜಿ ತೂಕದ ಚಿನ್ನದ ಬಿಸ್ಕೆಟ್‌ ಹಾಗೂ ಗಟ್ಟಿಗಳ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ 14 ದಿನ ನ್ಯಾಯಾಂಗ ಬಂಧನದಲ್ಲಿರುವ ರಾಜ್ಯ ಪೊಲೀಸ್ ಗೃಹ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್ ಅವರ ಮಲಮಗಳು ಮತ್ತು ಚಲನಚಿತ್ರ ನಟಿ ರನ್ಯಾ ರಾವ್‌ ಟ್ರಾವೆಲ್‌ ಹಿಸ್ಟರಿಯೇ ಕುತೂಹಲ ಮೂಡಿಸಿದೆ. ಕಳೆದೊಂದು ವರ್ಷದಿಂದ 40 ಬಾರಿ ದುಬೈ ಪ್ರವಾಸ ಮಾಡಿದ್ದಾಳೆ. ಈಕೆ ವಿಮಾನ ನಿಲ್ದಾಣದ ವಲಸೆ ವಿಭಾಗದಲ್ಲಿ ಫ್ರಿಕ್ವೆಂಟ್ ಟ್ರಾವೆಲರ್ ಅಂತ ನೋಂದಣಿಯೂ ಆಗಿದ್ದಾಳೆ. ಫ್ರಿಕ್ವೆಂಟ್ ಟ್ರಾವೆಲರ್ ಅಂದ್ರೆ ನಿರಂತರವಾಗಿ ವಿದೇಶ ಪ್ರಯಾಣ ಮಾಡೋರು ಅಂತ ಪರಿಗಣಿಸಿದ್ದಾರೆ. ಆದನ್ನೇ ರನ್ಯಾ ಬಂಡವಾಳ ಕೂಡ ಮಾಡಿಕೊಂಡಿದ್ದಾಳೆ. ಯೂರೋಪ್, ಅಮೆರಿಕ, ದುಬೈ ಎಲ್ಲವನ್ನೂ ಸುತ್ತಾಟ ಮಾಡಿದ್ದಾಳೆ.

Read More

ಧಾರವಾಡ: ಐಎಮ್ ಏ ಮಹಿಳಾ ವೈದ್ಯರಿಂದ ಮಹಿಳಾ ದಿನಾಚರಣೆ ಅಂಗವಾಗಿ ಆರೋಗ್ಯ ನಡಿಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಗರದ ಕೆಸಿಡಿ ಕಾಲೇಜ್ ಮೈದಾನದಿಂದ ಕಲಾಭವನ ವರೆಗೆ ಮಹಿಳೆರಿಂದ ನಡಿಗೆ ಕಾರ್ಯಕ್ರಮ ನಡೆದಿದೆ. https://ainlivenews.com/what-is-the-reason-for-celebrating-international-womens-day-on-march-8-here-is-the-history/ ಈ ಕಾರ್ಯಕ್ರಮಕ್ಕೆ ನಗರದ ವಿವಿಧ ಕಾಲೇಜ್ ಗಳಿಂದ ಸಾಥ್ ನೀಡಲಾಗಿತ್ತು. ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಂದ ಆರೋಗ್ಯ ನಡಿಗೆ ಕಾರ್ಯಕ್ರಮ ಕ್ಕೆ ಬಲೂನ್ ಹಾರಿ ಬಿಡುವ ಮೂಲಕ ಚಾಲನೆ ಕೊಟ್ಟಿದ್ದಾರೆ. ಸುಮಾರು ನೂರಕ್ಕು ಹೆಚ್ಚು ಮಹಿಳಾ ವೈದ್ಯರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಜಿಲ್ಲಾಧಿಕಾರಿ ದಿವ್ಯಪ್ರಭು ಹಾಗೂ ಡಿಎಚ್ ಓ ಸೇರಿ‌ದಂತೆ ಅನೇಕ ಹಿರಿಯ ವೈದ್ಯರು ಭಾಗಿಯಾಗಿದ್ದರು.

Read More

ಕಲಬುರಗಿ:- ರಾಜ್ಯ ಸರ್ಕಾರದ ಬಹುನೀರಿಕ್ಷಿತ ಕಲ್ಯಾಣ ಪಥ ರಸ್ತೆ ನಿರ್ಮಾಣ ಯೋಜನೆಗೆ ಡಿಸಿಎಂ ಡಿಕೆಶಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಚಾಲನೆ ಕೊಡಲಿದ್ದಾರೆ. https://ainlivenews.com/annoyed-by-fake-journalists-doctor-files-complaint-with-police/ ಗ್ರಾಮೀಣ ಭಾಗದ ಹೊಸ ರಸ್ತೆ ನಿರ್ಮಾಣ ಯೋಜನೆಗೆ ಇಂದು ಚಾಲನೆ ಸಿಗಲಿದ್ದು, ಯೋಜನೆಯಡಿ ಕಲ್ಯಾಣ ಕರ್ನಾಟಕದ ಹಳ್ಳಿಗಳ ರಸ್ತೆ ನಿರ್ಮಾಣ ಆಗಲಿದೆ. ಕೆಕೆಆರ್ ಡಿಬಿಯ ೧ ಸಾವಿರ ಕೋಟಿಯ ಯೋಜನೆ ಇದಾಗಿದ್ದು, ಮೊದಲ ವರ್ಷ 1100 ಕಿಲೋ ಮೀಟರ್ ರಸ್ತೆ ನಿರ್ಮಾಣ ಗುರಿ ಹೊಂದಲಾಗಿದೆ. ಕಲಬುರಗಿ ಜಿಲ್ಲೆ ಜೆವರ್ಗಿ ಪಟ್ಟಣದಲ್ಲಿ ಇಂದು ಕಾರ್ಯಕ್ರಮ ಆಯೋಜನೆ ಗೊಂಡಿದೆ. ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕದ ಎಲ್ಲಾ ಸಚಿವರು ಭಾಗಿಯಾಗೋ ನೀರಿಕ್ಷೆ ಇದೆ. ಮಂಡಿ ನೋವಿನ ಹಿನ್ನಲೆ ಸಿಎಂ ಸಿದ್ದರಾಮಯ್ಯ ಗೈರಾಗೋ ಸಾಧ್ಯತೆ ಇದೆ ಎನ್ನಲಾಗಿದೆ.

Read More

ವಿಜಯಪುರ:- ಪತ್ರಕರ್ತರೆಂದು ಹೇಳಿಕೊಂಡು ಬಂದು ನಮಗೆ ಕೆಲಸಕ್ಕೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ ವೈದ್ಯರು ಪ್ರತಿಭಟನೆ ನಡೆಸಿ ಸಿಂದಗಿ ಠಾಣೆಯಲ್ಲಿ ದೂರು ನೀಡಿದರು. https://ainlivenews.com/belgaum-mechanic-hangs-himself-inside-a-bus-for-not-changing-duty/ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಾಸ್ಪತ್ರೆಯ ವೈದ್ಯರು ಇಂದು ಸಿಂದಗಿ ಪೋಲಿಸ್ ಠಾಣೆ ಮುಂಭಾಗ ನಕಲಿ ಪತ್ರಕರ್ತರಿಂದ ನಮಗೆ ಸಮಸ್ಯೆ ಉಂಟಾಗುತ್ತಿದೆ. ನಾಲ್ಕೈದು ಜನ ಪತ್ರಕರ್ತರೆಂದು ಹೇಳಿಕೊಂಡು ಬಂದು ಸಮಸ್ಯೆ ಮಾಡುತ್ತಿದ್ದಾರೆ. ಮಹಿಳಾ ಸಿಬ್ಬಂದಿಗಳಿಗೂ ರಾತ್ರೀ ಹೊತ್ತಿನಲ್ಲಿ ಕರೆ ಮಾಡುತ್ತಿದ್ದಾರೆ, ಅಂತವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ವೈದ್ಯ ಸಾಯಬಣ್ಣ ಗುಣಕಿ ಹೇಳಿದರು…

Read More

ಬೆಳಗಾವಿ:- ಡ್ಯೂಟಿ ಬದಲಿಸದ್ದಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಲ್ಲೇ ಮೆಕ್ಯಾನಿಕ್ ಓರ್ವರು ನೇಣಿಗೆ ಶರಣಾದ ಘಟನೆ ಬೆಳಗಾವಿಯ ಡಿಪೋ 1ರಲ್ಲಿ ಅಳ್ನಾವರ ಬೆಳಗಾವಿ ಬಸ್ ನಲ್ಲಿ ಜರುಗಿದೆ. https://ainlivenews.com/khans-dominance-in-movies-continues-actress-khushboo-is-fed-up/ ಬೆಳಗಾವಿಯ ಹಳೆ ಗಾಂಧಿನಗರದ ನಿವಾಸಿ ಕೇಶವ ಕಮಡೊಳಿ (57) ಆತ್ಮಹತ್ಯೆ ಮಾಡಿಕೊಂಡ ಮೆಕ್ಯಾನಿಕ್. ಬಸ್ ವಾಶಿಂಗ್ ನಲ್ಲಿ ಕೆಲಸ ಮಾಡ್ತಿದ್ದ ಕೇಶವ್ ಗೆ ಪಂಚರ್ ತೆಗೆಯುವ ಕೆಲಸ ಕೊಡಲಾಗಿತ್ತು. ಬೆನ್ನು ನೋವಿದ್ರೂ ಪಂಚರ್ ತೆಗೆಯಲು ಅಧಿಕಾರಿಗಳು ಹೇಳಿದ್ದರು. ಈ ಬಗ್ಗೆ ಡಿಪೋ ಮ್ಯಾನೇಜರ್ ಲಿಂಗರಾಜ ಲಾಠಿ, ಸಹಾಯಕ ಕಾರ್ಯ ಅಧೀಕ್ಷಕ ಅನಿಲ್ ಬಾಂದೇಕರ್ ಅವರಿಗೆ ಕುಟುಂಬಸ್ಥರು ಮನವಿ ಮಾಡಿದ್ದರು. ಇಷ್ಟಾದರೂ ಡ್ಯೂಟಿ ಬದಲಿಸದ್ದಕ್ಕೆ ಕೆಲಸದ ಒತ್ತಡ ತಡೆದುಕೊಳ್ಳಲು ಆಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳ ವಿರುದ್ಧ ಮೃತ ಕೇಶವ ವಿರುದ್ಧ ಕುಟುಂಬಸ್ಥರ ಅಕ್ರೋಶ ಹೊರ ಹಾಕಿದ್ದಾರೆ. ಸ್ಥಳಕ್ಕೆ ಮಾರ್ಕೆಟ್ ಠಾಣೆ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದು, ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More

ಸಿನಿಮಾಗಳಲ್ಲಿ ಖಾನ್​​ಗಳ ಪಾರುಪತ್ಯವೇ ಮುಂದುವರಿದಿದೆ ನಟಿ ಖುಷ್ಬೂ ಸುಂದರ್ ಬೇಸರ ಹೊರ ಹಾಕಿದ್ದಾರೆ. https://ainlivenews.com/who-is-the-person-that-rocking-star-yash-calls-boss/ ಭಾರತೀಯ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಿಗೆ ಹೋಲಿಸಿದರೆ ಪುರುಷ ಪ್ರಧಾನ ಸಿನಿಮಾಗಳು ಹೆಚ್ಚು ಕಲೆಕ್ಷನ್ ಮಾಡುತ್ತವೆ. ಹೀರೋಗಳ ಆರಾಧನೆ ಇಲ್ಲಿ ಹೆಚ್ಚು. ಇದು ಬದಲಾಗಬೇಕು ಎಂಬುದು ಖುಷ್ಬೂ ಸುಂದರ್ ಅಭಿಪ್ರಾಯ. ಇದು ಬದಲಾಗಲು ಸಾಕಷ್ಟು ಸಮಯ ಬೇಕಿದೆ ಎಂಬ ಅಭಿಪ್ರಾಯವನ್ನು ಅವರು ಹೊರಹಾಕಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳು ಹಿಟ್ ಆಗಲು ಅವಕಾಶವಿಲ್ಲ. ಕಾಲ ಬದಲಾಗಿದೆ ಎಂದು ಹೇಳಲು ನಾನು ಸಿದ್ಧನಿಲ್ಲ. ನಾವು ವಿಚಾರಗಳನ್ನು ಒಪ್ಪಿಕೊಲ್ಳಬೇಕು. ‘ಅರಮನೈ 4’, ‘ಮೂಗುತ್ತಿ ಅಮ್ಮ 2’ ರೀತಿಯ ಮಹಿಳಾ ಪ್ರಧಾನ ಸಿನಿಮಾಗಳು ಎಲ್ಲೋ ಅಪರೂಪಕ್ಕೊಮ್ಮೆ ಬರುತ್ತವೆ’ ಎಂದು ಅವರು ಹೇಳಿದ್ದಾರೆ. ಬೆಳ್ಳಿಪರದೆ ಅನ್ನೋದು ಖಾನ್​, ಸೂಪರ್​ಸ್ಟಾರ್​ಗಳದ್ದು. ನಾವು ಇನ್ನೂ ಸಾಕಷ್ಟು ಕಾಯಬೇಕಿದೆ’ ಎಂದು ಖುಷ್ಬೂ ಹೇಳಿದ್ದಾರೆ. ಈ ಮೂಲಕ ಮಹಿಳಾ ಪ್ರಧಾನ ಸಿನಿಮಾಗಳು ರಿಲೀಸ್ ಆಗಿ ಸೂಪರ್ ಹಿಟ್ ಆಗಲು ಇನ್ನೂ ಹೆಚ್ಚಿನ ಸಮಯದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Read More

ಯಶ್ ಅವರನ್ನು ಅಭಿಮಾನಿಗಳು ಬಾಸ್ ಎಂದು ಕರೆಯುತ್ತಾರೆ. ಆದರೆ, ಯಶ್ ಅವರು ಒಂದು ವ್ಯಕ್ತಿಗೆ ಬಾಸ್ ಎಂದು ಕರೆಯುತ್ತಾರೆ. ಅವರು ಯಶ್ ಜೀವನದಲ್ಲಿ ತುಂಬಾನೇ ಪ್ರಮುಖ ಪಾತ್ರವಹಿಸಿದ್ದಾರೆ. https://ainlivenews.com/wpl-2025-gujarat-win-over-delhi-capitals/ ಯಶ್ ಅವರ ಜೀವನದಲ್ಲಿ ಅವರ ತಂದೆ-ತಾಯಿ ಸಾಕಷ್ಟು ಪಾತ್ರವಹಿಸಿದ್ದಾರೆ. ಯಶ್ ತಂದೆ ಈ ಮೊದಲು ಬಸ್​ ಡ್ರೈವರ್ ಆಗಿದ್ದರು. ಯಶ್ ಅವರು ತಂದೆಯನ್ನು ಸಾಕಷ್ಟು ಗೌರವಿಸುತ್ತಾರೆ. ಅವರು ತಂದೆಗೆ ಬಾಸ್ ಎಂದು ಈ ಮೊದಲು ಕರೆದಿದ್ದರು. ಆ ಸಂದರ್ಭದ ವಿಡಿಯೋ ಈಗ ವೈರಲ್ ಆಗಿದೆ. ಮಗ ಹಾಳಾಗಬಾರದು ಅನ್ನೋದು ತಂದೆಯ ಆಸೆ. ಗೋಲಿ ಆಡಿ ಬೆಳೆದವರು ನಾವು. ಇದನ್ನು ಆಡಬಾರದು ಎಂಬುದು ನನ್ನ ತಂದೆಯ ಉದ್ದೇಶ ಆಗಿತ್ತು. ಹಾಗೆ ಆದ್ರೆ ಮಗಳ ಹಾಳಾಗ್ತಾನೆ ಎಂಬ ಭಯ ಅವರದ್ದಾಗಿತ್ತು. ನನ್ನ ತಂದೆಯನ್ನು ಫ್ರೆಂಡ್ಸ್ ಟೈಗರ್ ಎಂದೇ ಕರೆಯುತ್ತಾ ಇದ್ದರು. ಒಂದು ದಿನ ತಂದೆ ಡ್ಯೂಟಿಗೆ ಹೋಗಿದ್ದರು. ನಾನು ಗೋಲಿ ಆಡ್ತಾ ಇದ್ದೆ. ಸಾಕಷ್ಟು ಗೆಲ್ಲುತ್ತಾ ಇದ್ದೆ. ಆಗ ನನಗೆ ಏಟು ಬಿತ್ತು, ನೋಡಿದರೆ…

Read More

2025ರ WPL ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗುಜರಾತ್ ಗೆ ರೋಚಕ ಜಯ ಸಿಕ್ಕಿದೆ. https://ainlivenews.com/big-relief-rape-case-filed-against-raghaveshwara-srila/ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್‌ ಹೊಡೆಯಿತು. ಸವಾಲಿನ ಗುರಿಯನ್ನು ಬೆನ್ನಟ್ಟಿದ ಗುಜರಾತ್‌ 19.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 178 ರನ್‌ ಹೊಡೆದು ಗೆಲುವು ಸಾಧಿಸಿತು. ಗುಜರಾತ್ ಪರ ಅಜೇಯ ಹರ್ಲೀನ್ ಡಿಯೋಲ್‍ 49 ಎಸೆತಗಳಲ್ಲಿ 1 ಸಿಕ್ಸರ್‌, 9 ಬೌಂಡರಿ ನೆರವಿನಿಂದ 70 ರನ್‌ ಕಲೆಹಾಕಿ ತಂಡವನ್ನು ಗೆಲುವಿನ ದಡ ತಲುಪಿಸಿದರು. ಬೆತ್ ಮೂನಿ 35 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 44 ರನ್‌ ಹೊಡೆದು ಔಟಾದರು. ಗುಜರಾತ್‌ 4 ರನ್‌ಗಳಿದ್ದಾಗ ತನ್ನ ಮೊದಲ ವಿಕೆಟ್‌ ಕಳೆದುಕೊಂಡಿತ್ತು. ಆರಂಭದಲ್ಲೇ ವಿಕೆಟ್‌ ಕಳೆದುಕೊಂಡರೂ ಬೆತ್‌ ಮೂನಿ ಮತ್ತು ಹರ್ಲಿನ್‌ ಎರಡನೇ ವಿಕೆಟಿಗೆ 57 ಎಸೆತಗಳಲ್ಲಿ 85 ರನ್‌ ಜೊತೆಯಾಟವಾಡಿ ಚೇತರಿಕೆ ನೀಡಿದರು. ಡಿಯಾಂಡ್ರಾ ಡಾಟಿನ್ 24, ಆಶ್ಲೀ…

Read More