ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಇರುವ ತರಕಾರಿಗಳಲ್ಲಿ ಆಲೂಗಡ್ಡೆ ಕೂಡ ಒಂದು. ಆದರೆ ಅಸಮರ್ಪಕ ಶೇಖರಣೆಯಿಂದಾಗಿ ಆಲೂಗಡ್ಡೆ ಬೇಗನೇ ಕೊಳೆತು ಹೋಗುತ್ತದೆ, ಇಲ್ಲದಿದ್ದರೆ ಮೊಳಕೆಯೊಡೆಯಲು ಪ್ರಾರಂಭವಾಗುತ್ತದೆ. ಈ ಮೊಳಕೆಯೊಡೆದ ಆಲೂಗಡ್ಡೆಯನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. https://ainlivenews.com/darshan-who-was-shocked-to-see-his-girlfriend-dasa-who-patted-his-back-and-comforted-pavitra-gowda/ ಎಲ್ಲರ ಮನೆಯ ಅಡುಗೆಮನೆಯಲ್ಲೂ ಸ್ಥಾನ ಪಡೆಯುವ ತರಕಾರಿ ಒಂದಿದ್ದರೆ ಅದು ಆಲೂಗಡ್ಡೆ. ಏನೂ ಇಲ್ಲದೇ ಇದ್ದರೂ, ಕೊನೆಗೆ ರುಚಿಕರವಾಗಿ ಆಲೂಗಡ್ಡೆ ಪಲ್ಯ ಮಾಡಿದರೂ ಒಂದೊತ್ತಿನ ಊಟ ನೆಮ್ಮದಿಯಿಂದ ಆಗುತ್ತದೆ. ಆದರೆ, ಆಲೂಗಡ್ಡೆ ಮೊಳಕೆ ಒಡೆದಾಗ ಎಂದಿನ ಟೇಸ್ಟ್ ಇರೋದಿಲ್ಲ. ಅದನ್ನು ಹಾಗೇ ಬಿಟ್ಟರೆ ಕೊಳೆತು ಹೋಗುತ್ತದೆ. ಆದರೆ, ಆಲೂಗಡ್ಡೆ ಮೊಳಕೆಯೊಡೆಯದೇ ತಾಜಾವಾಗಿ ಹಲವು ದಿನಗಳ ಕಾಲ ಶೇಖರಿಸಿಡುವ ವಿಧಾನ ಇಲ್ಲಿದೆ. ಆಲೂಗಡ್ಡೆಯಿಲ್ಲದ ಅಡುಗೆ ಮನೆ ಇಲ್ಲ ಎಂದೇ ಹೇಳಬಹುದು. ಅನೇಕ ಮನೆಗಳಲ್ಲಿ ಆಲೂಗಡ್ಡೆ ಇಲ್ಲದೇ ದೈನಂದಿನ ಅಡುಗೆಯನ್ನು ಕಲ್ಪಿಸುವುದು ಕಷ್ಟ. ಇಂತಹ ಆಲೂಗಡ್ಡೆ ಮೇಲೆ ಕೆಲವೊಮ್ಮೆ ಮೊಳಗೆ ಬಂದಿರುವುದನ್ನು ನೀವು ಗಮನಿಸಿರಬಹುದು. ಆಲೂಗಡ್ಡೆಯಲ್ಲಿ ಮೊಳಕೆಯೊಡೆಯುವುದನ್ನು ತಪ್ಪಿಸಲು ಅತ್ಯುತ್ತಮ ಮಾರ್ಗವೆಂದರೆ ಅವುಗಳನ್ನು ದಾಸ್ತಾನು ಮಾಡುವುದನ್ನು ತಪ್ಪಿಸುವುದು.…
Author: AIN Author
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ನಟದರ್ಶನ್ ಹಾಗು ಪವಿತ್ರಾ ಗೌಡ 6 ತಿಂಗಳ ನಂತರ ದು ಮುಖಾಮುಖಿಯಾಗಿದ್ರು. ದರ್ಶನ್ ಕಂಡು ಪವಿತ್ರಾಗೌಡ ಭಾವುಕ, ಗೆಳತಿಯ ಬೆನ್ನು ತಟ್ಟಿ ಸಂತೈಸಿದ ದರ್ಶನ್ .ಜಾಂಇಣು ದೊರೆತ ನಂತರ ರೇಣುಕಾಸ್ವಾಮಿ ಕೊಲೆ ಆರೋಪಿಗಳು ಇಂದು ಕೋರ್ಟ್ ಗೆ ಹಾಜರ್ ಆಗಿದ್ರು. ಈ ಕುರಿತ ರಿಪೋರ್ಟ್ ತೋರಿಸ್ತೀವಿ ನೋಡಿ. https://ainlivenews.com/contractor-sachin-suicide-case-priyank-kharges-close-friend-and-five-arrested/ ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ದರ್ಶನ್ , ಪವಿತ್ರಾಗೌಡ ಸೇರಿ 17 ಜನ ರೋಪಿಗಳು ಇಂದು ಬೆಂಗಳೂರಿನ 57 ನೇ ಸಿಸಿಎಚ್ ಕೋರ್ಟ್ ಮುಂದೆ ಹಾಜರಾಗಿದ್ರು. ಹೈಕೋರ್ಟ್ನಲ್ಲಿ ಜಾಮೀನು ದೊರೆತ ಬಳಿಕ ಇದೇ ಮೊದಲ ಬಾರಿಗೆ ರೇಣುಕಾ ಸ್ವಾಮಿ ಕೊಲೆ ಆರೋಪಿಗಳೆಲ್ಲ ಒಟ್ಟಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.ಜಾಮೀನು ನೀಡುವ ಸಮಯದಲ್ಲಿ ಪ್ರತಿ ತಿಂಗಳು ಆರೋಪಿಗಳು ಕೋರ್ಟ್‌ಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಲಾಗಿತ್ತು. ಅದರಂತೆ ಶುಕ್ರವಾರ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು ಆಗಲು ದಿನಾಂಕ ನಿಗಧಿ ಮಾಡಲಾಗಿತ್ತು. ಹಾಗಾಗಿ ಇಂದು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳು ನ್ಯಾಯಾಲಯದ…
ಬೀದರ್:- ಗುತ್ತಿಗೆದಾರ ಸಚಿನ್ ಸೂಸೈಡ್ ಕೇಸ್ ಗೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ಆಪ್ತ ಸೇರಿ ಐವರು ಅರೆಸ್ಟ್ ಮಾಡಲಾಗಿದೆ https://ainlivenews.com/the-barbaric-murder-of-his-brother-was-carried-out-by-his-brother-the-accused-is-arrested/ ರಾಜು ಕಪನೂರು, ಘೊರಕ್ ನಾಥ್, ನಂದಕುಮಾರ್ ನಾಗಬುಜಂಗಿ, ರಾಮನಗೌಡಾ ಪಾಟೀಲ್, ಸತೀಶ್ ಎನ್ನುವರನ್ನು ಬಂಧಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದ ಬೀದರ್ ಗುತ್ತಿಗೆದಾರ ಸಚಿನ್ , ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರು ಸೇರಿದಂತೆ ಒಟ್ಟು 8 ಜನರ ಹೆಸರನ್ನು ಉಲ್ಲೇಖಿಸಿದ್ದರು ಎನ್ನಲಾಗಿದೆ. ಪ್ರಕರಣ ಸಂಬಂಧ ತನಿಖೆಗಾಗಿ ಬೀದರ್ ಬಂದಿರುವ ಸಿಐಡಿ ಅಧಿಕಾರಿಗಳು, ಡೆತ್ನೋಟ್ನಲ್ಲಿ ಉಲ್ಲೇಖವಾಗಿದ್ದ ಹೆಸರಿನವರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿತ್ತು. ಅದರಂತೆ ಐವರು ಇಂದು ಬೀದರ್ ರೈಲ್ವೆ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ಆದ್ರೆ, ವಿಚಾರಣೆಯಲ್ಲಿ ಸೂಕ್ತವಾದ ಉತ್ತರ ಬಾರದ ಹಿನ್ನೆಲೆಯಲ್ಲಿ ಸಿಐಡಿ, ಆರೋಪಿಗಳನ್ನು ಬಂಧಿಸಿದೆ. ಬಂಧಿತರನ್ನು ಬೀದರ್ ಜೆಎಂಎಫ್ಸಿ ಕೋರ್ಟ್ ಜಡ್ಜ್ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರು:- ನಗರದ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯ ಅನ್ವರ್ ಲೇಔಟ್ನಲ್ಲಿ ಅಣ್ಣನಿಂದಲೇ ತಮ್ಮನ ಬರ್ಬರ ಕೊಲೆ ನಡೆದಿರುವ ಘಟನೆ ಜರುಗಿದೆ. https://ainlivenews.com/vanasri-jayadeva-jagadgurus-8th-punyasmarana-srigala-pranava-mantapa-circle-inauguration-on-january-12/ 28 ವರ್ಷದ ಅಕ್ರಂ ಬೇಗ್ ಹತ್ಯೆಗೈದ ಸೋದರ ಎನ್ನಲಾಗಿದೆ. ಘಟನೆ ಕುರಿತು ಅಕ್ರಂ ಬೇಗ್ ತಾಯಿ ನೀಡಿದ್ದ ದೂರು ಸಂಬಂಧ ಆರೋಪಿ ಅಕ್ಬರ್ ಬೇಗ್ನನ್ನು ಕೆಜಿ ಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಾಯಿ ಅಮ್ರಿಜ್ ಬೇಗ್ಗೆ ಮೂವರು ಮಕ್ಕಳು. ಹಿರಿಯ ಪುತ್ರ ಅಕ್ಬರ್ ಮತ್ತು ಮಗಳು ಬೇರೆ ಕಡೆ ವಾಸವಿದ್ದರು. ತಾಯಿಯ ಜೊತೆ ಕಿರಿಯ ಪುತ್ರ ಅಕ್ರಂ ಬೇಗ್ ಒಬ್ಬನೇ ವಾಸವಿದ್ದ. ಅಕ್ರಂ ಪ್ರತಿದಿನ ಕುಡಿದು ಬಂದು ತಾಯಿಗೆ ಹಿಂಸೆ ನೀಡುತ್ತಿದ್ದ. ಮೊನ್ನೆ ರಾತ್ರಿಯೂ ಕುಡಿದು ಬಂದು ತಾಯಿ ಜತೆ ಜಗಳ ಮಾಡಿದ್ದಾನೆ. ಇದೇ ವೇಳೆ ಹಿರಿಯ ಪುತ್ರ ಅಕ್ಬರ್ ಮನೆಗೆ ಬಂದಿದ್ದ. ಸಹೋದರನ ಜಗಳದಿಂದ ಬೇಸತ್ತು ಅಡುಗೆ ಮನೆಯಲ್ಲಿದ್ದ ಚಾಕು ತಂದು ಅಕ್ರಂ ಮೇಲೆ ಹಲ್ಲೆ ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಅಕ್ರಂ ಮೃತಪಟ್ಟಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. https://ainlivenews.com/final-schedule-for-2nd-puc-sslc-exams-announced/ ಸಿಲಿಕಾನ್ ಸಿಟಿ ಬೆಂಗಳೂರಿನ “ಮಲ್ಲೇಶ್ವರಂ, ಎಂ.ಡಿ.ಬ್ಲಾಕ್, ವೈಯಾಲಿಕಾವಲ್, ಈಜುಕೊಳ ವಿಸ್ತರಣೆ, ಕೋದಂಡರಾಮಪುರ, ರಂಗನಾಥಪುರ, ಬಿಎಚ್‌ಇಎಲ್, ಐಐಎಸ್‌ಸಿ ಬ್ರೈನ್ ಸೆಂಟರ್, ಅಂಬೇಡ್ಕರ್ ನಗರ, ಯಶವಂತ ಪುರ ಪೈಪ್‌ಲೈನ್ ರಸ್ತೆ, ಎಲ್‌ಎನ್ ಕಾಲೋನಿ, ಸುಬೇದ್ರಪಾಳ್ಯ, ದಿವಾನರ ಪಾಳ್ಯ, ಕೆ.ಎನ್. ವಿಸ್ತರಣೆ, ಯಶವಂತಪುರ 1ನೇ ಮುಖ್ಯರಸ್ತೆ, ಎಚ್.ಎಂ.ಟಿ. ಮುಖ್ಯ ರಸ್ತೆ, ಮಾಡೆಲ್ ಕಾಲೋನಿ, ಶರೀಫ್ ನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ಕರೆಂಟ್ ಇರುವುದಿಲ್ಲ. ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.
ಕೋಲಾರ:- ಕೋಲಾರ ಜಿಲ್ಲೆಯಾದ್ಯಂತ ಇಂದು ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದೆ. ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕತಿರುಪತಿಯಲ್ಲಿ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದೆ. https://ainlivenews.com/rain-alert-heavy-rain-for-two-days-in-karnataka-after-sankranti/ ಚಿಕ್ಕತಿರುಪತಿಯ ವೆಂಕಟರಮಣಸ್ವಾಮಿ ದೇಗುಲದಲ್ಲಿ ವೈಭವ ಮನೆ ಮಾಡಿದ್ದು, ವಿವಿಧ ಪುಷ್ಪಾಲಂಕಾರದಿಂದ ಬಾಲಾಜಿ ಕಂಗೊಳಿಸುತ್ತಿದ್ದಾನೆ. ಶ್ರೀನಿವಾಸನ ದರ್ಶನಕ್ಕೆ ಭಕ್ತಸಾಗರ ಹರಿದು ಬರುತ್ತಿದೆ.- ಗೋವಿಂದನ ನಾಮಸ್ಮರಿಸಿ ದರ್ಶನ ಪಡೆದು ಭಕ್ತಗಣ ಪುಳಕಿತರಾಗುತ್ತಿದ್ದಾರೆ. ಸ್ವರ್ಗ ಪ್ರಾಪ್ತಿಯ ನಂಬಿಕೆಯಿರುವ ವೈಕುಂಠ ದ್ವಾರದಿಂದ ಭಕ್ತರು ನಿರ್ಗಮನ ಮಾಡಿದ್ದು, ಒಂದು ಲಕ್ಷಕ್ಕೂ ಅಧಿಕ ಭಕ್ತಾಧಿಗಳು ಇಲ್ಲಿಗೆ ಆಗಮಿಸುವ ನಿರೀಕ್ಷೆ ಇದೆ.
ಬೆಂಗಳೂರು:- ಸಂಕ್ರಾಂತಿ ಬಳಿಕ ಕರ್ನಾಟಕದಲ್ಲಿ ಎರಡು ದಿನ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದ್ದಾರೆ. https://ainlivenews.com/vaikuntha-ekadashi-celebrations-weeded-in-tirupati-special-prayers-from-devotees-dignitaries/ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಕೊಡಗು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಮಲೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಹೆಚ್ಚಿನ ಬದಲಾವಣೆ ಇಲ್ಲ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಒಣಹವೆ ಮುಂದುವರೆಯಲಿದ್ದು, ಚಳಿ ಇರಲಿದೆ. ಬೀದರ್ನಲ್ಲಿ 10.0 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್ಎಎಲ್ನಲ್ಲಿ 28.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 14.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 28.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 14.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 28.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 14.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 27.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 14.3…
ಆಂಧ್ರಪ್ರದೇಶ:- ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ವೈಕುಂಠ ಏಕಾದಶಿ ಸಂಭ್ರಮ ಕಳೆಗಟ್ಟಿದ್ದು, ಸಾವಿರಾರು ಭಕ್ತರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಧನ್ಯತಾ ಭಾವ ಅನುಭವಿಸಿದರು. https://ainlivenews.com/anonymous-letter-to-the-police-claiming-a-friendly-name-file-a-complaint/ ವೈಕುಂಠ ಏಕಾದಶಿ ಪ್ರಯುಕ್ತ ರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹಲವು ಗಣ್ಯರೂ ಕೂಡ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಯೋಗ ಗುರು ಬಾಬಾ ರಾಮದೇವ್ ಅವರು ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವೈಕುಂಠ ಏಕಾದಶಿ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಿದರು. ಮಧ್ಯರಾತ್ರಿಯಿಂದಲೇ ಶ್ರೀವಾರಿ ದೇವಸ್ಥಾನದಲ್ಲಿ ವೈಕುಂಠದ ದ್ವಾರಗಳನ್ನು ತೆರೆಯಲಾಯಿತು. ಮಧ್ಯರಾತ್ರಿ 12.05ಕ್ಕೆ ವೇದ ವಿದ್ವಾಂಸರ ಮಂತ್ರ ಪಠಣದ ನಡುವೆ ತಿರುಪ್ಪಾವೈ ಪಾಸುರಗಳೊಂದಿಗೆ ದೇವಾಲಯದ ಚಿನ್ನದ ದ್ವಾರಗಳನ್ನು ತೆರೆಯಲಾಯಿತು. ಮಧ್ಯರಾತ್ರಿ 12.25ಕ್ಕೆ ತಿರುಮಲ ವೈಕುಂಠ ದ್ವಾರದಲ್ಲಿ ಅರ್ಚಕರು ಪೂಜೆ ಮತ್ತು ಆರತಿಗಳನ್ನು ನೆರವೇರಿಸಿದರು. ನಂತರ, ಅವರು ತೋಮಲ ನಕ್ಷೆಯನ್ನು ಪ್ರದಕ್ಷಿಣೆ ಹಾಕುವ ಮೂಲಕ ಗರ್ಭಗುಡಿಯನ್ನು ತಲುಪಿದರು. ಶ್ರೀವಾರಿ ಮೂಲವಿರಟ್ಟು ದೇವಾಲಯಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ವಿಶೇಷ…
ಮೈಸೂರು:- ಸ್ನೇಹಮಯಿ ಹೆಸರು ಹೇಳಿಕೊಂಡು ಪೊಲೀಸರಿಗೆ ಅನಾಮಧೇಯ ಪತ್ರ ಬರುತ್ತಿದ್ದು, ಇದೀಗ ದೂರು ದಾಖಲಾಗಿದೆ. https://ainlivenews.com/vaikuntha-ekadashi-celebration-devotees-gather-in-temples-for-thimpappas-darshan-in-bangalore/ ಜಯಪುರ ಪೊಲೀಸ್ ಠಾಣೆಗೆ ಗಿರೀಶ್ ಎಂಬುವವರ ವಿರುದ್ಧ ದೂರು ಹೋಗಿದೆ. ಅಸಲಿಗೆ ಗಿರೀಶ್ ಯಾರು ಎಂಬುದೇ ಸ್ನೇಹಮಹಿ ಕೃಷ್ಣಗೆ ಗೊತ್ತಿಲ್ಲ. ವಿಚಾರಣೆ ಹೋದಾಗಲೇ ತಮ್ಮ ಹೆಸರು ದುರ್ಬಳಕೆಯಾಗಿರುವುದು ಸ್ನೇಹಮಹಿ ಕೃಷ್ಣಗೆ ಗೊತ್ತಾಗಿದೆ. ಸಂಚಾರಿ ಪೊಲೀಸರು ವಾಹನಗಳನ್ನ ತಪಾಸಣೆ ಮಾಡುವಾಗ ಸಿಕ್ಕಿ ಬಿದ್ದರೆ ನನ್ನ ಹೆಸರು ಹೇಳಿ ಶುಲ್ಕ ಕಟ್ಟದೇ ಹೋಗುತ್ತಿದ್ದಾರೆ. ಮೈಸೂರಿನ ಅರ್ಜುನ್ ಗೂರುಜಿ ವಿರುದ್ಧವು ದೂರು ಹೋಗಿದೆ. ನನ್ನ ಹೆಸರನ್ನ ಯಾಕೆ ಬಳಸಿಕೊಳ್ಳುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಅವರ ವೈಯಕ್ತಿಕ ವಿಚಾರಕ್ಕೆ ನನಗೆ ಕೆಟ್ಟ ಹೆಸರು ತರುಲು ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ಕ್ರಮ ತೆಗೆದುಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಬೆಂಗಳೂರು:- ಬೆಂಗಳೂರು: ರಾಜ್ಯದಾದ್ಯಂತ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದೆ. ನಗರದ ಹಲವು ವಿಷ್ಣು, ವೆಂಕಟೇಶ್ವರ, ಗೊವಿಂದನ ದೇವಾಲಯಗಳಲ್ಲಿ ಮುಂಜಾನೆ 4 ಗಂಟೆಯಿಂದಲೇ ಸುಪ್ರಭಾತ ಸೇವೆ ವಿಶೇಷ ಪೂಜೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ದೇವಾಲಯಗಳಿಗೆ ಭಕ್ತರ ಸಾಗರ ಹರಿದು ಬರುತ್ತಿದೆ. https://ainlivenews.com/6-naxals-who-surrendered-before-the-cm-were-shifted-to-parappas-agrahara-jail/ ರಾಜ್ಯಾದ್ಯಂತ ಸಾವಿರಾರು ದೇಗುಲದಲ್ಲಿ ಪಂಚಾಭಿಷೇಕ, ಪುಷ್ಪಭಿಷೇಕ ಸೇರಿದಂತೆ ವಿವಿಧ ಪೋಜೆ ನಡೆಯುತ್ತಿದ್ದು, ವಿಶೇಷ ಅಲಂಕಾರ ಮಾಡಿ ಭಕ್ತದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನೂ ಬೆಂಗಳೂರಿನ ದೇವಸ್ಥಾನಗಳಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರ ದಂಡೇ ಹರಿದು ಬರುತ್ತಿದ್ದು, ಇಸ್ಕಾನ್‌ನಲ್ಲಿ ರಾತ್ರಿ 11 ಗಂಟೆ ವರೆಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶುಭ ಶುಕ್ರವಾರ ವೈಕುಂಠ ಏಕಾದಶಿ ಪ್ರಯುಕ್ತ ಅಪಾರ ಸಂಖ್ಯೆಯಲ್ಲಿ ಬೆಂಗಳೂರಿನ ಹಲವು ದೇವಸ್ಥಾನಗಳಿಗೆ ಭಕ್ತರು ತೆರಳುತ್ತಿದ್ದಾರೆ. ಪ್ರಮುಖವಾಗಿ, ಬೆಂಗಳೂರಿನ ಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನ, ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಸ್ಥಾನ ಮತ್ತು ಇಸ್ಕಾನ್ ದೇವಸ್ಥಾನಕ್ಕೆ ಸಹಸ್ರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ಇಸ್ಕಾನ್ ದೇವಸ್ಥಾನದಲ್ಲಿ ನಸುಕಿನ ಜಾವ 3:45ರಿಂದಲೇ ವಿಶೇಷ ಪೂಜೆ, ಅಭಿಷೇಕ,…