Author: AIN Author

ಆಸಿಸ್ ವಿರುದ್ಧ ಐತಿಹಾಸಿಕ ಸರಣಿ ಗೆದ್ದ ಬಳಿಕ ಪಾಕಿಸ್ತಾನ್ ಕ್ಯಾಪ್ಟನ್ ರಿಜ್ವಾನ್ ಹರ್ಷ ವ್ಯಕ್ತ ಪಡಿಸಿದ್ದಾರೆ. ಪಾಕಿಸ್ತಾನ 22 ವರ್ಷಗಳ ನಂತರ ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಸರಣಿಯನ್ನು ಗೆದ್ದ ಇತಿಹಾಸ ನಿರ್ಮಿಸಿದೆ. ವಾಸ್ತವವಾಗಿ ಈ ಸರಣಿಗೂ ಮುನ್ನ ಮೊಹಮ್ಮದ್ ರಿಜ್ವಾನ್ ಅವರನ್ನು ಪಾಕ್ ತಂಡದ ಸೀಮಿತ ಓವರ್​ಗಳ ನಾಯಕನನ್ನಾಗಿ ಮಾಡಲಾಗಿತ್ತು. ಇದೀಗ ರಿಜ್ವಾನ್, ನಾಯಕನಾಗಿ ಮೊದಲ ಸರಣಿಯಲ್ಲೇ ದಾಖಲೆಯ ಗೆಲುವು ಸಾಧಿಸಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯವನ್ನು ಗೆದ್ದ ನಂತರ ಮಾತನಾಡಿದ ರಿಜ್ವಾನ್, ಪಾಕಿಸ್ತಾನ ತಂಡವನ್ನು ಅಪಾರವಾಗಿ ಹೊಗಳಿದರು. https://ainlivenews.com/burglary-entering-the-welfare-hall-two-khatarnak-thieves-arrested/ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡ ಬಳಿಕ ಮಾತನಾಡಿದ ರಿಜ್ವಾನ್, ತಮ್ಮ ಆಟಗಾರರನ್ನು ಅಪಾರವಾಗಿ ಹೊಗಳಿದರು. ಈ ಐತಿಹಾಸಿಕ ಸರಣಿ ಗೆಲುವು ನನಗೆ ಬಹಳ ವಿಶೇಷವಾದ ಕ್ಷಣವಾಗಿದೆ ಎಂದು ಹೇಳಿದರು. ಇಂದು ಇಡೀ ದೇಶದಲ್ಲೇ ಸಂಭ್ರಮ ಮನೆ ಮಾಡಿದೆ. ಕಳೆದ ಕೆಲವು ವರ್ಷಗಳಿಂದ ನಮ್ಮ ತಂಡಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಆದರೆ ಇದೀಗ ತಂಡ…

Read More

ದಾವಣಗೆರೆ:- ಮದುವೆ ಮಂಟಪಕ್ಕೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡ್ತಿದ್ದ ಇಬ್ಬರು ಕಳ್ಳರನ್ನು ದಾವಣಗೆರೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. https://ainlivenews.com/the-entire-hindu-society-should-unite-to-destroy-the-modern-bhasmasura-ct-ravi/ ಬಂಧಿತರನ್ನು ಕಿರಣ್ ನಾಯ್ಕ್, ವಿನೋದ್ ನಾಯ್ಕ್ ಎಂದು ಗುರುತಿಸಲಾಗಿದೆ. ಈ ಆರೋಪಿಗಳು ಮದುವೆ ನಡೆಯುತ್ತಿದ್ದಾಗ ಕಲ್ಯಾಣ ಮಂಟಪಕ್ಕೆ ನುಗ್ಗಿ ಕಳ್ಳತನ ಮಾಡುತ್ತಿದ್ದರು. ಇತ್ತೀಚೆಗೆ ನಿಜಲಿಂಗಪ್ಪ ಬಡಾವಣೆಯ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆಗೆ ನುಗ್ಗಿ ಕಳ್ಳತನ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಸುಮಾರು 73 ಗ್ರಾಂ ತೂಕದ ಮಾಂಗಲ್ಯ ಸರ, ಚೈನ್ ಹಾಗೂ ಒಂದು ಜೊತೆ ಚಿಕ್ಕ ಜುಮುಕಿ ಕಳ್ಳತನ ಮಾಡಿಕೊಂಡು ಬಂದಿದ್ದರು. ಈ ಸಂಬಂಧ ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Read More

ಚಿಕ್ಕಮಗಳೂರು:- ಆಧುನಿಕ ಭಸ್ಮಾಸುರನನ್ನ ನಾಶ ಮಾಡಲು ಇಡೀ ಹಿಂದೂ ಸಮಾಜವೇ ಒಂದಾಗಬೇಕು ಎಂದು ಸಿ.ಟಿ.ರವಿ ಹೇಳಿದ್ದಾರೆ. ಈ ಸಂಬಂಧ ಧರ್ಮ ಸಭೆಯಲ್ಲಿ ಮಾತನಾಡಿದ ಅವರು, ಆಧುನಿಕ ಭಸ್ಮಾಸುರನನ್ನ ನಾಶ ಮಾಡೋದಕ್ಕೆ ಒಬ್ಬ ಮೋಹಿನಿ ಸಾಲಲ್ಲ, ಇಡೀ ಹಿಂದೂ ಸಮಾಜವೇ ಒಂದಾಗಬೇಕು ಎಂದು ದತ್ತಮಾಲಾ ಧರ್ಮ ಸಭೆಯಲ್ಲಿ ವಕ್ಫ್ ವಿರುದ್ಧ ಸಿ.ಟಿ.ರವಿ ಕಿಡಿಕಾರಿದ್ದಾರೆ https://ainlivenews.com/fraud-without-paying-in-luxury-clothing-stores-ainathi-young-woman-arrested/ ವಕ್ಫ್ ಬೋರ್ಡ್ ಅನ್ನೋದು ಆಧುನಿಕ ಭಸ್ಮಾಸುರ. ವೋಟಿನ ಆಸೆಗೆ ಅವರಿಗೆ ನಮ್ಮವರೇ ವರ ಕೊಟ್ಟರು. ಹಿಂದಿನ ಭಸ್ಮಾಸುರನಂತೆ ಇಂದಿನ ಭಸ್ಮಾಸುರ ಎಲ್ಲರ ತಲೆ ಮೇಲೆ ಕೈ ಇಡಲು ಬಂದಿದ್ದಾನೆ. ಭಗವಂತ ಮತ್ತೊಮ್ಮೆ ಮೋಹಿನಿ ರೂಪದಲ್ಲಿ ಭಸ್ಮಾಸುರನನ್ನ ನಾಶ ಮಾಡಬೇಕಾದ ಅವಶ್ಯಕತೆ ಇದೆ. ಆ ಭಸ್ಮಾಸುರ ವರ ಕೊಟ್ಟ ಶಿವನನ್ನೇ ಅಟ್ಟಿಸಿಕೊಂಡು ಹೋದನಂತೆ. ಆಗ ವಿಷ್ಣು ಮೋಹಿನಿ ರೂಪ ತಾಳಿ ಭಸ್ಮಾಸುರನನ್ನ ನಾಶ ಮಾಡಿದ ಕಥೆ ಕೇಳಿದ್ದೇವೆ. ಆಧುನಿಕ ಭಸ್ಮಾಸುರನನ್ನ ನಾಶ ಮಾಡೋದಕ್ಕೆ ಒಬ್ಬ ಮೋಹಿನಿ ಸಾಲಲ್ಲ, ಇಡೀ ಹಿಂದೂ ಸಮಾಜವೇ ಒಂದಾಗಬೇಕು ಎಂದು ಹರಿಹಾಯ್ದರು. ವಕ್ಫ್ ಬೋರ್ಡಿಗೆ…

Read More

ಬೆಂಗಳೂರು:- ದುಬಾರಿ ಬಟ್ಟೆಗಳನ್ನು ಖರೀದಿಸಿ ಬಳಿಕ ಹಣ ಕೊಡದೇ ಐಷಾರಾಮಿ ಬಟ್ಟೆ ಅಂಗಡಿಗಳಿಗೆ ವಂಚನೆ ಮಾಡುತ್ತಿದ್ದ ಐನಾತಿ ಯುವತಿಯನ್ನು ಅರೆಸ್ಟ್ ಮಾಡಲಾಗಿದೆ. ಐಷಾರಾಮಿ ಬಟ್ಟೆ ಶೋರೂಂಗಳಿಗೆ ಹೋಗಿ ದುಬಾರಿ ಬೆಲೆಯ ಬಟ್ಟೆಗಳನ್ನ ಖರೀದಿಸಿ ಆನ್‌ಲೈನ್ ಪೇಮೆಂಟ್ ಮಾಡುವಂತೆ ನಟಿಸಿ ವಂಚಿಸುತ್ತಿದ್ದ ಐನಾತಿ ಯುವತಿಯನ್ನ ಪೊಲೀಸರು ಬಂಧಿಸಿದ್ದಾರೆ. https://ainlivenews.com/everything-kumaraswamy-said-is-a-lie-dk-counters-the-accusation-of-assault-on-the-minister/ ರಶ್ಮಿ ಬಂಧಿತ ಆರೋಪಿ. ಆರೋಪಿ ವೃತ್ತಿಯಲ್ಲಿ ಚಾರ್ಟೆರ್ಡ್ ಅಕೌಂಟೆAಟ್ ಆಗಿ ಕೆಲಸ ಮಾಡಿಕೊಂಡಿದ್ದರು. 30, 40 ಸಾವಿರದ ದುಬಾರಿ ಬೆಲೆಯ ಬಟ್ಟೆಗಳನ್ನ ಖರೀದಿ ಮಾಡಿ ಬಳಿಕ ಪೋನ್ ಪೇ, ಗೂಗಲ್ ಪೇ ಮುಖಾಂತರ ಹಣ ಕಳಿಸಿದ್ದೀನಿ ಎಂದು ಹೇಳಿ ಹೆಸರು, ನಂಬರ್ ಅಂಗಡಿ ಮಾಲೀಕರಿಗೆ ಕೊಟ್ಟು ಅಲ್ಲಿಂದ ತೆರಳ್ತಾ ಇದ್ದರು. ಆನ್‌ಲೈನ್ ಮುಖಾಂತರ ಬಟ್ಟೆ ಶೋರೂಂಗಳ ಮಾಲೀಕರಿಗೆ ಹಣ ಬರದೆ ಇದ್ದಾಗ ಆರೋಪಿ ಕಾಲ್ ಮಾಡಿದರೆ, ಕರೆ ಸ್ವೀಕರಿಸುತ್ತಿರಲಿಲ್ಲ. ಅಂಗಡಿ ಮಾಲೀಕರಿಗೆ ನಂಬರ್ ಕೂಡುವಾಗ ಆರೋಪಿ ಯುವತಿ ಬೇರೊಬ್ಬರ ಪೋನ್ ನಂಬರ್ ಕೊಟ್ಟು ಹೋಗಿದ್ದ ಪ್ರಸಂಗಗಳೂ ನಡೆದಿವೆ. ಶೋರೂಂ ಮಾಲೀಕರು ಕಾಲ್ ಮಾಡಿ…

Read More

ಬೆಂಗಳೂರು:- ಕುಮಾರಸ್ವಾಮಿ ಹೇಳೋದೆಲ್ಲಾ ಬರೀ ಸುಳ್ಳು ಎಂದು ಹೇಳುವ ಮೂಲಕ ಸಚಿವ ಚಲುವರಾಯಸ್ವಾಮಿ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. https://ainlivenews.com/after-22-years-against-asis-historic-series-win-for-pakistan/ ಯಾವುದು ಇಲ್ಲಾ ಅದೆಲ್ಲಾ ಸುಳ್ಳು ಆರೋಪ. ಅವರಿಗೂ ಹಿಡಿದು ಯಾರೋ ಕಪಾಳಕ್ಕೆ ಹೊಡೆದರು ಎಂದು ನನಗೂ ಯಾರೋ ಹೇಳಿದರು. ಅದಕ್ಕೆ ಆಧಾರ ಇದೆಯಾ? ಯಾರಿಗೋ ಮೋಸ ಮಾಡಿದ್ದಾರಂತೆ, ಅವರಿಗೂ ಕಪಾಳಕ್ಕೆ ಹೊಡೆದರಂತೆ ಎಂದು ನನಗೂ ಹೇಳಿದರು. ಯಾರೋ ಹೇಳಿದರು ಎಂದು ಅದನ್ನು ನಾನು ನಂಬೋಕಾಗುತ್ತಾ, ಹೇಳೋಕಾಗುತ್ತಾ? ಯಾವ ಸಚಿವರು ಹೊಡೆದು ಇಲ್ಲಾ ಏನೂ ಇಲ್ಲಾ. ಬರಿ ಹಿಟ್ ಅಂಡ್ ರನ್ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದರು. ಮಹಾರಾಷ್ಟ್ರ ಚುನಾವಣೆಗೆ ಕರ್ನಾಟಕ ಸರ್ಕಾರ 700 ಕೋಟಿ ಸಂಗ್ರಹ ಎಂಬ ಪ್ರಧಾನಿ ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇದೆಲ್ಲಾ ರಾಜಕೀಯವಾದ ಆರೋಪ. ಆರೋಪ ಸಾಬೀತು ಪಡಿಸಿದರೆ ಸಣ್ಣ ಶಿಕ್ಷೆಗೂ ಗುರಿಯಾಗುತ್ತೇವೆ. ದೊಡ್ಡ ಹುದ್ದೆಯಲ್ಲಿರುವವರು ಆಧಾರ ಇಲ್ಲದೇ ಆರೋಪ ಮಾಡಬಾರದು. ಮಹಾರಾಷ್ಟ್ರದಲ್ಲಿ ಗ್ಯಾರಂಟಿಗಳ ಬಗ್ಗೆ ಸುಳ್ಳು ಹೇಳಿಕೆ ಕೊಟ್ಟಿದ್ದರು. ಅದಕ್ಕಾಗಿ…

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲಾಗಿದೆ. https://ainlivenews.com/after-22-years-against-asis-historic-series-win-for-pakistan/ ವಾಟಾಳ್ ನಾಗರಾಜ್ ರಿಂದ ಟಿಪ್ಪು ಜಯಂತಿ ಆಚರಣೆ ಮಾಡಲಾಗಿದೆ. ಮೆಜೆಸ್ಟಿಕ್ ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಲಾಗಿದೆ. ಟಿಪ್ಪು ಸುಲ್ತಾನ್ ಫೋಟೋ ಇಟ್ಟು ಪುಷ್ಪ ನಮನ ಮಾಡಲಾಗಿದೆ. ವಾಟಾಳ್ ನಾಗರಾಜ್ ಸೇರಿ ವಾಟಾಳ್ ಪಕ್ಷದ ಕಾರ್ಯಕರ್ತರಿಂದ ಪುಷ್ಪಾರ್ಚನೆ ಮಾಡಲಾಗಿದೆ.

Read More

ಆಸ್ಟ್ರೇಲಿಯಾಗೆ ಆಘಾತ ಎದುರಾಗಿದ್ದು, ಪಾಕ್​ಗೆ ಐತಿಹಾಸಿಕ ಸರಣಿ ಜಯವಾಗಿದೆ. https://ainlivenews.com/the-bus-overturned-after-hitting-the-divider-many-seriously/ ಕಾಂಗರೂ ನಾಡಿನಲ್ಲಿ ಆಸೀಸ್ ಪಡೆಯನ್ನು 2-1 ಅಂತರದಿಂದ ಮಣಿಸಿ ಏಕದಿನ ಸರಣಿ ಗೆಲ್ಲುವ ಮೂಲಕ ಎಂಬುದು ವಿಶೇಷ. ಅಂದರೆ ಪಾಕಿಸ್ತಾನ್ ತಂಡವು ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿ ಗೆದ್ದು ಬರೋಬ್ಬರಿ 22 ವರ್ಷಗಳಾಗಿತ್ತು. ಆದರೆ ಈ ಬಾರಿ ಮೊಹಮ್ಮದ್ ರಿಝ್ವಾನ್ ಮುಂದಾಳತ್ವದಲ್ಲಿ ಕಣಕ್ಕಿಳಿದ ಪಾಕ್ ಪಡೆಯು ಆತಿಥೇಯರನ್ನು ಬಗ್ಗು ಬಡಿದು 2 ದಶಕಗಳ ಬಳಿಕ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ಆಸೀಸ್ ಪಿಚ್​ನಲ್ಲಿ ಸರಣಿ ಗೆಲ್ಲುವ ಪಾಕ್ ತಂಡದ 22 ವರ್ಷಗಳ ಕಾಯುವಿಕೆ ಕೂಡ ಕೊನೆಗೊಂಡಿದೆ. ಇನ್ನು ಪರ್ತ್​ನಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಪಾಕ್ ವೇಗಿಗಳ ಕರಾರುವಾಕ್ ದಾಳಿ ಮುಂದೆ ಪೆವಿಲಿಯನ್ ಪರೇಡ್ ನಡೆಸಿದ ಆಸ್ಟ್ರೇಲಿಯಾ 31.5 ಓವರ್​ಗಳಲ್ಲಿ ಕೇವಲ 140 ರನ್​ಗಳಿಸಿ ಆಲೌಟ್ ಆಯಿತು. 141 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡಕ್ಕೆ…

Read More

ಚಿತ್ರದುರ್ಗ:- ಡಿವೈಡರ್‌ಗೆ ಡಿಕ್ಕಿ ಹೊಡೆದು ಬಸ್ ಪಲ್ಟಿ ಹೊಡೆದಿರುವ ಘಟನೆ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಬಳಿ ಸಂಭವಿಸಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. https://ainlivenews.com/haveri-9-year-old-boy-drowned-in-water-tank/ ಬಸ್ ಮೊಳಕಾಲ್ಮೂರಿನಿಂದ ಚಳ್ಳಕೆರೆಗೆ ಬರುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ. ಅತಿವೇಗದ ಚಾಲನೆ ಹಾಗೂ ಚಾಲಕನ ಅಜಾಗರೂಕತೆಯ ಪರಿಣಾಮ ಅಪಘಾತ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ರಸ್ತೆಯ ಡಿವೈಡರ್‌ಗೆ ಡಿಕ್ಕಿಯಾಗಿ ಬಸ್ ಪಲ್ಟಿಯಾಗಿದ್ದು, ಬಸ್‌ನಲ್ಲಿದ್ದ 10 ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಹಾವೇರಿ:- ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಕಡೂರು ಗ್ರಾಮದಲ್ಲಿ ನೀರಿನ ತೊಟ್ಟಿಯಲ್ಲಿ ಮುಳುಗಿ ಬಾಲಕನೋರ್ವ ಮೃತಪಟ್ಟ ಘಟನೆ ಜರುಗಿದೆ. https://ainlivenews.com/go-for-a-swim-in-chak-dam-and-have-an-accident-the-boy-shares-the-water/ 9 ವರ್ಷದ ಮೃತ ಬಾಲಕ. ನಿನ್ನೆ ಶನಿವಾರ ಆಗಿದ್ದರಿಂದ ಶಾಲೆ ಬಿಟ್ಟ ನಂತರ ಬಾಲಕ ಆಡಲು ತೆರಳಿದ್ದ. ಆಡಲು ಹೋಗಿದ್ದ ಬಾಲಕ ಶಾಲೆಯ ಬಳಿ ಇರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನೀರಿನ ತೊಟ್ಟಿಗೆ ಬಿದ್ದಿದ್ದಾನೆ. ಸಂಜೆಯಾದರೂ ಬಾಲಕ ಪ್ರಜ್ವಲ್ ಮನೆಗೆ ಬಂದಿರಲಿಲ್ಲ. ಹೀಗಾಗಿ ಆತನ ಮನೆಯವರು ಹುಡುಕಾಟ ನಡೆಸಿದ್ದರು. ಆಗ ಪ್ರಜ್ವಲ್ ನೀರಿನ ತೊಟ್ಟಿಯಲ್ಲಿ ಮುಳುಗಿ ಮೃತಪಟ್ಟಿರುವುದು ಗೊತ್ತಾಗಿದೆ. ನಂತರ ಬಾಲಕನ ಮೃತದೇಹವನ್ನು ನೀರಿನ ತೊಟ್ಟಿಯಿಂದ ಮೇಲಕ್ಕೆತ್ತಿ ರಟ್ಟೀಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ದಾಖಲಿಸಲಾಗಿದೆ.

Read More

ದಾವಣಗೆರೆ:- ದಾವಣಗೆರೆಯ ಜಗಳೂರು ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮದಲ್ಲಿ ಚಕ್ ಡ್ಯಾಂನಲ್ಲಿ ಈಜಲು ಹೋಗಿದ್ದ 15 ವರ್ಷದ ಬಾಲಕ ನೀರು ಪಾಲಾದ ಘಟನೆ ಜರುಗಿದೆ. https://ainlivenews.com/why-diet-is-all-eat-this-fruit-daily-slim-in-1-month/ ಅಜಯ್ಯ ಮೃತ ಬಾಲಕ. ಆತ ಸಿದ್ದಯ್ಯನಕೋಟೆಯ ಸಂಬಂಧಿಕರ ಮನೆಗೆ ಬಂದಿದ್ದ. ಈ ವೇಳೆ ಚಕ್ ಡ್ಯಾಂನಲ್ಲಿ ಈಜಾಡಲು ತೆರಳಿದ್ದಾಗ ಈ ಅವಘಡ ನಡೆದಿದೆ. ಬಾಲಕನ ಮೃತದೇಹವನ್ನು ಸ್ಥಳೀಯರು ನೀರಿನಿಂದ ಹೊರ ತೆಗೆದಿದ್ದಾರೆ. ಈ ಸಂಬಂಧ ಬೀಳಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Read More