ಬೆಂಗಳೂರು:- ಆರು ಮಂದಿ ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಶರಣಾದರೂ ತಮ್ಮ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಿಲ್ಲ. ಭವಿಷ್ಯದಲ್ಲಿ ಕಾನೂನು ಸಂಕಷ್ಟಕ್ಕೆ ಸಿಲುಕಬಹುದೆಂಬ ಆತಂಕದಿಂದ ಶಸ್ತ್ರಾಸ್ತ್ರಗಳನ್ನು ಅವರು ಕಾಡಿನಲ್ಲೇ ಅಡಗಿಸಿಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ. ಶಸ್ತ್ರಾಸ್ತ್ರಗಳ ಕುರಿತು ಶರಣಾಗತ ನಕ್ಸಲರು ಇದೀಗ ಪೊಲೀಸರಿಗೆ ಮಾಹಿತಿ ನೀಡಿದ್ದು, ಇನ್ನೆರೆಡು ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ದಟ್ಟ ಕಾನನದಲ್ಲಿ ಹುದುಗಿಸಿಟ್ಟಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯುವ ಕಾರ್ಯ ನಡೆಯಲಿದೆ. https://ainlivenews.com/muda-trouble-for-jds-mla-snehamai-krishna-complains-against-gt-deve-gowda/ ಇನ್ನೂ ಕರ್ನಾಟಕದಲ್ಲಿ ಆರು ಜನ ನಕ್ಸಲರು ಶರಣಾಗುವುದರ ಮೂಲಕ ಕರ್ನಾಟಕದಲ್ಲಿ ನಕ್ಸಲಿಸಂಗೆ ಕಡಿವಾಣ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಆದರೆ ಮೋಸ್ಟ್ ವಾಂಟೆಡ್ ನಕ್ಸಲರು ಶರಣಾಗತರಾದರೂ ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳು ಎಲ್ಲಿ ಇಟ್ಟಿದ್ದಾರೆ. ಶರಣಾಗುವಾಗ ಯಾವ ಕಾರಣಕ್ಕೆ ಶಸ್ತ್ರಾಸ್ತ್ರ ಸಲ್ಲಿಕೆ ಮಾಡಿಲ್ಲ ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ವಿಪಕ್ಷ ಬಿಜೆಪಿ ಸಹ ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸುತ್ತಲೇ ಇದೆ. ಇದರ ಬೆನ್ನಲ್ಲೇ ಇದೀಗ ಸ್ವತಃ ಸಿಎಂ ಸಿದ್ದರಾಮಯ್ಯ, ನಕ್ಸಲರ…
Author: AIN Author
ಮೈಸೂರು:- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 50-50 ನಿವೇಶ ಹಂಚಿಕೆ ಹಗರಣ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. https://ainlivenews.com/attention-sslc-puc-students-exam-schedule-announced/ ಜೆಡಿಎಸ್ ಶಾಸಕನಿಗೆ “ಮುಡಾ” ಸಂಕಷ್ಟ ಜೋರಾಗಿದ್ದು, ಶಾಸಕ ಜಿಟಿ ದೇವೇಗೌಡ ವಿರುದ್ಧ ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮತ್ತೊಂದು ಅಕ್ರಮ ಬಯಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ವಿರುದ್ಧ ಆರ್ಟಿಐ ಕಾರ್ಯಕರ್ತರ ಸ್ನೇಹಮಯಿ ಕೃಷ್ಣ ಮೈಸೂರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಇದರಿಂದ ಶಾಸಕ ಜಿಟಿ ದೇವೇಗೌಡಗೆ ಸಂಕಷ್ಟು ಶುರುವಾಗಿದೆ. ಶಾಸಕ ಜಿ.ಟಿ.ದೇವೇಗೌಡ ತಮ್ಮ ಪ್ರಭಾವವನ್ನು ಬಳಸಿಕೊಂಡು, ಸರ್ಕಾರಕ್ಕೆ ಸೇರಿದ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವ ಜಮೀನಿಗೆ ಸಂಬಂಧಿಸಿದಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿಸಿದ್ದಾರೆ. ಬಳಿಕ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೆ.ಚೌಡಯ್ಯ ಎಂಬುವವರ ಹೆಸರಿಗೆ 50:50 ಅನುಪಾತದಲ್ಲಿ ಒಟ್ಟು ಆರು ನಿವೇಶನಗಳನ್ನು ಅಕ್ರಮವಾಗಿ ಕೊಡಿಸಿದ್ದಾರೆ. ಇದರಲ್ಲಿ, 50X80 ಅಡಿ ಅಳತೆಯ ಎರಡು ನಿವೇಶನಗಳನ್ನು, ಅವರ ಮಗಳು ಡಿ.ಅನ್ನಪೂರ್ಣ ಮತ್ತು ಅಳಿಯ…
ಬೆಂಗಳೂರು:- ಕರ್ನಾಟಕದಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಗೊಂಡಿದೆ. https://ainlivenews.com/do-you-bathe-your-head-when-you-have-a-fever-so-be-careful-these-diseases-will-increase/ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂತಿಮ ಪರೀಕ್ಷೆ 2025ರ ಅಮತಿಮ ವೇಳಾಪಟ್ಟಿಯನ್ನು ಇದೀಗ ಬಿಡುಗಡೆ ಮಾಡಿದೆ. kseab.karnataka.gov.in ವೆಬ್‌ಸೈಟ್‌ನಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪ್ರಕಾರ ಮಾರ್ಚ್ 1 ರಿಂದ 20ರವರೆಗೆ ದ್ವಿತೀಯ ಪಿಯು ಪರೀಕ್ಷೆ -1 ಮತ್ತು ಮಾರ್ಚ್ 21ರಿಂದ ಏಪ್ರಿಲ್ 04 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ -1 ನಡೆಯಲಿದೆ. ಪಿಯುಸಿ ಪರೀಕ್ಷಾ-1ರ ವೇಳಾಪಟ್ಟಿ: ಮಾರ್ಚ್ 1- ಕನ್ನಡ, ಅರೇಬಿಕ್,,ಮಾರ್ಚ್ 3- ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಮಾರ್ಚ್ 4- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್. ಮಾರ್ಚ್…
ಈಗಿನ ವಾತಾವಾರಣದಲ್ಲಿ ಹೆಚ್ಚಿನವರಿಗೆ ಆಗಾಗ ವೈರಲ್ ಜ್ವರ ಕಾಡುತ್ತಿರುತ್ತದೆ. ಸಾಮಾನ್ಯವಾಗಿ ಜ್ವರ ಬಂದಾಗ ಹೆಚ್ಚಿನವರು ಸ್ನಾನ ಮಾಡುವುದಿಲ್ಲ. ಜ್ವರ ಬಿಟ್ಟ ನಂತರವೇ ಸ್ನಾನ ಮಾಡುತ್ತಾರೆ. ಆದರೆ ನಮ್ಮಲ್ಲಿ ಅಧಿಕ ಜನರಿಗೆ ಜ್ವರ ಇದ್ದಾಗ ಸ್ನಾನ ಮಾಡಬಹುದೇ, ಇಲ್ಲವೋ ಎನ್ನುವುದು ತಿಳಿದಿರುವುದಿಲ್ಲ. ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ ತಿಳಿಯೋಣ. ಜ್ವರ ಬಂದಾಗ ಸ್ನಾನ ಮಾಡಬೇಕೋ, ಬೇಡವೋ ಎಂಬುವುದರ ಬಗ್ಗೆ ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಸಂಶೋಧನೆ ನಡೆಸಲಾಗಿದೆ. ಸಾಮಾನ್ಯವಾಗಿ ಜ್ವರ ಮತ್ತು ಶೀತವಾದಾಗ ಜನ ಸ್ನಾನ ಮಾಡುವುದನ್ನು ತಪ್ಪಿಸುತ್ತಾರೆ. ಆದರೆ ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವುದಾದರೆ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಶೀತ ಮತ್ತು ಜ್ವರಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಇದು ವ್ಯಕ್ತಿಯ ಆರೋಗ್ಯ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ ಎನ್ನಲಾಗಿದೆ. ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಪ್ರಯೋಜನಕಾರಿಯಾಗಿದೆ. ಬೆಚ್ಚಗಿನ ನೀರಿನಿಂದ ಸ್ನಾನವು ದೇಹದ ಉಷ್ಣತೆಯನ್ನು ಸಹಜ ಸ್ಥಿತಿಗೆ ತರಲು ಸಹಾಯ ಮಾಡುತ್ತದೆ. ಆದರೆ ತಣ್ಣೀರಿನಿಂದ ಸ್ನಾನವು ಜ್ವರದಲ್ಲಿ ಮತ್ತಷ್ಟು ಹಾನಿಯನ್ನು ಉಂಟು ಮಾಡಬಹುದು. ಆದ್ದರಿಂದ ತಣ್ಣೀರಿನಿಂದ…
ಸಕ್ಕರೆ ಕಾಯಿಲೆ ತರಹ ರಕ್ತದ ಒತ್ತಡ ಕೂಡ ಒಮ್ಮೆ ಬಂದರೆ ಜೀವನಪರ್ಯಂತ ಕಾಡುವ ಕಾಯಿಲೆ ಯಾಗಿದೆ. ಇದನ್ನು ಕಂಟ್ರೋಲ್ ಮಾಡಿಕೊಳ್ಳ ಬಹುದೇ ಹೊರತು ಸಂಪೂರ್ಣವಾಗಿ ಇದರಿಂದ ಮುಕ್ತಿ ಹೊಂದಲು ಸಾಧ್ಯವಿಲ್ಲ. https://ainlivenews.com/do-you-talk-in-your-sleep-if-so-then-you-are-guaranteed-to-have-this-problem/ ಹಾಗಾಗಿ ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆಗಳು, ಆಹಾರ ಪದ್ಧತಿಯಲ್ಲಿ ಬದಲಾವಣೆಗಳು, ಆಗಾಗ ಪರೀಕ್ಷೆ ಮಾಡಿಸಿಕೊಳ್ಳುವುದು, ಮಾನಸಿಕ ಒತ್ತಡ ನಿರ್ವಹಣೆ ಮಾಡಿ ಕೊಳ್ಳುವುದು ಇತ್ಯಾದಿಗಳನ್ನು ಅನುಸರಿಸುವುದು ಒಳ್ಳೆಯದು. ಚಳಿಗಾಲದಲ್ಲಿ ಸ್ಕಿನ್ ಅಲರ್ಜಿಯಷ್ಟೇ ಅಲ್ಲದೇ ಹೃದ್ರೋಗಿಗಳು ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಅಷ್ಟಕ್ಕೂ ಚಳಿಗಾಲದಲ್ಲಿ ರಕ್ತದೊತ್ತಡ ಹೆಚ್ಚಾಗೋದು ಏಕೆ ಅಂತ ನಿಮಗೆ ತಿಳಿದಿದ್ಯಾ? ಹಾಗಾದ್ರೆ ಈ ಸ್ಟೋರಿ ಓದಿ. ತಾಪಮಾನ ಕಡಿಮೆಯಾದಾಗ, ರಕ್ತನಾಳಗಳು ಸಂಕುಚಿತಗೊಳ್ಳಬಹುದು. ಇದು ರಕ್ತ ಮತ್ತು ಆಮ್ಲಜನಕವನ್ನು ಜೋರಾಗಿ ಪಂಪ್ ಮಾಡಲು ಹೃದಯ ಸ್ನಾಯುಗಳ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಈ ಸಮಯದಲ್ಲಿ ರಕ್ತದೊತ್ತಡ ಹೆಚ್ಚಾಗಬಹುದು. ಆದರೆ ನೀವು ಜೀವನ ಶೈಲಿಯಲ್ಲಿ ಕೆಲವು ಸಿಂಪಲ್ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಹಠಾತ್ ಅಧಿಕ…
ರಾತ್ರಿ ಮಲಗುವಾಗ ಕೆಲವರು ತುಂಬಾ ಗೊರಕೆ ಹೊಡೆಯುತ್ತಾರೆ. ಇನ್ನು ಕೆಲವರು ಸಾಮಾನ್ಯವಾಗಿ ನಿದ್ದೆ ಮಾಡುತ್ತಾರೆ. ಇನ್ನು ಕೆಲವರು ಸ್ವಲ್ಪ ಸದ್ದು ಜೋರಾಗಿ ಕೇಳದಂತೆ ಗೊರಕೆ ಹೊಡೆಯುತ್ತಾರೆ. ಕೆಲವರು ನಿದ್ದೆ ಮಾಡುವಾಗ ಸ್ವಲ್ಪ ಸೌಂಡ್ ಆದ್ರೂ ಎದ್ದು ಬಿಡ್ತಾರೆ. https://ainlivenews.com/there-is-no-power-in-these-areas-of-bangalore-today-2/ ಕೆಲವರು ನಿದ್ರೆಯಲ್ಲಿ ಮಾತನಾಡುವ ಅಭ್ಯಾಸ ಹೊಂದಿರುತ್ತಾರೆ. ಅದರಲ್ಲೂ ಕೆಲ ಮಂದಿ ನಿದ್ರೆಯಲ್ಲಿ ಎಷ್ಟು ಸ್ಪಷ್ಟವಾಗಿ ಮಾತನಾಡುತ್ತಾರೆ ಅಂದರೆ ಇತರರಿಗೆ ಅರ್ಥವಾಗಬೇಕು, ಅಷ್ಟರ ಮಟ್ಟಿಗೆ ಅಚ್ಚುಕಟ್ಟಾಗಿ ಮಾತನಾಡುತ್ತಾರೆ. ನೀವು ಕೂಡ ಈ ಅಭ್ಯಾಸವನ್ನು ಹೊಂದಿದ್ದರೆ, ಈ ಸಮಸ್ಯೆಗೆ ಕಾರಣವೇನು? ಇದರ ಲಕ್ಷಣಗಳೇನು ಮತ್ತು ಇದಕ್ಕೆ ಚಿಕಿತ್ಸೆಗಳೇನು ಎಂಬುವುದನ್ನು ನಾವಿಂದು ತಿಳಿಯೋಣ. ಸಾಮಾನ್ಯವಾಗಿ ವಯಸ್ಸಿನ ಲೆಕ್ಕಿಸದೇ ಅನೇಕ ಮಂದಿ ನಿದ್ರೆಯಲ್ಲಿ ಮಾತನಾಡುತ್ತಾರೆ. 3 ರಿಂದ 10 ವರ್ಷ ವಯಸ್ಸಿನ ಮಕ್ಕಳು ಹೆಚ್ಚಾಗಿ ತಮ್ಮ ನಿದ್ರೆಯಲ್ಲಿ ಮಾತನಾಡುತ್ತಾರೆ. ವಯಸ್ಕರಲ್ಲಿ ಇದು ಕಡಿಮೆ ಸಾಮಾನ್ಯವಾಗಿದೆಯಾದರೂ, 5% ರಷ್ಟು ವ್ಯಕ್ತಿಗಳು ಈ ಬಾಲ್ಯದ ನಿದ್ರೆ ಮಾತನಾಡುವ ಅಭ್ಯಾಸವನ್ನು ಪ್ರೌಢಾವಸ್ಥೆಯಲ್ಲಿ ಮುಂದುವರಿಸುತ್ತಾರೆ. ನಿದ್ರೆಯಲ್ಲಿ ಮಾತನಾಡುವುದು ಕೆಲವೊಮ್ಮೆ ಆನುವಂಶಿಕ ವಿಚಾರವಾಗಿದೆ. ಇದು…
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ತುರ್ತು ಕಾಮಗಾರಿ ಹಿನ್ನೆಲೆ ಪವರ್ ಕಟ್ ಇರಲಿದೆ. https://ainlivenews.com/the-government-responded-to-the-demand-of-asha-activists/ ಸಿಲಿಕಾನ್ ಸಿಟಿ ಬೆಂಗಳೂರಿನ “ಮಲ್ಲೇಶ್ವರಂ, ಎಂ.ಡಿ.ಬ್ಲಾಕ್, ವೈಯಾಲಿಕಾವಲ್, ಈಜುಕೊಳ ವಿಸ್ತರಣೆ, ಕೋದಂಡರಾಮಪುರ, ರಂಗನಾಥಪುರ, ಬಿಎಚ್‌ಇಎಲ್, ಐಐಎಸ್‌ಸಿ ಬ್ರೈನ್ ಸೆಂಟರ್, ಅಂಬೇಡ್ಕರ್ ನಗರ, ಯಶವಂತ ಪುರ ಪೈಪ್‌ಲೈನ್ ರಸ್ತೆ, ಎಲ್‌ಎನ್ ಕಾಲೋನಿ, ಸುಬೇದ್ರಪಾಳ್ಯ, ದಿವಾನರ ಪಾಳ್ಯ, ಕೆ.ಎನ್. ವಿಸ್ತರಣೆ, ಯಶವಂತಪುರ 1ನೇ ಮುಖ್ಯರಸ್ತೆ, ಎಚ್.ಎಂ.ಟಿ. ಮುಖ್ಯ ರಸ್ತೆ, ಮಾಡೆಲ್ ಕಾಲೋನಿ, ಶರೀಫ್ ನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ಕರೆಂಟ್ ಇರುವುದಿಲ್ಲ. ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.
ಬೆಂಗಳೂರು:- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಶುಕ್ರವಾರ ಆಶಾ ಕಾರ್ಯಕರ್ತೆಯರ ಸಂಧಾನ ಯಶಸ್ವಿಯಾಗಿದ್ದು, ಆಶಾ ಕಾರ್ಯಕರ್ತೆಯರಿಗೆ ಮಾಹೆಯಾನ 10 ಸಾವಿರ ರೂ.ಗಳ ಗೌರವಧನವನ್ನು ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ ನೀಡಲು ಸರ್ಕಾರ ಒಪ್ಪಿದೆ. https://ainlivenews.com/must-read-news-for-metro-commuters-monday-train-timings-changed/ ಮೂರು ದಿನಗಳ ಕಾಲ ಕೊರೆಯುವ ಚಳಿಯಲ್ಲೇ ರಸ್ತೆಯಲ್ಲಿ ರಾತ್ರಿ ಇಡೀ ಮಲಗಿ ಮುಷ್ಕರ ನಡೆಸಿದ್ದ ಆಶಾ ಕಾರ್ಯಕರ್ತರ ಹೋರಾಟ ಅಂತ್ಯಗೊಂಡಿದೆ. ಆಶಾ ಕಾರ್ಯಕರ್ತೆಯರ ಸಂಘಟನೆಯ ಮುಖಂಡರ ಜೊತೆಗಿನ ಸಿಎಂ ಸಂಧಾನ ಯಶಸ್ವಿಯಾಗಿದೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಚಳಿ, ಗಾಳಿ ಎನ್ನದೇ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಸುತ್ತಿದ್ದ ಪ್ರತಿಭಟನೆಗೆ ಕೊನೆಗೂ ಜಯ ಸಿಕ್ಕಿದೆ. ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಬಗ್ಗೆ ಹಲವು ಭಾರೀ ಸಂಧಾನ ನಡೆಸಿ ಸುಸ್ತಾಗಿದ್ದ ಸರ್ಕಾರ, ಇದೀಗ ಆಶಾಕಾರ್ಯಕರ್ತೆಯರ ಮನವೊಲಿಸುವುದರಲ್ಲಿ ಕೊನೆಗೂ ಸಕ್ಸಸ್ ಆಗಿದೆ. ಪ್ರತಿ ಗ್ರಾಮ, ಪ್ರತಿ ಜಿಲ್ಲೆಯಲ್ಲಿ ಆರೋಗ್ಯ ತಲುಪಿಸುವ ಕೆಲಸ ಮಾಡ್ತಿದ್ದ ಆಶಾಕಾರ್ಯಕರ್ತೆಯರು ವಿವಿಧ ಬೇಡಿಕೆಗಳನ್ನ ಮುಂದಿಟ್ಟುಕೊಂಡು ಕಳೆದ ನಾಲ್ಕು ದಿನಗಳಿಂದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದ್ದರು.…
ಬೆಂಗಳೂರು:- ಮೆಟ್ರೋ ನಗರ ಬೆಂಗಳೂರಿನಲ್ಲಿ ಟ್ರಾಫಿಕ್‌ಮುಕ್ತವಾಗಿ ಸಂಚಾರ ಮಾಡುವ ಏಕೈಕ ಸಾರಿಗೆ ವ್ಯವಸ್ಥೆ ನಮ್ಮ ಮೆಟ್ರೋ. ಇದು ಬೆಂಗಳೂರಿನ ಕ್ಷಿತಿಜದ ಸೌಂದರ್ಯಕ್ಕೆ ಪೂರಕವಾಗಿರುವುದು ಮಾತ್ರವಲ್ಲದೆ, ಸುಖಕರ ಪ್ರಯಾಣಕ್ಕೆ ಸಹ ಪೂರಕವಾದದ್ದಾಗಿದೆ. https://ainlivenews.com/facebook-love-a-young-muslim-woman-married-a-hindu-man-and-came-to-the-police-station/ ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ ಗುಡ್ ನ್ಯೂಸ್ ನೀಡಿದೆ. ಸೋಮವಾರ ಅಂದ್ರೆ ಜನವರಿ 13ರಿಂದ ಮೆಟ್ರೋ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ವಾರಾಂತ್ಯದಲ್ಲಿ ರಜೆಗಾಗಿ ಊರಿಗೆ ಹೋಗುವ ಬೆಂಗಳೂರು ಮಂದಿ, ಸೋಮವಾರ ಮರಳಿ ಬರುವಾಗ ಟ್ರಾಫಿಕ್‌ನಲ್ಲಿ ಸಿಲುಕಿ ಹೈರಾಣಾಗುತ್ತಿದ್ದರೆ. ನಮ್ಮ ಮೆಟ್ರೋ ಕೂಡ ಬೆಳ್ಳಂಬೆಳಗ್ಗೆ ಭಾರಿ ಜನಸಂದಣಿಯಿಂದ ಜನ ಪ್ರಯಾಣ ಮಾಡಲು ಕೂಡ ಕಷ್ಟವಾಗುತ್ತಿತ್ತು. ಈಗ ಬೆಂಗಳೂರು ಜನತೆಗಾಗಿ ನಮ್ಮ ಮೆಟ್ರೋ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲು ಮುಂದಾಗಿದೆ. ಇನ್ಮುಂದೆ ಪ್ರತಿ ಸೋಮವಾರದಂದು ಮೆಟ್ರೋ ಸಂಚಾರ ಬೆಳಗ್ಗೆ 4.15ರಿಂದ ಆರಂಭವಾಗಲಿದೆ. ಇಷ್ಟು ದಿನ ಸೋಮವಾರ ಬೆಳ್ಳಗೆ 5ಗಂಟೆಗೆ ಮೊದಲ ರೈಲು ಸಂಚಾರ ಆರಂಭವಾಗುತ್ತಾ ಇತ್ತು. ಶನಿವಾರ, ಭಾನುವಾರದ ವೀಕೆಂಡ್‌ನಲ್ಲಿ ಸಿಟಿ ಹೊರಗೆ ಹೋಗುವ ಪ್ರಯಾಣಿಕರು ಸೋಮವಾರ ಬೆಳಗಿನ…
ಮಂಗಳೂರು:- ಫೇಸ್ಬುಕ್ ನಿಂದ ಹುಟ್ಟಿದ ಪ್ರೀತಿಯಿಂದ ಹಿಂದೂ ಹಾಗೂ ಮುಸ್ಲಿಂ ಜೋಡಿ ಮದುವೆ ಆಗಿದೆ. https://ainlivenews.com/dharwad-khadeems-who-burgled-a-soldiers-house-looted-gold-ornaments/ ಬೆಳ್ತಂಗಡಿಯಲ್ಲಿ ನಾಪತ್ತೆಯಾಗಿದ್ದ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನನ್ನು ಮದುವೆಯಾಗಿ ಪತ್ತೆಯಾಗಿದ್ದಾಳೆ. ಜಿಲ್ಲೆಯ ಬೆಳ್ತಂಗಡಿಯ ಪಟ್ರಮೆ ಗ್ರಾಮದ ಸುಹಾನ ಕಂಪ್ಯೂಟರ್ ಕ್ಲಾಸ್‍ಗೆ ಹೋಗಿದ್ದವಳು ನಾಪತ್ತೆ ಆಗಿದ್ದಳು. ಬಳಿಕ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈಗ ಹಿಂದೂ ಯುವಕ ಹರೀಶ್ ಗೌಡ ಎಂಬಾತನ ಜೊತೆ ಮದುವೆಯಾಗಿ ಪತ್ತೆಯಾಗಿದ್ದಾಳೆ. ಇಬ್ಬರಿಗೂ ಫೇಸ್‍ಬುಕ್‍ನಲ್ಲಿ ಪರಿಚಯವಾಗಿ ಪ್ರೀತಿಯಾಗಿತ್ತು. ಇದೀಗ ಜೋಡಿ ಬೆಳ್ತಂಗಡಿಯ ಕೊತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಮದುವೆಯಾಗಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಮಿಸಿ, ಸ್ವ ಇಚ್ಛೆಯಿಂದ ಹೋಗಿ ಮದುವೆ ಆಗಿರುವುದಾಗಿ ಯುವತಿ ಹೇಳಿಕೆ ನೀಡಿದ್ದಾಳೆ.