ಹುಬ್ಬಳ್ಳಿ:- ಆಸ್ತಿಗಾಗಿ ತಂದೆ, ತಾಯಿಯನ್ನು ಹತ್ಯೆಗೈದಿದ್ದ ಪಾಪಿ ಪುತ್ರನನ್ನು ಅರೆಸ್ಟ್ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ಜರುಗಿದೆ. https://ainlivenews.com/do-you-take-bp-medication-if-so-this-risk-is-guaranteed/ ಗಂಗಾಧರ ಬಂಧಿತ ಆರೋಪಿ. ನಿನ್ನೆ ಹುಬ್ಬಳ್ಳಿಯ ಕುಸಗುಲ್ ಗ್ರಾಮದಲ್ಲಿ ಅಶೋಕ್ ಹಾಗೂ ಶಾರದಾ ಎಂಬವರನ್ನು ಆರೋಪಿ ಕೊಲೆ ಮಾಡಿದ್ದ. ತನಿಖೆ ವೇಳೆ ಆಸ್ತಿಗಾಗಿ ಮಗನೇ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿತ್ತು. ಕೇವಲ ಎರಡು ಎಕರೆ ಜಮೀನಿಗಾಗಿ ಹೆತ್ತವರನ್ನೇ ಆರೋಪಿ ಕಬ್ಬಿಣದ ರಾಡ್‍ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಬಳಿಕ ಸ್ಥಳದಿಂದ ಪರಾರಿಯಾಗಿದ್ದ. ಕೊಲೆ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
Author: AIN Author
ಇತ್ತೀಚೆಗೆ ಬದಲಾದ ಜೀವನಶೈಲಿಯಿಂದಾಗಿ ನಾವು ಬಿಪಿ ಅಂದರೆ ಬ್ಲಡ್ ಪ್ರೆಶರ್ ಬಗ್ಗೆ ಹೆಚ್ಚಾಗಿಯೇ ಕೇಳುತ್ತಿದ್ದೇವೆ. ಕಳೆದ ಒಂದೂವರೆ ವರ್ಷದಿಂದ ಕೊರೊನಾ ಬಂದ ಮೇಲೆ ಹೆಚ್ಚು ಅಥವಾ ಕಡಿಮೆ ಬಿಪಿ (ರಕ್ತದ ಒತ್ತಡ) ಪ್ರಕರಣಗಳನ್ನು ಸ್ವಲ್ಪ ಹೆಚ್ಚಾಗಿಯೇ ಕಾಣುತ್ತಿದ್ದೇವೆ. ಆಫೀಸಿನ, ವೈಯಕ್ತಿಕ ಅಥವಾ ಕೌಟುಂಬಿಕ ಕಾರಣಗಳಿಂದ ಬಿಪಿ ಜಾಸ್ತಿ ಅಥವಾ ಕಡಿಮೆ ಆಗಬಹುದು. https://ainlivenews.com/poor-performance-in-the-test-series-virushka-receives-blessings-from-premanand-maharaj/ ಜನರು ಸಾಮಾನ್ಯವಾಗಿ ತೆಗೆದುಕೊಳ್ಳುವ ಔಷಧಿಗಳು ದೇಹದ ಪೊಟ್ಯಾಸಿಯಮ್ ಮಟ್ಟವನ್ನು ಕಡಿಮೆ ಮಾಡಬಹುದು, ಇದು ಗಂಭೀರ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು ಎಂದು ವರದಿ ಹೇಳುತ್ತದೆ. ನೀವೂ ರಕ್ತದೊತ್ತಡ ಔಷಧಿಗಳನ್ನು ಸಹ ತೆಗೆದುಕೊಳ್ಳುತ್ತಿದ್ದರೆ ಅದರ ಅನಾನುಕೂಲಗಳ ಬಗ್ಗೆ ತಿಳಿಯೋಣ. ಅಧಿಕ ರಕ್ತದೊತ್ತಡ ಮಾತ್ರೆಗಳು ಎಷ್ಟು ಅಪಾಯಕಾರಿ: ಈ ಔಷಧಿಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ನಿಗಾವಹಿಸಲು ವೈದ್ಯರು ಮತ್ತು ಆರೋಗ್ಯ ತಜ್ಞರನ್ನು ಕೇಳಲಾಗಿದೆ ಎಂದು ಫಾರ್ಮಾಕೊಪಿಯಾ ಅಧ್ಯಯನವು ಹೇಳುತ್ತದೆ. ಇದರಿಂದ ರೋಗಿಗಳಿಗೆ ಯಾವುದೇ ಹಾನಿ ಉಂಟಾದರೆ, ತಕ್ಷಣ NCC ಗೆ ವರದಿ ಮಾಡಿ ಇದರಿಂದ ಅಪಾಯಗಳನ್ನು ಸಕಾಲದಲ್ಲಿ ತಡೆಗಟ್ಟಬಹುದು. ಹೈಪೋಕಾಲೆಮಿಯಾ ಅಥವಾ ಅನಿಯಮಿತ…
ಚಿಕ್ಕಮಗಳೂರು:- ಶರಣಾಗತ ನಕ್ಸಲರ ಬಳಿ ಇದ್ದ ಶಸ್ತ್ರಾಸ್ತ್ರವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. https://ainlivenews.com/big-shock-for-hit-man-fans-rohit-sharmas-career-has-been-fixed-for-the-end/ AK 56 ಗನ್, ರಿವಾಲ್ವಾರ್, ಬಂದೂಕು ಸೇರಿದಂತೆ 6 ಶಸ್ತ್ರಾಸ್ತ್ರಗಳನ್ನು ಚಿಕ್ಕಮಗಳೂರು ಪೊಲೀಸರು, ಕೊಪ್ಪ ತಾಲೂಕಿನ ಮೇಗೂರು ಅರಣ್ಯದಲ್ಲಿ ಪತ್ತೆ ಹಚ್ಚಿದ್ದಾರೆ. ನಕ್ಸಲರು ಶರಣಾಗತಿಗೂ ಮುನ್ನ ಮೇಗೂರು ಅರಣ್ಯದಲ್ಲಿ ಅಡಗಿದ್ದರು. ಶರಣಾಗುವ ದಿನ ಮೇಗೂರು ಅರಣ್ಯದಲ್ಲೇ ಕೊನೆಯಬಾರಿಗೆ ಸಭೆ ನಡೆಸಿದ್ದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಶರಣಾಗಿದ್ದರು. ಶರಣಾಗತಿ ವೇಳೆ ಶಸ್ತ್ರಾಸ್ತ್ರ ಹಸ್ತಾಂತರವಾಗ ಬಗ್ಗೆ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೊಪ್ಪ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಕಳೆದ ಎರಡು ದಿನಗಳಿಂದ ಹುಡುಕಾಟ ನಡೆಸಿ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿದೆ. ನಕ್ಸಲರು ಕೊನೆಯಬಾರಿಗೆ ಸಭೆ ನಡೆಸಿದ್ದ ಸ್ಥಳದಲ್ಲೇ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಒಂದು AK 56, ಮೂರು 303 ರೈಫಲ್, ಒಂದು 12 bore SBBL, ಒಂದು ಕಂಟ್ರಿ ಮೇಡ್ ಪಿಸ್ತೂಲ್ ಸೇರಿಂದತೆ ಒಟ್ಟು 6 ಬಂದೂಕು ಪತ್ತೆಯಾಗಿವೆ. ಜೊತೆಗೆ ಹನ್ನೊಂದು 7.62ಎಂಎಂ AK ammunitions, 303 ಬಂದೂಕಿನ 133 ಗುಂಡುಗಳು…
ಹಿಟ್ ಮ್ಯಾನ್ ಫ್ಯಾನ್ಸ್ ಗೆ ಬಿಗ್ ಶಾಕ್ ಎದುರಾಗಿದ್ದು, ರೋಹಿತ್ ಶರ್ಮಾ ಕರಿಯರ್ ಅಂತ್ಯಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಟೆಸ್ಟ್ನಲ್ಲಿ ವೈಫಲ್ಯ ಕಂಡಿರುವ ಹಿಟ್ಮ್ಯಾನ್, ಈಗ ವೈಟ್ ಬಾಲ್ ಕ್ರಿಕೆಟ್ನಲ್ಲಿ ಫಾರ್ಮ್ಗೆ ಮರಳ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ https://ainlivenews.com/good-news-for-bagar-hukum-cultivators-here-is-the-sweet-news-given-by-the-state-government/ ಆಸ್ಟ್ರೇಲಿಯಾ ಸಿರೀಸ್ನಲ್ಲಿ ಫೇಲಾಗಿರುವ ರೋಹಿತ್, ಈಗ ಏಕದಿನ ಫಾರ್ಮೆಟ್ನ ಸವಾಲು ಎದುರಾಗಿದೆ. ಫಾರ್ಮ್ ಸಮಸ್ಯೆಯಿಂದ ಬಳಲುತ್ತಿರೋ ವೈಟ್ಬಾಲ್ ಲೆಜೆಂಡ್, ಚಾಂಪಿಯನ್ಸ್ ಟ್ರೋಫಿಯಲ್ಲಿ ಪರ್ಫಾಮ್ ಮಾಡ್ತಾರಾ ಅನ್ನೋ ಪ್ರಶ್ನೆ ಇದೆ. ವೈಟ್ಬಾಲ್ ಕ್ರಿಕೆಟ್ನಲ್ಲಿ ಒನ್ ಆಫ್ ದಿ ಬೆಸ್ಟ್ ಓಪನರ್ ಆಗಿರುವ ರೋಹಿತ್ ಶರ್ಮಾ, ಟೀಕೆಗಳಿಗೆ ಆನ್ಸರ್ ನೀಡೋಕೆ ರೆಡಿಯಾಗಿದ್ದಾರೆ. ಟೆಸ್ಟ್ನಲ್ಲಿ ರೋಹಿತ್ ಫೇಲಾದ್ರೂ ಏಕದಿನ ಫಾರ್ಮೆಟ್ನಲ್ಲಿ ರೋಹಿತ್ ಶರ್ಮಾ ಉತ್ತಮ ಪ್ರದರ್ಶನವನ್ನ ನೀಡಿದ್ದಾರೆ. 2023ರಿಂದ ಸಾಲಿಡ್ ಫಾರ್ಮ್ನಲ್ಲಿ ಬ್ಯಾಟ್ ಬೀಸಿರೋ ಹಿಟ್ಮ್ಯಾನ್ ಹೀಗಾಗಿ ಚಾಂಪಿಯನ್ಸ್ ಟ್ರೋಪಿಯಲ್ಲಿ ಕಮಾಲ್ ಮಾಡೋ ಲೆಕ್ಕಾಚಾರದಲ್ಲಿದ್ದಾರೆ. 2023ರಿಂದ 27 ಏಕದಿನ ಪಂದ್ಯಗಳನ್ನಾಡಿರುವ ರೋಹಿತ್, 1255 ರನ್ ಕಲೆ ಹಾಕಿದ್ದಾರೆ. ಬರೋಬ್ಬರಿ 52.29ರ ಬ್ಯಾಟಿಂಗ್ ಅವರೇಜ್ನಲ್ಲಿ ರನ್ ಗಳಿಸಿರುವ…
ಬೆಂಗಳೂರು:- ಬಗರ್ ಹುಕುಂ ಅಡಿಯಲ್ಲಿ ಈ ತಿಂಗಳು 5,600 ರೈತರಿಗೆ ಡಿಜಿಟಲ್ ಭೂ ದಾಖಲೆಗಳ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ಹೇಳಿದರು. https://ainlivenews.com/aap-mla-gurpreet-gogi-was-killed-in-an-accidental-shooting/ ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳು ದುರಾದೃಷ್ಟವಶಾತ್ ಮೃತಪಟ್ಟರೆ ಅವರ ಕುಟುಂಬಸ್ಥರಿಗೆ ಕಾನೂನು ಪ್ರಕಾರ ಜಮೀನು ಮಂಜೂರು ಮಾಡಿ ಡಿಜಿಟಲ್ ಸಾಗುವಳಿ ಚೀಟಿ ನೀಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯದ ಎಲ್ಲಾ ತಹಶೀಲ್ದಾರ್ ಹಾಗೂ ಎಡಿಎಲ್‌ಆರ್ ಗಳಿಗೆ ಸೂಚಿಸಿದರು. ಈ ಮೂಲಕ ರಾಜ್ಯ ಸರ್ಕಾರವು ಬಗರ್ ಹುಕುಂ ಸಾಗುವಳಿದಾರರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳು ದುರಾದೃಷ್ಟವಶಾತ್ ಮೃತಪಟ್ಟರೆ ಅವರ ಕುಟುಂಬಸ್ಥರಿಗೆ ಕಾನೂನು ಪ್ರಕಾರ ಜಮೀನು ಮಂಜೂರು ಮಾಡಿ ಡಿಜಿಟಲ್ ಸಾಗುವಳಿ ಚೀಟಿ ನೀಡಬೇಕು ಎಂದು ಕಂದಾಯ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯದ ಬಗರ್ ಹುಕುಂ ಸಾಗುವಳಿದಾರರಿಗೆ ಗುಡ್ ನ್ಯೂಸ್ ಎನ್ನುವಂತೆ ಜನವರಿಯಲ್ಲೇ 5,000 ರೈತರಿಗೆ…
ಚಂಡೀಗಡ:- ಆಕಸ್ಮಿಕ ಗುಂಡಿನ ದಾಳಿಗೆ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾವನ್ನಪ್ಪಿದ್ದಾರೆ. https://ainlivenews.com/a-person-was-killed-by-hitting-a-coconut-egg-for-a-trivial-matter-the-accused-were-arrested/ ಪಂಜಾಬ್‌ನ ಲುಧಿಯಾನ ಕ್ಷೇತ್ರದ ಆಪ್ ಶಾಸಕ ಗುರುಪ್ರೀತ್ ಗೋಗಿ ಆಕಸ್ಮಿಕವಾಗಿ ಗುಂಡು ತಗುಲಿ ನಿನ್ನೆ ತಡರಾತ್ರಿ ಸಾವನ್ನಪ್ಪಿದ್ದಾರೆ. ಗುರುಪ್ರೀತ್ ಗೋಗಿ ಅವರ ತಲೆಗೆ ಗುಂಡು ತಗುಲಿದ ನಂತರ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟು ಹೊತ್ತಿಗಾಗಲೇ ಶಾಸಕರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಗೋಗಿ ಅವರ ಮೃತದೇಹವನ್ನು ಡಿಎಂಸಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ತಲೆಗೆ ಆಕಸ್ಮಿಕವಾಗಿ ಗುಂಡು ತಗುಲಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಅಸಲಿ ಸತ್ಯ ಗೊತ್ತಾಗಲಿದೆ ಎಂದು ತೇಜ ಹೇಳಿದ್ದಾರೆ.
ನೆಲಮಂಗಲ: ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೋರ್ವನನ್ನು ಕೊಲೆ ಮಾಡಿರುವ ಘಟನೆ ನೆಲಮಂಗಲ ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಜರುಗಿದೆ. https://ainlivenews.com/impose-fine-on-roadside-litterers-in-rr-city-limits/ ತೆಂಗಿನಕಾಯಿ ಕದ್ದ ಎಂಬ ಅನುಮಾನದ ಮೇಲೆ ತೆಂಗಿನ ಮೊಟ್ಟೆಯಿಂದ ಹೊಡೆದು ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಸಿದ್ದರಾಜು 45 ಕೊಲೆಯಾದ ವ್ಯಕ್ತಿ. ಮಂಜುನಾಥ್ ಎಂಬುವವರ ತೋಟದಲ್ಲಿ ತೆಂಗಿನಕಾಯಿ ಕದ್ದ ಆರೋಪ ಕೇಳಿ ಬಂದಿದೆ. ಮಂಜುನಾಥ್ ಹಾಗೂ ರವಿ ರಿಂದ ಸಿದ್ದರಾಜು ಕೊಲೆ ಆರೋಪ ಕೇಳಿ ಬಂದಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಜ.10:ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ ರಸ್ತೆಗಳ ಬದಿ ಭಗ್ನಾವಶೇಷಗಳನ್ನು ಹಾಕುವವರ ಮೇಲೆ ದಂಡ ವಿಧಿಸಿ ಕ್ರಮ ಕೈಗೊಳ್ಳಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ವೇಳೆ, ಸಾರ್ವಜನಿಕರೊಬ್ಬರು ಐಡಿಯಲ್ ಹೋಮ್ಸ್ ವ್ಯಾಪ್ತಿಯಲ್ಲಿ ರಸ್ತೆ ಬದಿ ಭಗ್ನಾವಶೇಷಗಳನ್ನು ರಸ್ತೆ ಬದಿ ಹಾಕಿರುವುದರಿಂದ ಓಡಾಟಕ್ಕೆ ಸಮಸ್ಯೆಯಾಗುತ್ತಿದ್ದು, ಅಂತಹವರ ಮೇಲೆ ಕ್ರಮ ಕೈಗೊಳ್ಳಲು ಮನವಿ ಮಾಡಿದರು. ಅದಕ್ಕೆ ಮುಖ್ಯ ಆಯುಕ್ತರು ಪ್ರತಿಕ್ರಿಯಿಸಿ, ರಸ್ತೆ ಬದಿ ಯಾವುದೇ ಇಲಾಖೆಯಾಗಲಿ, ಸಾರ್ವಜನಿಕರಾಗಲಿ ರಸ್ತೆ ಬದಿ ಭಗ್ನಾವಶೇಷಗಳನ್ನು ಹಾಕುವಂತಿಲ್ಲ. ಈ ಸಂಬಂಧ ಬಿ.ಎಸ್.ಡಬ್ಲ್ಯೂ.ಎಂ.ಎಲ್ ನ ಅಧಿಕಾರಿಗಳು, ಮಾರ್ಷಲ್‌ಗಳು ಸೇರಿ ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ ಭಗ್ನಾವಶೇಷ ಹಾಕಿರುವುದನ್ನು ಪರಿಶೀಲನೆ ನಡೆಸಿ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಕೈಗೊಂಡು ಸಂಬಂಧಪಟ್ಟವರಿಗೆ ದಂಡ ವಿಧಿಸಲು ಸೂಚನೆ ನೀಡಿದರು. ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿ: ಅಂಜನಾ…
ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಹಿಂದಿ ಬಿಗ್ ಬಾಸ್ ಸೀಸನ್ 18 ಗ್ರ್ಯಾಂಡ್ ಫಿನಾಲೆ ಹತ್ತಿರ ಬಂದಿದೆ. ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆ ಹಂತಕ್ಕೆ ತಲುಪುತ್ತಿದೆ. ಸದ್ಯ ಬಿಗ್ಬಾಸ್ ಮನೆಯಲ್ಲಿ 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. https://ainlivenews.com/vighna-for-tunnel-road-why-the-opposition-of-the-opposition-mp-who-wrote-a-letter-to-bbmp-commissioner/ ಫಿನಾಲೆ ಟಿಕೆಟ್ ಪಡೆಯಲು ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಯಾರು ಅತಿ ಕಡಿಮೆ ಸಮಯ ತೆಗೆದುಕೊಂಡು ಈ ಟಾಸ್ಕ್ ನಿಭಾಯಿಸುತ್ತಾರೋ ಅವರಿಗೆ ಫಿನಾಲೆಗೆ ಎಂಟ್ರಿ ಸಿಗಲಿದೆ ಎಂದು ಘೋಷಿಸಲಾಗಿತ್ತು. ಮನೆಯಲ್ಲಿ ಇರುವ ಇನ್ನುಳಿದ 8 ಘಟಾನುಘಟಿ ಸ್ಪರ್ಧಿಗಳನ್ನೂ ಮೀರಿಸಿ ಹನುಮಂತ ಈ ಸಾಧನೆ ಮಾಡಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ ಫಿನಾಲೆಗೆ ಕೆಲ ದಿನಗಳು ಮಾತ್ರ ಬಾಕಿ ಇದೆ. ಬಿಗ್ ಬಾಸ್ ರೋಚಕ ಘಟ್ಟದಲ್ಲಿ ಸಾಗುತ್ತಿದ್ದು, ಆಟದ ತೀವ್ರತೆ ಹೆಚ್ಚಾಗುತ್ತಿದ್ದಂತೆ ಸ್ಪರ್ಧಿಗಳ ನಡುವಿನ ಪೈಪೋಟಿಯು ಜೋರಾಗಿದೆ. ಬಿಗ್ ಬಾಸ್ ಸೀಸನ್ 11 ರ ಶೋ ಅಂತಿಮ ಘಟ್ಟಕ್ಕೆ ತಲುಪಲು ಕೆಲವೇ ದಿನಗಳು ಬಾಕಿ ಇದ್ದು, ಈ…
ಬೆಂಗಳೂರು:- ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್‌ವರೆಗೆ ಸುರಂಗ ಮಾರ್ಗ ನಿರ್ಮಾಣಕ್ಕೆ ಡಿಸಿಎಂ ಡಿಕೆಶಿ ಪಟ್ಟು ಹಿಡಿದಿದ್ದಾರೆ. https://ainlivenews.com/naxals-surrender-weapons-are-hidden-in-forests-what-cm-siddaramaiah-said/ ನಗರದಲ್ಲಿ ಟ್ರಾಫಿಕ್ ನಿಯಂತ್ರಣಕ್ಕಾಗಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೆ 18 ಕಿಮೀ ಟನಲ್ ರಸ್ತೆಗೆ ಬಿಬಿಎಂಪಿ ಮುಂದಾಗಿದೆ. ಆದರೆ ಈ ಬೆಂಗಳೂರಿನ ಟನಲ್ ರಸ್ತೆ ಪ್ರಾಜೆಕ್ಟ್ ಬಗ್ಗೆ ಅಪಸ್ವರ ಕೇಳಿಬಂದಿದೆ. ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಜಾಮ್‌ಗೆ ಪರಿಹಾರ ಎಂದು ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್‌ವರೆಗೆ ಸುರಂಗ ಮಾರ್ಗ ನಿರ್ಮಾಣಕ್ಕೆ ಡಿಸಿಎಂ ಡಿಕೆಶಿ ಪಟ್ಟು ಹಿಡಿದಿದ್ದಾರೆ. ಡಿಪಿಆರ್ ಕೂಡ ಸಿದ್ಧವಾಗಿದೆ. ಆದರೆ ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಸಂಸದ ಪಿಸಿ ಮೋಹನ್ ಬಿಬಿಎಂಪಿ ಕಮೀಷನರ್‌ಗೆ ಪತ್ರ ಬರೆದು ಯೋಜನೆಯಿಂದಾಗುವ ತೊಂದರೆ ಬಗ್ಗೆ ವಿವರಿಸಿದ್ದಾರೆ. ಇದೊಂದು ಅವೈಜ್ಞಾನಿಕ ನಿರ್ಧಾರ. ಟನಲ್ ಬೇಡ, ಮೆಟ್ರೋ ಬೇಕು ಎಂದು ಹೇಳಿದ್ದಾರೆ. ಡಿಪಿಆರ್‌ನಲ್ಲಿ ಸಾಕಷ್ಟು ಲೋಪದೋಷ ಹೊಂದಿರುವ ಈ ಪ್ರಾಜೆಕ್ಟ್ ಬೆಂಗಳೂರಿಗೆ ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಸಲ್ಲ ಎಂಬುದು ಸಂಸದರ ವಾದ. ಅಲ್ಲದೇ ಸಾವಿರಾರು…