ಮಂಗಳೂರು ಜ 11: ಕಂಬಳ ಕ್ರೀಡೆ ಮತ್ತು ಕಲೆಗೆ ಜಾತಿ-ಧರ್ಮದ ಬೇಲಿ ಇಲ್ಲ. ಇದು ಸರ್ವರ ಸಂಭ್ರಮ. ನಮ್ಮ ದೇಶ ಬಹುತ್ವದ ದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು. https://ainlivenews.com/guaranteed-to-be-out-of-bigg-boss-this-week-where-the-strong-are-weak/ ಉಳ್ಳಾಲ ನರಿಂಗಾನದ ಮೂರನೇ ವರ್ಷದ ಲವ-ಕುಶ ಜೋಡುಕೆರೆ ಕಂಬಳೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಜನಪದ ಕ್ರೀಡೆ ಕಂಬಳ ಸರ್ವ ಜಾತಿ ಧರ್ಮದ ಜನಸಮುದಾಯವನ್ನು ಬೆಸೆಯುವಂತೆ ಮಾಡುತ್ತಿದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತ ಸಂಸ್ಕೃತಿಯ ಒಂದು ಭಾಗ ಕರಾವಳಿ ಜಿಲ್ಲೆಗಳ ಸಂಸ್ಕೃತಿಯಾಗಿದೆ. ನಮ್ಮ ಸರ್ಕಾರ ಕೂಡ ಎಲ್ಲಾ ಜಾತಿ, ಎಲ್ಲಾ ಧರ್ಮದ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಮಹಿಳೆಯರಿಗೆ ಆರ್ಥಿಕ ಶಕ್ತಿ ಕೊಡುವ ಮೂಲಕ ಕುಟುಂಬಗಳ ಮತ್ತು ಮಹಿಳಾ ಸಮಾಜದ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಇಡೀ ದೇಶದಲ್ಲಿ ಮೊದಲಿಗೆ ಕೊಟ್ಟಿದ್ದು ನಮ್ಮ ಸರ್ಕಾರ. ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ ಅವರು ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮಾಡಿದ್ದು ನಮ್ಮ ಸರ್ಕಾರ. ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 10 ಸಾವಿರ ಸಿಗುವಂತೆ ಮಾಡುವ ಜವಾಬ್ದಾರಿಯನ್ನು ನಮ್ಮ ಸರ್ಕಾರ ವಹಿಸಿಕೊಂಡಿದೆ…
Author: AIN Author
ಬಿಗ್ಬಾಸ್ ಕನ್ನಡ ಸೀಸನ್ 11 ಮುಗಿಯಲು ಕೆಲವೇ ದಿನಗಳು ಬಾಕಿ ಇದೆ. ಹನುಮಂತುಗೆ ಈಗಾಗೇ ಫಿನಾಲೆ ಟಿಕೆಟ್ ಸಿಕ್ಕಾಗಿದೆ. ಈ ಸೀಸನ್ನ ಕೊನೆಯ ಕ್ಯಾಪ್ಟನ್ ಆಗಿ ಅವರು ಆಯ್ಕೆ ಆಗಿದ್ದಾರೆ. ಇಂದು ಶನಿವಾರವಾಗಿದ್ದು ವಾರದ ಪಂಚಾಯಿತಿ ನಡೆಸಿಕೊಡಲು ಸುದೀಪ್ ಬಂದಿದ್ದಾರೆ. ಈ ವಾರ ಮನೆಯ ಸ್ಪರ್ಧಿಗಳು ಬಲು ಜಿದ್ದಾಜಿದ್ದಿನಿಂದ ಗೇಮ್ಗಳನ್ನು ಆಡಿದ್ದಾರೆ. ಒಬ್ಬರ ಮೇಲೊಬ್ಬರು ಬಿದ್ದು, ಹೊಡೆದಾಡಿಕೊಂಡು, ಬೈದಾಡಿಕೊಂಡು ಆಟ ಆಡಿದ್ದಾರೆ. https://ainlivenews.com/a-tamil-bjp-leader-criticized-the-surrender-of-naxals-in-karnataka/ ಬಿಗ್ ಬಾಸ್ ಸೀಸನ್ 11 ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. 104ನೇ ದಿನಕ್ಕೆ ಕಾಲಿಟ್ಟಿರೋ ಬಿಗ್ಬಾಸ್ ಮನೆಯಲ್ಲಿ ಒಟ್ಟು 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಆದ್ರೆ ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು 5 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ತ್ರಿವಿಕ್ರಮ್, ಮೋಕ್ಷಿತಾ ಪೈ, ಭವ್ಯಾ ಗೌಡ, ಚೈತ್ರಾ ಕುಂದಾಪುರ ಹಾಗೂ ಧನರಾಜ್ ಆಚಾರ್ ನಾಮಿನೇಷನ್ ಬಿಸಿಯಲ್ಲಿದ್ದಾರೆ. ಈ ಐದು ಮಂದಿಯಲ್ಲಿ ಈ ವಾರ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ನಾಮಿನೇಷನ್‌ನಲ್ಲಿ ಸ್ಟ್ರಾಂಗ್ ಸ್ಪರ್ಧಿಗಳೇ ಇರುವುದರಿಂದ…
ಮಂಗಳೂರು:- ಕರ್ನಾಟಕದಲ್ಲಿ ನಕ್ಸಲರ ಶರಣಾಗತಿ ಬಗ್ಗೆ ತಮಿಳಿನ ಬಿಜೆಪಿ ಮುಖಂಡ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದಾರೆ. https://ainlivenews.com/illicit-relationship-with-nadini-anna-who-killed-herself-because-of-the-obstacle/ ಈ ಸಂಬಂಧ ಮಾತನಾಡಿದ ಅವರು, 6 ಮಂದಿ ನಕ್ಸಲರ ಶರಣಾಗತಿಯ ಕುರಿತು ಸರ್ಕಾರ ನಡೆದುಕೊಂಡ ರೀತಿ ಹಾಗೂ ನಾಯಕ ವಿಕ್ರಂಗೌಡ ಎನ್‌ಕೌಂಟರ್ ಕೂಡ ಸಂಶಯ ಮೂಡಿಸುತ್ತಿದೆ. ಈ ಹಿಂದೆ ನಾನು ಚಿಕ್ಕಮಗಳೂರು ಎಸ್ಪಿ ಆಗಿದ್ದ ಸಂದರ್ಭದಲ್ಲಿ ನಕ್ಸಲರು ಶರಣಾಗಿದ್ದರು. ನಕ್ಸಲರ ಶರಣಾಗತಿ ಪ್ರಕ್ರಿಯೆಯಲ್ಲಿ ನಾನು ಭಾಗವಹಿಸಿದ್ದೆ. ನಿಯಮಗಳ ಪ್ರಕಾರ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಎದುರು ನಕ್ಸಲರು ಶರಣಾಗಬೇಕು. ಆನಂತರ ಬೇರೆ ಪ್ರಕ್ರಿಯೆಗಳು ನಡೆಯುತ್ತದೆ. ಇಲ್ಲಿ ರಾಜಕೀಯ ಮೈಲೇಜ್‌ಗೋಸ್ಕರ ಶರಣಾಗತಿ ಪ್ರಕ್ರಿಯೆ ನಡೆಸಲಾಗಿದೆ ಎಂದರು. ನಕ್ಸಲ್ ಬೆಂಬಲಿಗರು ಸರ್ಕಾರದ ಮೇಲೆ ಹಾಗೂ ನಾಗರಿಕ ಸಮಾಜದ ಮೇಲೆ ಪ್ರಭಾವ ಬೀರಲಿದ್ದಾರೆ. ನಕ್ಸಲರು ಶರಣಾದಾಗ ಜನರಿಗೆ ವಿಶ್ವಾಸ ಬರಬೇಕು. ಆದರೆ ಜನರಿಗೆ ವಿಶ್ವಾಸವಿಲ್ಲ. ಶರಣಾಗತಿಯ ಬಗ್ಗೆ ಗೃಹ ಸಚಿವರಿಗೆ ಮಾಹಿತಿಯ ಕೊರತೆಯಿದ್ದ ಹಾಗೆ ಉಲ್ಟಾ-ಪಲ್ಟಾ ಮಾತನಾಡುತ್ತಾರೆ. ಶರಣಾದ ನಕ್ಸಲರು ನಾಗರಿಕ ಸಮಾಜದ ಮೇಲೆ ಪ್ರಭಾವ ಬೀರುವ ಅಪಾಯವಿದೆ ಎಂದು…
ಹಾಸನ:- ಹಾಸನದ ಮುಕುಂದೂರು ಹೊಸಳ್ಳಿ ಗ್ರಾಮದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಎನ್ನುವ ಕಾರಣಕ್ಕೆ ತಮ್ಮನನ್ನೇ ಆತನ ಅಣ್ಣ ಹಾಗೂ ಪತ್ನಿ ಸೇರಿ ಕೊಲೆಗೈದ ಘಟನೆ ಜರುಗಿದೆ. https://ainlivenews.com/dk-shivakumar-ct-ravi-big-drama-master-dcm-dk-shivakumar-satire/ ಆನಂದ್ ಕೊಲೆಯಾದ ವ್ಯಕ್ತಿ. ಆತನ ದೊಡ್ಡಪ್ಪನ ಪುತ್ರ ಸೋಮಶೇಖರ ಹಾಗೂ ಆನಂದನ ಪತ್ನಿ ಕೊಲೆಗೈದ ಆರೋಪಿಗಳಾಗಿದ್ದಾರೆ. ಆರೋಪಿಗಳು ಆನಂದನನ್ನು ಕೊಲೆ ಮಾಡಿ ತಮಗೇನು ಗೊತ್ತಿಲ್ಲದಂತೆ ನಾಟವಾಡಿದ್ದರು. ಇಬ್ಬರು ಸೇರಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಬಿಂಬಿಸಲು ಹೊರಟಿದ್ದರು. ಆದರೆ ಗ್ರಾಮಸ್ಥರು ಪೊಲೀಸರಿಗೆ ನೀಡಿದ ಮಾಹಿತಿ ಮೇರೆಗೆ, ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಪತ್ನಿ ಮರಣದ ಬಳಿಕ ಸೋಮಶೇಖರ ತಮ್ಮನ ಮನೆಗೆ ಬಂದು ತಿಂಡಿ, ಊಟ ಮಾಡುತ್ತಿದ್ದ. ಈ ವೇಳೆ ನಾದಿನಿ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ. ಈ ವಿಷಯ ಆನಂದನಿಗೆ ತಿಳಿದು, ಆಪ್ತರ ಜೊತೆ ದುಃಖ ತೋಡಿಕೊಂಡಿದ್ದ. ವಿಷಯ ಹೊರಗೆ ಗೊತ್ತಾದರೆ ಮರ್ಯಾದೆ ಹೋಗುತ್ತದೆ ಎಂದು ಪತ್ನಿಗೆ ತಿಳುವಳಿಕೆ ಹೇಳಿ ಸಂಸಾರ ನಡೆಸಿಕೊಂಡು ಹೋಗುವಂತೆ ಸಲಹೆ ನೀಡಿದ್ದ. ಆದರೆ ಅಕ್ರಮ ಸಂಬಂಧಕ್ಕೆ ಆನಂದ…
ಚಿಕ್ಕಮಗಳೂರು:- ಸಿ.ಟಿ.ರವಿ ದೊಡ್ಡ ಡ್ರಾಮಾ ಮಾಸ್ಟರ್ ಎಂದು DCM ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. https://ainlivenews.com/chemical-leak-18-workers-in-the-factory-are-sick/ ಈ ಸಂಬಂಧ ಮಾತನಾಡಿದ ಅವರು, ಸಿ.ಟಿ ರವಿ ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ ಎಂಬ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದರು. ಅವರ ಮಾತು-ವಿಚಾರ ನೋಡಿದ್ರೆ ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ಭಾವಿಸಿರಲಿಲ್ಲ. ಬೇರೆ ಯಾರು ಒಪೆÇ್ಪೀದು ಬೇಡ, ಆತ್ಮಸಾಕ್ಷಿ ಒಪ್ಪಿದ್ರೆ ಸಾಕು. ಹಾಗೆ ಮಾತಾಡಬೇಕು ಎಂದಿದ್ದಾರೆ. 100 ಜನ ಬಿಜೆಪಿ ನಾಯಕರು ಹಾಗೆ ಮಾತನಾಡಬಾರದಿತ್ತು ಎಂದು ಹೇಳಿದ್ದಾರೆ. ಕ್ಷಮೆ ಕೇಳಿದ್ರೆ ಮುಗಿದುಹೋಯ್ತು. ಸುಳ್ಳಿಗೆ ಸುಳ್ಳು ಹೇಳಿಕೊಂಡು ಹೋದ್ರೆ ಕೊನೆ ಇಲ್ಲ. ಅವರ ಹತ್ತಿರ ತನಿಖಾ ತಂಡ ಇದೆ, ತನಿಖೆ ಮಾಡಿಸಿಕೊಳ್ಳಲಿ ಎಂದಿದ್ದಾರೆ.
ಕಾರವಾರ:- ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ಬಳಿಯ ಆದಿತ್ಯ ಬಿರ್ಲಾ ಗ್ರೂಪ್ನ ಕಾಸ್ಟಿಕ್ ಸೋಡಾ ಉತ್ಪಾದಿಸುವ ಗ್ರಾಸಿಮ್ ಇಂಡಸ್ಟ್ರೀಸ್ನಲ್ಲಿ ಕಾರ್ಖಾನೆಯಲ್ಲಿ ರಾಸಾಯನಿಕ ಸೋರಿಕೆಯಿಂದ 18 ಕಾರ್ಮಿಕರು ಅಸ್ವಸ್ಥಗೊಂಡಿರುವಂತಹ ಘಟನೆ ಜರುಗಿದೆ. https://ainlivenews.com/no-one-is-an-enemy-in-politics-prahlad-joshi/ ಕಾರವಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ನೀಲಕಂಠ, ಜಹನ್ನೂರು, ಕಮಲೇಶ್ ವರ್ಮಾ, ನಂದಕಿಶೋರ್, ದೀಪು, ಸೃಜನ್, ನಜೀದುಲ್ಲಾ, ಬೇಜನ್ ಕುಮಾರ್, ಕಿಶನ್ ಕುಮಾರ್, ಅಜೀಜ್, ಮೋಹಿತ್ ವರ್ಮಾ ಸೇರಿದಂತೆ ಕರ್ನಾಟಕ, ಉತ್ತರಪ್ರದೇಶ ಮತ್ತು ಬಿಹಾರ ಮೂಲದ 18 ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ ಸದ್ಯ ಸ್ಥಳಕ್ಕೆ ಡಿವೈಎಸ್ಪಿ ಗಿರೀಶ್ ಹಾಗೂ ಪೊಲೀಸರ ತಂಡ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದು, ಕಾರ್ಮಿಕರಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ
ಹುಬ್ಬಳ್ಳಿ:- ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ. https://ainlivenews.com/father-stepmother-killed-for-property-son-arrested/ ಈ ಸಂಬಂಧ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ತಾನಾಗಲೀ, ತನ್ನ ಪಕ್ಷವಾಗಲೀ ಅಥವಾ ಪ್ರಧಾನ ಮಂತ್ರಿಯವರೇ ಆಗಲಿ, ರಾಜಕೀಯದಲ್ಲಿ ಯಾರನ್ನೂ ಶತ್ರುಗಳೆಂದು ಭಾವಿಸುವುದಿಲ್ಲ ಎಂದರು. ರಾಜಕೀಯ ಬದುಕಿನಲ್ಲಿ ತನಗೆ ಮಾಜಿ ಪ್ರಧಾನ ಮಂತ್ರಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಒಡನಾಟದ ಸುಯೋಗ ಸಿಕ್ಕಿತ್ತು, ಅವರು ಯಾವತ್ತೂ ತಮ್ಮ ಎದುರಾಳಿಗಳನ್ನು ಶತ್ರುಗಳೆಂದು ಪರಿಗಣಿಸುತ್ತಿರಲಿಲ್ಲ, ಅದನ್ನೇ ತಾವು ಅವರಿಂದ ಕಲಿತಿದ್ದು, ಪ್ರಜಾಪ್ರಭುತ್ವ ಇರುವ ಭಾರತ ಮತ್ತು ಇಂಗ್ಲೆಂಡ್ನಂಥ ದೇಶಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳಿರುತ್ತವೆ, ಪ್ರತಿ ಅಂದರೆ ಶತ್ರುವಲ್ಲ ಎಂದರು.
ಹುಬ್ಬಳ್ಳಿ:- ಆಸ್ತಿಗಾಗಿ ತಂದೆ, ತಾಯಿಯನ್ನು ಹತ್ಯೆಗೈದಿದ್ದ ಪಾಪಿ ಪುತ್ರನನ್ನು ಅರೆಸ್ಟ್ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ಜರುಗಿದೆ. https://ainlivenews.com/do-you-take-bp-medication-if-so-this-risk-is-guaranteed/ ಗಂಗಾಧರ ಬಂಧಿತ ಆರೋಪಿ. ನಿನ್ನೆ ಹುಬ್ಬಳ್ಳಿಯ ಕುಸಗುಲ್ ಗ್ರಾಮದಲ್ಲಿ ಅಶೋಕ್ ಹಾಗೂ ಶಾರದಾ ಎಂಬವರನ್ನು ಆರೋಪಿ ಕೊಲೆ ಮಾಡಿದ್ದ. ತನಿಖೆ ವೇಳೆ ಆಸ್ತಿಗಾಗಿ ಮಗನೇ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿತ್ತು. ಕೇವಲ ಎರಡು ಎಕರೆ ಜಮೀನಿಗಾಗಿ ಹೆತ್ತವರನ್ನೇ ಆರೋಪಿ ಕಬ್ಬಿಣದ ರಾಡ್‍ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಬಳಿಕ ಸ್ಥಳದಿಂದ ಪರಾರಿಯಾಗಿದ್ದ. ಕೊಲೆ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಇತ್ತೀಚೆಗೆ ಬದಲಾದ ಜೀವನಶೈಲಿಯಿಂದಾಗಿ ನಾವು ಬಿಪಿ ಅಂದರೆ ಬ್ಲಡ್ ಪ್ರೆಶರ್ ಬಗ್ಗೆ ಹೆಚ್ಚಾಗಿಯೇ ಕೇಳುತ್ತಿದ್ದೇವೆ. ಕಳೆದ ಒಂದೂವರೆ ವರ್ಷದಿಂದ ಕೊರೊನಾ ಬಂದ ಮೇಲೆ ಹೆಚ್ಚು ಅಥವಾ ಕಡಿಮೆ ಬಿಪಿ (ರಕ್ತದ ಒತ್ತಡ) ಪ್ರಕರಣಗಳನ್ನು ಸ್ವಲ್ಪ ಹೆಚ್ಚಾಗಿಯೇ ಕಾಣುತ್ತಿದ್ದೇವೆ. ಆಫೀಸಿನ, ವೈಯಕ್ತಿಕ ಅಥವಾ ಕೌಟುಂಬಿಕ ಕಾರಣಗಳಿಂದ ಬಿಪಿ ಜಾಸ್ತಿ ಅಥವಾ ಕಡಿಮೆ ಆಗಬಹುದು. https://ainlivenews.com/poor-performance-in-the-test-series-virushka-receives-blessings-from-premanand-maharaj/ ಜನರು ಸಾಮಾನ್ಯವಾಗಿ ತೆಗೆದುಕೊಳ್ಳುವ ಔಷಧಿಗಳು ದೇಹದ ಪೊಟ್ಯಾಸಿಯಮ್ ಮಟ್ಟವನ್ನು ಕಡಿಮೆ ಮಾಡಬಹುದು, ಇದು ಗಂಭೀರ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು ಎಂದು ವರದಿ ಹೇಳುತ್ತದೆ. ನೀವೂ ರಕ್ತದೊತ್ತಡ ಔಷಧಿಗಳನ್ನು ಸಹ ತೆಗೆದುಕೊಳ್ಳುತ್ತಿದ್ದರೆ ಅದರ ಅನಾನುಕೂಲಗಳ ಬಗ್ಗೆ ತಿಳಿಯೋಣ. ಅಧಿಕ ರಕ್ತದೊತ್ತಡ ಮಾತ್ರೆಗಳು ಎಷ್ಟು ಅಪಾಯಕಾರಿ: ಈ ಔಷಧಿಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ನಿಗಾವಹಿಸಲು ವೈದ್ಯರು ಮತ್ತು ಆರೋಗ್ಯ ತಜ್ಞರನ್ನು ಕೇಳಲಾಗಿದೆ ಎಂದು ಫಾರ್ಮಾಕೊಪಿಯಾ ಅಧ್ಯಯನವು ಹೇಳುತ್ತದೆ. ಇದರಿಂದ ರೋಗಿಗಳಿಗೆ ಯಾವುದೇ ಹಾನಿ ಉಂಟಾದರೆ, ತಕ್ಷಣ NCC ಗೆ ವರದಿ ಮಾಡಿ ಇದರಿಂದ ಅಪಾಯಗಳನ್ನು ಸಕಾಲದಲ್ಲಿ ತಡೆಗಟ್ಟಬಹುದು. ಹೈಪೋಕಾಲೆಮಿಯಾ ಅಥವಾ ಅನಿಯಮಿತ…
ಚಿಕ್ಕಮಗಳೂರು:- ಶರಣಾಗತ ನಕ್ಸಲರ ಬಳಿ ಇದ್ದ ಶಸ್ತ್ರಾಸ್ತ್ರವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. https://ainlivenews.com/big-shock-for-hit-man-fans-rohit-sharmas-career-has-been-fixed-for-the-end/ AK 56 ಗನ್, ರಿವಾಲ್ವಾರ್, ಬಂದೂಕು ಸೇರಿದಂತೆ 6 ಶಸ್ತ್ರಾಸ್ತ್ರಗಳನ್ನು ಚಿಕ್ಕಮಗಳೂರು ಪೊಲೀಸರು, ಕೊಪ್ಪ ತಾಲೂಕಿನ ಮೇಗೂರು ಅರಣ್ಯದಲ್ಲಿ ಪತ್ತೆ ಹಚ್ಚಿದ್ದಾರೆ. ನಕ್ಸಲರು ಶರಣಾಗತಿಗೂ ಮುನ್ನ ಮೇಗೂರು ಅರಣ್ಯದಲ್ಲಿ ಅಡಗಿದ್ದರು. ಶರಣಾಗುವ ದಿನ ಮೇಗೂರು ಅರಣ್ಯದಲ್ಲೇ ಕೊನೆಯಬಾರಿಗೆ ಸಭೆ ನಡೆಸಿದ್ದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಶರಣಾಗಿದ್ದರು. ಶರಣಾಗತಿ ವೇಳೆ ಶಸ್ತ್ರಾಸ್ತ್ರ ಹಸ್ತಾಂತರವಾಗ ಬಗ್ಗೆ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೊಪ್ಪ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಕಳೆದ ಎರಡು ದಿನಗಳಿಂದ ಹುಡುಕಾಟ ನಡೆಸಿ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿದೆ. ನಕ್ಸಲರು ಕೊನೆಯಬಾರಿಗೆ ಸಭೆ ನಡೆಸಿದ್ದ ಸ್ಥಳದಲ್ಲೇ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಒಂದು AK 56, ಮೂರು 303 ರೈಫಲ್, ಒಂದು 12 bore SBBL, ಒಂದು ಕಂಟ್ರಿ ಮೇಡ್ ಪಿಸ್ತೂಲ್ ಸೇರಿಂದತೆ ಒಟ್ಟು 6 ಬಂದೂಕು ಪತ್ತೆಯಾಗಿವೆ. ಜೊತೆಗೆ ಹನ್ನೊಂದು 7.62ಎಂಎಂ AK ammunitions, 303 ಬಂದೂಕಿನ 133 ಗುಂಡುಗಳು…