ಬೆಂಗಳೂರು:- ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷರ ಬದಲಾವಣೆ ಆಗಬೇಕು ಎನ್ನುವ ಬಗ್ಗೆ ಕಾಂಗ್ರೆಸ್‌ನಲ್ಲೂ ಜೋರು ಚರ್ಚೆಗಳು ನಡೆದಿವೆ. ಇದೀಗ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಇದೀಗ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಆಗಿರುವ ಡಿ.ಕೆ ಶಿವಕುಮಾರ್ ಅವರಿಗೆ ಭಾರೀ ಪ್ರಭಾವಿ ಇಲಾಖೆ ಹಾಗೂ ರಾಜ್ಯಾಧ್ಯಕ್ಷರ ಹುದ್ದೆಯೂ ಇದೆ ಎಂದು ಕಾಂಗ್ರೆಸ್‌ನ ಕೆಲವು ಸಚಿವರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. https://ainlivenews.com/mother-scolded-to-read-the-exam-jumping-off-the-20th-floor-and-the-girl-suicide/ ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ರಾಜ್ಯಾಧ್ಯಕ್ಷರ ಬದಲಾವಣೆಯ ಬಗ್ಗೆ ಕಳೆದ ಒಂದು ವರ್ಷದಿಂದಲೂ ಚರ್ಚೆ ನಡೆಯುತ್ತಿದೆ. ಬಿಜೆಪಿಯಲ್ಲಿ ಈ ಬಗ್ಗೆ ಜೋರು ಚರ್ಚೆ ನಡೆದಿದ್ದರೆ. ಕಾಂಗ್ರೆಸ್‌ನಲ್ಲೂ ಈ ಬಗ್ಗೆ ಜೋರು ಚರ್ಚೆಗಳು ನಡೆದಿದ್ದು, ಬಹಿರಂಗವಾಗಿಯೇ ಕೆಲವರು ಹೇಳಿಕೆ ನೀಡಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ರಾಜ್ಯಾಧ್ಯಕ್ಷರ ಬದಲಾವಣೆಯ ಬಗ್ಗೆ ಹೈಕಮಾಂಡ್ ಕೊನೆಗೂ ಒಂದು ನಿರ್ಧಾರಕ್ಕೆ ಬಂದಂತಿದೆ. ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಯ ವಿಷಯ ಕ್ಲೈಮ್ಯಾಕ್ಸ್ ತಲುಪಿದೆ. ಈ…
Author: AIN Author
ಬೆಂಗಳೂರು:- ಕಾಡುಗೋಡಿಯ ಅಪಾರ್ಟ್ಮೆಂಟ್‌ನಲ್ಲಿ ಪರೀಕ್ಷೆಗೆ ಓದಿಕೊಳ್ಳುವಂತೆ ತಾಯಿ ಗದರಿಸಿದ್ದಕ್ಕೆ 20ನೇ ಮಹಡಿಯಿಂದ ಜಿಗಿದು ಬಾಲಕಿ ಸೂಸೈಡ್ ಮಾಡಿಕೊಂಡ ಘಟನೆ ಜರುಗಿದೆ. https://ainlivenews.com/if-metro-fares-are-to-be-reduced-the-government-must-do-this-tejaswi-surya/ 16 ವರ್ಷದ ಬಾಲಕಿ ಮೃತ ಪಟ್ಟಿದ್ದಾಳೆ. ಕಾಡುಗೋಡಿಯ ಅಪಾರ್ಟ್ಮೆಂಟ್‌ನಲ್ಲಿದ್ದ ಬಾಲಕಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದಳು. ಎಸ್‌ಎಸ್‌ಎಲ್‌ಸಿಯ ಪರೀಕ್ಷೆ ಹತ್ತಿರ ಬರುತ್ತಿದ್ದ ಕಾರಣ ಓದುವಂತೆ ತಾಯಿ ಗದರಿಸಿದ್ದಾರೆ. ಇದರಿಂದ ಕೋಪಗೊಂಡ ಬಾಲಕಿ ವಾಸಿಸುತ್ತಿದ್ದ ಅಪಾರ್ಟ್ಮೆಂಟ್‌ನ 20ನೇ ಮಹಡಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಕಾಡುಗೋಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ನವದೆಹಲಿ:- ರಾಜ್ಯ ಸರ್ಕಾರ ಪತ್ರ ಬರೆದರೆ ಮಾತ್ರ ಮೆಟ್ರೋ ದರ ಇಳಿಕೆ ಮಾಡಲಾಗುತ್ತದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಈಗಾಗಿರುವ ದರ ಪರಿಷ್ಕರಣೆಯನ್ನುಮೆಟ್ರೋ ನಿಯಮಗಳಲ್ಲಿ ತಡೆ ಹಿಡಿಯಲು ಸಾಧ್ಯವಿಲ್ಲ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಕೋರ್ಟ್ ಮಧ್ಯಪ್ರವೇಶ ಮಾಡುತ್ತಾ ಗೊತ್ತಿಲ್ಲ ಎಂದು ಹೇಳಿದರು. https://ainlivenews.com/be-aware-if-you-often-experience-pain-in-your-right-shoulder-dont-ignore-it-its-a-sign-of-this-disease/ ನಾನು ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಮಾತನಾಡಿದ್ದೇವೆ. ಪ್ರಯಾಣಿಕರ ಸಂಖ್ಯೆ ಕುಸಿತದ ಬಗ್ಗೆಯೂ ಗಮನಕ್ಕೆ ತರಲಾಗಿದೆ. ಅವರು ರಾಜ್ಯ ಸರ್ಕಾರ ಮತ್ತೊಮ್ಮೆ ಪತ್ರ ಬರೆದು ದರ ಪರಿಷ್ಕರಣೆ ಮಾಡಲು ಮನವಿ ಮಾಡಿದರೆ ಮತ್ತೊಮ್ಮೆ ಸಮಿತಿ ರಚಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದಿಂದ ಸಿಎಂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು. ಇದರಿಂದ ಮಾತ್ರ ದರ ಇಳಿಕೆ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ನಾವು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು. ಮೆಟ್ರೋ ದರಗಳು ಏರಿಕೆಯಾಗಿ ಜನರಿಗೆ ಸಮಸ್ಯೆಯಾಗಿದೆ. ಮಧ್ಯಮ ವರ್ಗದ ಜನರಿಗೆ ಇನ್ನು ತೊಂದರೆಯಾಗಿದೆ. ಏಕಾಏಕಿ ಮೆಟ್ರೋ ದರವನ್ನು 50%, 100% ಏರಿಕೆಯಾಗಿದೆ. ಸಂಬಳದ ದೊಡ್ಡ…
ನಿಮಗೆ ಆಗಾಗ ಬಲ ಭುಜ ನೋಯುತ್ತಿದ್ದರೆ ನಿರ್ಲಕ್ಷ್ಯ ಬೇಡ. ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಏಕೆಂದರೆ ಇದು ಈ ಕಾಯಿಲೆಯ ಸಂಕೇತವಾಗಿರಬಹುದು. https://ainlivenews.com/kolara-as-kannadigas-we-must-save-kannada-purushottam-bilimale-chairman-of-the-kannada-development-authority/ ಸಾಮಾನ್ಯವಾಗಿ ಬಲ ಭುಜದಲ್ಲಿ ಆಗಾಗ್ಗೆ ನೋವು ಕಾಣಿಸಿಕೊಳ್ಳುತ್ತಾ ಇರುತ್ತದೆ. ಹೆಚ್ಚಾಗಿ ಈ ಸಮಸ್ಯೆಗಳು ಗಾಯಗಳು, ತಪ್ಪಾಗಿ ಕುಳಿತುಕೊಳ್ಳುವುದು ಅಥವಾ ಸ್ನಾಯು ಉಳುಕುಗಳಿಂದ ಉಂಟಾಗುತ್ತದೆ. ಆದರೆ ಈ ನೋವು ನಿರಂತರವಾಗಿದ್ದರೆ ಮತ್ತು ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳು ಉಂಟಾಗುತ್ತಿದ್ದರೆ, ಇದು ಗಂಭೀರ ಅಪಾಯದ ಸಂಕೇತವಾಗಿರಬಹುದು. ಇದು ಪಿತ್ತಕೋಶದ ಕಲ್ಲು ಸಹ ಆಗಿರಬಹುದು. ಎಂದಿಗೂ ಇದೊಂದು ಸಾಮಾನ್ಯ ಸಮಸ್ಯೆ ಎಂದು ನಾವು ನಿರ್ಲಕ್ಷಿಸಬಾರದು. ಪಿತ್ತಕೋಶದ ಸಮಸ್ಯೆಗಳು ಸಾಮಾನ್ಯವಾಗಿ ಹೊಟ್ಟೆ ನೋವನ್ನು ಉಂಟು ಮಾಡುತ್ತವೆಯಾದರೂ, ದೇಹದ ಸಂಕೀರ್ಣ ನರ ಸಂಪರ್ಕಗಳು ಬಲ ಭುಜದಲ್ಲಿ ನೋವಿಗೆ ಕಾರಣವಾಗಬಹುದು. ನಿಖರವಾದ ರೋಗನಿರ್ಣಯ ಮತ್ತು ಪರಿಣಾಮಕಾರಿ ಚಿಕಿತ್ಸೆಗೆ ಪಿತ್ತಗಲ್ಲು ಹಾಗೂ ಭುಜದ ಅಸ್ವಸ್ಥತೆಯ ನಡುವೆ ಇರುವ ಸಂಬಂಧದ ಬಗ್ಗೆ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಸದ್ಯ ನಾವಿಂದು ಪಿತ್ತಕೋಶಕ್ಕೆ ಸಂಬಂಧಿಸಿದ ಒಂದಷ್ಟು ವಿವರವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಪಿತ್ತಕೋಶದ ಕಲ್ಲುಗಳು…
ಕೋಲಾರ – ಕನ್ನಡವನ್ನು ಕನ್ನಡಿಗರಾಗಿ ನಾವು ಉಳಿಸದಿದ್ದರೆ, ಜಗತ್ತಿನ ಯಾವುದೇ ಶಕ್ತಿ ಉಳಿಸಲಾರದು. ಎಲ್ಲಾ ಕನ್ನಡಿಗರು ಕನ್ನಡ ವಿಷಯದಲ್ಲಿ ಆತ್ಮವಂಚನೆ ಇಲ್ಲದೆ, ಪರಿಚಾರಿಕೆ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರು ತಿಳಿಸಿದರು. https://ainlivenews.com/what-do-you-think-about-madam-darshan-when-asked-about-the-actor-ramya-garam-said/ ಇಂದು ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಪ್ರಾಧಿಕಾರದ ಮುಖ್ಯ ಕೆಲಸ ಸರ್ಕಾರ ಕನ್ನಡಪರ ತೀರ್ಮಾನಗಳನ್ನು ತೆಗೆದುಕೊಂಡರೆ, ಅಂತಹ ತೀರ್ಮಾನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು. ಈ ನಿಟ್ಟಿನಲ್ಲಿ ಸರ್ಕಾರವು 3000 ಕ್ಕೂ ಹೆಚ್ಚಿನ ಆದೇಶಗಳನ್ನು ಹೊರಡಿಸಲಾಗಿದೆ, ಗಡಿ ಪ್ರದೇಶದ ಶಾಲೆಗಳು ಹೆಚ್ಚಾಗಿ ಕನ್ನಡೀಕರಣ ಗೊಳಿಸಬೇಕು ಮತ್ತು ಹೊರಗಿನಿಂದ ಬರುವವರನ್ನು ಕನ್ನಡಿಗರೊಂದಿಗೆ ವ್ಯವಹಾರ ಮಾಡುವಾಗ ಅವರನ್ನು ಕನ್ನಡದಲ್ಲಿಯೇ ಮಾತನಾಡಿ ಅವರಿಗೆ ಕನ್ನಡ ಭಾಷೆಯನ್ನು ಕಲಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದರು.
ಬೆಂಗಳೂರು- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲ್ ಮೇಲೆ ದರ್ಶನ್ ಹೊರ ಬಂದಿದ್ದಾರೆ. https://ainlivenews.com/beware-before-consuming-bad-ghee-it-is-more-dangerous-than-cancer-if-so-check-this/ ಕಾರ್ಯಕ್ರಮದಲ್ಲಿ ಹೀಗೆ ರಮ್ಯ ಭಾಗಿಯಾಗಿದ್ದರು. ಈ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೇಲ್‌ನಲ್ಲಿರುವ ದರ್ಶನ್ ಬಗ್ಗೆ ಎದುರಾದ ಪ್ರಶ್ನೆಗೆ ರಮ್ಯಾ, ಆ ಬಗ್ಗೆ ಮಾತನಾಡುವುದಿಲ್ಲ ಎಂದು ನಿರಾಕರಿಸಿದ್ದಾರೆ. ದರ್ಶನ್ ಕೇಸ್ ಹೆಸರು ಹೇಳ್ತಿದ್ದಂತೆ ನೋ ಎಂದಿದ್ದಾರೆ. ಈ ಹಿಂದೆ ಮಾಧ್ಯಮದ ಜೊತೆ ಮಾತನಾಡಿದ ರಮ್ಯಾ, ನಟರಾಗಿ ಜವಾಬ್ದಾರಿಯುತ ಸ್ಥಾನದಲ್ಲಿ ಸಮಾಜಕ್ಕೆ ಒಳ್ಳೆಯದನ್ನು ನೀಡಬೇಕು. ಅಭಿಮಾನಿಗಳನ್ನು ಬಳಸಿಕೊಂಡು ಕೊಲೆ ಮಾಡುವುದು ಎಷ್ಟು ಸರಿ? ಇಂತಹದ್ದನ್ನು ಸಮರ್ಥಿಸಿಕೊಂಡರೆ ಸಮಾಜಕ್ಕೆ ನಾವು ಕೊಡುವ ಸಂದೇಶ ಏನು? ಕಾನೂನಿಗಿಂತ ಯಾರೂ ದೊಡ್ಡವರಿಲ್ಲ ಎಂದು ರೇಣುಕಾಸ್ವಾಮಿ ಕೇಸ್ ಬಗ್ಗೆ ಮಾತನಾಡಿದ್ದರು.
ಮಾರುಕಟ್ಟೆಯಲ್ಲಿ ಖರೀದಿಸುವ ತುಪ್ಪಕ್ಕೂ, ಮನೆಯಲ್ಲಿ ತಯಾರಿಸಿದ ತುಪ್ಪಕ್ಕೂ ಭಿನ್ನತೆ ಇದೆಯೇ, ಮಾರುಕಟ್ಟೆಯಲ್ಲಿ ಪ್ಯಾಕೆಟ್‌ಗಳಲ್ಲಿ ಸಿಗುವ ಎಲ್ಲಾ ತುಪ್ಪ ಅಸಲಿಯೇ? ಇಂತಹ ಹಲವು ಪ್ರಶ್ನೆಗಳು ಸಾಮಾನ್ಯವಾಗಿ ಅನೇಕರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಆದರೆ ಚಿಂತೆ ಬೇಡ. ಮಾರುಕಟ್ಟೆಯಲ್ಲಿ ಖರೀದಿಸಿದ ತುಪ್ಪ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಪರಿಶೀಲಿಸಲು ಹಲವು ಸರಳ ಮಾರ್ಗಗಳಿವೆ. ಅದನ್ನು ನೀವು ಮನೆಯಲ್ಲಿಯೇ ಕಂಡು ಹಿಡಿಯಬಹುದಾಗಿದೆ. https://ainlivenews.com/attention-women-havent-received-any-grihalakshmi-money-in-3-months-if-so-ask-here/ ಮಾರುಕಟ್ಟೆಯಲ್ಲಿ ವಿವಿಧ ರಾಸಾಯನಿಕಗಳನ್ನು ಮಿಶ್ರಣ ಮಾಡಿದ ತುಪ್ಪ ಹೇರಳವಾಗಿ ಕಂಡು ಬರುತ್ತಿದೆ ಮತ್ತು ಇದೊಂದು ವ್ಯವಹಾರದ ರೂಪದಲ್ಲಿ ವ್ಯಾಪಕವಾಗಿ ಹರಡಿದೆ. ನಿಮ್ಮನ್ನು ನೀವು ಇಂತಹ ಕಲಬೆರಕೆ ತುಪ್ಪದಿಂದ ರಕ್ಷಿಸಿಕೊಳ್ಳಲು FSSAI ನ ವಿಧಾನಗಳನ್ನು ಅನುಸರಿಸಿ. ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಿ ತುಪ್ಪಕ್ಕೆ ಒಳ್ಳೆಯ ಪ್ರಾಧಾನ್ಯತೆ ಇದೆ. ತರಕಾರಿಗಳನ್ನು ಬಳಸಿ ತಯಾರು ಮಾಡುವ ಆಹಾರ ಪದಾರ್ಥಗಳಿಂದ ಹಿಡಿದು ಹಲ್ವಾ ಅಥವಾ ಇನ್ನಿತರ ಸಿಹಿ ಖಾದ್ಯಗಳನ್ನು ತಯಾರಿಸುವವರೆಗೂ ತುಪ್ಪವನ್ನು ಬಳಸಲಾಗುತ್ತದೆ. ನಾವು ಸೇವಿಸುವ ಹಸುವಿನ ತುಪ್ಪದಲ್ಲಿ ವಿಟಮಿನ್ ಅಂಶಗಳು, ಖನಿಜಾಂಶಗಳು ಆರೋಗ್ಯಕರ ಕೊಬ್ಬು ಮತ್ತು ಪ್ರೋಟೀನ್…
ಬೆಂಗಳೂರು:- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಿಂದ ರಾಜ್ಯ ಮಹಿಳೆಯವರಿಗೆ ಸಾಕಷ್ಟು ಉಪಯೋಗವಾಗಿದೆ. https://ainlivenews.com/a-young-woman-hanged-herself-for-advising-her-to-stop-smoking/ ಆದರೆ, ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮೀ ಫಲಾನುಭವಿಗಳ ಖಾತೆ ಹಣ ಜಮಾ ಆಗದ ಹಿನ್ನೆಲೆ ಮಹಿಳೆಯರು ಆತಂಕಕ್ಕೆ ಒಳಗಾಗಿದ್ದಾರೆ. ಪೆಂಡಿಂಗ್ ಇರುವ ಮೂರು ತಿಂಗಳ ಹಣ ಯಾವಾಗ ಮಹಿಳೆಯರ ಖಾತೆ ಹಣ ಜಮಾ ಆಗಲಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. 15ನೇ ತಿಂಗಳಿನ ಹಣ ಇನ್ನೂ ಕೆಲ ಜಿಲ್ಲೆಗಳಲ್ಲಿ ಬಂದಿಲ್ಲ. ಹಾಗೂ 16 ಹಾಗೂ 17 ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗಲಿದೆ ಎಂದು ಮಹಿಳೆಯರು ಕಾದುಕುಳಿತಿದೆ. ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಕಡೆಯಿಂದ ಹಣ ಮಂಜೂರಾಗಿದ್ದು, ಹಂತ ಹಂತವಾಗಿ ಎಲ್ಲಾ ಮಹಿಳೆಯರಿಗೆ ಪೆಂಡಿಂಗ್ ಹಣ ಜಮೆ ಆಗುತ್ತದೆ ಎಂದು ತಿಳಿದು ಬಂದಿದೆ. ಈ ತಿಂಗಳ ಕೊನೆಯಲ್ಲಿ ಗೃಹ ಲಕ್ಷ್ಮಿ ಯೋಜನೆಯ 15 ಹಾಗೂ 16 ನೇ ಕಂತಿನ ಹಣ ಜಮಾ ಆಗಲಿದೆ ಎಂದು ಮೂಲಗಳು ತಿಳಿಸಿವೆ ಇನ್ನು ಪೆಂಡಿಂಗ್ ಇರುವ ಹಣವನ್ನು…
ಬೆಂಗಳೂರು:- ಏರೋ ಇಂಡಿಯಾ -2025 ವೈಮಾನಿಕ ಪ್ರದರ್ಶನಕ್ಕ ಈಗಾಗಲೇ ಅದ್ಧೂರಿ ಚಾಲನೆ ಸಿಕ್ಕಿದೆ. ಏರ್ ಶೋ ಆರಂಭವಾಗಿದ್ದು, ಬೆಂಗಳೂರು ಏರ್ ಶೋ ಏಷ್ಯಾದಲ್ಲೇ ಅತ್ಯಂತ ದೊಡ್ಡ ಏರ್ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. https://ainlivenews.com/good-news-for-virat-fans-kohli-is-the-captain-of-rcb-team/ ಇನ್ನೂ ನೀವು ಕೂಡ ಏರೋ ಇಂಡಿಯಾ ಶೋ ಅನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದಾಗಿದೆ. ಮೊಬೈಲ್ನಲ್ಲಿಯೇ ಪಾಸ್ ಬುಕ್ ಮಾಡಿ ಖರೀದಿಸಬಹುದು. ಅದಕ್ಕಾಗಿ ನೀವು, ಮೊಬೈಲ್ನಲ್ಲಿ ಇರೋ ಇಂಡಿಯಾ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಅಥವಾ https://www.aeroindia.gov.in/ ವೆಬ್ಸೈಟ್ಗೆ ಭೇಟಿ ನೀಡಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಒಂದು ಸಾವಿರ ರೂಪಾಯಿ ಪಾವತಿಸಿ ಪಾಸ್ ಖರೀದಿಸಬಹುದು. ನಾಳೆಯಿಂದ ಫೆಬ್ರವರಿ 14ರವರೆಗೆ ಏರೋ ಇಂಡಿಯಾ ಶೋ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇದೆ. ವಸ್ತು ಪ್ರದರ್ಶನ ಮತ್ತು ವೈಮಾನಿಕ ಪ್ರದರ್ಶನ ವೀಕ್ಷಣೆ ಮಾಡಲು 2500 ರೂಪಾಯಿ ಹಾಗೂ ಬಿಸಿನೆಸ್ ಪಾಸ್ ದರ 5000 ರೂಪಾಯಿ ನಿಗಧಿ ಮಾಡಲಾಗಿದೆ. ಏರ್ ಶೋಗಾಗಿ ಬಿಎಂಟಿಸಿ ಸ್ಪೇಷಲ್ ಸರ್ವಿಸ್ ನೀಡುತ್ತಿದೆ. ನಗರದ ಪ್ರಮುಖ ಬಸ್ಸ್ಟ್ಯಾಂಡ್ಗಳಿಂದ ಏರ್ಶೋಗೆ ಡೈರೆಕ್ಟ್ ಬಸ್…
ತುಪ್ಪದಲ್ಲಿ ನಮಗೆ ಪ್ರತಿದಿನ ಅವಶ್ಯಕವಾಗಿ ಬೇಕಾದ ಪೌಷ್ಟಿಕಾಂಶಗಳು, ಆಂಟಿ ಆಕ್ಸಿಡೆಂಟ್ ಅಂಶಗಳು, ಕೊಬ್ಬಿನ ಅಂಶಗಳು, ವಿಟಮಿನ್ ಅಂಶಗಳು ಮತ್ತು ಖನಿ ಜಾಂಶಗಳು ಹೇರಳವಾಗಿ ಸಿಗುತ್ತವೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುವಲ್ಲಿ ಇವುಗಳು ಕೆಲಸ ಮಾಡುತ್ತವೆ ಮತ್ತು ಆಯುರ್ವೇದ ಚಿಕಿತ್ಸೆಗಳಿಗೆ ಹೋಲಿಸಿದರೆ ಸಾಕಷ್ಟು ಉತ್ತಮ ಎನಿಸುತ್ತದೆ. https://ainlivenews.com/is-it-true-that-yatnal-received-a-show-cause-notice-did-vijayendra-form-the-rebel-team/ ಹಸುವಿನ ಹಾಲಿನಿಂದ ತಯಾರಿಸಿದ ದೇಸಿ ತುಪ್ಪವು ಔಷಧೀಯ ಗುಣಗಳಿಂದ ತುಂಬಿದೆ. ಸರಿಯಾದ ರೀತಿಯಲ್ಲಿ ಶುದ್ಧ ತುಪ್ಪವನ್ನು ಸೇವಿಸುವುದರಿಂದ ಶಕ್ತಿ ಹೆಚ್ಚಾಗುತ್ತದೆ ಎಂದು ಡಾ. ಮುಲ್ತಾನಿ ಹೇಳುತ್ತಾರೆ. ಇದು ಅಗತ್ಯ ಪೋಷಕಾಂಶಗಳ ಉಗ್ರಾಣವಾಗಿದೆ. ಕೀಲುಗಳು ಮತ್ತು ಮೂಳೆಗಳ ಬಲವನ್ನು ಕಾಪಾಡಿಕೊಳ್ಳಲಾಗುತ್ತದೆ. ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ ಮತ್ತು ಚರ್ಮವು ಕಾಂತಿಯುತವಾಗುತ್ತದೆ. ಶುದ್ಧ ತುಪ್ಪ ತಿನ್ನುವುದರಿಂದ ಶಕ್ತಿ ಹೆಚ್ಚಾಗುತ್ತದೆ, ಆದರೆ ಈ ಸಮಯದಲ್ಲಿ ಒಂದು ತಪ್ಪು ಕೂಡ ದುಬಾರಿಯಾಗಬಹುದು. ಆಯುರ್ವೇದವು ಇದನ್ನು ತಿನ್ನುವುದಕ್ಕೆ ಕೆಲವು ನಿಯಮಗಳನ್ನು ಹೇಳುತ್ತದೆ, ಅವುಗಳಲ್ಲಿ ಕೆಲವು ಬಹಳ ಮುಖ್ಯ. ಇದನ್ನು ನಿರ್ಲಕ್ಷಿಸುವುದರಿಂದ ಅಥವಾ ಮಾಹಿತಿಯ ಕೊರತೆಯಿಂದಾಗಿ ನಷ್ಟವನ್ನು ಅನುಭವಿಸಬೇಕಾಗಬಹುದು. ತಜ್ಞರ ಪ್ರಕಾರ…