ಬೆಂಗಳೂರು:- ಇಂದಿನಿಂದ 2 ದಿನ ಬೆಂಗಳೂರಿನ ಯಲಹಂಕ ಭಾಗದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. https://ainlivenews.com/attention-diabetics-not-only-sugar-but-these-foods-are-also-poisonous-to-you/ ಇಂದು ಮತ್ತು ನಾಳೆ ಏಷ್ಯಾದ ಅತಿದೊಡ್ಡ ಏರ್ ಶೋ ನಡೆಯಲಿದೆ. ಈ ಏರ್ ಶೋ ವೀಕ್ಷಿಸಲು ದೇಶ-ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಗಣ್ಯರು ಆಗಮಿಸುತ್ತಾರೆ. ಮುಂಜಾಗ್ರತಾ ಕ್ರಮವಾಗಿ ಯಲಹಂಕ ಸುತ್ತಮುತ್ತಲಿನ ಶಾಲಾ ಕಾಲೇಜುಗಳಿಗೆ ಫೆ. 13 – 14 ರಂದು ರಜೆ ಘೋಷಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಇದು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪದವಿ ಕಾಲೇಜುಗಳಿಗೆ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ. ಆದರೆ ಯಾವ ಶಾಲೆ, ಕಾಲೇಜುಗಳು ಎಂದು ನಿರ್ದಿಷ್ಟವಾಗಿ ಪಟ್ಟಿ ಮಾಡಿಲ್ಲ. ಯಲಹಂಕದ ವಾಯುನೆಲೆಯಲ್ಲಿ ಫೆ. 10 ರಿಂದ 14 ರವರೆಗೆ ಏರೋ ಇಂಡಿಯಾ-2025 ನಡೆಯಲಿರುವ ಹಿನ್ನೆಲೆಯಲ್ಲಿ ಮುಂದಿನ 11 ದಿನಗಳವರೆಗೆ ಯಲಹಂಕ ಬಳಿ ನಮ್ಮ ಮೆಟ್ರೊ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಭಾರತೀಯ ವಾಯುಪಡೆ ಮನವಿ ಮೇಧಿರೆಗೆ ಐಎಎಫ್ ಕ್ಯಾಂಪಸ್ ವ್ಯಾಪ್ತಿಗೆ ಬರುವ ಯಲಹಂಕ ವಿಮಾನ ನಿಲ್ದಾಣ ಮಾರ್ಗದ…
Author: AIN Author
ಬೆಂಗಳೂರು:- ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಕರ್ನಾಟಕ ಹೈಕೋರ್ಟ್ ಅರ್ಜಿ ಆಹ್ವಾನಿಸಿದೆ. https://ainlivenews.com/attention-diabetics-not-only-sugar-but-these-foods-are-also-poisonous-to-you/ ಕರ್ನಾಟಕ ಹೈಕೋರ್ಟ್ ಸಿವಿಲ್ ನ್ಯಾಯಾಧೀಶರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ನೇಮಕ ಅಧಿಸೂಚನೆ ಬಿಡುಗಡೆಗೊಳಿಸಿದೆ. ಬ್ಯಾಕ್‌ಲಾಗ್ ಹುದ್ದೆಗಳು ಸೇರಿದಂತೆ ಒಟ್ಟು 158 ಸಿವಿಲ್ ಜಡ್ಜ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದವರಿಗೆ ಮಾಸಿಕ ವೇತನ 77,840-1,36,520 ರೂಪಾಯಿ ಇರಲಿದೆ. ಈಗಾಗಲೇ ಅರ್ಜಿ ಸಲ್ಲಿಕೆ ದಿನಾಂಕ ಫೆಬ್ರವರಿ 10, 2025ರಂದು ಆರಂಭವಾಗಿದ್ದು, ಕೊನೇ ದಿನಾಂಕ ಮಾರ್ಚ್ 03 ಕೊನೇ ಆಗಿದೆ. ಭಾರತದಲ್ಲಿನ ಕಾನೂನಿನ ಮೂಲಕ ಸ್ಥಾಪಿತವಾದ ವಿಶ್ವವಿದ್ಯಾಲಯವು ನೀಡಿದ ಕಾನೂನು ಪದವಿಯನ್ನು ಹೊಂದಿರಬೇಕು ಮತ್ತು ಕಡ್ಡಾಯವಾಗಿ ವಕೀಲರಾಗಿ ನೋಂದಣಿಯಾಗಿರಬೇಕು. ಅರ್ಜಿಗಳನ್ನು ಸಲ್ಲಿಸುವುದಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳ ವಯಸ್ಸು 40 ಮೀರಿರಬಾರದು. ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-2ಎ ಅಥವಾ 2ಬಿ ಅಥವಾ 3ಎ ಅಥವಾ 3ಬಿಗೆ ಸೇರಿದ ಅಭ್ಯರ್ಥಿಗಳ ವಯಸ್ಸು 38 ಮೀರಿರಬಾರದು. ಯಾವುದೇ ಇತರ ಅಭ್ಯರ್ಥಿಗಳ ವಯಸ್ಸು…
ATM ನಿಂದ ಕೇವಲ ಹಣ ತೆಗೆಯೋದು ಅಷ್ಟೇ ಅಲ್ಲ, ಸಾಕಷ್ಟು ಕೆಲಸ ಮಾಡ್ಬಹುದು. ನಿಮ್ಮ ಎಟಿಎಂ ಯಂತ್ರ ಕೇವಲ ಹಣ ನೀಡುವ ಯಂತ್ರವಾಗಿ ಉಳಿದಿಲ್ಲ. ಬ್ಯಾಂಕಿಗೆ ಭೇಟಿ ನೀಡದೆ ಎಟಿಎಂ ಮೂಲಕ ನೀವು ಅನೇಕ ಹಣಕಾಸು ಮತ್ತು ಹಣಕಾಸುರಹಿತ ವಹಿವಾಟುಗಳನ್ನು ಮಾಡಬಹುದು. ನಿಮ್ಮ ಅಕೌಂಟ್ ನ ಮಿನಿ ಸ್ಟೇಟ್ ಮೆಂಟ್ ಪಡೆಯುವುದರಿಂದ ಹಿಡಿದು ಚೆಕ್ ಬುಕ್, ಬಿಲ್ ಪಾವತಿವರೆಗೆ ಸರ್ವತ್ರ ಎಟಿಎಂ ಹಲವು ಕೆಲಸಗಳನ್ನು ಮಾಡುತ್ತದೆ. https://ainlivenews.com/hushar-this-symptom-should-not-be-neglected-it-is-killer-cancer/ ಹಣ ವಿತ್ ಡ್ರಾ:- ATMನಿಂದ ಹಣ ತೆಗೆಯಬಹುದು. ಡೆಬಿಟ್ ಕಾರ್ಡ್ ಬಳಸುವಾಗ ಪಿನ್ ನೆನಪಿರಲಿ. ATMಗೆ ಕಾರ್ಡ್ ಹಾಕಿ ಹಣ ತೆಗೆಯಬಹುದು. ಹಣ ಜಮಾ ಕೂಡ ಮಾಡಬಹುದು ಬ್ಯಾಲೆನ್ಸ್ ಚೆಕ್ ಖಾತೆಯಲ್ಲಿ ಎಷ್ಟು ಹಣ ಇದೆ ಅಂತ ನೋಡಬಹುದು. ಬ್ಯಾಂಕಿಗೆ ಹೋಗಬೇಕಾಗಿಲ್ಲ. ಕಳೆದ ಹತ್ತು ದಿನದ ವ್ಯವಹಾರ ನೋಡಬಹುದು. ಮಿನಿ ಸ್ಟೇಟ್ಮೆಂಟ್ ತರ ಇರುತ್ತೆ. ಹಣ ವರ್ಗಾವಣೆ SBI ಪ್ರಕಾರ, ಡೆಬಿಟ್ ಕಾರ್ಡ್ ಬಳಸಿ ದಿನಾ 40,000 ರೂ. ವರೆಗೆ SBI ಖಾತೆಗಳ…
ಕ್ಯಾನ್ಸರ್ ಒಂದು ಭಯಾನಕ ಕಾಯಿಲೆ. ಪ್ರಪಂಚದಾದ್ಯಂತ ಪ್ರತಿ ವರ್ಷ ಈ ಕಾಯಿಲೆಯ ಪ್ರಮಾಣ ಹೆಚ್ಚಾಗುತ್ತಿದೆ. ಈ ರೋಗ ಬರುವ ಮುನ್ನ ದೇಹದಲ್ಲಿ ಕೆಲವು ಲಕ್ಷಣಗಳು ಕಂಡು ಬರುತ್ತದೆ. ಇದನ್ನು ನಾವು ಸರಿಯಾದ ಸಮಯದಲ್ಲಿ ಅರ್ಥಮಾಡಿಕೊಳ್ಳದಿದ್ದರೆ, ಈ ಕಾಯಿಲೆಯನ್ನು ತಡೆಗಟ್ಟುವುದು ಮತ್ತು ಪ್ರಾಣವನ್ನು ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. https://ainlivenews.com/udayagiri-riots-in-mysore-dcm-dikeshi-says-there-is-nothing-wrong-with-our-police/ ಪ್ರಪಂಚಾದ್ಯಂತ ಜನರನ್ನು ಕಾಡುತ್ತಿರುವ ಮಾರಕ ಕಾಯಿಲೆ ಕ್ಯಾನ್ಸರ್ ಆಗಿದ್ದು, ಇದರ ಲಕ್ಷಣಗಳು, ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ಬದುಕಿಸುವ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದೆ ಸಂಶೋಧನೆಯು ಕ್ಯಾನ್ಸರ್‌ನ ಹೊಸ ಮೂಕ ಚಿಹ್ನೆಗಳ ಬಗ್ಗೆ ಹೇಳಿದೆ. ಈ ರೋಗವನ್ನು ಬೇಗನೆ ಪತ್ತೆ ಹಚ್ಚಲು ಸಾಧ್ಯವಿಲ್ಲ, ಆದ್ದರಿಂದ ಜಾಗರೂಕರಾಗಿರುವುದು ಉತ್ತಮ. ಇನ್ನೂ ಇದರ ಬಗ್ಗೆ ನಿರ್ಲಕ್ಷ್ಯ ತೋರುವುದು ದೊಡ್ಡ ಅಪಾಯವನ್ನುಂಟು ಮಾಡಬಹುದು. Gae hain ki ತೈಪೆ ಟೈಮ್ಸ್‌ನ ವರದಿಯ ಪ್ರಕಾರ, ರಾಷ್ಟ್ರೀಯ ಚುಂಗ್ ಚೆಂಗ್ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಚೆಂಗ್ ಕುಂಗ್ ವಿಶ್ವವಿದ್ಯಾಲಯ ದ ಸಂಶೋಧಕರು ಕ್ಯಾನ್ಸರ್ ಕೋಶಗಳು ದೇಹದ ರೋಗನಿರೋಧಕ ವ್ಯವಸ್ಥೆಯ ಮೇಲೆ ದಾಳಿ ಮಾಡುವ…
ಬೆಂಗಳೂರು:- ಮೈಸೂರಿನ ಉದಯಗಿರಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರಲ್ಲಿ ನಮ್ಮ ಪೊಲೀಸರ ತಪ್ಪಿಲ್ಲ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ. https://ainlivenews.com/attention-diabetics-not-only-sugar-but-these-foods-are-also-poisonous-to-you/ ಬೆಂಗಳೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು, ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲಿನ ದಾಳಿ ವೇಳೆ ಪೊಲೀಸರು ಸಮಯೋಚಿತವಾಗಿ ಕೆಲಸ ಮಾಡಿದ್ದಾರೆ. ಪೊಲೀಸರದ್ದು ಯಾವ ತಪ್ಪು ಇಲ್ಲ. ನಾನು ಪೊಲೀಸರ ಪರ ಇದ್ದೇನೆ. ಯಾರು ಏನು ಹೇಳಿದರು ಎಂಬುದು ಮುಖ್ಯವಲ್ಲ. ನಾನು ಡಿಸಿಎಂ ಆಗಿ ಹೇಳುತ್ತಿದ್ದೇನೆ. ಪೊಲೀಸರದ್ದು ಯಾವ ತಪ್ಪು ಇಲ್ಲ. ಪೊಲೀಸರು ಸರಿಯಾಗಿಯೇ ಕೆಲಸ ಮಾಡಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಈ ವೇಳೆ ಪೊಲೀಸರು ಗಾಯಗೊಂಡರು ಕೂಡ ಸಮಯ ಪ್ರಜ್ಞೆಯಿಂದ ಕೆಲಸ ಮಾಡಿದ್ದಾರೆ. ನಾನು ನಮ್ಮ ಪೊಲೀಸರ ಪರವಾಗಿಯೇ ಇದ್ದೇನೆ ಎಂದಿದ್ದಾರೆ. ಈ ಮೂಲಕವಾಗಿ ಸಚಿವ ರಾಜಣ್ಣಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಡಿಕೆಶಿ ಹೇಳಿಕೆ ಬಗ್ಗೆ ನಾನು ಆಮೇಲೆ ಮಾತಾಡ್ತೀನಿ ಎಂದು ಸಚಿವ ರಾಜಣ್ಣ ಜಾರಿಕೊಂಡಿದ್ದಾರೆ. ಇನ್ನೂ, ಬಿಜೆಪಿ, ಆರ್‍ಎಸ್‍ಎಸ್ ವಿರುದ್ಧ ಆರೋಪ ಮಾಡಿದ್ದ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ವಿರುದ್ಧ ಹಿಂದೂ…
ಮಧುಮೇಹ ಎನ್ನುವುದು ಜೀವನದ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ಎಷ್ಟೇ ಸಿಹಿ ಪ್ರಿಯರಾಗಿದ್ದರೂ ಮಧುಮೇಹ ಬಂದ ಬಳಿಕ ಇದನ್ನು ಕಡೆಗಣಿಸಲೇಬೇಕು. ಇಷ್ಟು ಮಾತ್ರವಲ್ಲದೆ, ಆಹಾರದಲ್ಲಿ ಕೂಡ ತುಂಬಾ ಜಾಗೃತೆ ವಹಿಸಿ, ನಿತ್ಯವೂ ವ್ಯಾಯಾಮ ಅಥವಾ ನಡಿಗೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆ ಆಗಿ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸಬಹುದು. ಇದಕ್ಕಾಗಿ ಮಧುಮೇಹವನ್ನು ನಿಯಂತ್ರಿಸಲು ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ. ಅದರಲ್ಲೂ ರಾತ್ರಿ ತಿನ್ನುವ ಆಹಾರವು ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ ಮಾಡುವುದು. ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾದರೆ, ಯಾವ ಆಹಾರಗಳನ್ನು ರಾತ್ರಿ ವೇಳೆ ಸೇವನೆ ಮಾಡಬಾರದು ಎಂದು ತಿಳಿದುಕೊಂಡಿದ್ದರೆ ಒಳ್ಳೆಯದು. https://ainlivenews.com/king-kohli-batting-good-news-for-india/ ಮಧುಮೇಹ ಎಂದೊಡನೆ ಅವರು ಸಕ್ಕರೆ, ಸಿಹಿ ಪದಾರ್ಥಗಳನ್ನು ಸೇವಿಸಬಾರದು ಎಂದಷ್ಟೇ ಜನ ಯೋಚಿಸುತ್ತಾರೆ. ಆದರೆ, ಮಧುಮೇಹಿಗಳಿಗೆ ಹಾನಿಕಾರಕವಾದ ಇನ್ನೂ ಕೆಲವು ಆಹಾರಗಳಿವೆ. ಅಂತಹ ಆಹಾರಗಳು ಯಾವುವೆಂದರೆ… ಮಧುಮೇಹಿಗಳಿಗೆ ಬೇಕರಿ ಉತ್ಪನ್ನಗಳು ಅದರಲ್ಲೂ ಹೆಚ್ಚು ಮೈದಾ ಬಳಸುವಂತಹ ಬಿಳಿ ಬ್ರೆಡ್ ಸೇವನೆಯಿಂದ ಬ್ಲಡ್ ಶುಗರ್ ಹಠಾತ್ ಹೆಚ್ಚಾಗಬಹುದು. ಇದು ಇನ್ಸುಲಿನ್ ಪ್ರತಿರೋಧವನ್ನೂ ಕೂಡ…
ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಅಬ್ಬರಿಸಿದ್ರು. ವಿರಾಟ್ ಕೊಹ್ಲಿ ಬ್ಯಾಟಿಂಗ್ಗೆ ಇಡೀ ಆಗ್ಲರ ಪಡೆಯೇ ಬೆಚ್ಚಿಬಿದ್ದಿತ್ತು. ಟೀಮ್ ಇಂಡಿಯಾ ಉಪನಾಯಕ ಶುಭ್ಮನ್ ಗಿಲ್ಗೆ ಸಾಥ್ ನೀಡಿದ ವಿರಾಟ್ ಕೊಹ್ಲಿ ಹಲವು ದಿನಗಳ ಭರ್ಜರಿ ಅರ್ಧಶತಕ ಬಾರಿಸಿದ್ರು. https://ainlivenews.com/famous-rapper-from-odisha-commits-suicide-in-bengaluru/ ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ಕೇವಲ ಒಂದು ರನ್ಗೆ ವಿಕೆಟ್ ಒಪ್ಪಿಸಿದ್ರು. ರೋಹಿತ್ ವಿಕೆಟ್ ಬಿದ್ರೂ ಟೀಮ್ ಇಂಡಿಯಾ ಪರ ಗಿಲ್ ಅಬ್ಬರಿಸಿದರು. ಇವರು ಬರೋಬ್ಬರಿ 500 ದಿನಗಳ ನಂತರ ತಮ್ಮ ಏಕದಿನ ಶತಕ ಬಾರಿಸಿದ್ದಾರೆ. ಇಷ್ಟು ದಿನಗಳ ನಂತರ ಗಿಲ್ ತಮ್ಮ 7ನೇ ಶತಕ ಪೂರೈಸಿದ್ರು. ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಮಿಂಚಿದರು. ತಾನು ಎದುರಿಸಿದ 55 ಬಾಲ್ನಲ್ಲಿ 1 ಭರ್ಜರಿ ಸಿಕ್ಸರ್, 7 ಫೋರ್ ಸಮೇತ 52 ರನ್ ಸಿಡಿಸಿದರು. ಕೊಹ್ಲಿ ಇವತ್ತು ಸಿಡಿಸಿದ ಅರ್ಧಶತಕ ಇವರ ಕ್ರಿಕೆಟ್ ವೃತ್ತಿ ಜೀವನಕ್ಕೆ ಹೊಸ ಕಳೆಯನ್ನೇ ನೀಡಿದೆ.…
ಬೆಂಗಳೂರು:- ಒಡಿಶಾದ ಖ್ಯಾತ ರ‍್ಯಾಪರ್ ಆಗಿರುವ ಅಭಿನವ್ ಸಿಂಗ್ ಎನ್ನುವರು ಕಾಡುಬೀಸನಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ವಿಷಸೇವಿಸಿ ಆತ್ಮಹತ್ಯೆ ಶರಣಾಗಿದ್ದಾರೆ. ಪತ್ನಿ ಕಿರುಕುಳದಿಂದ ಅಭಿನವ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. https://ainlivenews.com/case-of-stone-throwing-at-mysore-station-8-andar/ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಒಡಿಶಾ ಮೂಲದ ಖ್ಯಾತ ರ‍್ಯಾಪರ್ ಅಭಿನವ್ ಸಿಂಗ್, ಬೆಂಗಳೂರಿನ ಕಾಡುಬೀಸನಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಆದ್ರೆ, ಏನಾಗಿತ್ತೋ ಏನೋ ಏಕಾಏಕಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮೃತ ಅಭಿನವ್ ಸಿಂಗ್ ಅವರ ಕುಟುಂಬಸ್ಥರು ಆರೋಪಿಸಿದ್ದು, ಈ ಸಂಬಂಧ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿವಿಧ ಆಯಾಮಾಗಳಲ್ಲಿ ತನಿಖೆ ನಡೆಸಿದ್ದಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್ ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು. ಡತ್ನೋಟ್ನಲ್ಲಿ ಹೆಂಡ್ತಿ ಕಿರುಳವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಉತ್ತರ ಪ್ರದೇಶಕ್ಕೆ ತೆರಳಿ ಅತುಲ್ ಹೆಂಡ್ತಿ ಸೇರಿದಂತೆ ಆಕೆಯ ಸಂಬಂಧಿಕರನ್ನು ಬಂಧಿಸಿದ್ದರು.
ಮೈಸೂರು:- ಮೈಸೂರಿನ ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. https://ainlivenews.com/kpcc-presidents-change-dikeshi-tweeted-morally/ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುಹೇಲ್ @ ಸೈಯದ್ ಸುಹೇಲ್, ಅಯಾನ್ ಬಿನ್ ಜಬೀವುಲ್ಲಾ, ಕಲೀಲ್ ಪಾಷಾ, ಗೌಸಿಯಾ ನಗರ ಸೈಯದ್ ಸಾದಿಕ್ ಬಿನ್ ನವೀದ್, ಏಜಾಜ್ ಬಿನ್ ಅಬ್ದುಲ್ ವಾಜೀದ್, ರಾಜೀವ್ ನಗರದ ಸಾದಿಕ್ ಪಾಷ್ @ ಸಾದಿಕ್ ಬಿನ್ ಖಾಲಿದ್ ಪಾಷಾ, ಅರ್ಬಾಜ್ ಷರೀಫ್ s/o ಇಕ್ಬಾಲ್ ಶರೀಫ್, ಶೋಯಬ್ ಪಾಷಾ s/o ಮಜೀದ್ ಪಾಷಾ ಅವರನ್ನ ಬಂಧಿಸಿದ್ದು, ಮತ್ತಷ್ಟು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಇದೇ ಫೆ.10ರಂದು ತಡರಾತ್ರಿ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಮುಸ್ಲಿಂ ಯುವಕರು ತಲ್ಲು ತೂರಾಟ ನಡೆಸಿದ್ದರು. ಈ ವೇಳೆ ಇನ್‌ಸ್ಪೆಕ್ಟರ್ ಸೇರಿದಂತೆ 14 ಪೊಲೀಸರು ಗಾಯಗೊಂಡಿದ್ದರು. 10ಕ್ಕೂ ಹೆಚ್ಚು ಪೊಲೀಸ್ ವಾಹನಗಳು ಜಖಂ ಆಗಿದ್ದವು.
ಬೆಂಗಳೂರು;- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಶೀಘ್ರದಲ್ಲೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಲಿದೆ ಎಂದು ಸುಳಿವು ನೀಡಿದ್ದಾರೆ. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆಗೆ ಗೆಲುವು ನಿಶ್ಚಿತ ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ. https://ainlivenews.com/dk-sivakumar-descends-from-kpcc-president/ ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆಗೆ ಗೆಲುವು ನಿಶ್ಚಿತ. ಟಿ.ನರಸೀಪುರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗಿಯಾಗಿ ಗಂಗಾ ಆರತಿ ನೆರವೇರಿಸಿ, ಭಗವಂತನಲ್ಲಿ ಪ್ರಾರ್ಥಿಸಿದೆ. ಪುಣ್ಯಸ್ನಾನ ಮಾಡಿ ಭಕ್ತಿ-ಭಾವಗಳಲ್ಲಿ ಮಿಂದು ಭಾವಪರವಶನಾದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ ಸದ್ಯಕ್ಕೆ ಕಾಂಗ್ರೆಸ್ನಲ್ಲಿ ಪವರ್ ಶೇರಿಂಗ್ ಗೊಂದಲಗಳು ಉದ್ಭವಿಸಿವೆ. ಇದರ ಮಧ್ಯ ಖರ್ಗೆ ಅವರು ಇಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸುಳಿವು ನೀಡಿದ್ದಾರೆ. ಇದರ ನಡುವೆ ಸಂಜೆ ಹೊತ್ತಿಗೆ ಡಿಕೆ ಶಿವಕುಮಾರ್ ಅವರು ಮಾರ್ಮಿಕ ಟ್ವೀಟ್ ಮಾಡಿ ಗಮನಸೆಳೆದಿದ್ದಾರೆ. ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆಗೆ ಗೆಲುವು ನಿಶ್ಚಿತ ಎಂದು ಹೇಳಿರುವುದು ಕಾಂಗ್ರೆಸ್ನಲ್ಲಿ ನಾನಾ ಚರ್ಚೆಗೆ ಗ್ರಾಸವಾಗಿದೆ.