Author: AIN Author

ಮಾಲೂರು – ಪದೇಪದೇ ಶಾಸಕ ನಂಜೇಗೌಡ ಮಾಲೂರಿನ ಅಭಿವೃದ್ಧಿ ಬಗ್ಗೆ ಹೊರಗಿನ ವ್ಯಕ್ತಿಗಳು ಮಾತನಾಡುವ ಅಧಿಕಾರವಿಲ್ಲ ಅಂತ ಹೇಳ್ತಾರೆ, ನಮಗೆ ಮಾತನಾಡುವ ಅಧಿಕಾರ ಇಲ್ಲ ಅಂದ್ರೆ, ಅಧಿಕಾರ ಇದ್ದವರೇ ಮಾತನಾಡಲಿ, ನನಗೂ ಕ್ಷೇತ್ರದ ಮತದಾರರು 50 ಸಾವಿರ ಮತ ನೀಡಿದ್ದಾರೆ ಎಂದು ಸ್ವಾಭಿಮಾನಿ ಜನತಾ ಪಕ್ಷದ ಸಂಸ್ಥಾಪಕ ಹೂಡಿ ವಿಜಯ್ ಕುಮಾರ್ ರವರು ಶಾಸಕ ನಂಜೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು. https://ainlivenews.com/yamas-eyes-on-the-happy-boy-parents-who-have-lost-a-child-are-in-mourning/ ಮಾಲೂರು ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೂ ಜನ 50 ಸಾವಿರ ಮತ ನೀಡಿದ್ದಾರೆ, ನಾವು ಅವರ ಪರವಾಗಿ ಮಾತನಾಡಬಾರದ, ಮಾಲೂರಿಗೆ ಬೇರೆ ಕಡೆಯಿಂದ ಬಂದು ಇಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಾರೆ ಆದರೆ ಶಾಸಕರು ಅದನ್ನು ಪ್ರಶ್ನಿಸುವುದಿಲ್ಲ, ಕ್ಷೇತ್ರದ ಅಭಿವೃದ್ಧಿ ಮಾಡಲ್ಲ ಅಂತ ಶಾಸಕ ನಂಜೇಗೌಡರು ನಿರ್ಣಯ ಮಾಡಿದ್ದಾರೆ, ಯಾರೆಷ್ಟೇ ಹೋರಾಟಗಳನ್ನು ಮಾಡಿದರು ಚುನಾವಣಾ ಸಂದರ್ಭದಲ್ಲಿ ವೋಟಿಗೆ ಸಾವಿರ ರೂಪಾಯಿ ಹೆಚ್ಚಾಗಿ ಕೊಟ್ಟರೆ ನಾನು ಗೆಲ್ತೀನಿ ಅಂತ ಅಂದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿದ್ದು ಅದಕ್ಕೆ ಸ್ಪಂದಿಸದೆ…

Read More

ಬೆಂಗಳೂರು:- ಕಳೆದ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಬಾಲಕನೋರ್ವ ಮೃತಪಟ್ಟಿದ್ದು, ಹುಟ್ಟು ಹಬ್ಬದಂದೇ ಮಸಣ ಸೇರಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ. https://ainlivenews.com/such-is-the-punishment-for-fools-the-wicked-who-cut-the-carvings-of-cows/ ಬೆಂಗಳೂರಿನ ಹೆಣ್ಣೂರು ಬಂಡೆ ಮುಖ್ಯರಸ್ತೆಯಲ್ಲಿ ಘಟನೆ ಜರುಗಿದ್ದು, 12 ವರ್ಷದ ಭಾನು ತೇಜ ಮೃತ ಬಾಲಕ. ರವಿ ಹಾಗೂ ಸುಮಾ ದಂಪತಿ ಪುತ್ರ ಭಾನು ತೇಜ ಆರ್.ಟಿ.ನಗರ ಸತ್ಯಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವೇದ ಕಲಿಯಲು ಗುರುಗಳ ಜೊತೆಗೆ ವಾಸವಾಗಿದ್ದನು. ಶನಿವಾರ ಭಾನು ತೇಜನ ಹುಟ್ಟುಹಬ್ಬವಿತ್ತು. ಹುಟ್ಟು ಹಬ್ಬ ಆಚರಣೆಗಾಗಿ ಹೊರಮಾವುನಲ್ಲಿರುವ ತನ್ನ ಅಕ್ಕನ ಮನೆಗೆ ಹೊಗಿದ್ದನು. ಹುಟ್ಟು ಹಬ್ಬ ಆಚರಣೆ ಬಳಿಕ ರಾತ್ರಿ 11.20ರ ಸುಮಾರಿಗೆ ಅಣ್ಣ ಚಕ್ರಧರಣ್ ಜೊತೆಗೆ ಬೈಕ್​ನಲ್ಲಿ ವಾಪಸ್​ ಆರ್​ಟಿ ನಗರದತ್ತ ತೆರಳುತ್ತಿದ್ದನು. ಹೆಣ್ಣೂರು ಬಂಡೆ ಮುಖ್ಯರಸ್ತೆಯಲ್ಲಿ ಐಷರ್ ಟ್ರಕ್​ವೊಂದು ಹಿಂಬದಿಯಿಂದ ಭಾನು ತೇಜ್​ ಇದ್ದ ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಭಾನು ತೇಜ್​ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಬಾಲಕ ತಲೆಯ ಮೇಲೆ ಟ್ರಕ್​ನ ಎರಡು ಚಕ್ರಗಳು ಹಿರಿದಿವೆ.​ ಭಾನು ತೇಜ್​…

Read More

ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ಮೂಖಜೀವಿಗಳ ಮೇಲೆ ಅತ್ಯಾಚಾರ, ಹತ್ಯೆ ಅಂತಹ ಘಟನೆಗಳು ನಡೆಯುತ್ತಿರುವಾಗಲೇ ಇದೀಗ ಬೆಂಗಳೂರಿನಲ್ಲಿ ಮನುಕುಲವೇ ತಲೆ ಬಗ್ಗಿಸುವ ಘಟನೆ ನಡೆದಿದೆ. https://ainlivenews.com/the-bridegroom-came-drunk-on-the-wedding-day-what-did-the-bride-say-tired-of-her-husbands-behavior/ ಮಾತು ಬಾರದ ಹಸುಗಳ ಕೆತ್ತಲು ಕೊಯ್ದು ದುಷ್ಟರು ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಜರುಗಿದೆ. ಶನಿವಾರ ರಾತ್ರಿ ರಸ್ತೆಯಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲನ್ನು ಕೊಯ್ದಿದ್ದು ಈಗ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ 20ಕ್ಕೂ ಹೆಚ್ಚು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ಭಾಗದಲ್ಲಿ ಡ್ರಗ್ಸ್, ಗಾಂಜಾ ಸೇವನೆ ಹೆಚ್ಚಿದ್ದರೂ ಪೊಲೀಸರು ಇದಕ್ಕೆ ಕಡಿವಾಣ ಹಾಕುತ್ತಿಲ್ಲ ಎಂದು ದೂರಿದ್ದಾರೆ

Read More

ಬೆಂಗಳೂರು:- ಮದುವೆಯ ದಿನವೇ ಕಂಠಪೂರ್ತಿ ವರ ಕುಡಿದು ಬಂದ ಹಿನ್ನೆಲೆ ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ. https://ainlivenews.com/if-this-work-is-not-done-ct-ravis-death-is-guaranteed-where-did-the-threat-letter-to-bjp-mlcs-office-come-from/ ಬೆಂಗಳೂರು ನಗರದಲ್ಲಿ ವರನ ವರ್ತನೆಗೆ ಮದುವೆಯೇ ಕ್ಯಾನ್ಸಲ್ ಆಗಿಬಿಟ್ಟಿದೆ. ಮದುವೆ ದಿನವೇ ಫ್ರೆಂಡ್ಸ್ ಜೊತೆ ಕುಡಿದು ವರ ಬಂದಿದ್ದ. ಕೆಲ ಶಾಸ್ತ್ರಗಳನ್ನು ಮಾಡುವ ಸಂದರ್ಭದಲ್ಲಿ ಹುಚ್ಚನ ರೀತಿಯಲ್ಲಿ ವರ್ತಿಸಿದ್ದ. ಇದೆಲ್ಲವನ್ನು ಕಂಡು ವಧು ಕೆಂಡಮಂಡಲವಾಗಿದ್ದಾಳೆ. ತಕ್ಷಣ ಎದ್ದು ನಿಂತು ಮದುವೆಗೆ ಬಂದಿದ್ದವರಿಗೆ ವಧು ಕ್ಷಮೆ ಯಾಚಿಸಿ, ನಿಮ್ಮೆಲ್ಲಾರಿಗೂ ನಾನು ಕ್ಷಮೆ ಕೇಳುತ್ತೇನೆ ನಾನು ಈ ಮದುವೆ ಆಗುತ್ತಿಲ್ಲ” ಎಂದು ಹೇಳಿದ್ದಾಳೆ. ನಂತರ ವರನ ಕಡೆಯವರು ಕೂತು ಮಾತನಾಡುವ ಪ್ರಯತ್ನಪಟ್ಟರು ನೋ ಯೂಸ್ ಆಗಿದೆ. ನಮ್ಮ ಮಗಳ ಜೀವನ ಹಾಳಾಗುತ್ತದೆ ಎಂದು ಹೇಳಿ ಪೋಷಕರು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ಸದ್ಯ ವಧು ನೆರೆದಿದ್ದವರಿಗೆ‌ ಕ್ಷಮೆ ಕೇಳುತ್ತಿರುವ ವಿಡಿಯೋ ಫುಲ್ ವೈರೆಲ್ ಆಗಿದೆ.

Read More

ಚಿಕ್ಕಮಗಳೂರು:- ಚಳಿಗಾಲದ ಅಧಿವೇಶನದ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ವಿಧಾನಪರಿಷತ್​​ ಸದಸ್ಯ ಸಿಟಿ ರವಿ ಅವರಿಗೆ ಜೀವ ಬೆದರಿಕೆ ಹಾಕಿ ಅನಾಧೇಯ ಪತ್ರವೊಂದು ಬಂದಿದೆ. https://ainlivenews.com/a-change-in-our-metro-timings-from-tomorrow-travelers-must-read-the-news/ ಸಿಟಿ ರವಿಯವರ ಚಿಕ್ಕಮಗಳೂರಿನ ಬಸವನಹಳ್ಳಿ ನಿವಾಸಕ್ಕೆ ಈ ಪತ್ರ ಬಂದಿದ್ದು, ​ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಬಳಿ ಕ್ಷಮೆ ಕೇಳದಿದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ MLC ಸಿ.ಟಿ ರವಿ ಅವರು ಬಳಸಿರುವ ಪದ ಬಳಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಸಿ.ಟಿ ರವಿ ಅವರ ಚಿಕ್ಕಮಗಳೂರು ನಗರದ ಬಸವನಹಳ್ಳಿ ನಿವಾಸಕ್ಕೆ ಅನಾಮಧೇಯ ಪತ್ರ ಬಂದಿದೆ. ಪತ್ರದಲ್ಲಿ ಹೆಬ್ಬಾಳ್ಕರ್ ಗೆ 15 ದಿನದೊಳಗೆ ಕಾಲು‌ಹಿಡಿದು ಕ್ಷಮೆ ಕೇಳ್ಬೇಕು. ಇಲ್ಲ ಮಗ ಸೂರ್ಯ ಸೇರಿದಂತೆ ರವಿಯನ್ನ ಹತ್ಯೆ ಮಾಡುವುದಾಗಿ ಪತ್ರ ಬಂದಿದ್ದು, ಈ ಬಗ್ಗೆ ಸಿ.ಟಿ ರವಿ ಪಿಎ ಚೇತನ್ ಬಸವನಹಳ್ಳಿ ಪೊಲೀಸ್…

Read More

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಫ್ಯಾನ್ಸ್ ಗೆ ಒಂದು ಬ್ಯಾಡ್ ನ್ಯೂಸ್ ಇದೆ. ನಟನೆ, ಫ್ಯಾಷನ್ ಜೊತೆ ಫಿಟ್ನೆಸ್ ಗೆ ಹೆಸರಾಗಿರುವ ರಶ್ಮಿಕಾ ಮಂದಣ್ಣಗೆ ನೋವಾಗಿದೆ. ಜಿಮ್ ನಲ್ಲಿ ವರ್ಕೌಟ್ ಮಾಡುವ ವೇಳೆ ರಶ್ಮಿಕಾ ಗಾಯಗೊಂಡಿದ್ದಾರೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. https://ainlivenews.com/power-cut-in-bangalore-tomorrow-which-area-at-what-time-power-cut/ ರಶ್ಮಿಕಾ ಅವರು ಸಲ್ಮಾನ್‌ ಖಾನ್‌ ನಟನೆಯ ಸಿಖಂದರ್‌ ಸಿನಿಮಾದ ಶೂಟಿಂಗ್‌ಗೆ ಹೋಗಬೇಕಿತ್ತು. ಇದರ ನಡುವೆಯೇ ರಶ್ಮಿಕಾ ಜಿಮ್‌ನಲ್ಲಿ ಪೆಟ್ಟು ಮಾಡಿಕೊಂಡಿದ್ದಾರೆ. ತನ್ನ ಬಲಗಾಲಿಗೆ ಪೆಟ್ಟಾಗಿರುವ ಫೋಟೋವನ್ನು ನಟಿ ಇನ್ಟ್ರಾದಲ್ಲಿ ಶೇರ್ ಮಾಡಿದ್ದಾರೆ. ಗಾಯಗೊಂಡ ಶ್ರೀವಲ್ಲಿ ಇದೀಗ ನೋವು ತೋಡಿಕೊಂಡಿದ್ದಾರೆ. ಸದ್ಯಕ್ಕೆ ನಾನು HOP ಮೂಡ್ ನಲ್ಲಿ ಇದ್ದೇನೆ ಎಂದು ನಟಿ ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದು, ಕೆಲ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಗಾಯಗೊಂಡ ನಟಿಯ ಬಲಗಾಲಿಗೆ ಬ್ಯಾಂಡೇಜ್ ಸುತ್ತಲಾಗಿದೆ. ಮನೆಯಲ್ಲೇ ರೆಸ್ಟ್ ಮಾಡ್ತಿರುವ ರಶ್ಮಿಕಾ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬೇಸರದ ಪೋಸ್ ಕೊಟ್ಟ ರಶ್ಮಿಕಾ, ಇದು ನನಗೆ ಹೊಸ ವರ್ಷದ ಶುಭಾಶಯಗಳು ಎಂದುಕೊಳ್ಳುವೆ. ಜಿಮ್ ನಲ್ಲಿ ನಾನು ಗಾಯಗೊಂಡಿದ್ದೇನೆ.…

Read More

ಹೊರ್ತಿ: ‘ಅಹಂಕಾರ ಬಿಟ್ಟಾಗ ಅತ್ಮ ಸಾಕ್ಷಾತ್ಕಾರ ವಾಗಲಿದೆ’ ಎಂದು ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಹಾಗೂ ಕಲಾವಿದರ ಸಂಘದ ಅಧ್ಯಕ್ಷ ದೊಡ್ಡಣ್ಣ ಹೇಳಿದರು. https://ainlivenews.com/defamation-of-gandhiji-case-filed-against-hindu-activist/ ಸಮೀಪದ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಭಾವೈಕ್ಯತೆಯ ತಾಣ ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ಶುಕ್ರವಾರ ಭೇಟಿ ನೀಡಿ, ನಂತರ ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ‘ಮೊಬೈಲ್ ಇದನ್ನ ಯಾವನೋ ಕಂಡು ಹಿಡಿದ್ದಾನೋ ಏನೋ, (ಮೊಬೈಲ್) ಇದು ಬಂದು ಈಗಿನ ಮಕ್ಕಳು ಓದುವುದನ್ನು ಬಿಡಿಸಿದೆ. ಈಗಲೂ ನನ್ನ ಮನೆಯಲ್ಲಿ ಅಪಾರ ಪುಸ್ತಕಗಳು ಇವೆ. ಈಗಲೂ ನಾವಿಬ್ಬರೂ ಪುಸ್ತಕ ಓದುತ್ತೇವೆ. ಆದರೆ ಮುಂದೊಮ್ಮೆ ನಮ್ಮಲ್ಲೇ ಪುಸ್ತಕ ಓದುವ ವ್ಯಕ್ತಿ ಬರಬಹುದು. ದೇವರು ಎಲ್ಲಿಯು ಹೋಗಿಲ್ಲ ಇಲ್ಲಿಯೇ ನಮ್ಮ ನಿಮ್ಮಲ್ಲೇ ಇದ್ದಾನೆ’ ಎಂದವರು ಈಗಲೂ ಕೂಡಾ ನಾನು ನನ್ನ ಪತ್ನಿ ಮನೆ, ಮಠಗಳಲ್ಲಿ ಕಸಗೂಡಿಸುತ್ತೇವೆ ಎಂದು ಹೇಳಿದರು. ಶ್ರೀಮಠದಲ್ಲಿ ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿರವರು ಕಾರ್ಯ ಕೈಗೊಂಡ ಸಾಮಾಜಿಕ ಕ್ರಾಂತಿಯ ಕಾರ್ಯಗಳನ್ನು ಕಾರ್ಯ ರೂಪಕ್ಕೆ ತಂದಿದ್ದು…

Read More

ಬೆಂಗಳೂರು:- ಗಾಂಧೀಜಿ ಬಗ್ಗೆ ಅಪಪ್ರಚಾರ ಮಾಡಿದ ಹಿನ್ನೆಲೆ ಹಿಂದೂ ಕಾರ್ಯಕರ್ತೆ ವಿರುದ್ಧ ಪ್ರಕರಣ ದಾಖಲಾಗಿದೆ. https://ainlivenews.com/what-is-land-conversion-how-much-do-you-know-about-this-non-agricultural-practice/ ಕೆಲವು ದಿನಗಳ ಹಿಂದೆ ಉಡುಪಿಯ ಪೂರ್ಣಪ್ರಜ್ಞ ಸಭಾಂಗಣದಲ್ಲಿ ನಡೆದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಡೆಹ್ರಾಡೂನ್ ಚಿಂತಕಿ ಮೀನಾಕ್ಷಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಭಾಷಣದಲ್ಲಿ ಬಾಂಗ್ಲಾ ಪಾಠ ಎಂಬ ವಿಷಯದ ಬಗ್ಗೆ ಹಿಂದಿಯಲ್ಲಿ ಮಾತನಾಡಿದ್ದ ಮೀನಾಕ್ಷಿ, ಜಿನ್ನಾ ಜೊತೆ ಸೇರಿಕೊಂಡು ಮಹಾತ್ಮ ಗಾಂಧಿ ಪಾಕಿಸ್ತಾನಕ್ಕೆ ಜನ್ಮ ನೀಡಿದ್ದಾರೆ. ಗಾಂಧೀಜಿ ಹಿಂದೂಗಳನ್ನು ದುರ್ಬಲಗೊಳಿಸಲು ಅಹಿಂಸೆಯನ್ನು ಪ್ರತಿಪಾದಿಸಿದ್ದಾರೆ. ಅವರನ್ನು ನಾವು ರಾಷ್ಟ್ರಪಿತ ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಬೇರೆ ಧರ್ಮಗಳ, ಗುಂಪುಗಳ ನಡುವೆ ವೈಮನಸ್ಸು, ದ್ವೇಷ, ಸಮಾಜದಲ್ಲಿ ಅಶಾಂತಿ ಹರಡುವ ರೀತಿಯಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದಾರೆ ಎಂದು ಉಡುಪಿಯ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಳ್ಳಲಾಗಿತ್ತು ಈ ಬಗ್ಗೆ X ನಲ್ಲಿ ಸ್ಪಷ್ಟನೆ ಕೊಟ್ಟಿರುವ ಮೀನಾಕ್ಷಿ, “ನಾನು ‘ರಾಷ್ಟ್ರಪಿತ’ ಎಂದು ಕರೆಯಲ್ಪಡುವ ಗಾಂಧೀಜಿ ಬಗ್ಗೆ ಕೆಲವು ಕಾಮೆಂಟ್‌ಗಳನ್ನು ಮಾಡಿದ್ದರಿಂದ ನನ್ನ ವಿರುದ್ಧ ಕೇಸ್ ದಾಖಲಿಸಲಾಗಿದೆ. ಐತಿಹಾಸಿಕ…

Read More

ಬೆಂಗಳೂರು:- ಬೆಂಗಳೂರಿನ ಹೆಣ್ಣೂರು ಬಂಡೆ ಮುಖ್ಯ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 10 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಜರುಗಿದೆ. https://ainlivenews.com/serious-effort-to-make-tulu-official-language-cm-siddaramaiah/ ಬೈಕ್ ನ ಹಿಂಬದಿಯಲ್ಲಿ ಬಾಲಕ ಕುಳಿತಿದ್ದ. ಏಕಾಏಕಿ ಬೈಕ್ ಗೆ ಟ್ರಕ್ ಡಿಕ್ಕಿ ಹೊಡೆದಿದೆ. ತಲೆಯ ಮೇಲೆ ಟ್ರಕ್‌ನ ಎರಡು ಚಕ್ರ ಹರಿದ ಪರಿಣಾಮ ಬಾಲಕ ಸಾವನ್ನಪ್ಪಿದ್ದಾನೆ. ಅಂಬೇಡ್ಕರ್ ಆಸ್ಪತ್ರೆಗೆ ಮೃತ ಬಾಲಕನ ದೇಹ ರವಾನೆ ಮಾಡಲಾಗಿದೆ. ಗಾಯಾಳು ಮಾವನನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ.

Read More

ಭಾರತದಲ್ಲಿ ಮಾಲೀಕನು ತನ್ನ ಕೃಷಿ ಭೂಮಿಯನ್ನು ಕೃಷಿ ಭೂಮಿಯನ್ನು ಹೊರತುಪಡಿಸಿ ಬೇರೆ ಉದ್ದೇಶಗಳಿಗಾಗಿ ಬಳಸಲು ಬಯಸಿದರೆ ಕಾನೂನು ಅವಶ್ಯಕತೆಯಿದೆ ಎಂದು ನಿಮಗೆ ತಿಳಿದಿದೆಯೇ? ಭೂ ಪರಿವರ್ತನೆಯು ಪ್ರಾಥಮಿಕವಾಗಿ ಎರಡು ಕಾರಣಗಳಿಂದಾಗಿದೆ – ಭಾರತದಲ್ಲಿನ ಆರ್ಥಿಕತೆಯು ಹೆಚ್ಚಾಗಿ ಕೃಷಿಯ ಮೇಲೆ ಆಧಾರಿತವಾಗಿದೆ ಮತ್ತು ಬಳಕೆಯಲ್ಲಿರುವ ಭೂಮಿಯನ್ನು ಮಾಲೀಕರು ಬದಲಾಯಿಸದಿದ್ದರೆ, ಪ್ರತಿಯೊಂದು ಭೂಮಿಯೂ ಕೃಷಿ ವರ್ಗದ ಅಡಿಯಲ್ಲಿ ಬರುತ್ತದೆ. ಎರಡನೆಯದಾಗಿ, ಭೂಮಿಯ ಮೇಲೆ ವಿಧಿಸಲಾದ ತೆರಿಗೆಯು ಅದರ ಬಳಕೆಯ ಮೇಲೆ ಅವಲಂಬಿತವಾಗಿರುತ್ತದೆ. https://ainlivenews.com/serious-effort-to-make-tulu-official-language-cm-siddaramaiah/ ಕೃಷಿ ಭೂಮಿಯ ಮಾಲೀಕರಿಗೆ ಯಾವುದೇ ತೆರಿಗೆ ವಿಧಿಸದಿದ್ದರೂ, ತಮ್ಮ ಭೂಮಿಯನ್ನು ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಬಳಸುತ್ತಿರುವ ಮಾಲೀಕರು ಈ ಆಸ್ತಿಯ ಮೂಲಕ ತಮ್ಮ ವಾರ್ಷಿಕ ಆದಾಯದ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಳ್ಳುವುದು ಹೇಗೆ ಎಂಬ ಮಾಹಿತಿಯನ್ನು ತಿಳಿಯಲು ಕಂಪ್ಲೀಟ್ ಡೀಟೈಲ್ಸ್ ನೋಡಿ. ರಾಜ್ಯದಲ್ಲಿ ಕೃಷಿಯೇತರ ಉದ್ದೇಶಗಳಿಗಾಗಿ ಕೃಷಿ ಭೂಮಿಯನ್ನು ಪರಿವರ್ತಿಸವುದು ಕಾನೂನು ಪ್ರಕ್ರಿಯೆಯಾಗಿದೆ. ಪರಿವರ್ತನೆಗೊಂಡ ಕೃಷಿಯೇತರ ಭೂಮಿಯನ್ನು ವಸತಿ ಅಥವಾ ವಾಣಿಜ್ಯ…

Read More