ಬೆಂಗಳೂರು:- ರಾಜ್ಯ ಸರ್ಕಾರವು ಸಂಕ್ರಾಂತಿಗೆ ಹಸುವಿನ ಕೆಚ್ಚಲು ಕೊಯ್ದಿರೋ ಗಿಫ್ಟ್ ಕೊಟ್ಟಿದ್ದಾರೆ. ಜಿಹಾದಿ ಮನಸ್ಥಿತಿ ಇದು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ. https://ainlivenews.com/hubballi-bn-historic-cricket-tournament/ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದಿರುವ ಘಟನೆಗೆ ವಿಪಕ್ಷ ನಾಯಕ ಆರ್ ಅಶೋಕ್ ಭೇಟಿ ನೀಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಲು ಕೊಡುವ ಹಸುವಿನ ಕೆಚ್ಚಲು ಕೊಯ್ದಿದ್ದಾರೆ. ಹಸುವಿನ ಮಾಲೀಕ ಆರ್‌ಎಸ್‌ಎಸ್ ಕಾರ್ಯಕರ್ತ. ಸ್ಥಳೀಯ ಪಶು ಆಸ್ಪತ್ರೆ ಉಳಿವಿಗಾಗಿ ಹಸುವಿನ ಮಾಲೀಕರು ಹೋರಾಟ ಮಾಡಿದರು. ಹಸುಗಳನ್ನ ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು ಎಂಬುದಕ್ಕೆ ಕಾಲು ಕಟ್ ಮಾಡಿದ್ದಾರೆ. ಕೆಚ್ಚಲಿಗೆ ಹಾನಿ ಮಾಡಿದ್ದಾರೆ. ಕಾಂಗ್ರೆಸ್ ಮಾತೆತ್ತಿದರೆ ದೇವಸ್ಥಾನ, ಹೋಮ ಮಾಡುತ್ತಾರೆ. ಇದು ವೋಟ್‌ಗಾಗಿ ಮಾಡುತ್ತಿರುವುದು ಎಂದು ಕಿಡಿಕಾರಿದರು. ಹಿಂದೂಗಳನ್ನು ಭಯಭೀತರನ್ನಾಗಿ ಮಾಡುವ ಉದ್ದೇಶ ಇದು. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಕರಾಳ ಸಂಕ್ರಾಂತಿ ಆಚರಣೆ ಮಾಡುತ್ತೇವೆ. ಸಿಸಿಟಿವಿಗಳನ್ನು ಒಡೆದು ಹಾಕಿದ್ದಾರಂತೆ. ಪಶು ಆಸ್ಪತ್ರೆ ಉಳಿವಿಗಾಗಿ ಹೋರಾಟ ಮಾಡಿದ ಹಸುಗಳ ಮಾಲೀಕರಿಗೆ ಭಯ ಶುರುವಾಗಿದೆ.ಸರ್ಕಾರಕ್ಕೆ…
Author: AIN Author
ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ವ್ಯಾಪ್ತಿ ಹೊಂದಿರುವ ಬಿಎನ್‌ಐ (ಬಿಸಿನೆಸ್ ನೆಟ್‌ವರ್ಕ್ ಇಂಟರ್‌ನ್ಯಾಷನಲ್) ವತಿಯಿಂದ ನಗರದ ಬಿ.ಡಿ.ಕೆ. ಮೈದಾನದಲ್ಲಿ ಜ.ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಬಿಎನ್‌ಐ ಸಂಯೋಜಕ ಅರಣ ಅಗರವಾಲ, 9 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿದ್ದು ಉದ್ಘಾಟನೆಯನ್ನ ಶಾಸಕ ಅಬ್ಬಯ್ಯಾ ಪ್ರಸಾದ್ ನಡೆಸಿಕೊಟ್ಟರು. https://ainlivenews.com/india-t20-squad-india-squad-for-t20-series-against-england-announced/ ಬಿಎನ್‌ಐನಲ್ಲಿ 450 ಸದಸ್ಯರು ಇದ್ದು, ಎಲ್ಲ ಸದಸ್ಯರ ಕುಟುಂಬದವರು ಕ್ರಿಕೆಟ್ ಪಂದ್ಯಾವಳಿ ಉತ್ಸವದಲ್ಲಿ ಭಾಗವಹಿಸುವರು. ಕ್ರೀಡಾಸಕ್ತ ಯುವಕರಿಗೆ ಕ್ರಿಕೆಟ್ ಕಿಟ್, ಕೇರಂ ಹಾಗೂ ಚೆಸ್ ಬೋರ್ಡ್‌ಗಳನ್ನು ನೀಡಲಾಗುವುದು ಎಂದು ತಿಳಿಸಿದರು. ಬಿಎನ್‌ಐ ಕಳೆದ 6 ವರ್ಷಗಳಲ್ಲಿ 800 ಕೋಟಿ ರೂ. ವಹಿವಾಟು ಮಾಡಿದೆ. ಬಿಎನ್‌ಐ ಹುಬ್ಬಳ್ಳಿಯಲ್ಲಿ ಮೊದಲ ಶಾಖೆ ಪ್ರಾರಂಭಿಸಿದ ನಂತರ, ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿಯಲ್ಲಿ ಒಟ್ಟು ಒಂಬತ್ತು ಶಾಖೆಗಳಿಗೆ ವಿಸ್ತರಿಸಿಕೊಂಡಿದೆ
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ.ಹದಿನೈದು ಸದಸ್ಯರ ಈ ತಂಡದಲ್ಲಿ ಯುವ ಆಲ್ರೌಂಡರ್ ರಿಯಾನ್ ಪರಾಗ್ಗೆ ಸ್ಥಾನ ನೀಡಲಾಗಿಲ್ಲ ಎಂಬುದು ವಿಶೇಷ. ಅಂದರೆ ಕಳೆದ ವರ್ಷ ಟೀಮ್ ಇಂಡಿಯಾ ಪರ 9 ಪಂದ್ಯಗಳನ್ನಾಡಿದ್ದ ಪರಾಗ್ ಅವರನ್ನು ಈ ಬಾರಿ ಆಯ್ಕೆಗೆ ಪರಿಗಣಿಸಲಾಗಿಲ್ಲ. https://ainlivenews.com/humiliation-by-placing-the-national-flag-under-the-muslim-flag-case-registered-against-6-people/ ಇನ್ನೂ ಎಂದಿನಂತೆ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಉಪನಾಯಕತ್ವವನ್ನು ಸಂಜು ಸ್ಯಾಮ್ಸನ್ ಬದಲಿಗೆ ಅಕ್ಷರ್ ಪಟೇಲ್ಗೆ ವಹಿಸಲಾಗಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವೆ ಇದೇ ತಿಂಗಳ 23 ರಿಂದ ಐದು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಬರೋಬ್ಬರಿ 2 ವರ್ಷಗಳ ಬಳಿಕ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿಗೆ ಟಿ20 ತಂಡದಲ್ಲಿ ಸ್ಥಾನ ನೀಡಲಾಗಿದೆ. ಟೀಂ ಇಂಡಿಯಾ ಮಾತ್ರವಲ್ಲದೆ ಈ ಸರಣಿಗೆ ಇಂಗ್ಲೆಂಡ್ ತಂಡವನ್ನು ಸಹ ಈಗಾಗಲೇ ಪ್ರಕಟಿಸಲಾಗಿದೆ. ಭಾರತ ಟಿ20 ತಂಡದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲದಿದ್ದರೂ, ಅನುಭವಿ ವಿಕೆಟ್ ಕೀಪರ್ ರಿಷಬ್ ಪಂತ್ ಈ ಸರಣಿಗೆ ತಂಡದಲ್ಲಿ ಆಯ್ಕೆಯಾಗಿಲ್ಲ. ಹೀಗಾಗಿ ಧ್ರುವ್ ಜುರೆಲ್ ತಂಡದಲ್ಲಿ…
ಕಲಬುರ್ಗಿ:- ಮುಸ್ಲಿಂ ಧ್ವಜದ ಕೆಳಗಡೆ ರಾಷ್ಟ್ರಧ್ವಜ ಇಟ್ಟು ಅಪಮಾನ ಮಾಡಿದ ಹಿನ್ನೆಲೆ 6 ಮಂದಿ ವಿರುದ್ಧ ಕೇಸ್ ದಾಖಲಾಗಿದೆ. https://ainlivenews.com/hubballi-stomach-ache-for-wrongdoers-narayanaswamy/ ಕಲಬುರಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ಗೌರಕ್ಕೆ ಅವಮಾನ ತಡೆಗಟ್ಟುವ ಕಾಯ್ದೆ 1971 ಯು/ಎಸ್ 2 ಅಡಿಯಲ್ಲಿ ಮೊಹಮ್ಮದ್ ಅಫ್ಜಲುದ್ದೀನ್ ಜುನೈದಿ, ಮೊಹಮ್ಮದ್ ಕಿವಾಮೊದ್ದಿನ್ ಜುನೈದಿ, ತಾಹಿರ್ ಅಲ್ಲಾವುದ್ದಿನ್ ಜುನೈದಿ, ಫಕ್ರುದ್ದಿನ್ ಮಣಿಯಾಲ್, ರಿಜ್ವಾನ್ ಅಹ್ಮದ್ ಮತ್ತು ಮೌಲಾನ್ ಅಹ್ಮದ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ಶುಕ್ರವಾರದಂದು ಇಲ್ಲಿನ ಶೇಖ್ ದರ್ಗಾದಲ್ಲಿ ಜುನೈದಿ ಎಂಬುವರ ಹುಟ್ಟು ಹಬ್ಬ ಆಚರಣೆ ಮಾಡಲಾಗಿತ್ತು. ಹುಟ್ಟು ಹಬ್ಬ ಪ್ರಯುಕ್ತ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ಈ ವೇಳೆ ಮುಸ್ಲಿಂ ಧ್ವಜದ ಕೆಳಗಡೆ ರಾಷ್ಟ್ರಧ್ವಜ ಇಟ್ಟು ಆರೋಹಣ ಮಾಡಲಾಗಿತ್ತು. ಈ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪ ಕೇಳಿಬಂದಿತ್ತು. ಈ ಸಂಬಂಧ ದೂರು ಆಧರಿಸಿ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
ಹುಬ್ಬಳ್ಳಿ: ‘ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಸತ್ಯ ಹೇಳಿದಾಗ ತಪ್ಪು ಮಾಡಿದವರಿಗೆ ಹೊಟ್ಟೆಯುರಿ ಆಗಿದೆ. ಕಾಂಗ್ರೆಸ್‌ಗೆ ಆದ ಅವಮಾನ ದಲಿತರಿಗ್ಯಾಕೆ? ದಲಿತರೆಲ್ಲ ಕಾಂಗ್ರೆಸ್‌ಗೆ ಸೇರಿದವರು ಎಂದು ಬರೆದುಕೊಡಲಾಗಿದೆಯೇ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. https://ainlivenews.com/thou-sinners-for-taking-the-cows-to-the-fight-cut-off-the-udder/ ನಗರದ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಸಂಘಟನೆ ಇಲ್ಲಿಯ ಇಂದಿರಾ ಗಾಜಿನಮನೆ ಆವರಣದಲ್ಲಿಂದು ಹಮ್ಮಿಕೊಂಡಿದ್ದ ‘ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸಂಸತ್ತಿನಲ್ಲಿ ಅಮಿತ್ ಶಾ ಮಾತನಾಡಿದ್ದು ಹಿಂದಿಯಲ್ಲಿ. ಆ ಭಾಷೆ ಅರ್ಥವಾಗದವರು ಬೀದಿಗೆ ಇಳಿದಿದ್ದಾರೆ. ಮೊದಲಿನಂಥ ಸಂಘಟನೆಗಳು ಈಗ ಇಲ್ಲ. ಇರುವುದೆಲ್ಲ ಹೊಟ್ಟೆಪಾಡಿನ ಸಂಘಟನೆಗಳು. ಅವರೆಲ್ಲ ಅಂಬೇಡ್ಕರ್ ಅವರ ಗುರುತಿನ ಚೀಟಿಯಷ್ಟೇ ಆಗಿದ್ದಾರೆ. ಕಾಂಗ್ರೆಸ್ ಲೂಟಿ ಮಾಡಿದ ಹಣದಲ್ಲಿ ಹೋರಾಟ ಮಾಡಬೇಕಾ? ಕೃಪಾಪೋಷಿತ ನಾಟಕ ಮಂಡಳಿಯಿಂದ ಬಂದ್ ಆಗುತ್ತಿದೆ. ಸತ್ಯದ ಅರಿವು ಆಗುವವರೆಗೆ ಹೋರಾಡುತ್ತಾರೆ. ನಂತರ ತೆಪ್ಪಗಾಗುತ್ತಾರೆ’ ಎಂದು ವ್ಯಂಗ್ಯವಾಡಿದರು.…
ಬೆಂಗಳೂರು:- ಗೋ ಮಾತೆಯನ್ನ ಪೂಜೆ ಮಾಡುವ ಭಾರತದಲ್ಲಿ ನಿಜಕ್ಕೂ ಸಿಲಿಕಾನ್ ಸಿಟಿಯಲ್ಲಿ ಇಂದು ನಡೆದಿರುವ ಕೃತ್ಯ ಇಡೀ ಮನುಕುಲವೇ ತಲೆ ತಗ್ಗಿಸುವಂತದ್ದು. https://ainlivenews.com/do-you-have-frequent-vomiting-and-nausea-if-so-this-is-a-heart-attack-prediction/ ಹೀಗಾಗಿ ಭಾರತದಲ್ಲಿ ಉಗ್ರಗಾಮಿಗಳು ಹುಟ್ಟಿಕೊಂಡ್ರಾ ಎಂಬ ಪ್ರಶ್ನೆ ಮೂಡಿದೆ. ಉಗ್ರಗಾಮಿಗಳಿಗೂ ಈ ರೀತಿ ಕೃತ್ಯ ಮಾಡಲು ಮನಸ್ಸು ಬರುತ್ತೋ ಇಲ್ವೋ, ಆದ್ರೆ ಅಮೃತ ಕೊಡುವ ಗೋ ಮಾತೆಯ ಆಕಳನ್ನೆ ಕಳಚಿದ ಕಥೆ ನೋಡಿದ್ರೆ ಕರುಳು ಹಿಂಡುವಂತಾಗತ್ತೆ. ಹೋ ದೇವರೇ ಇವರಿಗೆ ಎಂಥ ಶಿಕ್ಷೆ ಎಂಬ ಕೂಗು ಕೇಳಿ ಬಂದಿದೆ. ಪ್ರತಿಭಟನೆಗೆ ಹಸುಗಳನ್ನು ಕರೆದುಕೊಂಡು ಹೋಗಿದ್ದಕ್ಕೆ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲನ್ನು ಕತ್ತರಿಸಿದ್ರಾ ಎಂಬ ಪ್ರಶ್ನೆ ಎದ್ದಿದೆ. ಹೌದು. 6 ತಿಂಗಳ ಹಿಂದೆ ಚಾಮರಾಜಪೇಟೆಯ ಪಶು ಆಸ್ಪತ್ರೆ ಎತ್ತಂಗಡಿಗೆ ಪ್ಲ್ಯಾನ್ ನಡೆದಿತ್ತು. ಪ್ರತಿಭಟನೆಯ ವೇಳೆ ಈ ಹಸುಗಳನ್ನು ಮಾಲೀಕರು ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು. ಕೆಲ ದಿನಗಳ ಹಿಂದೆ ಹಸುವಿನ ಗುದಾದ್ವಾರಕ್ಕೆ ಪೈಪ್ ಇಟ್ಟು ವಿಕೃತಿ ಮೆರೆದಿದ್ದರು. ಈಗ ಶನಿವಾರ ಕೆಚ್ಚಲುಗೆ ಚಾಕು ಹಾಕಿ ಇರಿದಿದ್ದಾರೆ. ಪಶು ಆಸ್ಪತ್ರೆ…
ಹೃದಯಾಘಾತವೆಂದರೆ ಎದೆನೋವು ಎಂದೇ ಹಲವರು ಭಾವಿಸುವರು. ಆದರೆ ಇನ್ನು ಕೆಲವು ಲಕ್ಷಣಗಳು ಇವೆ ಎನ್ನುವುದು ತಿಳಿದಿಲ್ಲ. ಇದರಲ್ಲಿ ವಾಕರಿಕೆ ಮತ್ತು ವಾಂತಿ ಕೂಡ ಸೇರಿದೆ. https://ainlivenews.com/bad-batting-hit-man-decided-to-announce-retirement-in-australia/ ಹೃದಯಾಘಾತದ ಸಂದರ್ಭದಲ್ಲಿ ವಾಂತಿ ತಮ್ತು ವಾಕರಿಕೆ ಕಂಡು ಬರುವುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೆಲವು ಇದನ್ನು ಹೊಟ್ಟೆ, ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಭಾವಿಸುವರು. ಆದರೆ ಇದು ಹೃದಯದ ಸಮಸ್ಯೆಯಾಗಿರುವುದು. ವಾಕರಿಕೆ ಬಳಿಕ ವಾಂತಿ ಬಂದರೆ ಆಗ ಇದು ಹೃದಯಾಘಾತದ ಲಕ್ಷಣವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ. ಹೆಚ್ಚಿನವರು ಇದನ್ನು ಹೊಟ್ಟೆಯ ಸಮಸ್ಯೆ ಅಥವಾ ಅಜೀರ್ಣ ಸಮಸ್ಯೆ ಎಂದು ತಪ್ಪಾಗಿ ಅರ್ಥೈಸಿಕೊಳ್ಳುವರು. ಆದರೆ ನಿಜವಾ ಗಿಯೂ ಇದು ಹೃದಯದ ಸಮಸ್ಯೆ. ಕೆಳಗಿನ ಭಾಗದ ಮಯೊ ಕಾರ್ಡಿಯಲ್ ನಿಂದ ಇದು ಬಂದರೆ ಆಗ ಇದು ಹೃದಯದ ಕೆಳಭಾಗದಿಂದ ಬರುವ ಹೃದಯಾಘಾತದ ಲಕ್ಷಣವಾಗಿದೆ. ಅತಿಯಾಗಿ ಬೆವರು: ಎದೆನೋವಿಲ್ಲದೆ ಅತಿಯಾಗಿ ಬೆವರುತ್ತಲಿ ದ್ದರೆ, ಆಗ ಇದು ಹೃದಯದ ಸಮಸ್ಯೆಯ ಲಕ್ಷಣವಾಗಿರಬಹುದು. ಕೆಲವರು ಇದನ್ನು ಕಡೆಗಣಿಸುವರು. ಆದರೆ ಇದು ಕೂಡ ಹೃದಯ…
ಫೀಲ್ಡ್ ನಲ್ಲಿ ಬರೀ 6,4 ಕೊಡುವ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ನಿಂದ ಇತ್ತೀಚಿನ ದಿನಗಳಲ್ಲಿ ಹೇಳಿಕೊಳ್ಳುವಷ್ಟು ಫಾರ್ಮ್ ಕಂಡು ಬರುತ್ತಿಲ್ಲ. ಬದಲಿಗೆ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. https://ainlivenews.com/attack-at-suvarna-soudha-is-it-gandhi-or-good-ct-ravi-question/ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ನಡುವೆಯೇ ನಿವೃತ್ತಿ ಘೋಷಿಸಲು ಮುಂದಾಗಿದ್ದರು ಎಂಬ ವಿಚಾರ ಇದೀಗ ಬಹಿರಂಗವಾಗಿದೆ. ರೋಹಿತ್ ಶರ್ಮಾ ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಬಳಿಕ ನಿವೃತ್ತಿ ಘೋಷಿಸಲು ಸಜ್ಜಾಗಿದ್ದರು. ಈ ವಿಷಯ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೂ ಗೊತ್ತಿತ್ತು. ಆದರೆ ಕೊನೆಯ ಕ್ಷಣದಲ್ಲಿ ರೋಹಿತ್ ತಮ್ಮ ನಿರ್ಧಾರವನ್ನು ಬದಲಿಸಿದರು. ಆದರೆ ರೋಹಿತ್ ಶರ್ಮಾ ಅವರ ಈ ನಿರ್ಧಾರದಿಂದ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅಸಮಾಧಾನಗೊಂಡಿದ್ದರು. ನಿವೃತ್ತಿ ನಿರ್ಧಾರವನ್ನು ಪ್ರಸ್ತಾಪಿಸಿದ ಬಳಿಕ ರೋಹಿತ್ ದಿಢೀರ್ ಟೆಸ್ಟ್ ಕ್ರಿಕೆಟ್ಗೆ ವಿದಾಯ ತೀರ್ಮಾನದಿಂದ ಹಿಂದೆ ಸರಿದಿದ್ದು ಗಂಭೀರ್ ಅವರಿಗೆ ಇಷ್ಟವಾಗಿರಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿನ…
ಬೆಂಗಳೂರು:-ಸುವರ್ಣಸೌಧದಲ್ಲಿ ನನ್ನ ಮೇಲೆ ನಡೆದ ಹಲ್ಲೆಯನ್ನು ಗಾಂಧಿಗಿರಿ ಎನ್ನಬೇಕೋ ಅಥವಾ ಗೂoಡಾಗಿರಿ ಏನಬೇಕೋ ಎಂದು CT ರವಿ DCM ಡಿಕೆ ಶಿವಕುಮಾರ್ ಗೆ ಪ್ರಶ್ನೆ ಮಾಡಿದ್ದಾರೆ. https://ainlivenews.com/as-long-as-there-is-power-let-us-talk-about-the-development-of-the-field-hoodi-vijay-kumar/ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ CT ರವಿ, ನೀವು ಉಪಮುಖ್ಯಮಂತ್ರಿಗಳು ಎನ್ನುವುದನ್ನು ಮರೆತು ಬಿಟ್ಟಿದ್ದೀರಿ. ನೀವು ನ್ಯಾಯಾಧೀಶರ ಸ್ಥಾನದಲ್ಲಿ ಇದ್ದು, ಸತ್ಯಾಸತ್ಯತೆಯನ್ನು ವಿಚಾರ ಮಾಡಬೇಕಾದವರು ದುರದೃಷ್ಟವಾಶಾತ್ ಯಾರದ್ದೋ ವಕೀಲರಾಗಿಬಿಟ್ಟಿದ್ದೀರಿ. ಯಾರು ಮೋಹ ಮದ ಮಾತ್ಸರ್ಯಗಳಿಂದ ಹೊರಗಿದ್ದು ನೋಡುತ್ತಾರೋ ಅವರಿಗೆ ಸತ್ಯಾಸತ್ಯಾತೆ ಗೊತ್ತಾಗುತ್ತದೆ. ಮೋಹಪರವಶರಾದವರಿಗೆ, ಅಧಿಕಾರದ ಮದದಿಂದ ಕೂಡಿದವರಿಗೆ, ಮಾತ್ಸರ್ಯದ ರಾಜಕಾರಣ ಮಾಡುವವರಿಗೆ ಸತ್ಯ ಅರ್ಥ ಆಗಲಿಕ್ಕೆ ಸಾಧ್ಯವಿಲ್ಲ. ಸಭಾಪತಿಗಳ ರೂಲಿಂಗ್ ನೀಡಿದ ನಂತರ ನೀವುಗಳು, ನಿಮ್ಮ ಪಕ್ಷದ ಶಾಸಕರು ನಡೆದುಕೊಂಡ ರೀತಿ ನಿಮಗುಚಿತವೇ? ಗೂoಡಾಗಳನ್ನೂ, ಜೊತೆಗಾರರನ್ನು ಎತ್ತಿಕಟ್ಟಿ, ಶಾಸಕಾಂಗದ ದೇಗುಲವಾದ “ಸುವರ್ಣ ಸೌಧದಲ್ಲಿ” ನನ್ನ ಮೇಲೆ ನಡೆದ ಹಲ್ಲೆಯನ್ನು ಯಾವ ದೃಷ್ಟಿಯಿಂದ ನೋಡುತ್ತೀರಿ? ಇದನ್ನು ಗಾಂಧಿಗಿರಿ ಎನ್ನಬೇಕೇ ಅಥವಾ ಗೂoಡಾಗಿರಿ ಎನ್ನಬೇಕೇ? ನಿಮ್ಮ ಸರ್ಕಾರದ ಪೊಲೀಸರು ಮಾಡಿದ ಅಸಂವಿಧಾನಿಕ, ಅನೈತಿಕ…
ಮಾಲೂರು – ಪದೇಪದೇ ಶಾಸಕ ನಂಜೇಗೌಡ ಮಾಲೂರಿನ ಅಭಿವೃದ್ಧಿ ಬಗ್ಗೆ ಹೊರಗಿನ ವ್ಯಕ್ತಿಗಳು ಮಾತನಾಡುವ ಅಧಿಕಾರವಿಲ್ಲ ಅಂತ ಹೇಳ್ತಾರೆ, ನಮಗೆ ಮಾತನಾಡುವ ಅಧಿಕಾರ ಇಲ್ಲ ಅಂದ್ರೆ, ಅಧಿಕಾರ ಇದ್ದವರೇ ಮಾತನಾಡಲಿ, ನನಗೂ ಕ್ಷೇತ್ರದ ಮತದಾರರು 50 ಸಾವಿರ ಮತ ನೀಡಿದ್ದಾರೆ ಎಂದು ಸ್ವಾಭಿಮಾನಿ ಜನತಾ ಪಕ್ಷದ ಸಂಸ್ಥಾಪಕ ಹೂಡಿ ವಿಜಯ್ ಕುಮಾರ್ ರವರು ಶಾಸಕ ನಂಜೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು. https://ainlivenews.com/yamas-eyes-on-the-happy-boy-parents-who-have-lost-a-child-are-in-mourning/ ಮಾಲೂರು ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೂ ಜನ 50 ಸಾವಿರ ಮತ ನೀಡಿದ್ದಾರೆ, ನಾವು ಅವರ ಪರವಾಗಿ ಮಾತನಾಡಬಾರದ, ಮಾಲೂರಿಗೆ ಬೇರೆ ಕಡೆಯಿಂದ ಬಂದು ಇಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಾರೆ ಆದರೆ ಶಾಸಕರು ಅದನ್ನು ಪ್ರಶ್ನಿಸುವುದಿಲ್ಲ, ಕ್ಷೇತ್ರದ ಅಭಿವೃದ್ಧಿ ಮಾಡಲ್ಲ ಅಂತ ಶಾಸಕ ನಂಜೇಗೌಡರು ನಿರ್ಣಯ ಮಾಡಿದ್ದಾರೆ, ಯಾರೆಷ್ಟೇ ಹೋರಾಟಗಳನ್ನು ಮಾಡಿದರು ಚುನಾವಣಾ ಸಂದರ್ಭದಲ್ಲಿ ವೋಟಿಗೆ ಸಾವಿರ ರೂಪಾಯಿ ಹೆಚ್ಚಾಗಿ ಕೊಟ್ಟರೆ ನಾನು ಗೆಲ್ತೀನಿ ಅಂತ ಅಂದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿದ್ದು ಅದಕ್ಕೆ ಸ್ಪಂದಿಸದೆ…