Author: AIN Author

ಕೊಪ್ಪಳ:- ಕೊಪ್ಪಳ ಪೊಲೀಸರು ಕಾರ್ಯಚರಣೆ ನಡೆಸಿ ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿಕೊಂಡು ಮದುವೆ ಆಗುವುದಾಗಿ ನಂಬಿಸಿ, ವಂಚಿಸುತ್ತಿದ್ದ ಕಿಲಾಡಿಯನ್ನು ಅರೆಸ್ಟ್ ಮಾಡಿದ್ದಾರೆ. https://ainlivenews.com/current-here-is-a-list-of-powerless-areas-in-these-areas-of-bangalore/ ಜೈಭೀಮ್ ಪಡಕೋಟಿ ಆರೋಪಿ. ಈತ ಮ್ಯಾಟ್ರಿಮೋನಿಯಲ್ಲಿ ಪರಿಚಯಿಸಿಕೊಂಡು ಮದುವೆ ಆಗುವುದು. ನಂತರ ಯುವತಿ ಕುಟುಂಬದವರಿಗೆ ಇಲ್ಲಸಲ್ಲದ ಆಸೆ ಹುಟ್ಟಿಸಿ ಹಣ ಪೀಕಿ, ಕ್ಯಾನಿನೋದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ. ಕೊಪ್ಪಳ ಜಿಲ್ಲೆಯ ಮಹಿಳೆಯೊಬ್ಬರು ನೀಡಿದ ದೂರು ಆಧರಿಸಿ, ಪೊಲೀಸರು ವಂಚಕನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈತನಿಗೆ ಮ್ಯಾಟ್ರಿಮೋನಿ ಆದಾಯದ ಮೂಲ. ಕ್ಯಾಸಿನೋ ಹಣ ಬಳಕೆಯ ವೇದಿಕೆ ಎಂಬ ವಿಷಯ ಬೆಳಕಿಗೆ ಬಂದಿದೆ. ಜೈಭೀಮ್ ವಿರುದ್ದ ರಾಜ್ಯದ 9 ಠಾಣೆಯಲ್ಲಿ ಕೊಲೆ ಸೇರಿ ಮಹಿಳೆಯರಿಗೆ ವಂಚಿಸಿದ 11 ಪ್ರಕರಣ ದಾಖಲಾಗಿವೆ. ಆ್ಯಪ್‌ನಲ್ಲಿ ಅನೇಕ ಯುವತಿಯರ ಪ್ರೊಪೈಲ್ ಚೆಕ್ ಮಾಡಿ, ನಂಬರ್ ಪಡೆದು ವಂಚನೆ ಮಾಡುವುದು ಈತನ ಕಾಯಕ. ಹೀಗೆಯೇ ಕೊಪ್ಪಳ ತಾಲೂಕಿನ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದು, ನಂತರ ಅವರ ಕುಟುಂಬದ ಬೆನ್ನು ಬಿದ್ದು 2021ರಲ್ಲಿ ಮದುವೆಯಾಗಿದ್ದನು. ಮದುವೆಯಾಗಿ ಕೆಲ ದಿನಕ್ಕೆ ಪತ್ನಿಗೆ ಕಿರುಕುಳ…

Read More

ಬೆಂಗಳೂರು:- ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. https://ainlivenews.com/pears-or-banana-for-good-health-in-which-the-best/ ಇಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೂ ಎಲಿಟಾ ಪ್ರೋಮೊನೇಡ್ ಅಪಾರ್ಟ್ ಮೆಂಟ್, ಕೆಆರ್ ಲೇಔಟ್, ಶಾರದಾನಗರ, ಚುಂಚುನ್ ಘಟ್ಟ ಮತ್ತು ಉಪ ಕೇಂದ್ರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಮಧ್ಯಾಹ್ನ 12 ಗಂಟೆವರೆಗೆ ಶಾಂತಿನಿಕೇತನ ರೆಸಿಡೆನ್ಸೀಯಲ್ ಅಪಾರ್ಟ್‌ಮೆಂಟ್, ಬ್ರಿಗೇಡ್ ಲೇಕ್ ಫ್ರಂಟ್ ರೆಸಿಡೆನ್ಸೀಯಲ್ ಅಪಾರ್ಟ್‌ಮೆಂಟ್, ಟೋಟಲ್ ಎನ್ವಿರಾನ್‌ಮೆಂಟ್ ಅಪಾರ್ಟ್‌ಮೆಂಟ್, ಇಪಿಐಪಿ ಇಂಡಸ್ಟ್ರೀಯಲ್ ಏರೀಯಾ, ಸದರಮಂಗಳ ಇಂಡಸ್ಟ್ರೀಯಲ್ ಏರೀಯಾ, ನಲ್ಲರಹಳ್ಳಿ ವಿಲೇಜ್, ಪಟ್ಟಂದೂರು ಅಗ್ರಹಾರ, ಇಸಿಸಿ ರೋಡ್, ಸಿದ್ದಾಪುರ ರೋಡ್, ಐಟಿಪಿಎಲ್ ಮುಖ್ಯ ರಸ್ತೆಯಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಶನಿವಾರ ಎಲ್ಲೆಲ್ಲಿ ಕರೆಂಟ್‌ ಕಟ್‌?: ಫೆಬ್ರವರಿ 15ರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಶ್ರೀನಗರ, ಹೊಕೆರೆಹಳ್ಳಿ, ಪಿಇಎಸ್ ಎಂಜಿನಿಯರಿಂಗ್ ಕಾಲೇಜು,…

Read More

ಬಾಲ್ಯದಲ್ಲಿ ಎಷ್ಟೊಂದು ಸೀಬೆ ಹಣ್ಣು ಅಥವಾ ಪೇರಳೆ ತಿಂದಿದ್ದೇವೆ ಅನ್ನೋದಕ್ಕೆ ಲೆಕ್ಕವೇ ಇಲ್ಲ. ಎಲ್ಲರೂ ಅಂದು ಕೊಂಡಂತೆ ಸೀಬೆ ಹಣ್ಣು ಕೇವಲ ತಿನ್ನಲು ಮಾತ್ರ ರುಚಿಯಾದ ಹಣ್ಣುಲ್ಲ. ಇದರಿಂದ ಸ್ಕಿನ್, ಕೂದಲಿಗೂ ಉತ್ತಮ ಪೋಷಣೆ ದೊರೆಯುತ್ತದೆ. ಹೌದು ತಿನ್ನುವುದರ ಜೊತೆಗೆ ಸೀಬೆ ಹಣ್ಣನ್ನು ಈ ರೀತಿಯಾಗಿ ಬಳಸಿದರೆ ಅದರಿಂದ ಮತ್ತೆ ಹೊಸ ಸ್ಕಿನ್ ಕೇರ್ ಉತ್ಪನ್ನಗಳತ್ತ ಮುಖ ಮಾಡೋದೆ ಮರೆತು ಬಿಡೋದು ಗ್ಯಾರಂಟಿ. ಬಾಳೆಹಣ್ಣು ಉತ್ತಮ ಆರೋಗ್ಯಕ್ಕೆ ಪ್ರಯೋಜನಕಾರಿ ಹಣ್ಣು ಎಂದು ಪರಿಗಣಿಸಲಾಗಿದೆ. ಬಾಳೆಹಣ್ಣು ನಿಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ಬಾಳೆಹಣ್ಣುಗಳು ಯಾವುದೇ ಋತುವಿನಲ್ಲಿ ಸುಲಭವಾಗಿ ಲಭ್ಯವಿರುತ್ತವೆ ಮತ್ತು ನೀವು ಅವುಗಳನ್ನು ಯಾವುದೇ ರೀತಿಯಲ್ಲಿ ಬಳಸಬಹುದು, ಎಲ್ಲರೂ ದಿನನಿತ್ಯ ಸೇವಿಸುವ ಹಣ್ಣುಗಳಲ್ಲಿ ಬಾಳೆಹಣ್ಣು ಮತ್ತು ಪೇರಳೆ ಕೂಡ ಸೇರಿದೆ. ಎರಡೂ ಹಣ್ಣುಗಳು ಕೂಡ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಹಲವಾರು ಪ್ರಯೋಜನಗಳಿವೆ. ಆದರೆ ಪೇರಳೆ ಹಾಗೂ ಬಾಳೆಹಣ್ಣು, ಈ ಎರಡರಲ್ಲಿ ಆರೋಗ್ಯಕ್ಕೆ ಉತ್ತಮವಾದದ್ದು ಯಾವುದು ಎನ್ನುವ ಗೊಂದಲವಿರಬಹುದು?…

Read More

ಕೊಪ್ಪಳ:-ಕುಷ್ಟಗಿ ತಾಲೂಕಿನ ನಂದಾಪೂರ ಕ್ರಾಸ್ ಬಳಿ ಇಬ್ಬರು ಸಾವನ್ನಪ್ಪಿರುವ ಘಟನೆ ಜರುಗಿದೆ. https://ainlivenews.com/fire-to-d-two-hungry-a-calf-fire/ ಸಿಮೆಂಟ್ ಲಾರಿ ಹಾಗೂ ಬುಲೆರೋ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವ ದಹನಗೊಂಡಿದ್ದಾರೆ. 25 ವರ್ಷದ ಸಿದ್ಧಪ್ಪ ಪೊಲೀಸಗೌಡರ, 26 ವರ್ಷದ ಅಂಜನಪ್ಪ ಪೊಲೀಸ್‌ಗೌಡರ ಮೃತರು. ಗುರುವಾರ ಬೆಳಿಗ್ಗೆ ಸುಮಾರು 4 ಗಂಟೆಗೆ ಸಿಮೆಂಟ್ ಮಿಕ್ಸರ್ ಯಂತ್ರದ ಲಾರಿಯನ್ನು ತೆಗೆದುಕೊಂಡು ಕುಷ್ಟಗಿ ಕಡೆಗೆ ಹೊರಟಿದ್ದರು. ಇದೇ ವೇಳೆ ಕುಷ್ಟಗಿ ತರಕಾರಿ ಮಾರುಕಟ್ಟೆಗೆ ಸೌತೆಕಾಯಿ ಹಾಕಿ, ಲಿಂಗಸಗೂರು ಕಡೆಗೆ ಹೊರಟಿದ್ದ ಬುಲೆರೋ ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯಾದ ರಭಸಕ್ಕೆ ಬುಲೆರೋ ವಾಹನಕ್ಕೆ ಬೆಂಕಿ ಆವರಿಸಿದ್ದು, ಇಬ್ಬರು ಸಜೀವದಹನವಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.

Read More

ಗದಗ:- ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಶೆಡ್ ನಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಿಂದ ಎರಡು ಆಕಳು ಹಾಗೂ ಕರು ಸುಟ್ಟುಕರಕಲಾದ ಘಟನೆ ಜರುಗಿದೆ. https://ainlivenews.com/use-coconut-oil-like-this-you-will-have-knee-length-hair-100-result/ ನವೀನ ನವಲೆ ಎನ್ನುವ ರೈತನಿಗೆ ಸೇರಿದ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿ ಕೊಳ್ಳುತ್ತಿದ್ದಂತೆ ಎರಡು ಆಕಳು, ಒಂದು ಕರು ಸಾವನ್ನಪ್ಪಿದೆ. ಅಲ್ಲದೇ ಎರಡು ಟ್ರ್ಯಾಕ್ಟರ್ ಹೊಟ್ಟು, 10 ಚೀಲ್ ಈರುಳ್ಳಿ, ಹಾಗೂ ಶೆಡ್ ಬೆಂಕಿಗಾಹುತಿಯಾಗಿದೆ. ಘಟನೆಯಿಂದ ಸುಮಾರು 25 ಲಕ್ಷಕ್ಕೂ ಹೆಚ್ಚು ಹಾನಿ ಆಗಿದ್ದು, ರೈತ ಕುಟುಂಬ ಕಂಗಾಲಾಗಿದೆ.

Read More

ಮಡಿಕೇರಿ:- ಬಾಣಂತಿ ಓರ್ವರು, 14 ದಿನದ ಮಗು ಹಾಗೂ ಪತಿಯನ್ನು ತ್ಯಜಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೊಟ್ಟೋಳಿಯಲ್ಲಿ ಜರುಗಿದೆ. https://ainlivenews.com/use-coconut-oil-like-this-you-will-have-knee-length-hair-100-result/ ಕಾವೇರಮ್ಮ ನೇಣಿಗೆ ಶರಣಾದ ಮಹಿಳೆ ಎಂದು ಗುರುತಿಸಲಾಗಿದೆ. ದಿನೇಶ್-ಕಾವೇರಮ್ಮ ಮದುವೆಯಾಗಿ ಸುಮಾರು 4 ವರ್ಷಗಳು ಕಳೆದಿದೆ. ಫೆ.12 ರಂದು ಪತಿ ದಿನೇಶ್ ತಮ್ಮ ಮನೆಯ ಸನೀಹದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಮನೆಯಲ್ಲಿ ಮಗುವಿನ ಕೂಗಾಟ ಕೇಳಿ ಬಂದು ನೋಡಿದ್ದಾರೆ. ಕಾವೇರಮ್ಮ ಸ್ನಾನದ ಕೋಣೆಯಲ್ಲಿ ಸೀರೆಯಿಂದ ನೇಣುಬಿಗಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read More

ಬಿಳಿ ಕೂದಲು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಚಿಕ್ಕ ಮಕ್ಕಳಿನಿಂದ ಹಿಡಿದು ಯುವಕ- ಯುವತಿಯರಲ್ಲಿ ಅತೀ ಹೆಚ್ಚಾಗಿ ಬಿಳಿ ಕೂದಲಿನ ಸಮಸ್ಯೆಯನ್ನ ಎದುರಿಸುತ್ತಿರುತ್ತದೆ. ಹಲವಾರು ರೀತಿಯ ಪೋಷಕಾಂಶಗಳ ಕೊರತೆ ಇರುತ್ತದೆಯೋ ಅವರಲ್ಲಿ ಬಿಳಿ ಕೂದಲಿನ ಸಮಸ್ಯೆ ಅಧಿಕವಾಗಿ ಕಾಣುತ್ತಿರುತ್ತದೆ. https://ainlivenews.com/patidar-elected-as-rcbs-new-captain-kohli-sends-a-new-message-to-fans/ ಬಿಳಿ ಕೂದಲಿನ ಸಮಸ್ಯೆ ನಿವಾರಣೆಗೆ ದುಬಾರಿ ಹೇರ್ ಪ್ರಾಡಕ್ಟ್ ಕೊಳ್ಳುತ್ತೀರಾ…. ಅದರ ಅಗತ್ಯವೇ ಇಲ್ಲ ತೆಂಗಿನೆಣ್ಣೆಯನ್ನು ಬಳಸಿಯೂ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು. ತೆಂಗಿನೆಣ್ಣೆಯೊಂದಿಗೆ ಕರಿಬೇವಿನ ಸೊಪ್ಪು (ಒಂದು ಹಿಡಿ), 8-10 ಲವಂಗ, 1 ಟೀ ಸ್ಪೂನ್ ಮೆಂತ್ಯ ಕಾಳುಗಳು, ಒಂದು ಟೀ ಸ್ಪೂನ್ ಟೀಸೊಪ್ಪು ಬಳಸಿ ನೈಸರ್ಗಿಕವಾದ ಗಾಢ ಕಪ್ಪು ಕೂದಲನ್ನು ನಿಮ್ಮದಾಗಿಸಬಹುದು. ವಾಸ್ತವಾವಾಗಿ, ಕರಿಬೇವಿನ ಸೊಪ್ಪು, ಲವಂಗ, ಮೆಂತ್ಯ ಕಾಳುಗಳು, ಟೀ ಸೊಪ್ಪು, ತೆಂಗಿನೆಣ್ಣೆ ತಲೆಕೂದಲನ್ನು ಆರೋಗ್ಯಕರವಾಗಿ ಕಪ್ಪಾಗಿಸುವುದರ ಜೊತೆಗೆ ಕೂದಲು ಉದುರುವಿಕೆಯನ್ನು ನಿಯಂತ್ರಿಸಿ ಉದ್ದ ದಪ್ಪವಾದ ಕೂದಲು ಪಡೆಯಲು ಸಹಾಯಕವಾಗಿದೆ. ಮೊದಲಿಗೆ ಒಂದು ಬಾಣಲೆಯಲ್ಲಿ ತಾಜಾ ಕರಿಬೇವಿನ ಸೊಪ್ಪು, ಲವಂಗ, ಮೆಂತ್ಯ ಕಾಳುಗಳು, ಟೀ ಸೊಪ್ಪು…

Read More

ಬೆಂಗಳೂರು:- ರಜತ್‌ ಪಾಟಿದಾರ್‌ ಅವರನ್ನು RCB ನೂತನ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ನೂತನ ಕ್ಯಾಪ್ಟನ್ ಘೋಷಣೆ ಆಗುತ್ತಿದ್ದಂತೆ ಅಭಿಮಾನಿಗಳಿಗೆ ಕಿಂಗ್ ಕೊಹ್ಲಿ ಸಂದೇಶ ರವಾನಿಸಿದ್ದಾರೆ. https://ainlivenews.com/sri-prasanna-venkataramanaswamy-brahmarathotsava-was-held-on-a-grand-scale/ ರಜತ್​ ಪಾಟಿದಾರ್ ನಾಯಕನಾಗಿ ಆಯ್ಕೆಗೊಳ್ಳುತ್ತಿದ್ದಂತೆ ಮಾಜಿ ನಾಯಕ ವಿರಾಟ್​ ಕೊಹ್ಲಿ ಶುಭಾಶಯ ಕೋರಿದ್ದಾರೆ. ಆರ್​ಸಿಬಿ ತಂಡವನ್ನು ಪ್ರತಿನಿಧಿಸುತ್ತಿರುವ ರಜತ್​ ನಾಯಕ ಸ್ಥಾನಕ್ಕೆ ಅರ್ಹರಾಗಿದ್ದಾರೆ. ನಾನು ಮತ್ತು ಆರ್​ಸಿಬಿ ತಂಡ ಸದಾ ರಜತ್​ ಅವರಿಗೆ ಬೆಂಬಲ ನೀಡುತ್ತೇವೆ. ಆರ್​ಸಿಬಿ ನಿಮಗೆ ನಾಯಕನ ದೊಡ್ಡ ಜವಾಬ್ದಾರಿ ನೀಡಿದೆ. RCB ಅಭಿಮಾನಿಗಳು ಕೂಡ ನೂತನ ನಾಯಕನಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಕೊಹ್ಲಿಯ ಈ ಮಾತು ಆರ್​ಸಿಬಿ ಅಭಿಮಾನಿಗಳ ಮನ ಗೆದ್ದಿದೆ. ಸಮಾನ್ಯವಾಗಿ ವಿರಾಟ್​ ಕೊಹ್ಲಿ ಯುವ ಆಟಗಾರರನ್ನು ಪ್ರೋತ್ಸಾಹಿಸುವಲ್ಲಿ ಸದಾ ಮುಂದಿರುತ್ತಾರೆ. ಇದೀಗ ಪಾಟಿದಾರ್​ಗೂ ಬೆಂಬಲ ನೀಡಿ ಮತ್ತು ತಮ್ಮ ಅಭಿಮಾನಿಗಳಿಗೂ ಬೆಂಬಲ ನೀಡುವಂತೆ ಕೋರಿದ್ದು ಇದಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಈ ವರೆಗೂ ಆರ್​ಸಿಬಿ ತಂಡದ ಪರ ರಜತ್​ ಪಾಟಿದಾರ್​ ಒಟ್ಟು 27…

Read More

ಬಳ್ಳಾರಿ:- ಫೆ. 28 ರಿಂದ ಮಾ.2ರವರೆಗೆ ವಿಜಯನಗರದ ಗತ ವೈಭವ ಸಾರುವ ಹಂಪಿ ಉತ್ಸವ ನಡೆಯಲಿದೆ. https://ainlivenews.com/farmers-have-given-us-the-strength-to-speak-out-against-the-government-says-the-pro-nanjundaswamy/ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಗಣ್ಯರಿಂದ ಹಂಪಿ ಉತ್ಸವ ಉದ್ಘಾಟನೆ ನಡೆಯಲಿದೆ. 5 ವೇದಿಕೆಗಳಲ್ಲಿ ಹಂಪಿ ಉತ್ಸವದ ಕಾರ್ಯಕ್ರಮಗಳು ನಡೆಯಲಿದ್ದು ಮುಖ್ಯ ವೇದಿಕೆಗೆ ಹಂಪಿ ಉತ್ಸವದ ರೂವಾರಿ ಎಂಪಿ ಪ್ರಕಾಶ್ ಅವರ ಹೆಸರು ಬಹುತೇಕ ಫೈನಲ್ ಆಗುವ ಸಾಧ್ಯತೆಯಿದೆ. ಅಂದಾಜು 10 ಲಕ್ಷ ಜನರು ಸೇರುವ ನೀರಿಕ್ಷೆಯಿದ್ದು ಮುಖ್ಯ ವೇದಿಕೆಯಲ್ಲಿ 50 ಸಾವಿರದಿಂದ 70 ಸಾವಿರ ಆಸನದ ವ್ಯವಸ್ಥೆ ಮಾಡಲು ಸಿದ್ಧತೆ ನಡೆದಿದೆ. ಗಾಯತ್ರಿ ಪೀಠದ ಬಳಿ ಮುಖ್ಯ ವೇದಿಕೆ, ಎದುರು ಬಸವಣ್ಣ, ಸಾಸಿವೆ ಕಾಳು ಗಣಪ, ವಿರೂಪಾಕ್ಷ ದೇಗುಲದ ಬಳಿ ವೇದಿಕೆಗಳು ಸೇರಿದಂತೆ ಧ್ವನಿ ಮತ್ತು ಬೆಳಕು ಒಂದು ವೇದಿಕೆ ಸೇರಿದಂತೆ ಒಟ್ಟು 5 ವೇದಿಕೆಗಳ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದೆ.

Read More

ದೊಡ್ಡಬಳ್ಳಾಪುರ :- ನಗರದ ತೇರಿನಬೀದಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆರವೇರಿತು. https://ainlivenews.com/farmers-have-given-us-the-strength-to-speak-out-against-the-government-says-the-pro-nanjundaswamy/ ಗುರುವಾರ ಮಧ್ಯಾಹ್ನ 2:10ಕ್ಕೆ ಸರಿಯಾಗಿ ಸಲ್ಲುವ ಶುಭ ಅಭಿಜನ್ ಮುಹೂರ್ತದಲ್ಲಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಪ್ರತಿ ವರ್ಷದಂತೆ ರಥ ಮತ್ತು ದೇವಸ್ಥಾನದ ಸುತ್ತ ಗರುಡವೂ ಪ್ರದಕ್ಷಿಣೆ ಹಾಕಿದ್ದು ವಿಶೇಷ. ಭಕ್ತರು ರಥಕ್ಕೆ ಬಾಳೆ ಹಣ್ಣು-ಜಾವನ ಸಮರ್ಪಿಸಿ ಇಷ್ಟಾರ್ಥ ಸಿದ್ಧಿಯನ್ನು ಕೋರಿಕೊಂಡರು. ಬ್ರಹ್ಮ ರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ, ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ ಸ್ವಾಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ರಥೋತ್ಸವದ ವೇಳೆ ಶಾಸಕ ಧೀರಜ್ ಮುನಿರಾಜ್, ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ನಗರಸಭಾ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Read More