ಬೆಂಗಳೂರು: ರಾಜ್ಯ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಪರಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಮದ್ಯ ಮಾರಾಟಗಾರರ ಸಂಘ ಗಂಭೀರ ಆರೋಪ ಮಾಡಿದೆ. ಸುಮಾರು 500 ಕೋಟಿ ರೂ. ನಷ್ಟು ಹಣವನ್ನು ಅಬಕಾರಿ ಸಚಿವರು ವಸೂಲಿ ಮಾಡಿದ್ದಾರೆ. ಒಟ್ಟು 700 ಕೋಟಿ ರೂ. ನಷ್ಟು ವಸೂಲಿ ಆಗಿದೆ. ಭ್ರಷ್ಟಾಚಾರ ಫ್ರೂವ್ ಮಾಡಿದ್ರೆ ಸಿಎಂ ರಾಜಕೀಯ ನಿವೃತ್ತಿ ಎಂದಿದ್ದಾರೆ. ಅಂದು 40 ಪರ್ಸೆಂಟ್ ಆರೋಪ ಮಾಡಿದ್ದ ಕಾಂಗ್ರೆಸ್ ಅದನ್ನು ಪ್ರೂವ್ ಮಾಡಿದ್ಯಾ ?, ಗುತ್ತಿಗೆದಾರರ ಆರೋಪವನ್ನ ಸತ್ಯ ಎಂದಿದ್ದ ಕಾಂಗ್ರೆಸ್, ಈಗ ಈಗ ವೈನ್ ಮರ್ಚಂಟ್ಸ್ ಆರೋಪ ಯಾಕೆ ಒಪ್ಪಲ್ಲ ಎಂದು ಪ್ರಶ್ನಿಸಿದ್ರು. https://ainlivenews.com/bharat-bommai-is-confident-of-winning-by-a-big-margin-basavaraja-bommai/ ಸಿದ್ದರಾಮಯ್ಯ ಭ್ರಷ್ಟಾಚಾರದ ಪಿತಾಮಹ, ಅದನ್ನು ಮರೆ ಮಾಚಲು ಪ್ರಯತ್ನಮಾಡುತ್ತಿದ್ದಾರೆ. ಹೊಸ ಮದ್ಯದಂಗಡಿಗೆ ಲೈಸೆನ್ಸ್ ಪಡೆಯಲು 70-80 ಲಕ್ಷ ಕೊಡಬೇಕು. ಪ್ರತಿ ವರ್ಷ ರಿನಿವಲ್ ಗೆ 4 ಲಕ್ಷ ಲಂಚ ಸೇರಿ 6 ಲಕ್ಷ…
Author: AIN Author
ಹುಬ್ಬಳ್ಳಿ: ಶಿಗ್ಗಾವಿ ಸವಣೂರು ಕ್ಷೇತದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ದೊಡ್ಡ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಭರವಸೆ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ರೌಡಿಶೀಟರ್ ಅಂತ ಎಸ್ಪಿ ಹಾಗೂ ಅಜ್ಜಂಪೀರ್ ಖಾದ್ರಿ ಇಬ್ಬರೂ ಹೇಳಿದ್ದಾರೆ. ಎಸ್ಪಿ ಅವರು ಯಾಕೆ ಹೇಳಿದರು. https://ainlivenews.com/carrot-crops-flow-of-money-how-to-grow-carrots-here-is-the-information/ ಅದನ್ನು ಯಾಕೆ ವಾಪಸ್ ತೊಗೆದುಕೊಂಡರು ಎಂದು ಸಿಎಂ ಸ್ಪಷ್ಟೀಕರಣ ನೀಡಬೇಕು. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಹಾಗೂ ರಾಜ್ಯದ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ ಎಂದರು. ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೀಡಿರುವ ಹೇಳಿಕೆ ವಿರುದ್ದ ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ದೂರು ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಈಗ ಬಗ್ಗೆ ಪ್ರಲ್ಹಾದ್ ಜೋಷಿಯವರು ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಿದರು. ಮತ್ತೊಂದು ಹೊಸ ಸುಳ್ಳಿಗೆ ಸ್ಪಷ್ಟನೆ ಕಾಮಗಾರಿಯಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದೆ…
ಸಂಸದ ಈ.ತುಕಾರಾಂ ರಾಜೀನಾಮೇಯಿಂದ ತೆರವಾಗಿದ್ದ ಸಂಡೂರು ಕ್ಷೇತ್ರದಲ್ಲಿ ಉಪಚುನಾವಣೆಗೆ ಜಿಲ್ಲಾಢಳಿತದಿಂದ ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ.ಸಂಡೂರು ಕ್ಷೇತ್ರದಲ್ಲಿ 1,17,789 ಪುರುಷ, 1,18,282 ಮಹಿಳೆ ಹಾಗೂ 29 ಅಲ್ಪಸಂಖ್ಯಾತ ಲಿಂಗತ್ವ ಮತ ದಾರರು ಸೇರಿ 2,36,100 ಮದಾರರು ಇದ್ದು, ಮತದಾನಕ್ಕೆ 253 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನದ ಕಾರ್ಯಕ್ಕೆ ಸಂಡೂರು ಕ್ಷೇತ್ರದಲ್ಲಿ 1,215 ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಿ, ಅವರಿಗೆ ಅಗತ್ಯ ತರಬೇತಿ ನೀಡಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿಗೆ ಭದ್ರತಾ ಸಿಬ್ಬಂ ದಿಯನ್ನು ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಗಳಿಗೆ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ.ನಾಳೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.
ಚಿಕ್ಕಬಳ್ಳಾಪುರ: ವಕ್ಫ ಬೋರ್ಡ್ ಅಕ್ರಮವಾಗಿ ಕಬಳಿಸಿರುವ ರೈತರ ಜಮೀನನ್ನು ಸರ್ಕಾರ ವಾಪಸ್ ರೈತರಿಗೆ ಮರಳಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ರ್ಯಾಲಿ ನಡೆಸಿದ್ದು, ತಹಶಿಲ್ದಾರ್ ಬಿಎನ್ ಸ್ವಾಮಿ ಗೆ ಮನವಿ ಸಲ್ಲಿಸಿ, ಬಿಜೆಪಿ ಮುಖಂಡ ಶೀಕಲ್ ರಾಮಚಂದ್ರ ಗೌಡ ಮಾತನಾಡಿದ್ದಾರೆ. ರಾಜ್ಯಾದ್ಯಂತ ಅನಿರ್ದಿಷ್ಟ ಕಾಲ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿ: ಹುಬ್ಬಳ್ಳಿ ಅಮರಗೋಳ ಮುಖ್ಯ ಕೃಷಿ ಉತ್ಪನ್ನ ಪ್ರಾಂಗಣಕ್ಕೆ ಭೇಟಿ ನೀಡಿದ ಹುಬ್ಬಳ್ಳಿ-ಧಾರವಾಡ ಪೋಲೀಸ್ ಆಯುಕ್ತ ಎನ್. ಶಶಿಕುಮಾರ ಅವರಿಗೆ ವ್ಯಾಪಾರಸ್ಥರ ಸಂಘದಿಂದ ಮನವಿ ಸಲ್ಲಿಸಲಾಯಿತು.ಮಾರುಕಟ್ಟೆಯಲ್ಲಿ ಇತ್ತೀಚೆಗೆ ಕಳವು ಪ್ರಕರಣಗಳು ಜರುಗುತ್ತಿದ್ದು ತಡೆಯಬೇಕು. ರೈತರು ಮತ್ತು ಸಾರ್ವಜನಿಕರ ವಾಹನಗಳನ್ನು ಮಾರುಕಟ್ಟೆಯೊಳಗೆ ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದ್ದಲ್ಲದೆ ಆಯುಕ್ತರನ್ನು ಗೌರವಿಸಲಾಯಿತು. https://ainlivenews.com/carrot-crops-flow-of-money-how-to-grow-carrots-here-is-the-information/ ಸಂಘದ ಅಧ್ಯಕ್ಷ ರಾಜಕಿರಣ ಬಿ. ಮೆಣಸಿನಕಾಯಿ, ಗೌರವ ಕಾರ್ಯದರ್ಶಿ ಅಶೋಕ ಬಾಳಿಕಾಯಿ, ಎ.ಪಿ.ಎಂ.ಸಿ. ಸಹಾಯಕ ಕಾರ್ಯದರ್ಶಿ ಮಂಜುನಾಥ ಹುಬ್ಬಳ್ಳಿ, ಮಾಜಿ ಅಧ್ಯಕ್ಷ ಗಂಗನಗೌಡ ಪಾಟೀಲ, ಶಂಭುಲಿಂಗಪ್ಪ ಅಂಗಡಿ, ಬಸವರಾಜ ಅಕ್ಕಿ, ಸುರೇಶ ಜೈನ್, ಶ್ರೀನಿವಾಸ ಸೋಳಂಕಿ, ವಿನೋದ ತಲ್ಲೂರ, ಶಿವಯೋಗಿ ಹೊಸಕಟ್ಟಿ, ನಾರಾಯಣ ಭಂಡಾರಕರ ಇತರರು ಉಪಸ್ಥಿತರಿದ್ದರು.
ಹುಬ್ಬಳ್ಳಿ: ವ್ಯಕ್ತಿಯೊಬ್ಬರ ಮುಂದೆ ಚಾಕು ಹಿಡಿದು ನಮ್ಮ ಬಾಸ್ ಹೇಳಿದಂತೆ 10 ಲಕ್ಷ ರೂ. ಕೊಡದೇ ಇದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಘಟನೆ ಇಲ್ಲಿಯ ಸ್ಟೇಷನ್ ರಸ್ತೆಯಲ್ಲಿ ನಡೆದಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. https://ainlivenews.com/carrot-crops-flow-of-money-how-to-grow-carrots-here-is-the-information/ ಮಹ್ಮದ್‌ಫರ್ವೇಜ್ ಕುಮಟಾಕರ ಎಂಬಾತನಿಗೆ ದಾವೂದ ನದಾಫ್, ಪುಂಡಲಿಕ, ರಿಹಾನ್, ತಾಹೀರ ನ.8 ರಂದು ರಾತ್ರಿ 8.30ರ ಸುಮಾರಿಗೆ ಸ್ಟೇಷನ್ ರಸ್ತೆಯ ಚಂದ್ರಕಲಾ ಟಾಕೀಜ್ ಹತ್ತಿರ ನಿಂತಾಗ ಬಂದು ಬೆದರಿಕೆ ಹಾಕಿದ್ದರು. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ: ಶೌಚಗೃಹ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಬಿಲ್ ಹಣ ಬಿಡುಗಡೆ ಮಾಡಲು ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ಸೋಮವಾರ ರಾತ್ರಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತಾಲೂಕಿನ ತಗ್ಗಹಳ್ಳಿ ಗ್ರಾಪಂ ಸದಸ್ಯ ಕೆ.ಆರ್.ಅನಿಲ್‌ಕುಮಾರ್ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಕಾಮಗಾರಿ ಮಾಡಿದ ಬಿಲ್ ಹಣ ಬಿಡುಗಡೆ ಮಾಡಿಸಲು 50 ಸಾವಿರ ರೂ ಲಂಚದ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಕೋಲಕಾರನದೊಡ್ಡಿಯ ಚನ್ನಬಸಪ್ಪ ಎಂಬುವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. https://ainlivenews.com/carrot-crops-flow-of-money-how-to-grow-carrots-here-is-the-information/ ಅದರಂತೆ ಸೋಮವಾರ ರಾತ್ರಿ ನಗರದ ಲೋಕಾಯುಕ್ತ ಕಚೇರಿ ಸಮೀಪದ ಹೋಟೆಲ್‌ನಲ್ಲಿ ಲಂಚ ಸ್ವೀಕರಿಸುವ ವೇಳೆ ವಶಕ್ಕೆ ಪಡೆಯಲಾಗಿದೆ. ಡಿವೈಎಸ್ಪಿ ಸುನಿಲ್‌ಕುಮಾರ್ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಮೋಹನ್ ರೆಡ್ಡಿ, ಜಯರತ್ನಾ, ಸಿಬ್ಬಂದಿ ಮಹದೇವಸ್ವಾಮಿ, ಶಂಕರ್, ಶರತ್ ದಾಳಿ ನಡೆಸಲಾಗಿದೆ.
ಮಂಡ್ಯ: ರಾಜ್ಯದ ಹಲವೆಡೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಬೆಂಗಳೂರು, ಮಂಡ್ಯ, ಮೈಸೂರು, ಹಾಸನ, ತುಮಕೂರು, ಚಿಕ್ಕಮಗಳೂರು, ಕೊಪ್ಪಳ, ಚಾಮರಾಜನಗರ, ಬಳ್ಳಾರಿ, ವಿಜಯನಗರ, ಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ. ಅದರಂತೆ ಚನ್ನಪಟ್ಟಣ ನಗರಸಭೆ ಆಯುಕ್ತರ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರಸಭೆ ಆಯುಕ್ತ ನಾಗೇಶ್ ಅವರ ಶ್ರೀರಂಗಪಟ್ಟಣದ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ ನಡೆಸಿದ್ದಾರೆ. https://ainlivenews.com/carrot-crops-flow-of-money-how-to-grow-carrots-here-is-the-information/ ಈ ಹಿಂದೆ ಅವರು ಮಂಡ್ಯದ ಶ್ರೀರಂಗಪಟ್ಟಣದ ತಹಶಿಲ್ದಾರ್ ಆಗಿದ್ದರು. ತಹಶಿಲ್ದಾರ್ ಆಗಿದ್ದಾಗ ಶ್ರೀರಂಗಪಟ್ಟಣದ ಡಾಲರ್ಸ್ ಕಾಲೋನಿಯಲ್ಲಿ ಅಪಾರ್ಟ್ಮೆಂಟ್ ನಿರ್ಮಿಸಿದ್ದರು. ನಾಗೇಶ್ ಅಪಾರ್ಟ್ಮೆಂಟ್ ಪಕ್ಕದ ಬಾಡಿಗೆ ಮನೆ ಮೇಲೆ ಮೈಸೂರು ಲೋಕಾಯುಕ್ತ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಗದಗ: ಶಕ್ತಿ ಯೋಜನೆ ಎಫೆಕ್ಟ್ʼನಿಂದ ಸಾರಿಗೆ ಸಂಸ್ಥೆ ಬಸ್ ಚಕ್ರದಡಿ ಸಿಲುಕಿ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರಿನಲ್ಲಿ ನಡೆದಿದೆ. ರಾಘವೇಂದ್ರ (21) ಮೃತ ವಿದ್ಯಾರ್ಥಿಯಾಗಿದ್ದು, ರಾಮದುರ್ಗ ಹೊಸಪೇಟೆ ಬಸ್ ಏರಿ ಕೊಣ್ಣೂರಿನಿಂದ ನರಗುಂದ ಕಾಲೇಜಿಗೆ ಹೊರಟ್ಟಿದ್ದನು. https://ainlivenews.com/carrot-crops-flow-of-money-how-to-grow-carrots-here-is-the-information/ ಬಸ್ ಫುಲ್ ಇದ್ದ ಕಾರಣ ಬಸ್ ನ ಮುಂಭಾಗದ ಬಾಗಿಲಿನಿಂದ ಹತ್ತಲು ಹೋಗಿದ್ದನು. ಈ ವೇಳೆ ಜಾರಿ ಬಿದ್ದಿದ್ದಾನೆ, ಈ ಪರಿಣಾಮ ತಲೆ ಮೇಲೆ ಬಸ್ ಬಸ್ ಹಿಂಬದಿ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ನರಗುಂದ ಪೊಲೀಸರಿಂದ ಪರಿಶೀಲನೆ ನಡೆಸಿದ್ದಾರೆ. ನರಗುಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಉತ್ತರಾಖಂಡ್ʼನಲ್ಲಿ ಭೀಕರ ರಸ್ತೆಅಪಘಾತ ಸಂಭವಿಸಿದ್ದು, ಆರು ಮಂದಿ ದುರ್ಮಣಕ್ಕೀಡಾಗಿದ್ದಾರೆ. ಡೆಹ್ರಾಡೂನ್ ನ ಓಎನ್‌ಜಿಸಿ ಕ್ರಾಸ್ಸಿಂಗ್ ನಲ್ಲಿ ಸರಕು ಸಾಗಣೆ ಮಾಡುತ್ತಿದ್ದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರು ಮುಂದಿದ್ದ ಮರಕ್ಕೆ ಹೊಡೆದು ಸಂಪೂರ್ಣವಾಗಿ ಜಖಂಗೊಂಡಿದೆ. https://ainlivenews.com/horrible-road-accident-on-airport-road-two-killed/ ಕಾರಿನಲ್ಲಿದ್ದ ಆರು ಮಂದಿ ಸಾವನ್ನಪ್ಪಿದ್ದಾರೆ, ಓರ್ವನಿಗೆ ಗಂಭೀರಗಾಯವಾಗಿದೆ. ಮೃತರೆಲ್ಲರೂ ಸಹ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಎಸ್ಪಿ ಪ್ರಮೋದ್ ಕುಮಾರ್ ಸೇರಿದಂತೆ ಇತರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.