ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹೊಸೂರ ಗ್ರಾಮದ ಸಮಸ್ತ ಹಿಂದೂ ಸಮಾಜದಿಂದ ಶ್ರೀ ಮಹಾದೇವರ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ಮಾಡುವುದರ ಮುಖಾಂತರ ವಕ್ಫ್ ಬೋರ್ಡ್ ರದ್ದುಪಡಿಸಿ ಮತ್ತು ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ವಕ್ಫ್ ಬೋರ್ಡ್ ಹಟಾವೋ ಭಾರತ ದೇಶ ಬಚಾವೋ ಘೋಷಣೆ ಕೂಗುವುದರೊಂದಿಗೆ ಪ್ರತಿಭಟನೆ ನಡೆಸಿತು. ವಕ್ಫ್ ಬೋರ್ಡ್ ಅನ್ನೋದು ಪಾಪಸ್ ಕಳ್ಳಿ ಇದ್ದಂತೆ ನೀವೇನಾದರೂ ನಿಮ್ಮ ಜಮೀನಿನಲ್ಲಿ ಬಿಟ್ಟುಕೊಂಡರೆ ಇಡೀ ಜಮೀನಿನಲ್ಲಿ ಆವರಿಸಿಕೊಳ್ಳುತ್ತದೆ ಹಿಂದೂಗಳೆ ಇನ್ನಾದರೂ ಎಚ್ಚೆತ್ತುಕೊಳ್ಳಿ.ಹಿಂದೂಗಳ ಸ್ಮಶಾನಕ್ಕಾಗಿ ಹೋರಾಟ ನಡೆಯುತ್ತಿರುವುದು ನಮಗೆ ನಾಚಿಕೆಗೇಡಿನ ಸಂಗತಿ ಹಿಂದೆ ಹೇಳಿದ್ರು ಮಹಾತ್ಮ ಗಾಂಧೀಜಿಯವರಿಗೆ ಹಿಂದುಗಳನ್ನು ಭಾರತಕ್ಕೆ ಬಿಡಿ ಬೇರೆ ದೇಶಕ್ಕೆ ಹೋಗೋರು ಹೋಗಲಿ ಎಂದು ಹೇಳಿದರು ಅಂದು ಯಾರೂ ಕೇಳಲಿಲ್ಲ ಇಂದು ನಮ್ಮ ನೆಲಕ್ಕಾಗಿ ನಾವು ಹೋರಾಟ ಮಾಡಬೇಕಾಗುವ ಪರಿಸ್ಥಿತಿ ಬಂದಿದೆ.ತಹಶೀಲ್ದಾರ್ ಅವರಿಗೆ ಖಡಕ್ ಎಚ್ಚರಿಕೆ ನೀಡಿದ ಪರಮಪೂಜ್ಯ ಶ್ರೀ ಶಿವಶಂಕರ್ ಶಿವಾಚಾರ್ಯ ಮಹಾಸ್ವಾಮಿಗಳು ಒಂದು ವಾರದ ಒಳಗಡೆ ಹೊಸೂರಿನ ಹಿಂದೂ ರುದ್ರ ಭೂಮಿಯ ಉತಾರಿನಲ್ಲಿ ಸೇರ್ಪಡೆ…
Author: AIN Author
ಶ್ರೀನಿವಾಸಪುರ ತಾಲ್ಲೂಕಿನ ಕೇತಿಗಾನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು, ಮೃತ ಚಾಲಕ ಶಿವಪುರ ಗ್ರಾಮದ 30 ಬಾಬು ಎಂದು ಗುರುತಿಸಲಾಗಿದೆ. ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಮುಂಜಾನೆ ನಸುಕಿನ ಜಾವ 6 ಗಂಟೆ ಸಮಯದಲ್ಲಿ https://ainlivenews.com/carrot-crops-flow-of-money-how-to-grow-carrots-here-is-the-information/ ಕೆಟ್ಟು ನಿಂತಿದ್ದ ಟ್ರಿಪ್ಪರ್ ರಿಪೇರಿ ಮಾಡುತ್ತಿದ್ದ ವೇಳೆ ಚಾಲಕನ ಮೇಲೆ ಲಾರಿ ಹರಿದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನಪ್ಪಿದಾನೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು : ತಮ್ಮ ಕ್ಷೇತ್ರದ ಅನುದಾನದ ಬಗ್ಗೆ ಪ್ರಶ್ನೆ ಕೇಳಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯಗೆ ನನ್ನ ಮುಂದೆ ತಗ್ಗಿಬಗ್ಗಿ ನಡೆಯಬೇಕು ಎಂದು ಹೇಳಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ. ಡಿಕೆಶಿಗೆ ಹಿಟ್ಲರ್ ಎಂದು ಟೀಕಿಸಿರುವ ಬಿಜೆಪಿ, ತಗ್ಗಿ ಬಗ್ಗಿ ನಡೀಬೇಕು ಎಂಬ ಡಿಕೆಶಿ ಹೇಳಿಕೆಗೆ ಟಾಂಗ್ ನೀಡಿದೆ. ಹಿಟ್ಲರ್ ಹೋಲುವಂತೆ ಡಿಕೆಶಿ ಪೋಸ್ಟರ್ ಪೋಸ್ಟ್ ಮಾಡಿ “ನನ್ನ ಮುಂದೆ ತಗ್ಗಿ ಬಗ್ಗಿ ನಡೆಯಬೇಕು” ಎಂದು ಕಟ್ಟಾಜ್ಞೆ ಮಾಡಿರುವ ಅಡೋಲ್ಫ್ ಹಿಟ್ಲರ್‌ನ ಅಪರಾವತಾರ ಆ ದಿನಗಳ @DKShivakumar ಸಾಹೇಬ್!!! ಕನ್ನಡಿಗರು ಶಾಂತಿ ಪ್ರಿಯರು ಎಂದ ಮಾತ್ರಕ್ಕೆ ನಿಮ್ಮ ದರ್ಪ ದಬ್ಬಾಳಿಕೆಯನ್ನು ಸಹಿಸುವುದಿಲ್ಲ. ನಿಮ್ಮ ಆ ದಿನಗಳ ಕೊತ್ವಾಲ್ ದರ್ಬಾರ್ ಅಂದಿಗೆ ಸೀಮಿತ ಇಂದಿಗಲ್ಲʼ ಎಂದು ಚಾಟಿ ಬೀಸಿದೆ. https://ainlivenews.com/demand-for-community-reservation-in-civil-works-clarification-by-govt/ ನಮ್ಮ ಮೆಟ್ರೋ ನಾಗಸಂದ್ರ-ಮಾದಾವರ ವಿಸ್ತರಿತ ಮಾರ್ಗಕ್ಕೆ ಚಾಲನೆ ನೀಡುವ ಸಂದರ್ಭ ಸಂಸದ ತೇಜಸ್ವಿ ಸೂರ್ಯ, ಡಿಸಿಎಂ ಡಿಕೆಶಿಗೆ ಜೊತೆಗೆ ಚರ್ಚೆ ನಡೆಸಿದ್ದರು. ಈ ವೇಳೆ…
ಬೆಂಗಳೂರು : ವಕ್ಫ್ ಬಳಿಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇದೀಗ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರಿ ಸಿವಿಲ್ ಕಾಮಗಾರಿ ಗುತ್ತಿಗೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ.4ರಷ್ಟು ಮೀಸಲಾತಿ ನೀಡಲು ನಿರ್ಧರಿಸಲಾಗಿದೆ ಎಂದಿರುವ ಯತ್ನಾಳ್ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಇದನ್ನು ಸರ್ಕಾರ ತಳ್ಳಿ ಹಾಕಿದೆ. ಈ ಬಗ್ಗೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ,ಬೇಡಿಕೆ ಮಾತ್ರ ಬಂದಿದೆ ಎಂದು ಸ್ಪಷ್ಟನೆ ನೀಡಿದೆ. ಸರ್ಕಾರಿ ಸಿವಿಲ್ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಬೇಡಿಕೆ ಬಂದಿದೆ. ಆದರೆ ಈ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. https://ainlivenews.com/siddaramaiah-is-the-father-of-corruption-mlc-chhalavadi-narayanaswamy-lashed-out/ ಒಂದು ಕೋಟಿ ರೂ.ವರೆಗಿನ ಕಾಮಗಾರಿ ಟೆಂಡರ್ʼಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವಂತೆ ಮುಸ್ಲಿಂ ಸಚಿವರು ಮತ್ತು ಶಾಸಕರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಮನವಿ ಸಲ್ಲಿಸಿದರು. ಸಚಿವ ಜಮೀರ್ ಅಹ್ಮದ್ ಖಾನ್, ರಹೀಂ ಖಾನ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್…
ಹಾವೇರಿ: ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ನಡೆದಿದೆ. ಬೆಳ್ಳಂಬೆಳಗ್ಗೆಯೇ ಸಿಹಿ ನಿದ್ದೆಯಲ್ಲಿದ್ದ ಭ್ರಷ್ಟರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಸರ್ಕಾರಿ ಅಧಿಕಾರಿ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸಿದ್ದಾರೆ. ಅದರಂತೆ ಹಾವೇರಿಯಲ್ಲೂ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. https://ainlivenews.com/carrot-crops-flow-of-money-how-to-grow-carrots-here-is-the-information/ ಅಕ್ರಮವಾಗಿ ಆಸ್ತಿ ಗಳಿಕೆ ಆರೋಪದಡಿ ರೆಡ್ ಮಾಡಲಾಗಿದ್ದು, ರಾಣೇಬೆನ್ನೂರು ನಗರ, ಹಾವೇರಿ ನಗರದಲ್ಲಿ ಏಕಕಾಲದಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್ ಮನೆ ಮೇಲೆ ದಾಳಿ ಮಾಡಲಾಗಿದ್ದು, ಕಾಶಿನಾಥ್ ಭಜಂತ್ರಿ ರಾಜ್ಯ ಪಂಚಾಯತ್ ಇಂಜಿನಿಯರಿಂಗ್ ಸಹಾಯಕ ಇಂಜಿನಿಯರ್ ಮನೆ ಮೇಲೆ ರೆಡ್ ಮಾಡಿದ್ದಾರೆ. ಇಬ್ಬರ ಅಧಿಕಾರಿಗಳಿಗೆ ಸೇರಿದ ನಾಲ್ಕು ಮನೆಗಳು,ಫಾರ್ಮ ಹೌಸ್,ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ಸದ್ಯ ನಾಲ್ಕು ತಂಡಗಳಿಂದ ಮನೆಯಲ್ಲಿ ಶೋದಕಾರ್ಯ. ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ಬೆಂಗಳೂರು: ರಾಜ್ಯ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಪರಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಮದ್ಯ ಮಾರಾಟಗಾರರ ಸಂಘ ಗಂಭೀರ ಆರೋಪ ಮಾಡಿದೆ. ಸುಮಾರು 500 ಕೋಟಿ ರೂ. ನಷ್ಟು ಹಣವನ್ನು ಅಬಕಾರಿ ಸಚಿವರು ವಸೂಲಿ ಮಾಡಿದ್ದಾರೆ. ಒಟ್ಟು 700 ಕೋಟಿ ರೂ. ನಷ್ಟು ವಸೂಲಿ ಆಗಿದೆ. ಭ್ರಷ್ಟಾಚಾರ ಫ್ರೂವ್ ಮಾಡಿದ್ರೆ ಸಿಎಂ ರಾಜಕೀಯ ನಿವೃತ್ತಿ ಎಂದಿದ್ದಾರೆ. ಅಂದು 40 ಪರ್ಸೆಂಟ್ ಆರೋಪ ಮಾಡಿದ್ದ ಕಾಂಗ್ರೆಸ್ ಅದನ್ನು ಪ್ರೂವ್ ಮಾಡಿದ್ಯಾ ?, ಗುತ್ತಿಗೆದಾರರ ಆರೋಪವನ್ನ ಸತ್ಯ ಎಂದಿದ್ದ ಕಾಂಗ್ರೆಸ್, ಈಗ ಈಗ ವೈನ್ ಮರ್ಚಂಟ್ಸ್ ಆರೋಪ ಯಾಕೆ ಒಪ್ಪಲ್ಲ ಎಂದು ಪ್ರಶ್ನಿಸಿದ್ರು. https://ainlivenews.com/bharat-bommai-is-confident-of-winning-by-a-big-margin-basavaraja-bommai/ ಸಿದ್ದರಾಮಯ್ಯ ಭ್ರಷ್ಟಾಚಾರದ ಪಿತಾಮಹ, ಅದನ್ನು ಮರೆ ಮಾಚಲು ಪ್ರಯತ್ನಮಾಡುತ್ತಿದ್ದಾರೆ. ಹೊಸ ಮದ್ಯದಂಗಡಿಗೆ ಲೈಸೆನ್ಸ್ ಪಡೆಯಲು 70-80 ಲಕ್ಷ ಕೊಡಬೇಕು. ಪ್ರತಿ ವರ್ಷ ರಿನಿವಲ್ ಗೆ 4 ಲಕ್ಷ ಲಂಚ ಸೇರಿ 6 ಲಕ್ಷ…
ಹುಬ್ಬಳ್ಳಿ: ಶಿಗ್ಗಾವಿ ಸವಣೂರು ಕ್ಷೇತದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ದೊಡ್ಡ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಭರವಸೆ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ರೌಡಿಶೀಟರ್ ಅಂತ ಎಸ್ಪಿ ಹಾಗೂ ಅಜ್ಜಂಪೀರ್ ಖಾದ್ರಿ ಇಬ್ಬರೂ ಹೇಳಿದ್ದಾರೆ. ಎಸ್ಪಿ ಅವರು ಯಾಕೆ ಹೇಳಿದರು. https://ainlivenews.com/carrot-crops-flow-of-money-how-to-grow-carrots-here-is-the-information/ ಅದನ್ನು ಯಾಕೆ ವಾಪಸ್ ತೊಗೆದುಕೊಂಡರು ಎಂದು ಸಿಎಂ ಸ್ಪಷ್ಟೀಕರಣ ನೀಡಬೇಕು. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಹಾಗೂ ರಾಜ್ಯದ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ ಎಂದರು. ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೀಡಿರುವ ಹೇಳಿಕೆ ವಿರುದ್ದ ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ದೂರು ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಈಗ ಬಗ್ಗೆ ಪ್ರಲ್ಹಾದ್ ಜೋಷಿಯವರು ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಿದರು. ಮತ್ತೊಂದು ಹೊಸ ಸುಳ್ಳಿಗೆ ಸ್ಪಷ್ಟನೆ ಕಾಮಗಾರಿಯಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದೆ…
ಸಂಸದ ಈ.ತುಕಾರಾಂ ರಾಜೀನಾಮೇಯಿಂದ ತೆರವಾಗಿದ್ದ ಸಂಡೂರು ಕ್ಷೇತ್ರದಲ್ಲಿ ಉಪಚುನಾವಣೆಗೆ ಜಿಲ್ಲಾಢಳಿತದಿಂದ ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ.ಸಂಡೂರು ಕ್ಷೇತ್ರದಲ್ಲಿ 1,17,789 ಪುರುಷ, 1,18,282 ಮಹಿಳೆ ಹಾಗೂ 29 ಅಲ್ಪಸಂಖ್ಯಾತ ಲಿಂಗತ್ವ ಮತ ದಾರರು ಸೇರಿ 2,36,100 ಮದಾರರು ಇದ್ದು, ಮತದಾನಕ್ಕೆ 253 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನದ ಕಾರ್ಯಕ್ಕೆ ಸಂಡೂರು ಕ್ಷೇತ್ರದಲ್ಲಿ 1,215 ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಿ, ಅವರಿಗೆ ಅಗತ್ಯ ತರಬೇತಿ ನೀಡಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿಗೆ ಭದ್ರತಾ ಸಿಬ್ಬಂ ದಿಯನ್ನು ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಗಳಿಗೆ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ.ನಾಳೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.
ಚಿಕ್ಕಬಳ್ಳಾಪುರ: ವಕ್ಫ ಬೋರ್ಡ್ ಅಕ್ರಮವಾಗಿ ಕಬಳಿಸಿರುವ ರೈತರ ಜಮೀನನ್ನು ಸರ್ಕಾರ ವಾಪಸ್ ರೈತರಿಗೆ ಮರಳಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ರ್ಯಾಲಿ ನಡೆಸಿದ್ದು, ತಹಶಿಲ್ದಾರ್ ಬಿಎನ್ ಸ್ವಾಮಿ ಗೆ ಮನವಿ ಸಲ್ಲಿಸಿ, ಬಿಜೆಪಿ ಮುಖಂಡ ಶೀಕಲ್ ರಾಮಚಂದ್ರ ಗೌಡ ಮಾತನಾಡಿದ್ದಾರೆ. ರಾಜ್ಯಾದ್ಯಂತ ಅನಿರ್ದಿಷ್ಟ ಕಾಲ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿ: ಹುಬ್ಬಳ್ಳಿ ಅಮರಗೋಳ ಮುಖ್ಯ ಕೃಷಿ ಉತ್ಪನ್ನ ಪ್ರಾಂಗಣಕ್ಕೆ ಭೇಟಿ ನೀಡಿದ ಹುಬ್ಬಳ್ಳಿ-ಧಾರವಾಡ ಪೋಲೀಸ್ ಆಯುಕ್ತ ಎನ್. ಶಶಿಕುಮಾರ ಅವರಿಗೆ ವ್ಯಾಪಾರಸ್ಥರ ಸಂಘದಿಂದ ಮನವಿ ಸಲ್ಲಿಸಲಾಯಿತು.ಮಾರುಕಟ್ಟೆಯಲ್ಲಿ ಇತ್ತೀಚೆಗೆ ಕಳವು ಪ್ರಕರಣಗಳು ಜರುಗುತ್ತಿದ್ದು ತಡೆಯಬೇಕು. ರೈತರು ಮತ್ತು ಸಾರ್ವಜನಿಕರ ವಾಹನಗಳನ್ನು ಮಾರುಕಟ್ಟೆಯೊಳಗೆ ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದ್ದಲ್ಲದೆ ಆಯುಕ್ತರನ್ನು ಗೌರವಿಸಲಾಯಿತು. https://ainlivenews.com/carrot-crops-flow-of-money-how-to-grow-carrots-here-is-the-information/ ಸಂಘದ ಅಧ್ಯಕ್ಷ ರಾಜಕಿರಣ ಬಿ. ಮೆಣಸಿನಕಾಯಿ, ಗೌರವ ಕಾರ್ಯದರ್ಶಿ ಅಶೋಕ ಬಾಳಿಕಾಯಿ, ಎ.ಪಿ.ಎಂ.ಸಿ. ಸಹಾಯಕ ಕಾರ್ಯದರ್ಶಿ ಮಂಜುನಾಥ ಹುಬ್ಬಳ್ಳಿ, ಮಾಜಿ ಅಧ್ಯಕ್ಷ ಗಂಗನಗೌಡ ಪಾಟೀಲ, ಶಂಭುಲಿಂಗಪ್ಪ ಅಂಗಡಿ, ಬಸವರಾಜ ಅಕ್ಕಿ, ಸುರೇಶ ಜೈನ್, ಶ್ರೀನಿವಾಸ ಸೋಳಂಕಿ, ವಿನೋದ ತಲ್ಲೂರ, ಶಿವಯೋಗಿ ಹೊಸಕಟ್ಟಿ, ನಾರಾಯಣ ಭಂಡಾರಕರ ಇತರರು ಉಪಸ್ಥಿತರಿದ್ದರು.