ರಿಲಯನ್ಸ್ ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ಗಳಲ್ಲಿ ಒಂದು. 48 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿದೆ. ಗ್ರಾಹಕರಿಗೆ ಅನುಗುಣವಾಗಿ ಅತ್ಯಾಕರ್ಷಕ ರೀಚಾರ್ಜ್ ಪ್ಲಾನ್ ಮತ್ತು ಕೊಡುಗೆಗಳನ್ನು ನೀಡುವ ಮೂಲಕ ಎಲ್ಲರ ಗಮನಸೆಳೆಯುತ್ತಿದೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಬೆಲೆ ಹೆಚ್ಚಿಸಿಕೊಳ್ಳದೇ ತನ್ನ ನೆಟ್‌ವರ್ಕ್‌ಗೆ ಬರೋ ಗ್ರಾಹಕರಿಗಾಗಿ ಹೊಸ ಆಫರ್ ಬಿಡುಗಡೆ ಮಾಡಿತು. ಈ ಕಾರಣದಿಂದ ಗ್ರಾಹಕರು ಬಿಎಸ್‌ಎನ್‌ಎಲ್ ನತ್ತ ಮುಖ ಮಾಡಲು ಆರಂಭಿಸಿದರು. ಇದೀಗ ರಿಲಯನ್ಸ್ ಜಿಯೋ ಕಡಿಮೆ ಬೆಲೆಯ 2 ಪ್ರಿಪೇಯ್ಡ್ ಪ್ಲಾನ್‌ಗಳನ್ನು ಬಿಡುಗಡೆಗೊಳಿಸಿದೆ. Jio Rs 173 recharge plan ಜಿಯೋದ ಒಂದು ತಿಂಗಳಿನ ಪ್ಲಾನ್ 173 ರೂ.ಗೆ ಲಭ್ಯವಿದೆ. ಇನ್ನುಳಿದ ಎರಡು ಖಾಸಗಿ ಕಂಪನಿಗಳು ಕನಿಷ್ಠ 180 ರಿಂದ 200 ರೂ.ವರೆಗೆ ತಿಂಗಳ ವ್ಯಾಲಿಡಿಟಿಯ ಪ್ಲಾನ್ ನೀಡುತ್ತಿವೆ. ರಿಲಯನ್ಸ್ ಜಿಯೋ ನೀಡುತ್ತಿರುವ 336 ದಿನಗಳ ವ್ಯಾಲಿಡಿಟಿಯ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡ್ರೆ ನಿಮಗೆ ತಿಂಗಳಿಗೆ 173 ರೂಪಾಯಿ ಆಗುತ್ತದೆ. ಗ್ರಾಹಕರು 1,899 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ 336 ದಿನದ ಪ್ಲಾನ್ ಆಕ್ಟಿವೇಟ್ ಆಗುತ್ತದೆ.…
Author: AIN Author
ತುಳಸಿ ವಿವಾಹ ಸೂರ್ಯೋದಯ: 06:24, ಸೂರ್ಯಾಸ್ತ : 05:36 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಶರದ ಋತು, ಕಾರ್ತಿಕ್ ಮಾಸ, ತಿಥಿ: ದ್ವಾದಶಿ ನಕ್ಷತ್ರ: ರೇವತಿ ರಾಹು ಕಾಲ: 12:00 ನಿಂದ 01:30 ತನಕ ಯಮಗಂಡ: 07:30 ನಿಂದ 09:00 ತನಕ ಗುಳಿಕ ಕಾಲ: 10:30 ನಿಂದ 12:00 ತನಕ ಅಮೃತಕಾಲ: ರಾ .1:02 ನಿಂದ ರಾ .2:28 ತನಕ ಅಭಿಜಿತ್ ಮುಹುರ್ತ:ಇಲ್ಲ ಮೇಷ ರಾಶಿ: ವಿವಾಹ ಕಾರ್ಯ ನಿರೀಕ್ಷೆಯಲ್ಲಿರುವವರಿಗೆ ಶುಭ, ಪ್ರೇಮಿಗಳ ಬಾಂಧವ್ಯ ವೃದ್ಧಿ, ಕುಟುಂಬದಲ್ಲಿ ಜಗಳ ಸಂಭವ, ವ್ಯಾಪಾರದ ಆರ್ಥಿಕ ಮುಗ್ಗಟ್ಟು, ಮಕ್ಕಳಿಂದ ಮನಸ್ತಾಪ, ರಾಜಕೀಯ ರಂಗದ ಜನಪ್ರತಿನಿಧಿಗಳಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ, ಅಣ್ಣ-ತಮ್ಮಂದಿರ ಆಸ್ತಿಗಾಗಿ ಹೋರಾಟ, ಸಹೋದರಿಗಳಿಂದ ಮನಸ್ತಾಪ, ಎಲ್ಲ ಚಲನಚಿತ್ರ ನಟ ನಟಿಯರಿಗೆ ನಷ್ಟ, ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ, ಸಾಲಗಾರರಿಂದ ಅವಮಾನ, ಹೊಸ ವ್ಯಾಪಾರ ಪ್ರಾರಂಭಿಸಲು ಸೂಕ್ತ ಸಮಯವಲ್ಲ, ಜಾತಕ ಆಧಾರದ (ಜನ್ಮ…
ಚಿತ್ರದುರ್ಗ: ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯರಿಂದ ಬೇಸತ್ತಿದ್ದಾರೆ ಎಂದು ವಿಷಕ್ಷ ನಾಯಕ ಆರ್ ಅಶೋಕ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಉಳಿ ಸಾಧ್ಯತೆ ಇಲ್ಲ, ದಿನಬೆಳಗಾದರೆ ಮಠಾಧೀಶರು, ಜ್ಯೋತಿಷಿಗಳು ರಾಜಕಾರಣಿಗಳು ಸಿದ್ದರಾಮಯ್ಯ ಸರ್ಕಾರ ಬಿದ್ದುಹೋಗುತ್ತದೆ ಅಂತ ಭವಿಷ್ಯ ನುಡಿಯುತ್ತಾರೆ ಎಂದು ವಿಷಕ್ಷ ನಾಯಕ ಆರ್ ಅಶೋಕ ಹೇಳಿದರು. ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಅಂತ ಕನಿಷ್ಠ ಒಂದು ಸಾವಿರ ಸಲ ಹೇಳಿರಬಹುದು, ಅವರ ಸ್ಥಾನ ಭದ್ರವಿಲ್ಲ, ಜೊಳ್ಳಿನ ಮೇಲೆ ಕೂತು ಅವರು ಅಧಿಕಾರ ನಡೆಸುತ್ತಿದ್ದಾರೆ, ಸರ್ಕಾರ ಉಳಿಯಲ್ಲ ಅವರಿಗೂ ಗೊತ್ತಿದೆ, ಹಾಗಾಗಿ ಇರುವಷ್ಟು ದಿನ ಕಾಸು ಮಾಡಿಕೊಳ್ಳುವ ಬಗ್ಗೆ ಅವರು ಯೋಚಿಸುತ್ತಿರಬಹುದು ಎಂದು ಅಶೋಕ ಹೇಳಿದರು. https://ainlivenews.com/does-banana-fruit-turn-black-quickly-so-just-follow-these-simple-tips/ ಡಿಕೆ ಶಿವಕುಮಾರ್ ನಾನೇ ಮುಖ್ಯಮಂತ್ರಿ ಅಂತ ಚನ್ನಪಟ್ಟಣದಲ್ಲಿ ಹೇಳಿಕೊಂಡು ಓಡಾಡುತ್ತಿದ್ದಾರೆ, ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯರಿಂದ ಬೇಸತ್ತಿದ್ದಾರೆ, ಅವರ ಕ್ಷೇತ್ರಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಬಿಡಿಗಾಸೂ ನೀಡಿಲ್ಲ, ಅವರ ಜೊತೆ ಇದ್ದರೆ ಕಳ್ಳೆಬೀಜವೂ ದಕ್ಕಲಾರದು ಅಂತ ಶಾಸಕರಿಗೆ ಮನವರಿಕೆಯಾಗಿದೆ ಎಂದು ಅಶೋಕ ಹೇಳಿದರು.
ಮೈಸೂರು: ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುವುದಕ್ಕೋಸ್ಕರ ತಾನು ಬಸ್ ಓಡಿಸಿದ್ದು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುವುದಕ್ಕೋಸ್ಕರ ತಾನು ಬಸ್ ಓಡಿಸಿದ್ದು, ಅದರೆ ತಾನು ಬಸ್ ಡ್ರೈವರ್ ಅಲ್ಲ, ಬಸ್ಸಿನ ಮಾಲೀಕ, ತಮ್ಮ ತಾತನ ಕಾಲದಿಂದ ಬಸ್ಸುಗಳನ್ನು ಇಟ್ಟುಕೊಂಡಿದ್ದೇವೆ ಎನ್ನುತ್ತಾರೆ. https://ainlivenews.com/does-banana-fruit-turn-black-quickly-so-just-follow-these-simple-tips/ ಇನ್ನೂ ದೇವೇಗೌಡರ ಕುಟುಂಬವನ್ನು ಖರೀದಿ ಮಾಡುವ ಮಾತನ್ನು ತಾನು ಆಡೇ ಎಲ್ಲ ಎಂದು ಸಾಧಿಸಿದರು. ತಾನು ಹೇಳಿದ್ದೇ ಬೇರೆ, ವರದಿಯಾಗಿದ್ದೇ ಬೇರೆ, ಕುಮಾರಸ್ವಾಮಿಯವರು ಮುಸಲ್ಮಾನರ ವೋಟು ಖರೀದಿಸುವ ಮಾತುಗಳನ್ನಾಡಿದ್ದಾರೆ ಮತ್ತು ಅವರು ಮುಸಲ್ಮಾನರಿಗೆ ₹ 2,000 ಕೊಡುತ್ತಿರುವ ವಿಡಿಯೋ ವೈರಲ್ ಅಗಿದೆ, ಈ ಹಿನ್ನೆಲೆಯಲ್ಲಿ ತಾನು ಅವರಿಗೆ ಮುಸಲ್ಮಾನರ ವೋಟು ಖರೀದಿಸುವುದು ಸಾಧ್ಯವಿಲ್ಲ ಅಂತ ಹೇಳಿದ್ದು ಅಂತ ಜಮೀರ್ ಹೇಳಿದರು.
ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಕೊರೊನಾ ಹಗರಣ ಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಯಡಿಯೂರಪ್ಪವರ ಅಧಿಕಾರವಾಧಿಯಲ್ಲಿನ ಕೊರೊನಾ ಅಕ್ರಮದ ಕುರಿತು ವಿಚಾರಣೆಗೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ನಾ ಅವರ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಇದೀಗ ಈ ಆಯೋಗ ಮಧ್ಯಂತರ ವರದಿ ನೀಡಿದೆ. ಈ ವರದಿಯಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಮಾಜಿ ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಿದೆ. ಸರ್ಕಾರ ಸ್ಥಳೀಯ ಕಂಪನಿಗಳಿಂದ ಕೇವಲ 446 ರೂಪಾಯಿ ಪಿಪಿಇ ಕಿಟ್ ಖರೀದಿ ಮಾಡಿತ್ತು. ಆದ್ರೆ ಚೀನಾ ಕಂಪನಿಗಳಿಗೆ ಮಾತ್ರ 2,117 ರೂಪಾಯಿ ಕೊಟ್ಟಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. https://ainlivenews.com/another-trouble-for-former-cm-bsy-formation-of-a-committee-to-investigate-the-300-crore-illegality/ ಮಧ್ಯಂತರ ವರದಿಯಲ್ಲೇನಿದೆ..? ಯಡಿಯೂರಪ್ಪ ಮತ್ತು ರಾಮುಲು ಕಾರ್ಯವೈಖರಿ ಬಗ್ಗೆ ಸಮಿತಿ ಆಕ್ಷೇಪವ್ಯಕ್ತಪಡಿಸಿದೆ. ಒಟ್ಟು ಖಾಸಗಿ ಲ್ಯಾಬ್ಗಳಿಗೆ 6.93ಕೋಟಿ ಹಣ ಸಂದಾಯವಾಗಿದೆ. 14 ಲ್ಯಾಬ್ಗಳು ICMRನಿಂದ ಮಾನ್ಯತೆ ಪಡೆದಿಲ್ಲ. ಹೀಗಾಗಿ ಈ ಲ್ಯಾಬ್ ಗಳು ಅಧಿಕೃತವಲ್ಲ ಎಂದು ಉಲ್ಲೇಖಿಸಲಾಗಿದೆ. RTPCR ಟೆಸ್ಟ್ಗೆ…
ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಕೊರೊನಾ ಅಸ್ತ್ರ ಪ್ರಯೋಗಿಸಿದ್ದ ರಾಜ್ಯ ಸರ್ಕಾರ ಇದೀಗ ಮತ್ತೊಂದು ಶಾಕ್ ನೀಡಿದೆ. ಕೊರೊನಾ ಅಕ್ರಮದ ಬಳಿಕ ಇದೀಗ ಕೆಕೆಆರ್ ಡಿಬಿ ಅವ್ಯವಹಾರದ ಬಗ್ಗೆ ತನಿಖೆಗಾಗಿ ಸಮಿತಿ ರಚಿಸಿದೆ. ಕಲ್ಯಾಣ-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ)ಯಲ್ಲಿ ಸುಮಾರು 300 ಕೋಟಿ ಅನುದಾನ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ತನಿಖೆಗೆ ಸರ್ಕಾರ ಕಮಿಟಿ ರಚಿಸಿದೆ. https://ainlivenews.com/if-i-had-done-something-wrong-i-would-have-died-in-blood-rape-accused-muniratna-said/ 2020-2023ರ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ ರಚಿಸಲಾಗಿತ್ತು. ಈ ವೇಳೆ ದತ್ತಾತ್ರೇಯ ಪಾಟೀಲ್ ರೇವೂರ್ ಅಧ್ಯಕ್ಷರಾಗಿದ್ದರು. ಆಗ ಯಡಿಯೂರಪ್ಪ ಸಿಎಂ ಆಗಿದ್ದರು. ಪ್ರತಿ ವರ್ಷ 100 ಕೋಟಿಯಂತೆ 300 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ ಅನುದಾನದಲ್ಲಿ ದುರ್ಬಳಕೆ ಆಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಈಗ ಅಕ್ರಮದ ತನಿಖೆ ನಡೆಸಲು ನಿವೃತ್ತ ಐಎಎಸ್ ಸುಧೀರ್ ಕುಮಾರ್ ನೇತೃತ್ವದಲ್ಲಿ ಸಮಿತಿ ರಚಿಸಸಲಾಗಿದೆ. ಕೋವಿಡ್ ಅವಧಿಯಲ್ಲಿ ಮೃತಪಟ್ಟ ಶಿಕ್ಷಕರ…
ಶ್ರೀನಿವಾಸಪುರ – ಜನ ಸಾಮಾನ್ಯರಿಗೆ ಎದುರಾಗುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಕೋಲಾರ ಜಿಲ್ಲಾ ಎಸ್ ಪಿ ಬಿ ನಿಖಿಲ್ ರವರು ತಿಳಿಸಿದರು. ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೋಲಾರ ಜಿಲ್ಲಾ ಎಸ್ ಪಿ ಬಿ. ನಿಖಿಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಮೊಟ್ಟ ಮೊದಲ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು, ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳು, https://ainlivenews.com/these-things-should-not-be-done-on-tuesdays-do-you-know-why-here-is-the-information/ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಂಗಡಿ ಮುಂಗಟ್ಟುಗಳಲ್ಲಿ ಹಾಗೂ ಮನೆಗಳ ಹತ್ತಿರದಲ್ಲಿ ಸಿ ಸಿ ಕ್ಯಾಮೆರಾಗಳ ಅಳವಡಿಕೆಯಿಂದ ಭಧ್ರತೆಯ ವಾತಾವರಣ ನಿರ್ಮಾಣವಾಗುತ್ತದೆ. ಇನ್ನು ಸಿವಿಲ್ ಪ್ರಕರಣಗಳಲ್ಲಿ ಪೊಲೀಸರು ಯಾವುದೇ ನೈಜ ಜವಾಬ್ದಾರಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ನ್ಯಾಯಾಲಯದ ಆದೇಶದಂತೆ ಪೊಲೀಸ್ ಇಲಾಖೆ ಕಾರ್ಯನಿರ್ವಾಹಿಸಬೇಕಾಗುತ್ತದೆ. ಜನ ಸಾಮಾನ್ಯರು ಸಿವಿಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಒತ್ತಡ ಏರುವ ಬದಲು ನ್ಯಾಯಾಲಯ ಅಥವಾ ಹಿರಿಯ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳುವ ಕೆಲಸ ಮಾಡಬೇಕು ಹಾಗೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿದರು. ಇನ್ನು ರಾತ್ರಿ ಬೀಟ್ಗೆ…
ರಾಂಚಿ: ಜಾರ್ಖಂಡ್ ನಲ್ಲಿ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಮೊದಲ ಹಂತದ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ಮೊದಲ ಸುತ್ತಿನಲ್ಲಿ 15 ಜಿಲ್ಲೆಗಳ 43 ಸ್ಥಾನಗಳಿಗೆ ಮತದಾನ ನಡೆಯಲಿದ್ದು, 683 ಅಭ್ಯರ್ಥಿಗಳು ಅಖಾಡದಲ್ಲಿದ್ದು, 1.37 ಕೋಟಿ ಮಂದಿ ಮತದಾರರು ಅವರ ಭವಿಷ್ಯ ನಿರ್ಧರಿಸಲಿದ್ದಾರೆ. https://www.youtube.com/watch?v=XGtoMIFnk2U ಮೊದಲ ಸುತ್ತಿನಲ್ಲಿ ಪೂರ್ವ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಆರು ಸ್ಥಾನಗಳು, ಫಲಮು, ಪಶ್ಚಿಮ ಸಿಂಗ್‌ಭೂಮ್ ಮತ್ತು ರಾಂಚಿ ಜಿಲ್ಲೆಗಳಲ್ಲಿ ತಲಾ ಐದು ವಿಧಾನಸಭಾ ಕ್ಷೇತ್ರಗಳಿವೆ. ಕೊಡೆರ್ಮಾ, ರಾಮಗಢ ಜಿಲ್ಲೆಯಲ್ಲಿ ತಲಾ ಒಂದು ಸ್ಥಾನವಿದೆ. ಮೊದಲ ಹಂತದಲ್ಲಿ ಒಟ್ಟು 43 ಸ್ಥಾನಗಳ ಪೈಕಿ ಜೆಎಂಎಂ 23 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 17 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ (RJD) ಒಟ್ಟು ಐದು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಎನ್‌ಡಿಎಯಲ್ಲಿ ಬಿಜೆಪಿ 43ರಲ್ಲಿ 36 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೊದಲ ಹಂತದ ಚುನಾವಣಾ ಅಖಾಡದಲ್ಲಿ ಮಾಜಿ ಮುಖ್ಯಮಂತ್ರಿ ಚಂಪೈ…
ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ಇದೇ ಮೊದಲ ಬಾರಿಗೆ ಶಾಸಕ ಮುನಿರತ್ನ ತಮ್ಮ ವಿರುದ್ಧದ ಆರೋಪದ ಬಗ್ಗೆ ಮಾತನಾಡಿದ್ದಾರೆ. ಆರ್ ಆರ್ ನಗರದ ಕಾರ್ಯಕ್ರಮದಲ್ಲಿ ಮಾತನಾಡಿರುವ ಮುನಿರತ್ನ, ಸತ್ಯ ನಿದ್ರಿಸುತ್ತಿರಬಹುದು. ಆದರೆ ಸಾಯಲ್ಲ. ಆ ಮಾರಮ್ಮನ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ನಾನು ತಪ್ಪು ಮಾಡಿದ್ರೆ ಕ್ಷೇತ್ರದಲ್ಲಿ ರಕ್ತ ಕಾರಿ ಸಾಯಬೇಕು ಎಂದಿದ್ದಾರೆ. https://www.youtube.com/shorts/pyjsx3CsunM ಆದಿಚುಂಚನಗಿರಿ ಕಾಲಭೈರವನ ಮೇಲೆ ಪ್ರಮಾಣ ಮಾಡ್ತೇನೆ. ನಾನು ಗುತ್ತಿಗೆದಾರನ ಹೆಣ್ಣುಮಗಳ ಬಗ್ಗೆ ಮಾತಾಡಿದ್ದರೆ, ನಾನು ಅತ್ಯಾಚಾರ ಮಾಡಿದ್ರೆ ರಕ್ತಕಾರಿ ಸಾಯುತ್ತೇನೆ, ನಾನು ಏನಾದ್ರು ತಪ್ಪು ಮಾಡಿದ್ರೆ ಹಾಗೆಯೇ ಸಾಯಬಾರದು. ರಕ್ತಕಾರಿ ಸಾಯಬೇಕು. ಸುಳ್ಳು ದೂರು ಕೊಡಬಾರದು. ಇವರ ಸ್ವಾರ್ಥಕ್ಕೋಸ್ಕರ ಅಷ್ಟರ ಮಟ್ಟಿಗೆ ಹೋಗಿದ್ದಾರೆ. ನನ್ನ ಬಳಿ ಯಾರೇ ಬಂದ್ರೂ ಏನಮ್ಮ, ತಾಯಿ ಅಂತೇನೆ. ಈ ಎರಡು ಪದ ಬಿಟ್ಟು ಬೇರೆ ಪದ ಉಪಯೋಗಿಸಲ್ಲ ಎಂದು ಸ್ಪಷ್ಟಪಡಿಸಿದರು.
ಕಲಬುರಗಿ: ದುಷ್ಕರ್ಮಿಗಳು ತಂಡ ರೌಡಿ ಶೀಟರ್ʼನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಪಟ್ಟಣ ಗ್ರಾಮದಲ್ಲಿ ನಡೆದಿದೆ. ಸೋಮು ತಾಳಿಕೋಟಿ (40) ಬರ್ಬರವಾಗಿ ಕೊಲೆಯಾದ ರೌಡಿಶೀಟರ್. ಕಲಬುರಗಿಯ ಪಟ್ಟಣ ಗ್ರಾಮದಲ್ಲಿ ಕೊಲೆ ಮಾಡಿ ಆಳಂದ ರಸ್ತೆಯ ರೈಲ್ವೆ ಹಳಿ ಬಳಿ ಶವ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. https://ainlivenews.com/do-you-know-how-much-return-you-will-get-if-you-invest-%e2%82%b9-1000-%e2%82%b9-2000-or-%e2%82%b9-5000/ ಕೆಲ ತಿಂಗಳ ಹಿಂದೆ ಸೋಮು ಪಟ್ಟಣ ಗ್ರಾಮದ ಡಾಬಾ ಮಾಲೀಕನ ಜೊತೆ ಈತ ಜಗಳವಾಡಿದ್ದನು. ಅಲ್ಲದೆ ಸೋಮು ಮತ್ತು ಆತನ ಸಂಗಡಿಗರು ಡಾಬಾ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಹೀಗಾಗಿ ಹಳೆಯ ವೈಷಮ್ಯದ ಹಿನ್ನೆಲೆ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಹಂತಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.