ಗದಗ:- ಎಣ್ಣೆ ಹೊಡೆಯುವ ವೇಳೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಗದಗ ನಗರದ ಕಳಸಾಪೂರ ರಿಂಗ್ ರೋಡ್ ಬಳಿ ಜರುಗಿದೆ. https://ainlivenews.com/lack-of-evidence-high-court-acquitted-the-drug-case-against-ragini/ ಘಟನೆಯಲ್ಲಿ ತಾಜುದ್ದಿನ್, ಮುಸ್ತಾಪ್, ಕಾರ್ತಿಕ್ ಹಾಗೂ ದುರಗಪ್ಪ ಎಂಬ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಜುದ್ದಿನ್, ಮುಸ್ತಾಪ್, ಕಾರ್ತಿಕ್ ಎಂಬುವವರು ದುರಗಪ್ಪ ಜೊತೆ ಸ್ನ್ಯಾಕ್ ವಿಚಾರಕ್ಕೆ ಜಗಳ ತೆಗೆದಿದ್ದಾರೆ. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ಮೂವರ ಮೇಲೆ ದುರ್ಗಪ್ಪ ಬೆಂಬಲಿಗರು ಸರಿಸುಮಾರು 40 ಜನ ಸೇರಿ ಮೂವರ ಮೇಲೆ ಅಟ್ಯಾಕ್ ಮಾಡಿದ್ದಾರೆ. ಕಲ್ಲು ದೊಣ್ಣೆಗಳಿಂದ ಸಿಕ್ಕ ಸಿಕ್ಕಲ್ಲೇ ಹಲ್ಲೆ ಮಾಡಿದ್ದಾರೆ. ಮಹಿಳೆಯರು ಸೇರಿ ಹಲವರಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ತಲೆ, ಕೈ ಮುಖ ಭಾಗಕ್ಕೆ ಗಂಭೀರ ಗಾಯವಾಗಿದೆ. ತಾಜುದ್ದೀನ್, ಮುಸ್ತಫಾ, ಕಾರ್ತಿಕ್ ಮೂವರು ಕೂತಿದ್ದ ಟೇಬಲ್ ನಲ್ಲಿನ ಸ್ನ್ಯಾಕ್ ಗೆ ದುರ್ಗಪ್ಪ ಕೈ ಹಾಕಿದ್ದ. ಸ್ನ್ಯಾಕ್ ಗೆ ಕೈ ಹಾಕಿದ್ದ ದುರ್ಗಪ್ಪನ…
Author: AIN Author
ಬೆಂಗಳೂರು:- ಸಾಕ್ಷ್ಯಾಧಾರಗಳ ಕೊರತೆಯಿಂದ ನಟಿ ರಾಗಿಣಿ ವಿರುದ್ಧದ ಡ್ರಗ್ಸ್ ಕೇಸ್ ಅನ್ನು ಹೈಕೋರ್ಟ್ ಖುಲಾಸೆ ಮಾಡಿದೆ. https://ainlivenews.com/sankranti-celebration-eye-catching-celebration-in-bengaluru/ ಯಾವುದೇ ಸಾಕ್ಷ್ಯಾಧಾರ ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂಬ ಕಾರಣ ನೀಡಿದ ಹೈಕೋರ್ಟ್ ಎ2 ರಾಗಿಣಿ ವಿರುದ್ಧದ ಪ್ರಕರಣವನ್ನು ರದ್ದು ಮಾಡಿದೆ. ಪ್ರಕರಣಕ್ಕೆ ಸಂಬಧಿಸಿದಂತೆ ನಟಿ ರಾಗಿಣಿಯನ್ನು 2020ರ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು. ಹಲವು ದಿನ ಜೈಲುವಾಸವನ್ನೂ ಅನುಭವಿಸಿದ್ದರು. ಡ್ರಗ್ಸ್ ಮಾಫಿಯಾದೊಂದಿಗೆ ನಂಟು ಹೊಂದಿದ ಆರೋಪ ರಾಗಿಣಿ ಮೇಲೆ ಇತ್ತು. ಪಾರ್ಟಿ ಆಯೋಜಿಸಿ ಡ್ರಗ್ಸ್ ಬಳಕೆಗೂ ಅವರು ಅವಕಾಶ ಮಾಡಿಕೊಟ್ಟಿದ್ದರು ಎನ್ನಲಾಗಿತ್ತು ರಿಲೀಫ್ ಸಿಕ್ಕಿದ ಬೆನ್ನಲ್ಲೇ ನಟಿ ರಾಗಿಣಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ
ದಾಸರಹಳ್ಳಿ: ನಾಡಿನೆಲ್ಲಡೆ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಬೆಂಗಳೂರು ನಗರದಲ್ಲಿ ಎತ್ತುಗಳ ಕಿಚ್ಚಿನ ಆಚರಣೆ ಮಾಡಲಾಗಿದೆ. https://ainlivenews.com/do-you-know-the-benefits-of-drinking-fresh-water-in-winter/ ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ಹೋರಿಗಳ ಮೆರವಣಿಗೆ ಮಾಡಲಾಗಿದೆ. ಊರಿನ ಮುಖಂಡರ ಜೊತೆ ಶಾಸಕ ಎಸ್ ಮುನಿರಾಜು ಹಬ್ಬ ಆಚರಣೆ ಮಾಡಲಾಗಿದೆ. ಗ್ರಾಮದ ಎತ್ತುಗಳನ್ನ ಸಿಂಗಾರ ಮಾಡಿ ರಸ್ತೆಯಲ್ಲಿ ಮೆರವಣಿಗೆ ಮಾಡಲಾಗಿದೆ. ಮಂಗಳ ವಾದ್ಯದೊಂದಿಗೆ ಎತ್ತುಗಳ ಮೆರವಣಿಗೆ ಮಾಡಲಾಗಿದ್ದು, ಕಿಚ್ಚು ಹಾಯಿಸುವ ಹುಲ್ಲಿಗೆ ಶಾಸಕ ಎಸ್ ಮುನಿರಾಜು ಬೆಂಕಿ ಸ್ಪರ್ಶ ಮಾಡಿದರು. ಎತ್ತುಗಳ ಜೋತೆ ಹಸು,ಕುರಿಯನ್ನ ಬೆಂಕಿಯಲ್ಲಿ ಹಾರಿಸುವ ಮುಖಾಂತರ ಕಾರ್ಯಕ್ರಮ ನಡೆದಿದ್ದು, ಸಂಕ್ರಾಂತಿ ಕಿಚ್ಚು ನೋಡಲು ಸಾವಿರಾರು ಜನರು ಭಾಗಿಯಾಗಿದ್ದರು.
ಎಳನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದನ್ನು ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಎಳನೀರಿನಲ್ಲಿ ಸಾಕಷ್ಟು ರೀತಿಯ ಪೋಷಕಾಂಶಗಳಿವೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದರಲ್ಲಿ ಸಂದೇಹವಿಲ್ಲ. ಎಳನೀರು ದೇಹದ ನಿರ್ಜಲೀಕರಣದಿಂದ ನಮ್ಮನ್ನು ರಕ್ಷಿಸುತ್ತದೆ. ದೇಹಕ್ಕೆ ತಕ್ಷಣ ಶಕ್ತಿಯನ್ನು ನೀಡುತ್ತದೆ. ತೆಂಗಿನ ನೀರು ತುಂಬಾ ಆರೋಗ್ಯಕರ. ಇದು ತುಂಬಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ದೀರ್ಘಕಾಲದವರೆಗೆ ನಿಮ್ಮ ಹೊಟ್ಟೆ ತುಂಬಿರುವ ಅನುಭವವನ್ನು ನೀಡುತ್ತದೆ. ಜೊತೆಗೆ ಚಯಾಪಚಯವನ್ನು ಹೆಚ್ಚಿಸುತ್ತದೆ. https://ainlivenews.com/qwj-annual-awards-announced-who-gets-which-award/ ಎಳನೀರು ಅತ್ಯಂತ ಸುರಕ್ಷಿತ ಮತ್ತು ಕಲಬೆರಕೆಯಿಲ್ಲದ ಪಾನೀಯ. ಎಳನೀರು ದೇಹವನ್ನು ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಎಳನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಯಕೃತ್ತು ಆರೋಗ್ಯಕರವಾಗಿರುತ್ತದೆ. ಇದರಲ್ಲಿ ಹೆಚ್ಚು ಪೌಷ್ಟಿಕಾಂಶವಿದೆ ಹಾಗೂ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಉತ್ಕರ್ಷಣ ನಿರೋಧಕಗಳಂತಹ ಅಗತ್ಯ ಪೋಷಕಾಂಶಗಳಿಂದ ತುಂಬಿದ ನೈಸರ್ಗಿಕ, ಕಡಿಮೆ ಕ್ಯಾಲೋರಿ ಪಾನೀಯವಾಗಿದೆ. ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವುದರಿಂದ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಶುರುವಾಗುತ್ತದೆ. ಹಾಗಾಗಿ ಕಡಿಮೆ ನೀರನ್ನು ಕುಡಿಯುತ್ತಿದ್ದರೆ,…
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ತುಮಕೂರಿನಲ್ಲಿ ಜನವರಿ 18 ಮತ್ತು 19 ರಂದು ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಅವರು ತಿಳಿಸಿದ್ದಾರೆ. https://ainlivenews.com/rain-likely-in-6-districts-of-karnataka-tomorrow-meteorological-department/ ಪ್ರಶಸ್ತಿಗಳ ವಿವರ ಇಂತಿದೆ. 1. ಜಿ. ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿಗೆ) ಚಂದ್ರಶೇಖರ ಮುಕ್ಕುಂದಿ, ವಿಜಯ ಕರ್ನಾಟಕ, ಗಂಗಾವತಿ ದಿಗಂಬರ ಮುರುಳೀಧರ ಪೂಜಾರ್, ಸಂಯುಕ್ತ ಕರ್ನಾಟಕ, ಗದಗ 2. ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿಗೆ) ಪ್ರಸನ್ನ ಮನೋಹರ ಕುಲಕರ್ಣಿ, ಡೆಕ್ಕನ್ ಹೆರಾಲ್ಡ್, ಖಾನಾಪುರ. ರವಿರಾಜ್ ಆರ್ ಗಲಗಲಿ, ವಿಜಯ ಕರ್ನಾಟಕ, ಬಾಗಲಕೋಟೆ 3. ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿಗೆ) ಮಂಜುನಾಥ್.ಕೆ., ವಿಜಯವಾಣಿ, ಬೆಂಗಳೂರು ಶಕೀಲ ಚೌದರಿ, ಅ್ಜಲಪುರ, ಕಲಬುರಗಿ 4. ಬಿ. ಎಸ್. ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿಗೆ) ಕೆ.ಓಂಕಾರಮೂರ್ತಿ, ಪ್ರಜಾವಾಣಿ, ಕೋಲಾರ ಸಿದ್ದು ಆರ್…
ಬೆಂಗಳೂರು:- ಕರ್ನಾಟಕದ 6 ಜಿಲ್ಲೆಗಳಲ್ಲಿ ನಾಳೆ ಮಳೆ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಹೇಳಿದ್ದಾರೆ. https://ainlivenews.com/cow-udder-harvesting-case-govt-is-paranoid-ashok/ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ದಕ್ಷಿಣ ಕನ್ನಡ, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಾಧಾರಣ ಮಳೆ ಆಗಿದ್ದು, ಇನ್ನೂ ಮುಂದಿನ 2 ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಸನ, ಚಾಮರಾಜನಗರ, ಕೊಡಗು, ಮೈಸೂರು, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದ್ದು, ಇನ್ನು ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಮಂಜು ಬೀಳುವ ಸಾಧ್ಯತೆ ಇದೆ. ಜನವರಿ 20 ರವರೆಗೂ ಇದೇ ಹವಾಮಾನ ಮುಂದುವರಿಯಲಿದೆ. ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸೋಮವಾರ ಹಗುರ ಮಳೆಯಾಗಿದೆ. ವಿಜಯಪುರದಲ್ಲಿ ಕನಿಷ್ಠ ತಾಪಮಾನ 14.6 ಡಿ.ಸೆ ಹಾಗೂ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಲ್ಲಿ ಗರಿಷ್ಠ ತಾಪಮಾನ 32.8 ಡಿ.ಸೆ ದಾಖಲಾಗಿದೆ. ಇನ್ನು ಬೆಂಗಳೂರಿನಲ್ಲಿ ಇನ್ನೆರಡು ದಿನ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಮುಂದುವರಿಯುವ ಸಾಧ್ಯತೆ ಇದೆ.
ಬೆಂಗಳೂರು: ಚಾಮರಾಜಪೇಟೆ ದನದ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, ಹಸುವಿನ ಕೆಚ್ಚಲು ಕತ್ತರಿಸದವನಿಗೆ ಮತಿಭ್ರಮಣೆ ಎಂದು ಕಾಂಗ್ರೆಸ್ ಹೇಳುತ್ತಿದೆ ಆದರೆ ಮತಿಭ್ರಮಣೆ ಆಗಿರೋದು ಅವನಿಗಲ್ಲ ಈ ಸರ್ಕಾರ ಕ್ಕೆ ಎಂದು ಆಕ್ರೋಶ ಹೊರಹಾಕಿದ್ದಾರೆ. https://ainlivenews.com/ct-ravi-may-lakshmi-hebbalkar-get-well-soon-ct-ravi-wish/ ಈ ಬಗ್ಗೆ ಮಾತನಾಡಿದ ಅವರು, ಆರೋಪಿಗೆ ತಲೆ ಸರಿಯಿಲ್ಲ ಎಂದು ಹೇಳುತ್ತಿದ್ದಾರೆ ಅವನಿಗೆ ತಲೆ ಸರಿ ಇಲ್ಲ ಎಂದರೆ ಹತ್ತು ವರ್ಷ ಹೇಗೆ ಅವನು ಲೆದರ್ ಫ್ಯಾಕ್ಟರಿ ಲಿ ಕೆಲಸ ಮಾಡ್ತಾನೆ.? ಈ ಪ್ರಕರಣವನ್ನು ಮುಚ್ಚಿ ಹಾಕಲು ಯಾರನ್ನೂ ಕರೆತಂದು ಅವನೇ ಈ ಘಟನೆಗೆ ಕಾರಣ ಅಂತಿದಾರೆ ಎಂದು ಕಿಡಿಕಾರಿದರು. ಹಸುವಿನ ಮಾಲೀಕ ಕರ್ಣನಿಗೆ ನಾವು ಹಣ ನೀಡಿದ್ದು ಹಸು ಖರೀದಿಗೆ ಅಲ್ಲ. ಗಾಯಗೊಂಡ ಹಸುವಿನ ಆರೈಕೆಗೆಂದು ಹಣ ನೀಡಿರುವುದು, ಆದರೆ ಈಗ ಕಾಂಗ್ರೆಸ್ ನವರು ಬಂದು ಹಣ ತಗೋ ದನ ತಗೋ ಎಂದು ಎಂದು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದರು. ಪಶು ಆಸ್ಪತ್ರೆ ಗಾಗಿ ಹಸುವಿನ ಮಾಲೀಕ ಕರ್ಣ…
ಬೆಳಗಾವಿ ; ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶೀಘ್ರ ಗುಣಮುಖರಾಗಲಿ ಎಂದು ಮಾಜಿ ಸಚಿವ ಸಿ.ಟಿ ರವಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. https://ainlivenews.com/congress-government-is-full-of-sins-vijayendra/ ಕಳೆದ ತಿಂಗಳು ಅಶ್ಲೀಲ ಪದಬಳಕೆ ವಿಚಾರವಾಗಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಸಿ.ಟಿ ರವಿ ಮಧ್ಯೆ ವಾಗ್ವಾದ ನಡೆದಿತ್ತು. ಸಧ್ಯ ಈ ಎಲ್ಲಾ ಬೆಳವಣಿಗೆ ಮಧ್ಯೆ ಸಿ.ಟಿ ರವಿ ಹೆಬ್ಬಾಳಕರ್ ಅವರ ಆರೋಗ್ಯದ ಕುರಿತು ಹಾರೈಸಿದ್ದಾರೆ. ಇಂದು ಬೆಳಗಾವಿಯ ಕಿತ್ತೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ಅವರ ಸಹೋದ ಶೀಘ್ರ ಗುಣಮುಖರಾಗಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥಿಸುವೆ ಎಂದು ಸಿ.ಟಿ ರವಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಅದಕ್ಕೆ ಹಸುವಿನ ಕೆಚ್ಚಲು ಕೊಯ್ದಿರೋ ದುರ್ಘಟನೆ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. https://ainlivenews.com/surya-rashmi-untouched-by-gavigangadhareshwar-disappointment-for-devotees-kadidya-is-dangerous/ ಬೆಂಗಳೂರಲ್ಲಿ ಹಸುವಿನ ಮಾಲೀಕ ಕರ್ಣ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದ ನಂತರ ಅವರು ಮಾತನಾಡಿದರು.ಗೋವನ್ನ ತಾಯಿಯ ಸಮಾನವಾಗಿ ಕಾಣುತ್ತೇವೆ.ಅಂತಹ ಗೋವಿಗೆ ಯಾವ ಪರಿಸ್ಥಿತಿ ಆಗಿದೆ ಅಂಥಾ ನೋಡಿದ್ದೇವೆ.ಗೋಪಾಲಕ ಕರ್ಣನ ಕುಟುಂಬಕ್ಕೆ ಧೈರ್ಯ ಹೇಳಿದ್ದೇವೆ ಇದೊಂದು ಅಕ್ಷಮ್ಯ ಅಪರಾಧ: ಸಿದ್ದರಾಮಯ್ಯ ಸಿಎಂ ಆದಮೇಲೆ ಗೋರಕ್ಷಣೆ ಆಗ್ತಿಲ್ಲ.ಇಂತಹ ಪರಿಸ್ಥಿತಿಗೆ ಈ ಸರ್ಕಾರವೇ ಕಾರಣ. ಈ ಘಟನೆಯಿಂದ ಕಾಂಗ್ರೆಸ್ ಸರ್ಕಾರ & ಸಿದ್ದರಾಮಯ್ಯ ಇಬ್ಬರಿಗೂ ಒಳ್ಳೆಯದು ಆಗಲ್ಲ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.
ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಗವಿಪುರದಲ್ಲಿರುವ ಗವಿಗಂಗಾಧರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ಹಾಗೇ ಪ್ರತಿ ಸಂಕ್ರಮಣದಂದು ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸದ ಸೂರ್ಯ ರಶ್ಮಿಯಾಗುತ್ತೆ. ಆದ್ರೆ, ಈ ಬಾರಿ ಸೂರ್ಯ ರಶ್ಮಿ ಸ್ಪರ್ಶಿವಾಗಿಲ್ಲ. ಇದರಿಂದ ಭಕ್ತರಿಗೆ ನಿರಾಸೆಯಾಗಿದೆ. https://ainlivenews.com/devotees-flock-to-get-darshan-of-sankranti-background-nanjundeshwara/ ಈ ವರ್ಷ ಸೇರಿ ಇತಿಹಾಸದಲ್ಲೇ 3ನೇ ಬಾರಿಗೆ ಗವಿ ಗಂಗಾಧರೇಶ್ವರನ ಮೇಲೆ ಸೂರ್ಯ ರಶ್ಮಿ ಸ್ಪರ್ಶ ಬೀಳದಂತೆ ಆಗಿದೆ. ಒಂದು ವೇಳೆ ಗಂಗಾಧರೇಶ್ವರನ ಮೇಲೆ ಸೂರ್ಯ ರಶ್ಮಿ ಸ್ಪರ್ಶಯಾಗಿದ್ದರೇ, ಗವಿಗಂಗಾಧರನಿಗೆ ನಮಿಸಿ ಪಥವನ್ನು ಸೂರ್ಯದೇವ ಬದಲಿಸುತ್ತಿದ್ದ. ಇದಾದ ಬಳಿಕ ಸೂರ್ಯ ದಕ್ಷಿಣ ಪಥದಿಂದ ಉತ್ತರಕ್ಕೆ ಪಥ ಸಂಚಲನ ಮಾಡುವಾಗ ಸೂರ್ಯ ಕಿರಣಗಳು ದೇವಾಲಯದಲ್ಲಿನ ಶಿವ ಲಿಂಗವನ್ನು ಸ್ಪರ್ಶಿಸುತ್ತಿದ್ದ. ಹೀಗಾಗಿಯೇ ಇಂದು ಗವಿಗಂಗಾಧರ ದೇವಸ್ಥಾನದ ಶಿವಲಿಂಗಕ್ಕೆ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತಿತ್ತು. ಇಂದು ಬೆಳ್ಳಗ್ಗೆ 5 ಗಂಟೆಗೆ ಪೂಜೆ ಆರಂಭವಾಗಿದ್ದು ಪುಷ್ಪಾಭಿಷೇಕ, ಮಹಮಂಗಳಾರತಿ, ಪಂಚಾಭೀಷೇಕ ಮಾಡಿದ ಬಳಿಕ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಸೂರ್ಯರಶ್ಮಿ ಸ್ಪರ್ಶವಾಗುವುದನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಭಕ್ತರಿಗೆ ನಿರಾಸೆಯಾಗಿದೆ. ಸೂರ್ಯ…