ಮುಂಬೈ ವಿರುದ್ಧ ರೋಚಕ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ ಹೊಸ ಚರಿತ್ರೆ ಬರೆದಿದೆ. ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ 2ನೇ ಪಂದ್ಯದಲ್ಲಿ ರೋಚಕ ಜಯ ಸಾಧಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಹೊಸ ಇತಿಹಾಸ ನಿರ್ಮಿಸಿದೆ https://ainlivenews.com/have-you-got-a-spider-web-in-your-house-too-if-so-follow-these-tips/ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಮೆಗ್ ಲ್ಯಾನಿಂಗ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪರ ನ್ಯಾಟ್ ಸಿವರ್ ಬ್ರಂಟ್ 59 ಎಸೆತಗಳಲ್ಲಿ 13 ಫೋರ್ಗಳೊಂದಿಗೆ ಅಜೇಯ 80 ರನ್ ಬಾರಿಸಿದರೆ, ನಾಯಕಿ ಹರ್ಮನ್ಪ್ರೀತ್ ಕೌರ್ 42 ರನ್ ಚಚ್ಚಿದರು. ಈ ಮೂಲಕ ಮುಂಬೈ ಇಂಡಿಯನ್ಸ್ 19.1 ಓವರ್ಗಳಲ್ಲಿ 164 ರನ್ ಬಾರಿಸಿ ಆಲೌಟ್ ಆಯಿತು. 165 ರನ್ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 18 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 43 ರನ್…
Author: AIN Author
ಮನೆಯ ಸದಸ್ಯರಲ್ಲಿ ಸೋಮಾರಿತನ, ಕಿರಿಕಿರಿ ಅಥವಾ ನಕಾರಾತ್ಮಕತೆ ಕಂಡುಬಂದರೆ, ಅದು ಮನೆಯಲ್ಲಿನ ಜೇಡರ ಬಲೆಯಿಂದಾಗಿರಬಹುದು. https://ainlivenews.com/dolly-dhananjay-tied-the-knot-with-dhanyata-in-meenas-ascendant/ ಜೇಡರ ಬಲೆ ಇರುವ ಮನೆಯ ಸದಸ್ಯರ ಮನಸ್ಸು ಸರಿಯಾಗಿ ಕೆಲಸ ಮಾಡುವುದಿಲ್ಲ. ಕೌಟುಂಬಿಕ ಜೀವನದಲ್ಲಿ ಒತ್ತಡಕ್ಕೆ ಕೂಡ ಕಾರಣವಾಗಿದೆ. ಇದು ಕುಟುಂಬದ ಸದಸ್ಯರನ್ನು ಮಾನಸಿಕ ಅಸ್ವಸ್ಥರನ್ನಾಗಿಯೂ ಮಾಡಬಹುದು. ಕೆಲವರ ಮನೆಯಲ್ಲಿ ಮನೆ ತುಂಬಾ ಜೇಡರ ಬಲೆಯೇ ತುಂಬಿ ಹೋಗುತ್ತದೆ. ಎಷ್ಟೇ ಸ್ವಚ್ಛ ಮಾಡಿದ್ರು ಜೇಡ ಬಲೆ ಮತ್ತೆ ಮತ್ತೆ ಕಟ್ಟುತ್ತಿದ್ದರೆ ಈ ಸಮಸ್ಯೆಗೆ ಈ ರೀತಿ ಮನೆಯಲ್ಲೇ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು. ಪುದೀನಾ ಎಣ್ಣೆ : ಜೇಡಗಳನ್ನು ಹಿಮ್ಮೆಟ್ಟಿಸಲು ಪುದೀನಾ ಎಣ್ಣೆ ಉತ್ತಮ ಆಯ್ಕೆ ಎನ್ನಬಹುದು. ನಿಮ್ಮ ಮನೆಯಲ್ಲಿ ಜೇಡಗಳಿದ್ದರೆ ಒಂದು ಸ್ಪ್ರೇ ಬಾಟಲಿಯಲ್ಲಿ 10-15 ಹನಿ ಪುದೀನಾ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ. ಈ ಮಿಶ್ರಣವನ್ನು ಕಿಟಕಿಗಳಿರುವಲ್ಲಿ ಸಿಂಪಡಿಸಿದ್ರೆ, ಇದರ ಬಲವಾದ ವಾಸನೆಗೆ ಜೇಡಗಳು ಹತ್ತಿರ ಕೂಡ ಸುಳಿಯುವುದಿಲ್ಲ. ನಿಂಬೆ ಹಾಗೂ ಪುದೀನಾ :ಸ್ವಲ್ಪ ಪುದೀನಾ ಸೊಪ್ಪನ್ನು ಮಿಕ್ಸಿಗೆ ಹಾಕಿ ನೀರು ಸೇರಿಸಿ ರುಬ್ಬಿ…
ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಮತ್ತು ವೈದ್ಯೆ ಧನ್ಯತಾ ಮದುವೆ ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆದಿದೆ. ಈಗಾಗಲೇ ವಿವಾಹ ಪೂರ್ವ ಕಾರ್ಯಗಳು, ಶಾಸ್ತ್ರಗಳು ನೆರವೇರಿದ್ದು ಕಳೆದ ದಿನ ಡಿಸೆಪ್ಶನ್‌ಗೆ ಹಲವಾರು ಸೆಲೆಬ್ರಿಟಿಗಳು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದಾರೆ https://ainlivenews.com/love-you-you-are-very-special-to-me-rakshita-wishes-darshan-a-happy-birthday/ ನಟ ಡಾಲಿ ಡಾಕ್ಟರ್ ಧನ್ಯತಾ ಕೊರಳಿಗೆ ಮಾಂಗಲ್ಯ ಕಟ್ಟಿದ್ದು, ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು ಆಪ್ತ ಸ್ನೇಹಿತರ ಮಧ್ಯೆ ನಟ ರಾಕ್ಷಸ ಡಾಲಿ ಧನಂಜಯ್ ಅವರು ಧನ್ಯತಾ ಅವರ ಕೊರಳಿಗೆ ತಾಳಿ ಕೊಟ್ಟಿದ್ದಾರೆ. ಈ ಜೋಡಿ ವಧೂ ವರರ ದಿರಿಸಿನಲ್ಲಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ. ಡಾಲಿ ಧನಂಜಯ್ ಹಾಗೂ ಧನ್ಯತಾ ಅವರ ಮದುವೆ ಆರತಕ್ಷತೆ ಅದ್ಧೂರಿಯಾಗಿ ನಡೆದಿತ್ತು. ಇದರಲ್ಲಿ ಚಿತ್ರರಂಗದ ಗಣ್ಯರು, ಸೆಲೆಬ್ರಿಟಿಗಳು ಎಲ್ಲರೂ ಭಾಗಿಯಾಗಿದ್ದರು. ಈಗ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೈಸೂರಿನಲ್ಲಿ ಡಾಲಿ ಧನಂಜಯ್ ಹಾಗೂ ಧನ್ಯತಾ ಅದ್ಧೂರಿ ರಿಸೆಪ್ಷನ್ ನಡೆದಿದೆ. ಹಲವಾರು ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು ಇಂದಿನ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಸ್ಯಾಂಡಲ್ವುಡ್ನ ಕಲಾವಿದರ ದಂಡೇ…
ದರ್ಶನ್ ಹಾಗೂ ರಕ್ಷಿತಾ ಫ್ರೆಂಡ್ ಶಿಪ್ ಎಂಥದ್ದು ಅಂತ ಎಲ್ಲರಿಗೂ ಗೊತ್ತೇ ಇದೆ. ತೆರೆ ಮೇಲೆ ಎಷ್ಟು ಮೋಡಿ ಮಾಡಿತ್ತೋ ಈ ಜೋಡಿ, ಹಾಗೆ ಜೀವನದಲ್ಲೂ ಇವರಿಬ್ಬರ ಫ್ರೆಂಡ್ಸಿಪ್ ತುಂಬಾ ಟ್ರೂ ಆಗಿದೆ. ರಕ್ಷಿತಾ ಕಷ್ಟ ಸುಖದಲ್ಲಿ ದರ್ಶನ್ ಭಾಗಿಯಾಗಿದ್ದಾರೆ. ಅದರಂತೆ ದರ್ಶನ್ ಕಷ್ಟದಲ್ಲೂ ರಕ್ಷಿತಾ ಜೊತೆ ಆಗಿದ್ದರು. https://ainlivenews.com/a-case-of-stampede-at-new-delhi-railway-station-announcement-of-compensation-to-the-family-of-the-deceased/ ದರ್ಶನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಸಹಜವಾಗಿ ಆಪ್ತರು, ಸಿನಿ ತಾರೆಯರು, ಅಭಿಮಾನಿಗಳು ನಟ ದರ್ಶನ್‌ಗೆ ವಿಶ್ ಮಾಡುತ್ತಿದ್ದಾರೆ. ನಟಿ ರಕ್ಷಿತಾ ಪ್ರೇಮ್ ಕೂಡ ಫ್ರೆಂಡ್ ದರ್ಶನ್‌ಗೆ ವಿಶ್ ಮಾಡಿ ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿದ್ದಾರೆ. ದರ್ಶನ್ ಹುಟ್ಟುಹಬ್ಬಕ್ಕೆ ನಟಿ ರಕ್ಷಿತಾ ಪ್ರೇಮ್ ವಿಶೇಷವಾಗಿ ಶುಭಕೋರಿದ್ದಾರೆ. ‘ಇವತ್ತು ವಿಶೇಷ ದಿನ, ಯಾಕ್ ಗೊತ್ತಾ? ಇವತ್ತು ನನ್ನ ಬೆಸ್ಟ್ ಫ್ರೆಂಡ್ ಬರ್ತ್‌ಡೇ. ಇವರು ಯಾವಾಗಲೂ ಕಷ್ಟ-ಸುಖದಲ್ಲಿ ಒಂದೇ ರೀತಿಯಲ್ಲಿ ಜೊತೆಗಿದ್ದವರು. ಇವರು ಜೊತೆಗಿರುವ ಜೀವನ ಯಾವಾಗಲೂ ಉತ್ತಮವಾಗಿರುತ್ತದೆ. ನೀವು ನನಗೆ ಸ್ಪೆಷಲ್. ನಿಮ್ಮ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಶುಭ ಹಾರೈಸುತ್ತೇನೆ.…
ಚಾಲೆಂಜಿಂಗ್ ಸ್ಟಾರ್ ನಟ ನಟ ದರ್ಶನ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಪ್ರತಿ ದರ್ಶನ್ ಹುಟ್ಟುಹಬ್ಬವೆಂದರೆ ಅದು ಅಭಿಮಾನಿಗಳ ಪಾಲಿನ ದೊಡ್ಡ ಜಾತ್ರೆ. ಆದರೆ, ಈ ಬಾರಿ ದರ್ಶನ್ ಹುಟ್ಟುಹಬ್ಬ ಆಚರಿಸುತ್ತಿಲ್ಲ. ಇತ್ತೀಚೆಗಷ್ಟೇ ಈ ಬಾರಿ ಹುಟ್ಟುಹಬ್ಬ ಆಚರಿಸುತ್ತಿಲ್ಲ ಎಂದು ದರ್ಶನ್ ಮನವಿ ಮಾಡಿದ್ದಾರೆ. https://ainlivenews.com/stampede-at-railway-station-what-did-the-officials-and-eyewitnesses-say/ ಸದ್ಯ ದರ್ಶನ್ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸುವತ್ತ ಗಮನ ಹರಿಸಿದ್ದಾರೆ. ಅದೇ ಕಾರಣದಿಂದ ಹೊಸ ಸಿನಿಮಾಗಳ ಘೋಷಣೆಯಾಗಿಲ್ಲ. ಸದ್ಯ ದರ್ಶನ್ ಮೊದಲ ಆಯ್ಕೆ “ಡೆವಿಲ್”. ಈಗಾಗಲೇ ಒಂದಷ್ಟು ಚಿತ್ರೀಕರಣ ಪೂರೈಸಿರುವ ಈ ಚಿತ್ರದ ಟೀಸರ್ ಇಂದು ಬಿಡುಗಡೆಯಾಗುತ್ತಿದೆ. ದಾಸ ದರ್ಶನ್ ಸಿನಿಮಾ ಜೀವನದಲ್ಲಿ ಏರಿಳಿತಗಳಿವೆ. ಸೋಲು ಗೆಲುವು ಕೂಡ ಇವೆ. ಸೋತ ಸಿನಿಮಾಗಳ ಲೆಕ್ಕ ಒಂದು ಕಡೆ ಆದ್ರೆ, ಗೆದ್ದ ಸಿನಿಮಾಗಳ ವಿಚಾರ ಮತ್ತೊಂದು ಕಡೆ ಇದೆ. ಆದರೆ, ದರ್ಶನ್ ಸಿನಿಮಾ ಜೀವನ ಆರಂಭವಾಗಿರೋದು ಸಾಮಾನ್ಯ ಕ್ಯಾಮರಾ ಸಹಾಯಕನಾಗಿಯೇ ಅನ್ನೋದು ಗೊತ್ತೇ ಇದೆ. ಅಪ್ಪ ನಟನಾದ್ರೂ ದರ್ಶನ್ ತೂಗುದೀಪ್ ಅವರಿಗೆ ಚಂದನವನಕ್ಕೆ ಕಾಲಿಡೋದು ಸುಲಭದ ಮಾತಾಗಿರಲಿಲ್ಲ.…
ಬೆಂಗಳೂರು :- ಸಿದ್ದರಾಮಯ್ಯರಂತಹ ನಾಯಕರನ್ನು ಬೇಡ ಅನ್ನಲು ಸಾಧ್ಯನಾ ಎಂದು ಮಹದೇವಪ್ಪ ಹೇಳಿದ್ದಾರೆ. https://ainlivenews.com/kpcc-leader-mourns-the-passing-of-senior-lawyer-andanimat/ ಈ ಸಂಬಂಧ ಮಾತನಾಡಿದ ಅವರು, ಸಿದ್ದರಾಮಯ್ಯರಂತ ಮಾಸ್ ಲೀಡರ್ ಸಕ್ರಿಯ ರಾಜಕಾರಣದಲ್ಲಿ ಇರಬೇಕು. ಸಿದ್ದರಾಮಯ್ಯ ಮಾಸ್ ಲೀಡರ್. ಅಂತಹ ಮಾಸ್ ಲೀಡರ್‌ನ ಯಾರಾದರು ಬೇಡ ಅಂತಾರೆ, ಯಾವುದಾದರು ಪಕ್ಷ ಬೇಡ ಅನ್ನುತ್ತಾ ಎಂದರು. ಸಿದ್ದರಾಮಯ್ಯ ಅವರು ಆರೋಗ್ಯವಾಗಿರುವವರೆಗೆ ಫಿಟ್ ಆಗಿರುವವರೆಗೆ ಸಕ್ರಿಯ ರಾಜಕಾರಣದಲ್ಲಿ ಚುನಾವಣಾ ರಾಜಕಾರಣದಲ್ಲಿ ಇರಬೇಕು. ಪಾರ್ಟಿ ದೃಷ್ಟಿಯಿಂದ, ರಾಜ್ಯದ ದೃಷ್ಟಿಯಿಂದ ರಾಷ್ಟ್ರದ ದೃಷ್ಟಿಯಿಂದ ಸಿದ್ದರಾಮಯ್ಯ ಸಕ್ರಿಯ ರಾಜಕಾರಣದಲ್ಲಿ ಇರಬೇಕು. ಅನಿವಾರ್ಯ ಅಂತ ಹೇಳಲ್ಲ. ನಾನೇ ಆಗಲಿ ಯಾರೇ ಆಗಲಿ ಅನಿವಾರ್ಯ ಅಲ್ಲ. ಸಿದ್ದರಾಮಯ್ಯರಂತ ಮಾಸ್ ಲೀಡರ್ ಸಕ್ರಿಯವಾಗಿ ಇರಬೇಕು. ಸಿದ್ದರಾಮಯ್ಯ ಮಾಸ್ ಲೀಡರ್. ಎಲ್ಲಾ ಆಯಾಮದಲ್ಲೂ ನಾಯಕತ್ವ ಅಗತ್ಯವಿದೆ. ಒನ್ ಮ್ಯಾನ್ ಶೋ ಆಗಲ್ವಲ್ಲ. ನಾವೆಲ್ಲರೂ ಅವರ ಜೊತೆ ಸೇರಬೇಕು. ಹೊಸನಾಯಕತ್ವ ಬರುವವರೆಗೆ ಸಿದ್ದರಾಮಯ್ಯ ಇರಬೇಕು ಎಂದು ಹೇಳಿದರು.
ಹುಬ್ಬಳ್ಳಿ: ಉತ್ತರ ಕರ್ನಾಟಕದ ಹಿರಿಯ ನ್ಯಾಯವಾದಿಗಳು, ಹಾಗೂ ಹುಬ್ಬಳ್ಳಿಯ ಖ್ಯಾತ ಹಿರಿಯ ವಕೀಲರಾದ ಜಿ. ಆರ್ .ಅಂದಾನಿಮಠ ಅವರ ನಿಧನಕ್ಕೆ ಕೆಪಿಸಿಸಿ(ಐ) ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷರಾದ ಅಲ್ ಹಾಜ್ ಸಿ ಎಸ್ ಮೆಹಬೂಬ್ ಬಾಷಾರವರು ತೀವ್ರ ಸಂತಾಪವನ್ನು ಸೂಚಿಸಿದ್ದಾರೆ. https://ainlivenews.com/a-leader-like-siddaramaiah-is-indispensable-for-the-country-compliment-mla-ganesh/ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಕುಟುಂಬದವರು ಹಾಗೂ ಹಿತೈಷಿಗಳಿಗೆ ಅವರ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಬೆಂಗಳೂರು:- ಸಿದ್ದರಾಮಯ್ಯರಂತಹ ನಾಯಕ ದೇಶಕ್ಕೆ ಅನಿವಾರ್ಯ ಎಂದು ಕಂಪ್ಲಿ ಶಾಸಕ ಗಣೇಶ್ ಹೇಳಿದ್ದಾರೆ. https://ainlivenews.com/horrific-accident-a-man-from-raichur-who-was-returning-from-the-kumbh-mela-died/ ಈ ಸಂಬಂಧ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜ್ಯಕ್ಕಷ್ಟೇ ಅಲ್ಲ ದೇಶಕ್ಕೆ ಅನಿವಾರ್ಯ. ಎಲ್ಲಾ 138 ಶಾಸಕರು ಅವರ ಬೆಂಬಲಕ್ಕಿದ್ದೇವೆ. ಅವರಿರೋದ್ರಿಂದ ಪಾರ್ಟಿಗೆ ಅನುಕೂಲ ಎಂದು ಹೇಳಿದ್ದಾರೆ. ಈ ಬಾರಿಯ ಚುನಾವಣೆಯನ್ನ ನೋಡಿದ್ದೀರ ಅವರು ಒಂದು ರೀತಿ ರೋಲ್ ಮಾಡೆಲ್ ಇದ್ದಂತೆ. ಅವರಿಂದಾನೇ ಐದಕ್ಕೆ ಐದು ನಮ್ಮ ಭಾಗದಲ್ಲಿ ಸೀಟು ಗೆದ್ದಿದ್ದೇವೆ. ಐದು ವರ್ಷ ಅವರೇ ಸಿಎಂ ಆಗ್ಬೇಕು ಎಂಬುದನ್ನ ಹೈಕಮಾಂಡ್ ಹೇಳಿದ್ರೆ 5 ವರ್ಷ ಮುಂದುವರಿಯುತ್ತಾರೆ. ಅವರೇ ಸಿಎಂ ಸ್ಥಾನದಲ್ಲಿ ಮುಂದುವರಿದರೆ ಒಳ್ಳೆಯದು ಎಂದು ನುಡಿದಿದ್ದಾರೆ.
ರಾಯಚೂರು:- ಕುಂಭಮೇಳಕ್ಕೆ ಹೋಗಿದ್ದ ರಾಯಚೂರಿನ ವ್ಯಕ್ತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. https://ainlivenews.com/there-will-be-no-current-in-these-areas-of-bengaluru-tomorrow-is-this-your-area/ 48 ವರ್ಷದ ಮಹಾದೇವ ವಾಲೇಕರ್. ಮಧ್ಯಪ್ರದೇಶದ ಮೇಹೂರ್ ಬಳಿ ಕಾರು ಇವರಿಗೆ ಡಿಕ್ಕಿ ಹೊಡೆದಿದ್ದರಿಂದ ಸಾವನ್ನಪ್ಪಿದ್ದಾರೆ. ರಾಯಚೂರು ತಾಲೂಕಿನ ಚಂದ್ರಬಂಡಾ ಗ್ರಾಮದ ನಿವಾಸಿಯಾಗಿದ್ದ ಮಹಾದೇವ ಕುಟುಂಬ ಸ್ನೇಹಿತರೊಂದಿಗೆ ಪ್ರಯಾಗ್‌ರಾಜ್ ಕುಂಭಮೇಳದಿಂದ ವಾಪಸ್ ಊರು ಕಡೆ ಬರುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಮಹಾದೇವ ವಾಲೇಕರ್ ಅವರು ಪ್ರಯಾಣಿಸುತ್ತಿದ್ದ ಕಾರು ರಸ್ತೆ ಬದಿ ನಿಂತಿತ್ತು. ಕಾರಿನಲ್ಲಿದ್ದವರು ಕೆಳಗಡೆ ಇಳಿದಿದ್ದರು. ಈ ವೇಳೆ ರಸ್ತೆ ಬದಿ ನಿಂತಿದ್ದ ಮಹಾದೇವ ಮೇಲೆ ಹೈದರಾಬಾದ್ ಮೂಲದ ಕಾರು ಹರಿದಿದೆ.
ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಾಳೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. https://ainlivenews.com/congress-will-not-come-to-power-in-karnataka-prakash-raj/ ದೊಡ್ಡನೆಕ್ಕುಂಡಿ ರೈಲ್ವೇ ಬ್ರಿಡ್ಜ್, ಡಬ್ಲುಟಿಸಿ ಬಾಗಮನೆ ಯುಟಿಲಿಟಿ ಬ್ಲಾಕ್, ಡಬ್ಲುಟಿಸಿ ಬಾಗಮನೆ, ರಿಯೋ ಆಫೀಸ್ ಬ್ಲಾಕ್ ಪೂರ್ವ ಪಾರ್ಕ್ ವಿಲ್ಲಾಸ್, ಶಿವಗಂಗಾ, ಲೇಔಟ್, ಅನುಗ್ರಹ ಮೂನ್ ಸ್ಟೋನ್ ಆಫೀಸ್ ಬಿಲ್ಡಿಂಗ್, ಬಾಗಮನೆ, ಬಾಗಮನೆ ಎಮರಾಲ್ಡ್ ಬಿಲ್ಡಿಂಗ್, ಬಾಗಮನೆ ಅಕ್ವಾ, ಮರಿನ್ ಪೆರಿಡಾಟ್ ಬಿಲ್ಡಿಂಗ್, ವೆಂಕಟೇಶ್ವರನಗರ, ವೆಂಕಟೇಶ್ವರಪುರ ಲೇಔಟ್, ಚಿನ್ನಪ್ಪ ಲೇಔಟ್, ಔಟರ್ ರಿಂಗ್, ರಾಮಕೃಷ್ಣ ರೆಡ್ಡಿ ವೃತ್ತ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.