ಉತ್ತರ ಕನ್ನಡ: ಅಯ್ಯಪ್ಪ ಸ್ವಾಮಿ ಭಕ್ತರ ಮೇಲೆ ಮದ್ಯ ಸೇವಿಸಿ ಕಾರು ಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರೋಷನ್ ಫರ್ನಾಂಡಿಸ್ ವಿರುದ್ಧ FIR ದಾಖಲಾಗಿದೆ. https://ainlivenews.com/bollywood-actor-saif-ali-khan-stabbed-hospitalized/ ದ್ದಾಪುರದ ರವೀಂದ್ರ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜಾತ್ರೆಗೆ ಮಂಗಳವಾರ ರಾತ್ರಿ ಬಂದಿದ್ದ ಭಕ್ತರ ಮೇಲೆ ಬೇಕಾಬಿಟ್ಟಿಯಾಗಿ ರೋಷನ್ ಕಾರು ಚಲಾಯಿಸಿದ್ದನು. ಈ ವೇಳೆ ಯುವತಿಯೊಬ್ಬರು ಸಾವನ್ನಪ್ಪಿದ್ದು, ಎಂಟು ಜನರು ಗಾಯಗೊಂಡಿದ್ದರು. ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯೇ ಈತ ಮನೆ ಹೊಂದ್ದಾನೆ. ಇಸ್ರೇಲ್‌ನಲ್ಲಿ ಉದ್ಯೋಗಮಾಡಿಕೊಂಡಿದ್ದ ಈತ ಮರಳಿ ಸಿದ್ದಾಪುರಕ್ಕೆ ಬಂದಿದ್ದ. ಕೈಯಲ್ಲಿ ಏನು ಕೆಲಸವಿಲ್ಲದಿದ್ದರೂ ಬಿಂದಾಸ್ ಆಗಿ ಖರ್ಚು ಮಾಡಿಕೊಂಡು ಮದ್ಯವೆಸನಿಯಾಗಿದ್ದ. ಕಳೆದ ಎರಡು ದಿನದ ಹಿಂದೆ ಇದೇ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಭಜನೆಯಿಂದ ಕೋಪಗೊಂಡು ಗಲಾಟೆ ಮಾಡಿದ್ದ ಎಂದು ಕೆಲವರು ಹೇಳಿದ್ದಾರೆ.
Author: AIN Author
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದುಷ್ಕರ್ಮಿಗಳು ಚಾಕು ಇರಿದಿದ್ದು, ಸದ್ಯ ಅವರನ್ನು ಮುಂಬೈ ನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯರಾತ್ರಿ ಸುಮಾರು 2.30 ಕ್ಕೆ ಬಾಂದ್ರಾದಲ್ಲಿರುವ ಅವರ ಮನೆಯಲ್ಲಿ ನಡೆದಿದೆ. ದರೋಡೆ ನಡೆಸಲು ಬಂದವರಿಂದ ಈ ಕೃತ್ಯ ನಡೆದು ಬಂದಿದೆ ಎಂದು ತಿಳಿದು ಬಂದಿದೆ. https://ainlivenews.com/flower-show-at-lal-bagh-no-parking-on-these-roads/ ಸೈಫ್ ಅಲಿ ಖಾನ್ ಅವರು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ಕುಟುಂಬದವರ ಜೊತೆ ಮಲಗಿದ್ದರು. ಇಂದು ಮುಂಜಾನೆ 2.30ರ ವೇಳೆಗೆ ಕಳ್ಳರು ಮನೆ ಒಳಗೆ ನುಗ್ಗಿದ್ದಾರೆ. ಈ ವೇಳೆ ಎಲ್ಲರಿಗೂ ಎಚ್ಚರ ಆಗಿದೆ. ಆಗ ಸೈಫ್ ಅವರು ಕಳ್ಳರನ್ನು ತಡೆಯಲು ಹೋಗಿದ್ದು, ಈ ವೇಳೆ ಕಳ್ಳರು ಹಲ್ಲೆ ಮಾಡಿದ್ದಾರೆ. ತಕ್ಷಣ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸದ್ಯ ಕಳ್ಳರನ್ನು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ವಿಶೇಷ ಪೊಲೀಸರ ತಂಡ ರಚನೆ ಆಗಿದೆ. ಮನೆ ಹಾಗೂ ಸುತ್ತಮುತ್ತ ಇರುವ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಮಾಡಲಾಗುತ್ತಿದೆ. ಸದ್ಯ ಸೈಫ್…
ಬೆಂಗಳೂರು: ಗಣರಾಜ್ಯೋತ್ಸವ ಪ್ರಯುಕ್ತ ಸಸ್ಯೋದ್ಯಾನ ಲಾಲ್ ಬಾಗ್ ನಲ್ಲಿ ಪ್ರತೀ ವರ್ಷ ನಡೆಯುವ ಫಲಪುಷ್ಪ ಪ್ರದರ್ಶನ ಇಂದಿನಿಂದ ಆರಂಭವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಪ್ರಮುಖ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧ ಮಾಡಿ ಸಂಚಾರಿ ಪೊಲೀಸರಿಂದ ಆದೇಶ ಹೊರಡಿಸಲಾಗಿದೆ. https://ainlivenews.com/a-man-was-accidentally-shot-dead-in-front-of-a-wine-shop/ ಇಂದಿನಿಂದ ಫ್ಲವರ್ ಶೋ ನಡೆಯಲಿದ್ದು, ಲಕ್ಷಾಂತರ ಜನರು ಭೇಟಿ ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಬರುವ ಜನರಿಗೆ ವಾಹನ ನಿಲುಗಡೆಗೆ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ. ಸಾರ್ವಜನಿಕರ ವಾಹನಗಳ ನಿಲುಗಡೆಗೆ ಎಲ್ಲೆಲ್ಲಿ ಅವಕಾಶ? ಬೆಂಗಳೂರು ಸಂಚಾರ ಪೊಲೀಸರ ಮಾರ್ಗಸೂಚಿ ಪ್ರಕಾರ, ಸಾರ್ವಜನಿಕರ ದ್ವಿಚಕ್ರ ವಾಹನಗಳ ನಿಲುಗಡೆಗೆ ಡಾ.ಮರಿಗೌಡ ರಸ್ತೆ, ಅಲ್ ಅಮೀನ್ ಕಾಲೇಜ್ ಆವರಣದಲ್ಲಿ ಅವಕಾಶ ನೀಡಲಾಗಿದೆ. ಕೆ.ಹೆಚ್.ರಸ್ತೆ, ಶಾಂತಿನಗರ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದ ಬಳಿ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ. ಡಾ.ಮರಿಗೌಡ ರಸ್ತೆ-ಹಾಪ್ ಕಾಮ್ಸ್ನಲ್ಲಿ ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ. ಜೆ.ಸಿ. ರಸ್ತೆ ಕಾರ್ಪೋರೇಷನ್ ಪಾರ್ಕಿಂಗ್ ಸ್ಥಳದಲ್ಲಿ ದ್ವಿ ಚಕ್ರ…
ಮಡಿಕೇರಿ: ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ನಡೆದಿದೆ. ಪೊನ್ನಚೆಟ್ಟಿರ ಮಿತ್ರ ಚಂಗಪ್ಪ ಸಾವಿಗೀಡಾದ ವ್ಯಕ್ತಿ. ಬಂದೂಕು ಕೆಳಕ್ಕೆ ಬಿದ್ದು ಗುಂಡು ಹಾರಿರುವ ಶಂಕೆ ವ್ಯಕ್ತವಾಗಿದೆ. https://ainlivenews.com/former-legislative-council-member-patel-shivaram-passed-away/ ಮಧ್ಯರಾತ್ರಿ 12 ಗಂಣಟೆಗೆ ಚೇರಂಬಾಣೆ ಪಟ್ಟಣದಲ್ಲಿ ವೈನ್ ಶಾಪ್ ಎದುರಿನಲ್ಲೇ ಈ ದುರ್ಘಟನೆ ಸಂಬವಿಸಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಆಪ್ತರಾಗಿದ್ದ ಪಟೇಲ್ ಶಿವರಾಂ ವಿಧಿವಶರಾಗಿದ್ದಾರೆ. https://ainlivenews.com/younger-brother-who-was-sending-obscene-messages-to-his-sister-through-instagram-gave-dharmadetu/ ಹಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. 2010-2016 ರವರೆಗೆ ವಿಧಾನ ಪರಿಷತ್ ಸದಸ್ಯರಾಗಿ ಅವರು ಸೇವೆಸಲ್ಲಿಸಿದ್ದರು. ಅಲ್ಲದೇ ಹೆಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ, ನಿರ್ದೇಶಕ, ಹಾಸನ ಹಾಲು ಒಕ್ಕೂಟದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಅವರ ಕುಟುಂಬಕ್ಕೆ ಪಟೇಲ್ ಆಪ್ತರಾಗಿದ್ದರು. ಈ ಮೂಲಕ ಹಾಸನ ಜಿಲ್ಲೆಯ ಪ್ರಭಾವಿ ಜೆಡಿಎಸ್ ಮುಖಂಡರಾಗಿದ್ದರು. ಸುಮಾರು ನಾಲ್ಕು ದಶಕಗಳಿಂದ ಜೆಡಿಎಸ್‌ನಲ್ಲಿ ಸಕ್ರಿಯರಾಗಿದ್ದರು. ನಗರದ ಹೌಸಿಂಗ್ ಬೋರ್ಡ್ ನಿವಾಸದಲ್ಲಿ ಅವರು ನಿಧನರಾಗಿದ್ದಾರೆ.
ನೆಲಮಂಗಲ: ತಂಗಿಗೆ ಅಶ್ಲೀಲ ಮೆಸೇಜ್ ಕಳುಹಿಸ್ತಿದ್ದ ಯುವಕನಿಗೆ ಅಣ್ಣ ಧರ್ಮದೇಟು ಕೊಟ್ಟಿರುವ ಘಟನೆ ನೆಲಮಂಗಲ ತಾಲೂಕಿನ ಕೆಂಪಲಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸತೀಶ್ಗೆ ಯುವತಿ ಅಣ್ಣ ರಮೇಶ್ನಿಂದ ಹಲ್ಲೆ ಮಾಡಲಾಗಿದೆ. https://ainlivenews.com/men-do-not-give-up-your-weakness-in-front-of-women-do-you-know-why/ ಸತೀಶ್ ಇನ್ಸ್ಟಾಗ್ರಾಂನಲ್ಲಿ ಯುವತಿಗೆ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ. ಯುವತಿ ಮೊಬೈಲ್ನಿಂದ ಲೊಕೇಷನ್ ಹಾಕಿದ್ದ ಅಣ್ಣ ರಮೇಶ್, ಕೆಂಪಲಿಂಗನಹಳ್ಳಿ ಬಂದಾಗ ಏಕಾಏಕಿ ಮುಖಕ್ಕೆ ಗುದ್ದಿ ತೀವ್ರ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಸತೀಶ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಬಂಧವೆಂದರೆ ಅಲ್ಲಿ ನಂಬಿಕೆ, ವಿಶ್ವಾಸ, ಗೌರವ ಮತ್ತು ಪ್ರೀತಿ ಇರಲೇಬೇಕು. ಇವೆಲ್ಲವೂ ಇಲ್ಲವೆಂ ದಾದರೆ ಆಗ ಆ ಸಂಬಂಧವು ಹೆಚ್ಚು ಕಾಲ ಬಾಳಿಕೆ ಬರದು. ದಂಪತಿಯು ತಮ್ಮ ಬಾಂಧ ವ್ಯವನ್ನು ಬಲಪಡಿಸುವ ಸಲುವಾಗಿ ತುಂಬಾ ಶ್ರಮ ಪಡುವರು. https://ainlivenews.com/the-leopard-that-has-not-been-found-at-last-operation-halted-in-mysore-infosys-premises/ ಆದರೂ ಕೆಲವೊಂದು ಸಂಬಂಧಗಳಲ್ಲಿ ಪ್ರೀತಿಗಿಂತ ಹೆಚ್ಚು ಜಗಳವೇ ಆಗುತ್ತಾ ಇರುತ್ತದೆ. ಜಗಳ ಕಡಿಮೆ ಮಾಡಿ, ಸಂಗಾತಿ ಜತೆಗಿನ ಸಂಬಂಧವನ್ನು ಬಲಪಡಿಸಬೇಕಾದರೆ ಆಗ ಸಂವಹನ ಹಾಗೂ ಅನ್ಯೋ ನ್ಯತೆಯು ಅತೀ ಮುಖ್ಯ. ಆರೋಗ್ಯಕಾರಿ ಸಂಬಂಧವನ್ನು ಉಳಿಸಲು ಕೆಲವೊಂದು ಸೂತ್ರಗಳನ್ನು ತಿಳಿದುಕೊಂಡರೆ ಒಳ್ಳೆಯದು. ಯಾವುದೇ ಸಂಬಂಧವು ಶಾಶ್ವತವಾಗಿ ಉಳಿಯಲು ಮತ್ತು ಸಂತೋಷವಾಗಿರಲು, ನೀವು ಚಾಣಕ್ಯ ಸೂಚಿಸಿದ ಕೆಲವು ಅಭ್ಯಾಸಗಳನ್ನು ಅನುಸರಿಸಬೇಕು. ಸಂಬಂಧವನ್ನು ಉಳಿಸಿಕೊಳ್ಳುವ ಅಭ್ಯಾಸಗಳು ಯಾವವು ಎಂದು ತಿಳಿಯೋಣ ಬನ್ನಿ. ನಿಮ್ಮ ದೌರ್ಬಲ್ಯಗಳ ಕುರಿತು ನಿಮ್ಮ ಸಂಗಾತಿಗೆ ಎಂದಿಗೂ ಹೇಳಬೇಡಿ ಎಂದಿದ್ದಾರೆ ಚಾಣಕ್ಯರು. ಏಕೆಂದರೆ ಆಕೆ ಅದನ್ನು ನಿಮ್ಮ ವಿರುದ್ಧ ನಿಮ್ಮ ದೌರ್ಬಲ್ಯವನ್ನು ಸಂದರ್ಭಕ್ಕೆ ತಕ್ಕಂತೆ ಬಳಸಬಹುದು. ಅದು ಸಂಸಾರದಲ್ಲಿ ವ್ಯತಿರಿಕ್ತ ಪರಿಣಾಮವನ್ನು ಕೂಡ…
ಮೈಸೂರು:- ಮೈಸೂರು ಇನ್ಫೋಸಿಸ್ ಆವರಣದಲ್ಲಿ ಕೊನೆಗೂ ಸಿಗದ ಚಿರತೆ ಸಿಗದ ಕಾರಣ 16 ದಿನಗಳ ಕಾರ್ಯಾಚರಣೆ ಸ್ಥಗಿತ ಮಾಡಲಾಗಿದೆ. https://ainlivenews.com/rain-news-rain-forecast-today-in-6-districts-of-karnataka/ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ನ ಆವರಣದಲ್ಲಿ ಡಿಸೆಂಬರ್ 31 ರಂದು ಚಿರತೆ ಕಾಣಿಸಿಕೊಂಡು ಸಂಸ್ಥೆಯ ಎಲ್ಲ ಸಿಬ್ಬಂದಿಯಲ್ಲಿ ಆತಂಕ ಹುಟ್ಟಿಸಿತ್ತು. ಚಿರತೆಯ ಓಡಾಟವನ್ನು ಸಿಸಿಟಿವಿಯಲ್ಲಿ ಕಂಡ ಸಿಬ್ಬಂದಿ ಹೌಹಾರಿದ್ದರು. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಮೈಸೂರಿನಲ್ಲಿ ಇನ್ಫೋಸಿಸ್ ಕ್ಯಾಂಪಸ್ ಆವರಣ ಸುಮಾರು 300 ಎಕರೆಯಷ್ಟಿದೆ. ಇನ್ಫೋಸಿಸ್ನಲ್ಲಿ ಕೇವಲ ಕಟ್ಟಡಗಳು ಮಾತ್ರವಲ್ಲ ಖಾಲಿ ಪ್ರದೇಶ, ನೀರಿನ ಹೊಂಡಗಳು ಸಹ ಇವೆ. ಹೀಗಾಗಿ, ಇಲ್ಲಿ ಚಿರತೆ ಹುಡುಕುವುದು ಅಷ್ಟು ಸುಲಭವಾಗಿರಲಿಲ್ಲ. ಅದಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬರೋಬ್ಬರಿ 70 ಜನರ ತಂಡ ರಚಿಸಿದ್ದರು. ಇನ್ಫೋಸಿಸ್ನ ಪ್ರತಿ ಮೂಲೆ ಮೂಲೆಯಲ್ಲೂ ಚಿರತೆಗಾಗಿ ಹುಡುಕಾಟ ನಡೆಸಿತ್ತು. ಟ್ರಾಪ್ ಕ್ಯಾಮೆರಾ, ಡ್ರೋನ್ ಕ್ಯಾಮೆರಾ ಇನ್ಫೋಸಿಸ್ಆವರಣದ ಸಿಸಿ ಕ್ಯಾಮರಾ ಸೇರಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚಿರತೆ ಸೆರೆಗೆ ತಂಡ ಮುಂದಾಗಿತ್ತು. ಚಿರತೆಯ ಹೆಜ್ಜೆ ಗುರುತುಗಳು ಸಹ ಅರಣ್ಯ ಇಲಾಖೆಯವರಿಗೆ…
ಬೆಂಗಳೂರು:- ಕರ್ನಾಟಕದ 6 ಜಿಲ್ಲೆಗಳಲ್ಲಿ ಇಂದು ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. https://ainlivenews.com/listen-here-people-watch-this-story-before-wearing-new-clothes/ ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗದಲ್ಲಿ ಒಣಹವೆ ಇರಲಿದೆ. ಬೆಳಗಾವಿಯಲ್ಲಿ 29.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೀದರ್ನಲ್ಲಿ 29.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ವಿಜಯಪುರದಲ್ಲಿ 30.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬಾಗಲಕೋಟೆಯಲ್ಲಿ 32.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಹಿಂದೂ ಸಂಪ್ರದಾಯದ ಪ್ರಕಾರ, ಸಾಮಾನ್ಯವಾಗಿ ಶುಭ ಕಾರ್ಯಗಳು, ಹಬ್ಬ-ಹರಿದಿನಗಳಲ್ಲಿ ಹೊಸ ಬಟ್ಟೆ ಧರಿಸೋ ಪದ್ಧತಿ ಇದೆ. ಯಾಕಂದ್ರೆ ಹೊಸ ಬಟ್ಟೆಗಳು ಸದಾ ಶುಭವನ್ನುಂಟು ಮಾಡುತ್ತವೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಜನರು ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಸುಂದರವಾದ ಮತ್ತು ಸೊಗಸಾದ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ. https://ainlivenews.com/power-cut-current-cut-in-these-areas-of-bangalore-today/ ಹೊಸ ಬಟ್ಟೆಗಳನ್ನುಧರಿಸುವ ಮುನ್ನ ತೊಳೆಯಬೇಕೇ ಅಥವಾ ಹೊಸದಾಗಿರುವುದರಿಂದ ಹಾಗೆಯೇ ಧರಿಸಬಹುದಾ ಎಂಬುವುದರ ಬಗ್ಗೆ ಸಾಕಷ್ಟು ಮಂದಿಗೆ ಗೊಂದಲವಿದೆ. ನಿಮಗೂ ಸಹ ಇದೆ ಪ್ರಶ್ನೆಗಳು ಕಾಡುತ್ತಿದ್ದರೆ, ಇದಕ್ಕೆ ಉತ್ತರ ಹೊಸ ಬಟ್ಟೆಗಳನ್ನು ತೊಳೆದು ಧರಿಸುವುದೇ ಉತ್ತಮ ಎಂದು ತಜ್ಞರು ಹೇಳುತ್ತಾರೆ ಆರೋಗ್ಯ ಮತ್ತು ಸುರಕ್ಷತೆಗಾಗಿ ಹೊಸ ಬಟ್ಟೆಗಳನ್ನು ಕಡ್ಡಾಯವಾಗಿ ತೊಳೆದು ಧರಿಸುವುದು ಉತ್ತಮ. ಏಕೆಂದರೆ ಹೊಸ ಬಟ್ಟೆಗಳನ್ನು ವಿವಿಧ ರಾಸಾಯನಿಕಗಳನ್ನು ಬಳಸಿ ತಯಾರಿಸಲಾಗಿರುತ್ತದೆ. ಬಣ್ಣ, ಸುಕ್ಕು ತಡೆಗಟ್ಟುವಿಕೆ ಮತ್ತು ಸ್ಟೇನ್ ತಡೆಗಟ್ಟುವಿಕೆಗಾಗಿ ವಿಶೇಷ ರಾಸಾಯನಿಕಗಳನ್ನು ಬಳಸಲಾಗಿರುತ್ತದೆ. ಹಾಗಾಗಿ ಅವುಗಳನ್ನು ದೀರ್ಘಕಾಲದವರೆಗೆ ಚರ್ಮದ ಸಂಪರ್ಕದಲ್ಲಿ ಇಡುವುದು ಒಳ್ಳೆಯದಲ್ಲ. ಕೆಲವು ವಿಧದ ಬಣ್ಣಗಳು ಬಟ್ಟೆಗಳಿಗೆ ಬಲವಾಗಿ ಅಂಟಿಕೊಳ್ಳುವುದಿಲ್ಲ. ಇವು…