ಕೊಪ್ಪಳ:- ತೋಳವೊಂದು ಐದು ಮರಿಗಳಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಬಂಕಾಪುರ ತೋಳಧಾಮದಲ್ಲಿ ಜರುಗಿದೆ. https://ainlivenews.com/high-court-to-create-a-new-guidelines-for-change-of-childrens-name/ ಈ ಬಗ್ಗೆ ಈಶ್ವರ್ ಖಂಡ್ರೆ ಮಾತನಾಡಿ, ಸಂರಕ್ಷಿತ ತೋಳಧಾಮದಲ್ಲಿ ಅಳಿವಿನಂಚಿನಲ್ಲಿರುವ ಬೂದುತೋಳದ ಸಂತತಿಯಲ್ಲಿ ಹೆಚ್ಚಳವಾಗುತ್ತಿದೆ ಎಂದರು. ಗಂಗಾವತಿ ಪ್ರಾದೇಶಿಕ ವಲಯದ ವ್ಯಾಪ್ತಿಯಲ್ಲಿರುವ ಸುಮಾರು 332 ಹೆಕ್ಟರ್ ಬಂಕಾಪುರ ತೋಳ ಧಾಮದ ಸಂರಕ್ಷಣೆಗೆ ಅರಣ್ಯ ಇಲಾಖೆ ಕಾಳಜಿ ವಹಿಸಿದೆ. ಇದು ವನ್ಯಜೀವಿಗಳಿಗೆ ಸುರಕ್ಷಿತ ತಾಣವಾಗಿದೆ. ತೋಳಗಳ ಸಂತತಿಯಲ್ಲಿ ಹೆಚ್ಚಳಕ್ಕೂ ಇದೆ ಕಾರಣವಾಗಿದೆ ಎಂದರು. ಕಳೆದ ತಿಂಗಳು ಇದೇ ಕುರುಚಲು ಕಾಡಿನಲ್ಲಿ ತೋಳವೊಂದು 8 ಮರಿಗಳಿಗೆ ಜನ್ಮ ನೀಡಿತ್ತು. ಈಗ ಮತ್ತೊಂದು ತೋಳ ಐದು ಮರಿಗೆ ಜನ್ಮಕೊಟ್ಟಿದೆ. ನೈಸರ್ಗಿಕ ಗುಹೆಗಳು, ಬೆಟ್ಟ ಗುಡ್ಡಗಳನ್ನೂ ಹೊಂದಿರುವ ಈ ಧಾಮದಲ್ಲಿ, ತೋಳ, ಚಿರತೆ, ನವಿಲು, ಕತ್ತೆಕಿರುಬ, ನರಿ, ಮೊಲ, ಮುಳ್ಳುಹಂದಿ ಮೊದಲಾದ ಹಲವು ವನ್ಯಜೀವಿಗಳಿವೆ. ಕಳ್ಳಬೇಟೆ ತಡೆಗೂ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಮಾಹಿತಿ ನೀಡಿದರು.
Author: AIN Author
ಬೆಂಗಳೂರು:- ಕರ್ನಾಟಕ ಹೈಕೋರ್ಟ್, ಮಕ್ಕಳ ಹೆಸರು ಬದಲಾವಣೆಗೆ ಹೊಸ ಮಾರ್ಗಸೂಚಿ ರೂಪಿಸಿದೆ. ನ್ಯಾ.ಎನ್.ಎಸ್.ಸಂಜಯ್ ಗೌಡ ಅವರಿದ್ದ ಹೈಕೋರ್ಟ್ ಪೀಠ ಇಂದು ಆದೇಶ ಹೊರಡಿಸಿದೆ. https://ainlivenews.com/unauthorized-head-raised-resorts-crores-of-crores-of-crores-for-state-government/ ಅದ್ರಿತ್ ಭಟ್ ಹೆಸರನ್ನು ಶ್ರೀಜಿತ್ ಭಟ್ ಎಂದು ಬದಲಿಸಲು ಕೋರಲಾಗಿತ್ತು. ಆದರೆ ಉಡುಪಿ ಜನನ ನೋಂದಣಾಧಿಕಾರಿಗಳು ನಿರಾಕರಿಸಿದ ಹಿನ್ನೆಲೆ ರಿಟ್ ಸಲ್ಲಿಕೆ ಮಾಡಲಾಗಿತ್ತು. ಇಂದು ವಿಚಾರಣೆ ಮಾಡಿದ ಹೈಕೋರ್ಟ್, ಮಗುವಿನ ಹೆಸರು ಬದಲಾವಣೆಗೆ ತಂದೆ ತಾಯಿ ಪ್ರಮಾಣಪತ್ರ ಸಲ್ಲಿಸಬೇಕು. ತಂದೆ ತಾಯಿಯ ಗುರುತು ಧೃಡಪಟ್ಟ ನಂತರ ಹೆಸರು ಬದಲಾವಣೆ ಮಾಡಬಹುದಾಗಿದೆ. ಆದರೆ ಹೊಸ ಹೆಸರಿನೊಂದಿಗೆ, ಹಳೆಯ ಹೆಸರೂ ದಾಖಲೆಯಲ್ಲಿರಬೇಕು. ಇದರಿಂದ ದುರುದ್ದೇಶದ ಹೆಸರು ಬದಲಾವಣೆ ತಪ್ಪಿಸಬಹುದಾಗಿದೆ ಎಂದು ತಿಳಿಸಿದೆ. ವಯಸ್ಕರ ಹೆಸರು ಬದಲಾವಣೆಗೂ ಇದೇ ಪದ್ಧತಿ ಅನುಸರಿಸಬಹುದು. ಸರ್ಕಾರ ಸೂಕ್ತ ನಿಯಮ ರೂಪಿಸುವವರೆಗೂ ಈ ನಿರ್ದೇಶನ ಪಾಲಿಸಬೇಕು ಎಂದು ಜನನ ನೋಂದಣಾಧಿಕಾರಿಗಳಿಗೆ ನ್ಯಾ.ಎನ್.ಎಸ್.ಸಂಜಯ್ ಗೌಡ ಸೂಚನೆ ನೀಡಿದ್ದಾರೆ.
ಕೊಪ್ಪಳ:- ಜಿಲ್ಲೆಯಲ್ಲಿ ನಾಯಿ ಕೊಡೆಗಳಂತೆ ರೆಸಾರ್ಟ್ಗಳು ಆರಂಭವಾಗಿದ್ದು, ಬಹುತೇಕ ರೆಸಾರ್ಟ್ಗಳು ಅನಧಿಕೃತವಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಮಾಡುತ್ತೀವೆ. https://ainlivenews.com/power-cut-today-in-bangalore-current-in-these-areas/ ಬಿದಿರಿನಿಂದ ಮಾಡಿರೋ ಹಟ್ ಗಳು, ಇನ್ನೊಂದಡೆ ಪ್ರವಾಸಿಗರನ್ನು ಆಕರ್ಷಿಸುತ್ತಿರೋ ವಿಭಿನ್ನ ಬಗೆಯ ರೆಸ್ಟೋರೆಂಟ್ ಗಳು. ಇಲ್ಲಿ ಟೆಂಟ್ ಹೌಸ್ ಸೇರಿದಂತೆ ಆನಂದದಾಯಕವಾಗಿ ಕಾಲ ಕಳೆಯಲು ಎಸಿ ಕೊಠಡಿಗಳು ಕೂಡ ಸಿಗುತ್ತವೆ. ಈ ದೃಶ್ಯಗಳು ಕಂಡು ಬಂದಿರೋದು ಕೊಪ್ಪಳದಲ್ಲಿ. ತಾಲೂಕಿನ ಬಸ್ಸಾಪುರ, ಗಂಗಾವತಿ ತಾಲೂಕಿನ ಸಾಣಾಪುರ ಸೇರಿದಂತೆ ಸುತ್ತಮುತ್ತಲಿನ ಕೆಲ ಗ್ರಾಮಗಳಲ್ಲಿ ಇದೀಗ ರೆಸಾರ್ಟ್ಗಳ ಹಾವಳಿ ಹೆಚ್ಚಾಗಿದೆ. ಒಂದಕ್ಕಿಂತ ಒಂದು ಭಿನ್ನ ರೆಸಾರ್ಟ್ಗಳು ಆರಂಭವಾಗಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಈ ಭಾಗದಲ್ಲಿ ಇದೀಗ ಆರವತ್ತಕ್ಕೂ ಹೆಚ್ಚು ರೆಸಾರ್ಟ್ ಗಳು ತಲೆ ಎತ್ತಿವೆ. ಈ ಹಿಂದೆ ಜಿಲ್ಲೆಯ ವಿರುಪಾಪುರ ಗಡ್ಡಿಯನ್ನು ಮಿನಿ ಗೋವಾ ಅಂತಲೆ ಕರೆಯಲಾಗುತ್ತಿತ್ತು. ಆದರೆ ಹಂಪಿ ಅಭಿವೃದ್ದಿ ಪ್ರಾಧಿಕಾರದಲ್ಲಿದ್ದಿದ್ದರಿಂದ ಅಲ್ಲಿನ ರೆಸಾರ್ಟ್ ಗಳನ್ನು ತೆರವುಗೊಳಿಸಲಾಗಿತ್ತು. ಇದೀಗ ಹಂಪಿ ಅಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯ ಹೊರಗೆ ರೆಸಾರ್ಟ್…
ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಪವರ್ ಕಟ್ ಇರಲಿದೆ ಬೆಸ್ಕಾಂ ತಿಳಿಸಿದೆ. https://ainlivenews.com/kurubur-shanthakumar-car-accident-hospitalized/ ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಶ್ರೀನಗರ, ಹೊಕೆರೆಹಳ್ಳಿ, ಪಿಇಎಸ್ ಎಂಜಿನಿಯರಿಂಗ್ ಕಾಲೇಜು, ವೀರಭದ್ರನಗರ, ಬ್ಯಾಂಕ್ ಕಾಲೋನಿ, ಹನುಮಂತನಗರ, ಗಿರಿನಗರ, ಸೀತಾ ವೃತ್ತ, ವಿದ್ಯಾಪೀಠ ವೃತ್ತ, ಪ್ರಮೋದ್ ಲೇಔಟ್, ಮುನೇಶ್ವರ ಬ್ಲಾಕ್, ನಾಗೇಂದ್ರ ಬ್ಲಾಕ್, ಬುಲ್ ಟೆಂಪಲ್ ರಸ್ತೆ, ಕತ್ರಿಗುಪ್ಪೆ, ಅವಲಹಳ್ಳಿ, ಸ್ಟರ್ಲಿಂಗ್ ಅಪಾರ್ಟ್‌ಮೆಂಟ್, ಎನ್ ಟಿ ವೈ ಲೇಔಟ್, ತ್ಯಾಗರಾಜನಗರ. ಬಸವನಗುಡಿ, ಬನಶಂಕರಿ 3ನೇ ಹಂತ, ನಿಮ್ಹಾನ್ಸ್, ಕಿದ್ವಾಯ್, ರಾಜೀವ್ ಗಾಂಧಿ, ಸಂಜಯ್ ಗಾಂಧಿ, ಇಂಧಿರಾಗಾಂಧಿ, ಜಯನಗರ-1ನೇ, 2ನೇ, 3ನೇ, 4ನೇ, 9ನೇ ಟಿ ಬ್ಲಾಕ್, ಸೋಮೇಶ್ವರನಗರ, ವಿಲ್ಸನ್ ಗಾರ್ಡನ್. “ಎಲ್ಕೆಟ್ರಾನ್ ಸಿಟಿ ಫೇಸ್ -2, ವೀರಸಂದ್ರ, ದೊಡ್ಡನಾಗಮಂಗಳ, ಟೆಕ್ಮಹಿಂದ್ರ, ಇ.ಹೆಚ್.ಟಿ.ಟಾಟಾ ಬಿ.ಪಿ.ಸೋಲಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ನವದೆಹಲಿ:- ರೈತ ಮುಖಂಡ ಕುರುಬೂರ್ ಶಾಂತಕುಮಾರ್ ಕಾರು ಪಂಜಾಬ್ನ ಪಟಿಯಾಲ ಬಳಿ ಅಪಘಾತವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಡಿವೈಟರ್‌ಗೆ ಡಿಕ್ಕಿ ಹೊಡೆದಿದ್ದು, ಗಾಯಾಳು ಶಾಂತಕುಮಾರ್ ಸೇರಿದಂತೆ ತಮಿಳುನಾಡಿನ ಮತ್ತೊಬ್ಬ ರೈತ ಮುಖಂಡ ಪಾಂಡಿಯನ್ ಎಂಬುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. https://ainlivenews.com/stone-pelting-case-at-udayagiri-police-station-what-instructions-did-cm-siddaramaiah-give-to-the-officers/ ದೆಹಲಿಯ ಕನೋಲಿ ಬಾರ್ಡರ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಸಂಬಂಧಿಸಿದ ಸಭೆಗೆ ಕುರುಬೂರ್ ಶಾಂತಕುಮಾರ್ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಾರು ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ರೋಡ್‌ನ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಕುಳಿತಿದ್ದ ಕುರುಬೂರ್ ಶಾಂತಕುಮಾರ್ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿವೆ
ಬೆಂಗಳೂರು:- ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ಕೇಸ್ ಗೆ ಸಂಬಂಧಿಸಿದಂತೆ ಪೊಲೀಸರ ಬೆನ್ನಿಗೆ ಸಿಎಂ ಸಿದ್ದರಾಮಯ್ಯ ನಿಂತಿದ್ದಾರೆ. https://ainlivenews.com/highest-temperature-recorded-in-silicon-city-bengaluru/ ಸಿಎಂ ಸಿದ್ದರಾಮಯ್ಯನವರೇ ಪೊಲೀಸರ ಬೆನ್ನಿಗೆ ನಿಂತಿದ್ದು, ಘಟನೆಯಲ್ಲಿ ಭಾಗಿಯಾದವರನ್ನು ಮುಲಾಜಿಲ್ಲದೇ ಬಂಧಿಸಿ ಎಲ್ಲರ ಮೇಲೂ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು, ಕಾವೇರಿ ನಿವಾಸದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ಸಭೆಯಲ್ಲಿ ಮೈಸೂರು ಡಿಸಿ, ಎಸ್ಪಿ ಹಾಗೂ ಮೈಸೂರು ಪೊಲೀಸ್ ಆಯುಕ್ತರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಈ ವೇಳೆ ಘಟನೆಯಲ್ಲಿ ಭಾಗಿಯಾದವರನ್ನು ಮುಲಾಜಿಲ್ಲದೇ ಬಂಧಿಸಿ ಎಲ್ಲರ ಮೇಲೂ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ. ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದವರು, ಅದಕ್ಕೆ ಪ್ರಚೋದನೆ ನೀಡಿದ ಎಲ್ಲರನ್ನೂ ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು. ಇದರ ಜೊತೆಗೆ ತಪ್ಪು ಮಾಡದವರಿಗೆ ಕೂಡ ತೊಂದರೆ ಆಗಬಾರದು. ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಬೇಕು. ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನ…
ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. ಮೊದಲ ಬಾರಿಗೆ ಫೆಬ್ರವರಿ ತಿಂಗಳ ಮಧ್ಯದಲ್ಲಿ ಗರಿಷ್ಠ ಉಷ್ಣಾಂಶ 33.5 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. https://ainlivenews.com/great-news-for-the-unemployed-great-job-opportunities-in-the-railways/ ಗುರುವಾರ ತಾಪಮಾನ 33.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ಪೆಬ್ರವರಿ ತಿಂಗಳಲ್ಲಿ ದಾಖಲಾದ ಗರಿಷ್ಠ ತಾಪಮಾನ ಎಂದು ಹವಾಮಾನ ಇಲಾಖೆ ವರದಿ ಮಾಡಿತ್ತು. ಆದರೆ ಇವತ್ತು ಮತ್ತೆ ದಾಖಲೆ ಮುರಿದು, ಬೆಂಗಳೂರು ಉಷ್ಣಾಂಶ 33.5 ಡಿಗ್ರಿಗೆ ತಲುಪಿದೆ. ಸಾಮಾನ್ಯವಾಗಿ ಫೆಬ್ರವರಿ ಅಂತ್ಯದ ವೇಳೆಗೆ ಬೆಂಗಳೂರು ಗರಿಷ್ಠ ಉಷ್ಣಾಂಶ ವಾಡಿಕೆಯಂತೆ 29 ಡಿಗ್ರಿಗೆ ಬರುತ್ತಿತ್ತು. ಇದೀಗ ತಿಂಗಳ ಮಧ್ಯದಲ್ಲೇ ತಾಪಮಾನ 33ಕ್ಕೆ ಡಿಗ್ರಿ ಸೆಲ್ಸಿಯಸ್ ತಲುಪಿದೆ.
ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ರೈಲ್ವೇ ಇಲಾಖೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. https://ainlivenews.com/what-is-bbmps-new-plan-to-curb-the-menace-of-stray-dogs-in-bengaluru/ ಅಭ್ಯರ್ಥಿಗಳು ಫೆಬ್ರವರಿ 22 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಇದರ ನಂತರ ಅರ್ಜಿ ವಿಂಡೋ ಮುಚ್ಚಲ್ಪಡುತ್ತದೆ, ಆದ್ದರಿಂದ ಆಸಕ್ತ ಅಭ್ಯರ್ಥಿಗಳು ಸಾಧ್ಯವಾದಷ್ಟು ಬೇಗ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಧಿಸೂಚನೆಯಲ್ಲಿ ವಿನಂತಿಸಲಾಗಿದೆ. ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 32,438 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಶೈಕ್ಷಣಿಕ ಅರ್ಹತೆ ಈ ನೇಮಕಾತಿಗೆ, ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿ/ಸಂಸ್ಥೆಯಿಂದ 10 ನೇ ತರಗತಿಯಲ್ಲಿ ಮಾತ್ರ ಉತ್ತೀರ್ಣರಾಗಿರಬೇಕು. ಇದಲ್ಲದೆ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೈಲ್ವೆ ಗ್ರೂಪ್ ಡಿ ನೇಮಕಾತಿಯ ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ವಯಸ್ಸಿನ ಮಿತಿ: ಈ ನೇಮಕಾತಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 36 ವರ್ಷಗಳು. ಆದಾಗ್ಯೂ, ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುವುದು. ಜನವರಿ 1, 2025 ರಿಂದ ವಯಸ್ಸನ್ನು ಲೆಕ್ಕಹಾಕಲಾಗುತ್ತದೆ. ಅರ್ಜಿ ಸಲ್ಲಿಸುವುದು ಹೇಗೆ?…
ಬೆಂಗಳೂರು:- ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರೋದು ಗೊತ್ತಿರುವ ವಿಚಾರ. ರಾಜಧಾನಿಯ ಬೀದಿನಾಯಿಗಳಿಗೆ ರೋಗಗಳು ಹರಡದಂತೆ ಕ್ರಮವಹಿಸೋಕೆ ಹೊರಟಿರೋ ಪಾಲಿಕೆ ಬರೋಬ್ಬರಿ 4.98 ಕೋಟಿ ರೂಪಾಯಿ ವೆಚ್ಚದಲ್ಲಿ ಕಂಬೈನ್ಡ್ ವ್ಯಾಕ್ಸಿನ್ ಕೊಡಿಸೋಕೆ ಹೊರಟಿದೆ. ಇತ್ತ ಬೀದಿನಾಯಿಗಳಿಗೆ ಈ ಲಸಿಕೆ ಕೊಡೋಕೆ ಮುಂದಾಗಿದ್ದು ಲಸಿಕೆ ಅಭಿಯಾನಕ್ಕೆ ಇಂದು ಚಾಲನೆ ಸಿಕ್ಕಿದೆ. https://ainlivenews.com/mangas-disease-in-chikmagalur-four-people-in-a-single-day/ ಬೀದಿನಾಯಿಗಳಿಂದ ಹರಡುವ ರೋಗಗಳಿಗೆ ಕಡಿವಾಣ ಹಾಕಲು ಹೊರಟಿರೋ ಪಾಲಿಕೆ ಇದೀಗ ಹೊಸ ಪ್ಲಾನ್ ಜಾರಿ ಮಾಡೋಕೆ ಹೊರಟಿದೆ. ಪಾಲಿಕೆ ವ್ಯಾಪ್ತಿಯ 1.84 ಲಕ್ಷ ಬೀದಿನಾಯಿಗಳಿಗೆ ಕಂಬೈನ್ಡ್ ವ್ಯಾಕ್ಸಿನ್ ನೀಡೋಕೆ ಹೊರಟಿರೋ ಪಾಲಿಕೆ, ಇದಕ್ಕಾಗಿ ಬರೋಬ್ಬರಿ 4.98 ಕೋಟಿ ರೂಪಾಯಿ ಖರ್ಚು ಮಾಡೋಕೆ ಮುಂದಾಗಿದೆ. ಪಾಲಿಕೆ ಇದೀಗ ಬೀದಿನಾಯಿಗಳಿಗೆ ರೋಗ ಹರಡದಂತೆ ನಿಗಾ ಇಡುವುದಕ್ಕೆ ಹೊರಟಿದೆ. ಸದ್ಯ ಬಿಬಿಎಂಪಿಯ ಈ ಹೊಸ ಯೋಜನೆಗೆ ಇಂದು ಚಾಲನೆ ನೀಡಿರುವ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಈ ಪ್ಲಾನ್ ನಿಂದ ನಾಯಿಗಳಿಗೆ ಹರಡುವ ರೋಗ ಹಾಗೂ ನಾಯಿಗಳಿಂದ ಮನುಷ್ಯರಿಗೆ ಹರಡುವ ರೋಗಗಳಿಗೆ ಈ…
ಚಿಕ್ಕಮಗಳೂರು:- ಜಿಲ್ಲೆಯಲ್ಲಿ ಮಂಗನ ಕಾಯಿಲೆ ಉಲ್ಬಣಗೊಂಡಿದೆ. ಒಂದೇ ದಿನ ನಾಲ್ವರಲ್ಲಿ ಮಂಗನ ಕಾಯಿಲೆ ದೃಢ ಪಟ್ಟಿದೆ. https://ainlivenews.com/did-kohli-refuse-to-become-rcb-captain-what-was-the-franchises-calculation/ ಕೊಪ್ಪ ಮತ್ತು ಎನ್ಆರ್ ಪುರ ತಾಲೂಕಿನ ನಾಲ್ವರಲ್ಲಿ ಕೆಎಫ್ಡಿ ದೃಢಪಟ್ಟಿದೆ. ಒಟ್ಟು ಜಿಲ್ಲೆಯಲ್ಲಿ 18 ಜನರಲ್ಲಿ ಕೆಎಫ್ಡಿ ಪತ್ತೆಯಾಗಿದೆ. ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ತೆರೆದು ಚಿಕಿತ್ಸೆ ನೀಡಲಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಮಂಗನ ಕಾಯಿಲೆ ಪತ್ತೆಯಾದ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ಮಾಡಿದ್ದು, ರಕ್ತದ ಮಾದರಿ ಸಂಗ್ರಹಿಸಿದ್ದಾರೆ. ಸದ್ಯ ಕಾಡಿಗೆ ತೆರಳದಂತೆ ಸೂಚನೆ ನೀಡಲಾಗಿದೆ. ಮಳೆಗಾಲ ಕಳೆದು ಇನ್ನೇನು ಚಳಿಗಾಲ ಮುಗಿದು ಬೇಸಿಗೆ ಆರಂಭವಾಗಿದೆ. ಬಿಸಿಲ ಬೇಗೆ ಹೆಚ್ಚಾಗುತ್ತಿದ್ದಂತೆ ಕಾಫಿನಾಡಿಗೆ ಮಹಾಮಾರಿ KFD ಕಾಯಿಲೆ ಸದ್ದಿಲ್ಲದೆ ಎಂಟ್ರಿ ಕೊಟ್ಟಿದೆ. ಇದೀಗ ಈ ಮಾರಣಾಂತಿಕ ರೋಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.