ಹುಬ್ಬಳ್ಳಿ: ಉತ್ತರ ಕರ್ನಾಟಕದ ಹಿರಿಯ ನ್ಯಾಯವಾದಿಗಳು, ಹಾಗೂ ಹುಬ್ಬಳ್ಳಿಯ ಖ್ಯಾತ ಹಿರಿಯ ವಕೀಲರಾದ ಜಿ. ಆರ್ .ಅಂದಾನಿಮಠ ಅವರ ನಿಧನಕ್ಕೆ ಕೆಪಿಸಿಸಿ(ಐ) ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷರಾದ ಅಲ್ ಹಾಜ್ ಸಿ ಎಸ್ ಮೆಹಬೂಬ್ ಬಾಷಾರವರು ತೀವ್ರ ಸಂತಾಪವನ್ನು ಸೂಚಿಸಿದ್ದಾರೆ. https://ainlivenews.com/a-leader-like-siddaramaiah-is-indispensable-for-the-country-compliment-mla-ganesh/ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಕುಟುಂಬದವರು ಹಾಗೂ ಹಿತೈಷಿಗಳಿಗೆ ಅವರ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
Author: AIN Author
ಬೆಂಗಳೂರು:- ಸಿದ್ದರಾಮಯ್ಯರಂತಹ ನಾಯಕ ದೇಶಕ್ಕೆ ಅನಿವಾರ್ಯ ಎಂದು ಕಂಪ್ಲಿ ಶಾಸಕ ಗಣೇಶ್ ಹೇಳಿದ್ದಾರೆ. https://ainlivenews.com/horrific-accident-a-man-from-raichur-who-was-returning-from-the-kumbh-mela-died/ ಈ ಸಂಬಂಧ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜ್ಯಕ್ಕಷ್ಟೇ ಅಲ್ಲ ದೇಶಕ್ಕೆ ಅನಿವಾರ್ಯ. ಎಲ್ಲಾ 138 ಶಾಸಕರು ಅವರ ಬೆಂಬಲಕ್ಕಿದ್ದೇವೆ. ಅವರಿರೋದ್ರಿಂದ ಪಾರ್ಟಿಗೆ ಅನುಕೂಲ ಎಂದು ಹೇಳಿದ್ದಾರೆ. ಈ ಬಾರಿಯ ಚುನಾವಣೆಯನ್ನ ನೋಡಿದ್ದೀರ ಅವರು ಒಂದು ರೀತಿ ರೋಲ್ ಮಾಡೆಲ್ ಇದ್ದಂತೆ. ಅವರಿಂದಾನೇ ಐದಕ್ಕೆ ಐದು ನಮ್ಮ ಭಾಗದಲ್ಲಿ ಸೀಟು ಗೆದ್ದಿದ್ದೇವೆ. ಐದು ವರ್ಷ ಅವರೇ ಸಿಎಂ ಆಗ್ಬೇಕು ಎಂಬುದನ್ನ ಹೈಕಮಾಂಡ್ ಹೇಳಿದ್ರೆ 5 ವರ್ಷ ಮುಂದುವರಿಯುತ್ತಾರೆ. ಅವರೇ ಸಿಎಂ ಸ್ಥಾನದಲ್ಲಿ ಮುಂದುವರಿದರೆ ಒಳ್ಳೆಯದು ಎಂದು ನುಡಿದಿದ್ದಾರೆ.
ರಾಯಚೂರು:- ಕುಂಭಮೇಳಕ್ಕೆ ಹೋಗಿದ್ದ ರಾಯಚೂರಿನ ವ್ಯಕ್ತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. https://ainlivenews.com/there-will-be-no-current-in-these-areas-of-bengaluru-tomorrow-is-this-your-area/ 48 ವರ್ಷದ ಮಹಾದೇವ ವಾಲೇಕರ್. ಮಧ್ಯಪ್ರದೇಶದ ಮೇಹೂರ್ ಬಳಿ ಕಾರು ಇವರಿಗೆ ಡಿಕ್ಕಿ ಹೊಡೆದಿದ್ದರಿಂದ ಸಾವನ್ನಪ್ಪಿದ್ದಾರೆ. ರಾಯಚೂರು ತಾಲೂಕಿನ ಚಂದ್ರಬಂಡಾ ಗ್ರಾಮದ ನಿವಾಸಿಯಾಗಿದ್ದ ಮಹಾದೇವ ಕುಟುಂಬ ಸ್ನೇಹಿತರೊಂದಿಗೆ ಪ್ರಯಾಗ್‌ರಾಜ್ ಕುಂಭಮೇಳದಿಂದ ವಾಪಸ್ ಊರು ಕಡೆ ಬರುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಮಹಾದೇವ ವಾಲೇಕರ್ ಅವರು ಪ್ರಯಾಣಿಸುತ್ತಿದ್ದ ಕಾರು ರಸ್ತೆ ಬದಿ ನಿಂತಿತ್ತು. ಕಾರಿನಲ್ಲಿದ್ದವರು ಕೆಳಗಡೆ ಇಳಿದಿದ್ದರು. ಈ ವೇಳೆ ರಸ್ತೆ ಬದಿ ನಿಂತಿದ್ದ ಮಹಾದೇವ ಮೇಲೆ ಹೈದರಾಬಾದ್ ಮೂಲದ ಕಾರು ಹರಿದಿದೆ.
ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಾಳೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. https://ainlivenews.com/congress-will-not-come-to-power-in-karnataka-prakash-raj/ ದೊಡ್ಡನೆಕ್ಕುಂಡಿ ರೈಲ್ವೇ ಬ್ರಿಡ್ಜ್, ಡಬ್ಲುಟಿಸಿ ಬಾಗಮನೆ ಯುಟಿಲಿಟಿ ಬ್ಲಾಕ್, ಡಬ್ಲುಟಿಸಿ ಬಾಗಮನೆ, ರಿಯೋ ಆಫೀಸ್ ಬ್ಲಾಕ್ ಪೂರ್ವ ಪಾರ್ಕ್ ವಿಲ್ಲಾಸ್, ಶಿವಗಂಗಾ, ಲೇಔಟ್, ಅನುಗ್ರಹ ಮೂನ್ ಸ್ಟೋನ್ ಆಫೀಸ್ ಬಿಲ್ಡಿಂಗ್, ಬಾಗಮನೆ, ಬಾಗಮನೆ ಎಮರಾಲ್ಡ್ ಬಿಲ್ಡಿಂಗ್, ಬಾಗಮನೆ ಅಕ್ವಾ, ಮರಿನ್ ಪೆರಿಡಾಟ್ ಬಿಲ್ಡಿಂಗ್, ವೆಂಕಟೇಶ್ವರನಗರ, ವೆಂಕಟೇಶ್ವರಪುರ ಲೇಔಟ್, ಚಿನ್ನಪ್ಪ ಲೇಔಟ್, ಔಟರ್ ರಿಂಗ್, ರಾಮಕೃಷ್ಣ ರೆಡ್ಡಿ ವೃತ್ತ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ಮಂಗಳೂರು:- ಕರ್ನಾಟಕದಲ್ಲಿ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ. https://ainlivenews.com/the-one-who-got-up-and-died-again-as-soon-as-he-said-have-dinner-at-the-tavern/ ಈ ಸಂಬಂಧ ಮಾತನಾಡಿದ ಅವರು, ಚುನಾವಣೆ ಪ್ರಕ್ರಿಯೆ ಮತ್ತು ರಾಜಕಾರಣದಲ್ಲಿ ವಿರೋಧಪಕ್ಷಗಳು ಗೆಲ್ಲಲ್ಲ, ಆದ್ರೆ ಆಳುವ ಪಕ್ಷಗಳು ಸೋಲುತ್ತೆ. ಕಾಂಗ್ರೆಸ್ ಈಗ ಅಧಿಕಾರದಲ್ಲಿದೆ, ಮುಂದೆ ಸೋಲೋದು ಅವರೇ ಎಂದರು. ನಾವು ಮೊದಲು ಯೋಚನೆ ಮಾಡಬೇಕು. ಚುನಾವಣೆ ಪ್ರಕ್ರಿಯೆ ಮತ್ತು ರಾಜಕಾರಣದಲ್ಲಿ ವಿರೋಧಪಕ್ಷಗಳು ಗೆಲ್ಲಲ್ಲ, ಆದ್ರೆ ಆಳುವ ಪಕ್ಷಗಳು ಸೋಲುತ್ತೆ. ಕಾಂಗ್ರೆಸ್ ಈಗ ಅಧಿಕಾರದಲ್ಲಿದೆ, ಮುಂದೆ ಸೋಲೋದು ಅವರೇ. ಲಾಸ್ ಆಗಿದೆ, ಹಣ ಹೊಂದಿಸಲುಆಗುತ್ತಿಲ್ಲ ಅನ್ನೋದಕ್ಕೆ ಏನ್ ಬಿಸಿನೆಸ್ ಮಾಡ್ತಿದ್ದೀರಾ? ಇದೆಲ್ಲವನ್ನ ಜನ ಗಮನಿಸಬೇಕು, ನಾವು ಎಲ್ಲಿ ತಪ್ಪುತ್ತಿದ್ದೇವೆ ಅನ್ನೋದನ್ನ ಯೋಚಿಸಬೇಕು ಎಂದು ಸಲಹೆ ನೀಡಿದರು. ಒಂದು ಸರ್ಕಾರ ಒಂದು ದೇಶ ನಡೆಯೋದು ಪ್ರಜೆಗಳ ದುಡ್ಡಿಂದ. ಒಂದು ದೇವಸ್ಥಾನ ನಡೆಯೋದು ಪ್ರಜೆಗಳು ಹಾಕಿದ ಹುಂಡಿಯ ಹಣದಿಂದ. ಸರ್ಕಾರದಲ್ಲಿ ಯಾಕೆ ಸಾಲ ಆಗ್ತಿದೆ? ಸಾಲ ಮಾಡಿದ ಹಣ ಏನಾಗ್ತಿದೆ ಇದೆಲ್ಲವನ್ನ ನಾವು ಗಮನಿಸಬೇಕು, ಪ್ರಶ್ನಿಸಬೇಕು ಎಂದು ಹೇಳಿದರು. ಇನ್ನೂ…
ಹಾವೇರಿ:- ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ಸತ್ತನೆಂದು ಆಸ್ಪತ್ರೆಯಿಂದ ಊರಿಗೆ ಕರೆತರುವಾಗ ಬದುಕಿದ್ದ ವ್ಯಕ್ತಿ, ವಾರದ ನಂತರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಜರುಗಿದೆ. https://ainlivenews.com/metro-fare-hike-union-minister-says-state-government-is-responsible-for-this/ ಬಿಷ್ಟಪ್ಪ ಅಶೋಕ್ ಗುಡಿಮನಿ ಮೃತ ವ್ಯಕ್ತಿ ಎನ್ನಲಾಗಿದೆ. ಕಳೆದ 15 ದಿನಗಳ ಹಿಂದೆ ಕಾಮಾಲೆ ರೋಗದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ನೀಡಿದ ವೈದ್ಯರು ಸಾವನ್ನಪ್ಪಿದ್ದಾರೆ, ಊರಿಗೆ ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದರು. ಊರಿಗೆ ವಾಪಸ್ ಬರುತ್ತಿದ್ದ ವೇಳೆ, ಅವರ ಇಷ್ಟವಾದ ಡಾಬಾದ ಬಳಿ, ಡಾಬಾ ಬಂತು ನೋಡು ಊಟ ಮಾಡುತ್ತೀಯಾ ಎಂದು ಗೋಳಾಡಿ ಪತ್ನಿ ಕಣ್ಣೀರಿಟ್ಟಾಗ ಮೃತಪಟ್ಟ ವ್ಯಕ್ತಿ ಉಸಿರು ಬಿಟ್ಟಿದ್ದರು. ಕೂಡಲೇ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ನಿರಂತರವಾಗಿ ಒಂದು ವಾರ ಕಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.
ಬೆಂಗಳೂರು:- ಮೆಟ್ರೋ ಟಿಕೆಟ್ ದರ ಏರಿಕೆ ನಾವು ಮಾಡಿದ್ದೇವೆ ಎನ್ನುವುದು ತಪ್ಪು. ಮೆಟ್ರೋ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರವೇ ಹೊಣೆ ಎಂದು ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. https://ainlivenews.com/shivalinga-floating-in-the-air-how-much-do-you-know-about-this-great-wonder/ ಈ ಸಂಬಂಧ ಮಾತನಾಡಿದ ಅವರು, ಮೆಟ್ರೋ ಯೋಜನೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಅದು ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಲ್ಲ. ಟಿಕೆಟ್ ದರ ಏರಿಕೆ ಸಮಿತಿ ಇರುವುದು ದೆಹಲಿಯಲ್ಲಿ ಅಲ್ಲ. ಮೆಟ್ರೋ ಸಂಬಂಧ ಎಲ್ಲಾ ಜವಾಬ್ದಾರಿಗಳೂ ರಾಜ್ಯಕ್ಕೆ ಬರಲಿದೆ. ದರ ನಿಗದಿ ಸಮಿತಿ ಇರೋದು ಕರ್ನಾಟಕದಲ್ಲಿ, ದೆಹಲಿಯಲ್ಲಿ ಅಲ್ಲ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರಕ್ಕೆ ಗ್ರೌಂಡ್ ರಿಯಾಲಿಟಿ ಗೊತ್ತಿರುತ್ತದೆ. ಮೆಟ್ರೋ ಕುರಿತು ಎಲ್ಲಾ ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ರಾಜ್ಯ ಸರ್ಕಾರ ಇದೆ. ದರ ಏರಿಕೆ ಪ್ರಸ್ತಾವನೆ ಕೊಟ್ಟಿದ್ದೇ ರಾಜ್ಯ ಸರ್ಕಾರ. ರಾಜ್ಯ ಸರ್ಕಾರವೇ ಮೆಟ್ರೋ ಸಂಬಂಧ ಎಲ್ಲಾ ವಿಚಾರಗಳಿಗೂ ಕಾರಣ. ಕೇಂದ್ರ ಸರ್ಕಾರದಿಂದ ದರ ಏರಿಕೆಗೆ ಸೂಚನೆ ಕೊಟ್ಟಿಲ್ಲ, ಇದು ತಪ್ಪು ಆರೋಪ ಎಂದಿದ್ದಾರೆ. ರಾಜ್ಯ…
ಸೌರಾಷ್ಟ್ರ ಸುಂದರಂ ಸೋಮನಾಥೇಶ್ವರಂ.. ಭಾರತದಲ್ಲಿರುವ 11 ಜ್ಯೋರ್ತಿಲಿಂಗಗಳ ಪೈಕಿ ಸೋಮನಾಥದ ಜ್ಯೋತಿರ್ಲಿಂಗವೂ ಮೊದಲನೆಯದು.. ಗುಜರಾತ್ನ ಪ್ರಶಾಂತ ಕರಾವಳಿಯುದ್ದಕ್ಕೂ ನೆಲೆಸಿರೋ ಸೋಮನಾ ದೇಗುಲ ಹಿಂದೂಗಳ ಪವಿತ್ರ ಯಾತ್ರಾ ಸ್ಥಳವೂ ಹೌದು.. ಈ ದೇಗುಲದ ಪರಂಪರೆ ಐತಿಹಾಸಿಕ ಮತ್ತು ಪೌರಾಣಿಕತೆಯಿಂದ ರೋಚಕತೆಯ ಸೃಷ್ಟಿಸಿದೆ.. ಆದರೆ ಇದೀಗ ಸೋಮನಾಥದಲ್ಲಿ ಗಾಳಿಯಲ್ಲಿ ತೇಲುವ ಶಿವಲಿಂಗವಿತ್ತಂತೆ.. ಸಾವಿರಾರು ವರ್ಷಗಳ ಹಿಂದೆ ದಾಳಿಗೊಳಗಾಗಿ ಆ ಶಿವಲಿಂಗ ಛಿದ್ರವಾಗಿದ್ದ ಭಗ್ನಾವಶೇಷಗಳು ಪತ್ತೆಯಾಗಿವೆ. https://ainlivenews.com/dksh-vs-sidhu-again-is-sidhu-ok-with-power-sharing-dksh-is-the-cm-but-what-is-the-calculation-of-the-sidhu-faction/ ಭಾರತದ ಮೇಲೆ ಶತಮಾನಗಳ ಕಾಲ ನಿರಂತರವಾಗಿ ನಡೆದ ದಾಳಿಗಳಲ್ಲಿ ಭಾರತದ ಕಲೆ, ಸಂಸ್ಕೃತಿ, ಜ್ಞಾನ ಸಂಪತ್ತು.. ಹೀಗೆ ಪ್ರತಿಯೊಂದು ಕೂಡ ನಾಶಗೊಂಡಿದ್ವು ಅನ್ನೋದು ನಮಗೆ ಗೊತ್ತಿದೆ. ಅದರಲ್ಲೂ ಇಸ್ಮಾಮಿಕ್ ದಾಳಿಗಳಲ್ಲಿ ಭಾರತದ ಭೌತಿಕ ಸಂಪತ್ತು ನಾಶವಾದರೆ, ಬ್ರಿಟಿಷರ, ಯುರೋಪಿಯನ್ನರ್ ದಾಳಿಗಳೂ ನಮ್ಮ ಅಂತಸತ್ವವನ್ನು, ಮನಂಬಿಕೆಯನ್ನು ನಾಶ ಮಾಡಿತು.. ಇಂತಹ ದಾಳಿಗಳಿಲ್ಲೀ ಭಾರತವೂ ಎಂದು ಮರೆಯಲಾಗದಂತ ದಾಳಿ ಘಜ್ನಿಯ ದೊರೆ ಮಹಮ್ಮದ್ ಘಜ್ನಿಯ ದಾಳಿ.. ಈ ಒಂದಲ್ಲಾಎರಡಲ್ಲಾ 17 ಬಾರಿ ದಂಡೆತ್ತಿ ಬಂದಿದ್ದ ಈ ಘಜ್ನಿ ನಮ್ಮ ಧಾರ್ಮಿಕ…
ಬೆಂಗಳೂರು:- ರಾಜ್ಯ ಕಾಂಗ್ರೆಸ್ನಲ್ಲಿ ಸದ್ಯ ಒಂದು ರೀತಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿದೆ. ಒಂದ್ಕಡೆ ಕೆಪಿಸಿಸಿ ಅಧ್ಯಕ್ಷರ ಚುನಾವಣೆ ಬಗ್ಗೆ ಚರ್ಚೆ ನಡೀತಾ ಇದ್ದರೆ, ಇನ್ನೊಂದು ಕಡೆ ಸಿಎಂ ಬದಲಾವಣೆ ಟಾಕ್ ಕೂಡ ಬಿಸಿಯೇರಿಸಿದೆ.. ಇದೆಲ್ಲದರ ನಡುವೆ ಎಲ್ಲವೂ ಸರಿಯಾಗೇ ಇದೇ ಅನ್ನೋ ಅಂತ ಮಾಲಿಶ್ ಮಾತುಗಳು ಕೇಳಿ ಬರ್ತಿವೆ.. ಆದರೆ ರಾಜ್ಯ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಇತ್ತೀಚಿನ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತಿದೆ. ಇತ್ತ ಪವರ್ ಶೇರಿಂಗ್ ಗಾಗಿ ಬಿಗಿ ಪಟ್ಟು ಹಿಡಿದಿದ್ದಾರೆ ಡಿಕೆಶಿ.. ಅತ್ತ ಕೆಪಿಸಿಸಿ ಚುಕ್ಕಾಣಿ ಹಿಡಿಯೋಕೆ ರಣತಂತ್ರ ರೂಪಿಸ್ತಿದೆ ಸಿದ್ದು ಬಣ… https://ainlivenews.com/do-you-want-to-get-slim-then-drink-this-porridge-every-day-then-see-the-miracle/ ಸಿಎಂ ಕುರ್ಚಿ.. ಡಿಕೆಶಿಯ ದಶಕಗಳ ಕನಸು ಪಕ್ಷದ ಟ್ರಬಲ್ ಶೂಟರ್ ಆಗಿದ್ದ ಡಿಕೆಶಿ 2023ರ ಚುನಾವಣೆಯ ಗೆಲುವಿನ ಬಳಿಕವೇ ಸಿಎಂ ಗದ್ದುಗೆ ಏರುವ ಕನಸು ಕಂಡಿದ್ದರು. ಆದರೆ ಆಗ ಸಿಎಂ ಸಿದ್ದರಾಮಯ್ಯ ಪರ ಹೈಕಮಾಂಡ್ ಒಲವು ತೋರಿತ್ತು. ಆದರೆ ಅಂದೇ ಹೈಕಮಾಂಡ್ ಮಟ್ಟದಲ್ಲಿ ಪವರ್ ಶೇರಿಂಗ್ ವಿಚಾರ ಚರ್ಚೆಯಾಗಿತ್ತು ಅನ್ನೋ ಮಾತುಗಳು ಕೇಳಿ…
ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯತೆ ಆತಂಕಕಾರಿ ವಿಚಾರವಾಗಿದೆ. ಏಕೆಂದರೆ ಇದು ವಿವಿಧ ರೋಗಗಳಿಗೆ ಮುಖ್ಯ ಕಾರಣವಾಗಿದೆ. ವಾಸ್ತವವಾಗಿ, ಬೊಜ್ಜು ಹೃದಯ ಮತ್ತು ಮೂತ್ರಪಿಂಡಗಳಂತಹ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹದ ಅಪಾಯವೂ ಕೂಡ ಹೆಚ್ಚು. ಪ್ರಪಂಚದಾದ್ಯಂತ ಸುಮಾರು 2 ಬಿಲಿಯನ್ ಜನರು ಸ್ಥೂಲಕಾಯತೆಯಿಂದ ಬಳಲುತ್ತಿದ್ದಾರೆ. https://ainlivenews.com/geeta-rajkumar-was-elected-unopposed-as-bhadravati-municipal-council-president/ ಪ್ರಪಂಚದಾದ್ಯಂತ ಸಾಕಷ್ಟು ಮಂದಿಯನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ ಬೊಜ್ಜು. ದೇಹದ ತೂಕ ಒಮ್ಮೆ ಹೆಚ್ಚಾದರೆ ಇಳಿಸಿಕೊಳ್ಳುವುದು ಬಹಳ ಕಷ್ಟ. ವಿಶೇಷವಾಗಿ ಹೊಟ್ಟೆಯ ಬೊಜ್ಜು ಹೆಚ್ಚಾದರೆ, ಇದನ್ನು ಕರಗಿಸಿಕೊಳ್ಳಲು, ಜನರು ಜಿಮ್, ಯೋಗ, ವ್ಯಾಯಾಮ, ಏರೋಬಿಕ್ಸ್, ವಾಕಿಂಗ್ ಹೀಗೆ ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಕಳಪೆ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಜೀವನಶೈಲಿಯೇ ಬೊಜ್ಜಿನ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಮತೋಲನ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಜನರು ತೊಡಗಿಸಿಕೊಳ್ಳುವುದು ತುಂಬಾ ಕಡಿಮೆಯಾಗಿದೆ. ಇದರಿಂದಾಗಿ, ವಯಸ್ಕರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಬೊಜ್ಜಿನ ಸಮಸ್ಯೆಗೆ ಒಳಗಾಗಿದ್ದಾರೆ. ಬೊಜ್ಜಿನಿಂದ ಮಧುಮೇಹ, ಮೂತ್ರಪಿಂಡ ಕಾಯಿಲೆ ಮತ್ತು…