ಬೆಂಗಳೂರು : sಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಶಾಕ್‌ವೊಂದನ್ನು ಕೊಟ್ಟಿತ್ತು. ಬೆಂಗಳೂರಿನಲ್ಲಿ ಆಸ್ತಿದಾರರು ಶಾಕ್ ಆಗುವಂತಹ ಆದೇಶವೊಂದನ್ನು ಮಾಡಿತ್ತು. ಆದರೆ ಈ ಶಾಕ್ ಎಲ್ಲಾ ಆಸ್ತಿದಾರರಿಗೂ ಅಲ್ಲ ಎನ್ನಲಾಗಿತ್ತು. ಆದರೆ ಇದೀಗ ಬೆಂಗಳೂರಿನಲ್ಲಿ ಎ- ಖಾತಾ ಇರುವ ಬರೋಬ್ಬರಿ 54,000 ಸಾವಿರ ಆಸ್ತಿದಾರರಿಗೂ ಸಹ ಸಂಕಷ್ಟ ಎದುರಾಗಿದೆ. ಎ- ಖಾತಾ ಇದ್ದರೆ ಯಾವುದೇ ಸಮಸ್ಯೆ ಇಲ್ಲ ಎಂದುಕೊಂಡವರು ಸಹ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. https://ainlivenews.com/parishad-mla-t-saravan-participated-in-the-jds-membership-registration-program/ ಬೆಂಗಳೂರಿನಲ್ಲಿ ಅಂದಾಜು 25 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಹೊಸದಾಗಿ ಪ್ರತಿ ವರ್ಷ ಬೆಂಗಳೂರಿನಲ್ಲಿ ಆಸ್ತಿಗಳ ಸೇರ್ಪಡೆಯಾಗುತ್ತಿವೆ. ಈ ಬಾರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯ ಸರ್ಕಾರವು ಆಸ್ತಿಗೆ ಸಂಬಂಧಿಸಿದಂತೆ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಯಾವುದೇ ಖಾತಾ ಹೊಂದಿದ್ದರೂ ಕಡ್ಡಾಯವಾಗಿ ಇ – ಖಾತಾ ಮಾಡಿಸಿಕೊಳ್ಳಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಅದು ಅಲ್ಲದೆ ಯಾರೆಲ್ಲ ಅಕ್ರಮವಾಗಿ ಎ – ಖಾತಾ ಮಾಡಿಸಿಕೊಂಡಿದ್ದಾರೆ ಎಂದು ಪರಿಶೀಲನೆ ಮಾಡುತ್ತಿದ್ದು,…
Author: AIN Author
ಬೆಂಗಳೂರು:- CM ಕಚೇರಿಯ ಟಿಪ್ಪಣಿ ನಕಲು ಮಾಡಿ ವಂಚನೆ ಮಾಡಿದ್ದ ಆರೋಪಿ ಅರೆಸ್ಟ್ ಮಾಡಲಾಗಿದೆ. https://ainlivenews.com/anekal-police-raid-rowdy-sheeters-residence-in-the-early-hours-of-the-morning/ ವಿಧಾನಸೌಧ ಠಾಣೆ ಪೊಲೀಸರಿಂದ ರಾಘವೇಂದ್ರನನ್ನು ಬಂಧಿಸಲಾಗಿದೆ. ಕೆಎಎಸ್ ಅಧಿಕಾರಿಯೊಬ್ಬರಿಗೆ ಪೋಸ್ಟಿಂಗ್ ನೀಡುವಂತೆ ಆರೋಪಿ ರಾಘವೇಂದ್ರ, ಮುಖ್ಯಮತ್ರಿಗಳ ಕಚೇರಿ ಹೆಸರಿನಲ್ಲಿ ನಕಲಿ ಟಿಪ್ಪಣಿ ಸೃಷ್ಟಿಸಿದ್ದನು. ಈ ಬಗ್ಗೆ ವಿಧಾನಸೌಧದ ಸಚಿವಾಲಯ ದೂರು ನೀಡಿತ್ತು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ವಿಧಾನಸೌಧ ಠಾಣೆ ಪೊಲೀಸರು ಆರೋಪಿ ರಾಘವೇಂದ್ರನನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿ ರಾಘವೇಂದ್ರ ಈ ಹಿಂದೆ ಹಲವು ಶಾಸಕರ ಬಳಿ ಪಿಎ ಆಗಿ ಕೆಲಸ ಮಾಡಿದ್ದನು ಎಂದು ತಿಳಿದುಬಂದಿದೆ. ಆರೋಪಿ ರಾಘ್ರವೇಂದ್ರ ವಿರುದ್ಧ ಪೋಸ್ಟಿಂಗ್ ಕೊಡಿಸೋದಾಗಿ ಹಣ ಪಡೆದು ವಂಚಿಸಿದ ಆರೋಪವೂ ಕೇಳಿಬಂದಿದೆ
ಆನೇಕಲ್:- ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಗಳ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಬೆಂಗಳೂರು ಹೊರವಲಯಗ ಜಿಗಣಿ ಪೊಲೀಸರಿಂದ ರೌಡಿ ಶೀಟರ್ ಗಳ ಮನೆ ಮೇಲೆ ದಾಳಿ ನಡೆದಿದೆ. https://ainlivenews.com/job-fair-held-in-bengaluru-hundreds-of-candidates-secured-jobs/ ಇನ್ಸ್ ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡದಿಂದ ದಾಳಿ ನಡೆದು ಪರಿಶೀಲಿಸಿದ್ದಾರೆ. ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್ ಗಳ ಮನೆಯಲ್ಲಿ ಖಾಕಿ ತಲಾಶ್ ನಡೆಸಿದೆ. ಪೊಲೀಸರಿಂದ ರೌಡಿ ಶೀಟರ್ ಗಳ ಮನೆಗಳ ಸರ್ಚಿಂಗ್ ನಡೆದಿದ್ದು, ಕೆಲವು ರೌಡಿ ಶೀಟರ್ ಗಳ ಮನೆಗಳಲ್ಲಿ ಮಾರಕಸ್ತ್ರಗಳು ಪತ್ತೆಯಾಗಿದೆ. ಕೂಡಲೇ ಆರು ಮಂದಿ ರೌಡಿ ಶೀಟರ್ ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಠಾಣೆಗೆ ಕರೆತಂದು ಅವರನ್ನು ಪೊಲೀಸರು, ವಿಚಾರಣೆ ಮಾಡುತ್ತಿದ್ದಾರೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಜಿಗಣಿ ಇನ್ಸ್ ಪೆಕ್ಟರ್ ಮಂಜುನಾಥ್ ಅವರು ರೌಡಿಗಳ ಬೆವರಿಳಿಸಿದ್ದಾರೆ.
ಬೆಂಗಳೂರು:- ಕೆಲಸ ಹುಡುಕಿ ಸುಸ್ತಾದವರು, ಓದು ಮುಗಿಸಿ ಕೆಲಸ ಹುಡುಕಲು ಹೊರಟವರಿಗೆ ಪ್ರೆಸಿಡೆನ್ಸಿ ಫೌಂಡೇಷನ್ ನಡೆಸಿದ ಉದ್ಯೋಗ ಮೇಳ ಹೊಸ ಆಸೆ ಚಿಗುರಿಸುವ ಕೆಲಸ ಮಾಡಿದೆ. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸಹಯೋಗದಲ್ಲಿ ನಡೆದ ಬೃಹತ್ ಉದ್ಯೋಗ ಮೇಳದ ಮಾಹಿತಿ ಇಲ್ಲಿದೆ. https://ainlivenews.com/a-man-who-was-surprised-to-hear-the-name-of-daba-passed-away/ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಸೃಷ್ಟಿಸುವ ಕೆಲಸ ಮಾಡುತ್ತಿರುವ ಪ್ರೆಸಿಡೆನ್ಸಿ ಫೌಂಡೇಷನ್ ಇಂದು ಮಿಲ್ಲರ್ಸ್ ರಸ್ತೆಯ ಈದ್ಗಾ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿತ್ತು. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸಹಯೋಗದಲ್ಲಿ ನಡೆದ ಬೃಹತ್ ಉದ್ಯೋಗಮೇಳದಲ್ಲಿ ನೂರಾರು ಉದ್ಯೋಗಾಂಕ್ಷಿಗಳು ಭಾಗಿಯಾಗಿದರು. ಸುಮಾರು 200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದ ಉದ್ಯೋಗ ಮೇಳದಲ್ಲಿ ಸಚಿವ ಜಮೀರ್ ಅಹ್ಮದ್ ಹಾಗೂ ಮಾಜಿ ಸಚಿವ ಅಶ್ವಥ್ ನಾರಾಯಣ ಭಾಗಿಯಾಗಿ ಉದ್ಯೋಗಾಂಕ್ಷಿಗಳಿಗೆ ಶುಭ ಹಾರೈಸಿದರು
ಮುಂಬೈ ವಿರುದ್ಧ ರೋಚಕ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ ಹೊಸ ಚರಿತ್ರೆ ಬರೆದಿದೆ. ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ 2ನೇ ಪಂದ್ಯದಲ್ಲಿ ರೋಚಕ ಜಯ ಸಾಧಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಹೊಸ ಇತಿಹಾಸ ನಿರ್ಮಿಸಿದೆ https://ainlivenews.com/have-you-got-a-spider-web-in-your-house-too-if-so-follow-these-tips/ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಮೆಗ್ ಲ್ಯಾನಿಂಗ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪರ ನ್ಯಾಟ್ ಸಿವರ್ ಬ್ರಂಟ್ 59 ಎಸೆತಗಳಲ್ಲಿ 13 ಫೋರ್ಗಳೊಂದಿಗೆ ಅಜೇಯ 80 ರನ್ ಬಾರಿಸಿದರೆ, ನಾಯಕಿ ಹರ್ಮನ್ಪ್ರೀತ್ ಕೌರ್ 42 ರನ್ ಚಚ್ಚಿದರು. ಈ ಮೂಲಕ ಮುಂಬೈ ಇಂಡಿಯನ್ಸ್ 19.1 ಓವರ್ಗಳಲ್ಲಿ 164 ರನ್ ಬಾರಿಸಿ ಆಲೌಟ್ ಆಯಿತು. 165 ರನ್ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 18 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 43 ರನ್…
ಮನೆಯ ಸದಸ್ಯರಲ್ಲಿ ಸೋಮಾರಿತನ, ಕಿರಿಕಿರಿ ಅಥವಾ ನಕಾರಾತ್ಮಕತೆ ಕಂಡುಬಂದರೆ, ಅದು ಮನೆಯಲ್ಲಿನ ಜೇಡರ ಬಲೆಯಿಂದಾಗಿರಬಹುದು. https://ainlivenews.com/dolly-dhananjay-tied-the-knot-with-dhanyata-in-meenas-ascendant/ ಜೇಡರ ಬಲೆ ಇರುವ ಮನೆಯ ಸದಸ್ಯರ ಮನಸ್ಸು ಸರಿಯಾಗಿ ಕೆಲಸ ಮಾಡುವುದಿಲ್ಲ. ಕೌಟುಂಬಿಕ ಜೀವನದಲ್ಲಿ ಒತ್ತಡಕ್ಕೆ ಕೂಡ ಕಾರಣವಾಗಿದೆ. ಇದು ಕುಟುಂಬದ ಸದಸ್ಯರನ್ನು ಮಾನಸಿಕ ಅಸ್ವಸ್ಥರನ್ನಾಗಿಯೂ ಮಾಡಬಹುದು. ಕೆಲವರ ಮನೆಯಲ್ಲಿ ಮನೆ ತುಂಬಾ ಜೇಡರ ಬಲೆಯೇ ತುಂಬಿ ಹೋಗುತ್ತದೆ. ಎಷ್ಟೇ ಸ್ವಚ್ಛ ಮಾಡಿದ್ರು ಜೇಡ ಬಲೆ ಮತ್ತೆ ಮತ್ತೆ ಕಟ್ಟುತ್ತಿದ್ದರೆ ಈ ಸಮಸ್ಯೆಗೆ ಈ ರೀತಿ ಮನೆಯಲ್ಲೇ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು. ಪುದೀನಾ ಎಣ್ಣೆ : ಜೇಡಗಳನ್ನು ಹಿಮ್ಮೆಟ್ಟಿಸಲು ಪುದೀನಾ ಎಣ್ಣೆ ಉತ್ತಮ ಆಯ್ಕೆ ಎನ್ನಬಹುದು. ನಿಮ್ಮ ಮನೆಯಲ್ಲಿ ಜೇಡಗಳಿದ್ದರೆ ಒಂದು ಸ್ಪ್ರೇ ಬಾಟಲಿಯಲ್ಲಿ 10-15 ಹನಿ ಪುದೀನಾ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ. ಈ ಮಿಶ್ರಣವನ್ನು ಕಿಟಕಿಗಳಿರುವಲ್ಲಿ ಸಿಂಪಡಿಸಿದ್ರೆ, ಇದರ ಬಲವಾದ ವಾಸನೆಗೆ ಜೇಡಗಳು ಹತ್ತಿರ ಕೂಡ ಸುಳಿಯುವುದಿಲ್ಲ. ನಿಂಬೆ ಹಾಗೂ ಪುದೀನಾ :ಸ್ವಲ್ಪ ಪುದೀನಾ ಸೊಪ್ಪನ್ನು ಮಿಕ್ಸಿಗೆ ಹಾಕಿ ನೀರು ಸೇರಿಸಿ ರುಬ್ಬಿ…
ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಮತ್ತು ವೈದ್ಯೆ ಧನ್ಯತಾ ಮದುವೆ ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆದಿದೆ. ಈಗಾಗಲೇ ವಿವಾಹ ಪೂರ್ವ ಕಾರ್ಯಗಳು, ಶಾಸ್ತ್ರಗಳು ನೆರವೇರಿದ್ದು ಕಳೆದ ದಿನ ಡಿಸೆಪ್ಶನ್‌ಗೆ ಹಲವಾರು ಸೆಲೆಬ್ರಿಟಿಗಳು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದಾರೆ https://ainlivenews.com/love-you-you-are-very-special-to-me-rakshita-wishes-darshan-a-happy-birthday/ ನಟ ಡಾಲಿ ಡಾಕ್ಟರ್ ಧನ್ಯತಾ ಕೊರಳಿಗೆ ಮಾಂಗಲ್ಯ ಕಟ್ಟಿದ್ದು, ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು ಆಪ್ತ ಸ್ನೇಹಿತರ ಮಧ್ಯೆ ನಟ ರಾಕ್ಷಸ ಡಾಲಿ ಧನಂಜಯ್ ಅವರು ಧನ್ಯತಾ ಅವರ ಕೊರಳಿಗೆ ತಾಳಿ ಕೊಟ್ಟಿದ್ದಾರೆ. ಈ ಜೋಡಿ ವಧೂ ವರರ ದಿರಿಸಿನಲ್ಲಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ. ಡಾಲಿ ಧನಂಜಯ್ ಹಾಗೂ ಧನ್ಯತಾ ಅವರ ಮದುವೆ ಆರತಕ್ಷತೆ ಅದ್ಧೂರಿಯಾಗಿ ನಡೆದಿತ್ತು. ಇದರಲ್ಲಿ ಚಿತ್ರರಂಗದ ಗಣ್ಯರು, ಸೆಲೆಬ್ರಿಟಿಗಳು ಎಲ್ಲರೂ ಭಾಗಿಯಾಗಿದ್ದರು. ಈಗ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೈಸೂರಿನಲ್ಲಿ ಡಾಲಿ ಧನಂಜಯ್ ಹಾಗೂ ಧನ್ಯತಾ ಅದ್ಧೂರಿ ರಿಸೆಪ್ಷನ್ ನಡೆದಿದೆ. ಹಲವಾರು ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು ಇಂದಿನ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಸ್ಯಾಂಡಲ್ವುಡ್ನ ಕಲಾವಿದರ ದಂಡೇ…
ದರ್ಶನ್ ಹಾಗೂ ರಕ್ಷಿತಾ ಫ್ರೆಂಡ್ ಶಿಪ್ ಎಂಥದ್ದು ಅಂತ ಎಲ್ಲರಿಗೂ ಗೊತ್ತೇ ಇದೆ. ತೆರೆ ಮೇಲೆ ಎಷ್ಟು ಮೋಡಿ ಮಾಡಿತ್ತೋ ಈ ಜೋಡಿ, ಹಾಗೆ ಜೀವನದಲ್ಲೂ ಇವರಿಬ್ಬರ ಫ್ರೆಂಡ್ಸಿಪ್ ತುಂಬಾ ಟ್ರೂ ಆಗಿದೆ. ರಕ್ಷಿತಾ ಕಷ್ಟ ಸುಖದಲ್ಲಿ ದರ್ಶನ್ ಭಾಗಿಯಾಗಿದ್ದಾರೆ. ಅದರಂತೆ ದರ್ಶನ್ ಕಷ್ಟದಲ್ಲೂ ರಕ್ಷಿತಾ ಜೊತೆ ಆಗಿದ್ದರು. https://ainlivenews.com/a-case-of-stampede-at-new-delhi-railway-station-announcement-of-compensation-to-the-family-of-the-deceased/ ದರ್ಶನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಸಹಜವಾಗಿ ಆಪ್ತರು, ಸಿನಿ ತಾರೆಯರು, ಅಭಿಮಾನಿಗಳು ನಟ ದರ್ಶನ್‌ಗೆ ವಿಶ್ ಮಾಡುತ್ತಿದ್ದಾರೆ. ನಟಿ ರಕ್ಷಿತಾ ಪ್ರೇಮ್ ಕೂಡ ಫ್ರೆಂಡ್ ದರ್ಶನ್‌ಗೆ ವಿಶ್ ಮಾಡಿ ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿದ್ದಾರೆ. ದರ್ಶನ್ ಹುಟ್ಟುಹಬ್ಬಕ್ಕೆ ನಟಿ ರಕ್ಷಿತಾ ಪ್ರೇಮ್ ವಿಶೇಷವಾಗಿ ಶುಭಕೋರಿದ್ದಾರೆ. ‘ಇವತ್ತು ವಿಶೇಷ ದಿನ, ಯಾಕ್ ಗೊತ್ತಾ? ಇವತ್ತು ನನ್ನ ಬೆಸ್ಟ್ ಫ್ರೆಂಡ್ ಬರ್ತ್‌ಡೇ. ಇವರು ಯಾವಾಗಲೂ ಕಷ್ಟ-ಸುಖದಲ್ಲಿ ಒಂದೇ ರೀತಿಯಲ್ಲಿ ಜೊತೆಗಿದ್ದವರು. ಇವರು ಜೊತೆಗಿರುವ ಜೀವನ ಯಾವಾಗಲೂ ಉತ್ತಮವಾಗಿರುತ್ತದೆ. ನೀವು ನನಗೆ ಸ್ಪೆಷಲ್. ನಿಮ್ಮ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಶುಭ ಹಾರೈಸುತ್ತೇನೆ.…
ಚಾಲೆಂಜಿಂಗ್ ಸ್ಟಾರ್ ನಟ ನಟ ದರ್ಶನ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಪ್ರತಿ ದರ್ಶನ್ ಹುಟ್ಟುಹಬ್ಬವೆಂದರೆ ಅದು ಅಭಿಮಾನಿಗಳ ಪಾಲಿನ ದೊಡ್ಡ ಜಾತ್ರೆ. ಆದರೆ, ಈ ಬಾರಿ ದರ್ಶನ್ ಹುಟ್ಟುಹಬ್ಬ ಆಚರಿಸುತ್ತಿಲ್ಲ. ಇತ್ತೀಚೆಗಷ್ಟೇ ಈ ಬಾರಿ ಹುಟ್ಟುಹಬ್ಬ ಆಚರಿಸುತ್ತಿಲ್ಲ ಎಂದು ದರ್ಶನ್ ಮನವಿ ಮಾಡಿದ್ದಾರೆ. https://ainlivenews.com/stampede-at-railway-station-what-did-the-officials-and-eyewitnesses-say/ ಸದ್ಯ ದರ್ಶನ್ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸುವತ್ತ ಗಮನ ಹರಿಸಿದ್ದಾರೆ. ಅದೇ ಕಾರಣದಿಂದ ಹೊಸ ಸಿನಿಮಾಗಳ ಘೋಷಣೆಯಾಗಿಲ್ಲ. ಸದ್ಯ ದರ್ಶನ್ ಮೊದಲ ಆಯ್ಕೆ “ಡೆವಿಲ್”. ಈಗಾಗಲೇ ಒಂದಷ್ಟು ಚಿತ್ರೀಕರಣ ಪೂರೈಸಿರುವ ಈ ಚಿತ್ರದ ಟೀಸರ್ ಇಂದು ಬಿಡುಗಡೆಯಾಗುತ್ತಿದೆ. ದಾಸ ದರ್ಶನ್ ಸಿನಿಮಾ ಜೀವನದಲ್ಲಿ ಏರಿಳಿತಗಳಿವೆ. ಸೋಲು ಗೆಲುವು ಕೂಡ ಇವೆ. ಸೋತ ಸಿನಿಮಾಗಳ ಲೆಕ್ಕ ಒಂದು ಕಡೆ ಆದ್ರೆ, ಗೆದ್ದ ಸಿನಿಮಾಗಳ ವಿಚಾರ ಮತ್ತೊಂದು ಕಡೆ ಇದೆ. ಆದರೆ, ದರ್ಶನ್ ಸಿನಿಮಾ ಜೀವನ ಆರಂಭವಾಗಿರೋದು ಸಾಮಾನ್ಯ ಕ್ಯಾಮರಾ ಸಹಾಯಕನಾಗಿಯೇ ಅನ್ನೋದು ಗೊತ್ತೇ ಇದೆ. ಅಪ್ಪ ನಟನಾದ್ರೂ ದರ್ಶನ್ ತೂಗುದೀಪ್ ಅವರಿಗೆ ಚಂದನವನಕ್ಕೆ ಕಾಲಿಡೋದು ಸುಲಭದ ಮಾತಾಗಿರಲಿಲ್ಲ.…
ಬೆಂಗಳೂರು :- ಸಿದ್ದರಾಮಯ್ಯರಂತಹ ನಾಯಕರನ್ನು ಬೇಡ ಅನ್ನಲು ಸಾಧ್ಯನಾ ಎಂದು ಮಹದೇವಪ್ಪ ಹೇಳಿದ್ದಾರೆ. https://ainlivenews.com/kpcc-leader-mourns-the-passing-of-senior-lawyer-andanimat/ ಈ ಸಂಬಂಧ ಮಾತನಾಡಿದ ಅವರು, ಸಿದ್ದರಾಮಯ್ಯರಂತ ಮಾಸ್ ಲೀಡರ್ ಸಕ್ರಿಯ ರಾಜಕಾರಣದಲ್ಲಿ ಇರಬೇಕು. ಸಿದ್ದರಾಮಯ್ಯ ಮಾಸ್ ಲೀಡರ್. ಅಂತಹ ಮಾಸ್ ಲೀಡರ್‌ನ ಯಾರಾದರು ಬೇಡ ಅಂತಾರೆ, ಯಾವುದಾದರು ಪಕ್ಷ ಬೇಡ ಅನ್ನುತ್ತಾ ಎಂದರು. ಸಿದ್ದರಾಮಯ್ಯ ಅವರು ಆರೋಗ್ಯವಾಗಿರುವವರೆಗೆ ಫಿಟ್ ಆಗಿರುವವರೆಗೆ ಸಕ್ರಿಯ ರಾಜಕಾರಣದಲ್ಲಿ ಚುನಾವಣಾ ರಾಜಕಾರಣದಲ್ಲಿ ಇರಬೇಕು. ಪಾರ್ಟಿ ದೃಷ್ಟಿಯಿಂದ, ರಾಜ್ಯದ ದೃಷ್ಟಿಯಿಂದ ರಾಷ್ಟ್ರದ ದೃಷ್ಟಿಯಿಂದ ಸಿದ್ದರಾಮಯ್ಯ ಸಕ್ರಿಯ ರಾಜಕಾರಣದಲ್ಲಿ ಇರಬೇಕು. ಅನಿವಾರ್ಯ ಅಂತ ಹೇಳಲ್ಲ. ನಾನೇ ಆಗಲಿ ಯಾರೇ ಆಗಲಿ ಅನಿವಾರ್ಯ ಅಲ್ಲ. ಸಿದ್ದರಾಮಯ್ಯರಂತ ಮಾಸ್ ಲೀಡರ್ ಸಕ್ರಿಯವಾಗಿ ಇರಬೇಕು. ಸಿದ್ದರಾಮಯ್ಯ ಮಾಸ್ ಲೀಡರ್. ಎಲ್ಲಾ ಆಯಾಮದಲ್ಲೂ ನಾಯಕತ್ವ ಅಗತ್ಯವಿದೆ. ಒನ್ ಮ್ಯಾನ್ ಶೋ ಆಗಲ್ವಲ್ಲ. ನಾವೆಲ್ಲರೂ ಅವರ ಜೊತೆ ಸೇರಬೇಕು. ಹೊಸನಾಯಕತ್ವ ಬರುವವರೆಗೆ ಸಿದ್ದರಾಮಯ್ಯ ಇರಬೇಕು ಎಂದು ಹೇಳಿದರು.