ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್ ಗೆ ಬೈಕ್ ಸವಾರ ಬಲಿಯಾದ ಘಟನೆ ಜರುಗಿದೆ. https://ainlivenews.com/if-you-send-money-to-someone-elses-account-by-mistake-no-need-to-stress-money-will-be-refunded-by-doing-this/ ಬೆಂಗಳೂರಿನ 8ನೇ ಮೈಲಿ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ 25 ವರ್ಷದ ಯುವಕ ಮೃತಪಟ್ಟಿದ್ದಾನೆ. ಇದರಿಂದ ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಇನ್ನು ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನು ಗುದ್ದಿಕೊಂಡು ಹೋಗಿರುವ ಅಪರಿಚಿತ ವಾಹನಕ್ಕಾಗಿ ಪೊಲೀಸರು ಶೋಧ ನಡೆಸಿದ್ದಾರೆ.
Author: AIN Author
ಬಿಗ್‌ಬಾಸ್ ಕನ್ನಡ 11 ಆರನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ತ್ರಿವಿಕ್ರಮ್, ಮನೆಯ ಕ್ಯಾಪ್ಟನ್ ಆಗಿದ್ದಾರೆ. ಸ್ಪರ್ಧಿಗಳು ಹೊಸ ಹೊಸ ಟಾಸ್ಕ್‌ನಲ್ಲಿ ಭಾಗವಹಿಸಿಲು ಗೆಲ್ಲಲ್ಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಮನೆಮಂದಿಗೆ ಸೊಂಟದ ಪಟ್ಟಿ ಕೊಟ್ಟಿರುವ ಬಿಗ್‌ಬಾಸ್ ಇಬ್ಬರು ಸ್ಪರ್ಧಿಗಳು ಯಾವಾಗಲೂ ಜೊತೆಯಾಗಿರುವಂತೆ ಸೂಚಿಸಿದ್ದಾರೆ. ಸ್ಪರ್ಧಿಗಳನ್ನು ನೋಡಲು ಮನೆಗೆ ರಾಮಾಚಾರಿ ಧಾರಾವಾಹಿಯ ಚಾರು ಹಾಗೂ ರಾಮಾಚಾರಿ ಎಂಟ್ರಿ ಕೊಟ್ಟಿದ್ದಾರೆ https://ainlivenews.com/father-in-law-and-daughter-in-law-who-went-to-do-something-and-did-something-else-the-knife/ ಸ್ಪರ್ಧಿಗಳನ್ನು ನೋಡಲು ಮನೆಗೆ ರಾಮಾಚಾರಿ ಧಾರಾವಾಹಿಯ ಚಾರು ಹಾಗೂ ರಾಮಾಚಾರಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ಬಾಸ್ ಅವರಿಗೂ ಸೊಂಟದ ಪಟ್ಟಿ ಕೊಡುತ್ತಾರೆ. ಮನೆಗೆ ಬಂದ ಚಾರುವನ್ನು ಇಂಪ್ರೆಸ್ ಮಾಡಲು ಸ್ಪರ್ಧಿಗಳು ಪ್ರಯತ್ನಿಸುತ್ತಾರೆ. ನನ್ನನ್ನು ಅಣ್ಣ ಎನ್ನಬೇಡಿ ಎಂದು ಮಂಜು ಹೇಳಿದರೆ, ಹನುಮಂತ ಚಾರುವಿಗೆ ರೋಸ್ ಕೊಟ್ಟು ಹಾಡು ಹಾಡುತ್ತಾರೆ. ಅದೇನೆಂದರೆ, ಸದ್ಯ ಬಿಗ್ ಬಾಸ್ ಮನೆಯಲ್ಲಿ ಜೋಡಿಗಳ ಟಾಸ್ಕ್ ನಡೆಯುತ್ತಿದೆ. ಹೀಗಾಗಿ ತಾವಿಬ್ಬರು ಜೋಡಿಯಾಗಿ ಇರುವಂತೆ ಒಬ್ಬರನ್ನೊಬ್ಬರು ಬಿಟ್ಟು ಹೋಗದಂತೆ ಜೊತೆಯಾಗಿರಲು ಹಗ್ಗವನ್ನು ನೀಡಿದ್ದಾರೆ. ಸ್ಪರ್ಧಿಗಳಂತೆ ರಾಮಚಾರಿ ಮತ್ತು ಚಾರು ಕೂಡ ಹಗ್ಗವನ್ನು ಕಟ್ಟಿಕೊಂಡಿದ್ದಾರೆ.…
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 2024ನೇ ಸಾಲಿನ ನೇಮಕಾತಿ ಆರಂಭವಾಗಿದ್ದು, ಲೈಬ್ರೇರಿಯನ್ ಹುದ್ದೆಗೆ ಅರ್ಜಿ ಆಹ್ವಾನಿಸಿ, ಪ್ರಕಟಣೆ ಹೊರಡಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. https://ainlivenews.com/bomb-threat-call-to-indigo-flight-accused-arrested/ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಸಕ್ತ ಸಾಲಿನ ಒಂದು ವರ್ಷದ ಅವಧಿಗೆ ಲೈಬ್ರರಿ ಅಪ್ರೆಂಟಿಸ್ ತರಬೇತುದಾರರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.ಹುದ್ದೆಗಳು:3ವಿದ್ಯಾರ್ಹತೆ: ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್ ಪದವಿ ಅಥವಾ ಕರ್ನಾಟಕ ಸರ್ಕಾರ ತಾಂತ್ರಿಕ ನಿರ್ದೇಶನಾಲಯದ ಅಡಿಯಲ್ಲಿ ಡಿಪ್ಲೊಮಾ ಇನ್ ಲೈಬ್ರರಿ ಸೈನ್ಸ್ ನಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಸೂಚನೆ:2024-25ನೇ ಸಾಲಿನಲ್ಲಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಕೂಡಾ ಅರ್ಜಿ ಸಲ್ಲಿಸಬಹುದು. ಈಗಾಗಲೇ 2023-24ನೇ ಸಾಲಿನಲ್ಲಿ ಅಪ್ರೆಂಟಿಸ್‌ಗಳಾಗಿ ತರಬೇತಿ ಪಡೆದಿರುವ ಹಾಗೂ ಅದರ ಹಿಂದಿನ ವರ್ಷಗಳಲ್ಲಿ ತರಬೇತಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ.ವೇತನ: 17,000 ರೂಪಾಯಿ ಮಾಸಿಕ ಶಿಷ್ಯವೇತನ.ಅರ್ಜಿ ಸಲ್ಲಿಕೆ: ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣದಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ಭರ್ತಿ ಮಾಡಿ, ಸ್ವಯಂ ದೃಢೀಕರಿಸಿ…
ಬೆಂಗಳೂರು:- ಬಿಜೆಪಿಯಿಂದ “ಕೈ” ಶಾಸಕರಿಗೆ 50 ಕೋಟಿ ಆಫರ್ ಕೊಡಲಾಗಿದೆ ಎಂಬ ಸಿಎಂ ಹೇಳಿಕೆಯನ್ನು ಸಚಿವ ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ. https://ainlivenews.com/ipl-2025-rcb-eyes-on-these-three-star-players-from-mumbai/ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸರ್ಕಾರವನ್ನು ಅಸ್ಥಿರಗೊಳಿಸಲು ಎಲ್ಲಾ ಪ್ರಯತ್ನಗಳನ್ನೂ ಸತತವಾಗಿ ನಡೆಸುತ್ತಿವೆ. ಮುಡಾ ಪ್ರಕರಣದ ಆರೋಪ ಸೇರಿದಂತೆ ಎಲ್ಲಾ ಯತ್ನಗಳೂ ಸರ್ಕಾರವನ್ನು ಅಸ್ಥಿರಗೊಳಿಸುವ ಸಲುವಾಗಿಯೇ ನಡೆಯುತ್ತಿವೆ ಎಂದರು. ಈಗ ಶಾಸಕರಿಗೆ ಆಮಿಷವೊಡ್ಡಿ ಸರ್ಕಾರ ಪತನಗೊಳಿಸಲು ಯತ್ನಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ 42 ಮಂದಿ ಶಾಸಕರನ್ನು ಹಣ ಕೊಟ್ಟು ಕರೆತಂದು ಸರ್ಕಾರ ರಚಿಸಿದ್ದರು. ಇಲ್ಲಿಯೂ ಅಂತಹುದೇ ಪ್ರಯತ್ನ ಮೊದಲು ನಡೆಸಿ ಯಶಸ್ವಿಯಾಗಿದ್ದರು. ಈಗಲೂ ಅದೇ ಚಾಳಿಯನ್ನು ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ತಮಗಿರುವ ಮಾಹಿತಿ ಆಧರಿಸಿ ಹೇಳಿಕೆ ನೀಡಿದ್ದಾರೆ. ಇದನ್ನೆಲ್ಲಾ ಜನ ಗಮನಿಸುತ್ತಾರೆ. ಕೆಲವೊಮೆ ತಪ್ಪು ಕಲ್ಪನೆಗಳು ಬಂದರೂ ನಾವು ಜನಸಮುದಾಯದ ನಡುವೆ ಹೋಗಿ ವಿವರಣೆ ನೀಡುತ್ತೇವೆ. ಜನ ಕಣ್ಣು ಮುಚ್ಚಿಕೊಂಡು ಎಲ್ಲವನ್ನೂ ಸ್ವೀಕರಿಸುವುದಿಲ್ಲ , ಅವರನ್ನು ತಿರಸ್ಕಾರ ಮಾಡುತ್ತಾರೆ ಎಂದರು. ನಮಗೆ ಯಾವುದೇ ಆತಂಕ ಇಲ್ಲ. ಸರ್ಕಾರ ಅಸ್ಥಿರಗೊಳಿಸಲು ಅವಕಾಶ ನೀಡುವುದಿಲ್ಲ.…
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ತಯಾರಿ ನಡೆಸಿಕೊಂಡಿದೆ. ಅದಕ್ಕಾಗಿ ಆರ್ಸಿಬಿ ಈಗಾಗಲೇ ಬೆಂಗಳೂರಲ್ಲಿ ಮಾಕ್ ಆಕ್ಷನ್ ಕೂಡ ನಡೆಸಿದೆ. ಮಾಕ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬಿದ್ದಿರೋ ರಿಷಬ್ ಪಂತ್ ಅವರಿಗೆ ಆರ್ಸಿಬಿ ಬರೋಬ್ಬರಿ 16 ಕೋಟಿ ಖರೀದಿ ಮಾಡಿರೋ ವಿಡಿಯೋ ವೈರಲ್ ಆಗಿದೆ. ಅಕ್ಟೋಬರ್ 31ನೇ ತಾರೀಕು ಬಿಸಿಸಿಐ ಸೂಚನೆಯಂತೆ ಐಪಿಎಲ್ ತಂಡಗಳ ಮಾಲೀಕರು ರೀಟೈನ್ ಲಿಸ್ಟ್ ಸಲ್ಲಿಕೆ ಮಾಡಿವೆ. ಬಿಸಿಸಿಐ ಕೂಡ ಹರಾಜಿಗೆ ಬಂದಿರೋ ಆಟಗಾರರ ಹೆಸರು ಶಾರ್ಟ್ ಲಿಸ್ಟ್ ಮಾಡಿ ಐಪಿಎಲ್ ತಂಡಗಳ ಮಾಲೀಕರಿಗೆ ಕಳಿಸಲಿದೆ. ಒಟ್ಟು 1500ಕ್ಕೂ ಹೆಚ್ಚು ಆಟಗಾರರು ಐಪಿಎಲ್ ಹರಾಜಿಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ಕೇವಲ ಭಾರತೀಯರು ಮಾತ್ರವಲ್ಲ ವಿದೇಶಿ ಆಟಗಾರರು ಕೂಡ ಇದ್ದಾರೆ. ಹೇಗಾದ್ರೂ ಮಾಡಿ ಮುಂದಿನ ಸೀಸನ್ನಲ್ಲಿ ಕಪ್ ಗೆಲ್ಲಲೇಬೇಕು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಿದ್ದಿಗೆ ಬಿದ್ದಿದೆ. ಹಾಗಾಗಿ ಬಲಿಷ್ಠ ತಂಡವನ್ನು ಕಟ್ಟಲು ಆರ್ಸಿಬಿ ಮುಂದಾಗಿದೆ. ಇನ್ನೇನು ಕೆಲವೇ…
ಬೆಂಗಳೂರು:- ಕೊವಿಡ್ ಹಗರಣದ ತನಿಖೆಗೆ SIT ರಚನೆ ಮಾಡಲು ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆ ಅಸ್ತು ಎಂದಿದೆ. ಸಿಎಂಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ ಹಗರಣದ ಬಗ್ಗೆ ಚರ್ಚೆ ನಡೆದಿದ್ದು, ತನಿಖೆಗಾಗಿ SIT ತಂಡ ರಚಿಸಲು ಸಂಪುಟ ಅಸ್ತು ಅಂದಿದೆ. ಕೊವಿಡ್ ಹಗರಣದ ಸಂಬಂಧ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗುತ್ತಿದ್ದಂತೆಯೇ ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸಚಿವರು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಎಸ್ಐಟಿ ಗೆ ವಹಿಸಲು ಕ್ಯಾಬಿನೆಟ್ ತೀರ್ಮಾನಿಸಿದೆ. https://ainlivenews.com/shami-modi-minching-hard-in-comeback-match/ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್ಕೆ ಪಾಟೀಲ್, ಕೊವಿಡ್ ವೇಳೆ ಕಿಟ್, ಔಷಧಿ ಖರೀದಿ ವೇಳೆ ಅಕ್ರಮ ನಡೆದಿದೆ. ಕೊವಿಡ್ ಹಗರಣ ಸಂಬಂಧ ಹಲವು ದೂರುಗಳು ದಾಖಲಾಗಿದ್ದವು. ಕೊವಿಡ್ ಹಗರಣದ ತನಿಖೆಗೆ ಎಸ್ಐಟಿ ರಚನೆ ಮಾಡಲಾಗುವುದು. ವರದಿ ಆಧರಿಸಿ ಎಸ್ಐಟಿ ತನಿಖೆ ಆಗಲಿದೆ . ಅಗತ್ಯ ಬಿದ್ದರೆ FIR ದಾಖಲಾಗುತ್ತೆ, ಚಾರ್ಜ್ಶೀಟ್ ಕೂಡ…
ಟೀಂ ಇಂಡಿಯಾದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಅವರು ಕೊನೆಗೂ ವೃತ್ತಿಪರ ಕ್ರಿಕೆಟ್ ಗೆ ಮರಳಿದ್ದಾರೆ. ಕಳೆದ ವರ್ಷದ ನವೆಂಬರ್ ನಲ್ಲಿ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಕೊನೆಯದಾಗಿ ಶಮಿ ಆಡಿದ್ದರು. ವಿಶ್ವಕಪ್ ವೇಳೆ ಗಾಯಗೊಂಡಿದ್ದ ಶಮಿ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಮತ್ತೆ ರಣಜಿ ಟ್ರೋಫಿ ಮೂಲಕ ಮತ್ತೆ ಕ್ರಿಕೆಟ್ ಗೆ ಮರಳಿದ್ದಾರೆ. ರಣಜಿ ಟೂರ್ನಿಯಲ್ಲಿ ಬಂಗಾಳ ಪರ ಕಣಕ್ಕಿಳಿದಿರುವ ಮೊಹಮ್ಮದ್ ಶಮಿ ಕಂಬ್ಯಾಕ್ ಪಂದ್ಯದಲ್ಲೇ 4 ವಿಕೆಟ್ ಕಬಳಿಸಿ ಮಿಂಚಿದ್ದಾರೆ. https://ainlivenews.com/conspiracy-to-destabilize-congress-government-through-operation-kamal-dkshi-accused/ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಂಗಾಳ ತಂಡವು ಮೊದಲ ಇನಿಂಗ್ಸ್ನಲ್ಲಿ 228 ರನ್ಗಳಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಮಧ್ಯ ಪ್ರದೇಶ್ ತಂಡದ ಬ್ಯಾಟಿಂಗ್ ಬೆನ್ನಲುಬು ಮುರಿಯುವಲ್ಲಿ ಮೊಹಮ್ಮದ್ ಶಮಿ ಯಶಸ್ವಿಯಾದರು. ಮಧ್ಯ ಪ್ರದೇಶ್ ತಂಡದ ನಾಯಕ ಶುಭಮ್ ಶರ್ಮಾ ಅವರನ್ನು ಔಟ್ ಮಾಡಿ ವಿಕೆಟ್ ಖಾತೆ ತೆರೆದ ಮೊಹಮ್ಮದ್ ಶಮಿ ಆ ಬಳಿಕ ಮೂರು ವಿಕೆಟ್ ಕಬಳಿಸಿದರು. ಈ ಮೂಲಕ ಮಧ್ಯ ಪ್ರದೇಶ್…
ಬೆಂಗಳೂರು:- ಆಪರೇಷನ್ ಕಮಲ ಮೂಲಕ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸೋ ಷಡ್ಯಂತ್ರ ನಡೆದಿದೆ ಎಂದು DCM ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. https://ainlivenews.com/family-feud-man-tries-to-commit-suicide-by-consuming-pesticide/ ಈ ಸಂಬಂಧ ಮಾತನಾಡಿದ ಅವರು, ನಮ್ಮ ಶಾಸಕರಿಗೆ ಬಿಜೆಪಿ ಅವರು ಆಫರ್ ಕೊಡ್ತಿರೋದು ನಿಜ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಆರೋಪವನ್ನು ಸಮರ್ಥನೆ ಮಾಡಿಕೊಂಡರು. ಬಿಜೆಪಿ ಅವರು 50 ಕೋಟಿ ಅಫರ್ ನಮ್ಮ ಶಾಸಕರಿಗೆ ಮಾಡ್ತಿದ್ದಾರೆ. ನಮ್ಮ ಶಾಸಕರ ಜೊತೆ ಬಿಜೆಪಿ ಅವರು ಮಾತಾಡಿದ್ದಾರೆ. ಅದನ್ನ ನಮ್ಮ ಶಾಸಕರು ಸಿಎಂಗೆ ತಿಳಿಸಿದ್ದಾರೆ. ಮಿಕ್ಕಿದ ವಿಚಾರ ನಾನು ಮುಂದೆ ತಿಳಿಸುತ್ತೇನೆ ಎಂದರು. ಬಿಜೆಪಿ ಅವರು 50 ಕೋಟಿ ಅಫರ್ ನಮ್ಮ ಶಾಸಕರಿಗೆ ಮಾಡ್ತಿದ್ದಾರೆ. ನಮ್ಮ ಶಾಸಕರ ಜೊತೆ ಬಿಜೆಪಿ ಅವರು ಮಾತಾಡಿದ್ದಾರೆ. ಅದನ್ನ ನಮ್ಮ ಶಾಸಕರು ಸಿಎಂಗೆ ತಿಳಿಸಿದ್ದಾರೆ. ಮಿಕ್ಕಿದ ವಿಚಾರ ನಾನು ಮುಂದೆ ತಿಳಿಸುತ್ತೇನೆ ಎಂದರು. ನಮ್ಮ ಪಕ್ಷದ 50 ಶಾಸಕರಿಗೆ ತಲಾ 50 ಕೋಟಿ ಆಫರ್ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ…
ಬೆಂಗಳೂರು:- ಮದ್ಯಪ್ರಿಯರಿಗೆ ಶಾಕಿಂಗ್ ಸುದ್ದಿ ಒಂದು ಹೊರ ಹೊಮ್ಮಿದೆ. ಇದೇ ತಿಂಗಳಲ್ಲಿ ಒಂದು ದಿನ ಕರ್ನಾಟಕದಲ್ಲಿ ಎಣ್ಣೆ ಮಾರಾಟ ನಿಷೇಧ ಮಾಡಲಾಗಿದೆ. https://ainlivenews.com/arrest-and-interrogation-of-krishna-naik-is-due-to-political-enmity-sunil-kumar/ ಅಬಕಾರಿ ಇಲಾಖೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ವರ್ಗಾವಣೆ, ಪ್ರಮೋಷನ್ಗೆ ಸನ್ನದುದಾರರಿಂದ ಮನಸೋ ಇಚ್ಛೆ ಕೋಟಿ ಕೋಟಿ ರೂ. ಲಂಚ ಕೇಳಲಾಗುತ್ತಿದೆ ಎನ್ನಲಾಗುತ್ತಿದೆ. ಅಧಿಕಾರಿಗಳ ಲಂಚಾವತಾರದಿಂದ ನಕಲಿ ಅಂತಾರಾಜ್ಯ ಮದ್ಯ ಹೆಚ್ಚಳವಾಗಿದೆ. ಹೀಗಾಗಿ ಅಬಕಾರಿ ಅಧಿಕಾರಿಗಳ ವಿರುದ್ಧ ಮದ್ಯದಂಗಡಿ ಮಾಲೀಕರು ಸಮರಕ್ಕೆ ಮುಂದಾಗಿದ್ದು, ನವೆಂಬರ್ 20ರಂದು ಕರ್ನಾಟಕದಾದ್ಯಂತ ಮದ್ಯ ಮಾರಾಟ ಬಂದ್ಗೆ ಕರೆ ನೀಡಲಾಗಿದೆ. ಈ ಬಗ್ಗೆ ರಾಜ್ಯ ವೈನ್ ಮರ್ಚೆಂಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಮಾತನಾಡಿ, ನವೆಂಬರ್ 20ರಂದು ಕರ್ನಾಟಕದಾದ್ಯಂತ ಎಂಎಸ್ಐಎಲ್ ಹೊರತುಪಡಿಸಿ ಎಲ್ಲಾ ಬಾರ್ಗಳು ಬಂದ್ ಎಂದರು.
ಬೆಂಗಳೂರು:- ಬಸವನಗುಡಿ PSI ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದ್ದು, ಆಯುಕ್ತರಿಗೆ ದೂರು ನೀಡಲಾಗಿದೆ. https://ainlivenews.com/virat-kohli-bats-ominously-for-rinku-singh/ ನಗರದ ಬಸವನಗುಡಿ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಜಕುಮಾರ್ ಜೋಡಟ್ಟಿ ವಿರುದ್ಧ ಪೊಲೀಸ್ ಕಮಿಷನರ್ ಬಿ.ದಯಾನಂದ್ಗೆ ವೈದ್ಯೆಯಿಂದ ದೂರು ನೀಡಲಾಗಿದೆ. 2020ರಲ್ಲಿ ಪಿಎಸ್ಐಗೆ ಫೇಸ್ಬುಕ್ ಮೂಲಕ ಯುವತಿ ಪರಿಚಯವಾಗಿದೆ. ಈ ವೇಳೆ ಯುವತಿ ಎಂಬಿಬಿಎಸ್ ಪದವಿ ವ್ಯಾಸಂಗ ಮಾಡುತ್ತಿದ್ದರು. ಅದೇ ವರ್ಷ ಪೊಲೀಸ್ ಅಕಾಡೆಮಿಯಲ್ಲಿ ಪಿಎಸ್ಐ ಟ್ರೈನಿಂಗ್ನಲ್ಲಿದ್ದರು. ಈ ವೇಳೆ ಪರಸ್ಪರ ಸ್ನೇಹ ಬೆಳೆದು ಪ್ರೀತಿಯಲ್ಲಿ ಬಿದ್ದಿದ್ದರು. ಇತ್ತೀಚೆಗೆ ನಗ್ನ ಫೋಟೋ ಕಳಿಸುವಂತೆ ಕಿರುಕುಳ ನೀಡಿದ್ದು, ಇದನ್ನ ನಿರಾಕರಿಸಿದ ವೈದ್ಯೆಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ವೈದ್ಯೆಯ ಕಾಲ್ ರೆಕಾರ್ಡ್ ತೆಗೆದು ಕಿರುಕುಳ ನೀಡುತ್ತಿರುವ ಆರೋಪ ಮಾಡಲಾಗಿದೆ. ಹೀಗಾಗಿ ಸದ್ಯ ನೊಂದ ವೈದ್ಯೆಯಿಂದ ಬೆಂಗಳೂರು ಪೊಲೀಸ್ ಕಮಿಷನರ್ಗೆ ದೂರು ನೀಡಲಾಗಿದೆ.