ಬೆಂಗಳೂರು:- ಕರ್ನಾಟಕ ಅಷ್ಟೇ ಅಲ್ಲದೇ ಇಡೀ ದೇಶದಾದ್ಯಂತ ಚರ್ಚೆ ಇರುವಂತಹ ಹಗರಣ ಮುಡಾ ಕೇಸ್. ಇದು ಸಿಎಂ ಇನ್ನಿಲ್ಲದ ಮುಖಭಂಗ ಮಾಡಿದೆ. https://ainlivenews.com/sabarimala-ayyappa-swami-darshan-begins-today/ ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ನಡೆಸ್ತಿರುವ ತನಿಖೆ ಸಿಎಂ ಆಪ್ತೇಷ್ಠರ ಬುಡಕ್ಕೆ ಬಂದು ನಿಂತಿದೆ. ಮುಡಾ ಮಾಜಿ ಅಧ್ಯಕ್ಷ ಮರೀಗೌಡ, ಶಿವಣ್ಣ, ಮಾಜಿ ಆಯುಕ್ತ ನಟೇಶ್, 2004ರಲ್ಲಿ ಮೈಸೂರು ತಹಶೀಲ್ದಾರ್ ಆಗಿದ್ದ ಮಾಳಿಗೆ ಶಂಕರ್‌ರನ್ನು ಇಡಿ ವಿಚಾರಣೆಗೆ ಒಳಪಡಿಸಿದೆ. ಸತತ 9 ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಶಿವಣ್ಣ ಸಂಜೆ ಹೊತ್ತಿಗೆ ಅಸ್ವಸ್ಥಗೊಂಡ್ರು. ಕೂಡ್ಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಇನ್ನು, ಈ ಕ್ಷಣದವರೆಗೂ ಮರೀಗೌಡ, ಮಾಳಿಗೆ ಶಂಕರ್ ವಿಚಾರಣೆಯನ್ನು ಇಡಿ ಮುಂದುವರೆಸಿದೆ. ಇನ್ನು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಇಡಿ ಸಮನ್ಸ್ ಕೊಟ್ಟು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಈ ಮಧ್ಯೆ ಮುಡಾದ ಮತ್ತಷ್ಟು ಅಕ್ರಮಗಳು ಬಹಿರಂಗಗೊಂಡಿವೆ. ಸರಿಯಾದ ಮೂಲ ದಾಖಲೆಗಳೇ ಇಲ್ಲದೇ 1950 ಸೈಟ್ ಹಂಚಿಕೆಯಾಗಿವೆ. ಅಲ್ಲದೇ 5 ಸಾವಿರ ಸೈಟ್‌ಗಳಿಗೆ 2 ಸಾವಿರ…
Author: AIN Author
ತಿರುವನಂತಪುರಂ:- ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಇಂದಿನಿಂದ ಆರಂಭವಾಗಲಿದೆ. https://ainlivenews.com/where-is-the-then-baby-shamili-now-and-what-is-she-doing-what-career/ ಇಂದಿನಿಂದ ಡಿ.25 ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ದರ್ಶನ ಅವಧಿಯನ್ನು 18 ಗಂಟೆಗೆ ವಿಸ್ತರಿಸಲಾಗಿದ್ದು, ಪ್ರತಿ ನಿತ್ಯ 70,000 ಜನರಿಗೆ ದರ್ಶನ ಅವಕಾಶ ನೀಡುವಂತೆ ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ. ಜೊತೆಗೆ ಜನಸಂದಣಿ ಹೆಚ್ಚಾದಲ್ಲಿ ಸಮಯವನ್ನು ಅರ್ಧಗಂಟೆ ವಿಸ್ತರಿಸುವಂತೆ ಚಿಂತಿಸಿದೆ. ಸುಮಾರು 60,000 ಜನರು ವರ್ಚುವಲ್ ಸರತಿ ವ್ಯವಸ್ಥೆಯ ಮೂಲಕ ದರ್ಶನವನ್ನು ಪಡೆಯುತ್ತಾರೆ. ಇನ್ನೂ 10,000 ಜನರು ಸ್ಥಳದಲ್ಲೇ ಬುಕ್ಕಿಂಗ್ ಮಾಡಲು ಅನುಮತಿಸಲಾಗಿದೆ. ಇನ್ನೂ ಈ ಕುರಿತು ಶಬರಿಮಲೆ ದೇವಸ್ಥಾನ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಮಾತನಾಡಿ, ತೀರ್ಥೋದ್ಭವದ ಆರಂಭದಿಂದ ಪ್ರತಿದಿನ ಬೆಳಗ್ಗೆ 3 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ರಾತ್ರಿ 11 ರವರೆಗೆ ದರ್ಶನಕ್ಕೆ ನೀಡಲಾಗುವುದು. ಇದರಿಂದಾಗಿ ಭಕ್ತರ ನುಕುನುಗ್ಗಲನ್ನು ಕಡಿಮೆಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಬೇಬಿ ಶಾಮಿಲಿ ಎಂದೇ ಹೆಸರಾಗಿದ್ದ ಶಾಮಿಲಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಚಿಕ್ಕ ವಯಸ್ಸಿನಲ್ಲಿಯೇ ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟಿರುವ ಖ್ಯಾತಿ ಇವರಿಗಿದೆ. ತಮ್ಮ ಪ್ರತಿಭೆಯಿಂದ ಮನೆಮಾತಾಗಿದ್ದ ಮುದ್ದು ಮುಖದ ಮಾತಿನ ಮಲ್ಲಿ. ಕನ್ನಡ ಮಾತ್ರವೇ ಅಲ್ಲದೆ ದಕ್ಷಿಣ ಭಾರತದ ಏಲ್ಲ ಭಾಷೆಗಳ ಸಿನಿಮಾಗಳಲ್ಲಿಯೂ ಬಾಲನಟಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಂತೂ ಸಾಲು-ಸಾಲು ಸಿನಿಮಾಗಳಲ್ಲಿ ನಟಿಸಿದ್ದರು ಬೇಬಿ ಶಾಮಿಲಿ. ಸಣ್ಣ ವಯಸ್ಸಿನಲ್ಲೇ ಸ್ಟಾರ್ ಪಟ್ಟ ಅಲಂಕರಿಸಿದ್ದ ನಟಿ ಬೇಬಿ ಶಾಮಿಲಿ ಈಗೇನು ಮಾಡುತ್ತಿದ್ದಾರೆ!? ಮುದ್ದಾಗಿ, ಕ್ಯೂಟ್ ಕ್ಯೂಟ್ ಆಗಿ ಅಭಿನಯಿಸುತ್ತಿದ್ದ ಬೇಬಿ ಶಾಮಿಲಿ ಈಗ ಹೇಗಿದ್ದಾರೆ ಎಂಬುವ ವಿಚಾರ ಹೇಳ್ತೀವಿ ಕೇಳಿ… 90 ರ ದಶಕದಲ್ಲಿ ಬೇಬಿ ಶಾಮಿಲಿ ಚಿತ್ರ ಅಂದ್ರೆ ಮನೆಯವರೆಲ್ಲಾ ಕೂತು ನೋಡ್ತಾ ಇದ್ರು. ಅದರಲ್ಲೂ ಮಕ್ಕಳಿಗೆ ಈಕೆ ತುಂಬಾ ಇಷ್ಟ. ಅವಳ ಚಿತ್ರ ನೋಡಲು ಕಾಯ್ತಾ ಇರುತ್ತಿದ್ರು. ವಿವಿಧ ಭಾಷೆಗಳಲ್ಲಿ ನಟಿಸಿ ತನ್ನದೇ ಆದ ಫ್ಯಾನ್ ಫಾಲೋವರ್ಸ್ ಗಳನ್ನು ಹೊಂದಿರುವ ಇವರು ಇಂದು ಹೇಗಿದ್ದಾರೆ ಎಂಬ ಬಗ್ಗೆ ಹೆಚ್ಚಿನವರಿಗೆ…
ದೆಹಲಿ:- ವಿಪರೀತ ವಾಯುಮಾಲಿನ್ಯದ ಹಿನ್ನೆಲೆ ದೆಹಲಿಯಲ್ಲಿ ಟಫ್ ರೂಲ್ಸ್ ಸಹ ಜಾರಿಗೆ ಬರಲಿವೆ. https://ainlivenews.com/rain-alert-heavy-rain-in-these-districts-of-karnataka-today/ ಚಳಿಗಾಲ ಆರಂಭವಾಗುತ್ತಿದ್ದಂತೆ ರಾಷ್ಟ್ರ ರಾಜಧಾನಿ ದೆಹಲಿ ಗ್ಯಾಸ್ ಚೇಂಬರ್ ಆಗಿ ಬದಲಾಗಿದೆ. ಉಸಿರಾಡೋಕು ದೆಹಲಿ ಜನತೆ ಹಿಂದೆ ಮುಂದೆ ನೋಡಬೇಕಾದಂತ ಶೋಚನೀಯ ಸ್ಥಿತಿ ಬಂದೊದಗಿದೆ. ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ವಾಯುಮಾಲಿನ್ಯ ದುಷ್ಪರಿಣಾಮ ಬಿರುವ ಆತಂಕ ಎದುರಾಗಿದೆ. ಈ ಹಿನ್ನೆಲೆ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಕೋವಿಡ್ ಸಮಯದ ಆನ್ಲೈನ್ ಕ್ಲಾಸ್ ಅಸ್ತ್ರವನ್ನ ಮತ್ತೆ ಪ್ರಯೋಗಿಸಿದೆ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದ ಹಿನ್ನೆಲೆ ಮಕ್ಕಳು ಹಾಗೂ ವೃದ್ಧರನ್ನ ಸೇಫ್ ಮಾಡೋದೆ ಸವಾಲಾಗಿ ಪರಿಣಮಿಸಿದೆ. ದೆಹಲಿಯಲ್ಲಿ ಗಾಳಿ ಗುಣಮಟ್ಟವು 418 AQIನೊಂದಿಗೆ ಅತ್ಯಂತ ಕಳಪೆ ಗುಣಮಟ್ಟ ದಾಖಲಾದ ಹಿನ್ನೆಲೆ ಸರ್ಕಾರ ಮಕ್ಕಳಿಗಾಗಿ ಅನ್ಲೈನ್ ಕ್ಲಾಸ್ ಮೊರೆ ಹೋಗಿದೆ. ಈ ಕುರಿತು ದೆಹಲಿ ಸಿಎಂ ಅತಿಶಿ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೋಚರತೆ ಕಡಿಮೆ ಆಗಿದ್ದು, ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗುತ್ತಿದೆ. ದೆಹಲಿ…
ಬೆಂಗಳೂರು:- ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. https://ainlivenews.com/leopard-sighting-villagers-are-worried/ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಚಾಮರಾಜನಗರ, ಚಿಕ್ಕಮಗಳೂರು, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ. ವಿಜಯನಗರ, ಮಂಡ್ಯ, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಬೆಂಗಳೂರು, ಶ್ರವಣಬೆಳಗೊಳ, ಹಾಸನದ ಕೆಲವೆಡೆ ಸಾಧಾರಣ ಮಳೆಯಾಗಿದೆ. ಕಾರವಾರ ಹಾಗೂ ಪಣಂಬೂರಿನಲ್ಲಿ 36.4 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ, ಶಿರಾಲಿಯಲ್ಲಿ 18.8 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಗುರುವಾರ ಇಡೀ ದಿನ ಮೋಡಕವಿದ ವಾತಾವರಣವಿತ್ತು, ಆಗಾಗ ಮಳೆಯಾಗಿತ್ತು. ಇಂದು ಕೂಡ ಅದೇ ವಾತಾವರಣ ಮುಂದುವರೆದಿದೆ.
ಗದಗ:- ಇಲ್ಲಿನ ಬಿಂಕದಕಟ್ಟಿಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಕಾಣಿಸಿಕೊಂಡ ನಂತರ ಸ್ಥಳೀಯ ಜನತೆ ಆತಂಕಕ್ಕೀಡಾದ ಘಟನೆ ಜರುಗಿದೆ. https://ainlivenews.com/cyclone-effect-2-days-of-rain-in-tamil-nadu/ ಗದಗ ತಾಲೂಕಿನ ಬಿಂಕದಕಟ್ಟಿ, ನಾಗಾವಿ, ಅಸುಂಡಿ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಮನೆಯೊಂದರ ಸಿಸಿಟಿವಿಯಲ್ಲಿ ಚಿರತೆ ಓಡಾಟದ ದೃಶ್ಯ ಸೆರೆಯಾಗಿದೆ. ಚಿರತೆ ಓಡಾಟದಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಪಾವ್ ಭಾಜಿ ಎಂದರೆ ಯಾರ ಬಾಯಲ್ಲಿ ನೀರು ಬರಲ್ಲ ಹೇಳಿ. ಪಾವ್ ತುಂಡುಗಳನ್ನು ಬಿಸಿ ಬಿಸಿಯಾದ ಭಾಜಿ ಜೊತೆ ನೆಂಚಿಕೊಂಡು ತಿನ್ನುತ್ತಾ ಇದ್ದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಕೆಲವರಿಗೆ ಹೊರಗಡೆಯಿಂದ ತಂದು ತಿನ್ನುವುದಕ್ಕೆ ಇಷ್ಟವಾಗುವುದಿಲ್ಲ. ಅಂಥವರು ಸುಲಭವಾಗಿ ಮನೆಯಲ್ಲಿಯೇ ಪಾವ್ ಭಾಜಿ ಮಾಡಿಕೊಂಡು ಹೊಟ್ಟೆ ತಿನ್ನಬಹುದು. ಬೆಣ್ಣೆಯೊಂದಿಗೆ ಫ್ರೈ ಮಾಡಿರುವ ಪಾವ್ ಜತೆ ವಿವಿಧ ತರಕಾರಿ ಹಾಕಿ ಮಾಡಿದ ಬಾಜಿ ಸವಿಯುವ ಮಜಾನೇ ಬೇರೆ. ಹೊಟ್ಟೇನೂ ತುಂಬುವ ಈ ಫಾಸ್ಟ್ ಫುಡ್ ರೆಸಿಪಿ ಇಲ್ಲಿದೆ.. ಬೇಕಾಗುವ ಸಾಮಾಗ್ರಿಗಳು: ಬೆಣ್ಣೆ ಟೊಮ್ಯಾಟೋ ಬಟಾಣಿ ದೊಣ ಮೆಣಸಿನಕಾಯಿ ಆಲೂಗೆಡ್ಡೆ ಉಪ್ಪು ಖಾರದ ಪುಡಿ ಅರಿಶಿಣ ಪುಡಿ ಪಾವ್ ಬಾಜಿ ಮಸಾಲ ಕಸ್ತೂರಿ ಮೇಥಿ ಕೊತ್ತಂಬರಿ ಸೊಪ್ಪು ಶುಂಠಿ- ಬೆಳ್ಳುಳಿ ಪೇಸ್ಟ್ ಈರುಳ್ಳಿ ನಿಂಬೆ ಹಣ್ಣು ಪಾವ್ ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಬೆಣ್ಣೆ, ಟೊಮ್ಯಾಟೊ, ಬಟಾಣಿ, ಆಲೂಗಡ್ಡೆ ಮತ್ತು ಉಪ್ಪು ಹಾಕಿ ಬೇಯಿಸಿಕೊಳ್ಳಬೇಕು. 10 ನಿಮಿಷಗಳ ನಂತರ ಅದನ್ನು ಸ್ಮ್ಯಾಷ್ ಮಾಡಬೇಕು. ಆಮೇಲೆ ಅದಕ್ಕೆ…
ಚೆನ್ನೈ:- ಸೈಕ್ಲೋನ್ ಎಫೆಕ್ಟ್ ಹಿನ್ನೆಲೆ, ತಮಿಳುನಾಡಿನಲ್ಲಿ 2 ದಿನ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. https://ainlivenews.com/salaries-of-108-staff-have-been-paid-minister-dinesh-gundurao/ ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿ ಭಾಗಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧತೆ ಇದೆ. ಕಳೆದ 24 ಗಂಟೆಗಳಲ್ಲಿ ಆಂಧ್ರಪ್ರದೇಶದಲ್ಲಿ ಭಾರೀ ಮಳೆ ಸುರಿದಿದೆ. ಕವಲಿ ಮತ್ತು ಒಂಗೋಲೆಯಲ್ಲಿ ಕ್ರಮವಾಗಿ 67ಮಿ.ಮೀ ಹಾಗೂ 63ಮಿ.ಮೀ ಮಳೆ ದಾಖಲಾಗಿದೆ. ಮಿನಂಬಕ್ಕಂ, ನುಂಗಂಬಾಕ್ಕಂ, ಪುದುಚೇರಿ ಮತ್ತು ಕಡಲೂರುಗಳಲ್ಲಿ 15ಮಿ.ಮೀ ಮಳೆಯಾಗಿದೆ. ದಕ್ಷಿಣ ಕರಾವಳಿ ತಮಿಳುನಾಡು ಮತ್ತು ರಾಜ್ಯದ ಒಳಭಾಗಗಳಲ್ಲಿ ಅಲ್ಪ ಪ್ರಮಾಣದ ಸುರಿದಿದೆ. ಮುಂದಿನ 48 ಗಂಟೆಗಳಲ್ಲಿ ಬಾಪಟ್ಲಾ, ಕವಾಲಿ, ಒಂಗೋಲ್, ನೆಲ್ಲೂರು, ಶ್ರೀಹರಿಕೋಟಾ, ಚೆನ್ನೈ, ಕಾಂಚೀಪುರಂ, ತಾಂಬರಂ, ಪುದುಚೇರಿ, ಕಡಲೂರು ಮತ್ತು ಕಾರೈಕಲ್‌ನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ನೈಋತ್ಯ ಬಂಗಾಳ ಕೊಲ್ಲಿಯ ಮೇಲಿನ ಕಡಿಮೆ ಒತ್ತಡದ ವ್ಯವಸ್ಥೆಯು ಈ ಮಳೆಗೆ ಕಾರಣವಾಗಿದೆ. ಇದು ವಿಶೇಷವಾಗಿ ತಮಿಳುನಾಡಿನ ಕರಾವಳಿ ಜಿಲ್ಲೆಗಳು ಮತ್ತು ಚೆನ್ನೈ ಮೇಲೆ ಪರಿಣಾಮ ಬೀರುತ್ತದೆ…
ಬೆಂಗಳೂರು:- 108 ಸಿಬ್ಬಂದಿಗಳ ವೇತನ ಪಾವತಿ ಆಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ. https://ainlivenews.com/terrible-murder-of-a-woman-suspected-of-rape-and-murder-while-going-to-wash-clothes/ ವೇತನ ಪಾವತಿಗೆ ಆಗ್ರಹಿಸಿ ಕರ್ನಾಟಕದಾದ್ಯಂತ ಹೋರಾಟಕ್ಕೆ 108 ಸಿಬ್ಬಂದಿಗಳು ಪ್ರತಿಭಟನೆಗೆ ಕರೆ ಕೊಟ್ಟ ವಿಚಾರವಾಗಿ ಮಾತನಾಡಿ, 108 ಆರೋಗ್ಯ ಕವಚದ ಅಂಬುಲೆನ್ಸ್ ಚಾಲಕರಿಗೆ ಸರ್ಕಾರದ ಕಡೆಯಿಂದ ಯಾವುದೇ ವೇತನ ಬಾಕಿ ಉಳಿಸಿಕೊಂಡಿಲ್ಲ ಎಂದರು. ಅಂಬುಲೆನ್ಸ್ ಚಾಲಕರಿಗೆ ನ್ಯಾಯಯುತವಾಗಿ ಸಿಗಬೇಕಾದ ವೇತನವನ್ನ ಕಾಲ ಕಾಲಕ್ಕೆ ಸರಿಯಾಗಿ ಸಂಬಂಧಿಸಿದ ಏಜನ್ಸಿಯವರಿಗೆ ಸರ್ಕಾರ ನೀಡುತ್ತಾ ಬಂದಿದೆ. ಚಾಲಕರ ವೇತನ ಬಾಕಿ ಉಳಿಸಿಕೊಳ್ಳದಂತೆ ಇ.ಎಂ.ಆರ್ ಏಜನ್ಸಿಯವರಿಗೂ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ. ಆಗಸ್ಟ್, ಸೆಪ್ಟೆಂಬರ್ ತಿಂಗಳ ವೇತನವನ್ನ ಏಜನ್ಸಿಯವರು ಚಾಲಕರಿಗೆ ಪಾವತಿ ಮಾಡಿದ್ದಾರೆ. ಅಕ್ಟೋಬರ್ ತಿಂಗಳ ವೇತನ ಪಾವತಿ ಕೂಡ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಪಾವತಿಸುವಂತೆ ಸೂಚಿಸಲಾಗಿದೆ ಎಂದರು. ವಿಪಕ್ಷ ನಾಯಕರಾದ ಆರ್. ಅಶೋಕ್ ಅರೆಬರೆ ಮಾಹಿತಿ ಪಡೆದು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಒಬ್ಬ ವಿಪಕ್ಷ ನಾಯಕರಾಗಿ ವಾಸ್ತವಾಂಶಗಳನ್ನ ಅರಿತು ಮಾತನಾಡಬೇಕು. 108 ಸಮಸ್ಯೆ ಆರಂಭವಾಗಿದ್ದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ. ಕಾಂಗ್ರೆಸ್…
ಚಿತ್ರದುರ್ಗ:- ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಉಪ್ಪಿರಿಗೇನಹಳ್ಳಿ ಬಳಿ ಹಳ್ಳದಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆಯ ಭೀಕರ ಕೊಲೆಯಾಗಿರುವ ಘಟನೆ ಜರುಗಿದೆ. https://ainlivenews.com/hit-and-run-25-year-old-man-dies/ 40 ವರ್ಷದ ಲತಾ ಕೊಲೆಯಾದ ಮಹಿಳೆ. ಇಬ್ಬರು ದುಷ್ಕರ್ಮಿಗಳಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇಂದು ಮಧ್ಯಾಹ್ನ ಬಟ್ಟೆ ತೊಳೆಯಲು ಹಳ್ಳದಲ್ಲಿ ಹೋಗಿದ್ದ ವೇಳೆ ದುಷ್ಕೃತ್ಯ ನಡೆದಿದೆ. ಆಗುಂತಕರು, ಮೈಮೇಲಿದ್ದ ಒಡವೆ ಕೂಡಾ ಕದ್ದು ಎಸ್ಕೇಪ್ ಆಗಿದ್ದಾರೆ. ಹಳ್ಳದಿಂದ ಸ್ವಲ್ಪ ದೂರ ಎಳೆದೊಯ್ದು ದುಷ್ಕರ್ಮಿಗಳಿಂದ ಕೊಲೆ ನಡೆದಿದೆ. ಮೈ ಮೇಲೆ ಬಟ್ಟೆಗಳು ಹರಿದ ಸ್ಥಿತಿಯಲ್ಲಿದ್ದು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿ ಆಧರಿಸಿ ಸ್ಥಳಕ್ಕೆ SP ರಂಜಿತ್ ಬಂಡಾರೂ, DYSP ದಿನಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.